ಅಭಿಪ್ರಾಯ / ಸಲಹೆಗಳು

ಸಂಚಾರಿ ಪೊಲೀಸ್ ಠಾಣೆ-೨ :-ಇಂದು ಮಾನ್ಯರವರಲ್ಲಿ ಅರಿಕೆ ಮಾಡಿಕೊಳ್ಳುವುದೆನೆಂದರೆ,  ಇಂದು ದಿನಾಂಕ ೦೪/೦೮/೨೦೨೧ ರಂದು ೭:೦೦ ಎ.ಎಮ್ ಕ್ಕೆ ಶ್ರೀಮತಿ ಕವಿತಾ ಗಂಡ ರಾಜೆಂದ್ರ ಮರ‍್ಥಂಡಯ್ಯ ವಯಃ ೩೭ ವರ್ಷ ಜಾತಿಃ ಮರಾಠಾ ಉಃ ಆಶಾ ಕಾರ್ಯಕರ್ತೆ ಸಾಃ ಧುತ್ತರಗಾಂವ ಹಾ.ವಃ ಧರ್ಮವಾಡಿ ತಾಃ ಆಳಂದ ಜಿಲ್ಲಾಃ ಕಲಬುರಗಿ ಇವರು ಪೊಲೀಸ್ ಠಾಣೆಗೆ ಹಾಜರಾಗಿ ಒಂದು ಹೇಳಿಕೆ ಫರ‍್ಯಾದಿ ನಿಡಿದ್ದು ಸಾರಂಶವೆನೆಂದರೆ, ನಾನು ಧರ್ಮವಾಡಿಯಲ್ಲಿ ಆಶಾ ಕಾರ್ಯಕರ್ತೆ ಅಂತಾ ಕೆಲಸ ಮಾಡಿಕೊಂಡಿರುತ್ತೆನೆ. ನಮ್ಮ ತಂದೆ ತಾಯಿಯವರಿಗೆ ನಾವು ಐದು ಜನ ಹೆಣ್ಣು ಮಕ್ಕಳು ಮತ್ತು ಒಬ್ಬನು ಗಂಡು ಮಗನಿದ್ದು, ಗಂಡು ಮಗನಾದ ತಮ್ಮ ಕಿಶೋರ ವಯಃ ೨೮ ವರ್ಷದವನಿದ್ದು, ಈತನು ಸುಂಟನೂರ ಗ್ರಾಮದಲ್ಲಿ ಕಿರಾಣಿ ಅಂಗಡಿಯನ್ನು ಇಟ್ಟಿಕೊಂಡು ವ್ಯಾಪಾರ ಮಾಡಿಕೊಂಡಿರುತ್ತಾನೆ. ಹೀಗಿದ್ದು, ಎಂದಿನಂತೆ ತಮ್ಮ ಕಿಶೋರ ಈತನು ಸುಂಟನೂರ ಗ್ರಾಮದಲ್ಲಿಟ್ಟಿರುವ ಕಿರಾಣಿ ಅಂಗಡಿಗೆ ಕೆಲಸಕ್ಕಾಗಿ ಹೋದನು. ಮುಂದೆ ರಾತ್ರಿ ೧೧:೦೦ ಗಂಟೆಯಾದರು ಮನೆಗೆ ಬರಲಿಲ್ಲಾ. ಈಗ ಬರಬಹುದೆಂದು ಮನೆಯಲ್ಲಿದ್ದಾಗ ಮಧ್ಯರಾತ್ರಿ ಇಂದು ದಿನಾಂಕ ೦೪/೦೮/೨೦೨೧ ರಂದು ೦೦:೩೦ ಗಂಟೆ ಸುಮಾರಿಗೆ ನಮ್ಮ ಗ್ರಾಮದ ಮಹಾದೇವ ತಂದೆ ಚಂದ್ರಕಾಂತ ಜಮಾದಾರ ಈತನು ನಮ್ಮ ಮನೆಗೆ ಬಂದು ವಿಷಯ ತಿಳಿಸಿದ್ದೆನೆಂದರೆ, ಈಗ ತಾನೆ ಕಾಶಿನಾಥ ಬಿರಾದಾರ ಈತನು ಫೋನ್ ಮಾಡಿರುತ್ತಾನೆ. ನಿಮ್ಮ ತಮ್ಮ ಕಿಶೋರ ಈತನು ತನ್ನ ಪಲ್ಸರ ಮೋಟರ ಸೈಕಲ ನಂ. ಕೆಎ ೩೨ ಇ.ಎಮ್ ೯೩೯೨ ನೇದ್ದರ ಮೇಲೆ ಕಲಬುರಗಿ ಮರ‍್ಗಕಡೆಯಿಂದ ಆಳಂದ ರೋಡಿನ ಊರಿನ ಕಡೆಗೆ ಬರುವಾಗ ನಿನ್ನೆ ದಿನಾಂಕ ೦೩/೦೮/೨೦೨೧ ರಂದು ರಾತ್ರಿ ೧೧:೪೫ ಗಂಟೆ ಸುಮಾರಿಗೆ ಸಾವಳಗಿ ಕ್ರಾಸಿನ ಸಮೀಪ ತೊಗರೆ ನಾಡು ಬರ‍್ಡನ ಹತ್ತೀರ ಆತನು ಬರುತ್ತಿರುವಾಗ ಹಿಂದಿನಿಂದ ಒಂದು ಕ್ರಿಟಾ ಕಾರ ನಂ. ಕೆಎ ೦೩ ಎನ್.ಎ ೮೨೪೦ ನೇದ್ದರ ಚಾಲಕನು ಅತಿವೇಗದಿಂದ ಮತ್ತು ಅಲಕ್ಷತನದಿಂದ ನಡೆಯಿಸಿ ಕಿಶೋರನ ಮೋಟರ ಸೈಕಲ ಹಿಂಭಾಗಕ್ಕೆ ಅಪಘಾತ ಪಡಿಸಿದಕ್ಕೆ ಆತನು ಭಾರಿಗಾಯಗೊಂಡು ಬಿದ್ದಿರುವುದನ್ನು ಗ್ರಾಮದ ಕಾಶಿನಾಥ ಬಿರಾದಾರ ಹಾಗು ಉಮೇಶ ಗೋಳಾ ಇವರು ನೋಡಿ ಮಾಹಿತಿಯನ್ನು ತಿಳಿಸಿರುತ್ತಾರೆ ಅಂತಾ ಮಾಹಿತಿ ತಿಳಿಸಿದಕ್ಕೆ ಕೂಡಲೆ ನಾನು ಗಾಬರಿಗೊಂಡು ನಾನು ಮತ್ತು ಮಹಾದೇವ ಜಮಾದಾರ ಇಬ್ಬರು ಕೂಡಿಕೊಂಡು ರಾತ್ರಿ ಸ್ಧಳಕ್ಕೆ ಹೋಗಿ ನೋಡಲಾಗಿ ನಮ್ಮ ತಮ್ಮ ಕಿಶೋರ ಈತನು ಆಳಂದ ರೋಡಿಗೆ ಹೋಗುವ ಎಡಭಾಗಕ್ಕೆ ಮೋಟರ ಸೈಕಲ ಸಮೇತ ರೋಡಿನ ತಗ್ಗಿನಲ್ಲಿ ಬಿದ್ದಿದ್ದು ಆತನ ತಲೆಯ ಭಾಗಕ್ಕೆ ಮತ್ತು ಮುಖದ ಭಾಗಕ್ಕೆ ಭಾರಿ ಪ್ರಮಾಣದ ಗಾಯವಾಗಿ ಮೌಂಸ ಖಂಡ ಹೊರಬಂದಿದ್ದು, ಅಲ್ಲದೆ ಎರಡು ಕಾಲಿನ ಮೊಳಕಾಲಿನ ಕೆಳಗೆ ಕಾಲು ಮುರಿದಿದ್ದು ಹಾಗು ಕೈಗೆ ಕೂಡಾ ಗಾಯಗಳಾಗಿದ್ದು, ಸ್ಧಳದಲ್ಲಿ ಮೃತ ಪಟ್ಟಿದನು. ಅಲ್ಲಿಯೆ ಒಂದು ಕ್ರೀಟಾ ಕಾರ ನಂ. ಕೆಎ ೦೩ ಎನ್.ಎ ೮೨೪೦ ನೇದ್ದು ಇತ್ತು. ಅಲ್ಲಿಯೇ ಇರುವ ಕಾಶಿನಾಥ ಬಿರಾದಾರ ಮತ್ತು ಉಮೇಶ ಗೋಳಾ ಇವರಿಗೆ ವಿಚಾರಿಸಲು ಕಿಶೋರ ಈತನು ಬಹುಶ ರಾತ್ರಿ ಸುಂಟನೂರದಿಂದ ಕಲಬುರಗಿಗೆ ಬರಬೇಕೆಂದು ಬರುವಾಗ ಆಕಸ್ಮಿಕವಾಗಿ ಮರಳಿ ಪುನಃ ಸುಂಟನೂರಕ್ಕೆ ಹೋಗಬೇಕೆಂದು ಹೋಗುವಾಗ ಕಲಬುರಗಿ ರೋಡಿನ ಕಡೆಯಿಂದ ಈ ಕಾರಿನ ಚಾಲಕನು ಅಪಘಾತ ಪಡಿಸಿರುವುದಾಗಿ ತಿಳಿಸಿರುತ್ತಾರೆ. ಅಲ್ಲಿ ಕಾರಿನ ಚಾಲಕನು ಇರಲಿಲ್ಲಾ. ಅಪಘಾತದ ನಂತರ ಕಾರನ್ನು ಬಿಟ್ಟು ಓಡಿ ಹೋಗಿರುತ್ತಾನೆ. ಕಾರಣ ನನ್ನ ತಮ್ಮ ಕಿಶೋರ ಈತನು ತನ್ನ ಮೋಟರ ಸೈಕಲ ಮೇಲೆ ರಾತ್ರಿ ೧೧:೦೦ ಗಂಟೆ ನಂತರ ಸುಂಟನೂರದಿಂದ ಕಲಬುರಗಿಗೆ ಬರಬೇಕೆಂದು ಬರುವಾಗ ಆಕಸ್ಮಿಕವಾಗಿ ಮರಳಿ ಸುಂಟನೂರ ಕಡೆಗೆ ಬರಬೇಕೆಂದು ಆಳಂದ ರೋಡಿನ ತೊಗರೆ ನಾಡು ಬೊಡರ್ಿನ ಹತ್ತೀರ ದಿನಾಂಕ ೦೩/೦೮/೨೦೨೧ ರಂದು ರಾತ್ರಿ ೧೧:೪೫ ಗಂಟೆಗೆ ಸುಮಾರಿಗೆ ಬರುತ್ತಿರುವಾಗ ಹಿಂದಿನಿಂದ ಕ್ರಿಟಾ ಕಾರ ನಂ. ಕೆಎ ೦೩ ಎನ್.ಎ ೮೨೪೦ ನೇದ್ದರ ಚಾಲಕನು ಅತಿವೇಗದಿಂದ ಮತ್ತು ಅಲಕ್ಷತನದಿಂದ ನಡೆಯಿಸಿ ಮೋಟರ ಸೈಕಲ ಹಿಂಭಾಗಕ್ಕೆ ಡಿಕ್ಕಿ ಪಡಿಸಿದ್ದರಿಂದ ಈ ಘಟನೆ ಜರುಗಿದ್ದು, ಕಾರ ಚಾಲಕನ ವಿರುದ್ಧ ಕಾನೂನು ಪ್ರಕಾರ ಕ್ರಮ ಕೈಗೊಳ್ಳಬೇಕು ಮತ್ತು ವಿಚಾರಣೆ ಮಾಡಿಕೊಂಡು ಈಗ ತಡಮಾಡಿ ಬಂದು ಫರ‍್ಯಾದಿ ನೀಡಿರುತ್ತೆನೆ ಅಂತಾ ಪಿರ್ಯಾದಿ ಹೇಳಿಕೆ ಸಾರಂಶದ ಮೇಲಿಂದ ಪ್ರಕಾರ ಗುನ್ನೆ ದಾಖಲಿಸಿಕೊಂಡ ಬಗ್ಗೆ ವರದಿ .

 ಅಶೋಕ  ನಗರ ಪೊಲೀಸ್ ಠಾಣೆ :-ಇಂದು ದಿನಾಂಕ:೦೪.೦೮.೨೦೨೧ ರಂದು ೧೦:೦೦ ಎ.ಎಂ.ಕ್ಕೆ ಫರ‍್ಯಾದಿ ಶ್ರೀಮತಿ ಅನ್ವರಿಖಾನಾ ಗಂಡ ಇಕ್ರಾಮೋದ್ದಿನ್ ರೋತೆ ವಯ: ೪೦ ವರ್ಷ ಜಾ: ಮುಸ್ಲಿಂ ಉ: ಮನೆ ಕೆಲಸ ಸಾ|| ರಜ್ವಿ ರೋಡ ನೂರಾನಿ ಮೊಹಲ್ಲಾ ಆಳಂದ  ಇವರು  ಠಾಣೆಗೆ  ಹಾಜರಾಗಿ  ಲಿಖಿತ  ದೂರು  ಸಲ್ಲಿಸಿದ್ದರ ಸಾರಾಂಶವೆನೆಂದರೆ, ನನ್ನ ತವರು ಮನೆಯು ರಾಯಚೂರ ಇದ್ದು ನನಗೆ ಕಲಬುರಗಿ ಜಿಲ್ಲೆಯ  ಆಳಂದ ಪಟ್ಟಣದ ಇಕ್ರಾಮೋದ್ದಿನ್ ರೋತೆ ಎಂಬುವರೊಂದಿಗೆ ಲಗ್ನಮಾಡಿ ಕೊಟ್ಟಿರುತ್ತಾರೆ.  ನನಗೆ ಮುಕ್ತಿಯಾರ ಅಹ್ಮದ ಅಂತ ೧೦ ವರ್ಷದ ಮಗನಿದ್ದು ಅವನಿಗೆ ವಿದ್ಯಾಭ್ಯಾಸಕ್ಕಾಗಿ ನನ್ನ ದೊಡ್ಡ  ಅಕ್ಕ ಅಕ್ಬರಿ ಖಾನಾ ಇವಳ ಹತ್ತಿರ  ರಾಯಚೂರಿನಲ್ಲಿ  ಇಟ್ಟಿರುತ್ತೇನೆ. ನನ್ನ ಅಕ್ಕನ ಲಗ್ನವಾದ ಸ್ವಲ್ಪ  ದಿನಗಳ ನಂತರ ಅವಳ ಗಂಡನಿಂದ  ಬೇರೆಯಾಗಿದ್ದು  ಅವಳು ಟೇಲರಿಂಗ್  ಕೆಲಸ  ಮಾಡಿಕೊಂಡು  ಇರುತ್ತಾಳೆ. ನಾನು ಆಗಾಗ ನಮ್ಮ  ಅಕ್ಕ ಮತ್ತು  ಮಗನ ಭೇಟಿಗಾಗಿ  ರಾಯಚೂರಿಗೆ  ಹೋಗಿ  ಬರುತ್ತಿರುತ್ತೇನೆ. ನನ್ನ ಗಂಡ  ಇಕ್ರಾಮೋದ್ದಿನ್  ಇತನು ಲಾರಿ  ಡ್ರೈವರ ಕೆಲಸ ಮಾಡಿಕೊಂಡು ಇರುತ್ತದೆ. ನಾನು ದಿನಾಂಕ:೨೦.೦೭.೨೦೨೧ ರಂದು  ಮಗನಿಗೆ ಭೇಟಿಯಾಗಲು ನನ್ನ  ಅಕ್ಕನ ಹತ್ತಿರ  ರಾಯಚೂರಿಗೆ  ಹೋಗಿರುತ್ತೇನೆ. ನಂತರ ದಿನಾಂಕ:೨೮.೦೭.೨೦೨೧ ರಂದು ನಾನು ಮದ್ಯಾನ್ಹ ರಾಯಚೂರಿನಿಂದ ನನ್ನ ಮಗನೊಂದಿಗೆ ಸಾಯಂಕಾಲ ೦೫:೦೦ ಗಂಟೆ ಸುಮಾರಿಗೆ  ಕಲಬುರಗಿ ಕೇಂದ್ರ  ಬಸ್  ನಿಲ್ದಾಣಕ್ಕೆ  ಬಂದಿರುತ್ತೇನೆ. ಇಲ್ಲಿ ಬಂದ ನಂತರ ಆಳಂದಕ್ಕೆ  ಹೋಗುವ ಸಲುವಾಗಿ ಬಸ್ ದಾರಿಕಾಯುತ್ತಾ ನಾನು ನನ್ನ ಮಗ ಮತ್ತು ನನ್ನೊಂದಿಗೆ  ಇದ್ದ ಲಗೇಜ ಬ್ಯಾಗ ಇಟ್ಟುಕೊಂಡು  ಕುಳಿತಿದ್ದೆನು. ನನ್ನ ಪಕ್ಕದಲ್ಲೆ  ಅಂದಾಜು ೩೦ ರಿಂದ ೩೫ ವರ್ಷದ ಒಬ್ಬ ಹೆಣ್ಣು ಮಗಳು ಕುಳಿತಿದ್ದಳು, ನನ್ನ ಮಗನು ನನಗೆ  ಬಾಯಾರಿಕೆ ಆಗುತ್ತಿದೆ ನೀರು ಬೇಕು ಅಂತ  ಕೇಳಿದಾಗ  ನಾನು  ಅವನಿಗೆ ನೀರು ಕೊಡಿಸಲು ಕರೆದುಕೊಂಡು  ಹೋಗಿರುತ್ತೇನೆ.  ನಾನು  ನೀರು  ತರಲು  ನನ್ನ ಲಗೇಜ ಬ್ಯಾಗನ್ನು  ಅಲ್ಲಿಯೇ ಬಿಟ್ಟು  ಇದ್ದನು ನೋಡಿಕೊಳ್ಳಿ  ಅಂತ  ನನ್ನ  ಪಕ್ಕದಲ್ಲಿ ಕುಳಿತ ಹೆಣ್ಣು  ಮಗಳಿಗೆ  ಹೋಗಿರುತ್ತೇನೆ. ಸ್ವಲ್ಪ  ಸಮಯದ  ನಂತರ ನಾನು ಬಂದು  ನೋಡಲು ನನ್ನ ಲಗೇಜ ಬ್ಯಾಗ ಇದ್ದಿರುವುದಿಲ್ಲ ಅದನ್ನು ನೋಡಿಕೊಳ್ಳಿ ಅಂತ  ಹೇಳಿದ್ದ  ಹೆಣ್ಣು ಮಗಳು  ಸಹ ಇದ್ದಿರುವುದಿಲ್ಲ.  ಅದೆ ಅಪರಿಚಿತ ಹೆಣ್ಣು  ಮಗಳು ನನ್ನ  ಲಗೇಜ ಬ್ಯಾಗ  ಕಳ್ಳತನ ಮಾಡಿಕೊಂಡು ಹೋಗಿದ್ದು  ಅದರಲ್ಲಿ  ೧) ನಗದು  ಹಣ  ೧೫,೦೦೦/- ೨) ಒಂದು ಜೊತೆ ಕಿವಿ ಓಲೆ ಅ.ಕಿ. ೧೫,೦೦೦/-  ಅಲ್ಲದೆ  ನನ್ನ  ಮತ್ತು  ೩) ನನ್ನ ಗಂಡ  ಹಾಗೂ ಮಗನ  ಮೂರು ಜನರ   ಮೂಲ  ಆಧಾರ ಕಾರ್ಡಗಳು ೪)  ಫೆಡರಲ್  ಬ್ಯಾಂಕಿನ ನನ್ನ  ಎ.ಟಿ.ಎಂ. ಕಾರ್ಡ ಮತ್ತು ಪಾಸ ಬುಕ್  ೫) ನಮ್ಮ ಕುಟುಂಬದ  ಬಿ.ಪಿ.ಎಲ್. ರೇಷನ್ ಕಾರ್ಡ೬) ನನ್ನ ಪಾನ ಕಾರ್ಡ ೭) ನನ್ನ ಗಂಡನ ಹೆಸರಿನಿಂದ ಇದ್ದ ಆಳಂದ ಪುರ ಸಭೆ  ಕರ‍್ಯಾದಲಯದ ಮನೆ ಅಥವಾ ನಿವೇಶನದ  ರ‍್ಗಾವಣೆ  ಪತ್ರ ಮೂಲ ಪ್ರತಿ  ಇವುಗಳು  ಇರುತ್ತವೆ. ನನ್ನ ಲಗೇಜ ಬ್ಯಾಗ ಕಳ್ಳತನ ಮಾಡಿದ ಹೆಣ್ಣು ಮಗಳ  ಹೆಸರು ವಿಳಾಸ ಗೊತ್ತಿರುವುದಿಲ್ಲ  ಅವಳನ್ನು ನೋಡಿದರೆ ಗುರುತ್ತಿಸುತ್ತೇನೆ. ನನ್ನ ಬ್ಯಾಗ ಕಳ್ಳತನ  ಆಗಿರುವ  ಬಗ್ಗೆ  ನನ್ನ ಗಂಡ  ಇಕ್ರಾಮೋದ್ದಿನ್  ಇವರೊಂದಿಗೆ ವಿಚಾರಿಸಿ  ಇಬ್ಬರು  ಕೂಡಿಕೊಂಡು ಇಂದು ಠಾಣೆಗೆ  ತಡವಾಗಿ ಬಂದು  ದೂರು ಸಲ್ಲಿಸುತ್ತಿದ್ದು,  ದಿನಾಂಕ:೨೮.೦೭.೨೦೨೧ ರಂದು  ಸಾಯಂಕಾಲ ೦೫:೦೦ ಗಂಟೆ ಸುಮಾರಿಗೆ ಕಲಬುರಗಿ  ಕೇಂದ್ರ  ಬಸ್  ನಿಲ್ದಾಣದಲ್ಲಿ ನನ್ನ ಲಗೇಜ  ಬ್ಯಾಗ  ಕಳ್ಳತನ  ಮಾಡಿರುವ ಹೆಣ್ಣು ಮಗಳನ್ನು ಪತ್ತೆಮಾಡಿ ಮೇಲೆ ನಮೂದಿಸಿದ  ನನ್ನ  ವಸ್ತುಗಳನ್ನು   ನನಗೆ  ದೊರಕಿಸಿ ಕೊಡಲು ವಿನಂತಿ ಅಂತ ವಗೈರೆಯಾಗಿ  ಇದ್ದ  ಅರ್ಜಿ  ಸಾರಾಂಶದ ಮೇಲಿಂದ  ಪ್ರಕಾರ ಪ್ರಕರಣ ದಾಖಲಿಸಿಕೊಂಡ ಬಗ್ಗೆ ವರದಿ.

 

ಇತ್ತೀಚಿನ ನವೀಕರಣ​ : 05-08-2021 02:18 PM ಅನುಮೋದಕರು: ADMIN


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕಲಬುರಗಿ ನಗರ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080