ಅಭಿಪ್ರಾಯ / ಸಲಹೆಗಳು

ಮಹಿಳಾ ಪೊಲೀಸ ಠಾಣೆ : ದಿನಾಂಕ 17/07/2021 ರಂದು ಸಾಯಂಕಾಲ 07:00 ಗಂಟೆಗೆ ಫಿರ್ಯಾದಿ ಕುಮಾರಿ ಅಂಬಿಕಾ ತಂದೆ ಶರಣಪ್ಪ ಕಣಸೂರ ವಯ:18 ವರ್ಷ ಜಾ:ಪ.ಜಾತಿ ಸಾ: ವಿದ್ಯಾ ನಗರ ಕಲಬುರಗಿ ಇವರು ಠಾಣೆಗೆ ಹಾಜರಾಗಿ ದೂರು ಸಲ್ಲಿಸಿದ್ದು ಸದರಿ ದೂರಿನ ಸಾರಾಂಶವೆನೆಂದರೆ ತಾನು ಮತ್ತು ಸುಮಂತ್ ಇತನು ಒಂದು ವರ್ಷ ದಿಂದ ಪರಿಚಯದವರಾಗಿದ್ದು ದಿನಾಂಕ 18/01/2020 ರಂದು ಸುಮಂತ ಇತನು ತನಗೆ ಜೊತೆಯಲ್ಲಿ ಕರೆದುಕೊಂಡು ಬೆಂಗಳೂರಿಗೆ ಹೋಗಿ ತನ್ನೊಂದಿಗೆ ಸಂಭೋಗ ಮಾಡಿದ್ದು ತಾನು 7 ತಿಂಗಳ ಗಭರ್ಿಣಿ ಯಾದ ಮೇಲೆ ದಿನಾಂಕ 13/06/2021 ರಂದು ಬೆಳಿಗ್ಗೆ 10:30 ಗಂಟೆಗೆ ಏನೂ ಹೇಳದೆ ಕೇಳದೆ ಓಡಿ ಹೋಗಿ ಮೋಸ ಮಾಡಿದ್ದು ಇತನಿಗೆ ಹುಡುಕಿ ತಂದು ತನ್ನೊಂದಿಗೆ ಸಂಸಾರ ಮಾಡುವಂತೆ ತಿಳುವಳಿಕೆ ನೀಡುವಂತೆ ಕೊಟ್ಟ ದೂರಿನ ಮೇರೆಗೆ ಗುನ್ನೆ ದಾಖಲು ಮಾಡಿಕೊಂಡು ಬಗ್ಗೆ ವರದಿ.

ಫರಹತಾಬಾದ ಪೊಲೀಸ ಠಾಣೆ : ದಿನಾಂಕ:17.07.2021 ರಂದು ಬೆಳಗ್ಗೆ 9.15 ಗಂಟೆಗೆ ಸ:ತ:ಫಿಯರ್ಾಧಿ ಶ್ರೀ ನವಾಬ್ ಪಟೇಲ ಸಿಹೆಚ್ ಸಿ 11 ಫರಹತಾಬಾದ ಪೊಲೀಸ ಠಾಣೆ ರವರು ಠಾಣೆಗೆ ಹಾಜರಾಗಿ ಮುಂದಿನ ಕ್ರಮಕ್ಕಾಗಿ ವರದಿ ಸಲ್ಲಿಸಿದ್ದರ ಸಾರಾಂಶವೇನೆಂದರೆ, ಮಾನ್ಯ ಜಿಲ್ಲಾಧಿಕಾರಿಗಳು ಕಲಬುರಗಿರವರು ದಿನಾಂಕ:21.07.2021 ರಂದು ಬಕ್ರೀದ ಹಬ್ಬದ ಆಚರಣೆಯ ನಿಮಿತ್ಯವಾಗಿ ದಿನಾಂಕ:13.07.2021 ರಿಂದ ದಿನಾಂಕ:21.07.2021 ರವರೆಗೆ ಜಾನುವಾರಗಳ ಅಧಿಕೃತ ಮಾರಾಟ, ಸಾಗಾಣಿಕೆ ಮಾಡುವುದು ಮತ್ತು ಜಾನುವಾರಗಳ ಸಂತೆಗಳನ್ನು ನಿಷೇಧಿಸಿದರಿಂದ ಕಲಬುರಗಿ ನಗರದದ್ಯಾಂತ ಚೆಕ್ ಪೊಸ್ಟಗಳನ್ನು ಹಾಕಿದ್ದು ಇರುತ್ತದೆ. ಅದರಂತೆ ನಮ್ಮ ಪೊಲೀಸ ಠಾಣೆಯ ವ್ಯಾಪ್ತಿಯ ಕಲಬುರಗಿ ಜೇವಗರ್ಿ ರಾಷ್ಟ್ರೀಯ ಹೆದ್ದಾರಿ ಸಿರನೂರ ಹತ್ತಿರ ಚೆಕ್ ಪೋಸ್ಟ ಮಾಡಿದ್ದು ಇರುತ್ತದೆ. ಇಂದು ದಿನಾಂಕ:17.07.2021 ರಂದು ಬೆಳಗ್ಗೆ 8.30 ಗಂಟೆಯ ಸುಮಾರಿಗೆ ನಾನು ಮತ್ತು ನನ್ನ ಜೊತೆಗೆ ಸುನೀಲ ಎಪಿಸಿ 2216 ಸಿಎಆರ್ ಕಲಬುರಗಿ ನಾವಿಬ್ಬರೂ ತಮ್ಮ ಆದೇಶದಂತೆ ಕಲಬುರಗಿ ಜೇವಗರ್ಿ ರಾಷ್ಟ್ರೀಯ ಹೆದ್ದಾರಿ ಸಿರನೂರ ಚೆಕ್ ಪೋಸ್ಟ ಹತ್ತಿರ ಕರ್ತವ್ಯದಲ್ಲಿದ್ದಾಗ ಜೇವಗರ್ಿ ಕಡೆಯಿಂದ ಒಂದು ಟಂಟಂ ದಲ್ಲಿ ಒಂದು ಹೋರಿ ತುಂಬಿಕೊಂಡು ಬರುತ್ತಿರುವುದನ್ನು ನೋಡಿ ಸಂಶಯ ಬಂದು ಅದನ್ನು ನಿಲ್ಲಿಸಿದ್ದೇನು. ಸದರಿ ಟಂಟಂ ನಂಬರ ನೋಡಲಾಗಿ ಕೆಎ-32/ಡಿ-3433 ಅಂತಾ ಇದ್ದು ಅದರಲ್ಲಿ ಒಂದು ಕಪ್ಪು ಬಣ್ಣದ ಹೋರಿ ಇದ್ದು, ಅದಕ್ಕೆ ಹಗ್ಗದಿಂದ ಕುತ್ತಿಗೆಗೆ ಕಟ್ಟಿ ಚಿತ್ರ ಹಿಂಸೆ ಕೊಟ್ಟು ವಾಹನದಲ್ಲಿ ನಿಲ್ಲಿಸಿ ಸಾಗಾಣೆ ಮಾಡುತ್ತಿದ್ದು ಅದರ ಚಾಲಕನಿಗೆ ವಿಚಾರಿಸಲು ಅವನು ತನ್ನ ಹೆಸರು ಮುಜೀಬ್ ಪಟೇಲ ತಂದೆ ಖಾಸಿಂ ಪಟೇಲ ಕೂಡಿ ವಯ: 27 ವರ್ಷ ಉ: ಟಂಟಂ ಚಾಲಕ ಜಾತಿ: ಮುಸ್ಲಿಂ ಸಾ: ಕೊಳ್ಳೂರ ಅಂತಾ ತಿಳಿಸಿದ್ದು , ಸದರಿ ಹೋರಿಯ ದಾಖಲಾತಿಗಳ ಬಗ್ಗೆ ವಿಚಾರಿಸಲು ತಾನ ಜೇವಗರ್ಿ ತಾಲೂಕಿನ ಕೋಬಾಳ ಗ್ರಾಮದಿಂದ ಕೊಳ್ಳೂರ ಗ್ರಾಮಕ್ಕೆ ಬಕ್ರೀದ ಹಬ್ಬದ ಸಂಬಂಧ ಸದರಿ ಹೋರಿಯನ್ನು ತೆಗೆದುಕೊಂಡು ಹೋಗುತ್ತಿದ್ದೆನೆ ಅದರ ಬಗ್ಗೆ ಯಾವುದೇ ದಾಖಲಾತಿಗಳು ಇದ್ದಿರುವುದಿಲ್ಲಾ ಅಂತಾ ತಿಳಿಸಿದನು. ನಂತರ ನಾನು ನಮ್ಮ ಪಿಐ ಸಾಹೇಬರಿಗೆ ಫೊನ್ನ ಮಾಡಿ ವಿಷಯ ತಿಳಿಸಿದಾಗ ಅವರು ಫರಹತಾಬಾದ ಪೊಲೀಸ ಠಾಣೆಗೆ ತೆಗೆದುಕೊಂಡು ಹೋಗುವಂತೆ ತಿಳಿಸಿದರಿಂದ , ನಾನು ಚೆಕ್ ಫೊಸ್ಟದಲ್ಲಿ ಸುನೀಲ ಎಪಿಸಿ 2216 ರವರಿಗೆ ಬಿಟ್ಟು , ನಾನು ಸದರಿ ವಾಹನ ಚಾಲಕನ ಸಹಾಯದಿಂದ ಸದರಿ ವಾಹನವನ್ನು ಫರಹತಾಬಾದ ಪೊಲೀಸ ಠಾಣೆಗೆ ತೆಗೆದುಕೊಂಡು ಬರುತ್ತಿದ್ದೆನು . ಸದರಿ ವಾಹನ ಚಾಲಕನು ಫರಹತಾಬಾದ ಪೊಲೀಸ ಠಾಣೆಗೆ ತಂದು ವಾಹನ ನಿಲ್ಲಿಸುತ್ತಿದ್ದಂತೆ ಅವನು ತನ್ನ ವಾಹನವನ್ನು ಬಿಟ್ಟು ಓಡಿ ಹೋಗಿರುತ್ತಾನೆ. ಅವನನ್ನು ಬೆನ್ನಟ್ಟಿದ್ದರು ಸಹ ಸಿಗ್ಗಲಿಲ್ಲಾ. ಮೇಲ್ನೋಟಕ್ಕೆ ಸದರಿ ವಾಹನ ಚಾಲಕನಾದ ಮುಜೀಬ್ ಪಟೇಲ ತಂದೆ ಖಾಸಿಂ ಪಟೇಲ ಕೂಡಿ ಸಾ:ಕೊಳ್ಳೂರ ಈತನು ಈ ಒಂದು ಹೋರಿಯನ್ನು ಹಗ್ಗದಿಂದ ಕುತ್ತಿಗೆಗೆ ಕಟ್ಟಿ ಚಿತ್ರಹಿಂಸೆ ಕೊಟ್ಟು ಸಾಗಿಸುತ್ತಿರುವದು ಖಚಿತಪಟ್ಟಿದ್ದು ಇರುತ್ತದೆ. ಕಾರಣ ಸಕರ್ಾರದ ಆದೇಶ ಉಲ್ಲಂಘನೆ ಮಾಡಿ , ಯಾವುದೇ ದಾಖಲಾತಿಗಳಿಲ್ಲದೇ ಸದರಿ ಹೋರಿಗೆ ಚಿತ್ರ ಹಿಂಸೆ ಕೊಟ್ಟು ಸಾಗಿಸುತ್ತಿದ್ದ ಮುಜೀಬ್ ಪಟೇಲ ತಂದೆ ಖಾಸಿಂ ಪಟೇಲ ಕೂಡಿ ಹಾಗೂ ಸದರಿ ವಾಹನ ಮಾಲೀಕನ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಲು ವರದಿ ಸಲ್ಲಿಸಲಾಗಿದೆ ಅಂತಾ ಇತ್ಯಾದಿ ಸಾರಾಂಶದ ಮೇಲಿಂದ  ಪ್ರಕರಣ ದಾಖಲಿಸಿಕೊಂಡ ಬಗ್ಗೆ ವರದಿ.

ಅಶೋಕ  ನಗರ ಪೊಲೀಸ್ ಠಾಣೆ : ದಿನಾಂಕ:17.07.2021 ರಂದು 02:00 ಪಿ.ಎಂ.ಕ್ಕೆ  ಠಾಣೆಯಲ್ಲಿದ್ದಾಗ ಖಚಿತವಾದ  ಬಾತ್ಮಿ ಬಂದಿದ್ದೆನೆಂದರೆ, ಠಾಣಾ ವ್ಯಾಪ್ತಿಯ ಹಿರಾಪೂರ ಕ್ರಾಸ್ ಹತ್ತಿರ ಒಬ್ಬ ವ್ಯಕ್ತಿಯು ಸಾರ್ವಜನಿಕರಿಂದ ಹಣ ಪಡೆದು ಅಂಕೆ ಸಂಖ್ಯೆಗಳನ್ನು ಬರೆದ ಚೀಟಿಗಳನ್ನು ನೀಡುತ್ತಾ ಮಟಕಾ ಜೂಜಾಟದಲ್ಲಿ ತೊಡಗಿರುತ್ತಾರೆ ಅಂತ ಮಾಹಿತಿ ಬಂದ ಮೆರೆಗೆ ಸದರಿಯವರ ಮೇಲೆ ದಾಳಿಮಾಡಿ ಪ್ರಕರಣ ದಾಖಲಿಸಿಕೊಳ್ಳಲು ಮಾನ್ಯ ನ್ಯಾಯಾಲಯದ ಪರವಾನಿಗೆ ಪಡೆದುಕೊಂಡು  ಇಬ್ಬರು ಪಂಚರಾದ 1) ಶ್ರೀ ಆನಂದ ತಂದೆ ಮಾಣಿಕ ಪ್ರಭು ಕಾಂಬಳೆ ವಯ: 25 ವರ್ಷ ಉ: ಖಾಸಗಿ ಕೆಲಸ ಸಾ|| ಸಿದ್ದಾರ್ಥ ನಗರ ಕಲಬುರಗಿ ಮತ್ತು 2) ಶ್ರೀ ಪ್ರವೀಣ ತಂದೆ ಮನೋಹರ ದೇವರಮನಿ ವಯ: 27 ವರ್ಷ ಉ: ಕಾರ ಚಾಲಕ ಸಾ|| ಸಿದ್ಧಾರ್ಥ ನಗರ  ಕಲಬುರಗಿ ರವರನ್ನು  ಬರಮಾಡಿಕೊಂಡು ಅವರಿಗೆ ಸದರಿ ವಿಷಯ ತಿಳಿಸಿ ಅವರು ಮತ್ತು ಸಿಬ್ಬಂದಿ ಜನರಾದ 1) ಗುರುಮುರ್ತಿ ಹೆಚ್.ಸಿ 72 ಮತ್ತು 2) ಸಂಜುಕುಮಾರ ಹೆಚ್.ಸಿ-142 ಎಲ್ಲರು ಕೂಡಿಕೊಂಡು  02:45 ಪಿಎಂ.ಕ್ಕೆ ಠಾಣೆಯಿಂದ ಹೊರಟು ಹಿರಾಪೂರ ಕ್ರಾಸ್ ಹತ್ತಿರ  ಹೋಗಿ ಸ್ವಲ್ಪ ದೂರದಲ್ಲಿ ಮರೆಯಾಗಿ ನಿಂತು ನೋಡಲಾಗಿ ಒಬ್ಬ ವ್ಯಕ್ತಿಯು 1/- ರೂಪಾಯಿಗೆ 80/-  ರೂಪಾಯಿ ಕೊಡುವದಾಗಿ ಜನರಿಗೆ ಹೇಳುತ್ತಾ ಅವರನ್ನು ಜೂಜಾಟಕ್ಕೆ ಸೆಳೆದು ಹಣದ ಆಸೆ ತೊರಿಸಿ ಸಾರ್ವಜನಿಕರಿಂದ ಹಣ ಪಡೆದುಕೊಂಡು ಮಟಕಾ ಜೂಜಾಟದ ಅಂಕಿ ಸಂಖ್ಯೆಗಳು ಬರೆದ ಚೀಟಿಗಳು ಕೊಡುತ್ತಾ ಮಟಕಾ ಜೂಜಾಟದಲ್ಲಿ ತೋಡಗಿರುವದನ್ನು ನೋಡಿ ಖಾತ್ರಿ ಪಡಿಸಿಕೊಂಡು ಪಂಚರ ಸಮಕ್ಷಮ ಸಿಬ್ಬಂದಿಯೊಂದಿಗೆ ದಾಳಿ ಮಾಡಲಾಗಿ ಮಟಕಾ ಚೀಟಿ ಬರೆಯಿಸಲು ಬಂದವರು ನಮ್ಮನ್ನು ನೋಡಿ ಓಡಿ ಹೋಗಿದ್ದು ಮಟಕಾ ಬರೆದುಕೊಳ್ಳುತ್ತಿದ್ದ ವ್ಯಕ್ತಿಯನ್ನುಹಿಡಿದು ಕೊಂಡಿದ್ದು ಆಗ ಸಮಯ 03:00 ಪಿ.ಎಂ. ಆಗಿತ್ತು.  ನಂತರ ಅವರ ಹೆಸರು ಮತ್ತು ವಿಳಾಸ ವಿಚಾರಿಸಿ ಅಂಗ ಜಡ್ತಿ ಮಾಡಿದ್ದು, ಅವನು ತನ್ನ ಹೆಸರು ಶರಣಬಸಪ್ಪ ತಂದೆ ವೀರಣ್ಣಾ ಕಲಶೆಟ್ಟಿ ವಯ: 41 ವರ್ಷ ಜಾ: ಲಿಂಗಾಯತ ಉ: ಆಟೋ ಚಾಲಕ ಸಾ|| ಕೈಲಾಸ ನಗರ ಕಲಬುರಗಿ, ಅಂತ ತಿಳಿಸಿದ್ದು ಸದರಿಯವನಿಗೆ ಅಂಗ ಜಪ್ತಿ ಮಾಡಲಾಗಿ ಅವನ ಹತ್ತಿರ 1) ಒಂದು ಬಾಲ ಪೆನ್ ಅ.ಕಿ. 00 2) ಎರಡು ಮಟಕಾ ಚೀಟಿಗಳು ಅ.ಕಿ. 00 ಮತ್ತು 3) ನಗದು ಹಣ 2950/- ಸಿಕ್ಕಿರುತ್ತವೆ. ನಂತರ ಸದರಿಯವನ ಹತ್ತಿರ ಸಿಕ್ಕ ಹಣ ಮತ್ತು ಮಟಕಾ ಚೀಟಿ ಮತ್ತು ಬಾಲ್ ಪೆನಗಳ  ಬಗ್ಗೆ  03:00 ಪಿ.ಎಂ. ದಿಂದ 04:00 ಪಿ.ಎಂ. ವರೆಗೆ ಜಪ್ತಿ ಪಂಚನಾಮೆ ಬರೆಯಿಸಿಕೊಂಡು ಕೇಸಿನ ಪುರಾವೆ ಕುರಿತು ಮುದ್ದೆಮಾಲು ಜಪ್ತಿ ಪಡಿಸಿಕೊಂಡು ಆರೋಪಿತನನ್ನು ವಶಕ್ಕೆ ಪಡೆದುಕೊಂಡು ಮರಳಿ ಠಾಣೆಗೆ 04:30 ಪಿ.ಎಂ.ಕ್ಕೆ ಬಂದು ಆರೋಪಿತನ ವಿರುದ್ಧ ಕಾನೂನು ಕ್ರಮ ಜರುಗಿಸಲು ಆರೋಪಿತನನ್ನು ಹಾಜರುಪಡಿಸಿ ಸರಕಾರದ ಪರವಾಗಿ ಜಪ್ತಿ ಪಂಚನಾಮೆಯೊಂದಿಗೆ ಈ ಫಿರ್ಯಾದಿ ನೇದ್ದರ ಪ್ರಕಾರ ಪ್ರಕರಣ ದಾಖಲಿಸಿಕೊಂಡ ಬಗ್ಗೆ ವರದಿ.

ಇತ್ತೀಚಿನ ನವೀಕರಣ​ : 18-07-2021 12:42 PM ಅನುಮೋದಕರು: ADMIN


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕಲಬುರಗಿ ನಗರ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080