ಅಭಿಪ್ರಾಯ / ಸಲಹೆಗಳು

ಇತ್ತಿಚೆಗೆ ಸುಮಾರು ಒಂದುವರೆ ತಿಂಗಳಿನಿAದ ಕಲಬುರಗಿ ನಗರದ ವಿವಿಧ ಠಾಣೆಗಳ ವ್ಯಾಪ್ತಿಯಲ್ಲಿ ಎಂಟು ೦೮ ಸರಗಳ್ಳತನ ನಡೆದಿದ್ದು ಅವುಗಳಲ್ಲಿ ಅಶೋಕ ನಗರ ಠಾಣಾ ವ್ಯಾಪ್ತಿಯ ವರದಾ ನಗರ, ಬಿದ್ದಾಪುರ ಕಾಲೊನಿ, ಸ್ಟೇಷನ್ ಬಜಾರ ಠಾಣಾ ವ್ಯಾಪ್ತಿಯಲ್ಲಿನ ರೈಲ್ವೆ ಸ್ಟೆಷನ್ ರಸ್ತೆ, ಮತ್ತು ಸಪ್ತಗಿರಿ ಹೋಟೇಲ ಹತ್ತಿರ ಹಾಗೂ ವಿಶ್ವವಿದ್ಯಾಲಯ ಠಾಣಾ ವ್ಯಾಪ್ತಿಯಲ್ಲಿನ, ಸಿದ್ದಾರೂಡ ಮಠ, ಶಹಬಾದ ರಿಂಗ್ ರೋಡ ಹಾಗೂ ಎಂ ಬಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿರುವ ಜಯನಗರ ಮತ್ತು ಬನಶಂಕರಿ ಕಾಲೋನಿಗಳಲ್ಲಿ ನಡೆದಿದ್ದು ದಿನಾಂಕ ೧೧/೧೨/೨೦೨೧ ರಂದು ಸಾಯಂಕಾಲ ೦೫ ಗಂಟೆ ಸುಮಾರಿಗೆ ಜಯನಗರ  ಹತ್ತಿರ ಶ್ರೀಮತಿ ಪುಷ್ಪ ಗಾಜರೆ ಅವರ ಸೊಸೆ ಮತ್ತು ಮೋಮ್ಮಗಳ ಜೋತೆ ನಡೆದುಕೊಂಡು ಹೋಗುತ್ತಿರುವಾಗ ಇವರ ಕೋರಳಲ್ಲಿದ್ದ ಸುಮಾರು ೪೦ ಗ್ರಾಂ ಬಂದಾರದ ತಾಳಿ ಚೈನನ್ನು ಜಬರದಸ್ತಿಯಿಂದ ಇಬ್ಬರು ಅಪರಿಚಿತರು ಕಿತ್ತುಕೊಂಡು ಹೋಗಿದ್ದು ಈ ಸಂಬAದ ಎಂ ಬಿ ನಗರ ಪೊಲೀಸ್ ಠಾಣೆಯಲ್ಲಿ ೧೦೪/೨೦೨೧ ಕಲಂ ೩೯೨ ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು ಇರುತ್ತದೆ.

   ನಗರದಲ್ಲಿ ಸರಗಳ್ಳರ ಹಾವಳಿ ಹೇಚ್ಚಾಗಿದ್ದು ಕಾರಣ ಇದನ್ನು ಗಂಭಿರವಾಗಿ ಪರಿಗಣಿಸಿದ ಮಾನ್ಯ ಪೊಲೀಸ್ ಆಯುಕ್ತರಾದ ಶ್ರೀ ವೈ ಎಸ್ ರವಿಕುಮಾರ ಐಪಿಎಸ್ ರವರ  ನಿರ್ದೇಶನದಂತೆ ಮತ್ತು ಮಾನ್ಯ ಉಪ ಪೊಲೀಸ್ ಆಯುಕ್ತರಾದ ಶ್ರೀ ಅಡ್ಡೂರು ಶ್ರೀನಿವಾಸಲು ಐಪಿಎಸ್ (ಕಾ&ಸು) ಹಾಗೂ ಶ್ರೀ ಶ್ರೀಕಾಂತ ಕಟ್ಟಿಮನಿ ಉಪ ಪೊಲೀಸ್ ಆಯುಕ್ತರು (ಅ&ಸಂ) ರವರ ನೇತೃತ್ವದಲ್ಲಿ ಒಂದು ವಿಷೇಶ ತಂಡವನ್ನು ರಚಿಸಿದ್ದು ಅದರ ಉಸ್ತುವಾರಿಯನ್ನು ಮಾನ್ಯ ಶ್ರೀ ದೀಪನ್ ಐಪಿಎಸ್ ಎಎಸ್‌ಪಿ ಉತ್ತರ ಹಾಗೂ ಮಾನ್ಯ ಶ್ರೀ ಜೆ.ಹೆಚ್ ಇನಾಂದಾರ. ಎಸಿಪಿ ಸಬ ಅರ್ಬನ್ ರವರು ನಿರ್ವಹಿಸಿ ತಮ್ಮ ತಂಡದಲ್ಲಿ ಶ್ರೀ ರಾಘವೇಂದ್ರ ಭಜಂತ್ರಿ ಪಿಐ ಪರಹತಾಬಾದ, ಹಾಗೂ ಶ್ರೀ ಚಂದ್ರಶೇಖರ ತಿಗಡಿ ಪಿಐ ಎಂ ಬಿ ನಗರ, ಅವರ ಸಿಬ್ಬಂದಿಯವರಾದ ಎಎಸ್‌ಐ ಹುಸೇನ ಬಾಷಾ, ಪಾಂಡುರAಗ ಎಎಸ್‌ಐ. ಬಂದೆನಾವಾಜ ,ಹೆಚ್‌ಸಿ, ಚೆನ್ನವೀರೇಶ, ಎಹೆಚ್‌ಸಿ. ಅಶೋಕ ಕಲಾಲ, ಹೆಚ್‌ಸಿ, ಸಿದ್ದಣ್ಣ ಪಿಸಿ, ಪ್ರಭಾಕರ, ಪಿಸಿ. ಅಶೋಕ,ಪಿಸಿ ಗುರುರಾಜ ಪಿಸಿ. ಹಾಗೂ ನಿಸ್ತಂತು ಘಟಕದ ಅಧಿಕಾರಿ ವiತ್ತು ಸಿಬ್ಬಂದಿಯವರ ಸಾಹಾಯದಿಂದ ಈ ಪ್ರಕರಣವನ್ನು ಬೇದಿಸಿ ಸರಗಳ್ಳತನ ಮಾಡುತ್ತಿದ್ದ ಆರೊಪಿಗಳಾದ

೧) ನೀಜಲಿಂಗಪ್ಪಾ ೨೪ ವರ್ಷ ಸಾ// ಸಂಜುನಗರ ಕಲಬುರಗಿ

೨) ವಿಠ್ಠಲ್ ವಯ:-೨೯ ವರ್ಷ ಸಾ// ಸಂಜುನಗರ ಕಲಬುರಗಿ

ಇವರುಗಳನ್ನು ದಸ್ತಗಿರಿ ಮಾಡುವಲ್ಲಿ ಯಶಸ್ವಿಯಾಗಿ ಅವರಿಗೆ ಸಹಕರಿಸಿದ ಆರೋಪಿ

೩) ಗುರುದೇವ@ಗುರುರಾಜ.ಸಾ// ಲಕ್ಷಿö ನಗರ ಕಲಬುರಗಿ ಈತನನ್ನು ಕೂಡಾ ದಸ್ತಗಿರಿ ಮಾಡಿ ಇವರುಗಳಿಂದ  ನಗರದಲ್ಲಿ ದಾಖಲಾಗಿರುವ ಎಲ್ಲಾ ೦೮ ಪ್ರಕರಣಗಳಲ್ಲಿ ಸುಲಿಗೆ ಮಾಡಿದ ಒಂಬ್ಬತ್ತು ಬಂಗಾರದ ತಾಳಿ/ಸರಗಳನ್ನು (ಸುಮಾರು ೨೮೦ ಗ್ರಾಂ ಬಂಗಾರ) ಅಂದಾಜು ೧೧,೫೦,೦೦೦ ಬೇಲೆಬಾಳುವ ಬಂಗಾರದ ಆಭರಣಗಳನ್ನು ವಶಪಡಸಿಕೊಂಡಿರುತ್ತಾರೆ .ಈ ಕಾರ್ಯಾಚರಣೆಯಿಂದ ಕಲಬುರಗಿ ನಗರದ ಸರಗಳ್ಳತನಕ್ಕೆ ಕಡಿವಾಣ ಬಿದ್ದಿದ್ದು ಇದರ ಬಗ್ಗೆ  ಮಾನ್ಯ ಪೊಲೀಸ್ ಆಯುಕ್ತರು ಮೇಚ್ಚುಗೆ ವ್ಯಕ್ತಪಡಿಸಿರುತ್ತಾರೆ.

ಇತ್ತೀಚಿನ ನವೀಕರಣ​ : 27-12-2021 03:50 PM ಅನುಮೋದಕರು: ADMIN


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕಲಬುರಗಿ ನಗರ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080