ಅಭಿಪ್ರಾಯ / ಸಲಹೆಗಳು

ಅಶೋಕ ನಗರ ಠಾಣೆ  :- ಇಂದು ದಿನಾಂಕ:೨೭.೦೭.೨೦೨೧ ರಂದು ೦೩:೦೦ ಪಿ.ಎಂ.ಕ್ಕೆ ಫರ‍್ಯಾದಿ ಶ್ರೀಮತಿ ವನಿತಾ ಗಂಡ ಪ್ರಲ್ಹಾದ ತಾಂದಳೆ ವಯ: ೫೫ ವರ್ಷ ಜಾ: ಹೊಲೆಯ ಉ: ಮನೆ ಕೆಲಸ ಸಾ|| ಸಿ.ಐ.ಬಿ ಕಾಲೋನಿ ಕಲಬುರಗಿ ಇವರು ಠಾಣೆಗೆ  ಹಾಜರಾಗಿ ಲಿಖಿತ ಫರ‍್ಯಾದಿ ಸಲ್ಲಿಸಿದ್ದರ ಸಾರಾಂಶವೆನೆಂದರೆ,  ನಾನು ಮನೆ ಕೆಲಸ ಮಾಡಿಕೊಂಡು ಕುಟುಂಬದೊಂದಿಗೆ ವಾಸವಾಗಿರುತ್ತೇನೆ. ನನ್ನ ಗಂಡ ಪ್ರಲ್ಹಾದ ಇವರು ನಿವೃತ್ತ ಸೈನಿಕರಿದ್ದು ಅವರಿಗೆ ಪಾಶ್ರ‍್ವ ವಾಯು ಆಗಿದ್ದು ಮನೆಯಲ್ಲಿ ಇರುತ್ತಾರೆ. ನಮಗೆ ಒಟ್ಟು ೫ ಜನ ಗಂಡು ಮಕ್ಕಳು ಮತ್ತು ಒಬ್ಬಳು ಹೆಣ್ಣು ಮಗಳು ಇರುತ್ತಾರೆ. ನಮ್ಮ ಹಿರಿಯ ಮಗ ಅನೀಲ ಇತನು ಕೆ.ಎಸ್.ಆರ್.ಪಿ. ಪೆದೆಯಿದ್ದು  ಬೆಂಗಳೂರಿನಲ್ಲಿ ವಾಸವಾಗಿರುತ್ತಾನೆ. ಎರಡನೇ ಮಗ ಅರುಣ ಇತನು ಆಟೋ ಚಾಲನೆ ಮಾಡಿಕೊಂಡು ಬೆಂಗಳೂರಿನಲ್ಲಿಯೇ ವಾಸವಾಗಿರುತ್ತಾನೆ. ೩ನೇ ಮಗ ಅಂಬರೀಷ ಇತನು ಗೌಂಡಿ ಕೆಲಸ ಮಾಡಿಕೊಂಡು ಬೀದರ ಪಟ್ಟಣದಲ್ಲಿ ವಾಸವಾಗಿರುತ್ತಾನೆ. ಆಶೀಶ ಮತ್ತು ಅಭಿಷೇಕ ಇವರಿಬ್ಬರು ಕಲಬುರಗಿ ನಗರದ ಕೇಂದ್ರ ಬಸ್ ನಿಲ್ದಾಣದ ಹತ್ತಿರ ಎಳೆ ನೀರಿನ ವ್ಯಾಪಾರ ಮಾಡಿಕೊಂಡು ಇರುತ್ತಾರೆ. ಆಶೀಶ ಮತ್ತು ಅಭಿಷೇಕ ಹಾಗೂ ನಮ್ಮ ಹೆಣ್ಣು ಮಗಳಾದ ಅಕ್ಷತಾ ಇವರುಗಳ ಲಗ್ನ ಆಗಿರುವುದಿಲ್ಲ.     ಹೀಗಿದ್ದು ನಿನ್ನೆ ದಿನಾಂಕ:೨೬.೦೭.೨೦೨೧ ರಂದು ರಾತ್ರಿ ೦೮:೦೦ ಗಂಟೆ ಸುಮಾರಿಗೆ ಅಭಿಷೇಕ ಇತನು ಕೇಂದ್ರ ಬಸ್ ನಿಲ್ದಾಣದ ಹತ್ತಿರ ಹೋಗಿ ಬರುತ್ತೇನೆ ಅಂತ ಮನೆಯಿಂದ ಹೋದವನು ಮರಳಿ ಮನೆಗೆ ಬಂದಿರುವುದಿಲ್ಲ. ನಾವು ಬಹಳ ಹೊತ್ತಿನ ವರೆಗೆ ಅವನ ಬರುವಿಕೆಗಾಗಿ ದಾರಿ ನೋಡಿದ್ದು ಅವನು ಬರದೆ ಇದ್ದಾಗ ರಾತ್ರಿ ೦೯:೩೦ ಗಂಟೆ ಸುಮಾರಿಗೆ ಅವನ ಮೊಬೈಲ್ ನಂ. ೭೦೨೨೨೩೩೦೩೩ ನೇದ್ದಕ್ಕೆ ಮನೆಯಲ್ಲಿಯ ಮೊಬೈಲ ನಂ.೯೩೫೩೭೫೧೦೧೬  ನೇದ್ದಕ್ಕೆ ಕರೆ ಮಾಡಿದಾಗ ಅದು ನಾಟ್ ರಿಚೇಬಲ್ ಅಂತ ಬರುತ್ತಿರುತ್ತದೆ. ನಮ್ಮ ಮಗ ಅಭಿಷೇಕ ಇತನು ಇಲ್ಲಿಯ ವರೆಗೆ ಮನೆಗೆ ಬರದೆ ಇದ್ದ ಕಾರಣ ನಮ್ಮ ಕುಟುಂಬದ ಎಲ್ಲ ಸದಸ್ಯರು ಕೂಡಿ ನಮ್ಮ ಮಗನಿಗೆ ಎಲ್ಲಾ ಕಡೆಗಳಲ್ಲಿ ಹುಡುಕಾಡಿದರು ಎಲ್ಲಿಯೂ ಸಿಕ್ಕಿರುವುದಿಲ್ಲ ಮತ್ತು ಎಲ್ಲಾ ಸಂಬಂಧಿಕರಲ್ಲಿ ವಿಚಾರಿಸಿದರೂ ಕೂಡ ಯಾವುದೆ ಮಾಹಿತಿ ಸಿಕ್ಕಿರುವುದಿಲ್ಲ. ಅಭಿಷೇಕ ಇತನು ಮನೆಯಿಂದ ಹೋಗುವಾಗ ಒಂದು ನೀಲಿ ಬಣ್ಣದ ನೈಟ್ ಪ್ಯಾಂಟ ಮತ್ತು ಒಂದು ಆರೆಂಜ್ ವಿತ್ ರೆಡ್ ಬಣ್ಣದ ಫುಲ್ ಟೀ ರ‍್ಟ ಧರಿಸಿಕೊಂಡಿರುತ್ತಾನೆ ಅವನು  ಸಾಧಾರಣ ಮೈ ಕಟ್ಟು, ಕೋಲು ಮುಖ, ಸಾದಾ ಕಪ್ಪು ಮೈ ಬಣ್ಣ ಹೊಂದಿದ್ದು, ಅವನು ಕನ್ನಡ, ಹಿಂದಿ ಮತ್ತು ಮರಾಠಿ  ಭಾಷೆಗಳನ್ನು ಮಾತಾಡುತ್ತಾನೆ. ಕಾರಣ ಕಾಣೆಯಾದ ನಮ್ಮ ಮಗ ಅಭಿಷೇಕ ಇತನಿಗೆ ಪತ್ತೆ ಮಾಡಿಕೊಡಬೇಕು ಅಂತ ವಿನಂತಿ ಅಂತ ವಗೈರೆಯಾಗಿ ಇದ್ದ  ಅರ್ಜಿ   ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ..

ಇತ್ತೀಚಿನ ನವೀಕರಣ​ : 28-07-2021 11:48 AM ಅನುಮೋದಕರು: ADMIN


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕಲಬುರಗಿ ನಗರ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080