ಅಭಿಪ್ರಾಯ / ಸಲಹೆಗಳು

ಅಶೋಕ ನಗರ ಠಾಣೆ :- ಇಂದು ದಿನಾಂಕ:೩೦.೦೭.೨೦೨೧ ರಂದು ೦೭:೦೦ ಪಿ.ಎಂ.ಕ್ಕೆ ಶ್ರೀ ಶಿವಾನಂದ ಹೆಚ್.ಸಿ ೨೨೯ ಸ್ಟೆಷನ್ ಬಜಾರ ಪೊಲೀಸ್ ಠಾಣೆ ಕಲಬುರಗಿ ಸದ್ಯ ಮಾನ್ಯ ಸಹಾಯಕ ಪೊಲೀಸ್ ಆಯುಕ್ತರು “ಎ” ಉಪ-ವಿಭಾಗ ಕಲಬುರಗಿ ಇವರು ಠಾಣೆಗೆ ಹಾಜರಾಗಿ ಒಬ್ಬ ಆರೋಪಿ ಮತ್ತು ಮುದ್ದೆಮಾಲಿನೊಂದಿಗೆ ಒಂದು ವರದಿಯನ್ನು ಹಾಜರ ಪಡಿಸಿದ್ದರ ಸಾರಾಂಶವೆನಂದರೆ, ಇಂದು ದಿನಾಂಕ: ೩೦.೦೭.೨೦೨೧ ರಂದು ಮದ್ಯಾಹ್ನ ೦೩:೦೦ ಗಂಟೆಗೆ ನಾನು ಮತ್ತು ಶಿವಲಿಂಗ ಸಿಪಿಸಿ ೧೨೪೧ ಇಬ್ಬರೂ “ಎ” ಉಪ-ವಿಭಾಗದ ಕರ‍್ಯಾಲಯದಲ್ಲಿದ್ದಾಗಿ ಖಚಿತವಾದ ಭಾತ್ಮಿ ಬಂದಿದೆನೆಂದರೆ, ಅಶೋಕ ನಗರ ಪೊಲೀಸ್ ಠಾಣೆಯ ವ್ಯಾಪ್ತಿಯ ಪೈಕಿ ರಾಮ ಮಂದಿರ ಹತ್ತಿರ ಒಬ್ಬ ವ್ಯಕ್ತಿಯು ಸರ‍್ವಜನಿಕರಿಂದ ಹಣ ಪಡೆದು ಅಂಕೆ ಸಂಖ್ಯೆಗಳನ್ನು ಬರೆದ ಚೀಟಿಗಳನ್ನು ನೀಡುತ್ತಾ ಮಟಕಾ ಜೂಜಾಟದಲ್ಲಿ ತೊಡಗಿರುತ್ತಾರೆ ಅಂತ ಮಾಹಿತಿ ಬಂದ ಮೆರೆಗೆ ಅಶೋಕ ನಗರ ಪೊಲೀಸ್ ಠಾಣೆಯ ಗುಪ್ತ ಮಾಹಿತಿ ಸಿಬ್ಬಂದಿಯವರಾದ ಶ್ರೀ ಸಾಯಬಣ್ಣಾ ಹೆಚ್.ಸಿ ೨೧ ಇವರನ್ನು ಮತ್ತು ಇಬ್ಬರು ಪಂಚರಾದ ೧) ಶ್ರೀ ಆನಂದ ತಂದೆ ಮಾಣಿಕ ಪ್ರಭು ಕಾಂಬಳೆ ವಯ: ೨೫ ರ‍್ಷ ಉ: ಖಾಸಗಿ ಕೆಲಸ ಸಾ|| ಸಿದ್ದರ‍್ಥ ನಗರ ಕಲಬುರಗಿ ಮತ್ತು ೨) ಶ್ರೀ ಪ್ರವೀಣ ತಂದೆ ಮನೋಹರ ದೇವರಮನಿ ವಯ: ೨೭ ರ‍್ಷ ಉ: ಕಾರ ಚಾಲಕ ಸಾ|| ಸಿದ್ಧರ‍್ಥ ನಗರ ಕಲಬುರಗಿ ರವರನ್ನು ಕೇಂದ್ರ ಬಸ್ ನಿಲ್ದಾಣದ ಹತ್ತಿರ ಬರಮಾಡಿಕೊಂಡು ಅವರಿಗೆ ಸದರಿ ವಿಷಯ ತಿಳಿಸಿ ಅವರು ಮತ್ತು ಸಿಬ್ಬಂದಿ ಜನರಾದ ನಾನು ೧) ಸಾಯಬಣ್ಣಾ ಹೆಚ್.ಸಿ-೨೧ ಮತ್ತು ೨) ಶಿವಲಿಂಗ ಸಿಪಿಸಿ ೧೨೪೧ ಎಲ್ಲರು ಕೂಡಿಕೊಂಡು ೦೩:೩೦ ಪಿಎಂ.ಕ್ಕೆ ಕೇಂದ್ರ ಬಸ್ ನಿಲ್ದಾಣದಿಂದ ಹೊರಟು ರಾಮ ಮಂದಿರ ಹತ್ತಿರ ಹೋಗಿ ಸ್ವಲ್ಪ ದೂರದಲ್ಲಿ ಮರೆಯಾಗಿ ನಿಂತು ನೋಡಲಾಗಿ ಒಬ್ಬ ವ್ಯಕ್ತಿಯು ೧/- ರೂಪಾಯಿಗೆ ೮೦/- ರೂಪಾಯಿ ಕೊಡುವದಾಗಿ ಜನರಿಗೆ ಹೇಳುತ್ತಾ ಅವರನ್ನು ಜೂಜಾಟಕ್ಕೆ ಸೆಳೆದು ಹಣದ ಆಸೆ ತೊರಿಸಿ ಸರ‍್ವಜನಿಕರಿಂದ ಹಣ ಪಡೆದುಕೊಂಡು ಮಟಕಾ ಜೂಜಾಟದ ಅಂಕಿ ಸಂಖ್ಯೆಗಳು ಬರೆದ ಚೀಟಿಗಳು ಕೊಡುತ್ತಾ ಮಟಕಾ ಜೂಜಾಟದಲ್ಲಿ ತೋಡಗಿರುವದನ್ನು ನೋಡಿ ಖಾತ್ರಿ ಪಡಿಸಿಕೊಂಡು ಪಂಚರ ಸಮಕ್ಷಮ ಸಿಬ್ಬಂದಿಯೊಂದಿಗೆ ದಾಳಿ ಮಾಡಲಾಗಿ ಮಟಕಾ ಚೀಟಿ ಬರೆಯಿಸಲು ಬಂದವರು ನಮ್ಮನ್ನು ನೋಡಿ ಓಡಿ ಹೋಗಿದ್ದು ಮಟಕಾ ಬರೆದುಕೊಳ್ಳುತ್ತಿದ್ದ ವ್ಯಕ್ತಿಯನ್ನುಹಿಡಿದು ಕೊಂಡಿದ್ದು ಆಗ ಸಮಯ ೦೩:೪೫ ಪಿ.ಎಂ. ಆಗಿತ್ತು. ನಂತರ ಅವನ ಹೆಸರು ಮತ್ತು ವಿಳಾಸ ವಿಚಾರಿಸಿ ಅಂಗ ಜಡ್ತಿ ಮಾಡಿದ್ದು, ಅವನು ತನ್ನ ಹೆಸರು ನಾಗರಾಜ ತಂದೆ ರೇವಣಸಿದ್ದಪ್ಪ ಪೂಜಾರಿ ವಯ: ೪೩ ರ‍್ಷ ಉ: ಕೂಲಿ ಕೆಲಸ ಜಾ: ಪುಜಾರಿ ಸಾ|| ಪರತಾಬಾದ ಅಂತ ತಿಳಿಸಿದ್ದು ಸದರಿಯವನಿಗೆ ಅಂಗ ಜಡ್ತಿ ಮಾಡಲಾಗಿ ಅವನ ಹತ್ತಿರ ೧) ಒಂದು ಬಾಲ ಪೆನ್ ಅ.ಕಿ. ೦೦ ೨) ಎರಡು ಮಟಕಾ ಚೀಟಿಗಳು ಅ.ಕಿ. ೦೦ ಮತ್ತು ೩) ನಗದು ಹಣ ೩೦೪೦/- ಸಿಕ್ಕಿರುತ್ತವೆ. ನಂತರ ಸದರಿಯವನ ಹತ್ತಿರ ಸಿಕ್ಕ ಹಣ ಮತ್ತು ಮಟಕಾ ಚೀಟಿ ಮತ್ತು ಬಾಲ್ ಪೆನಗಳ ಬಗ್ಗೆ ೦೪:೦೦ ಪಿ.ಎಂ. ದಿಂದ ೦೫:೦೦ ಪಿ.ಎಂ. ವರೆಗೆ ಜಪ್ತಿ ಪಂಚನಾಮೆ ಬರೆಯಿಸಿಕೊಂಡು ಕೇಸಿನ ಪುರಾವೆ ಕುರಿತು ಮುದ್ದೆಮಾಲು ಜಪ್ತಿ ಪಡಿಸಿಕೊಂಡು ಆರೋಪಿತನನ್ನು ವಶಕ್ಕೆ ಪಡೆದುಕೊಂಡು ಮರಳಿ ಅಶೋಕ ನಗರ ಠಾಣೆಗೆ ೦೭:೦೦ ಪಿ.ಎಂ.ಕ್ಕೆ ಬಂದು ಆರೋಪಿತನ ವಿರುದ್ಧ ಕಾನೂನು ಕ್ರಮ ಜರುಗಿಸಲು ಆರೋಪಿತನನ್ನು ಹಾಜರುಪಡಿಸಿ ಸರಕಾರದ ಪರವಾಗಿ ಜಪ್ತಿ ಪಂಚನಾಮೆಯೊಂದಿಗೆ ಈ ಫರ‍್ಯಾದಿ ನೀಡಿದ್ದು. ಫರ‍್ಯಾದಿಯ ವರದಿಯ ಸಾರಾಂಶವು ಅಸಂಜ್ಞೆಯ ಅಪರಾದವಾಗಿರುವುದ್ದರಿಂದ ಆರೋಪಿತನ ವಿರುದ್ದ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಳ್ಳಲು ಮಾನ್ಯ ನ್ಯಾಯಾಲಯದಿಂದ ೭:೪೫ ಪಿ.ಎಂಕ್ಕೆ ಪರವಾನಿಗೆ ಪಡೆದುಕೊಂಡು ವರದಿಯ ಸಾರಾಂಶದ ಮೇಲಿಂದ .ಪ್ರಕರಣ ವರದಿಯಾದ ಬಗ್ಗೆ ವರದಿ.

 

ಇತ್ತೀಚಿನ ನವೀಕರಣ​ : 31-07-2021 12:58 PM ಅನುಮೋದಕರು: ADMIN


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕಲಬುರಗಿ ನಗರ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2021, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080