ಅಭಿಪ್ರಾಯ / ಸಲಹೆಗಳು

ಫರಹತಾಬಾದ ಪೊಲೀಸ ಠಾಣೆ :- ಮಾನ್ಯರವರಲ್ಲಿ ಮೇಲ್ಕಾಣಿಸಿದ ವಿಷಯದಲ್ಲಿ ಅರಿಕೆ ಮಾಡಿಕೊಳ್ಳುವದೇನೆಂದರೆ, ಇಂದು ದಿನಾಂಕ: ೨೨.೦೭.೨೦೨೧ ರಂದು ಸಾಯಂಕಾಲ ೫ ಗಂಟೆಗೆ ಫಿರ್ಯಾಧಿ ಶ್ರೀಮತಿ ಸುವರ್ಣಾ ಗಂಡ ಪರಮಾನಂದ ಗೌರೆ ವಯ:೨೩ ವರ್ಷ ಉ: ಮನೆಗೆಲಸ ಜಾತಿ:ಹೊಲೆಯ (ಎಸ್.ಸಿ) ಸಾ:ಭವಾನಿ ನಗರ ಬೀದರ ಇವರು ಠಾಣೆಗೆ ಹಾಜರಾಗಿದ್ದರಿಂದ ನನ್ನ ತಾಯಿಯಾದ ಪಾರ್ವತಿ ಇವಳಿಗೆ ಆರಾಮವಿರದ ಕಾರಣ ಅವಳಿಗೆ ಮಾತಾಡಿಸುವ ಸಲುವಾಗಿ ಕಳೆದ ೩ ದಿನಗಳ ಹಿಂದೆ ನನ್ನ ತವರು ಮನೆಯಾದ ಮಳನಿ ಗ್ರಾಮಕ್ಕೆ ಬಂದಿರುತ್ತೆನೆ. ನಿನ್ನೆ ದಿನಾಂಕ:೨೧.೦೭.೨೦೨೧ ರಂದು ಸಾಯಂಕಾಲ ೫ ಗಂಟೆಯ ಸುಮಾರಿಗೆ ನಾನು ನನ್ನ ತಾಯಿಯ ಮನೆಯ ಮುಂದೆ ಇರುವ ಕಟ್ಟೆಯ ಮೇಲೆ ಕುಳಿತ್ತಾಗ ನನ್ನ ಕೈಯಲ್ಲಿದ್ದ ಮೊಬೈಲ್‌ನ್ನು ಮಳನಿಯ ನೀಲಪ್ಪಾ ತಂದೆ ಬಸಪ್ಪಾ ಜಮದಾರ ಈತನು ತೆಗೆದುಕೊಂಡು ಹೋದನು. ನಂತರ ಸ್ವಲ್ಪ ಸಮಯದ ನಂತರ ಅವನು ಮತ್ತೆ ನಮ್ಮ ಮನೆಗೆ ಬಂದು ನನ್ನ ಮೊಬೈಲ್ ವಾಪಾಸ ಕೊಟ್ಟಿರುತ್ತಾನೆ. ಸದರಿ ಮೊಬೈಲ್ ಕವರ ಹಿಂದೆ ನಾನು ೫೦೦೦/-ರೂ ಇಟ್ಟಿದ್ದು, ಅದು ಕಾಣದೇ ಇರುವುದರಿಂದ ನಾನು ನೀಲಪ್ಪಾನಿಗೆ ಕೇಳಿದಾಗ ಅವನ ಜೊತೆಗೆ ಬಂದ ಅವನ ಅಣ್ಣ ಸಾಗರ ಈತನು ನಾನು ಹಣ ಕೊಡುತ್ತೆನೆ ಅಂತಾ ಹೇಳಿದರಿಂದ ನಾವು ಸುಮ್ಮನಿರುತ್ತೆವೆ. ಇಂದು ದಿನಾಂಕ:೨೨.೦೭.೨೦೨೧ ರಂದು ಬೆಳಗ್ಗೆ ೯ ಗಂಟೆಗೆ ನನ್ನ ತಾಯಿಯಾದ ಪಾರ್ವತಿ ಇವಳು ಸಾಗರ ಈತನಿಗೆ ರೊಕ್ಕ ಕೇಳಲು ಹೋಗುತ್ತೆನೆ ಅಂತಾ ಮನೆಯಿಂದ ಹೋಗಿರುತ್ತಾಳೆ. ಸ್ವಲ್ಪ ಸಮಯದ ನಂತರ ನಾಗಪ್ಪಾ ಕಾಂಬಳೆ ಇವರ ಮನೆಯ ಮುಂದೆ ಜಗಳ ನಡೆಯುತ್ತಿದ್ದ ಗೌಳಿ ಕೇಳಿ ನಾನು ಅಲ್ಲಿ ಹೋಗಿ ನೋಡಲಾಗಿ , ನಮ್ಮೂರಿನ ಸಾಗರ , ಅವನ ತಂದೆ ಬಸವರಾಜ, ಅವನ ಅಣ್ಣ ಭಾಗಪ್ಪಾ, ಅವನ ತಾಯಿ ಸಿದ್ದವ್ವ , ಅವನ ತಮ್ಮನಾದ ನೀಲ್ಲಪ್ಪಾ ಇವರೆಲ್ಲರೂ ನನ್ನ ತಾಯಿಗೆ ಅವಾಚ್ಯವಾಗಿ ಬೈದು ಜಗಳ ಮಾಡುತ್ತಿದ್ದರು. ಆಗ ಅಲ್ಲಿಗೆ ಹೋಗಿ ನಾನು ಅವಳಿಗೆ ಯಾಕೇ ಹೊಡೆಯುತ್ತಿದ್ದಿರಿ ಅಂತಾ ಕೇಳಿದ್ದಕ್ಕೆ ಏ ರಂಡಿ ನಿಮ್ಮವ್ವ ನಮ್ಮಗೆ ರೋಕ್ಕ ಕೇಳಲಿಕ್ಕೆ ಬರುತ್ತಾಳ , ನೀವು ಹೊಲಜಾತಿಯವರು ಇದ್ದು ನಮ್ಮೊಂದಿಗೆ ಜಗಳ ಮಾಡುತ್ತಿರಿ ಅಂತಾ ನಮ್ಮಗೆ ಅವಾಚ್ಯವಾಗಿ ಬೈದು ಜಾತಿ ನಿಂದನೆ ಮಾಡಿದಲ್ಲದೆ, ಸಾಗರ ಈತನು ನನಗೆ ತನ್ನ ಕೈಯಿಂದ ಚಿವುರಿರುತ್ತಾನೆ. ಆಗ ನನ್ನ ತಾಯಿಯು ಅಲ್ಲಿಂದ ಬಿಡಿಸಿಕೊಂಡು ಹೋಗುವಾಗ ಸಾಗರನು ತಡೆದು ನಿಲ್ಲಿಸಿದಾಗ ಭಾಗಪ್ಪಾನು ನಮ್ಮವ್ವಳಿಗೆ ಕೈಯಿಂದ ಕಪಾಳಕ್ಕೆ ಹೊಡೆದನು. ಆಗ ಅಲ್ಲೆ ಜಗಳ ನಿಂತು ನೋಡುತ್ತಿದ್ದ ಅನ್ನಪೂರ್ಣ ಗಂಡ ಬಾಬುರಾವ ಕಾಂಬಳೆ ಇವಳು ಬಂದು ಜಗಳ ಬಿಡಿಸಿರುತ್ತಾಳೆ. ಸದರಿ ಘಟನೆಯಲ್ಲಿ ನನ್ನ ಕೊರಳಲ್ಲಿದ್ದ ತಾಳಿಯ ೧/೨ ತೋಲಾ ಗುಂಡು ಕಡಿದು ಹಾಳಾಗಿದ್ದು ಎಲ್ಲಿ ಬಿದ್ದಿರುತ್ತದೆಯೋ ಗೊತ್ತಿಲ್ಲಾ. ನನ್ನ ತಾಯಿಯ ಒಂದು ಕಿವಿಯಲ್ಲಿದ್ದ ಹೂವು ಬಿದ್ದು ಹಾಳಾಗಿರುತ್ತದೆ.ಕಾರಣ ನಮ್ಮಗೆ ಅವಾಚ್ಯವಾಗಿ ಬೈದು ಜಾತಿನಿಂದನೆ ಮಾಡಿ ಹೊಡೆಬಡೆ ಮಾಡಿದ ಮೇಲಿನವರ ಮೇಲೆ ಕಾನೂನು ಕ್ರಮ ಜರೂಗಿಸಲು ವಿನಂತಿ ಅಂತಾ ಸಾರಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

ಸಂಚಾರಿ ಪೊಲೀಸ್ ಠಾಣೆ-೦೧ :- ದಿನಾಂಕ ೨೭-೦೬-೨೦೨೧ ರಂದು ಮದ್ಯಾಹ್ನ ೧೨-೩೦ ಗಂಟೆ ಸುಮಾರಿಗೆ ಮಹ್ಮದ ರಫಿ ಇತನು ಚಲಾಯಿಸುತ್ತೀರುವ ಕೃಜರ ಜೀಪ ನಂಬರ ಕೆಎ-೩೭-ಎಮ್-೨೧೩೪ ನೇದ್ದರಲ್ಲಿ ಆದೆಮ್ಮಾ ಗಂಡ ಗಣಪತಿ, ಸುಮಿತ್ರಾಬಾಯಿ ಗಂಡ ಬಸವರಾಜ, ಅನೀತಾ ಗಂಡ ಸುರೇಶ, ಬಾವನಾ ತಂದೆ ಈರಣ್ಣಾ, ಈರಮ್ಮಾ ಗಂಡ ಚಂದ್ರಶೇಖರ, ನೇತ್ರಾವತಿ ಹಾಗೂ ಅವರ ಸಣ್ಣ ಮಗು ರವರೆಲ್ಲರೂ ಶಹಾಪೂರ ತಾಲ್ಲೂಕಿನ ದೋರನಹಳ್ಳಿ ಗ್ರಾಮದಿಂದ ಫರಹತಾಬಾದ ಗ್ರಾಮಕ್ಕೆ ಬರುವಾಗ ಕೃಜರ ಚಾಲಕ ಮಹ್ಮದ ರಫಿ ಇತನು ಕಟ್ಟಿ ಸಂಗಾವಿ ಬ್ರಿಡ್ಜ್ ದಾಟಿದ ನಂತರ ತನ್ನ ಜೀಪನ್ನು ಅತಿವೇಗವಾಗಿ ಮತ್ತು ಅಲಕ್ಷತನದಿಂದ ರೋಡ ಎಡ ಬಲ ಕಟೆ ಹೊಡೆಯುತ್ತಾ ರಾಷ್ಟಿçÃಯ ಹೆದ್ದಾರಿ-೫೦ ರ ಮೇಲೆ ಚಲಾಯಿಸಿಕೊಂಡು ಬಂದು ಸಿರನೂರ ಗ್ರಾಮದ ಬಸ್ಸ ನಿಲ್ದಾಣದ ಈಚೆಗೆ ಕೃಜರ ಜೀಪ ಒಮ್ಮಲೆ ಎಡಗಡೆ ತಿರುಗಿಸಿ ರೋಡ ಕೆಳಗೆ ಚಲಾಯಿಸಿ ಜೀಪನ್ನು ಪಲ್ಟಿ ಮಾಡಿ ಅಪಘಾತ ಮಾಡಿದ್ದರಿಂದ ಆದೆಮ್ಮಾ, ಸುಮಿತ್ರಾಬಾಯಿ, ಅನೀತಾ, ಬಾವನಾ ಹಾಗೂ ಈರಮ್ಮಾ ರವರಿಗೆ ಗಾಯಗೊಳಿಸಿ ಚಾಲಕ ಮಹ್ಮದ ರಫಿ ಇತನು ಗಾಯ ಹೊಂದಿ ಉಪವಾರ ಕುರಿತು ಎಲ್ಲರೂ ಕಲಬುರಗಿ ಖಾಸಗಿ ಧನ್ವಂತರಿ ಆಸ್ಪತ್ರೆಯಲ್ಲಿ ಸೇರಿಕೆಯಾಗಿದ್ದು ಸುಮಿತ್ರಾಬಾಯಿ ಇವರಿಗೆ ಹೆಚ್ಚಿನ ಉಪಚಾರ ಕುರಿತು ಧನ್ವಂತರಿ ಆಸ್ಪತ್ರೆಯಿಂದ ಕಲಬುರಗಿ ವಾತ್ಸಲ್ಯ ಆಸ್ಪತ್ರೆಗೆ ಹಾಗೂ ಅಲ್ಲಿಂದ ಶಹಾಪೂರಿನ ಖಾಸಗಿ ಸ್ಪಂದನಾ ಆಸ್ಪತ್ರೆಗೆ ಉಪಚಾರ ಕುರಿತು ಸೇರಿಕೆ ಮಾಡಿದ್ದು ಗಾಯಾಳು ಸುಮಿತ್ರಾ ಇವರ ಗಾಯದ ಉಪಚಾರ ಫಲಕಾರಿಯಾಗದೆ ಇಂದು ದಿನಾಂಕ ೨೨-೦೭-೨೦೨೧ ರಂದು ೧೨-೧೫ ಎ.ಎಮಕ್ಕೆ ಮೃತಪಟ್ಟಿದ್ದು ಇರುತ್ತದೆ.

ಇತ್ತೀಚಿನ ನವೀಕರಣ​ : 26-07-2021 02:02 PM ಅನುಮೋದಕರು: ADMIN


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕಲಬುರಗಿ ನಗರ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080