ಅಭಿಪ್ರಾಯ / ಸಲಹೆಗಳು

ಅಶೋಕ ನಗರ ಠಾಣೆ :- ಇಂದು ದಿನಾಂಕ: 15.07.2021 ರಂದು 03:00 ಪಿ.ಎಂ. ಕ್ಕೆ ಫರ‍್ಯಾದಿ ಲಕ್ಷ್ಮೀಪುತ್ರ ತಂದೆ ಶ್ರೀಮಂತ ಭಿಂಗೋಳಿ ವಯ: 43 ವರ್ಷ ಜಾ: ಲಿಂಗಾಯತ ಉ: ಸರಕಾರಿ ಶಾಲಾ ಶಿಕ್ಷಕರು, ಸಾ|| ಹಿರೇ ಜೇವರ್ಗಿ ತಾ|| ಅಫಜಲಪೂರ ಹಾ|| ವ|| ಶಾಂತಿ ನಗರ ಕಲಬುರಗಿ ಇವರು ಠಾಣೆಗೆ ಹಾಜರಾಗಿ ಕೊಟ್ಟ ಫರ‍್ಯಾದಿ ಅರ್ಜಿಯ ಸಾರಾಂಶವೆನೆಂದರೆ. ನಾನು ನನ್ನ ದಿನ ನಿತ್ಯದ ಕೆಲಸಕ್ಕೆ ಓಡಾಡುವ ಸಲುವಾಗಿ 2010 ನೇ ಸಾಲಿನಲ್ಲಿ ಒಂದು ಹಿರೊ ಹೊಂಡಾ ಸ್ಪ್ಲೇಂಡರ್ ಪ್ಲಸ್ ಮೋಟಾರ ಸೈಕಲ್ ನಂ ಕೆ.ಎ-32 ಎಕ್ಸ-1146 ಸೀಲ್ವರ ಬಣ್ಣದ್ದು ಚೆಸ್ಸಿ ನಂ MBLHA10EJAHF61104 ಇಂಜಿನ್ ನಂ HA10EAAHFC3644 ಅ. ಕಿ.12,000/- ರೂಪಾಯಿ ನೇದ್ದು ಖರೀದಿಸಿದ್ದು ಇರುತ್ತದೆ.  ಹೀಗಿದ್ದು ದಿನಾಂಕ:.09.07.2021 ರಂದು ರಾತ್ರಿ 08:00 ಗಂಟೆ ಸುಮಾರಿಗೆ ನಾನು ಹೊರಗಡೆಯಿಂದ ನನ್ನ ಕೆಲಸ ಮುಗಿಸಿಕೊಂಡು ಮನೆಗೆ ಬಂದು ಮೇಲೆ ನಮೂದಿಸಿದ ನನ್ನ ದ್ವಿ-ಚಕ್ರ ವಾಹನವನ್ನು ಎಂದಿನಂತೆ ನಮ್ಮ ಮನೆಯ ಮುಂದೆ ನಿಲ್ಲಿಸಿ ಒಳಗಡೆ ಹೋಗ ಊಟ ಮುಗಿಸಿಕೊಂಡು ಮಗಲಗಿದ್ದು ಇರುತ್ತದೆ. ನಂತರ ದಿನಾಂಕ:10.07.2021 ರಂದು ಬೆಳಿಗ್ಗೆ 06:00 ಗಂಟೆಗೆ ಎದ್ದು ನೋಡಲಾಗಿ ನಮ್ಮ ಮನೆಯ ಮುಂದೆ ನಿಲ್ಲಿಸಿದ್ದ ನನ್ನ ದ್ವಿ-ಚಕ್ರ ವಾಹನ ಇದ್ದಿರುವುದಿಲ್ಲ. ನಾನು ಕಲಬುರಗಿ ನಗರದಲ್ಲಿ ಎಲ್ಲಾ ಕಡೆಗಳಲ್ಲಿ ಹುಡುಕಾಡಿದರು ನನ್ನ ವಾಹನ ನನಗೆ ದೊರಕಿರುವುದಿಲ್ಲ. ಇಲ್ಲಿಯ ವರೆಗೆ ನನ್ನ ವಾಹನ ಹುಡುಕಾಡಿ ಈ ವಿಷಯದ ಬಗ್ಗೆ ಮನೆಯಲ್ಲಿ ವಿಚಾರಿಸಿ ಇಂದು ತಡವಾಗಿ ಠಾಣೆಗೆ ಬಂದು ದೂರು ಸಲ್ಲಿಸುತ್ತಿದ್ದು, ಕಳವುವಾದ ನನ್ನ ಮೋಟಾರ ಸೈಕಲನ್ನು ಪತ್ತೆ ಮಾಡಿ ಕಳ್ಳತನ ಮಾಡಿದವರ ವಿರುದ್ದ ಕಾನೂನು ರೀತಿ ಕ್ರಮ ಜರುಗಿಸಿ ನನ್ನ ವಾಹನ ನನಗೆ ದೊರಕಿಸಿ ಕೊಡಲು ವಿನಂತಿ  ಅಂತಾ ಹೇಳಿಕೆಯ ನೀಡಿದ್ದರ ಸಾರಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡು ಬಗ್ಗೆ ವರದಿ..

ಇತ್ತೀಚಿನ ನವೀಕರಣ​ : 16-07-2021 11:21 AM ಅನುಮೋದಕರು: ADMIN


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕಲಬುರಗಿ ನಗರ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2021, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080