ಅಭಿಪ್ರಾಯ / ಸಲಹೆಗಳು

 

ಫರಹತಾಬಾದ ಪೊಲೀಸ ಠಾಣೆ:-ಇಂದು ದಿನಾಂಕ:೧೮-೦೭-೨೦೨೧ ರಂದು ಸಾಯಂಕಾಲ ೪ ಗಂಟೆಯ ಸುಮಾರಿಗೆ ನಾನು ಪೊಲೀಸ ಠಾಣೆಯಲ್ಲಿದ್ದಾಗ ಭಾತ್ಮಿ ಬಂದಿದ್ದೇನೆಂದರೆ, ನಮ್ಮ ಠಾಣೆಯ ವ್ಯಾಪ್ತಿಯ ಹೊನ್ನಕಿರಣಗಿ ಸೀಮಾಂತರದ ಮರಗಮ್ಮ ಗುಡಿಯ ಹತ್ತಿರ ಸರ‍್ವಜನಿಕ ಸ್ಥಳದ ಖುಲ್ಲಾ ಜಾಗೆಯಲ್ಲಿ ಕೆಲವು ಜನರು ಇಸ್ಪೀಟ ಜೂಜಾಟ ಆಡುತ್ತಿದ್ದಾರೆ ಅಂತ ಖಚಿತ ಬಾತ್ಮಿ ಬಂದ ಮೇರೆಗೆ ಮಾನ್ಯ ನ್ಯಾಯಾಲಯದ ಅನುಮತಿ ಪಡೆದುಕೊಂಡು ನಮ್ಮ ಠಾಣಾ ಸಿಬ್ಬಂದಿ ಜನರಾದ ೧)ರಘುವೀರ ಹೆಚ್.ಸಿ:೧೬೧ ೨)ರೇವಣಸಿದ್ದ ಸಿಹೆಚ್.ಸಿ:೧೫೭ ೩)ಸಂತೋಷ ಪಿಸಿ:೯೯೦ ೪)ಪಾಂಡು ಪಿಸಿ:೧೦೭೧ ಇವರಿಗೆ ಜೂಜಾಟದ ಬಗ್ಗೆ ಮಾಹಿತಿ ತಿಳಿಸಿ ಮಾನ್ಯ ಎ.ಸಿ.ಪಿ(ಸಿ) ಉಪ-ವಿಭಾಗ ಕಲಬುರಗಿ ರವರಿಗೆ ಮಾಹಿತಿ ತಿಳಿಸಿ ಅವರ ಮರ‍್ಗರ‍್ಶನದಲ್ಲಿ ಠಾಣೆಯಿಂದ ೪.೧೫ ಗಂಟೆಗೆ ಸಿಬ್ಬಂದಿ ಜನರೊಂದಿಗೆ ಸರಕಾರಿ ಜೀಪ ನಂ:ಕೆಎ-೩೨/ಜಿ-೧೧೫೧ ನೇದ್ದರಲ್ಲಿ ಕರೆದುಕದೊಂಡು ಹೊರಟಿರುತ್ತೇನೆ. ಭಾತ್ಮೀ ಸ್ಥಳಕ್ಕೆ ಹೋಗುವಾಗ ದಾರಿ ಹೊಕ ಇಬ್ಬರು ಪಂಚರನ್ನು ಬರಮಾಡಿಕೊಂಡು ಅವರಿಗೂ ಕೂಡಾ ಮಾಹಿತಿ ತಿಳಿಸಿ ನಮ್ಮ ಜೀಪನಲ್ಲಿ ಕರೆದುಕೊಂಡು ಹೊರಟು ಭಾತ್ಮಿ ಸ್ಥಳದ ಹತ್ತಿರ ಸಾಯಂಕಾಲ ೪:೩೦ ಗಂಟೆಗೆ ಹೋಗಿ ಗಿಡಗಳ ಮರೆಯಲ್ಲಿ ನಿಂತು ನೋಡಲು ಖಚಿತ ಪಡಿಸಿಕೊಂಡು ಸಾಯಂಕಾಲ ೪:೩೫ ಗಂಟೆಗೆ ಏಕಕಾಲಕ್ಕೆ ಪಂಚರ ಸಮಕ್ಷಮದಲ್ಲಿ ದಾಳಿ ಮಾಡಲಾಗಿ ಜೂಜಾಟದಲ್ಲಿ ತೊಡಗಿದ ಜನರಿಗೆ ಹಿಡಿಯಲು ಹೋದಾಗ ಅವರಲ್ಲಿ ಒಬ್ಬ ವ್ಯಕ್ತಿಯು ಸಿಕ್ಕಿರುತ್ತಾನೆ ೬ ಜನರು ಓಡಿ ಹೋಗಿರುತ್ತಾರೆ. ಆ ಸಿಕ್ಕ ವ್ಯಕ್ತಿಯ ಅಂಗಶೋಧ ಮಾಡಿ ಹೆಸರು ವಿಳಾಸ ಕೇಳಲು ತನ್ನ ಹೆಸರು ಬಸವರಾಜ ತಂದೆ ಸಿದ್ದರಾಮ ಸಮಗಾರ  ವಯ:೩೨ ರ‍್ಷ ಉ||ಕೂಲಿ ಕೆಲಸ ಜಾ||ಸಮಗಾರ(ಎಸ್.ಸಿ) ಸಾ||ಹೊನ್ನಕಿರಣಗಿ ಅಂತ ತಿಳಿಸಿ, ಓಡಿ ಹೋದ ಆರು ಜನರ ಹೆಸರು ೧) ಸದ್ದಾಮ ಜಮಾದಾರ, ೨)ಮಕ್ಬುಲ ಜಮಾದಾರ ೩)ದೇವಪ್ಪ ಜೈನ ೪)ಯೋಗೇಶ ಪೂಜಾರಿ ೫)ಸೈಯಬಣ್ಣ ಮಾಳಬಾ ಸಾ||ಎಲ್ಲರು ಹೊನ್ನಕಿರಣಗಿ ಅಂತ ತಿಳಿಸಿರುತ್ತಾನೆ. ಈತನ ಹತ್ತಿರ ೧೬೩೦/- ರೂ ಸಿಕ್ಕಿದ್ದು, ಸ್ಥಳದಲ್ಲಿ ೫೨-ಇಸ್ಪೇಟ ಎಲೆಗಳು ಹಾಗೂ ನಗದು ಹಣ ೧೦೫೦/- ಸಿಕ್ಕಿರುತ್ತವೆ. ಹೀಗೆ ಒಟ್ಟು ನಗದು ಹಣ ೨೬೮೦/-ಸಿಕ್ಕಿದ್ದು ಇವುಗಳನ್ನು ಪಂಚರ ಸಮಕ್ಷಮದಲ್ಲಿ ೪;೪೫ ಪಿಮ್ ದಿಂದ ೫:೪೫ ಪಿಎಮ್ ಗಂಟೆಯ ವರೆಗೆ ಗುನ್ನೆ ಸ್ಥಳದಲ್ಲಿ ಕುಳಿತು ಜಪ್ತಿ ಪಂಚನಾಮೆ ಬರೆದು ಮುಗಿಸಲಾಯಿತು. ನಂತರ ಮುದ್ದೆ ಮಾಲು ಮತ್ತು ಆರೋಪಿತರೊಂದಿಗೆ ೬:೩೦ ಪಿಎಮ್ ಗಂಟೆಗೆ ಠಾಣೆಗೆ ಬಂದಿದ್ದು, ಸದರಿ ಆರೋಪಿತರ ವಿರುದ್ದ ಕಾನೂನು ಕ್ರಮ ಜರೂಗಿಸಲು ಕೋರಲಾಗಿದೆ ಅಂತಾ ದೂರಿನ  ಸಾರಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

 

ಇತ್ತೀಚಿನ ನವೀಕರಣ​ : 19-07-2021 11:51 AM ಅನುಮೋದಕರು: ADMIN


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕಲಬುರಗಿ ನಗರ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080