ಅಭಿಪ್ರಾಯ / ಸಲಹೆಗಳು

ಅಶೋಕ ನಗರ ಪೊಲೀಸ್‌ ಠಾಣೆ :- ದಿನಾಂಕ:31.10.2022 ರಂದು 10:00 ಎ.ಎಂ.ಕ್ಕೆ ಫಿರ್ಯಾದಿ ಶ್ರೀಮತಿ ಸಂಗೀತಾ ಗಂಡ ಅನೀಲ್ ಕುಮಾರ ಹಾಬಾನೂರ ವಯ: 37 ವರ್ಷ ಜಾ: ಕಬ್ಬಲಿಗ ಉ: ಮನೆಗೆಲಸ ಸಾ|| ಶಾಂತನಗರ, ಬಂಕೂರ ತಾ||ಶಹಾಬಾದ ಜಿ||ಕಲಬುರಗಿ ಇವರು  ಠಾಣೆಗೆ  ಹಾಜರಾಗಿ  ಲಿಖಿತ  ದೂರು  ಸಲ್ಲಿಸಿದ್ದರ ಸಾರಾಂಶವೆನೆಂದರೆ, ನನ್ನ ಗಂಡ ಅನೀಲ್ ಕುಮಾರ ಇವರು ಅರಣ್ಯ ಇಲಾಖೆಯಲ್ಲಿ ಕೆಲಸ ಮಾಡಿಕೊಂಡಿರುತ್ತಾರೆ. ನಮಗೆ ಜಾಹ್ನವಿ ಮತ್ತು ಜ್ಯೋತಿಕಾ ಅಂತ ಎರಡು ಜನ ಹೆಣ್ಣುಮಕ್ಕಳಿರುತ್ತಾರೆ. ದಿನಾಂಕ: 23.10.2022 ರಂದು ದೀಪಾವಳಿ ಹಬ್ಬದ ನಿಮಿತ್ಯ ಶಾಂತನಗರ, ಬಂಕೂರಿನಿಂದ ಕಲಬುರಗಿ ನಗರದ ಸಂಗಮ ತಾಯಿ ಕಾಲೋನಿಯಲ್ಲಿ ಇರುವ ನಮ್ಮ ಅಣ್ಣ ಶಿವಶರಣಪ್ಪ ತಿಪ್ಪಣ್ಣನವರ ಮನೆಗೆ ಬಂದಿದ್ದು ಇರುತ್ತದೆ. ಹೀಗಿದ್ದು ಇಂದು ದಿನಾಂಕ:30.10.2022 ರಂದು 05:45 ಪಿ.ಎಮ್. ಸುಮಾರಿಗೆ ನಾನು ಮತ್ತು ನನ್ನ ಎರಡು ಮಕ್ಕಳಾದ ಜಾಹ್ನವಿ ಮತ್ತು ಜ್ಯೋತಿಕಾ ಇವರೊಂದಿಗೆ ಕಲಬುರಗಿ ನಗರದ ಕೇಂದ್ರ ಬಸ್ ನಿಲ್ದಾಣಕ್ಕೆ ಬಂದು ಶಹಾಬಾದ ಕಡೆ ಹೋಗುವ ಬಸ್ ಹತ್ತುವ ಕಾಲಕ್ಕೆ ಬಸ್ ಹತ್ತಲು ಜನರು ಮುಗಿಬಿದ್ದಿದ್ದು  ನಮ್ಮನ್ನು ಬಸ್ ಹತ್ತಿಸಲು ಬಂದ ನಮ್ಮ ಅಣ್ಣ ಶಿವಶರಣಪ್ಪ ತಿಪ್ಪಣ್ಣನವರ ಇವರು ಸೀಟ್ ಹಿಡಿಯಲು ಬಸ್ ಹತ್ತಿದ್ದು, ನಂತರ ನಾನು ಒಂದು ಕೈಯಲ್ಲಿ ಲಗೇಜ ಬ್ಯಾಗ ಹಿಡಿದುಕೊಂಡು ಬಸ್ ಹತ್ತುತ್ತಿದ್ದೆ.  ನಂತರ ಬಸನಲ್ಲಿ  ಹೋಗಿ ಕುಳಿತಾಗ ನನ್ನ ವ್ಯಾನಿಟಿ ಬ್ಯಾಗಿನ ಚೈನ್ ಅರ್ಧ ತೆಗೆದಿದ್ದನ್ನು ನೋಡಿ ನಾನು ಗಾಬರಿಯಾಗಿ ನೋಡಲು ನನ್ನ ವ್ಯಾನಿಟಿ ಬ್ಯಾಗಿನಲ್ಲಿ ಇದ್ದ ಸಣ್ಣ ಪರ್ಸ್ ಇದ್ದಿರುವುದಿಲ್ಲ  ಅದರಲ್ಲಿ ಸುಮಾರು ಹತ್ತು ವರ್ಷಗಳ ಹಿಂದೆ ಖರಿದೀಸಿದ ಬಂಗಾರದ ಆಭರಣಗಳಾದ 1) ಒಂದು ಬಂಗಾರದ ಮಂಗಳಸೂತ್ರ 35 ಗ್ರಾಂ ಅ.ಕಿ.1,00,000/-ರೂ 2) ಒಂದು ಬಂಗಾರದ ಲಾಕೇಟ್ 7 ಗ್ರಾಂ ಅ.ಕಿ.20,000/-ರೂ 3) 2.5 ಗ್ರಾಂನ ಒಂದು ಜೊತೆ ಕಿವಿ ಹೂಗಳು ಅ.ಕಿ.8,000/-ರೂ 4) 2 ಗ್ರಾಂನ ಒಂದು ಜೊತೆ ಕಿವಿ ಹೂಗಳು ಅ.ಕಿ.7,000/-ರೂ 5) 2 ಗ್ರಾಂನ ಒಂದು ಜೊತೆ ಕಿವಿ ಹೂಗಳು ಅ.ಕಿ.7,000/-ರೂ ಹೀಗೆ  ಒಟ್ಟು  48.5 ಗ್ರಾಂನ  ಬಂಗಾರದ ಆಭರಣಗಳು  ಅ.ಕಿ.1,42,000/-ರೂ ಮತ್ತು ನಗದು ಹಣ 5,000/-  ಹೀಗೆ ಎಲ್ಲಾ ಸೇರಿ ಒಟ್ಟು ಅ.ಕಿ.1,47,000/-ರೂ  ನೇದ್ದವುಗಳನ್ನು  ಯಾರೋ  ಕಳ್ಳರು ಕಳ್ಳತನ ಮಾಡಿಕೊಂಡು  ಹೋಗಿರುತ್ತಾರೆ. ಈ ಬಗ್ಗೆ ನಾನು ಮನೆಯಲ್ಲಿ ನಮ್ಮ ಅಣ್ಣ ಶಿವಶರಣಪ್ಪ ಇವರೊಂದಿಗೆ ವಿಚಾರಿಸಿ ಇಂದು ತಡವಾಗಿ ಠಾಣೆಗೆ ಬಂದು ದೂರು ಸಲ್ಲಿಸಿದ್ದು ಇರುತ್ತದೆ.ಕಾರಣ  ನಮ್ಮ  ಬಂಗಾರದ   ಆಭರಣಗಳು ಮತ್ತು ನಗದು ಹಣ ಕಳ್ಳತನ  ಮಾಡಿದ  ಕಳ್ಳರನ್ನು ಪತ್ತೆಮಾಡಿ  ಅವರ ವಿರುದ್ಧ ಸೂಕ್ತ  ಕಾನೂನು  ಕ್ರಮ  ಜರುಗಿಸಿ ನಮ್ಮ ಸಾಮಾನುಗಳು ನಮಗೆ  ದೊರಕಿಸಿಕೊಡಲು ವಿನಂತಿ ಅಂತ ವಗೈರೆಯಾಗಿ  ಇದ್ದ  ಅರ್ಜಿ  ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

 

ಬ್ರಹ್ಮಪೂರ ಪೊಲೀಸ್‌ ಠಾಣೆ :- ದಿನಾಂಕ: 31-10-2022    ರಂದು ಮದ್ಯಾಹ್ನ ೧ :೦೦ ಗಂಟೆಗೆ  ಕ್ಕೆ ಪಿರ್ಯಾದಿ ದಾರರಾದ ಶ್ರೀ ರಾಜ ಅಹ್ಮದ ಗ್ರಾಮ ಲೆಕ್ಕಾದಿಕಾರಿ ನಂದಿಕೂರ   ಕಲಬುರಗಿ ರವರು ಠಾಣೆಗೆ ಹಾಜರಾಗಿ ಲಿಖಿತ ಪಿರ್ಯಾದಿ ಅರ್ಜಿ ಸಲ್ಲಿಸಿದ ಸಾರಾಂಶವೆನೆಂದರೆ,  ದಿನಾಂಕ ೨೮/೧೦/೨೦೨೨ ರಂದು ಮಾನ್ಯ ತಹಸೀಲದ್ದಾರರು ಕಲಬುರಗಿ ರವರ ಸಮ್ಮುಖದಲ್ಲಿ ಕೋಟನೂರ (ಡಿ) ಗ್ರಾಮದ ಗ್ರಾಮಠಾಣದಲ್ಲಿರುವ ಖಬರಸ್ಥಾನ ಅತೀಕ್ರಮಣ ತೆರೆವು ಕಾರ್ಯ ಮುಗಿದ ಕಛೇರಿಗೆ ಬಂದು ದಿನ ನಿತ್ಯದ ಕಾರ್ಯ ನಿರ್ವಹಿಸುತ್ತಾ ಇರುತ್ತೇನೆ.   ಈಗ ಶ್ರೀ ಶಿವಾನಂದ ಗ್ರಾಮ ಸಹಾಯಕರು ನಂದಿಕೂರ ಇವರಿಗೆ ದಿನಾಂಕ ೨೮/೧೦/೨೦೨೨ ರಂದು ಬೆಳಗ್ಗೆ ೧೦-೩೦ ಗಂಟೆಗೆ ಈ ಮೇಲಿನ ಕಾರ್ಯಾಚರಣೆಗೆ ಬರಲು ೩ ಬಾರಿ ಮೊಬೈಲ ಕರೆ ಮಾಡಿರುತ್ತೇನೆ. ಆದರೆ ಸದರಿಯವರು ಕರೆಗಳು ಸ್ವೀಕರಿಸಿರುವದಿಲ್ಲ. ಈ ಬಗ್ಗೆ ಕಂದಾಯ ನೀರಿಕ್ಷಕರಿಗೂ ತಿಳಿಸಿರುತ್ತೇನೆ. ಶ್ರೀ ಶಿವಾನಂದ ಗ್ರಾಮ ಸಹಾಯಕ ದಿನಾಂಕ ೨೮/೧೦/೨೦೨೨ ರಂದು ೪-೦೦ ಪಿ.ಎಂ ಗಂಟೆಗೆ ನನ್ನ ಗ್ರಾಮಲೆಕ್ಕಿಗರ ಕಛೇರಿಗೆ ಬಂದಿರುತ್ತಾರೆ. ನಂತರ ತಮ್ಮಲ್ಲಿ ಎರಡು ಮರಣ ಪ್ರಮಾಣ ಪತ್ರಗಳ ಮೇಲೆ ಸಹಿ ಹಾಕಲು ಕೇಳಿರುತ್ತಾರೆ. ಆಗ ನಾನು ಅವರಿಗೆ ಬೆಳಗ್ಗೆ ೧೦-೩೦ ಗಂಟೆಗೆ ೩ ಬಾರಿ ದೂರವಾಣೀ ಕರೆ ಮಾಡಿದ್ದು, ನೀವು ಕರೆ ಏಕೆ ಸ್ವೀಕರಿಸಿರುವದಿಲ್ಲ. ಮತ್ತು ಕರ್ತವ್ಯ ನಿರ್ಲಕ್ಷತನ ತೋರಿಸಿದರೆ ಹೇಗೆ ಎಂದು ಹೇಳಿ ಕೇಂದ್ರ ಸ್ಥಾನದಲ್ಲಿದ್ದು, ಸರಿಯಾಗಿ ಕೆಲಸ ನಿರ್ವಹಿಸಬೇಕು ಎಂದು ಬುದ್ದಿ ಮಾತು ಹೇಳಿದಾಗ ಶ್ರೀ ಶಿವಾನಂದ ಗ್ರಾಮ ಸಹಾಯಕರು ಸ್ವಲ್ಪ ಯೋಚನೆ ಮಾಡಿ ತಕ್ಷಣವೇ ಪ್ರೀಪ್ಲಾನ್ ಮಾಡಿ ತಮ್ಮ ಮೊಬೈಲ ಲೈಟ್ ಪ್ಲಾಶ್ ಆನ ಮಾಡಿ, ನನ್ನ ಮುಖದ ಎದುರು ತಂದು ಸರ್ ನೀವು ಹೀಗೆಕೆ ಮಾಡುತ್ತಿರಿ ಎಂದು ಕಿರಚಾಡಿರುತ್ತಾರೆ. ಈಗ ನಾನು ಹೊರಗಡೆ ಹೋಗಬೇಕು ಎನ್ನುವಷ್ಟರಲ್ಲಿ ನನಗೆ ಶಿವಾನಂದ ಇತನು ನನಗೆ ತಡೆದು ನಿಲ್ಲಿಸಿ ನನ್ನ ಎಡಗೆನ್ನೆಗೆ ಹೊಡೆದು ನಿನ್ನವ್ವನ ಎಂದು ಅವಾಚ್ಯ ಶಬ್ದಗಳಿಂದ ನಿಂದಿಸಿರುತ್ತಾರೆ. ಇವರ ಹೊಡೆತದಿಂದ ನನ್ನ ಒಳ ತುಟಿಗೆ ಹಲ್ಲುಗಳಿಗೆ ಹತ್ತಿ ಗಾಯವಾಗಿರುತ್ತದೆ. ಮತ್ತು ಒಳ ರಕ್ತಸ್ರಾವವಾಗಿರುತ್ತದೆ. ಅದೇ ವೇಳೆಯಲ್ಲಿ ಕಛೇರಿಯಲ್ಲಿದ್ದ ಸಿಬ್ಬಂದಿ ಹಾಗೂ ಸಾರ್ವಜನಿಕರು ಹೀಗೆಲ್ಲಾ ಅಧಿಕಾರಿಯ ಜೊತೆಗೆ ವರ್ತಿಸಬಾರದೆಂದು ಹೇಳಿ ಕಛೇರಿಯಿಂದ ಹೊರಗಡೆ ಕರೆದುಕೊಂಡು ಹೋಗಿರುತ್ತಾರೆ. ಒಂದು ವೇಳೆ ಅಲ್ಲಿ ಯಾರು ಇಲ್ಲದೆ ಹೋದರೆ ನನ್ನ ಮೇಲೆ ಇನ್ನು ತೀವ್ರ ಹಲ್ಲೆ ಮಾಡುವ ಸಂಭವವಿತ್ತು. ಇವರ ದುರ್ನಡತೆಯಿಂದ ನನಗೆ ಜೀವ ಬೆದರಿಕೆ ಇರುತ್ತದೆ.  ಕಾರಣ ಶ್ರೀ ಶಿವಾನಂದ ಗ್ರಾಮ ಸಹಾಯಕ  ನಂದಿಕೂರ ಇವರಿಂದ ನನಗೆ ಜೀವ ಬೆದರಿಕೆ ಇರುವುದರಿಂದ ನನಗೆ ರಕ್ಷಣೆ ಒದಗಿಸಿ ಸದರಿಯವನ ಮೇಲೆ ಕಾನೂನು ಕ್ರಮ  ಜರುಗಿಸಬೇಕು  ಅಂತಾ ಕೊಟ್ಟ ದೂರು ಅರ್ಜಿಯ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

ಸಿ,ಇ,ಎನ್‌ ಪೊಲೀಸ್‌ ಠಾಣೆ :-  ದಿನಾಂಕ: 31/10/2022 ರಂದು 08:00 ಗಂಟೆಗೆ ರವಿಕುಮಾರ ಎ.ಎಸ್.ಐ ಸಿ,ಇ,ಎನ್ ಪೊಲೀಸ್ ಠಾಣೆ ಕಲಬುರಗಿ ನಗರ. ಇವರು ಪೊಲೀಸ್ ಠಾಣೆಗೆ ಹಾಜರಾಗಿ ಒಂದು ಕನ್ನಡದಲ್ಲಿ ಟೈಪ್ ಮಾಡಿದ ವರದಿ ಮತ್ತು ಆರೋಪಿಯನ್ನು ಹಾಜರುಪಡಿಸಿದ್ದು ಸದರಿ ವರದಿ ಸಾರಾಂಶವೆನೆಂದರೆ,  ದಿನಾಂಕ: 30-10-2022 ರಂದು 05-00 ಗಂಟೆಗೆ ಸುಮಾರಿಗೆ ಠಾಣೆಯಿಂದ ನಾನು ಮತ್ತು ಹೊನ್ನೂರಸಾಬ್ ಸಿಪಿಸಿ-279  ಕೂಡಿಕೊಂಡು ಕಲಬುರಗಿ ನಗರದಲ್ಲಿ ಕಾನೂನು ಬಾಹಿರ ಚಟುವಟಿಕೆಗಳ ಮತ್ತು ಅಕ್ರಮ ಮಾದಕ ವಸ್ತುಗಳ ಮಾರಾಟ ಮಾಡುವವರ ಮತ್ತು ಗಾಂಜಾ  ಸೇವನೆ ಮಾಡುವವರ  ಮಾಹಿತಿ ಸಂಗ್ರಹ ಕುರಿತು ಬೀಟ ಕರ್ತವ್ಯದಲ್ಲಿದ್ದಾಗ ಸಮಯ: 06-00 ಗಂಟೆಗೆ ಕಲಬುರಗಿ ನಗರದ ಕಸ್ತೂರಿ ಲಾಡ್ಜ್ ಹಿಂದುಗಡೆ ಖುಲ್ಲಾ ಜಾಗ ಜಿ.ಡಿ.ಎ ಲೇಔಟ ಕಣ್ಣಿ ಮಾಕರ್ೇಟ್ ಹತ್ತಿರ ಒಬ್ಬ ವ್ಯಕ್ತಿ ಅನುಮಾನಸ್ಪದವಾಗಿ ಯಾವುದೋ ಮಾದಕ ದ್ರವ್ಯ ಸೇವನೆ ಮಾಡಿ ನಶೆಯಲ್ಲಿ ಇರುವುದನ್ನು ಕಂಡು ನಾವು ಹತ್ತಿರ ಹೋಗಿ ವಿಚಾರಿಸಲಾಗಿ ತನ್ನ  ಹೆಸರು ಯುಸುಫ ಪಟೇಲ್ ತಂದೆ ಮಹಿಬೂಬ ಪಟೇಲ್ ವ: 27 ವರ್ಷ ಉ: ಆಟೋ ಚಾಲಕ ಸಾ: ಎಮ್ ಎಸ್.ಕೆ.ಮಿಲ್ ರಿಂಗ್ ರೋಡ ಮಿಸ್ಬಾ ನಗರ ಕಲಬುರಗಿ. ಅಂತಾ ತಿಳಿಸಿದ್ದು ಆತನ  ಬಾಯಿಂದ ಯಾವುದೋ ಮಾದಕ ವಸ್ತು ಸೇವನೆ ಮಾಡಿರುವ ಬಗ್ಗೆ ಕೆಟ್ಟ ವಾಸನೆ ಬರುತ್ತಿದ್ದರಿಂದ ಠಾಣೆಗೆ ಕರೆದುಕೊಂಡು ಬಂದು 06:30 ಗಂಟೆಗೆ ಠಾಣೆಯ ಸಿಬ್ಬಂದಿಗಳಾದ, ಶ್ರೀ ಹೊನ್ನೂರ ಸಾಬ್ ಸಿಪಿಸಿ: 279, ಶ್ರೀ ಅಮರನಾಥ ಸಿಪಿಸಿ-273  ರವರ ಬೆಂಗಾವಲಿನಲ್ಲಿ ಸದರಿಯವನಿಗೆ  ಮಾದಕ ದ್ರವ್ಯ ಸೇವನೆ ಮಾಡಿದ ಬಗ್ಗೆ ವೈಧ್ಯಕೀಯ ಪರೀಕ್ಷೆ ಕುರಿತು ವೈಧ್ಯಾಧಿಕಾರಿಗಳು ಜಿಲ್ಲಾ ಸರಕಾರಿ ಆಸ್ಪತ್ರೆಗೆ ಕಲಬುರಗಿ ರವರಲ್ಲಿ ಕಳುಹಿಸಿದ್ದು ಸದರಿ ವ್ಯಕ್ತಿಯು ಮಾದಕ ವಸ್ತು ಸೇವನೆ  ಮಾಡಿರುವ ಬಗ್ಗೆ ಇಂದು ದಿನಾಂಕ: 31-10-2022 ರಂದು 07:30 ಗಂಟೆಗೆ POSITIVE FOR 1) THC: MARIJUANA (GANJA)   ಅಂತಾ ವೈಧ್ಯರು ವರದಿ ನೀಡಿರುತ್ತಾರೆ. ಕಾರಣ ಸದರಿ ಆರೋಪಿತನ  ವಿರುದ್ದ ಕಾನೂನು ಕ್ರಮ ಕೈಗೊಳ್ಳಲು ವಿನಂತಿ ಅಂತಾ ನೀಡಿದ ವರದಿ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ..

 

ಇತ್ತೀಚಿನ ನವೀಕರಣ​ : 14-11-2022 04:03 PM ಅನುಮೋದಕರು: ADMIN


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕಲಬುರಗಿ ನಗರ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080