ಅಭಿಪ್ರಾಯ / ಸಲಹೆಗಳು

ನಾಗರೀಕರ ಕರ್ತವ್ಯಗಳು

ನಾಗರೀಕರ ಕರ್ತವ್ಯಗಳು          

ಕಲಬುರಗಿ ನಗರ ಪೊಲೀಸ್ ಎಲ್ಲಾ ನಾಗರೀಕರಿಂದ ಸಹಾಯ ಮತ್ತು ಸಹಕಾರವನ್ನು ಪಡೆದು ಜಿಲ್ಲೆಯನ್ನು ಅಪರಾಧ-ಮುಕ್ತ ಮತ್ತು ಸಾಮಾಜಿಕವಾಗಿ ಮತ್ತು ಧಾರ್ಮಿಕವಾಗಿ ಸೌಹಾರ್ದತೆಯನ್ನು ಬೆಳೆಸಿ ಶಾಂತಿಯುತ ಜೀವನ ನೆಲೆಸಲು ಪ್ರಯತ್ನಿಸುತ್ತದೆ. 

  • ನಾವು ಬಯಸುವುದೇನೆಂದರೆ ಪ್ರತಿಯೊಬ್ಬ ನಾಗರೀಕರು ತಮ್ಮ ಸರಹದ್ದಿನ ಪೊಲೀಸ್ ಠಾಣೆ ಮತ್ತು ಅದರ ದೂರವಾಣಿ ಸಂಖ್ಯೆಯ ಮಾಹಿತಿ ಹೊಂದಿರಬೇಕು, ಮತ್ತು ಅವರು ಯಾವುದೇ ಅಪರಾಧದ ಮಾಹಿತಿಯನ್ನು ಹತ್ತಿರದ ಪೊಲೀಸ್ ಠಾಣೆಗೆ ಅಥವಾ 100 ಸಂಖ್ಯೆ ಕರೆಯನ್ನು ಮಾಡಿ ತಿಳಿಸಿತಕ್ಕದ್ದು. 
    • ಭಯೋತ್ಪಾದನೆಯಂತಹ ಅಪರಾಧಗಳು
    • ನಗರದ ಶಾಂತಿ ಮತ್ತು ಸುವ್ಯೆವಸ್ಥೆಗೆ ತೊಡಕಾಗುವ ಚಟುವಟಿಕೆಗಳು
    • ಕೊಲೆ, ಭಾರಿ ಗಾಯ, ಅಪಹರಣ, ಇತ್ಯಾದಿಗಳಲ್ಲಿ ಭಾಗಿಯಾದವರ ಬಗ್ಗೆ ಮಾಹಿತಿ.
    • ದರೋಡೆ, ಸುಲಿಗೆ, ಕಳ್ಳತನ, ಜಬರಿ ಮನೆ ಕಳವು, ಮುಂತಾದ ಸ್ವತ್ತಿನ ಅಪರಾದಗಳ ಬಗ್ಗೆ ಮಾಹಿತಿ.
    • ನೆರೆಹೊರೆಯಲ್ಲಿ ನಾಗರೀಕರ ಸುರಕ್ಷತೆ ಮತ್ತು ಭದ್ರತೆಯ ಮೇಲೆ ಪರಿಣಾಮ ಬಿರುವಂತಹ ಸಂಶಯಾಸ್ಪದ ಚಟುವಟಿಕೆಗಳು.
    • ಭ್ರಷ್ಟಾಚಾರದ ಬಗ್ಗೆ ಮಾಹಿತಿ
    • ಸರ್ಕಾರಿ ನೌಕರನಿಂದ ನಂಬಿಕೆದ್ರೋಹ ಅಪರಾಧ. (ಮಾಹಿತಿದಾರರ ಗೌಪ್ಯತೆಯನ್ನು ಕಾಪಾಡಲಾಗುವುದು)  
    • ಆಹಾರ ಸಾಮಗ್ರಿಗಳ ಕಲಬೆರಕೆ ಮತ್ತು ನಕಲಿ ಔಷಧಗಳ ಬಗ್ಗೆ
  • ಅಪಘಾತ ಸಮಯದಲ್ಲಿ ಒಬ್ಬ ಜವಾಬ್ದಾರಿಯುತ ನಾಗರೀಕನಾಗಿ ಕೂಡಲೇ ಸಹಾಯಕ್ಕೆ ಆಗಮಿಸಿ ಗಾಯಾಳುಗೆ ಚಿಕಿತ್ಸೆಗೆ ವ್ಯವಸ್ಥೆ ಮಾಡಿ  ಅಪಘಾತದ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡುವುದು.
  • ಪ್ರಮುಖ ಉತ್ಸವಗಳಲ್ಲಿ, ಸಾರ್ವಜನಿಕ ಕಾರ್ಯಕ್ರಮಗಳಲ್ಲಿ, ಪ್ರತಿಭಟನೆಗಳ ಸಮಯದಲ್ಲಿ ಪೊಲೀಸರು ನೀಡಿರುವ ನಿರ್ದೇಶನಗಳನ್ನು ಕಡ್ಡಾಯವಾಗಿ ಪಾಲನೆ ಮಾಡಿ ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಸಹಕರಿಸುವುದು. ಸಂಚಾರಿ ನಿಯಮಗಳನ್ನು ಸಹ ಪಾಲನೆ ಮಾಡುವುದು.
  • ನಾಗರೀಕರು ತನಿಖೆಯ ಸಮಯದಲ್ಲಿ ಶೋಧನೆ, ಜಪ್ತಿ, ಮಹಜರ ಮಾಡಲು ಸಹಕರಿಸಬೇಕು.
  • ಅಪರಿಚಿತರನ್ನು ಮನೆಕೆಲಸಕ್ಕೆ ನೇಮಿಸಿ ಕೊಳ್ಳುವ ಮೊದಲು ಅವನ  ಪೂರ್ವ ಪರ ಚರಿತ್ರೆ ಪರಿಶೀಲನೆಗೆ ಕೊರಬೇಕು.
  • ಅಪರಿಚಿತರಿಗೆ ಮನೆ ಬಾಡಿಗೆಯನ್ನು ಕೊಡುವ ಮುನ್ನ ಅವರ ಪೂರ್ವ ಪರವನ್ನು ತಿಳಿದುಕೊಳ್ಳತಕ್ಕದ್ದು. 
  • ನಾಗರಿಕರು ತಮ್ಮ ಅಕ್ಕ ಪಕ್ಕದಲ್ಲಿ ನಡೆಯುವ ಪ್ರಮುಖ ಬೆಳೆವಣಿಗೆಗಳ ಬಗ್ಗೆ ತಿಳಿಸಲು ಸ್ಥಳಿಯ ಬೀಟ ಪೊಲೀಸರೊಂದಿಗೆ ಸಂಪರ್ಕವನ್ನು ಇಟ್ಟುಕೊಳ್ಳಬೇಕು. 

ಇತ್ತೀಚಿನ ನವೀಕರಣ​ : 11-07-2021 01:06 PM ಅನುಮೋದಕರು: ADMIN


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕಲಬುರಗಿ ನಗರ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080