ಅಭಿಪ್ರಾಯ / ಸಲಹೆಗಳು

ಮಹಿಳಾ ಪೊಲೀಸ ಠಾಣೆ:- ಇಂದು ದಿನಾಂಕ ೧೫.೦೭.೨೦೨೧ ರಂದು ಮಧ್ಯಾಹ್ನ ೧ ಗಂಟೆಗೆ ಫರ‍್ಯಾದಿ ಶ್ರೀಮತಿ ಶ್ರೀದೇವಿ ಗಂಡ ಶಿವರಾಜ ನಾಲವಾರ ವಯಾ|| ೨೭ ವರ್ಷ ಸಾ|| ಶಾಂತಿ ನಗರ ಕಲಬುರಗಿ ಇವರು ಠಾಣೆಗೆ ಹಾಜರಾಗಿ ದೂರು ಸಲ್ಲಿಸಿದ್ದು, ಸದರಿ ದೂರಿನ ಸಾರಾಂಶ ಏನೆಂದರೆ, ನಾನು ಶಿವರಾಜ ತಂದೆ ಶ್ರೀಮಂತ ಇವರೊಂದಿಗೆ ಪ್ರೀತಿಸಿ, ನಮ್ಮ ಮನೆಯವರ ಇಚ್ಛೆಯ ವಿರುದ್ಧವಾಗಿ ದಿನಾಂಕ ೦೯.೦೫.೨೦೧೯ ರಂದು ನೊಂದಣಿ ವಿವಾಹ ಮಾಡಿಕೊಂಡಿರುತ್ತೇನೆ. ಮದುವೆಯಾಗಿ ಶಿವರಾಜ ಇವರ ಮನೆಗೆ ಹೋದ ನಂತರ ನನ್ನ ಗಂಡ ಶಿವರಾಜ, ಅತ್ತೆ ವಿದ್ಯಾವತಿ, ಮಾವ ಶ್ರೀಮಂತ, ನಾದಿನಿಯರಾದ ವಿಜಯ ಲಕ್ಷ್ಮಿ ಗಂಡ ಲಿಂಗರಾಜ ತಾರಫೈಲ್, ಪ್ರತೀಕ್ಷಾ, ಮೈದುನ ಅಕ್ಷಯ ಇವರೆಲ್ಲಾ ಸೇರಿ ನನಗೆ ವರದಕ್ಷಿಣೆ ಕಿರುಕುಳ ನೀಡುತ್ತಾ ನಿನ್ನನ್ನು ಮುವೆಯಾಗಿದ್ದರಿಂದ ನಮಗೆ ಯಾವುದೇ ಹಣ ಬಂದಿರುವದಿಲ್ಲಾ, ಬೇರೆ  ಯಾರಿಗಾದರೂ ಮದುವೆಯಾಗಿದ್ದರೆ, ನಮಗೆ ೫ ಲಕ್ಷ ರೂಪಾಯಿ ಹಣ ಮತ್ತು ೫ ತೊಲೆ ಬಂಗಾರ ಬರುತ್ತಿತ್ತು ಅಂತಾ ದಿನಾಲು ಮಾನಸಿಕವಾಗಿ ದೈಹಿಕವಾಗಿ ಪೀಡಿಸುತ್ತಿದ್ದರು. ಈ ವಿಷಯ ನನ್ನ ಗಂಡನಿಗೆ ಹೇಳಿದಾಗ ಅವನು ಕೂಡಾ ನನಗೆ ಹೊಡೆಯುತ್ತಿದ್ದನು. ಏಪ್ರಿಲ್ ೨೦೨೦ ರಲ್ಲಿ ನಾನು ನನ್ನ ತವರು ಮನೆಗೆ ಬಂದಿರುತ್ತೇನೆ. ದಿನಾಂಕ ೧೫.೧೨.೨೦೨೦ ಸಾಯಂಕಾಲ ೭-೩೦ ಗಂಟೆಗೆ ನನ್ನ ಗಂಡ ನನ್ನ ತವರು ಮನೆಗೆ ಅತಿಕ್ರಮವಾಗಿ ಪ್ರವೇಶಿಸಿ ನನಗೆ ಮತ್ತು ನಮ್ಮ ಮನೆಯವರಿಗೆ ಕೊಲೆ ಮಾಡುವ ಬೆದರಿಕೆ ಹಾಕಿರುತ್ತಾನೆ. ಶಿವರಾಜ ಮತ್ತು ಅವನ ಕುಟುಂಬದವರೆಲ್ಲರೂ ಆಗಾಗ ನನ್ನ ಮೇಲೆ ಎಸ್‌ಸಿ/ಎಸ್‌ಟಿ ಕೇಸ್ ಮಾಡುವದಾಗಿ ಬೆದರಿಕೆ ಹಾಕುತ್ತಾರೆ. ಕಾರಣ ಶಿವರಾಜ ಮತ್ತು ಅವನ ಕುಟುಂಬದವರ ಮೇಲೆ ಕಾನೂನು ಕ್ರಮ ಜರುಗಿಸಬೇಕು ಅಂತಾ ಸಲ್ಲಿಸಿದ ದೂರಿನ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

ಮಹಿಳಾ ಪೊಲೀಸ್ ಠಾಣೆ:- ಇಂದು ದಿನಾಂಕ ೧೫.೦೭.೨೦೨೧ ರಂದು ಸಾಯಂಕಾಲ ೫ ಗಂಟೆಗೆ ಫರ‍್ಯಾದಿ ಶ್ರೀಮತಿ ಕಾವ್ಯ ಗಂಡ ಗೋಪಾಲ ರಂಜೇರಿ ವಯಾ|| ೨೪ ವರ್ಷ ಸಾ|| ಮನೆ ನಂ. ೩೯೯, ಜೋಡ ಹನುಮಾನ ಮಂದಿರ ಹತ್ತಿರ ಆಶ್ರಯ ಕಾಲೋನಿ ಶೇಖ ರೋಜಾ ಶಹಬಜಾರ ಕಲಬುರಗಿ ಇವರು ಠಾಣೆಗೆ ಹಾಜರಾಗಿ ಲಿಖಿತ ದೂರು ಸಲ್ಲಿಸಿದ್ದು, ಸದರಿ ದೂರಿನ ಸಾರಾಂಶ ಏನೆಂದರೆ, ದಿನಾಂಕ ೧೨.೦೬.೨೦೧೫ ರಂದು ಗೋಪಾಲ ಇವರೊಂದಿಗೆ ನನ್ನ ಮದುವೆಯಾಗಿದ್ದು, ಮದುವೆಯಾದ ನಂತರ ನಿಮ್ಮ ಅಪ್ಪ ಅಮ್ಮ ಇವರ ಹತ್ತಿರ ೧ ಲಕ್ಷ ರೂಪಾಯಿ ಹಣ ತೆಗೆದುಕೊಂಡು ಬಾ ಅಂತಾ ಅತ್ತೆ ಇಂದುಬಾಯಿ,  ಮಾವ ತುಳಜಪ್ಪಾ,  ಮೈದುನರಾದ ಗೋವಿಂದ, ಅಕ್ಷಯ, ನಾದಿನಿಯರು ಲಕ್ಷ್ಮಿ, ಸುಮಾ ಹಾಗೂ ನನ್ನ ನೆಗೆಣಿಯರಾದ ಜಯಶ್ರಿ, ಲಕ್ಷ್ಮಿ,, ಇವರೆಲ್ಲಾ ಸೇರಿ ನನಗೆ ಕಿರುಕುಳ ಕೊಡುತ್ತಿದ್ದರು. ನನ್ನ ಗಂಡ ಗೀತಾ ಎಂಬುವವಳೊಂದಿಗೆ ಅಕ್ರಮ ಸಂಬಂಧ ಇಟ್ಟುಕೊಂಡಿರುತ್ತಾನೆ. ಅವಳನ್ನು ಮನೆಗೆ ಕರೆದುಕೊಂಡು ಬಂದಿರುತ್ತಾನೆ. ಅವಳು ಬಂದ ನಂತರ ನನ್ನ ಗಂಡ ಅತ್ತೆ, ಮಾವ ಮೈದುನರು ನಾದಿನಿಯರು, ನೆಗೆಣಿಯರು ಹಾಗೂ ಗೀತಾ ಇವರೆಲ್ಲಾ ಸೇರಿ ನನಗೆ ದೈಹಿಕ ಮತ್ತು ಮಾನಸಿಕ ಹಿಂಸೆ ಮಾಡಿರುತ್ತಾರೆ ದಿನಾಂಕ ೨೪.೦೮.೨೦೨೦ ರಂದು ಸಾಯಂಕಾಲ ೪ ಗಂಟೆಗೆ ನನ್ನ ಗಂಡ ಅತ್ತೆ ಮಾವ ಇವರು ನನಗೆ ಹೊಡೆಬಡೆ ಮಾಡಿ ಮನೆಯಿಂದ ಹೊರಗೆ ತಳ್ಳಿದ್ದಾರೆ. ಕಾರಣ ನನ್ನ ಗಂಡ ಹಾಗೂ ಅವನ ಕುಟುಂಬದವರು ಹಾಗೂ ಗೀತಾ ಇವರುಗಳ ಮೇಲೆ ಕಾನೂನು ಕ್ರಮ ಜರುಗಿಸಬೇಕು  ಅಂತಾ ಸಲ್ಲಿಸಿದ ದೂರಿನ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

ಇತ್ತೀಚಿನ ನವೀಕರಣ​ : 17-07-2021 12:29 PM ಅನುಮೋದಕರು: ADMIN


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕಲಬುರಗಿ ನಗರ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2021, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080