ಅಭಿಪ್ರಾಯ / ಸಲಹೆಗಳು

ಸಂಚಾರಿ ನಿಯಮಗಳು

raffic (ಸಂಚಾರಿ ನಿಯಮಗಳು)

ವಾಹನ ಕಲಿಕೆ (Learning to Drive)

1] ಯಾವುದೇ ಒಬ್ಬ ವ್ಯಕ್ತಿ ವಾಹನ ಚಲಾಯಿಸಲು ಕಲಿಯುವ ಪರವಾನಿಗೆ (Lerners’ License) ಪಡೆಯಬೇಕಾಗುತ್ತದೆ.

2] ಕಲಿಯುವ ಪರವಾನಿಗೆ ಪಡೆದು ವಾಹನ ಚಲಾಯಿಸುವವರು ತಮ್ಮ ವಾಹನದ ಮುಂದೆ ಮತ್ತು ಹಿಂದೆ ಚೌಕಾಕಾರದ ಬಿಳಿ ಪ್ಲೇಟ್ ನ್ನು ಕಾಣುವ ಹಾಗೆ ಹಾಕಿಸಿ 17 "(17 ಸೆಂ) x 7" (17 ಸೆಂ)  ನ ಕಾರ್ಡ ನ್ನು ಅಂಟಿಸಿರಬೇಕು ಆ ಪ್ಲೇಟ್ ನಲ್ಲಿ ಕಡ್ಡಾಯವಾಗಿ ಕೆಂಪು ಬಣ್ಣದ L ಅಕ್ಷರವನ್ನು ಬರೆಸಿರಬೇಕು. ಅಕ್ಷರ ಎತ್ತರ 4`` (10cm) ಮತ್ತು 3.5`` (8.5 cm) ಅಗಲವಿರಬೇಕು.

3] ವಾಹನ ಚಲಾಯಿಸುವಾಗ ಕಡ್ಡಾಯವಾಗಿ ಕಲಿಯುವ ಪರವಾನಿಗೆ ಇಟ್ಟುಕೊಂಡಿರಬೇಕು.

4] ಕಲಿಯುವ ಪರವಾನಿಗೆ 6 ತಿಂಗಳ ಅವಧಿಯವರೆಗಿರುತ್ತದೆ ಮತ್ತು ಇದಕ್ಕೆ ಯಾವುದೇ ಹೆಚ್ಚಿನ ಅವಧಿ ಸೇರಿಸುವದಿಲ್ಲ.

5] ಕಲಿಯುವ ಪರವಾನಿಗೆಯು ಪರವಾನಿಗೆ ಪಡೆದ ರಾಜ್ಯದಲ್ಲಿ ಮಾತ್ರ ಮಾನ್ಯತೆ ಪಡೆದಿರುತ್ತದೆ.

6] ಕನಿಷ್ಠ 18 ವರ್ಷ ವಯಸ್ಸು ಇರುವವರಿಗೆ ಕಲಿಯುವ ಪರವಾನಿಗೆ ನೀಡಲಾಗುತ್ತದೆ.

 ಕಾರಿನ ಕಲಿಯುವ ಪರವಾನಿಗೆ ಪಡೆದ ಚಾಲಕ

ಕಾರಿನ ಚಾಲಕ (ಕಲಿಯುವ ಪರವಾನಿಗೆ ಪಡೆದವನು ) ತನ್ನೊಂದಿಗೆ ಚಲನಾ ಪರವಾನಿಗೆ ಹೊಂದಿದವರನ್ನು ಕಡ್ಡಾಯವಾಗಿ ಜೊತೆಯಲ್ಲಿ ಇಟ್ಟುಕೊಳ್ಳಬೇಕು. ಅವನು ವಾಹನವನ್ನು ನಿಲ್ಲಿಸಲು ಅನುವಾಗುವಂತಹ ಸ್ಥಳದಲ್ಲಿ ಕುಳಿತಿರಬೇಕು.

 ಶಾಶ್ವತ ಪರವಾನಿಗೆ ಹೊಂದಿದವರು

1] ಶಾಶ್ವತ ಪರವಾನಿಗೆಯು ಯಾವ ವಾಹನದ ವಿಧಕ್ಕೆ ನೀಡಲಾಗಿದೆಯೋ ಅದಕ್ಕೆ ಮಾತ್ರ ಮಾನ್ಯತೆ ಪಡೆದಿರುತ್ತದೆ.

2] ಅವಧಿ ಮುಗಿದ ನಂತರ ನವೀಕರಿಸಲು 30 ದಿನಗಳ ಅವಧಿ ನೀಡಲಾಗಿದೆ.

3] ಶಾಶ್ವತ ಪರವಾನಿಗೆ ಅರ್ಜಿ ಸಲ್ಲಿಸಲು ಕನಿಷ್ಟ 18 ವರ್ಷ ವಯಸ್ಸಾಗಿರಬೇಕು. ಬಾಡಿಗೆ ಚಾಲಕನಿಗೆ 20 ವರ್ಷ

   ವಾಗಿರಬೇಕು. ಬಾಡಿಗೆ ಚಾಲಕನು ವಾಹನ ಚಲಾಯಿಸುವಾಗ ಕಡ್ಡಾಯವಾಗಿ ತನ್ನ ಪರವಾನಿಗೆ ಹೊಂದಿರಬೇಕು.

4] ಶಾಶ್ವತ ಪರವಾನಿಗೆ ಭಾರತದಾದ್ಯಂತ ಮಾನ್ಯತೆ ಪಡೆದಿರುತ್ತದೆ.  

 ಚಲಾಯಿಸುವ ಮೊದಲು ಖಾತ್ರಿ ಪಡಿಸಬೇಕಾದದ್ದು:

1] ನಿಮ್ಮ ವಾಹನವನ್ನು ನೋಂದಣಿ ಮಾಡಿಸಿರಬೇಕು.

2] ನೋಂದಣಿ ಸಂಖ್ಯೆಯನ್ನು ವಾಹನದ ಹಿಂದೆ ಮತ್ತು ಮುಂದೆ ನಿಗಧಿಪಡಿಸಿದ ಸ್ಥಳದಲ್ಲಿ ಪ್ರದರ್ಶಿಸಬೇಕು.

3] ಅದರ ವಿಮೆಯಲ್ಲಿ ಮೂರನೇಯ ವ್ಯಕ್ತಿಯ ಹೊಣೆ ಒಳಗೊಂಡಿರಬೇಕು.

4] ವಾಹನವು ರಸ್ತೆಯಲ್ಲಿ ಚಾಲಾಯಿಸುವ ಯೋಗ್ಯತೆಯನ್ನು ಹೊಂದರಬೇಕು. ಚಾಲಾಯಿಸಲು ಯೋಗ್ಯವಲ್ಲದ ವಾಹನ 

   ನಿಮ್ಮ ಮತ್ತು ಇತರರ ಜೀವಕ್ಕೆ ಅಪಾಯವನ್ನೊಡ್ಡುವ ಸಂಭವವಿರುತ್ತದೆ. 

5] ವಾಹನವನ್ನು ನಿಯಂತ್ರಿಸಲು ಆಗದ ಯಾವುದೇ ಮತ್ತಿನ ಸೇವನೆ ಮಾಡಬಾರದು.

6] ನೀವು ಚಲಾಯಿಸುವ ವಾಹನದ ಚಲನಾ ಪರವಾನಿಗೆಯನ್ನು ಹೊಂದಿರಬೇಕು.

7] ನೀವು ದೈಹಿಕವಾಗಿ ಮತ್ತು ಮಾನಸಿಕವಾಗಿ ಚಲಾಯಿಸಲು ಸಿದ್ಧರಿರಬೇಕು.

ಕಾನೂನಿನೊಳಗೆ ನಿಮ್ಮ ವಾಹನ

1] ನೋಂದಣಿ ಮಾಡಿಸಿರಬೇಕು.

2] ಹೆಡ್ ಲೈಟ್ ಹೊಂದಿರಬೇಕು ಮತ್ತು ಹಿಂದಿನ ದೀಪಗಳು ನಂಬರ ಪ್ಲೇಟ್ ಕಾಣುವ ಹಾಗೆ ಹಾಕಬೇಕು.

3] ಲೈಟ್ ನ ಚಲಾವಣಾ ಅವಧಿ ಸೂರ್ಯ ಮುಳುಗಿದ ½ ಗಂಟೆ ನಂತರ ಪ್ರಾರಂಭವಾಗಿ ಸೂರ್ಯೋದಯದ ಅರ್ಧ ಗಂಟೆ

   ಮುಂಚೆವರೆಗೆ ಮುಂದುವರೆಯುತ್ತದೆ. 

4] ಟೈರ್ ಗಳಲ್ಲಿ ಗಾಳಿ ತುಂಬಿರಬೇಕು ಮತ್ತು ಒಳ್ಳೆಯ ಸ್ಥಿತಿಯಲ್ಲಿರಬೇಕು.

5] ಹಾರ್ನ್ ಒಳ್ಳೆಯ ಸ್ಥಿತಿಯಲ್ಲಿರಬೇಕು.

6] ಸ್ಟೇರಿಂಗ್ ನ ಯಾಂತ್ರಿಕತೆ ಸಮರ್ಪಕವಾಗಿ ನಿರ್ವಹಿಸಬೇಕು ಮತ್ತು ಉತ್ತಮವಾಗಿರಬೇಕು. ಸುಸಜ್ಜಿತ ಎಲೆಕ್ಟ್ರಿಕಲ್ ಅಥವಾ ಮೆಕ್ಯಾನಿಕಲ್ ಸಾಧನ ಹೊಂದಿರಬೇಕು.

ಸಂಚಾರ ಪೊಲೀಸರು ನಿಲ್ಲಿಸಿದಾಗ ?

ಸಮವಸ್ತ್ರದಲ್ಲಿರುವ ಸಂಚಾರ ಪೋಲೀಸ್ ನಿಮ್ಮ ಚಾಲನಾ ಪರವಾನಿಗೆ ಮತ್ತು ವಾಹನದ ಕಾಗದ ಪತ್ರ ನೋಡುವ ಹಕ್ಕನ್ನು ಹೊಂದಿರುತ್ತಾನೆ. ಅವಶ್ಯವಿದ್ದಲ್ಲಿ ನಿಮ್ಮ ಚಾಲನ ಪರವಾನಿಗೆ ವಶದಲ್ಲಿಟ್ಟುಕೊಳ್ಳಬಹುದು. ಸಂಚಾರ ಪೊಲೀಸ್ ಸಿಬ್ಬಂದಿ ರಸ್ತೆಯಲ್ಲಿ ನಿಮಗೆ ನಿರ್ದೇಶನ ನೀಡದರೆ ಟ್ರಾಫೀಕ್ ಸಿಗ್ನಲ್ ಲೆಕ್ಕಿಸದೇ ನೀವು ಅದನ್ನು ಪಾಲನೆ ಮಾಡಬೇಕು. ರಸ್ತೆಯ ಸಿಗ್ನಲ್ / ತಿರುವಿನಲ್ಲಿ ಸಂಚಾರ ಪೊಲೀಸ್ ಇದ್ದರೆ ಅವನೇ ಅಲ್ಲಿಯ ಅಂತಿಮ ಅಧಿಕಾರಿ. ನಿಲ್ಲಿಸಿದ ವಾಹನ ಮಾಲೀಕ ಪತ್ತೆಯಾಗದೇ ಇದ್ದರೆ ಅದನ್ನು ಎಳೆದುಕೊಂಡು ಹೋಗಬಹುದು. ಅಕ್ಕ ಪಕ್ಕದವರನ್ನು ಕೇಳಿರಿ ಸಾಮಾನ್ಯವಾಗಿ ಸ್ಥಳಿಯ ಅಂಗಡಿಯವರಿಗೆ ವಶಪಡಿಸಿಕೊಂಡ ವಾಹನ ಎಲ್ಲಿ ಇಟ್ಟಿರುತ್ತಾರೆ ಎಂದು ತಿಳಿದಿರುತ್ತದೆ.

 ಪೊಲೀಸರು ಯಾವ ಕ್ರಮವನ್ನು ತೆಗೆದುಕೊಳ್ಳಬಹುದು.

ನಿಮ್ಮ ಪರವಾನಿಗೆಯಲ್ಲಿನ ವಿಷಯಗಳನ್ನು ಬರೆದುಕೊಂಡು ನಂತರ ಮಾನ್ಯ ನ್ಯಾಯಾಲಯಕ್ಕೆ ಕಳುಹಿಸಿಕೊಡುತ್ತಾರೆ. ಮಾನ್ಯ ನ್ಯಾಯಾಲಯವು ವಿಧಿಸಬೇಕಾದ ದಂಡದ ಬಗ್ಗೆ ನಿರ್ದೇಶನವನ್ನು ನೀಡುತ್ತದೆ. ನೀವು ತಪ್ಪಿತಸ್ಥರಾಗಿದ್ದಲ್ಲಿ ಹಣವನ್ನು ಪಾವತಿಸಿದ ನಂತರ ಪ್ರಕರಣ ಮುಕ್ತಾಯವಾಗುತ್ತದೆ. ಇಲ್ಲದಿದ್ದಲ್ಲಿ ನಿಮಗೆ ಸಮನ್ಸನ್ನು ಕಳುಹಿಸಲಾಗುವದು. ನಿಮ್ಮ ಚಾಲಕನ ಪರವಾನಿಗೆಯನ್ನು ವಶದಲ್ಲಿಟ್ಟುಕೊಂಡು ತಾತ್ಕಾಲಿಕ ಪರವಾನಿಗೆ ನೀಡಲಾಗುತ್ತದೆ (ಅದು ನಿಗಧಿತ ಅವಧಿಯಲ್ಲಿ ಕೊನೆಗೊಳ್ಳುತ್ತದೆ). ನಿಮ್ಮ ಅಪರಾಧಕ್ಕೆ ಠಾಣೆಯಲ್ಲಿ ದಂಡವನ್ನು ಕಟ್ಟಿ ನಿಮ್ಮ ಪರವಾನಿಗೆಯನ್ನು ಪಡೆಯಬಹುದು. ಅಲ್ಲದೆ ಮಾನ್ಯ ನ್ಯಾಯಾಲಯದಿಂದ ಸಮನ್ಸ್ ನ್ನು ಸಹ ನೀಡಲಾಗುತ್ತದೆ. ನ್ಯಾಯಾಲಯಕ್ಕೆ ಹಾಜರಾಗಲು ತಪ್ಪಿದಲ್ಲಿ ನಿಮ್ಮ ವಿರುದ್ಧ ವಾರೆಂಟ್ ನ್ನು ಜಾರಿ ಮಾಡಲಾಗುವದು. ಪಾವತಿಸಿದ ದಂಡಕ್ಕೆ ಸಂಬಂದಿಸಿದ ರಶೀದಿಯನ್ನು ನೀಡಲಾಗುವುದು.

ಕೆಲವೊಂದು ಪ್ರಮುಖ ಅಪರಾಧಗಳು.

1] ಚಾಲನೆ ಸಮಯದಲ್ಲಿ ಮಾನ್ಯತೆ ಪಡೆದಿಲ್ಲದ ಲೈಸನ್ಸ್ ನ್ನು ಒಯ್ಯುವದು ಮತ್ತು ಪರವಾನಿಗೆ ಇಲ್ಲದೆ ಚಲಾಯಿಸುವದು.

2] ಪರವಾನಿಗೆ ಹೊಂದಿಲ್ಲದವರಿಗೆ ವಾಹನ ಚಾಲನೆ ಮಾಡಲು ನೀಡುವದು.

3] ವಿಮೆ, ಅನುಮತಿ ಪತ್ರ, ಪೀಟ್ ನೇಸ್, ಇಲ್ಲದೆ ಚಾಲನೆ ಮಾಡುವದು.

4] ಅತೀವೇಗವಾಗಿ ಚಾಲನೆ ಮತ್ತು ಅಜಾಗರೂಕ ಚಾಲನೆ.

5] ಮದ್ಯಪಾನ ಮಾಡಿ ಚಾಲನೆ ಮಾಡುವದು.

6] ಕಡಿದಾದ ಸ್ಥಳದಲ್ಲಿ ಚಾಲನೆ / ಅಪಯಕಾರಿಯಾಗಿ ಅಡ್ಡಾದಿಡ್ಡಿ ಚಲಾಯಿಸುವದು.

7] ಏಕಮುಖ ಸಂಚಾರದ ವಿರುದ್ಧ ಚಾಲನೆ.

8] ಪಾದಚಾರಿಗಳ ತಿರುವಿನಲ್ಲಿ ವಾಹನ ನಿಲ್ಲುಗಡೆ / ನಿಲ್ಲುಗಡೆ ಸ್ಥಳ ದಾಟಿ ನಿಲ್ಲಿಸುವದು.

9] ಹೆಡ್ ಲೈಟ್ ಗಳ ಅನುಚಿತ ಪ್ರಯೋಗ

10] ಖಾಸಗಿ ವಾಹನಗಳನ್ನು ವಾಣಿಜ್ಯ ಉದ್ದೇಶಕ್ಕಾಗಿ ಬಳಸುವದು.

11] ಅಪಾಯಕಾರಿಯಾಗಿ ಸರಕು ಸಾಗಾಣಿಕೆ ಮಾಡುವದು.

12] ಬಾಡಿಗೆ ವಾಹನದ ಚಾಲಕ ಪ್ರಯಾಣಕ್ಕೆ ನೀರಾಕರಿಸಿದಲ್ಲಿ / ಹೆಚ್ಚಿಗೆ ಬಾಡಿಗೆ ಕೇಳಿದಲ್ಲಿ / ಸಮವಸ್ತ್ರ ಧರಿಸದೆ ಇದಲ್ಲಿ.

13] ಸಂಚಾರಿ ನಿಯಮಗಳನ್ನು ಉಲ್ಲಂಘನೆ ಮಾಡುವದು.

ಇತ್ತೀಚಿನ ನವೀಕರಣ​ : 11-07-2021 01:07 PM ಅನುಮೋದಕರು: ADMIN


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕಲಬುರಗಿ ನಗರ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080