ಅಭಿಪ್ರಾಯ / ಸಲಹೆಗಳು

ಸಂಚಾರಿ ಪೊಲೀಸ ಠಾಣೆ-೦೨ : ಇಂದು ದಿನಾಂಕ ೧೨/೦೭/೨೦೨೧ ರಂದು ರಾತ್ರಿ ೧೧:೦೦ ಪಿ.ಎಮ್ ಕ್ಕೆ ಶ್ರೀ. ಪಿತ್ತು ತಂದೆ ಲಾಲು ಪವಾರ ವಯಃ ೪೦ ವರ್ಷ ಜಾತಿಃ ಲಂಬಾಣಿ ಉಃ ಕೂಲಿ ಕೆಲಸ ಸಾಃ ನಂದೂರ(ಬಿ) ಬಾಪು ನಾಯಕ ತಾಂಡಾ ತಾ.ಜಿಃ ಕಲಬುರಗಿ ಇವರು ಪೊಲೀಸ್ ಠಾಣೆಗೆ ಹಾಜರಾಗಿ ಹೇಳಿಕೆ ಫರ‍್ಯಾದಿ ನೀಡದ್ದು ಸಾರಂಶವೆನೆಂದರೆ, ನಮ್ಮ ಅಣ್ಣತಮ್ಮಕೀಯ ಹೇಮಂತ ತಂದೆ ಬಾಬು ಪವಾರ ಈತನ ಲಗ್ನವು ದಿನಾಂಕ ೧೫/೦೭/೨೦೨೧ ರಂದು ನಿಗದಿ ಪಡಿಸಿದ್ದು, ಆತನ ಲಗ್ನದ ಬಟ್ಟೆ ತರುವ ಕುರಿತು ನಾನು ನಮ್ಮ ತಾಂಡಾದ ಭೋಜರಾಜ ತಂದೆ ನಾರಾಯಣ ರಾಠೋಡ ಹಾಗು ನಮ್ಮ ಅಣ್ಣನ ಮಗನಾದ ಪ್ರೇಮ ನಾಲ್ಕು ಜನರು ಕೂಡಿಕೊಂಡು ಎರಡು ಮೋಟರ ಸೈಕಲದ ಮೇಲೆ ನಮ್ಮ ತಾಂಡಾದಿಂದ ಇಂದು ಕಲಬುರಗಿಗೆ ಬಂದು ಬಟ್ಟೆಗಳನ್ನು ಖರೀದಿ ಮಾಡಿಕೊಂಡು ಮರಳಿ ನಮ್ಮೂರಿಗೆ ಹೋಗುವ ಕುರಿತು ಹೋಗುವಾಗ ಹೇಮಂತ ಈತನ ಹೀರೊ ಸ್ಪ್ಲೆಂಡರ ಮೋಟರ ಸೈಕಲ ನಂ. ಕೆಎ ೩೨ ಇ.ಟಿ ೪೨೫೯ ನೇದ್ದರ ಮೇಲೆ ಹೇಮಂತ ಮತ್ತು ನಮ್ಮ ಅಣ್ಣನ ಮಗ ಇಬ್ಬರೂ ಹಾಗು ಇನ್ನೊಂದು ಮೋಟರ ಸೈಕಲ ಮೇಲೆ ನಾನು ಮತ್ತು ಭೋಜರಾಜ ಕೂಡಿಕೊಂಡು ಹೋಗುತ್ತಿರುವಾಗ ರಾತ್ರಿ ೯:೦೦ ಗಂಟೆ ಆಗಿರಬಹುದು ಶಹಾಬಾದ ರೋಡಿನ ನೃಪತುಂಗ ಕಾಲೋನಿಯ ಗೌರಿ ದಾಭಾದ ಹತ್ತೀರ ನಮ್ಮ ಮುಂದೆ ಹೇಮಂತ ಮತ್ತು ಪ್ರೇಮ ಹೋಗುತ್ತಿದ್ದರು. ಅವರಕ್ಕಿಂತಲು ಮುಂದೆ ಒಂದು ಲಾರಿ ಚಾಲಕನು ವೇಗವಾಗಿ ನಡೆಯಿಸಿಕೊಂಡು ಹೋಗುತ್ತಾ ಒಮ್ಮಿದೊಮ್ಮಿಲೆ ಆ ಲಾರಿಗೆ ಬ್ರೇಕ ಮಾಡಿ ನಿಲ್ಲಿಸಿ ಹಿಂದಕ್ಕೆ ತೆಗೆದುಕೊಂಡಿದಕ್ಕೆ ಹೇಮಂತ ಮತ್ತು ಪ್ರೇಮ ಇವರು ನಿಧಾನವಾಗಿ ಮೋಟರ ಸೈಕಲದ ಮೇಲೆ ಹೋಗುತ್ತಿರುವಾಗ ಆ ಲಾರಿಗೆ ತಾಗಿದ್ದರಿಂದ ಇವರಿಬ್ಬರೂ ರೋಡಿಗೆ ಮೋಟರ ಸೈಕಲ ಸಮೇತ ಬಿದ್ದಿದ್ದರಿಂದ ನಾನು ಮತ್ತು ಭೋಜರಾಜ ರಾಠೋಡ ಕಣ್ಣಾರೆ ಕಂಡು ಹೋಗಿ ನೋಡಲಾಗಿ ಮೋಟರ ಸೈಕಲ ನಡೆಸುವ ಹೇಮಂತ ಈತನ ತಲೆಗೆ ರಕ್ತಗಾಯ ಮತ್ತು ಮೂಗಿಗೆ ಮತ್ತು ಬಾಯಿಗೆ ರಕ್ತಗಾಯವಾಗಿದ್ದು, ಅಣ್ಣನ ಮಗ ಪ್ರೇಮನಿಗೆ ನೋಡಲಾಗಿ ಆತನ ತಲೆಗೆ ಭಾರಿ ಪ್ರಮಾಣದ ರಕ್ತಗಾಯವಾಗಿತ್ತು. ಮೂಗಿಗೆ ಮತ್ತು ಬಾಯಿಗೆ ರಕ್ತಗಾಯವಾಗಿದ್ದು, ಎಡಗೈ ಮೊಳಕೈ ಹತ್ತೀರ ರಕ್ತಗಾಯವಾಗಿತ್ತು. ಅಣ್ಣನ ಮಗ ಪ್ರೇಮನಿಗೆ ಮಾತನಾಡಿದರು ಮಾತನಾಡಲಿಲ್ಲಾ. ಆತನು ಸ್ಧಳದಲ್ಲಿಯೇ ಮೃತ ಪಟ್ಟಿದನು. ಹೇಮಂತನಿಗೆ ಮಾತನಾಡಿಸಲು ಆತನು ಕೂಡಾ ಮಾತನಾಡುವ ಪರಸ್ಧಿತಿಯಲ್ಲಿ ಇರಲಿಲ್ಲಾ. ಅಪಘಾತ ಪಡಿಸಿದ ಲಾರಿ ನಂಬರ ನೋಡಲಾಗಿ ಟಿ.ಎನ್ ೨೮ ಎ.ಎಫ್ ೫೩೫೫ ನೇದ್ದು ಇತ್ತು. ಅದರ ಚಾಲಕನು ಈ ಘಟನೆಯನ್ನು ಕಂಡು ಹತ್ತೀರ ಬಂದು ನೋಡಿ ಅಲ್ಲಿಂದ ಓಡಿ ಹೋದನು. ಆತನಿಗೆ ನಾವು ನೋಡಿರುತ್ತೆವೆ ಮತ್ತೆ ನೋಡಿದಲ್ಲಿ ನಾವು ಗುತರ್ಿಸುತ್ತೆನೆ. ನಾವು ಗಾಬರಿಗೊಂಡು ರೋಡಿನಿಂದ ಬರುತ್ತಿರುವ ಯಾವುದೊ ಖಾಸಗಿ ಅಂಬುಲೇನ್ಸದಲ್ಲಿ ಹೇಮಂತನಿಗೆ ಹಾಕಿಕೊಂಡು ಭೋಜರಾಜ ರಾಠೋಡ ಈತನು ಎ.ಎಸ್.ಎಮ್ ಆಸ್ಪತ್ರೆಗೆ ತೆಗೆದುಕೊಂದು ಹೋದರು. ನಾನು ಪ್ರೇಮ ಈತನ ಶವವನ್ನು ಸರಕಾರಿ ಆಸ್ಪತ್ರೆಗೆ ನಾನೆ ಹಾಕಿಕೊಂಡು ತಂದಿರುತ್ತೆನೆ. ಹೇಮಂತ ಈತನು ಎ.ಎಸ್.ಎಮ್ ಆಸ್ಪತ್ರೆಯಲ್ಲಿ ಚಿಂತಾಜನಕ ಪರಸ್ಧಿತಿಯಲ್ಲಿ ಉಪಚಾರ ಪಡೆಯುತ್ತಿರುತ್ತಾನೆ. ಕಾರಣ ಹೇಮಂತ ಮತ್ತು ಅಣ್ಣನ ಮಗ ಪ್ರೇಮ ಇವರು ತಮ್ಮ ಮೋಟರ ಸೈಕಲ ನಂ. ಕೆಎ ೩೨ ಇ.ಟಿ ೪೨೫೯ ನೇದ್ದರ ಮೇಲೆ ಹೇಮಂತ ಈತನು ನಿಧಾನವಾಗಿ ನಡೆಯಿಸಿಕೊಂಡು ಹೋಗುವಾಗ ಮುಂದೆ ಹೋಗುತ್ತಿರುವ ಲಾರಿ ನಂ. ಟಿ.ಎನ್ ೨೮ ಎ.ಎಫ್ ೫೩೫೫ ನೇದ್ದರ ಚಾಲಕನು ಅತಿವೇಗದಿಂದ ಮತ್ತು ಅಲಕ್ಷತನದಿಂದ ನಡೆಯಿಸಿ ಒಮ್ಮೇಲೆ ಬ್ರೇಕ ಹಾಕಿ ಹಿಂದಕ್ಕೆ ತೆಗೆದುಕೊಂಡು ಮೋಟರ ಸೈಕಲ ಸವಾರರಿಗೆ ಹಿಂಭಾಗದಿಂದ ಅಪಘಾತ ಪಡಿಸಿದ್ದರಿಂದ ಈ ಮೇಲಿನ ಘಟನೆ ಜರುಗಿದ್ದು, ಲಾರಿ ಚಾಲಕನ ವಿರುದ್ಧ ಕಾನೂನು ಪ್ರಕಾರ ಕ್ರಮ ಕೈಕೊಳ್ಳಬೇಕೆಂದು ಅಂತಾ ಹೇಳಿಕೆಯ ನೀಡಿದ್ದರ ಸಾರಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡು ಬಗ್ಗೆ ವರದಿ.

 ಮಹಿಳಾ ಪೊಲಿಸ್ ಠಾಣೆ : ದಿನಾಂಕ ೨೯.೦೪.೨೦೨೧ ರಂದು ಬೆಳಿಗ್ಗೆ ೧೧ ಗಂಟೆಗೆ ಫರ‍್ಯಾದಿ ಶ್ರೀಮತಿ ಭುವನೇಶ್ವರಿ ಗಂಡ ಅಮರೇಶ ಸಂಪAಗಿ ವಯಾ|| ೨೦ ವರ್ಷ ಜಾ|| ವಡ್ಡರ ಉ|| ಮನೆಗೆಲಸ ಸಾ|| ಹೊಸ ಹೆಬ್ಬಾಳ ತಾ|| ಕಾಳಗಿ ಜಿ|| ಕಲಬುರಗಿ ಇವರು ಠಾಣೆಗೆ ಹಾಜರಾಗಿ ದೂರು ಸಲ್ಲಿಸಿದ್ದು, ಸದರಿ ದೂರಿನ ಸಾರಾಂಶ ಏನೆಂದರೆ, ಅಮರೇಶ ತಂದೆ ದೇವಿಂದ್ರ ಸಂಪAಗಿ ಸಾ|| ಮರ್ತೂರ ತಾ|| ಶಹಬಾದ ಜಿ|| ಕಲಬುರಗಿ ಇವರು ಮತ್ತು ನಾನು ಪರಸ್ಪರ ಪ್ರೀತಿಸಿ ದಿನಾಂಕ ೨೯.೦೩.೨೦೧೭ ರಂದು ಮದುವೆ ಮಾಡಿಕೊಂಡಿದ್ದು, ಈಗ ನನಗೆ ರುತ್ವಿಕ್ ಅಂತಾ ೩ ವರ್ಷದ ಒಬ್ಬ ಗಂಡು ಮಗ ಇರುತ್ತಾನೆ. ಮದುವೆಯಾದ ನಂತರ ನಾನು ಮತ್ತು ನನ್ನ ಗಂಡ ಅಮರೇಶ ಇಬ್ಬರು ಕಲಬುರಗಿ ನಗರದ ಜಯನಗರದಲ್ಲಿ ಬಾಡಿಗೆ ಮನೆ ಮಾಡಿಕೊಂಡು ವಾಸವಾಗಿದ್ದೆವು. ಕೆಲವು ದಿವಸ ನನ್ನ ಗಂಡ ನನ್ನ ಜೊತೆ ಸರಿಯಾಗಿ ಇದ್ದಂತೆ ಮಾಡಿ ನಂತರ ನನಗೆ ದಿನಾಲೂ ವಿನಾಕಾರಣ ತಕರಾರು ಮಾಡುತ್ತಾ ಹೊಡೆಬಡೆ ಮಾಡಲು ಹತ್ತಿದನು. ವಾರಕ್ಕೆ ಒಮ್ಮೆ ಮನೆಗೆ ಬಂದು ಕುಡಿದ ಅಮಲಿನಲ್ಲಿ ನನಗೆ ರಂಡಿ ಭೋಸಡಿ ಅಂತಾ ಬೈದು ನೀನು ನನ್ನ ಹೆಂಡತಿ ಅಲ್ಲ, ಅಂತಾ ಜಗಳ ತೆಗೆದು ಹೊಡೆಬಡೆ ಮಾಡುತ್ತಿದ್ದನು. ನನ್ನ ಬಾಣಂತನದ ಸಂದAರ್ಭದಲ್ಲಿ ಕಲಬುರಗಿಯ ಸರಕಾರಿ ಆಸ್ಪತ್ರೆಯಲ್ಲಿ ಸಿಜೇರಿಯನ್ ಮೂಲಕ ಒಂದು ಗಂಡು ಮಗುವಿಗೆ ಜನ್ಮ ನೀಡಿದೆ. ನನ್ನ ಬಾಣಂತನ ಆದ ನಂತರ ನನ್ನ ಗಂಡ ನನ್ನ ಅತ್ತೆ ಶರಣಮ್ಮಾ, ನನ್ನ ಗಂಡನ ದೊಡ್ಡಮ್ಮಾ ಯಂಕುಬಾಯಿ, ನಾದಿನಿ ವಿದ್ಯಾ ಗಂಡ ಗಣೇಶ ಮತ್ತು ಅವಳ ಗಂಡ ಗಣೇಶ ಇವರೆಲ್ಲಾ ಸೇರಿ ನನಗೆ ಬಾಯಿಗೆ ಬಂದ ಹಾಗೆ ಮಾತನಾಡಿ ಹೊಡೆದು ಬಡೆದು, ನಿಮ್ಮ ಮನೆಯಿಂದ ದುಡ್ಡು ತೆಗೆದುಕೊಂಡು ಬಾ ಅಂತಾ ನನಗೆ ಮತ್ತು ನನ್ನ ಮಗುವಿಗೆ ಸಾಯಿಸುವದಾಗಿ ಪದೇ ಪದೇ ಬೆದರಿಕೆ ಹಾಕುತ್ತಿದ್ದಾರೆ. ಅವರೆಲ್ಲಾ ಸೇರಿ ನನ್ನ ಗಂಡನಿಗೆ ಇಲ್ಲ ಸಲ್ಲದ ಮಾತು ಕಲಿಸಿ ನನ್ನಿಂದ ದೂರ ಮಾಡಿ, ಬೇರೆ ಯಾವುದೋ ಹೆಂಗಸಿನೊAದಿಗೆ ದಿನಾಂಕ ೨೯.೦೬.೨೦೨೦ ರಂದು ೨ನೇ ಮದುವೆ ಮಾಡಿರುತ್ತಾರೆ. ಕಾರಣ ನನಗೆ ದೈಹಿಕ ಮತ್ತು ಮಾನಸಿಕ ಕಿರುಕುಳ ನೀಡಿದ ನನ್ನ ಗಂಡ, ಅತ್ತೆ, ಗಂಡನ ದೊಡ್ಡಮ್ಮಾ, ನಾದಿನಿ ಹಾಗೂ ನಾದಿನಿಯ ಗಂಡ ಗಣೇಶ ಹಾಗೂ ನನ್ನ ಗಂಡನೊAದಿಗೆ ೨ನೇ ಮದುವೆ ಮಾಡಿಕೊಂಡಿರುವ ಹೆಣ್ಣುಮಗಳ ಮೇಲೆ ಕಾನೂನು ರೀತಿಯ ಕ್ರಮ ಕೈಕೊಳ್ಳಬೇಕು ಅಂತಾ ಸಲ್ಲಿಸಿದ ದೂರಿನ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ.೧೦೯/೨೦೨೧ ಕಲಂ  ೪೯೮(ಎ) ೩೨೩ ೫೦೪ ೫೦೬ ೧೦೯ ೪೯೪ ಸಂಗಡ ೧೪೯ ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು. ಸದರಿ ಪ್ರಕರಣದ ಫರ‍್ಯಾದಿ ಶ್ರೀಮತಿ ಭುವನೇಶ್ವರಿ ಇವರು ಇಂದು ಠಾಣೆಗೆ ಹಾಜರಾಗಿ ಲಿಖಿತ ರೂಪದಲ್ಲಿ ತನ್ನ ಮುಂದುವರೆದ ಹೇಳಿಕೆ ಸಲ್ಲಿಸಿದ್ದನ್ನು ಸ್ವೀಕರಿಸಿಕೊಂಡಿದ್ದು, ಸದರಿ ಹೇಳಿಕೆ ಸಾರಾಂಶ ಏನೆಂದರೆ, ದಿನಾಂಕ ೨೩.೦೨.೨೦೧೮ ರಂದು ತಾನು ಅಪ್ರಾಪ್ತ ವಯಸ್ಸಿನವಳಾಗಿದ್ದಾಗ ಅಮರೇಶ ಮತ್ತು ತಿರುಪತಿ ಇವರು ತನ್ನನ್ನು ಅಪಹರಿಸಿ ಒಂದು ರೂಮಿನಲ್ಲಿ ಕೂಡಿಹಾಕಿ ಅಮರೇಶ ಇತನು ತನ್ನೊಂದಿಗೆ ಬಲಾತ್ ಸಂಭೋಗ ಮಾಡಿ ಮರ್ತೂರಿನ ತನ್ನ ಮನೆಗೆ ಕರೆದುಕೊಂಡು ಹೋಗಿ, ತನ್ನ ಕುಟುಂಬದವರಾದ ಶರಣಮ್ಮಾ, ವಿದ್ಯಾಶ್ರೀ, ಗಣೇಶ, ತಿರುಪತಿ ಇವರೆಲ್ಲರೂ ಸೇರಿ ಅಮರೇಶ ಇತನೊಂದಿಗೆ ನನ್ನ ಬಾಲ್ಯ ವಿವಾಹ ಮಾಡಿ,  ನಂತರದ ದಿನಗಳಲ್ಲಿ ನನಗೆ ವರದಕ್ಷಿಣೆಗಾಗಿ ಪೀಡಿಸಿ ದೈಹಿಕ ಮತ್ತು ಮಾನಸಿಕ ಕಿರುಕುಳ ನೀಡಿ ನನಗೆ ಮತ್ತು ನನ್ನ ಮಗುವಿಗೆ ಮನೆಯಿಂದ ಹೊರಗೆ ಹಾಕಿರುತ್ತಾರೆ ಸದರಿಯವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಅಂತಾ ಸಲ್ಲಿಸಿದ ಹೇಳಿಕೆ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

ಇತ್ತೀಚಿನ ನವೀಕರಣ​ : 13-07-2021 01:08 PM ಅನುಮೋದಕರು: ADMIN


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕಲಬುರಗಿ ನಗರ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080