ಅಭಿಪ್ರಾಯ / ಸಲಹೆಗಳು

ಅಶೋಕ ನಗರ ಪೊಲೀಸ್‌ ಠಾಣೆ :-  ದಿನಾಂಕ:31.08.2022 ರಂದು  19:30 ಪಿ.ಎಂ.ಕ್ಕೆ ಫಿರ್ಯಾದಿ ಡಾ|| ಸೌಮ್ಯ ಗಂಡ ರಾಜೇಶ ಪಾಟಿಲ್ ವಯ: 37 ವರ್ಷ ಉ: ಸಹಾಯಕ ಪ್ರಾದ್ಯಾಪಕರು (ವೈದ್ಯರು) ಜಾ: ಲಿಂಗಾಯತ ಸಾ|| ಶಾಸ್ರ್ತಿ ನಗರ ಕೊಠಾರಿ ಭವನ ಹಿಂದುಗಡೆ ಕಲಬುರಗಿ ಇವರು ಠಾಣೆಗೆ ಹಾಜರಾಗಿ ಲಿಖಿತ ಫಿರ್ಯಾದಿ ಅರ್ಜಿ ಸಲ್ಲಿಸಿದ್ದರ ಸಾರಾಂಶವೆನೆಂದರೆ, ನನ್ನ ಗಂಡ ರಾಜೇಶ ಪಾಟೀಲ್ ಇವರು ಕೂಡ ವೈದ್ಯರಿದ್ದು ಅವರು ಎಂ.ಆರ್.ಎಂ.ಸಿ ಯಲ್ಲಿ ವೈದ್ಯ ವೃತ್ತಿ ಮಾಡಿಕೊಂಡಿರುತ್ತಾರೆ. ನಾನು ಕಳೆದ ಎರಡು ವರ್ಷಗಳಿಂದ ಕಲಬುರಗಿ ನಗರದ ಸಂಗಮೇಶ್ವರ ಆಸ್ಪತ್ರೆಯಲ್ಲಿ ಹೇರಿಗೆ ಹಾಗೂ ಸ್ತ್ರಿ ರೋಗ ತಜ್ಞರು ಅಂತ ಕೆಲಸ ಮಾಡಿಕೊಂಡಿರುತ್ತೇನೆ. ಹೀಗಿದ್ದು ದಿನಾಂಕ:25.08.2022 ರಂದು ಬೆಳಿಗ್ಗೆ 10:30 ಗಂಟೆ ಸುಮಾರಿಗೆ ಸಂಗಮೇಶ್ವರ ಆಸ್ಪತ್ರೆಯಲ್ಲಿ ಹೇರಿಗೆಗಾಗಿ ದಾಖಲಾದ ಒಬ್ಬ ಹೆಣ್ಣುಮಗಳ ಹೇರಿಗೆ ಸಲುವಾಗಿ ನಾನು ಮತ್ತು ಪಿ.ಜಿ ವಿಧ್ಯಾರ್ಥಿನಿಯರಾದ ಡಾ|| ಜಯಶಿಲಾ, ಡಾ|| ಸುಸ್ಮಾ, ಡಾ|| ಸೈಮ್ಯ ಎಂ ಹಾಗೂ ಶ್ರೀದೇವಿ ಸ್ಟಾಪ್ ನರ್ಸ್ ಮತ್ತು ರುಕ್ಮೀಣಿ ಆಯಮ್ಮಾ ಎಲ್ಲರೂ ಕೂಡಿ ಸಂಗಮೇಶ್ವರ ಆಸ್ಪತ್ರೆಯ ಹೇರಿಗೆ ಕೋಣೆಯಲ್ಲಿ ಕೆಲಸದ ಮೇಲೆ ಇದ್ದಾಗ ಆಕಸ್ಮಿಕವಾಗಿ ಮತ್ತು ನನ್ನ ಅರವಿಗೆ ಬಾರದೆ ನನ್ನ ಕೊರಳಲ್ಲಿದ್ದ ಸುಮಾರು 2,00,000/-ರೂ ಬೆಲೆಯುಳ್ಳ ಡೈಮಂಡ ಮಿಶ್ರಿತ ಬಂಗಾರದ ಮಂಗಳಸೂತ್ರ ಕಡಿದು ಕೆಳಗೆ ಬಿದ್ದಿದನ್ನು ಯಾರೋ ಕಳ್ಳರೂ ಕಳುವು ಮಾಡಿಕೊಂಡು ಹೋಗಿದ್ದು ನಂತರ ನಾನು ಆಸ್ಪತ್ರೆಯ ವೈದ್ಯರು ಹಾಗೂ ಸಿಬ್ಬಂದಿಯವರಿಗೆ ವಿಚಾರಿಸಲಾಗಿ ನನ್ನ ಮಂಗಳ ಸೂತ್ರದ ಬಗ್ಗೆ ಯಾವುದೆ ಮಾಹಿತಿ ಸಿಕ್ಕಿರುವುದಿಲ್ಲ. ಈ ವಿಷಯದ ಬಗ್ಗೆ ನಾನು ಮನೆಯಲ್ಲಿ ವಿಚಾರಿಸಿ ಇಂದು ತಡವಾಗಿ ಠಾಣೆಗೆ ಬಂದು ದೂರು ಸಲ್ಲಿಸಿದ್ದು ಇರುತ್ತದೆ. ಕಾರಣ ದಿನಾಂಕ:25.08.2022 ರಂದು ಬೆಳಿಗ್ಗೆ 10:30 ಗಂಟೆಯ ಸುಮಾರಿಗೆ ಸಂಗಮೇಶ್ವರ ಆಸ್ಪತ್ರೆಯ ಹೇರಿಗೆ ಕೋಣೆಯಲ್ಲಿ ಕಳುವಾಗಿದ್ದು ನನ್ನ ಡೈಮಂಡ ಮಿಶ್ರಿತ ಬಂಗಾರದ ಮಂಗಳ ಸೂತ್ರವನ್ನು ಪತ್ತೆ ಮಾಡಿ ಕಳ್ಳರ ವಿರುದ್ದ ಕಾನೂನ ರೀತಿ ಕ್ರಮ ಜರುಗಿಸಿ ನನ್ನ ಮಂಗಳ ಸೂತ್ರ ನನಗೆ ದೊರಕಿಸಿ ಕೊಡಲು ವಿನಂತಿ ಅಂತ ವಗೈರೆಯಾಗಿದ್ದ ಅರ್ಜಿ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

ಸಬ್ ಅರ್ಬನ್‌ ಪೊಲೀಸ್‌ ಠಾಣೆ :- ದಿನಾಂಕ:-31-08-2022  ರಂದು ಬಂದು ಸಲ್ಲಿಸಿದ ಫಿರ್ಯಾದಿಯೇನೆಂದರೆ ದಿನಾಂಕ ೦೧/೦೮/೨೦೨೨ ರಂದುರಾತ್ರಿ ೯:೩೦ ಪಿಎಮ್ ಕ್ಕೆ ನನ್ನಅಣ್ಣನ ಹೆಸರಿನಲ್ಲಿರುವ ಮೋಟರ್ ಸೈಕಲ್ ನಂ ಕೆಎ ೩೨ ಇಕೆ ೭೯೦೫ ನೇದ್ದನ್ನು ಹುಮನಾಬಾದ್‌ರಿಂಗ್‌ರೋಡ ಬಳಿಯ ಎಸ್‌ಆರ್ ಜಿ ಬಾರ್ ಮುಂದೆ ನಿಲ್ಲಿಸಿ ಹೋಗಿದ್ದು ನಂತರ ೧೧ ಪಿಎಮ್ ಕ್ಕೆ ಬಂದು ನೋಡುವಷ್ಟರಲ್ಲಿ ನನ್ನ ಮೋಟಾರ್ ಸೈಕಲ್‌ಯರೋ ಕಳ್ಳರು ಕಳುವು ಮಾಡಿಕೊಂಡು ಹೋಗಿರುತ್ತಾರೆ, ನಗರದಎಲ್ಲಾಕಡೆ ಹುಡಕಾಡಿದರು ಸಿಕ್ಕಿರುವುದಿಲ್ಲ ಎಂದು ಫಿರ್ಯಾದಿ ಕೊಟ್ಟ ಹೇಳಿಕೆ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

ಇತ್ತೀಚಿನ ನವೀಕರಣ​ : 06-09-2022 06:13 PM ಅನುಮೋದಕರು: ADMIN


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕಲಬುರಗಿ ನಗರ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080