Feedback / Suggestions

ಸಂಚಾರಿ ಪೊಲೀಸ್‌ ಠಾಣೆ -2 :- ದಿನಾಂಕ 31-07-2022 ರಂದು ೬:೦೦ ಪಿ.ಎಮ್ ಕ್ಕೆ ಎಕ್ಸೋನ್ ಆಸ್ಪತ್ರೆಯಿಂದ ಸುರೇಶಕುಮಾರ ತಂದೆ ಶಂಕರ ರಾಠೋಡ್ ಇವರ ಆರ್.ಟಿ.ಎ ಎಮ್.ಎಲ್.ಸಿ ವಸೂಲಾಗಿರುತ್ತದೆ ಅಂತಾ ತಿಳಿಸಿದ್ದಕ್ಕೆ ನಾನು ಎಕ್ಸೋನ್ ಆಸ್ಪತ್ರೆಗೆ ಭೇಟಿ ಕೊಟ್ಟು ಎಂ.ಎಲ್.ಸಿ ಪತ್ರ ಸ್ವೀಕರಿಸಿಕೊಂಡು ಗಾಯಾಳು ಸುರೇಶಕುಮಾರ ಇವರಿಗೆ ವಿಚಾರಿಸಲಾಗಿ ಅವರು ಹೇಳಿಕೆ ಫಿರ್ಯಾದಿ ಸಾರಂಶವೆನೆಂದರೆ, ಫಿರ್ಯಾದಿಯು ಇಂದು ದಿನಾಂಕ: ೩೧.೦೭.೨೦೨೨ ಬೇಳಿಗ್ಗೆ ತನ್ನ ಮನೆಯಿಂದ ಕೆಲಸದ ಕುರಿತು ಯುನೈಟೆಡ್ ಆಸ್ಪತ್ರೆಗೆ ಹೋಗಿ ಕೆಲಸ ಮುಗಿಸಿಕೊಂಡು ಮರಳಿ ಮಧ್ಯಾಹ್ನ ಮನೆಗೆ ಹೋಗುವ ಕುರಿತು ಸೇಡಂ ರಿಂಗರೋಡದಿಂದ ಒಂದು ಆಟೋರಿಕ್ಷಾ ನಂ KA32D3873 ನೇದ್ದರಲ್ಲಿ ಕುಳಿತುಕೊಂಡು ಹೋಗುವಾಗ ಆಟೋರೀಕ್ಷಾ ಚಾಲಕನು ಆಟೋರೀಕ್ಷಾ ವಾಹನವನ್ನು ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಮಧ್ಯಾಹ್ನ ೩.೪೫ ಗಂಟೆ ಸುಮಾರಿಗೆ ವಿರೇಂದ್ರ ಪಾಟೀಲ ಬಡಾವಣೆ ಕಮಾನ ದಾಟಿ ಒಂದು ಎತ್ತಿಗೆ ಉಳಿಸಲು ಹೋಗಿ ಕಟ್ ಹೊಡೆದು ಎಡಕ್ಕೆ ಆಟೋರಿಕ್ಷಾ ಪಲ್ಟಿ ಮಾಡಿ ಫಿರ್ಯಾದಿಗೆ ಸೊಂಟಕ್ಕೆ ಭಾರಿ ಒಳಪೆಟ್ಟು, ಹಾಗೂ ಅಲ್ಲಲ್ಲಿ ಗಾಯಗೊಳಿಸಿ ಇನ್ನು ಇಬ್ಬರು ಪ್ರಯಾಣಿಕರಿಗೂ ಸಹಃ ಸಣ್ಣಪುಟ್ಟ ಗಾಯಗೊಳಿಸಿದ್ದು ಅವರು ಯಾರು ಅಂತಾ ಗೋತ್ತಿಲ್ಲಾ. ಸದರಿ ಆಟೋರಿಕ್ಷಾ ಚಾಲಕನು ಫಿರ್ಯಾದಿಗೆ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಸೇರಿಕೆ ಮಾಡಿ ಹೆಳದೆ ಕೆಳದೆ ಅಲ್ಲಿಂದ ಓಡಿ ಹೋಗಿರುತ್ತಾನೆ. ಕಾರಣ ಸದರಿ ಆಟೋರಿಕ್ಷಾ ಚಾಲಕನ ವಿರುದ್ಧ ಕಾನೂನು ಪ್ರಕಾರ ಕ್ರಮ ಕೈಗೊಳ್ಳಬೇಕು ಅಂತಾ ಇತ್ಯಾದಿ ಕೊಟ್ಟ ಫಿರ್ಯಾದಿ ಹೇಳಿಕೆ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

ಸಂಚಾರಿ ಪೊಲೀಸ್‌ ಠಾಣೆ -1 :- ದಿನಾಂಕ 31-07-2022 ರಂದು ಮದ್ಯಾಹ್ನ ೧೨-೧೫ ಗಂಟೆಗೆ ಶ್ರೀ ಜಯಸಿಂಗ ತಂದೆ ಸುಬೆಸಿಂಗ ಇವರು ಠಾಣೆಗೆ ಹಾಜರಾಗಿ ಕನ್ನಡದಲ್ಲಿ ಗಣಕಿಕೃತ ಮಾಡಿದ ದೂರು ರ‍್ಜಿಯನ್ನು ಹಾಜರಪಡಿಸಿದ್ದರ ಸಾರಂಶವೆನೆಂದರೆ ದಿನಾಂಕ ೩೧-೦೭-೨೦೨೨ ರಂದು ಬೆಳಿಗ್ಗೆ ನಾನು ಚಲಾಯಿಸುತ್ತೀರುವ ಕಾರ ನಂಬರ ಕೆಎ-೩೨/ಎನ್-೬೦೫೨ ನೇದ್ದರಲ್ಲಿ ನನ್ನ ತಾಯಿ ಮಾಯಾದೇವಿ ಹಾಗೂ ನನ್ನ ಅಣ್ಣ ಕೃಷ್ಣಕುಮಾರ ಇಬ್ಬರನ್ನು ಕೂಡಿಸಿಕೊಂಡು ಡಾ|| ವಿಶ್ವನಾಥ ಪಾಟೀಲ ಇವರ ಆಸ್ಪತ್ರೆಯಿಂದ ಶಹಾಬಾದ ರೋಡಿಗೆ ಬರುವ ನಮ್ಮ ಮನೆಯ ಕಡೆಗೆ ಹೋಗುವ ಕುರಿತು ಕೇಂದ್ರ ಬಸ್ಸ ನಿಲ್ದಾಣ ಮುಖಾಂತರ ನಾನು ನನ್ನ ಕಾರ ಚಲಾಯಿಸಿಕೊಂಡು ಹೋಗುವಾಗ ಬೆಳಿಗ್ಗೆ ೧೦-೦೦ ಗಂಟೆ ಸುಮಾರಿಗೆ ಕೇಂದ್ರ ಬಸ್ಸ ನಿಲ್ದಾಣ ಎದುರಿನ ರೋಡ ಮೇಲೆ ಹಿಂದಿನಿಂದ ಒಬ್ಬ ಬುಲೇರೊ ಜೀಪ ಚಾಲಕನು ಕಣ್ಣಿ ಮರ‍್ಕೆಟ ಕಡೆಯಿಂದ ಎಸವಿಪಿ ರ‍್ಕಲ ಕಡೆಗೆ ಹೋಗುವ ಕುರಿತು ತನ್ನ ವಾಹನವನ್ನು ಅತಿವೇಗವಾಗಿ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ನನ್ನ ಕಾರಿನ ಬಲ ಸೈಡಿಗೆ ಡಿಕ್ಕಿಪಡಿಸಿ ಅಪಘಾತ ಮಾಡಿದನು. ನಾನು ನನ್ನ ಕಾರ ರೋಡ ಪಕ್ಕಕ್ಕೆ ನಿಲ್ಲಿಸಿ ನಾನು ಮತ್ತು ನನ್ನ ತಾಯಿ ಹಾಗೂ ನನ್ನ ಅಣ್ಣ ಕೃಷ್ಣಕುಮಾರ ಮೂರು ಜನರು ಕಾರಿನಿಂದ ಇಳಿದು ಅಪಘಾತ ಪಡಿಸಿದ ಬುಲೇರೊ ಜೀಪ ನಂಬರ ನೋಡಲು ಕೆಎ-೨೮/ಬಿ-೭೭೭೮ ಇದ್ದಿತ್ತು. ಅದರ ಚಾಲಕ ಜೀಪ ನಿಲ್ಲಿಸಿದಂತೆ ಮಾಡಿ ನಮ್ಮ ಕಡೆಗೆ ನೋಡುತ್ತಾ ಎಸವಿಪಿ ರ‍್ಕಲ ಕಡೆಗೆ ಚಲಾಯಿಸಿಕೊಂಡು ಓಡಿ ಹೋದನು. ನಮ್ಮ ಕಾರ ನೋಡಲು ಕಾರಿನ ಬಲಗಡೆ ಬಂಪರ ಡ್ಯಾಮೇಜ್ ಹಾಗೂ ಫಾಗ ಲೈಟ ಲ್ಯಾಂಪ ಡ್ಯಾಮೇಜ ಆಗಿತ್ತು. ನಾನು ನನ್ನ ತಾಯಿ ಮತ್ತು ನನ್ನ ಅಣ್ಣನವರಿಗೆ ಮನೆಗೆ ಬಿಟ್ಟು ಮನೆಯಲ್ಲಿ ವಿಚಾರ ಮಾಡಿಕೊಂಡು ಪೊಲೀಸ ಠಾಣೆಗೆ ಬಂದಿರುತ್ತೇನೆ. ಸದರ ಘಟನೆಯಿಂದ ನನಗೆ ಮತ್ತು ನನ್ನ ತಾಯಿ ಹಾಗೂ ನನ್ನ ಅಣ್ಣನಿಗೆ ಯಾವುದೆ ಪೆಟ್ಟು ಬಿದ್ದಿರುವದಿಲ್ಲ. ಅಪಘಾತ ಪಡಿಸಿದ ಬುಲೆರೊ ಜೀಪ ಚಾಲಕನ ಹೆಸರು ಗೋತ್ತಾಗಿರುವದಿಲ್ಲ ಆತನನ್ನು ನೋಡಿದ್ದು ಮುಂದೆ ನೋಡಿದಲ್ಲಿ ಗುರುತ್ತಿಸುತ್ತೇನೆ. ಬುಲೇರೊ ಜೀಪ ನಂಬರ ಕೆಎ-೨೮/ಬಿ-೭೭೭೮ ನೇದ್ದರ ಚಾಲಕನು ತನ್ನ ವಾಹನವನ್ನು ಅತಿವೇಗವಾಗಿ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ನಾನು ಚಲಾಯಿಸಿಕೊಂಡು ಹೋಗುತ್ತೀರುವ ಕಾರ ನಂಬರ ಕೆಎ-೩೨/ಎನ್-೬೦೫೨ ನೇದ್ದಕ್ಕೆ ಹಿಂದಿನಿಂದ ಡಿಕ್ಕಿಪಡಿಸಿ ಅಪಘಾತ ಮಾಡಿ ನನ್ನ ಕಾರ ಡ್ಯಾಮೇಜ್ ಮಾಡಿ ತನ್ನ ಬುಲೆರೋ ಜೀಪ ವಾಹನ ಸಮೇತ ಓಡಿ ಹೋಗಿದ್ದು ಆತನ ಮೇಲೆ ಕಾನೂನು ಕ್ರಮ ಜರುಗಿಸಬೇಕು ಅಂತಾ ಫರ‍್ಯಾದಿ ದೂರು ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

ರಾಘವೇಂದ್ರ ನಗರ ಪೊಲೀಸ ಠಾಣೆ  :- ದಿನಾಂಕ:31-07-2022  ರಂದು ಸಾಯಂಕಾಲ ೪.೦೦ ಗಂಟೆಗೆ ಠಾಣಾ ವ್ಯಾಪ್ತಿಯ ಡಬರಾಬಾದ ಕ್ರಾಸ ಹತ್ತಿರ ಸಿದ್ದಾರೂಢ ಮಠದ ಹತ್ತಿರ ಇರುವ ಖುಲ್ಲಾ ಜಾಗದಲ್ಲಿ  ೭-೮ ಜನರು ಗುಂಪಾಗಿ ಕುಳಿತು ಪಣಕ್ಕೆ ಹಣ ಹಚ್ಚಿ ಅಂದರ ಬಾಹರ ಜೂಜಾಟ ಆಡುತ್ತಿದ್ದ ಬಗ್ಗೆ ಖಚಿತ ಬಾತ್ಮಿ ಬಂದಿದ್ದು ಸದರಿ ವಿಷಯವನ್ನು ಮಾನ್ಯ ಮೇಲಾಧಿಕಾರಿಯವರಿಗೆ ಮಾಹಿತಿ ತಿಳಿಸಿ ಮಾನ್ಯ ಮೇಲಾಧಿಕಾರಿಯವರ ಪರವಾನಿಗ ಪಡೆದು ಮಾನ್ಯರವರ ಮರ‍್ಗರ‍್ಶನದಂತೆ ಸದರಿ ಜೂಜಾಟ ನಿರತರ ಮೇಲೆ ದಾಳಿ ಮಾಡಿ ಕಾನೂನು ಕ್ರಮ ಕೈಕೊಳ್ಳಬೇಕಾಗಿದ್ದು ದಾಳಿ ಕಾಲಕ್ಕೆ ಹಾಜರಿದ್ದು ಜಪ್ತಿ ಪಂಚನಾಮೆಯನ್ನು ಬರೆಯಿಸಿ ಕೂಡಲು ಇಬ್ಬರು ಪಂಚರನ್ನು ಬರಮಾಡಿಕೊಂಡು ಉಭಯ ಪಂಚರು ಒಪ್ಪಿಕೊಂಡ ನಂತರ ೪-೧೫ ಪಿ.ಎಂ.ಕ್ಕೆ ನಾನು ಮತ್ತು ಠಾಣೆಯ ಸಿಬ್ಬಂದಿಯವರು ಕೂಡಿಕೊಂಡು ಸರಕಾರಿ ಜೀಪ್ನಲ್ಲಿ  ಖಚೀತ ಬಾತ್ಮೀ ಬಂದ ಸ್ಥಳಕ್ಕೆ ಹೊರಟು ೪-೩೦ ಪಿ.ಎಂ.ಕ್ಕೆ ಹೋಗಿ ದೂರ ಇರುವಂತೆ ಜೀಪ್ ನಿಲ್ಲಿಸಿ ನಾವು ಎಲ್ಲರು ಇಳಿದು ನಡೆದುಕೊಂಡು ಹೋಗಿ ಸಿದ್ದಾರೂಡ ಮಠ ದೂರ ಇರುವಂತೆ ಮರೆಯಲ್ಲಿ ನಿಂತು ನೋಡಲಾಗಿ ಸಿದ್ದಾರೂಡ ಮಠದ ಪಕ್ಕದಲ್ಲಿ ಖುಲ್ಲಾ ಜಾಗದಲ್ಲಿ ೭-೮ ಜನರು ಗುಂಪಾಗಿ ಕುಳಿತು ಪಣಕ್ಕೆ  ಹಣ ಹಚ್ಚಿ ಅಂದರ ಬಾಹರ ಜೂಜಾಟ ಆಡುತ್ತಿದ್ದು ಅವರಲ್ಲಿ ಒಬ್ಬನು ಎಲೆಗಳನ್ನು ಹಾಕಿದ್ದು, ಒಬ್ಬನು ಅಂದರಕ್ಕೆ ೧೦೦ ರೂಪಾಯಿ ಮತ್ತು ಇನ್ನೂಬ್ಬನು ಬಾಹರಕ್ಕೆ ೧೦೦ ರೂಪಾಯಿ ಅಂತ ಅನ್ನುತ್ತಾ ಕಣದಲ್ಲಿ ಹಣ ಹಾಕುತ್ತಿದ್ದು ಸದರಿಯವರು ಅಂದರ ಬಾಹರ ಜೂಜಾಟ ಆಡುತ್ತಿರುವದನ್ನು ಖಚಿತ ಪಡಿಸಿಕೊಂಡು ನಾನು ಸಿಬ್ಬಂದಿಯವರು ಕೂಡಿಕೊಂಡು ಪಂಚರ ಸಮಕ್ಷಮ ಜೂಜಾಟ ನಿರತರ ಮೇಲೆ ೪-೪೫ ಪಿ.ಎಂ. ಕ್ಕೆ ದಾಳಿ ಮಾಡಿ ಜೂಜಾಟ ನಿರತರನ್ನು ವಶಕ್ಕೆ ಪಡೆದುಕೊಂಡು ನಂತರ ನಾನು ಸದರಿಯವರ ಹೆಸರು ವಿಳಾಸ ವಿಚಾರಿಸಲು ಮೊದಲನೆಯವನು ತನ್ನ ಹೆಸರು ೧) ಧೂಳಪ್ಪಾ ತಂದೆ ವಿಠ್ಠಲ್  ಪುರಂತ ವಯ-೬೨ ವರ್ಷ ಜಾ||ಹಟಗಾರ ಉ||ಕಿರಾಣಿ ವ್ಯಾಪಾರ ಸಾ||ಡಿಡಿ ನಗರ  ಕಲಬುರಗಿ ಅಂತಾ ತಿಳಿಸಿದ್ದು ಸದರಿಯವನ ಅಂಗಶೋದನೆ ಮಾಡಲು ಸದರಿಯವನ ಹತ್ತಿರ ೨೧೦೦/- ರೂ ನಗದು ಹಣ ಮತ್ತು ಕೈಯಲ್ಲಿ ೨೩ ಎಲೆಗಳು ದೊರೆತಿದ್ದು. ಕೆಳಗೆ ಹೊರಗೆ ೯ ಎಲೆ, ಒಳಗೆ ೮ ಎಲೆಗಳು ಬಿದ್ದಿದ್ದು, ೧೨ ಎಲೆ ಪಕ್ಕದಲ್ಲಿ ಇಟ್ಟಿದ್ದು ಇರುತ್ತದೆ. ಮತ್ತು ಅವನ ಪಕ್ಕದಲ್ಲಿವನಿಗೆ ಹೆಸರು ವಿಳಾಸ ವಿಚಾರಿಸಲು ತನ್ನ ಹೆಸರು ೨) ಸದಾನಂದ ತಂದೆ ರೇವಣಸಿದ್ದಪ್ಪಾ ಕರಬಸಗುಂಡ ವಯ-೩೨ ವರ್ಷ ಜಾ||ಹಟಗಾರ ಉ||ಮೆಕ್ಯಾನಿಕ ಸಾ||ಡಿಡ ನಗೆರ ಕಲಬುರಗಿ  ಇವನ ಹತ್ತಿರ ೨೬೦೦/- ರೂ ದೊರತ್ತಿದ್ದು ಇರುತ್ತದೆ.  ೩) ಸುನೀಲ್ ತಂದ ನೋಮಣ್ಣಾ ಜೋಡದ ವಯ-೩೦ ವರ್ಷ ಜಾ||ಹಟಗಾರ ಉ||ಸೇಲ್ಸ್ ಮ್ಯಾನ ಸಾ||ಚಿಂಚನಸೂರ ತಾ||ಆಳಂದ ಜಿ||ಕಲಬುರಗಿ ಇವನ ಹತ್ತಿರ ೨೩೦೦/- ರೂ ೪) ಅಪ್ಪಾರಾವ ತಂದೆ ನಾಗಣ್ಣಾ ಕೋಟೇ ವಯ-೫೮ ವರ್ಷ  ಜಾ||ಹಟಗಾರ ಉ|\ಖಾಸಗಿ ಕೆಲ್ಸ ಸಾ||ಡಿಡಿ ನಗರ ಕಲಬುರಗಿ ಈತನ ಹತ್ತಿರ ೧೫೬೦ ರೂ ೫) ವಿನೋದ ತಂದೆ ಈರಣ್ಣಾ ಮಿಟಾಯಿಗಾರ ವಯ-೨೮ ರ ವರ್ಷ  ಜಾ||ಲೊಂಗಾಯತ ಉ||ಆಟೋ ಚಾಲ್ಕ ಸಾ||ಆಶ್ರಯ ಕಾಲೋನಿ ಕಲಬುರಗಿ ಈತನ  ಹತ್ತಿರ ೧೮೦೦ ರೂ ೬) ರೇವಣಸಿದ್ದ ತಂದೆ ಶ್ರೀಮಂತ ಕುಂಬಾರ ವಯ-೩೨ ವರ್ಷ ಜಾ||ಕುಂಬಾರ ಉ||ಗ್ಯಾರೇಜ ಕೆಲ್ಸ ಸಾ||ಶಿವಶಕ್ತಿ ನಗರ ಕಲಬುರಗಿ ಇವನ ಹತ್ತಿರ ೨೧೦೦ ರೂ ೭) ಪ್ರಕಾಶ ತಂದೆ ವಿಶ್ವನಾಥ ಭುಷಣಗಿ ವಯ-೩೫ ವರ್ಷ ಜಾ||ಲಿಂಗಾಯತ ಉ||ಖಾಸಗಿ ಕೆಲ್ಸ ಸಾ||ಸಂತೋಷ ಕಾಲೋನಿ ಕಲ್ಬುರಗಿ ಈತನ ಹತ್ತಿರ ೧೦೨೦ ರೂ ಹಾಗೂ ಸ್ಥಳದಲ್ಲಿ ೨೦೨೦ ನಗದು ಹಣ ಹೀಗೆ ಒಟ್ಟು/-೧೫೫೦೦ ರೂ ಮತ್ತು ೫೨ ಇಸ್ಪೇಟ ಎಲೆಗಳು ದೊರೆತಿದ್ದು , ಜಪ್ತಿ ಪಂಚನಾಮೆಯನ್ನು ಕೈಕೊಂಡು ಸದರಿ ಜಪ್ತಿಮಾಡಿದ ಮುದ್ದೆ ಮಾಲು ಹಾಗೂ ಜಪ್ತಿ ಪಂಚನಾಮೆ ಆಧಾರದ ಮೇಲೆ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

Last Updated: 03-08-2022 12:30 PM Updated By: ADMIN


Disclaimer :

Please note that this page also provides links to the websites / web pages of Govt. Ministries/Departments/Organisations.The content of these websites are owned by the respective organisations and they may be contacted for any further information or suggestion

Website Policies

 • Copyright Policy
 • Hyperlinking Policy
 • Security Policy
 • Terms & Conditions
 • Privacy Policy
 • Help
 • Screen Reader Access
 • Guidelines

Visitors

 • Last Updated​ :
 • Visitors Counter :
 • Version :
CONTENT OWNED AND MAINTAINED BY : Kalaburagi City Police
Designed, Developed and Hosted by: Center for e-Governance - Web Portal, Government of Karnataka © 2024, All Rights Reserved.

Best viewed in Chrome v-87.0.4280.141, Microsoft Edge v-87.0.664.75, Firefox -v-83.0 Browsers. Resolution : 1280x800 to 1920x1080