ಅಭಿಪ್ರಾಯ / ಸಲಹೆಗಳು

       ಅಶೋಕ ನಗರ ಠಾಣೆ  :-     ಇಂದು ದಿನಾಂಕ:೨೮.೦೭.೨೦೨೧ ರಂದು ೧೦:೩೦ ಗಂಟೆಗೆ ಫರ‍್ಯಾದಿ ಶ್ರೀ ಶಾಂತಪ್ಪ ತಂದೆ ಚನ್ನಪ್ಪ  ಹೊಸೂರ ವಯ: ೫೪ ವರ್ಷ  ಜಾ: ಲಿಂಗಾಯತ ಉ: ಎ.ಇ.ಇ. ಸಿ.ಎಂ.ಸಿ. ಶೋರಾಪೂರ ಸಾ|| ಪ್ಲಾಟ ನಂ. ೧೨೫ ಜನತಾ ಲೇಔಟ ಕರುಣೇಶ್ವರ  ನಗರ ಕಲಬುರಗಿ  ಇವರು ಠಾಣೆಗೆ ಹಾಜರಾಗಿ ಸಲ್ಲಿಸಿದ  ಲಿಖಿತ ದೂರು ಅರ್ಜಿಯ  ಸಾರಾಂಶವೆನೆಂದರೆ, ನಾನು ಎ.ಇ.ಇ. ಅಂತ ಕೆಲಸ ಮಾಡಿಕೊಂಡು ಕುಟುಂಬದೊಂದಿಗೆ ವಾಸವಾಗಿರುತ್ತೇನೆ. ನಮ್ಮ ಮನೆಯಲ್ಲಿ  ನಾನು, ನನ್ನ ಹೆಂಡತಿ  ಮತ್ತು ಇಬ್ಬರು ಹೆಣ್ಣು  ಮಕ್ಕಳು  ವಾಸವಾಗಿರುತ್ತೇವೆ. ಹೀಗಿದ್ದು ದಿನಾಂಕ:೨೬.೦೭.೨೦೨೧ ರಂದು ಎಂದಿನಂತೆ ರಾತ್ರಿ ೧೧:೦೦ ಗಂಟೆಗೆ ಊಟಮಾಡಿ ಒಂದು ಬೆಡರೂಮನಲ್ಲಿ  ನಾನು,  ಒಂದು ಬೆಡರೂಮನಲ್ಲಿ  ನನ್ನ ಮಕ್ಕಳು ಮತ್ತು  ಹಾಲಿನಲ್ಲಿ  ನನ್ನ ಹೆಂಡತಿ  ಮಲಗಿದ್ದು ಇರುತ್ತದೆ.  ನಾನು ಬೆಳಗಿನ ಜಾವ ೦೩:೩೦ ಗಂಟೆ ಸುಮಾರಿಗೆ  ನೈಸರ್ಗಿಕ  ಕರೆಗೆ  ಎದ್ದಾಗ ನಾನು  ಮಲಗಿದ್ದ  ಬೆಡರೂಮನಲ್ಲಿ ಇದ್ದ ಅಲ್ಮಾರಾದ ಬಾಗಿಲು ತೆರೆದಿದ್ದು, ಅದರಲ್ಲಿದ್ದ  ಬಟ್ಟೆಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದು ನೋಡಿ  ಗಾಬರಿಯಾಗಿ ಹಾಲಿನಲ್ಲಿ  ಮಲಗಿದ್ದ  ನನ್ನ ಹೆಂಡತಿಗೆ ಎಬ್ಬಿಸಲು ಹೋದಾಗ ಮನೆಯ  ಮುಖ್ಯದ್ವಾರ  ತೆಗೆದಿದ್ದು ಇರುತ್ತದೆ.  ನಂತರ ನಾನು ನನ್ನ ಹೆಂಡತಿಗೆ  ಎಬ್ಬಿಸಿ ಇಬ್ಬರು ಬೆಡ್ ರೂಮನಲ್ಲಿದ್ದ  ಅಲ್ಮಾರಾದಲ್ಲಿ ಇಟ್ಟಿದ್ದ ಸುಮಾರು  ರ‍್ಷಗಳ ಹಿಂದೆ  ಖರೀದಿಸಿದ್ದ  ಬಂಗಾರದ ವಸ್ತುಗಳಾದ ೧) ತಾಳಿ ಸರ ೪ ತೊಲೆ ಆಗಿನ ಅ.ಕಿ.  ರೂ. ೯೦,೦೦೦/-   ೨) ಎರಡು  ಉಂಗುರಗಳು ತಲಾ ೫ ಗ್ರಾಂ ಒಟ್ಟು ೧ ತೊಲೆ ಆಗಿನ ಅ.ಕಿ.  ರೂ. ೨೦,೦೦೦/- ಮತ್ತು  ಮಕ್ಕಳ ೩ ಜೊತೆ ಕಿವಿಯ ಓಲೆಗಳು, ಒಂದು ಸಣ್ಣ ಲಾಕೇಟ್, ಒಂದು ಸಣ್ಣ  ಸಾಕಳಿ  ಮತ್ತು  ಒಂದು ಬೆಳ್ಳಿಯ ಸಮಯ  ಇವುಗಳ  ಆಗಿನ ಅ.ಕಿ.  ರೂ. ೩೫,೦೦೦/-  ಹೀಗೆ  ಎಲ್ಲಾ  ಸೇರಿ  ಒಟ್ಟು ಅ.ಕಿ. ರೂ. ೧,೪೫,೦೦೦/-  ಕಿಮ್ಮತ್ತಿನ  ಬಂಗಾರ ಮತ್ತು ಬೆಳ್ಳಿಯ  ವಸ್ತುಗಳನ್ನು ಯಾರೊಕಳ್ಳರು  ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ.  ಕಳ್ಳರು ನಮ್ಮ  ಮನೆಯೊಳಗೆ  ಮೇನ್ ಡೋರ  ಪಕ್ಕದಲ್ಲಿರುವ  ಕಿಟಕಿಯಿಂದ ಒಳಗೆ ಕೈ ಹಾಕಿ ಮೇನ್ ಡೋರ  ಕೊಂಡಿ ತೆಗೆದುಕೊಂಡು  ಒಳಗೆ  ಪ್ರವೇಶ ಮಾಡಿ ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ನಾನು ಮತ್ತು ನನ್ನ ಹೆಂಡತಿ  ಮಕ್ಕಳು  ಈ ಬಗ್ಗೆ ಮನೆಯಲ್ಲಿ ವಿಚಾರಮಾಡಿ  ಠಾಣೆಗೆ ಬಂದು ದೂರು ಸಲ್ಲಿಸುತ್ತಿದ್ದು, ದಿನಾಂಕ:೨೬.೦೭.೨೦೨೧ ರಂದು ರಾತ್ರಿ ೧೧:೦೦ ಗಂಟೆಯಿಂದ  ದಿನಾಂಕ:೨೭.೦೭.೨೦೨೧ ರ  ಬೆಳಗಿನ ಜಾವ ೦೩:೩೦ ಗಂಟೆ ಅವಧಿಯಲ್ಲಿ ನಮ್ಮ ಮನೆ  ಕಳ್ಳತನ  ಮಾಡಿದ ಕಳ್ಳರನ್ನು  ಪತ್ತೆ  ಮಾಡಿ  ಅವರ ವಿರುದ್ಧ  ಕಾನೂನು  ರೀತಿ  ಕ್ರಮ ಜರುಗಿಸಿ ನಮ್ಮ  ವಸ್ತುಗಳನ್ನು ನಮಗೆ ದೊರಕಿಸಿ ಕೊಡಲು ವಿನಂತಿ ಅಂತ ವಗೈರೆಯಾಗಿದ್ದ ಅರ್ಜಿ  ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

ಇತ್ತೀಚಿನ ನವೀಕರಣ​ : 29-07-2021 11:46 AM ಅನುಮೋದಕರು: ADMIN


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕಲಬುರಗಿ ನಗರ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080