Feedback / Suggestions

ಮಹಿಳಾ ಪೊಲೀಸ್ ಠಾಣೆ :-ದಿನಾಂಕ ೧೯.೦೭.೨೦೨೧ ರಂದು ಸಾಯಂಕಾಲ ೭ ಗಂಟೆಗೆ ಫರ‍್ಯಾದಿ ಶ್ರೀಮತಿ ವಿಜಯಲಕ್ಷ್ಮಿ ಗಂಡ ರಾಜಶೇಖರ ಪೊಲೀಸ್ ಪಾಟೀಲ್ ವಯಾ|| ೨೮ ವರ್ಷ ಜಾ|| ಲಿಂಗಾಯತ ಉ|| ಕೂಲಿ ಕೆಲಸ ಸಾ|| ಚಿಂಚೋಳಿ ಲೇಔಟ್ ಆಳಂದ ರೋಡ್ ಕಲಬುರಗಿ ಇವರು ಠಾಣೆಗೆ ಹಾಜರಾಗಿ ಲಿಖಿತ ದೂರು ಸಲ್ಲಿಸಿದ್ದು ದೂರಿನ ಸಂಕ್ಷಿಪ್ತ ಸಾರಾಂಶ ಏನೆಂದರೆ ನನಗೆ ೧) ವಿರೇಶ ವಯಾ|| ೫ ವರ್ಷ ೨) ಸಾಯಿ ವಯಾ|| ೪ ವರ್ಷ ಅಂತಾ ಇಬ್ಬರೂ ಗಂಡು ಮಕ್ಕಳು ಇರುತ್ತಾರೆ. ನನ್ನ ಗಂಡ ರಾಜಶೇಖರ ಪೊಲೀಸ್ ಪಾಟೀಲ್ ಈತನು ಹೋಟೇಲ್ ಮತ್ತು ಮೋಬೈಲ್ ಅಂಗಡಿ ಇಟ್ಟಕೊಂಡು ಕೆಲಸ ಮಾಡುತ್ತಿದ್ದನು ಅವನ ವ್ಯಾಪಾರದಲ್ಲಿ ನಷ್ಟ ಆಗಿದ್ದರಿಂದ ಅವನು ಬಹಳಷ್ಟು ಹಣ ಬಾಕಿ ಮಾಡಿಕೊಂಡು ಕಳೆದ ೮ ತಿಂಗಳಿನಿಂದ ಮನೆ ಬಿಟ್ಟು ಹೋಗಿರುತ್ತಾನೆ. ಅವನು ಇಲ್ಲಿಯವರೆಗೆ ಮನೆಗೆ ಬಂದಿರುವುದಿಲ್ಲಾ. ನಾನು ಹುಡುಕಾಡಿದ್ದರು ಅವನು ಪತ್ತೆಯಾಗಿರುವುದಿಲ್ಲಾ. ನಾವು ಬಾಡಿಗೆಯಿಂದ ಇರುತ್ತಿದ್ದ ಚಿಂಚೋಳಿ ಲೇಔಟ ಕಲಬುರಗಿಯಲ್ಲಿ ಇರುವ ವಿಜಯಲಕ್ಷ್ಮಿ ಅಪಾರ್ಟಮೆಂಟ್‌ನಲ್ಲಿ ವಾಸವಿರುವಾಗ ಶರಣಯ್ಯಾ ಹಿರೇಮಠ ತಂದೆ ಮಹಾಂತೆಯ್ಯಾ ಹಿರೇಮಠ ಈತನು ಕೂಡಾ ಮನೆ ಬಾಡಿಗೆ ಪಡೆದುಕೊಂಡು ಇರುತ್ತಿದ್ದನು ದಿನಾಂಕ ೧೦.೦೩.೨೦೨೧ ರಂದು ರಾತ್ರಿ ೮ ಗಂಟೆ ಸುಮಾರಿಗೆ ಶರಣಯ್ಯಾ ಹಿರೇಮಠ ಈತನು ನಮ್ಮ ಮನೆಯ ಒಳಗೆ ಬಂದು ನಿನ್ನ ಮೇಲೆ ನನ್ನ ಮನಸಾಗಿದೆ ನಾನು ನಿನ್ನ ಜೊತೆಯಲ್ಲಿ ಮಲಗುತ್ತೇನೆ ಅಂತಾ ಹೇಳಿದನು. ಆಗ ನಾನು ಹೀಗೆ ಏಕೆ ಹೇಳುತ್ತಿ ನನ್ನ ಗಂಡ ಮನೆ ಬಿಟ್ಟು ಹೋಗಿದ್ದಕ್ಕೆ ನಾನು ಬಹಳ ಕಷ್ಟದಲ್ಲಿ ಇದ್ದೇನೆ ನೀನು ನನಗೆ ಏನಾದರೂ ಮಾಡಿದರೆ ನಾನು ನಮ್ಮ ಸಂಬಂಧಿಕರಿಗೆ ಹೇಳೂತ್ತೇನೆ ಅಂದಾಗ ಆಗ ಅವನು ನನ್ನ ಮೈಮೇಲೆ ಒಮ್ಮೇಲೆ ಬಿದ್ದು ಜಬರಿ ಸಂಭೋಗ ಮಾಡಲು ಪ್ರಯತ್ನಿಸಿದಾಗ ನಾನು ಬೇಡ ಅಂತಾ ಚೀರಾಡದಾಗ ನೀನು ಚೀರಾಡಿದರೆ ನಿನಗೆ ಮತ್ತು ನಿನ್ನ ಮಕ್ಕಳಿಗೆ ಕೊಲೆ ಮಾಡುತ್ತೇನೆ ಅಂತಾ ಜಬರಿ ಸಂಭೋಗ ಮಾಡಿ ರಾತ್ರಿ ಮನೆಯಲ್ಲಿಯೇ ಮಲಗಿ ಮತ್ತೆ ಜಬರಿ ಸಂಭೋಗ ಮಾಡಿದ್ದು ಈ ವಿಷಯ ನೀನು ಯಾರಿಗಾದರೂ ಹೇಳಿದರೆ ನಿನಗೆ ಮತ್ತು ನಿಮ್ಮ ಮಕ್ಕಳಿಗೆ ಜೀವ ಸಹಿತ ಬಿಡುವುದಿಲ್ಲಾ ಅಂತಾ ಬೆದರಿಕೆ ಹಾಕಿರುತ್ತಾನೆ ಆದ್ದರಿಂದ ನಾನು ಭಯ ಬಿದ್ದು ಈ ವಿಷಯದ ಬಗ್ಗೆ ಯಾರಿಗೂ ತಿಳಿಸಿರುವುದಿಲ್ಲಾ. ದಿನಾಂಕ ೧೧.೦೭.೨೦೨೧ ರಂದು ಬೆಳೀಗ್ಗೆ ೭ ಗಂಟೆ ಸುಮಾರಿಗೆ ಶರಣಯ್ಯಾ ಹಿರೇಮಠ ಈತನು ನನಗೆ ಜಬರದಸ್ತಿಯಿಂದ ಸದರಿ ಆಪಾರ್ಟಮೆಂಟ್ ಹತ್ತಿರ ಇರುವ ಅವನ ಸ್ವಂತ ರೂಮಿನಲ್ಲಿ ಕರೆಸುಕೊಂಡು ಹೋಗಿ ನಿನ್ನ ಜೊತೆಗೆ ಸ್ವಲ್ಪ  ದಿವಸಗಳ ನಂತರ ನಾನು ಮದುವೆ ಮಾಡಿಕೊಳ್ಳುತ್ತೇನೆ ಅಂತಾ ಹೇಳೀದಾಗ ನನಗೆ ನನ್ನ ಗಂಡ ಇದ್ದಾನೆ ನನ್ನ ಮಕ್ಕಳು ಇದ್ದಾರೆ ನಾನು ನಿನ್ನ ಜೊತೆಯಲ್ಲಿ ಹೇಗೆ ಮದುವೆ ಮಾಡಿಕೊಳ್ಳಬೇಕು ಅಂತಾ ಹೇಳಿದಾಗ ಅವನು ನನಗೆ ಕೆಳಗೆ ಹಾಕಿ ಜಬರಿ ಸಂಭೋಗ ಮಾಡಿದ್ದಾನೆ. ಅಂತಾ ಸಲ್ಲಿಸಿದ ದೂರಿನ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

Last Updated: 20-07-2021 01:56 PM Updated By: ADMIN


Disclaimer :

Please note that this page also provides links to the websites / web pages of Govt. Ministries/Departments/Organisations.The content of these websites are owned by the respective organisations and they may be contacted for any further information or suggestion

Website Policies

  • Copyright Policy
  • Hyperlinking Policy
  • Security Policy
  • Terms & Conditions
  • Privacy Policy
  • Help
  • Screen Reader Access
  • Guidelines

Visitors

  • Last Updated​ :
  • Visitors Counter :
  • Version :
CONTENT OWNED AND MAINTAINED BY : Kalaburagi City Police
Designed, Developed and Hosted by: Center for e-Governance - Web Portal, Government of Karnataka © 2022, All Rights Reserved.

Best viewed in Chrome v-87.0.4280.141, Microsoft Edge v-87.0.664.75, Firefox -v-83.0 Browsers. Resolution : 1280x800 to 1920x1080