ಅಭಿಪ್ರಾಯ / ಸಲಹೆಗಳು

ವಿಶ್ವವಿದ್ಯಾಲಯ ಪೊಲೀಸ ಠಾಣೆ :- ಇಂದು ದಿನಾಂಕ ೧೩-೦೭-೨೦೨೧ ರಂದು ೫:೩೦ ಪಿಎಮ್ ಕ್ಕೆ ಪರ‍್ಯಾದಿ ಶ್ರೀ ಶಶಿಕಾಂತ ತಂದೆ ಬಸವಣ್ಣಪ್ಪ ಶೆಳ್ಳಗಿ, ವಯ: ೪೫ ವರ್ಷ, ಉ: ಖಾಸಗಿ ವೈದ್ಯರು, ಜಾತಿ: ಲಿಂಗಾಯತ, ಸಾ: ಸುಲೇಪೇಠ ತಾ: ಚಿಂಚೋಳಿ, ಜಿ: ಕಲಬುರಗಿ ಹಾವ: ಲಕ್ಷ್ಮಿನಗರ ಕಲಬುರಗಿ ಹೊನಶೆಟ್ಟಿ ಹಳ್ಳಾ ರವರ ಮನೆಯಲ್ಲಿ ಬಾಡಿಗೆ ಇವರು ಠಾಣೆಗೆ ಹಾಜರಾಗಿ ಕನ್ನಡದಲ್ಲಿ ಗಣಕೀಕರಣ ಮಾಡಿದ ಅರ್ಜಿ ಸಲ್ಲಿಸಿದ್ದು ಸಾರಾಂಶವೆನೆAದರೆ ನಾನು ಮತ್ತು ನನ್ನ ಹೆಂಡತಿಯಾದ ನಂದಿನಿ ಮತ್ತು ಇಬ್ಬರು ಮಕ್ಕಳೊಂದಿಗೆ ಲಕ್ಷ್ಮಿನಗರದ ಹೊನಶೆಟ್ಟಿ ಹಳ್ಳಾ ರವರ ಮೊದಲನೇ ಮಹಡಿಯ ಮನೆಯಲ್ಲಿ ಬಾಡಿಗೆ ಮಾಡಿಕೊಂಡು ವಾಸವಾಗಿರುತ್ತೇನೆ. ನಾನು ಸುಲೇಪೇಠದಲ್ಲಿ ಖಾಸಗಿ ಆಸ್ಪತ್ರೆ ತೆರೆದಿದ್ದರಿಂದ ನಾನು ದಿನಾಲು ಸುಲೇಪೇಠಕ್ಕೆ ಹೋಗಿ ಬರುವುದು ಮಾಡುತ್ತಿದ್ದು, ನನ್ನ ಹೆಂಡತಿ ಅಪ್ಪಾ ಇಂಜಿನಿಯರಿಂಗ್ ಕಾಲೇಜ್ ಉಪನ್ಯಾಸಕರು ಅಂತಾ ಕೆಲಸ ಮಾಡುತ್ತಾರೆ. ದಿನಾಂಕ ೧೧.೦೭.೨೦೨೧ ರಂದು ಬೇಳಿಗ್ಗೆ ೮:೦೦ ಗಂಟೆಗೆ ನಾನು ಸುಲೇಪೇಠಕ್ಕೆ ಹೋಗಿದ್ದು, ನಂತರ ನನ್ನ ಹೆಂಡತಿ ಮತ್ತು ಮಕ್ಕಳು ನಮ್ಮ ಮನೆ ಕೀಲಿ ಹಾಕಿಕೊಂಡು ಬೀದರಕ್ಕೆ ಹೋಗಿದ್ದು ಇರುತ್ತದೆ. ನಮ್ಮ ಮನೆಯಲ್ಲಿ ಯಾರು ಇಲ್ಲದ ಕಾರಣ ನಾನು ಸುಲೇಪೇಠದಲ್ಲಿಯೇ ಉಳಿದಿದ್ದು ಇರುತ್ತದೆ. ನಂತರ ದಿನಾಂಕ ೧೨.೦೭.೨೦೨೧ ರಂದು ಬೇಳಿಗ್ಗೆ ೧೦:೩೦ ಗಂಟೆ ಸುಮಾರಿಗೆ ನಮ್ಮ ಮನೆಯ ಮಾಲೀಕರಾದ ಹೊನಶೆಟ್ಟಿ ಹಳ್ಳಾ ರವರು ನನಗೆ ಫೊನ್ ಮಾಡಿ ನಿಮ್ಮ ಮನೆಯ ಮುಖ್ಯ ಬಾಗಿಲು ಕೀಲಿ ಕೊಂಡಿ ಮುರಿದಿದೆ ಅಂತಾ ಹೇಳಿದಾಗ ನಾನು ಗಾಬರಿಗೊಂಡು ಸುಲೇಪೇಠದಿಂದ ಮದ್ಯಾಹ್ನ ೧:೦೦ ಗಂಟೆ ಸುಮಾರಿಗೆ ನಮ್ಮ ಮನೆಗೆ ಬಂದು ನೋಡಲಾಗಿ ಮನೆಯ ಮುಖ್ಯ ಬಾಗಿಲಿ ಕೀಲಿ ಕೊಂಡಿ ಮುರಿದಿದ್ದು ಕಂಡು ಒಳಗೆ ಹೋಗಿ ನೋಡಲಾಗಿ ಮನೆಯ ಬೆಡ್ ರೂಮಿನಲ್ಲಿದ್ದ ಅಲಮಾರಿಯ ಲಾಕ್ ಮುರಿದಿದ್ದು ಅದರಲ್ಲಿಟ್ಟಿದ್ದ ಬಂಗಾರದ ಸಾಮಾನುಗಳಾದ ೧) ೩೫ ಗ್ರಾಂ ಬಂಗಾರದ ಮಂಗಳಸೂತ್ರ ಅ.ಕಿ-೧,೪೦,೦೦೦/-ರೂ, ೨) ೩ ಗ್ರಾಂ ನ ಎರಡು ಬಂಗಾರದ ಉಂಗುರ ಒಟ್ಟು ೬ ಗ್ರಾಂ ಅ.ಕಿ-೨೪,೦೦೦/-ರೂ, ೩) ೧ ಗ್ರಾಂ ನ ನಾಲ್ಕು ಬಂಗಾರದ ಉಂಗುರಗಳು ಒಟ್ಟು ೪ ಗ್ರಾಂ ಅ.ಕಿ-೧೬,೦೦೦/-ರೂ, ೪) ಬೆಳ್ಳಿ ಸಾಮಾನುಗಳಾದ ೧೦ ಗ್ರಾಂ ನ ೩ ಬೆಳ್ಳಿಯ ಕ್ವಾಯಿನ್ ಒಟ್ಟು ೩೦ ಗ್ರಾಂ ಅ.ಕಿ-೧೮೦೦/-ರೂ, ೫) ಬೆಳ್ಳಿಯ ನಾಲ್ಕು ಜೊತೆ ಕಾಲ್ ಚೈನ್ ಒಟ್ಟು ೪೦ ಗ್ರಾಂ ಅ.ಕಿ-೨೪೦೦/-ರೂ, ೬) ಬೆಳ್ಳಿಯ ನಾಲ್ಕು ಜೊತೆ ಕಾಲ ಖಡ್ಗ ಒಟ್ಟು ೪೦ ಗ್ರಾಂ ಅ.ಕಿ-೨೪೦೦/-ರೂ, ೭) ಬೆಳ್ಳಿಯ ಎರಡು ಲಿಂಗದ ಕಾಯಿ ಒಟ್ಟು ೧೦ ಗ್ರಾಂ ಅ.ಕಿ-೬೦೦/-ರೂ, ೮) ಬೆಳ್ಳಿಯ ಗಣಪತಿ ಮೂರ್ತಿ ೩೦ ಗ್ರಾಂ ಅ.ಕಿ-೧೮೦೦/-ರೂ, ಹಾಗೂ ನಗದು ಹಣ ೫೦,೦೦೦/-ರೂ ಒಟ್ಟು ಅ:ಕಿ: ೨,೩೯,೦೦೦=೦೦ ನೇದ್ದುವುಗಳನ್ನು ಯಾರೋ ಕಳ್ಳರು ನಮ್ಮ ಮನೆಯ ಮುಖ್ಯ ಬಾಗಿಲ ಕೀಲಿ ಕೊಂಡಿ ಮುರಿದು ಮನೆಯೊಳಗೆ ಪ್ರವೇಶ ಮಾಡಿ ಮನೆಯ ಅಲಮಾರಿಯಲ್ಲಿಟ್ಟಿದ್ದ ಈ ಮೇಲಿನ ಸಾಮಾನುಗಳನ್ನು ಕಳ್ಳತನ ಮಾಡಿಕೊಂಡು ಹೋಗಿದ್ದು ಇರುತ್ತದೆ. ಸದರಿ ಘಟನೆಯು ದಿನಾಂಕ ೧೧.೦೭.೨೦೨೧ ರಂದು ೧೨:೦೦ ಪಿ.ಎಮ್ ದಿಂದ ದಿನಾಂಕ ೧೨.೦೭.೨೦೨೧ ರಂದು ಬೇಳಿಗ್ಗೆ ೧೦:೩೦ ಗಂಟೆಯ ಮದ್ಯದ ಅವಧಿಯಲ್ಲಿ ನಮ್ಮ ಮನೆಯ ಮುಖ್ಯ ಬಾಗಿಲ ಕೀಲಿ ಕೊಂಡಿ ಮುರಿದು ಮನೆಯೊಳಗೆ ಪ್ರವೇಶ ಮಾಡಿ ಮನೆಯಲ್ಲಿ ಈ ಮೇಲಿನ ಬಂಗಾರ ಮತ್ತು ಬೆಳ್ಳಿ, ನಗದು ಹಣ ಕಳ್ಳತನ ಮಾಡಿಕೊಂಡು ಹೋಗಿದ್ದು ಇರುತ್ತದೆ. ನಾನು ನಮ್ಮ ಮನೆಯಲ್ಲಿ ವಿಚಾರಿಸಿ ಇಂದು ತಡಮಾಡಿ ಠಾಣೆಗೆ ಬಂದು ದೂರು ನೀಡುತ್ತಿದ್ದು ಇರುತ್ತದೆ. ಕಾರಣ ಕಳ್ಳತನವಾದ ಬಂಗಾರ, ಬೆಳ್ಳಿ ಸಾಮಾನುಗಳು ಮತ್ತು ನಗದು ಹಣ ಪತ್ತೆ ಮಾಡಿ, ಕಳ್ಳತನ ಮಾಡಿದ ಕಳ್ಳರನ್ನು ಪತ್ತೆ ಮಾಡಿ ಕಾನೂನು ಕ್ರಮ ಜರುಗಿಸಬೇಕು ಅಂತಾ ಸಲ್ಲಿಸಿದ ಹೇಳಿಕೆ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

   ಸಂಚಾರಿ-೦೨ ಪೊಲೀಸ ಠಾಣೆ :- ಮಾನ್ಯರವರಲ್ಲಿ ಅರಿಕೆ ಮಾಡಿಕೊಳ್ಳುವುದೆನೆಂದರೆ, ಇಂದು ದಿನಾಂಕ ೧೩/೦೭/೨೦೨೧ ರಂದು ೧೧:೦೦ ಪಿ.ಎಮ್ ಕ್ಕೆ ಫಿರ್ಯಾದಿ ಈಶ್ವರ ತಂದೆ ಶಾಮು ಆಡೆ ವಯಃ ೨೨ ವರ್ಷ ಜಾತಿಃ ಲಂಬಾಣಿ ಉಃ ಒಕ್ಕಲುತನ ಸಾಃ ಮಡಿಹಾಳ ತಾಂಡಾ ಶ್ರೀನಿವಾಸ ಸರಡಗಿ ತಾ.ಜಿಃ ಕಲಬುರಗಿ ಇವರು ಠಾಣೆಗೆ ಹಾಜರಗಾಗಿ ಪುನಃ ಹೇಳಿಕೆ ಕೊಟ್ಟಿದ್ದೇನೆಂದರೆ, ದಿನಾಂಕ ೦೮/೦೭/೨೦೨೧ ರಂದು ನಮ್ಮ ತಂದೆ ಶಾಮು ತಂದೆ ರಾಮು ಇವರಿಗೆ ಮೋಟರ ಸೈಕಲ ಅಪಘಾತ ಪಡಿಸಿದ ವಿಷಯದಲ್ಲಿ ತಮ್ಮ ಪೊಲೀಸ್ ಠಾಣೆಯ ಶಂಕರಲಿAಗ ಹೆಚ್.ಸಿ ೨೧೪ ಇವರ ಕಡೆಗೆ ದಿನಾಂಕ ೧೦/೦೭/೨೦೨೧ ರಂದು ಒಂದು ಹೇಳಿಕೆಯನ್ನು ಕೊಟ್ಟಿದ್ದು, ಅದರ ಮೇಲಿಂದ ತಮ್ಮ ಠಾಣೆಯಲ್ಲಿ ಗುನ್ನೆ ನಂ. ೧೫೦/೨೦೨೧ ಕಲಂ ೨೭೯, ೩೩೮ ಐಪಿಸಿ ಸಂ. ೧೮೭ ಐ.ಎಮ.ವಿ ಆಕ್ಟ ನೇದ್ದರ ಪ್ರಕಾರ ಪ್ರಕರಣ ದಾಖಲಾಗಿದ್ದು ಇರುತ್ತದೆ. ಅಂದೆ ದಿನಾಂಕ ೧೦/೦೭/೨೦೨೧ ರಂದು ಶಂಕರಲಿAಗ ಹೆಚ್.ಸಿ ಇವರ ಕಡೆಗೆ ನಮ್ಮ ತಂದೆಯವರಿಗೆ ದಿನಾಂಕ ೦೮/೦೭/೨೦೨೧ ರಂದು ಮೋಟರ ಸೈಕಲ ನಂಬರ ಕೆಎ ೩೨ ಇ.ವಿ ೫೦೨೨ ನೇದ್ದು ಅಪಘಾತ ಪಡಿಸಿರುತ್ತದೆಂದು ಹೇಳಿದ್ದು ಆದರೆ ವಿಚಾರಣೆಯಲ್ಲಿ ಮೋಟರ ಸೈಕಲ ನಂಬರ ಕೆಎ ೩೨ ಎಕ್ಸ ೪೬೨೮ ನೇದ್ದರ ಮೋಟರ ಸೈಕಲ ಸವಾರನಾದ ಮಲ್ಲಿಕಾರ್ಜುನ ಸಾಃ ಹದನೂರ ಈತನು ಅಪಘಾತ ಪಡಿಸಿರುವದಾಗಿ ತಿಳಿದು ಬಂದ ಬಗ್ಗೆ ಪುರವಣಿ ಹೇಳಿಕೆಯನ್ನು ನೀಡಿರುತ್ತೆನೆ. ಈಗ ಮುಂದುವರೆದು ಹೇಳುವುದೆನೆಂದರೆ, ದಿನಾಂಕ ೦೮/೦೭/೨೦೨೧ ರಂದು ನಮ್ಮ ತಂದೆಯವರು ಏರಪೋರ್ಟದ ಹತ್ತೀರ ಇರುವ ಹೊಲಕ್ಕೆ ಹೋಗಿ ದನ ಮತ್ತು ಕುರಿಗಳಿಗೆ ಮೇವು ಮಾಡಿಕೊಂಡು ಬರುತ್ತೆನೆಂದು ಹೋಗುವಾಗ ಮಧ್ಯಾಹ್ನ ೧೨:೦೦ ಗಂಟೆ ಸುಮಾರಿಗೆ ಮಡಿಹಾಳ ತಾಂಡಾದ ರೋಡಿನಿಂದ ಸೇಡಂ ಮುಖ್ಯ ರೋಡ ದಾಟುವಾಗ ಸೇಡಂ ರೋಡಿನ ಕಡೆಯಿಂದ ಹಿರೊ ಹೊಂಡಾ ಸ್ಪೆ÷್ಲಂಡರ ಮೋಟರ ಸೈಕಲ ನಂಬರ ಕೆಎ ೩೨ ಎಕ್ಸ ೪೬೨೮ ನೇದ್ದರ ಸವಾರನಾದ ಮಲ್ಲಿಕಾರ್ಜುನ ಸಾಃ ಹದನೂರ ಎಂಬುವನು ಅತಿವೇಗದಿಂದ ಮತ್ತು ಅಲಕ್ಷತನದಿಂದ ನಡೆಯಿಸಿಕೊಂಡು ಬಂದು ನಮ್ಮ ತಂದೆಯವರಿಗೆ ಡಿಕ್ಕಿ ಹೊಡೆದ ಪರಿಣಾಮ ಅವರ ತಲೆಗೆ, ಬಲಭಾಗದ ಮೆಲಕಿಗೆ ರಕ್ತಗಾಯವಾಗಿ ಬಾಯಿಯಿಂದ ರಕ್ತ ಬಂದಿದ್ದು ಮತ್ತು ಎಡಭುಜಕ್ಕೆ ಗಾಯವಾಗಿದ್ದು ಹಾಗು ಬಲಗಾಲಿನ ಕಪಗಂಡಿಗೆ ಮತ್ತು ಎಡಗೈ ರಟ್ಟೆ ಹತ್ತೀರ ಗಾಯವಾಗಿದ್ದನ್ನು ಸುಭಾಷ ತಂದೆ ಧನಸಿಂಗ ಆಡೆ ಮತ್ತು ದಶರಥ ತಂದೆ ಮಾನು ರಾಠೋಡ ಎಂಬುವರು ನೋಡಿ ಉಪಚಾರಕ್ಕಾಗಿ ಆಸ್ಪತ್ರೆಗೆ ತಂದಾಗ ನಾನು ಮತ್ತು ನಮ್ಮ ತಾಯಿ ಮಂಗಲಾಬಾಯಿ ಆಸ್ಪತ್ರೆಗೆ ಬಂದು ನಂತರ ತಂದೆಯವರಿಗೆ ಹೆಚ್ಚಿನ ಉಪಚಾರ ಕುರಿತು ದಿನಾಂಕ ೦೯/೦೭/೨೦೨೧ ರಂದು ಕಲಬುರಗಿ ಸರಕಾರಿ ಆಸ್ಪತ್ರೆಯಲ್ಲಿ ಸೇರಿಕೆ ಮಾಡಿದ್ದು, ಅಲ್ಲಿ ಉಪಚಾರ ಪಡೆಯುತ್ತಿರುವಾಗ ನಮ್ಮ ತಂದೆಯವರು ಹರ‍್ಯಾರಿ ಬಿಳುತ್ತಿರುವುದರಿಂದ ದೇವರ ಕೆಳಿಸುವುದಕ್ಕಾಗಿ ಇಂದು ದಿನಾಂಕ ೧೩/೦೭/೨೦೨೧ ರಂದು ಮಧ್ಯಾಹ್ನ ಸರಕಾರಿ ಆಸ್ಪತ್ರೆಯಿಂದ ಬಿಡುಗಡೆ ಮಾಡಿಕೊಂಡು ನಾನು ಮತ್ತು ನಮ್ಮ ತಯಿ ಮಂಗಲಾಬಾಯಿ ಹಾಗು ನಮ್ಮ ತಮ್ಮ ರಾಮು ಕೂಡಿಕೊಂಡು ಸರಕಾರಿ ಆಸ್ಪತ್ರೆಯಿಂದ ಮುಗುಳನಾಗಾಂವ ತಾಂಡಾಕ್ಕೆ ತೆಗೆದುಕೊಂಡು ಹೋಗಿ ದೇವರು ಕೇಳಿಸಿಕೊಂಡು ಮರಳಿ ನಮ್ಮೂರಾದ ಮಡಿಹಾಳ ತಾಂಡಾಕ್ಕೆ ತಂದೆಯವರನ್ನು ತೆಗೆದುಕೊಂಡು ಮನೆಗೆ ಹೋಗಿದ್ದು, ಅವರು ಮನೆಯಲ್ಲಿ ಇಂದು ರಾತ್ರಿ ೮:೩೦ ಗಂಟೆ ಸುಮಾರಿಗೆ ರಸ್ತೆ ಅಪಘಾತದಲ್ಲಿ ಆದ ಗಾಯದ ಬಾಧೆಯಿಂದ ಮೃತ ಪಟ್ಟಿರುತ್ತಾರೆ. ಮುಂದೆ ತಂದೆಯವರ ಶವವನ್ನು ರಾತ್ರಿ ನಮ್ಮೂರ ತಾಂಡಾದಿಂದ ಕಲಬುರಗಿ ಸರಕಾರಿ ಆಸ್ಪತ್ರೆಗೆ ತೆಗೆದುಕೊಂಡು ಬಂದಿರುತ್ತೆವೆ.   ಕಾರಣ ಈ ವಿಷಯದಲ್ಲಿ ಮೋಟರ ಸೈಕಲ ನಂ. ಕೆಎ ೩೨ ಎಕ್ಸ ೪೬೨೮ ನೇದ್ದರ ಚಾಲಕ ಮಲ್ಲಿಕಾರ್ಜುನ ಸಾಃ ಹದನೂರ ಈತನ ವಿರುದ್ಧ ಕಾನೂನು ಪ್ರಕಾರ ಕ್ರಮ ಕೈಗೊಂಡು ನಮ್ಮ ತಂದೆಯವರ ಶವವನ್ನು ನಿಯಮಾನುಸಾರವಾಗಿ ನಮಗೆ ಒಪ್ಪಿಸಬೇಕೆಂದು ಕೊಟ್ಟ  ಹೇಳಿಕೆ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

ಇತ್ತೀಚಿನ ನವೀಕರಣ​ : 14-07-2021 11:58 AM ಅನುಮೋದಕರು: ADMIN


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕಲಬುರಗಿ ನಗರ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080