ಅಭಿಪ್ರಾಯ / ಸಲಹೆಗಳು

     ಮಹಿಳಾ ಪೊಲೀಸ ಠಾಣೆ :- ಇಂದು ದಿನಾಂಕ ೨೧.೦೭.೨೦೨೧ ರಂದು ಮಧ್ಯಾಹ್ನ ೧ ಗಂಟೆಗೆ ಫರ‍್ಯಾದಿ ಶ್ರೀಮತಿ ಸುರೇಖಾ ಗಂಡ ಮಲ್ಲಿಕಾಜುನ್ ತಳವಾರ ವಯಾ|| ೨೯ ವರ್ಷ ಜಾ|| ಕಬ್ಬಲಿಗ ಉ|| ಗೃಹಿಣಿ ಸಾ|| ಕಲ್ಲಹಂಗರಗಾ ತಾ|| ಜೇವರ್ಗಿ ಜಿ|| ಕಲಬುರಗಿ ಇವರು ಠಾಣೆಗೆ ಹಾಜರಾಗಿ ದೂರು ಸಲ್ಲಿಸಿದ್ದು, ಸದರಿ ದೂರಿನ ಸಾರಾಂಶ ಏನೆಂದರೆ, ಮಲ್ಲಿಕಾರ್ಜುನ್ ತಳವಾರ ಇವರೊಂದಿಗೆ ನನ್ನ ಮದುವೆ ದಿನಾಂಕ ೦೬.೦೫.೨೦೧೮ ರಂದು ಆಗಿದ್ದು, ಮದುವೆ ಕಾಲಕ್ಕೆ ೬.೫ ತೊಲೆ ಬಂಗಾರ ೫೦ಸಾವಿರ ರೂಪಾಯಿ ಹಾಗೂ ಗೃಹ ಬಳಕೆ ಸಾಮಾನು ಬಟ್ಟೆಬರೆ ಅಂತಾ ಒಟ್ಟು ೫ ಲಕ್ಷ ರೂಪಾಯಿ ಖರ್ಚು ಮಾಡಿ ನನ್ನ ತಂದೆತಾಯಿ ನನ್ನ ಮದುವೆ ಮಾಡಿಕೊಟ್ಟಿರುತ್ತಾರೆ. ಮದುವೆಯಾದ ಕೆಲವು ದಿವಸಗಳವರೆಗೆ ನನಗೆ ಸರಿಯಾಗಿ ಇಟ್ಟುಕೊಂಡು,  ನಂತರ ಅಂದರೆ ದಿನಾಂಕ ೧೦.೦೮.೨೦೧೮ ರಿಂದ ನನ್ನ ಗಂಡ, ಅತ್ತೆ ಮರೆಮ್ಮಾ, ಮಾವ ಲಕ್ಕಪ್ಪಾ, ನಾದಿನಿಯರಾದ ಸುಜಾತಾ ಮತ್ತು ಶಿವಲೀಲಾ ಮಹಾನಂದಾ ಹಾಗು ಶಾಂತಾಬಾಯಿ ಹಾಗು ಮೈದುನ ಸಚಿನ್ ಇವರೆಲ್ಲಾ ಸೇರಿ ನನಗೆ ದೈಹಿಕ ಮತ್ತು ಮಾನಸಿಕ ಕಿರುಕುಳ ನಿಡುತ್ತಾ ಬಂದಿದ್ದು, ಅವರೆಲ್ಲಾ ನನಗೆ ನಿನ್ನ ತವರು ಮನೆಯಿಂದ ೨ ಲಕ್ಷ ರೂಪಾಯಿ ಹಣ ತೆಗೆದುಕೊಂಡು ಬಾ. ಆಗ ನಾವು ನಿನಗೆ ಸರಿಯಾಗಿ ನೋಡಿಕೊಳ್ಳುತ್ತೇವೆ. ಇಲ್ಲದೆ ಇದ್ದರೆ ನೀನು ನಮ್ಮ ಮನೆ ಬಿಟ್ಟು ಹೋಗು, ನಾವು ಮಲ್ಲಿಕಾರ್ಜುನ್ ಇತನಿಗೆ ಬೇರೆ ಮದುವೆ ಮಾಡುತ್ತೇವೆ ಅಂತಾ ನನಗೆ ಯಾವಾಗಲೂ ಕಿರುಕುಳ ನೀಡುತ್ತಾ ಬಂದಿರುತ್ತಾರೆ. ಆದರೆ ನನ್ನ ಗಂಡ ಅವರೆಲ್ಲರಿಗೆ ಬಿಟ್ಟು ನನಗೆ ನೀನು ನಮ್ಮ ಮನೆಯವರೊಂದಿಗೆ ಯಾವಾಗಲೂ ತಕರಾರು ಮಾಡುತ್ತೀ, ರಂಡಿ ಬೋಸಡಿ, ನೀನು ನಿನ್ನ ತವರು ಮನೆಗೆ ಹೋಗು ಅಂತಾ ನನಗೆ ದಿನಾಂಕ ೧೮.೬.೨೦೧೯ ರಂದು ನನಗೆ ಮನೆಯಿಂದ ಹೊರಗೆ ಹಾಕಿರುತ್ತಾರೆ. ಅಂದಿನಿಂದ ನಾನು  ಕಲಬುರಗಿಯ ಕುಸನೂರನಲ್ಲಿ ಇರುವ ನನ್ನ ತವರು ಮನೆಗೆ ಬಂದು ಉಳಿದುಕೊಂಡಿರುತ್ತೇನೆ. ದಿನಾಂಕ ೧೬.೦೧.೨೦೨೧ ರಂದು ಮಧ್ಯಾಹ್ನ ೨ ಗಂಟೆ ಸುಮಾರಿಗೆ ನನ್ನ ಗಂಡ ಮಲ್ಲಿಕಾರ್ಜುನ್ ತಳವಾರ ಇತನು ಇಲ್ಲಿಗೆ ಬಂದು ನನ್ನ ಜೊತೆಯಲ್ಲಿ ಜಗಳ ತೆಗೆದು, ನೀನು ನಿನ್ನ ತವರು ಮನೆಯಿಂದ ಹಣ ಮತ್ತು ಬಂಗಾರ ತರದೇ ಇಲ್ಲಿಯೇ ಉಳಿದುಕೊಂಡಿದ್ದೀ, ರಂಡಿ ಬೋಸಡಿ, ಅಂತಾ ಬೈದು ಕೈಯಿಂದ ಹೊಡೆಬಡೆ ಮಾಡಿ ಹೋಗಿರುತ್ತಾನೆ. ಕಾರಣ ನನ್ನ ಗಂಡ ಮತ್ತು ಅವರ ಕುಟುಂಬ ಸದಸ್ಯರ ಮೇಲೆ ಕಾನೂನು ರೀತಿಯ ಕ್ರಮ ಕೈಕೊಳ್ಳಬೇಕು ಅಂತಾ ಸಲ್ಲಿಸಿದ ದೂರಿನ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

ಇತ್ತೀಚಿನ ನವೀಕರಣ​ : 22-07-2021 11:27 AM ಅನುಮೋದಕರು: ADMIN


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕಲಬುರಗಿ ನಗರ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2021, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080