ಅಭಿಪ್ರಾಯ / ಸಲಹೆಗಳು

ಮಹಿಳಾ ಠಾಣೆ  -  ಇಂದು ದಿನಾಂಕ ೦೮.೦೭.೨೦೨೧ ರಂದು ಬೆಳಿಗ್ಗೆ ೧೧-೩೦ ಗಂಟೆಗೆ ಫರ‍್ಯಾದಿ ಶ್ರೀಮತಿ ಸುರೇಖಾ ಗಂಡ ವೆಂಕಟೇಶ ನಾಗೇಶ್ವರ ವಯಾ|| ೩೦ ವರ್ಷ ಉ|| ಮನೆಗೆಲಸ ಸಾ|| ನಯಾ ಕಮಾನ ಬೀದರ ಹಾ.ವ. ವಿಶ್ವರಾಧ್ಯ ಕಾಲೊನಿ, ಖಾದ್ರಿ ಚೌಕ ಆಳಂದ ರೋಡ ಕಲಬುರಗಿ ಇವರು ಠಾಣೆಗೆ ಹಾಜರಾಗಿ ದೂರು ಸಲ್ಲಿಸಿದ್ದು, ಸದರಿ ದೂರಿನ ಸಾರಾಂಶ ಏನೆಂದರೆ, ದಿನಾಂಕ ೨೯.೦೫.೨೦೧೯ ರಂದು ವೆಂಕಟೇಶ ತಂದೆ ಪರಶುರಾಮ ನಾಗೇಶ್ವರ ಸಾ|| ಬೀದರ ಇವರೊಂದಿಗೆ ಸಂಪ್ರದಾಯದಂತೆ ನನ್ನ ಮದುವೆಯಾಗಿದ್ದು, ಮದುವೆಯ ಕಾಲಕ್ಕೆ ನನ್ನ ತಂದೆ ವರನ ಮತ್ತು ಅವನ ಮನೆಯವರ ಬೇಡಿಕೆಯಂತೆ ೪ ತೊಲೆ ಬಂಗಾರ, ಗೃಹ ಬಳಕೆ ಸಾಮಾನುಗಳನ್ನು ಕೊಟ್ಟು ಒಟ್ಟು ೮ ಲಕ್ಷ ರೂಪಾಯಿ ಖರ್ಚು ಮಾಡಿ ಕಲಬುರಗಿ ನಗರದ ನಗರೇಶ್ವರ ದೇವಸ್ಥಾನದಲ್ಲಿ ನನ್ನ ತಂದೆ ನನ್ನ ಮದುವೆ ಮಾಡಿಕೊಟ್ಟಿರುತ್ತಾರೆ.    ಮದುವೆಯಾದ ೧೫ ದಿವಸಗಳ ನಂತರ ನನ್ನ ಗಂಡ, ಅತ್ತೆ ಮತ್ತು ನಾದಿನಿಯರಾದ ಶೈಲಜಾ ಮತ್ತು ರಜನಿ ಇವರು ನಿನಗೆ ಅಡುಗೆ ಮಾಡಲು ಬರುವದಿಲ್ಲಾ ಅಂತಾ ದಿನಾಲೂ ನನಗೆ ಮನೆಯಲ್ಲಿ ಮಾನಸಿಕವಾಗಿ ಮತ್ತು ದೈಹಿಕವಾಗಿ ಕಿರುಕುಳ ಕೊಡುತ್ತಾ ನನಗೆ ಊಟ ಹಾಕದೇ ಬೈಯ್ಯುತ್ತಾ ಹೊಡೆಬಡೆ ಮಾಡತ್ತಾ ಬಂದಿರುತ್ತಾರೆ. ನನ್ನ ಅತ್ತೆ ಬಾಲಮಣಿ, ಹಾಗೂ ನಾದಿನಿಯರು ನನಗೆ ನಿನ್ನ ತವರು ಮನೆಯಿಂದ ೪ ಲಕ್ಷ ರೂಪಾಯಿ ಹಣ ಅಥವಾ ಒಂದು ಸ್ಕೂಟಿ, ಮೊಬೈಲ್ ಮತ್ತು ಬಂಗಾರದ ಲಾಕೇಟ ತಂದು ಕೊಡು ಅಂತಾ ಮಾನಸಿಕ ಮತ್ತು ದೈಹಿಕ ಕಿರುಕುಳ ನೀಡುತ್ತಾ ಬಂದಿರುತ್ತಾರೆ. ನಾನು ಕಲಬುರಗಿಯಲ್ಲಿರುವ ನನ್ನ ತವರು ಮನೆಯಲ್ಲಿ ಇದ್ದಾಗ ದಿನಾಂಕ ೦೧.೦೮.೨೦೧೯ ರಂದು ನನ್ನ ಗಂಡ ನನಗೆ ಕರೆಯಲು ಬಂದಾಗ ನನ್ನ ತಂಗಿಯ ಮದುವೆ ಇರುತ್ತದೆ. ನಮಗೆ ಹಣ ಬಂಗಾರ ಬೇಕಾಗಿದೆ ನಿನ್ನ ತಂದೆಯಿAದ ಹಣ ಕೊಡಿಸು ಅಂತಾ ನನ್ನ ಜೊತೆ ಜಗಳ ಮಾಡಿ ಹೊಡೆಬಡೆ ಮಾಡುತ್ತಿರುವಾಗ ನನ್ನ ತಂದೆತಾಯಿ ಬಂದು ಜಗಳ ಬಿಡಿಸಿರುತ್ತಾರೆ. ಮತ್ತೆ ನನ್ನ ಗಂಡ ನನಗೆ ನನ್ನ ನಾದಿನಿಯ ಮದುವೆ ಇದೆ ಅಂತಾ ನನಗೆ ಬೀದರಗೆ ಕರೆದುಕೊಂಡು ಹೋಗಿರುತ್ತಾರೆ. ನನ್ನ ನಾದಿನಿಯ ಮದುವೆಯಾದ ನಂತರ ನನ್ನ ಗಂಡ, ಅತ್ತೆ ನಾದಿನಿಯರು ಇವರೆಲ್ಲಾ ಸೇರಿ ನೀನು ನಿನ್ನ ತಂದೆಯ ಮನೆಯಿಂದ ಏನು ತಂದಿರುವದಿಲ್ಲಾ, ನೀನು ನಮ್ಮ ಮನೆಯಲ್ಲಿ ಇರಬೇಡ ಅಂತಾ ನನಗೆ ಹೊಡೆಬಡೆ ಮಾಡುವುದು, ರಂಡಿ ಭೋಸಡಿ ಅಂತಾ ಬೈಯ್ಯುವುದು, ನನಗೆ ಹೊಡೆದು ಖಲಾಸ ಮಾಡಿ ಹಾಕುತ್ತೇವೆ ಅಂತಾ ಜೀವದ ಬೆದರಿಕೆ ಹಾಕುತ್ತಾ ನನಗೆ ಹಿಂಸೆ ನೀಡಲು ಪ್ರಾರಂಭಿಸಿದರು. ನನ್ನ ಗಂಡನ ಕಾಕಾ ವೆಂಕಟೇಶ ಇತನು ಕೂಡಾ ಆಗಾಗ ನಮ್ಮ ಮನೆಗೆ ಬಂದು ನನ್ನ ಗಂಡ ಮತ್ತು ಅತ್ತೆಗೆ ಇಲ್ಲಸಲ್ಲದ ಮಾತು ಹೇಳಿ ಅವರು ನನಗೆ ಮತ್ತಿಷ್ಟು ಕಿರುಕುಳ ಕೊಡುವಂತೆ ಪ್ರಚೋದನೆ ಮಾಡುತ್ತಾನೆ. ಅಲ್ಲಿಂದ ನಾನು ನನ್ನ ತವರು ಮನೆಯಲ್ಲಿ ಉಳಿದುಕೊಂಡಿರುತ್ತೇನೆ. ದಿನಾಂಕ ೦೬.೦೧.೨೦೨೧ ರಂದು ಮಧ್ಯಾಹ್ನ ೧ ಗಂಟೆಗೆ ನನ್ನ ಗಂಡ ಹಾಗೂ ಗಂಡನ ಮನೆಯವರು ನನ್ನ ತವರು ಮನೆಗೆ ಬಂದು, ನನ್ನ ತಂದೆತಾಯಿಗೆ ಅವಾಚ್ಯ ಶಬ್ದಗಳಿಂದ ಬೈದು, ನನಗೆ ಕೈಯಿಂದ ಹೊಡೆಬಡೆ ಮಾಡಿ ಹೊಡೆಬಡೆ ಮಾಡಿ ಹೊಗಿರುತ್ತಾರೆ.  ಕಾರಣ ನನಗೆ ವರದಕ್ಷಿಣೆ ಹಣದ ಸಲುವಾಗಿ ದೈಹಿಕ ಮತ್ತು ಮಾನಸಿಕ ಕಿರುಕುಳ ನೀಡಿದ ನನ್ನ ಗಂಡ ಅತ್ತೆ ನಾದಿನಿಯರು ಹಾಗೂ ನನ್ನ ಗಂಡನ ಕಾಕಾ ವೆಂಕಟೇಶ ಇವರೆಲ್ಲರ ವಿರುದ್ದ ಕಾನೂನು ಕ್ರಮ ಕೈಕೊಳ್ಳಬೇಕು ಅಂತಾ ಸಲ್ಲಿಸಿದ ದೂರಿನ ಸಾರಾಂಶದ ಮೇಲೆ ಪ್ರಕರಣ ವರದಿಯಾದ  ಬಗ್ಗೆ . 

 ಗ್ರಾಮೀಣ ಠಾಣೆ :- ಇಂದು ದಿನಾಂಕ 11-7-2021 ರಂದು 10-00 ಎ.ಎಂ.ಕ್ಕೆ.ಫಿರ್ಯಾದಿದಾರರಾದ ಗಾಯಾಳು ಶ‍್ರೀ.ಸೈಪನಸಾಬ ತಂದೆ ಇಸ್ಮಾಲಯಿಲಸಾಬ ನದಾಫ ವ|| 32 ವರ್ಷ ಜಾ|| ಮುಸ್ಲೀಮ ಉ|| ಲಾರಿಚಾಲಕ ಸಾ|| ಎಸ್.ಎಮ್. ಕೃಷ್ಣ ಕಾಲನಿ ಡಬರಾಬಾದ ಕಲಬುರಗಿ  ಇವರು ಕಲಬುರಗಿ ಜಿಲ್ಲಾ ಸರಕಾರಿ ಆಸ್ಪತ್ರೆಯಲ್ಲಿ  ಫಿರ್ಯಾದಿ ಹೇಳಿಕೆ ನೀಡಿದ್ದು ಸದರಿ ಫಿರ್ಯಾದಿ ಸಾರಂಶ ಏನೆಂದರೆ  ಟಿ.ಎಮ್.ಸಿ. ಟ್ರಾನ್ಸಪೊರ್ಟದ ಮಳಖೇಡ ಖಾನಸಾಬ ಇವರ ಹತ್ತಿರ ಲಾರಿ ಚಾಲಕ ಕೆಲಸ ಮಾಡಿಕೊಂಡು ಹೆಂಡತಿ ಮಕ್ಕಳೊಂದಿಗೆ ಇರುತ್ತೇನೆ. ಕಳೆದ ನಾಲ್ಕು ದಿವಸದಿಂದ ನನ್ನ ಮಗನಿಗೆ ಆರೋಗ್ಯ ಸರಿ ಇಲ್ಲದ ಕಾರಣ ಮನೆಯಲ್ಲಿರುತ್ತೇನೆ. ನನ್ನ ಮಗನಿಗೆ ಕಲುಬರಿಗಿಯ ಮೋರೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಕುರಿತು ಸೇರಿಕೆ ಮಾಡಿರುತ್ತೇನೆ. ಚಿಕಿತ್ಸೆ ಕುರಿತು ನನಗೆ ಹಣದ ಅವಶ್ಯಕತೆ ಇರುವುದರಿಂದ ನನ್ನ ಗೆಳೆಯ ಶೇಖ ಅಯ್ಯುಬ ತಂದೆ ಮಹಿಬೂಬ  ಈತನ ಹತ್ತಿರ ಕೈಗಡವಾಗಿ ಹಣ ಕೇಳಿದ್ದರಿಂದ ಆತನು ಹಣ ಕೊಡುವದಾಗಿ ಹೇಳಿ ನಾನು ಆಳಂದ ಚೆಕ್ ಪೋಸ್ಟ್ ಹತ್ತಿರ ಇರುವ ಕಾಸಿಂ ಗ್ಯಾರೇಜಗೆ ಬರಲು ತಿಳಿಸಿದರ ಮೇರೆಗೆ ನಾನು ದಿನಾಂಕ 10.07.2021 ರಂದು 10:30 ಪಿ.ಎಮ್. ಸುಮಾರಿಗೆ ರಾಮತೀರ್ಥ ಕ್ರಾಸ ಹತ್ತಿರ ಇರುವ ಕಾಸಿಂ ಗ್ಯಾರೇಜಗೆ ಹೋಗಿದ್ದು ಗ್ಯಾರೇಜ ಎದರುಗಡೆ ಅಯ್ಯಬನು ತನ್ನ ಲಾರಿ ನಂ. ಎ.ಪಿ. 29 ವಿ 1779 ನೇದ್ದನ್ನು ನಿಲ್ಲಿಸಿದ್ದು ಆಗ ನಾನು ಮತ್ತು ಅಯ್ಯೂಬ ಸದರಿ ಲಾರಿಯ ಕ್ಯಾಬಿನನಲ್ಲಿ ಕುಳಿತು ಇಬ್ಬರು ಸೇರಿ ಊಟ ಮಾಡಿ ನಂತರ ದಿನಾಂಕ 11.07.2021 ರಂದು 00.30 ಎ.ಎಮ್ ಸುಮಾರಿಗೆ ಲಾರಿಯ ಕ್ಯಾಬಿನನಿಂದ ಕೆಳಗೆ ಇಳಿಯುತ್ತಿದ್ದಾಗ ರಿಂಗ್ ರೋಡ ಕಡೆಯಿಂದ 2 ಮೋಟಾರ್ ಸೈಕಲ್ ಮೇಲೆ ನಾಲ್ಕು ಜನ ಬಂದವರೇ ನನಗೆ ಅದರಲ್ಲಿ ಒಬ್ಬನು ಹಣ ಕೊಡು ಅಂತ ಕೇಳಿದನು ಆಗ ನಾನು ಹಣ ಕೊಡುವುದಿಲ್ಲ ಅಂತ ಅಂದಾಗ ಒಬ್ಬನು ನನಗೆ ಚಾಕುದಿಂದ ಹೊಡೆಯಲು ಬಂದಾಗ ನಾನು ಅವನ ಕೈ ಬಿಗಿಯಾಗಿ ಹಿಡಿದುಕೊಂಡೆನು. ಆಗ ಆತನ ಸಂಗಡ ಇದ್ದ ಇನ್ನೊಬ್ಬನು ತನ್ನ ಹತ್ತಿರ ಇದ್ದ ರಾಡಿನಿಂದ ನನ್ನ ತಲೆಯ ಮೇಲೆ ಹೊಡೆದನು ಮತ್ತು ಬಲ ಭುಜಕ್ಕೆ ಹಾಗೂ ಎಡಗೈ ಮೊಳಕೈಗೆ ಹೊಡೆದನು ನಂತರ ಚಾಕು ಹೊಡೆಯಲು ಬಂದವನು ನನ್ನಿಂದ ಬಿಡಿಸಿಕೊಂಡು ಅದೇ ಚಾಕುದಿಂದ ಹೊಡೆದಾಗ ನನ್ನ ಬಲ ಟೊಂಕದ ಹತ್ತಿರ ಹಾಗೂ ನನ್ನ ಬಲಗೈ ನಡು ಬೆರಳಿಗೆ ಚಾಕು ಹತ್ತಿದರಿಂದ ರಕ್ತಗಾಯವಾಯಿತು.ನನ್ನ ಹತ್ತಿರ ಇದ್ದ 3೦00/-ರೂಪಾಯಿ ನಗದು ಹಣ ಮತ್ತು ಸ್ಯಾಮಸ್ಯಾಂಗ ಮೋಬೈಲ್ ಅಕಿ.3,000/-ರೂಪಾಯಿ ನೇದ್ದನ್ನು ಕಸಿದುಕೊಂಡರು.ಆಗ ನಾನುಚೀರಾಡುವಾಗ ಲಾರಿಕ್ಯಾಬಿನನಲ್ಲಿದ್ದ ಅಯ್ಯೂಬ ಈತನು ಕೆಳಗೆ ಇಳಿದು ಬಂದಾಗ ಇನ್ನೊಂದು ಮೋಟಾರ ಸೈಕಲ ಮೇಲೆ ಇದ್ದವರು ಅಯ್ಯೂಬನಿಗೆ ತಡೆದು ಅವನಿಗೂ ಕೂಡ ಚಾಕು ತೋರಿಸಿಹೆದರಿಸಿ ಅವನ ಹತ್ತಿರ ಇದ್ದ ನಗದು 6000/-ರೂಪಾಯಿ ಒಂದು ವಿವೊ ಕಂಪನಿಯ ಮೋಬೈಲ್ ಅ.ಕಿ. 5,000/-ರೂಪಾಯಿ ಬೆಲೆ ಬಾಳುವುದು ಕಸಿಕೊಂಡಿದ್ದು ಆಗ ನಾವು ಚೀರಾಡುವಾಗ ತಮ್ಮ ಮೋಟಾರ ಸೈಕಲ್ ಮೇಲೆಓಡಿಹೋದರು.ಘಟನೆಯಗಾಭರಿಯಿಂದಮೋಟಾರಸೈಕಲನಂಬರನೋಡಿರುವುದಿಲ್ಲ.ನಾವುಅವರಿಗೆನೋಡಿದರೆ ಗುರುತಿಸುತ್ತೇನೆ. ಅವರೆಲ್ಲರೂ ಅಂದಾಜ 20 ರಿಂದ 25 ವರ್ಷದವರಾಗಿರುತ್ತಾರೆ. ಅಯ್ಯೂಬನಿಗೆ ಯಾವುದೇ ಗಾಯಗಳಾಗಿರುವುದಿಲ್ಲ. ನನಗೆ ಗಾಯಗಳಾಗಿರುವುದರಿಂದ ನನಗೆ ಚಿಕಿತ್ಸೆ ಕುರಿತು ಅಂಬುಲೆನ್ಸ್ ನಲ್ಲಿ ಜಿಲ್ಲಾ ಸರ್ಕಾರಿ ಅಸ್ಪತ್ರೆ ಕಲಬುರಗಿಗೆ ಅಯ್ಯೂಬನ ಜೊತೆ ಬಂದು ನಾನು ಸೇರಿಕೆಯಾಗಿರುತ್ತೇನೆ.

ಆದುದರಿಂದ ನನಗೆ ಹೊಡೆದು ರಕ್ತಗಾಯಗೊಳಿಸಿ ನಮ್ಮ ಹತ್ತಿರದಿಂದ ನಗದು ಹಣ ಮತ್ತು ಮೋಬೈಲಗಳು ಕಿತ್ತುಕೊಂಡ ಹೋದವರ ಮೇಲೆ ಕಾನೂನು ಕ್ರಮ ಕೈ ಕೊಳ್ಳಬೇಕು ಅಂತಾ       ಪ್ರಕರಣ ವರದಿಯಾದ  ಬಗ್ಗೆ .

ಇತ್ತೀಚಿನ ನವೀಕರಣ​ : 12-07-2021 02:16 PM ಅನುಮೋದಕರು: ADMIN


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕಲಬುರಗಿ ನಗರ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080