ಅಭಿಪ್ರಾಯ / ಸಲಹೆಗಳು

ಸಂಚಾರಿ ಪೊಲೀಸ್ ಠಾಣೆ-೨ :- ಇಂದು ದಿನಾಂಕ ೧೪/೦೭/೨೦೨೧ ರಂದು ೯:೩೦ ಎ.ಎಮ್ ಕ್ಕೆ ಶ್ರೀ. ಅಬ್ದುಲ ರಹೀಮ ಎ.ಎಸ್.ಐ ಸಂಚಾರಿ ಪೊಲೀಸ್ ಠಾಣೆ-೨ ಕಲಬುರಗಿ ಇವರು ವರದಿ ಹಾಜರು ಪಡಿಸಿದ್ದು ಸಾರಂಶವೆನೆಂದರೆ, ನಿನ್ನೆ ದಿನಾಂಕ ೧೩/೦೭/೨೦೨೧ ರಂದು ರಾತ್ರಿ ೮:೦೦ ಗಂಟೆಯಿಂದ ಬೆಳಿಗ್ಗೆ ೮:೦೦ ಗಂಟೆ ವರೆಗೆ ಹೈವೆ ಪೆಟ್ರೋಲ ರ‍್ತವ್ಯಕ್ಕಾಗಿ ಪೊಲೀಸ್ ಜೀಪ ನಂ. ಕೆಎ ೩೨ ಜಿ ೦೭೧೫ ನೇದ್ದರಲ್ಲಿ ನಾನು ಮತ್ತು ಆನಂದ ಸಿಪಿಸಿ ೮೯೩ ಹಾಗು ಈ ಜೀಪಿನ ಚಾಲಕ ಅರುಣ ಎ.ಹೆಚ್.ಸಿ ೫೯ ಇವರೊಂದಿಗೆ ರ‍್ತವ್ಯದ ಮೇಲೆ ಇದ್ದಾಗ ರಾತ್ರಿ ೯:೦೦ ಗಂಟೆ ಸುಮಾರಿಗೆ ಶಹಾಬಾದ ರೋಡಿನ ನಂದೂರ ಸಮೀಪದ ಮಿಡಚಿ ಮಸಾಲಾ ದಾಭಾದ ಹತ್ತೀರ ಹೋಗುತ್ತಿದ್ದಾಗ ಶಹಾಬಾದ ರೋಡಿನ ಕಡೆಯಿಂದ ಕಲಬುರಗಿ ರೋಡಿನ ಕಡೆಗೆ ಲಾರಿ ನಂ. ಕೆಎ ೫೬-೭೬೦೬ ನೇದ್ದರ ಚಾಲಕನು ಭಾರಿ ಅತಿವೇಗದಿಂದ ಮತ್ತು ಅಲಕ್ಷತನದಿಂದ ಅಪಾಯಕಾರಿಯಾಗಿ ಅಡ್ಡಾದಿಡ್ಡಿಯಾಗಿ ನಡೆಯಿಸಿಕೊಂಡು ಬರುತ್ತಿರುವಾಗ ಆತನ ಲಾರಿಗೆ ನಮ್ಮ ಜೀಪು ಬೆನ್ನು ಹತ್ತಿ ನಿಲ್ಲಿಸಿ ವಿಚಾರಿಸಲು ಲಾರಿಯ ಚಾಲಕ ಅವಿನಾಶ ತಂದೆ ಅರವಿಂದ ಈತನು ಸರಾಯಿ ಕುಡಿದ ನಶೆಯಲ್ಲಿದ್ದು ವೇಗವಾಗಿ ಮತ್ತು ಅಪಾಯಕಾರಿಯಾಗಿ ಅಡ್ಡಾದಿಡ್ಡಿಯಾಗಿ ನಡೆಸುತ್ತಿರುತ್ತಿ ನಿಧಾನವಾಗಿ ನಡೆಸುವಂತೆ ತಿಳಿಸಿದರು ಆತನು ಮತ್ತೆ ಅದೆ ರೀತಿಯಲ್ಲಿ ನಡೆಸುತ್ತಾ ಹೋಗುತ್ತಿದ್ದು, ಮುಂದಿನ ವಾಹನಕ್ಕೆ ಅಪಾಯ ಪಡಿಸುವಂತಹ ಸಂಗತಿಗಳು ಇರುವುದರಿಂದ ಮತ್ತು ಸರಾಯಿ ಕುಡಿದ ನಶೇಯಲ್ಲಿರುವುದರಿಂದ ಆತನಿಗೆ ಡಿ.ಡಿ ಮಶೀನದಿಂದ ಸರಾಯಿ ಕುಡಿದ ಬಗ್ಗೆ ಪರೀಕ್ಷೆ ಕೈಗೊಂಡು ಮುಂದೆ ಹಾಗೆ ಬಿಟ್ಟಲ್ಲಿ ಅಪಘಾತ ಪಡಿಸುವುದಾಗಿ ಖಚೀತ ಪಟ್ಟಿದ್ದರಿಂದ ಲಾರಿಯನ್ನು ವಶಕ್ಕೆ ತೆಗೆದುಕೊಂಡಿದ್ದು ಇರುತ್ತದೆ. ಕಾರಣ ಲಾರಿ ನಂ. ಕೆಎ ೫೬-೭೬೦೬ ನೇದ್ದರ ಚಾಲಕ ಅವಿನಾಶ ತಂದೆ ಅರವಿಂದ ಈತನು ಸರಾಯಿ ಕುಡಿದ ನಶೇಯಲ್ಲಿ ತನ್ನ ವಶದಲ್ಲಿದ್ದ ಈ ಲಾರಿಯನ್ನು ಭಾರಿ ಅತಿವೇಗದಿಂದ ಮತ್ತು ಅಲಕ್ಷತನದಿಂದ ಅಪಾಯಕಾರಿಯಾಗಿ ನಡೆಯಿಸಿಕೊಂಡು ಬರುತ್ತಾ ಮುಂದೆ ಯಾವುದಾದರು ಅಪಘಾತ ಪಡಿಸಿ ಹಾನಿ ಮಾಡುವಂತಹ ಸಂಭವ ಇರುವುದರಿಂದ ಆತನ ವಿರುದ್ಧ ಕಾನೂನು ಪ್ರಕಾರ ಕ್ರಮ ಕೈಗೊಳ್ಳಬೇಕೆಂದು ನಾನು   ಕರ್ತವ್ಯ ಮುಗಿಸಿಕೊಂಡು ಈಗ ಬೆಳಿಗ್ಗೆ ಬಂದು ಸರಕಾರಿ ತರ್ಪೆಯಾಗಿ ಫರ‍್ಯಾದಿ ಸಲ್ಲಿಸಿರುತ್ತೆನೆ ಅಂತಾ ಸಾರಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡು ಬಗ್ಗೆ ವರದಿ.

ರಾಘವೇಂದ್ರ ನಗರ ಪೊಲೀಸ ಠಾಣೆ :- ಇಂದು ದಿನಾಂಕ:೧೪/೦೭/೨೦೨೧ ರಂದು ೪.೦೦ ಪಿ.ಎಂ ಸುಮಾರಿಗೆ ಪರ‍್ಯಾದಿ ಚಾಂದ ಪಾಶಾ  ತಂದೆ ಮೀರಾನಸಾಬ ಬೆಹರನಲ್ಲಿ ವಯಃ ೫೫ ರ‍್ಷ  ಜಾಃ ಮುಸ್ಲಿಂ ಉಃ ಕೂಲಿ ಕೆಲಸ ಸಾಃ ಇಕ್ಬಾಲ್ ಕಾಲೊನಿ ಕಲಬುರಗಿ ರವರು ಕನ್ನಡದಲ್ಲಿ ಗಣಕೀಕೃತ ಮಾಡಿಸಿದ ದೂರು ಹಾಜರ ಪಡಿಸಿದ್ದರ ಸಾರಾಂಶವೆನೆಂದರೆ, ನನಗೆ ಅಮ್ರೀನ್ ಮಹಿಶಾ ಜಬೀನ್, ಸಾನಿಯಾ ಅಂಜುಮ್, ಮೊಹ್ಮದ ನೋಮನ್, ಮೊಹ್ಮದ ಆಯಾನ್ ಅಂತಾ ಮಕ್ಕಳು ಇರುತ್ತಾರೆ. ನಾನು ಕೂಲಿ ಕೆಲಸ ಮಾಡಿಕೊಂಡು ಇರುತ್ತೇನೆ. ನನ್ನ ಮಕ್ಕಳೆಲ್ಲಾ ಮನೆಯಲ್ಲೆ ಇರುತ್ತಾರೆ. ನನ್ನ ಹೆಂಡತಿಯು ಕೂಡಾ ಕೆಲಸಕ್ಕೆ ಹೋಗಿದ್ದು ಇರುತ್ತದೆ. ದಿನಾಂಕಃ೧೩.೦೭.೨೦೨೧ ಸಾಯಾಂಕಾಲ ೭.೦೦ ಗಂಟೆಯ ಸುಮಾರಿಗೆ ನನ್ನ ಹೆಂಡತಿಯಾಗಿರುವ ಶಾಹಿನ ಬೇಗಂ ಇವಳು ಪೋನ್ ಮಾಡಿ ನನಗೆ ತಿಳಿಸಿದೆನೆಂದರೆ ಸಾನಿಯಾ ಅಂಜುಮ್ ಇವಳು ಮನೆಯಲ್ಲಿ ಕಾಣಿಸುತ್ತಿಲ್ಲ. ಎಲ್ಲಿಗೆ ಹೋಗಿರುತ್ತಾಳೆ ಏನು ಗೊತ್ತಿಲ್ಲ. ದಿನಾಂಕಃ ೧೩.೦೭.೨೦೨೧ ರಂದು ಮದ್ಯಾಹ್ನ ೩.೩೦ ಗಂಟೆಯ ಸುಮಾರಿಗೆ ಮನೆಯಿಂದ ಯಾರಿಗೂ ಹೇಳದೆ ಕೇಳೆದೆ ಮನೆ ಬಿಟ್ಟು ಹೋಗಿರುತ್ತಾಳೆ ಅಂತಾ ತಿಳಿಸಿದ ಮೇರೆಗೆ ನಾನು ನೇರವಾಗಿ ಮನೆಗೆ ಬಂದು ನನ್ನ ಎಲ್ಲಾ ಮಕ್ಕಳಿಗೆ ವಿಚಾರಿಸಿ ಗಾಬರಿಗೊಂಡು ನಂತರ ನಮ್ಮ ಸಂಬಂದಿಕರ ಕಡೆ ಹುಡುಕಾಡಿದ್ದು ಮತ್ತು ಸಂಬಂಧಿಕರಲ್ಲಿಯೂ ಸಹ ವಿಚಾರಿಸಿದ್ದು, ಯಾವುದೆ ಮಾಹಿತಿ ಸಿಕ್ಕಿರುವದಿಲ್ಲ. ಯಾರೋ ನನ್ನ ಮಗಳಾಧ ಸಾನಿಯಾ ಅಂಜುಮ್ ತಂದೆ ಚಾಂದ ಪಾಶಾ ವಯ-೧೪ ರ‍್ಷ ಜಾಃ ಮುಸ್ಲಿಂ ಉಃವಿದ್ಯರ‍್ಥಿನಿ ಸಾ|| ಇಕ್ಬಾಲ್ ಕಾಲೋನಿ ಕಲಬುರಗಿ ಇವಳಿಗೆ  ಅಪಹರಿಸಿಕೊಂಡು ಹೋಗಿರಬಹುದೆಂದು ಸಂಶಯ ಇರುತ್ತದೆ. ನಾನು ಎಲ್ಲಾ ಕಡೆ ಹುಡಕಾಡಿ ಇಂದು ಠಾಣೆಗ ಬಂದು ದೂರು  ನೀಡುತ್ತಿದೆನೆ.     ಚಹರಾ ಪಟ್ಟಿ ಈ ಕೇಳಗಿನಂತೆ ಇರುತ್ತದೆ.

ಕಾಣೆಯಾದ ಹುಡಗಿಯ ಹೇಸರು ;  ಸಾನಿಯಾ ಅಂಜುಮ್

ವಯಸ್ಸು                     ;  ೧೪ ರ‍್ಷ

ಲಿಂಗ                      ;  ಹೆಣ್ಣು

ಕೂದಲು                   ; ಕಪ್ಪು

ಮೈಬಣ್ಣ                   ; ಕೆಂಪು ಮೈ ಬಣ್ಣ

ಮುಖ                    ; ಗೋಲು ಮುಖ

ಮೈಕಟ್ಟು                  ; ಸಾದಾರಣ ಮೈಕಟ್ಟು

ದರಸಿದ ಉಡಪುಗಳು     ; ಹಳದಿ ಬಣ್ಣದ ಫರ‍್ಕ, ಗುಲಾಬಿ ಬಣ್ಣದ ಸ್ಕರ‍್ಫ .

ಮಾತನಾಡುವ ಭಾಷೆ    ; ಹಿಂದಿ

        ಮಾನ್ಯರವರು ಕಾಣೆಯಾದ/ಅಪಹರಣಕ್ಕೊಳಗಾದ ನನ್ನ ಮಗಳನ್ನು ಹುಡುಕಿಕೊಡಬೇಕೆಂದು ಮಾನ್ಯರವರಲ್ಲಿ ವಿನಂತಿ  ಅಂತಾ ಸಾರಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡು ಬಗ್ಗೆ ವರದಿ.

ವಿಶ್ವವಿದ್ಯಾಲಯ ಪೊಲೀಸ ಠಾಣೆ: ಇಂದು ದಿನಾಂಕ ೧೪-೦೭-೨೦೨೧ ರಂದು ೮.೩೦ ಪಿಎಮ್ ಕ್ಕೆ ಪರ‍್ಯಾದಿ ಶ್ರೀಮತಿ. ಶೋಭಾವತಿ ಗಂಡ ರಾಜೇಂದ್ರಕುಮಾರ ಗಾರಂಪಳ್ಳಿ ವಯ : ೪೭ ವರ್ಷ ಉ : ದೈಹಿಕ ಶಿಕ್ಷಕಿ ಸರಕಾರಿ ಪ್ರೌಢ ಶಾಲೆ ಕೊಡಂಬಲ ತಾ: ಚಿಟಗುಪ್ಪ ಜ್ಯಾತಿ : ಲಿಂಗಾಯತ ಸಾ: ಪ್ಲಾಟ ನಂ.೨೧೦೨ ಮಹಾದೇವಪ್ಪ ರಾಂಪುರೇ ಬಡಾವಣೆ ಜಿಡಿಎ ಕಾಲೋನಿ ಕೋಟನೂರ ಡಿ ಕಲಬುರಗಿ ಇದ್ದು ವಾಸವಾಗಿರುತ್ತೇನೆ. ನಾನು ದೈಹಿಕ ಶಿಕ್ಷಕಿ ಅಂತಾ ಸರಕಾರಿ ಪ್ರೌಢ ಶಾಲೆ ಕೊಡಂಬಲ ತಾ: ಚಿಟಗುಪ್ಪ ಶಾಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು ದಿನಾಲೂ ಹೋಗಿ ಬರುವುದು ಮಾಡುತ್ತೇನೆ. ದಿನಾಂಕ ೧೦.೦೭.೨೦೨೧ ರಂದು ಮುಂಜಾನೆ ೦೭.೦೦ ಎ,ಎಮ್ ಕ್ಕೆ ನಾನು ಮತ್ತು ನನ್ನ ಮಗಳಾದ ವೈಷ್ಣವಿ ವಯ : ೮ ವರ್ಷ ಇಬ್ಬರೂ ಕೂಡಿ ನಮ್ಮ ಮನೆ ಕೀಲಿ ಹಾಕಿಕೊಂಡು  ಚಿಂಚೊಳ್ಳಿ ತಾಲೂಕಿನ ಗೌಡನಹಳ್ಳಿ ಗ್ರಾಮಕ್ಕೆ ಹೋಗಿದ್ದು ಇರುತ್ತದೆ. ನಂತರ ನಿನ್ನೆ ದಿನಾಂಕ ೧೩.೦೭.೨೦೨೧ ರಂದು ೦೭.೦೦ ಎ.ಎಮ್ ಸುಮಾರಿಗೆ ಈಶ್ವರ ಮಾಸ್ತರ ಇವರು ನನಗೆ ಫೋನ ಮಾಡಿ ಹೇಳಿದ್ದೇನೆಂದರೆ, ನಿಮ್ಮ ಮೇನ ಗೇಟ ಚಾವಿ ಇದೆ ಒಳಗಿನ ಬಾಗಿಲು ತೆರೆದಿದೆ ಅಂತಾ ಹೇಳಿದಾಗ ನಾನು ಇಂದು ದಿನಾಂಕ ೧೪.೦೭.೨೦೨೧ ರಂದು ಬೆಳಿಗ್ಗೆ ೧೧.೦೦ ಗಂಟೆಗೆ ನಮ್ಮ ಮನೆಗೆ ಬಂದು ನೋಡಲಾಗಿ ಮನೆಯ ಮುಖ್ಯ ಬಾಗಿಲು ಕೀಲಿ ಕೊಂಡಿ ಮುರಿದಿದ್ದು ಕಂಡು ಒಳಗೆ ಹೋಗಿ ನೋಡಲು ಮನೆಯ ಹಾಲ್ ನಲ್ಲಿರುವ ಸೆಲ್ಪ ಮೇಲೆ ಒಂದು ಕಿಟಲಿಯಲ್ಲಿಟ್ಟಿದ್ದ ೧) ೨೫ ಗ್ರಾಂ ಬಂಗಾರದ ಮಂಗಳಸೂತ್ರ ಅ.ಕಿ. ೧,೦೦,೦೦೦/- ರೂ. ೨) ಒಂದು ಗ್ರಾಂ ಬಂಗಾರದ ಜುಮಕಿ ಅ.ಕಿ. ೨,೦೦೦/- ರೂ. ೩) ಒಂದು ಗ್ರಾಂ ಗಟ್ಟಿ ಬಂಗಾರ ಅ.ಕಿ. ೨,೦೦೦/- ರೂ. ೪) ೬೦ ಗ್ರಾಂ ಬೆಳ್ಳಿಯ ಲಿಂಗದಕಾಯಿ ಅ.ಕಿ. ೩,೬೦೦/- ರೂ. ೫) ೮೦ ಗ್ರಾಂ ಬೆಳ್ಳಿಯ ಕಾಲಚೈನ ಅ.ಕಿ. ೪,೮೦೦/- ರೂ. ೬) ಒಂದು ೪೩ ಇಂಚಿನ ಸ್ಯಾಮಸಂಗ ಕಂಪನಿಯ ಎಲ್.ಇ.ಡಿ ಟಿವಿ ಅ.ಕಿ. ೪೯,೦೦೦/- ರೂ. ೭) ನಗದು ಹಣ ೨,೫೦,೦೦೦/- ರೂ ಹೀಗೆ ಒಟ್ಟು ೪,೧೧,೪೦೦/- ರೂ. ಗಳನ್ನು ಯಾರೋ ಕಳ್ಳರು ನಮ್ಮ ಮನೆಯ ಮುಖ್ಯ ಬಾಗಿಲ ಕೀಲಿ ಕೊಂಡಿ ಮುರಿದು ಮನೆಯೊಳಗೆ ಪ್ರವೇಶ ಮಾಡಿ ಮನೆಯ ಅಲಮಾರಿಯಲ್ಲಿಟ್ಟಿದ್ದ ಈ ಮೇಲಿನ ಬಂಗಾರ, ಬೆಳ್ಳಿ ಸಾಮಾನುಗಳು ಮತ್ತು ನಗದು ಹಣ ಕಳ್ಳತನ ಮಾಡಿಕೊಂಡು ಹೋಗಿದ್ದು ಇರುತ್ತದೆ. ಸದರಿ ಘಟನೆಯು ದಿನಾಂಕ ೧೦.೦೭.೨೦೨೧ ರಂದು ೦೭:೦೦ ಎ.ಎಮ್ ದಿಂದ ದಿನಾಂಕ ೧೩.೦೭.೨೦೨೧ ರಂದು ೦೭:೦೦ ಎ.ಎಮ್ ದ ಮದ್ಯದ ಅವಧಿಯಲ್ಲಿ ಜರುಗಿರುತ್ತದೆ. ನಾನು ನಮ್ಮ ಮನೆಯಲ್ಲಿ ವಿಚಾರಿಸಿ ಇಂದು ತಡಮಾಡಿ ಠಾಣೆಗೆ ಬಂದು ದೂರು ನೀಡುತ್ತಿದ್ದು ಇರುತ್ತದೆ.ಕಾರಣ ಕಳ್ಳತನವಾದ ಬಂಗಾರ, ಬೆಳ್ಳಿ ಸಾಮಾನುಗಳು ಮತ್ತು ನಗದು ಹಣ ಪತ್ತೆ ಮಾಡಿ, ಕಳ್ಳತನ ಮಾಡಿದ ಕಳ್ಳರನ್ನು ಪತ್ತೆ ಮಾಡಿ ಕಾನೂನು ಕ್ರಮ ಜರುಗಿಸಬೇಕು ಅಂತಾ ವಿನಂತಿ ಇತ್ಯಾದಿ ಕೊಟ್ಟ ದೂರಿನ ಸಾರಾಂಶದ  ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

 

ಇತ್ತೀಚಿನ ನವೀಕರಣ​ : 15-07-2021 12:46 PM ಅನುಮೋದಕರು: ADMIN


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕಲಬುರಗಿ ನಗರ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080