Feedback / Suggestions

ಸ್ಟೇಷನ್‌ ಬಜಾರ್‌ ಪೊಲೀಸ್‌ ಠಾಣೆ :- ದಿನಾಂಕ: 31/01/2023 ರಂದು ಮದ್ಯಾಹ್ನ 03:00 ಗಂಟೆಗೆ ಫಿರ್ಯಾದಿ ಶ್ರೀ ವಿಶ್ವರಾಜ ತಂದೆ ದಿ. ಗುಂಡಪ್ಪ ಹೊಸಮನಿ ವಯ:29 ವರ್ಷ ಉ: ಬ್ಯಾಂಕ್ ನಲ್ಲಿ ಕೆಲಸ ಜಾ:ಲಿಂಗಾಯತ ಸಾ: ಅವರಾದ (ಬಿ) ತಾ||&ಜಿ|| ಕಲಬುರಗಿ. ಇವರು ಠಾಣೆಗೆ ಹಾಜರಾಗಿ ನೀಡಿದ ದೂರ ಅರ್ಜಿಯ ಸಾರಾಂಶವೇನೆಂದರೆ, ನಮ್ಮ ಸ್ವಂತ ಊರು ಅವರಾದ (ಬಿ) ಗ್ರಾಮವಿದ್ದು ನಾನು ಐಸಿಐಸಿಐ ಬ್ಯಾಂಕ್ ನಲ್ಲಿ ಕೆಲಸ ಮಾಡಿಕೊಂಡು ವಾಸವಾಗಿರುತ್ತೇನೆ. ನಮ್ಮ  ತಂದೆ ತಾಯಿಗೆ ನಾವು ಒಟ್ಟು ಎರಡು ಜನ ಗಂಡು ಮಕ್ಕಳು ಹಾಗು ಒಬ್ಬ ಹೆಣ್ಣು ಮಗಳು ಇರುತ್ತಾಳೆ. ನಮ್ಮ ತಂದೆಯಾದ ಗುಂಡಪ್ಪ ಇವರು ಸರಕಾರಿ ನೌಕರರಿದ್ದು ಅವರು ತಮ್ಮ ಸೇವಾ ಅವದಿಯಲ್ಲಿ ಸುಲ್ತಾನಪುರ ಗ್ರಾಮದಲ್ಲಿ  ಎರಡಂತಸ್ಥಿನ ಒಂದು ಮನೆ ಕಟ್ಟಿಸಿದ್ದು ಇರುತ್ತದೆ. ನಮ್ಮ ತಂದೆ ಜೀವಂತ ಇದ್ದ ಅವದಿಯಲ್ಲಿ ರಾಜಕುಮಾರ ತಂದೆ ಅಯ್ಯಪ್ಪ ಕುರ್ಲೆ ಸಾ: ಭರತ್ ನಗರ ಕಲಬುರಗಿ ಇವರ ಹತ್ತಿರ ಮನೆಯ ಸಂಸಾರದ ಅಡಚಣೆಯ ಪ್ರಯುಕ್ತ ಸುಮಾರು 4 ಲಕ್ಷ ರುಪಾಯಿಗಳನ್ನು ಫೈನಾನ್ಸ್ ಮುಖಾಂತರ ದಿನಾಂಕ:10/05/2019 ರಂದು ಪಡೆದುಕೊಂಡಿದ್ದು ಇರುತ್ತದೆ. ಈ ಹಣಕ್ಕೆ ನಾವು ಪ್ರತಿ ತಿಂಗಳು ಬಡ್ಡಿ ಕಟ್ಟುತ್ತಾ ಬಂದಿರುತ್ತೇವೆ. ಕೆಲವು ತಿಂಗಳುಗಳ ನಂತರ ನಮಗೆ ಹಣದ ಅಡೆಚಣೆ ಇದ್ದ ಪ್ರಯುಕ್ತ ಬಡ್ಡಿ ಕಟ್ಟಲು ಆಗಿರುವುದಿಲ್ಲ, ದಿನಾಂಕ:01/03/2021 ರಂದು ನಾನು ನಮ್ಮ ತಂದೆ ತಾಯಿ ಎಲ್ಲರು ಮನೆಯಲ್ಲಿದ್ದಾಗ ರಾಜಕುಮಾರ ಕುರ್ಲೆ ಇತನು ನಮ್ಮ ಮನೆಗೆ ಬಂದು ನಮ್ಮೊಂದಿಗೆ ಜಗಳ ತೆಗೆದಿದ್ದು ನೀವು ನಮ್ಮಿಂದ ಪಡೆದುಕೊಂಡು 4 ಲಕ್ಷ ರೂಪಾಯಿ ಮತ್ತು ಅದರ ಬಡ್ಡಿ ಹಣ ಇಲ್ಲಿಯ ವರೆಗೆ ಕಟ್ಟಿರುವುದಿಲ್ಲ 4 ದಿವಸಗಳಲ್ಲಿ ನಮ್ಮ ಹಣ ಬಡ್ಡಿ ಸಮೇತ ಕೊಡಬೇಕು ಇಲ್ಲದಿದ್ದರೆ ನಿಮ್ಮ ಮನೆಯನ್ನು ನಮ್ಮ ಹೆಸರಿಗೆ ಬರೆದುಕೊಡಬೇಕು ಅಂತ ಬೆದರಿಕೆ ಹಾಕಿ ಹೋಗಿದ್ದು ಇರುತ್ತದೆ. ಇದಾದ ನಂತರ ದಿನಾಂಕ:06/03/2021 ರಂದು ರಾಜಕುಮಾರ ಇತನು ಪುನಃ ನಮ್ಮ ಮನೆಗೆ ಬಂದು ನಮ್ಮ ತಂದೆ ತಾಯಿಯೊಂದಿಗೆ ಜಗಳಕ್ಕೆ ಬಿದ್ದು ನಮ್ಮೆಲ್ಲರಿಗೆ ಹೆದರಿಸಿ ನಮ್ಮ ಹಣ ನಮಗೆ ಕೊಡಿರಿ ಇಲ್ಲವಾದರೆ ಇಂದೆ ನಿಮ್ಮ ಮನೆಯನ್ನು  ನಮ್ಮ ಹೆಸರಿಗೆ ರೆಜಿಸ್ಟರ್ ಮಾಡಿಸಿ ಕೊಡಿರಿ  ಅಂತ ಹೇಳಿದ್ದು, ಆಗ ನಾವು ಅಷ್ಟೊಂದು ಹಣ ಸದ್ಯಕ್ಕೆ ನಮ್ಮ ಹತ್ತಿರವಿಲ್ಲ ಸ್ವಲ್ಪ ಕಾಲಾವಕಾಶ ಕೊಡಿ ಅಂತ ಕೇಳಿದ್ದಕ್ಕೆ ರಾಜಕುಮಾರ ಕುರ್ಲೆ ಇತನು ನಿಮಗೆ ಕೊಟ್ಟ ಅವದಿ ಮುಗಿದಿರುತ್ತದೆ, ನಿಮ್ಮ ಮನೆಯನ್ನು ನಮ್ಮ ಹೆಸರಿಗೆ ಮಾಡಿಸಿಕೊಡಿರಿ ಅಂತ ಹೇಳಿ ನಮಗೆ ಹೆದರಿಸಿ ನನಗೆ ಮತ್ತು ನಮ್ಮ ತಂದೆ ತಾಯಿ ಮೂರು ಜನರಿಗೆ ಸಬ್ ರೆಜಿಸ್ಟರ್ ಆಫೀಸಿಗೆ ಕರೆದು ಕೊಂಡು ಹೋಗಿ ನಮ್ಮ ತಂದೆಯ ಹೆಸರಿಗೆ ಇರುವ  ಸುಲ್ತಾನಪುರದಲ್ಲಿರುವ ಸರ್ವೆ ನಂ:185 ನೇದ್ದರಲ್ಲಿರುವ ಪ್ಲಾಟ್ ನಂ:01 ರಲ್ಲಿರುವ ಮನೆ ನಂ 8-1544/185/ಕ/1, ನೇದ್ದನ್ನು ರಾಜಕುಮಾರ ಕುರ್ಲೆ ಇತನು ತನ್ನ ಹೆಸರಿಗೆ ಮಾಡಿಸಿಕೊಂಡಿರುತ್ತಾನೆ. ಸೇಲ್ ಡೀಡ್ ಪತ್ರದಲ್ಲಿ ರಾಜಕುಮಾರ ಕುರ್ಲೆ  ಇತನು ಸಿಂಡಿಕೇಟಿನ ಬ್ಯಾಂಕಿನ ಚೆಕ್ ನಂ:587585 ನೇದ್ದರ ಮುಖಾಂತರ ನಮ್ಮ ತಂದೆಗೆ 23 ಲಕ್ಷ ರೂಪಾಯಿ ಹಣ ಕೊಟ್ಟಿರುವುದಾಗಿ ನಮೂದಿಸಿರುತ್ತಾರೆ. ಆದರೆ ರಾಜಕುಮಾರ ಕುರ್ಲೆ ಇತನು ನಮ್ಮ ತಂದೆಗಾಗಲಿ, ನಮ್ಮ ತಾಯಿಗಾಗಲಿ ಯಾವುದೆ ಹಣ ಕೊಟ್ಟಿರುವುದಿಲ್ಲ ಚೆಕ್ ನಂ:587585 ನೇದ್ದರ ಮುಖಾಂತರ 23 ಲಕ್ಷ ರೂಪಾಯಿ ಹಣ ಕೊಟ್ಟಿರುವುದಾಗಿ ನಮಗೆ ವಂಚಿಸಿ ಮೋಸದಿಂದ ನಮ್ಮ ಮನೆಯನ್ನು ತನ್ನ ಹೆಸರಿಗೆ ಮಾಡಿಸಿಕೊಂಡಿರುತ್ತಾನೆ. ಇದೇ ಚಿಂತೆಯಲ್ಲಿ ನಮ್ಮ ತಂದೆಯವರು ದಿನಾಂಕ: 22/08/2022 ರಂದು ಆತ್ಮ ಹತ್ಯೆ ಮಾಡಿಕೊಂಡು ಮೃತಪಟ್ಟಿದ್ದು ಈ ಬಗ್ಗೆ ಚೌಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಇರುತ್ತದೆ, ನಮ್ಮ ತಂದೆ ಮೃತ ಪಟ್ಟ 2 ತಿಂಗಳಲ್ಲಿ ನಮ್ಮ ತಾಯಿಯಾದ ಸುಮಿತ್ರ ಇವರು ಕೂಡ ಮಾನಸೀಕವಾಗಿ ನೊಂದು ಮೃತ ಪಟ್ಟಿದ್ದು ಇರುತ್ತದೆ. ನಮ್ಮ ತಂದೆ ತಾಯಿ ಇಬ್ಬರು ಮೃತ ಪಟ್ಟ ದುಃಖದಲ್ಲಿ ಏನು ಮಾಡಬೇಕು ಎಂಬುವುದು ತೋಚದೆ ಮನೆಯಲ್ಲಿ ವಿಚಾರಿಸಿ ಇಂದು ಠಾಣೆಗೆ ಬಂದು ದೂರು ಸಲ್ಲಿಸಿದ್ದು ಇರುತ್ತದೆ. ಕಾರಣ ನಮಗೆ ಹಣಕೊಡದೆ, ಚೆಕ್ ಮುಖಾಂತರ 23 ಲಕ್ಷ ರೂಪಾಯಿ  ಹಣಕೊಟ್ಟಿರುವುದಾಗಿ   ಹೇಳಿ ನಮಗೆ ಮೋಸ ಮಾಡಿ ನಮ್ಮ ಮನೆಯನ್ನು ತನ್ನ ಹೆಸರಿಗೆ ರೆಜಿಸ್ಟರ್ ಮಾಡಿಕೊಂಡ ರಾಜಕುಮಾರ   ಕುರ್ಲೆ ಇತನ ವಿರುದ್ದ ಕಾನೂನು ರೀತಿ ಕ್ರಮ ಜರುಗಿಸಬೇಕೆಂದು ಕೊಟ್ಟ ದೂರು ಅರ್ಜಿಯ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

 

 

ಫರಹತಾಬಾದ ಪೊಲೀಸ್‌ ಠಾಣೆ :- ದಿನಾಂಕ: 31-01-2023 ರಂದು 8:45 ಪಿಎಮ್ ಕ್ಕೆ ಶ್ರೀ ಸುಭಾಶ ತಂದೆ ಹಣಮಂತ ವತನದಾರ ವಯ|| 29 ವರ್ಷ ಉ|| ಗೌಂಡಿ ಕೆಲಸ ಜಾ||ಹೊಲೆಯ ಎಸ್.ಸಿ ಸಾ|| ಇಟಗಾ ಕೆ ತಾಜಿ|| ಕಲಬುರಗಿ ರವರು ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರಿನ ಸಾರಾಂಶವೇನೆಂದರೆ, ನನ್ನ ತಮ್ಮನಾದ  ಶ್ರೀನಿವಾಸ ತಂದೆ ಹಣಮಂತ ವತನದಾರ ಈತನ ಹೆಸರಿನಲ್ಲಿರುವ ಮೋ.ಸೈ ನಂಬರ ಕೆಎ-32/ಇಕೆ-3634 ನೇದ್ದನು ನಾನು ಪ್ರತಿ ದಿವಸ ಗೌಂಡಿ ಕೆಲಸ ಮಾಡಲು ಕಲಬುರಗಿಗೆ ತೆಗೆದುಕೊಂಡು ಹೋಗಿ ಬರುತ್ತೇನೆ. ಹೀಗಿದ್ದು ದಿನಾಂಕ:28-01-2023 ರಂದು ಬೆಳೆಗ್ಗೆ ಗೌಂಡಿ ಕೆಲಸಕ್ಕೆ ಕಲಬುರಗಿಗೆ ಹೋಗಿ ಮರಳಿ ಸಾಯಂಕಾಲ 6:00 ಗಂಟೆಗೆ ನಮ್ಮ ಊರಾದ ಇಟಗಾ ಗ್ರಾಮ್ಮಕ್ಕೆ ಬಂದಿರುತ್ತೇನೆ. ನಮ್ಮೂರಿನ ಡಾ||ಶಾಸ್ತ್ರೀಕರ ರವರ ತೋಟವು ಇಟಗಾ ದಿಂದ ಜೈಲ ಕಡೆಗೆ ಹೋಗುವ ರಸ್ತೆಯ ಪಕ್ಕದಲ್ಲಿರುವ ಸರಕಾರಿ ಶಾಲೆಗೆ ಹೊಂದಿಕೊಂಡಿರುತ್ತದೆ. ಸದರಿ ತೋಟದಲ್ಲಿ ಮಾವಿನ ಗಿಡ, ಕಾಯಿಪಲ್ಲೆ ಮತ್ತು ಕಡಲೆ ಇರುವುದರಿಂದ ರಾತ್ರಿ ತೋಟದಲ್ಲಿ ಮಲಗಿಕೊಳ್ಳಲು ನಾನು ರಾತ್ರ್ರಿ 9:00 ಗಂಟೆಗೆ ಹೊಂಡಾ ಲಿವೊ ಮೋ.ಸೈ ನಂ ಕೆಎ-32 ಇಕೆ-3634 ನೇದ್ದನ್ನು ತೆಗೆದುಕೊಂಡು ಡಾ||ಶಾಸ್ರ್ತೀಕರ ರವರ ತೋಟಕ್ಕೆ ಹೋಗಿ, ಮೋ.ಸೈಯನ್ನು ತೋಟದಲ್ಲಿ ನಿಲ್ಲಿಸಿ ಹೊಲದಲ್ಲಿದ್ದ ಕೋಣೆಯಲ್ಲಿ ನಾನು ರಾತ್ರಿ 10:00 ಗಂಟೆಗೆ ಮಲಗಿಕೊಂಡಿರುತ್ತೇನೆ. ದಿನಾಂಕ:29-01-2023 ರಂದು ಬೆಳೆಗ್ಗೆ 6:00 ಗಂಟೆಗೆ ನಾನು ಎದ್ದು ಮನೆಗೆ ಹೋಗಬೇಕೆಂದು ನಾನು ತಂದಿದ್ದ ಮೋ.ಸೈ ನೋಡಲಾಗಿ, ರಾತ್ರಿ ನಾನು ಹೊಲದಲ್ಲಿಟ್ಟದ್ದ ಮೋ.ಸೈ ಕಾಣಿಸಲಿಲ್ಲ. ನಾನು ಗಾಬರಿಗೊಂಡು ಹೊಲ್ಲದ ಸುತ್ತಮುತ್ತ ಹೂಡುಕಿದರೂ ಮೋ.ಸೈ ಕಾಣಿಸಲಿಲ್ಲ.  ಕಾರಣ ಕಳ್ಳತನವಾದ ನನ್ನ ಮೋಟಾರ ಸೈಕಲ ಹೊಂಡಾ ವಿವೋ ಮೋ.ಸೈ ನಂ:ಕೆಎ-32 ಇಕೆ-3634 ಅ.ಕಿ 35000/- ರೂ ನೇದ್ದನ್ನು ಹುಡುಕಿಕೊಡಬೇಕೆಂದು ಫಿರ್ಯಾದಿ ಕೊಟ್ಟ ದೂರಿನ ಸಾರಾಂಶದ ಮೇಲಿಂದ  ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

 

 

ಸಂಚಾರಿ ಪೊಲೀಸ್‌ ಠಾಣೆ-1 :- ದಿನಾಂಕ: 31-01-2023 ರಂದು ಸಾಯಾಂಕಾಲ 7:00 ಗಂಟೆಗೆ ಸಂಗಮೇಶ ತಂದೆ ಲಕ್ಷ್ಮಣ ಕೊಟ್ಟರಕಿ  ಇವರು ಠಾಣೆಗೆ ಹಾಜರಾಗಿ ಕನ್ನಡದಲ್ಲಿ ಗಣಕಿಕೃತ ಮಾಡಿದ ದೂರು ಅರ್ಜಿಯನ್ನು ಹಾಜರಪಡಿಸಿದ್ದರ ಸಾರಂಶವೆನೆಂದರೆ ನಾನು ಸಂಗಮೇಶ ತಂದೆ ಲಕ್ಷ್ಮಣ ಕೊಟ್ಟರಕಿ  ವಯ: 37 ವರ್ಷ ಉ: ವ್ಯಾಪಾರ  ಜಾ: ಕೊಮಟಿ ಸಾ: ರಾಮನಗರ, ಬೀದರ ಈ ಮೂಲಕ ನಾನು ದೂರು ಸಲ್ಲಿಸುವದೇನೆಂದರೆ. ದಿನಾಂಕ 27.01.2023 ರಂದು ನಾನು ಮತ್ತು ನನ್ನ ಹೆಂಡತಿ ಮಹಾಲಕ್ಷ್ಮೀ ಹಾಗೂ ನನ್ನ ಗೆಳೆಯ ಭರತಕುಮಾರ ಮತ್ತು ಅವರ ಹೆಂಡತಿಯಾದ ಶ್ರೀಶಾದೇವಿ ನಾಲ್ಕು ಜನರು ಸೇರಿ ಕಾರ್ ನಂಬರ ಕೆಎ-38/ಎನ್-1899 ನೇದ್ದರಲ್ಲಿ ಬೀದರನಿಂದ ಗೋವಾ ಪ್ರವಾಸ ಕುರಿತು  ಹೋಗಿದ್ದು ಇರುತ್ತದೆ.  ನಿನ್ನೆ ದಿನಾಂಕ 30.01.2023 ರಂದು ಸಾಯಂಕಾಲ ಮರಳಿ ಬೀದರಗೆ ಬರುವ ಕುರಿತು ನಮ್ಮ ಕಾರಿನಲ್ಲಿ ನಾವು ನಾಲ್ಕು ಜನರು ವಿಜಯಪುರ ಮುಖಾಂತರ ಬರುವಾಗ ಜೇವರ್ಗಿ ದಾಟಿ ನನ್ನ ಗೆಳೆಯ ಭರತಕುಮಾರ ಇತನು ಕಾರನ್ನು ಅತಿವೇಗವಾಗಿ ಮತ್ತು ಅಲಕ್ಷತನದಿಂದ ಚಲಾಯಿಸುತ್ತಿದ್ದನು ನಾವು ನಿಧಾನವಾಗಿ ಚಲಾಯಿಸುವಂತೆ ಹೇಳಿದರೂ ಸಹ ಅದೇ ವೇಗದಲ್ಲಿ ಚಲಾಯಿಸುತ್ತಿದ್ದನು ಅಷ್ಟರಲ್ಲಿ ಹಸನಾಪೂರ ಕ್ರಾಸ್ ಹತ್ತಿರ ಬೆಳಿಗ್ಗೆ 5:40 ಗಂಟೆ ಸುಮಾರಿಗೆ ಯಾವುದೋ ಒಂದು ಅಪರಿಚಿತ ವಾಹನ ಎದುರುಗಡೆ ಬಂದಿದ್ದು ಆಗ ಭರತಕುಮಾರ ಇತನು ಒಮ್ಮೇಲೆ ಬಲಕ್ಕೆ ಕಟ್ ಹೊಡೆದ ಪರಿಣಾಮ ಕಾರು ಬಲಗಡೆ ರಸ್ತೆ ಕೆಳಭಾಗದಲ್ಲಿ ತಗ್ಗಿನಲ್ಲಿ  ಪಲ್ಟಿ ಆಗಿದ್ದು, ಅಲ್ಲಿ ಹೋಗುತ್ತಿದ್ದ ಸಾರ್ವಜನಿಕರು ಬಂದು ನಮಗೆ ಕಾರಿನಿಂದ ಹೊರಗೆ ತೆಗೆದಿದ್ದು. ಸದರ ಘಟನೆಯಿಂದ ನಮಗೆ ನಾಲ್ಕು ಜನರಿಗೆ ಅಲ್ಲಲ್ಲಿ ಸಣ್ಣಪುಟ್ಟ ಗಾಯಗಳಾಗಿದ್ದು ನಮ್ಮ ಕಾರನ್ನು ನೋಡಲು ಜಖಂ ಗೊಂಡಿದ್ದು. ನಾವು ನಾಲ್ಕು ಜನರು ಸಣ್ಣಪುಟ್ಟ ಗಾಯಗಳಾಗಿದ್ದರಿಂದ ಆಸ್ಪತ್ರೆಗೆ ತೊರಿಸಿಕೊಂಡಿರುವುದಿಲ್ಲ  ಕಾರಣ ಸದರಿ  ಕಾರ್ ನಂಬರ ಕೆಎ-38 ಎನ್-1899 ನೇದ್ದರ ಚಾಲಕ ಭರತಕುಮಾರ ಇತನ ಮೇಲೆ  ಕಾನೂನು ಕ್ರಮ ಜರುಗಿಸಬೇಕು ಎಂದು ಫಿರ್ಯಾದಿ ಕೊಟ್ಟ ಹೇಳಿಕೆ ಸಾರಾಂಶದ ಮೇಲಿಂದ  ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

 

ಚೌಕ್‌ ಪೊಲೀಸ್‌ ಠಾಣೆ :- ದಿನಾಂ:31.01.2023 ರಂದು  ಸಾಯಂಕಾಲ 7.00 ಗಂಟೆಗೆ ಶ್ರೀ ಬಂಡೆಪ್ಪ ತಂದೆ ಬಸವಂತಪ್ಪ ಹೊನ್ನಾಳೆ ವ:54 ವರ್ಷ ಉ:ಒಕ್ಕಲುತನ ಜಾತಿ:ಲಿಂಗಾಯತ ಸಾ:ಬಸವೇಶ್ವರ ಚೌಕ ಭಾಲ್ಕಿತಾ:ಭಾಲ್ಕಿ ಜಿ:ಬೀದರ ಹಾ:ವ:ಮಾಕಾ ಲೇಔಟ ಜೇವರ್ಗಿ ಕಾಲೋನಿ ಕಲಬುರಗಿ ಇವರು ಠಾಣೆಗೆ ಹಾಜರಾಗಿ ತಮ್ಮದೊಂದು ಕನ್ನಡದಲ್ಲಿ ಗಣಕೀಕೃತ ಮಾಡಿದ ದೂರು ಕೊಟ್ಟಿದ್ದರ ಸಾರಾಂಶವೆನೆಂದೆರೆ, ಈ ಮೂಲಕ ತಮಗೆ ದೂರು ಕೊಡುವುದೆನೆಂದರೆ, ಶ್ರೀಮತಿ ನಂದಿತಾ ಗಂಡ ಸುಭಾಷ ಜಮಾದಾರ ಸಾ:ಮಾತಾ ಮಾಣಿಕೇಶ್ವರಿ ಕಾಲೋನಿ ಕಲಬುರಗಿ ಇವರ ಹೆಸರಿನಲ್ಲಿಇರುವ ಸರ್ವೆ ನಂಬರ.109 ಶೇಖ ರೋಜಾ ನಬೀ ಕಾಲೋನಿ ಆಳಂದ ರೋಡ ಕಲಬುರಗಿರಲ್ಲಿ ಬರುವ ಪ್ಲಾಟ ನಂಬರ. 67, 68 69, 81, 82, 83 ಪ್ರತಿಯೊಂದು ಪ್ಲಾಟ 30*40 ನೇದ್ದವುಗಳು ದಿನಾಂಕ:06/05/2015 ರಂದು ಖರೀದಿ ಮಾಡಿ, ಸಬ್ ರಜಿಸ್ಟರ ಕಚೇರಿ ಕಲಬುರಗಿಯಲ್ಲಿ ನನ್ನ ಹೆಸರಿಗೆ ನೋಂದಣಿ ಮಾಡಿಸಿಕೊಂಡಿರುತ್ತೇನೆ. ಈ ಪ್ಲಾಟುಗಳು ನನ್ನ ಕಬ್ಜೆಯಲ್ಲಿ ಇರುತ್ತವೆ. ಈ ಪ್ಲಾಟುಗಳಿಗೆ ಸಂಬಂಧಪಟ್ಟತೆರಿಗೆಯನ್ನು ಸಂಬಂಧಪಟ್ಟಇಲಾಖೆಯವರಿಗೆ ಕಟ್ಟುತ್ತಾ ಬಂದಿರುತ್ತೇನೆ.   ದಿನಾಂಕ:28/01/2023 ರಂದು ಬೆಳಿಗ್ಗೆ 10.00 ಗಂಟೆಯಿಂದ ಸಂಜೆ 6.30 ಗಂಟೆಯವರೆಗೆ ಪ್ಲಾಟ ನಂಬರ 67, 68 69, 81, 82, 83 ನೇದ್ದರ ಪ್ಲಾಟುಗಳ ಸುತ್ತಲು ಬೌಂಡರಿ ನಾನು ಮತ್ತು ನನ್ನ ತಂಗಿಯ ಮಗ ಜಗದೀಶ ತಂದೆ ಶ್ರೀಮಂತ ಗೊಬ್ಬರು ಮತ್ತು ಅವನ ಗೆಳೆಯ ಮಂಜುನಾಥ ತಂದೆ ಶಿವಕಾಂತ ಜಿಡಗೆಕರ ಮೂವರು ಕೂಡಿಕೊಂಡು ಲೇಬರಗಳಿಂದ ಸಿಮೆಂಟ ಪೋಲುಗಳನ್ನು ಸಿಮೆಂಟ ಮತ್ತು ಕಂಕರದಿಂದ ಫಿಕ್ಸ ಮಾಡಿ ಲೇಬರುಗಳು ಮನೆಗೆ ಹೋದ ನಂತರ ಸಂಜೆ 7-00 ಗಂಟೆ ಸುಮಾರಿಗೆ ನಾನು ಮತ್ತು ನನ್ನತಂಗಿಯ ಮಗ ಜಗದೀಶ ತಂದೆ ಶ್ರೀಮಂತ ಗೊಬ್ಬರು ಮತ್ತು ಅವನ ಗೆಳೆಯ ಮಂಜುನಾಥ ತಂದೆ ಶಿವಕಾಂತ ಜಿಡಗೆಕರ ಪ್ಲಾಟುಗಳ ಹತ್ತಿರ ಇದ್ದಾಗ ಅದೇ ಸಮಯಕ್ಕೆ 1) ಅಬ್ದುಲ್ ಲತೀಫ  ತಂದೆ ಅಬ್ದುಲ ರಜಾಕ ಖುರೇಷಿ ಸಾ:ಖಾಜಾ ಕಾಲೋನಿ ಕಲಬುರಗಿ 2) ಮಹ್ಮದ ಜಾಫರ ತಂದೆ ಅಬ್ದುಲ ಹಮೀದ ಮಹ್ಮದ ಮೌಲಾ ಸಾ:ಮಹೆಬೂಬ ನಗರ ಕಲಬುರಗಿ ಇವರುಗಳು ನನ್ನ ಹತ್ತಿರ ಬಂದವರೇ ನೀವು ಖರೀದಿಸಿದ ಪ್ಲಾಟುಗಳು ನಮಗೆ ಸಂಬಂಧಿಸಿದ್ದು ಇರುತ್ತೇವೆ. ಇಲ್ಲಿ ಎನು ಮಾಡಬೇಡರಿ ಎಂದು ಹೇಳಿದಾಗ, ಅವರಿಬ್ಬರಿಗೆ ನಮ್ಮ ಜಾಗೆಯಲ್ಲಿ ಎನು ಮಾಡಬೇಡರಿ ಅಂತಾ ಹೇಳುವವರು ನಿವ್ಯಾರು ಅಂತಾ ಹೇಳಿದಾಗ, ಅವರಿಬ್ಬರು ನನಗೆ ಏ ಚಿನಾಲಕೇ, ರಾಂಡಕೇ ಹಮಾರ ಪ್ಲಾಟ ಹೈ ಬೊಲೇತೋ ನಹೀ ಸುನತಾ ಅಂತಾ ಬೈಯ್ಯುತ್ತಾ ನಮ್ಮ ಈ ಮೇಲ್ಕಂಡ ಪ್ಲಾಟುಗಳಲ್ಲಿ ಅತಿಕ್ರಮಣ ಪ್ರವೇಶ ಮಾಡಿ ನಮ್ಮಎಲ್ಲಾ ಪ್ಲಾಟುಗಳ ಸುತ್ತೂಲು ಬೌಂಡರಿ ಸಲುವಾಗಿ ಸಿಮೆಂಟ ಮತ್ತು ಕಂಕರಗಳಿಂದ ಫಿಕ್ಸ ಮಾಡಿದ 24 ಪೋಲುಗಳು ಕೈಯಿಂದ ಎಳೆದಾಡಿ ಬೀಳಿಸಿ ಅಂದಾಜು 30,000/-ರೂ.ಯಷ್ಟು ಲುಕ್ಸಾನ ಮಾಡಿದ್ದು, ಅವರಿಗೆ ಕಂಬ ಬೀಳಿಸಿಬೇಡ ಅಂತಾ ಹೇಳಿದಾಗ ಅವರಿಬ್ಬರು ನನಗೆ ಹೊಡೆಯಲು ಮೈಮೇಲೆ ಬಂದಾಗ ಅವರಿಗೆ ಹೆದರಿ ಅಲ್ಲಿಂದ ಹೋಗುತ್ತಿರುವಾಗ ಅವರಿಬ್ಬರು ನನಗೆ ತಡೆದು ನಿಲ್ಲಿಸಿ ಇಬ್ಬರು ಕೈಯಿಂದ ನನ್ನಎದೆ, ಹೊಟ್ಟೆ ಮೇಲೆ ಹೊಡೆ ಬಡೆ ಮಾಡುತ್ತಿರುವಾಗ ಅಲ್ಲೇ ಇದ್ದ ನನ್ನ ತಂಗಿ ಮಗ ಜಗದೀಶ ಮತ್ತು ಮಂಜುನಾಥ ಇವರುಗಳು ನೋಡಿ ಜಗಳಾ ಬಿಡಿಸಿಕೊಂಡರು. ನಂತರ ಅಬ್ದುಲ್ ಲತೀಫ ಮತ್ತು ಮಹ್ಮದ ಜಾಫರ ಇವರಿಬ್ಬರು ನನಗೆ ಇನ್ನೊಮ್ಮೆ ಈ ಜಾಗೆಯಲ್ಲಿ ಕೆಲಸ ಮಾಡಿದರೆ ಜೀವ ಸಹಿತ ಬಿಡುವುದಿಲ್ಲಾ ಎಂದು ಜೀವ ಭಯ ಹಾಕಿ ಅಲ್ಲಿಂದ ಹೋದರು. ನಂತರ ನಾನು ಉಪಚಾರ ಕುರಿತು ಜಿಲ್ಲಾ ಸರಕಾರಿ ಆಸ್ಪತ್ರೆ ಕಲಬುರಗಿಗೆ ಸೇರಿಕೆಯಾಗಿದ್ದು, ಚೌಕ ಪೊಲೀಸರು ಎಂ.ಎಲ್.ಸಿ.ವಿಚಾರಣೆಗಾಗಿ ಬಂದಾಗ ಅವರಿಗೆ ನಾನು ಚಿಕಿತ್ಸ ಪಡೆದುಕೊಂಡು ನಂತರ ಠಾಣೆಗೆ ಬಂದು ದೂರು ಕೊಡುತ್ತೇನೆ ಎಂದು ತಿಳಿಸಿರುತ್ತೇನೆ. ಇಂದು ಠಾಣೆಗೆ ಬಂದು ದೂರು ಕೊಡುತ್ತಿದ್ದು, ಈ ಕಾರಣದಿಂದ ದೂರು ಕೊಡಲು ತಡವಾಗಿರುತ್ತದೆ. ಈ ಘಟನೆಯ ಸಂಜೆ 7-00 ಗಂಟೆಯಿಂದ 7-30 ಗಂಟೆಯವರೆಗೆ ನಡೆದಿರುತ್ತದೆ. ಕಾರಣ ಮಾನ್ಯರವರು ನನ್ನ ಪ್ಲಾಟುಗಳಲ್ಲಿ ಅತಿಕ್ರಮಣ ಪ್ರವೇಶ ಮಾಡಿ ಫಿಕ್ಸ ಮಾಡಿದ ಸಿಮೆಂಟ ಪೋಲ್ ಬೀಳಿಸಿ ಲುಕ್ಸಾನ ಮಾಡಿ, ನನಗೆ ತಡೆದು ನಿಲ್ಲಿಸಿ ಅವಾಚ್ಯ ಜೀವ ಭಯ ಹಾಕಿದ 1) ಅಬ್ದುಲ್ ಲತೀಫ ತಂದೆ ಅಬ್ದುಲ ರಜಾಕ ಖುರೇಷಿ ಸಾ: ಖಾಜಾ ಕಾಲೋನಿ ಕಲಬುರಗಿ 2) ಮಹ್ಮದ ಜಾಫರ ತಂದೆ ಅಬ್ದುಲ ಹಮೀದ ಮಹ್ಮದ ಮೌಲಾ ಸಾ:ಮಹೆಬೂಬ ನಗರ ಕಲಬುರಗಿ ಇವರುಗಳ ವಿರುದ್ಧ ಕಾನೂನು ಕ್ರಮ ಜರುಗಿಸಬೇಕೆಂದು ಎಂದು ಫಿರ್ಯಾದಿ ಕೊಟ್ಟ ದೂರಿನ ಸಾರಾಂಶದ ಮೇಲಿಂದ  ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

 

 

ಸಂಚಾರಿ ಪೊಲೀಸ್‌ ಠಾಣೆ-2 :- ದಿನಾಂಕ: 31/01/2023 ರಂದು ಮಧ್ಯಾಹ್ನ 1:00 ಗಂಟೆಗೆ ಶ್ರೀ. ರಾಜು ರೆಡ್ಡಿ ತಂದೆ ಭೀಮ ರೆಡ್ಡಿ ರವರು ಠಾಣೆಗೆ ಹಾಜರಾಗಿ ಶ್ರೀ.ಶಿವಶರಣಪ್ಪಾ ತಂದೆ ಅಣ್ಣಪ್ಪಾ ಬೆಳ್ಳಿ ವಯಃ 60 ವರ್ಷ ಜಾತಿಃ ಲಿಂಗಾಯತ ಉಃ ಒಕ್ಕಲುತನ ಮುಕ್ಕಾಂ: ಶಿವಾಜಿ ನಗರ ಕಲಬುರಗಿ ರವರು ನೀಡಿರುತ್ತಾರೆಂಬ ಫಿರ್ಯಾದಿ ಅರ್ಜಿ ಸಲ್ಲಿಸಿದ್ದು ಸಾರಾಂಶವೆನೆಂದರೆ, ನಿನ್ನೆ ದಿನಾಂಕ 30/01/2023 ರಂದು ಬೆಳಿಗ್ಗೆ ನಾನು ಮತ್ತು ನನ್ನ ಮಗ ಶಿವಲೀಗಪ್ಪಾ ಇಬ್ಬರು ಕೂಡಿಕೊಂಡು ನಮ್ಮ ಹೊಂಡಾ ಶೈನ್ ಮೋಟರ ಸೈಕಲ ನಂ. ಕೆಎ 33 ಹೆಚ್ 9712 ಇದರ ಮೇಲೆ ನಮ್ಮ ರಿಕ್ಕಿನ ಆಲೂರ ಗ್ರಾಮದ ಹೊಲಕ್ಕೆ ತೊಗರೆ ರಾಶಿಗಾಗಿ ಹೋಗಬೇಕೆಂದು ಹೋಗುವಾಗ ನನ್ನ ಮಗ ಶಿವಲಿಂಗಪ್ಪಾ ಈತನು ಮೋಟರ ಸೈಕಲ ನಡೆಸುತ್ತಿದ್ದನು. ಸ್ವಲ್ಪ ವೇಗವಾಗಿ ಹೋಗುವಾಗ ಬೆಳಿಗ್ಗೆ 9:40 ಗಂಟೆ ಸುಮಾರಿಗೆ ರಿಂಗರೋಡಿನ ಪೂಜಾರಿ ಕಮಾನದ ಹತ್ತೀರ ಹೋಗುವಾಗ ವೇಗದಲ್ಲಿ ಮೋಟರ ಸೈಕಲ ಇದ್ದು, ಒಮ್ಮೇಲೆ ರೋಡಿಗೆ ಅಡ್ಡಲಾಗಿ ನಾಯಿ ಓಡಿ ಬಂದಿದ್ದು, ಮಗನು ಗಾಬರಿಗೊಂಡು ಮೋಟರ ಸೈಕಲಗೆ ಬ್ರೇಕ ಹಿಡಿದಾಗ ನಾನು ಹಾರಿ ಬಿದಿದ್ದು, ಮಗನು ಕೂಡಾ ಸೈಡಿಗೆ ಬಿದ್ದಿದ್ದು, ನನಗೆ ಬಲಗಾಲಿನ ಹಿಮ್ಮಡಿಯ ಮೇಲ್ಭಾಗದಲ್ಲಿ ಒಳಗಿನ ಎಲಬು ಮುರದಿದ್ದು, ಅಲ್ಲಲ್ಲಿ ಗುಪ್ತಗಾಯಗಳಾಗಿದ್ದು, ಅಲ್ಲಿಯೇ ಇರುವ ರಾಜುರೆಡ್ಡಿ ತಂದೆ ಭೀಮರೆಡ್ಡಿ, ಶಿವಲಿಂಗಪ್ಪಾ ತಂದೆ ಗುಂಡಪ್ಪಾ ಸಜ್ಜನ ಶೇಟ್ಟಿ ರವರು ನೋಡಿ ನಮಗೆ ಎಬ್ಬಿಸಿ, ನನ್ನ ಮಗ ಮತ್ತು ರಾಜುರೆಡ್ಡಿ ಇಬ್ಬರು ಕೂಡಿ ನನಗೆ ಉಪಚಾರಕ್ಕಾಗಿ ಡಾ|| ವಿನಯ ಪಾಟೀಲ ಆಸ್ಪತ್ರೆಗೆ ಸೇರಿಕೆ ಮಾಡಿರುತ್ತಾರೆ. ಕಾರಣ ಈ ವಿಷಯದಲ್ಲಿ ನನಗೆ ಬಹಳಷ್ಟು ನೋವಾಗಿ ಕಾಲು ಮುರಿದಿರುವುದರಿಂದ ಈ ವಿಷಯದಲ್ಲಿ ಕಾನೂನು ಪ್ರಕಾರ ಕ್ರಮ ಕೈಗೊಳ್ಳಬೇಕು, ಕೇಸು ಮಾಡುವ ಬಗ್ಗೆ ಈಗ ಗೊತ್ತಾಗಿದ್ದಕ್ಕೆ ವಿಚಾರಣೆ ಮಾಡಿ ಈ ಫಿರ್ಯಾದಿಯನ್ನು ರಾಜುರೆಡ್ಡಿ ತಂದೆ ಭೀಮರೆಡ್ಡಿ ಇವರ ಕಡೆಯಿಂದ ಕಳುಹಿಸಿಕೊಟ್ಟಿರುತ್ತೆನೆ ಅಂತಾ ಕೊಟ್ಟ ಫಿರ್ಯಾದಿ ಅರ್ಜಿ ಸಾರಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

 

 

ವಿಶ್ವವಿದ್ಯಾಲಯ ಪೊಲೀಸ ಠಾಣೆ :- ದಿನಾಂಕ : 30-01-2023 ರಂದು 5:00 ಪಿ.ಎಮ್ ದಿಂದ ದಿನಾಂಕ 31-01-2023 ರಂದು ಮುಂಜಾನೆ 6:00 ಎ.ಎಮ ಮಧ್ಯದ ಅವಧಿಯಲ್ಲಿ ಫಿರ್ಯಾದಿಯ ಮನೆಯ ಬಾಗಿಲ ಮುರಿದು ಮನೆಯಲ್ಲಿದ್ದ

೧) 12 ಗ್ರಾಂ ಬಂಗಾರದ ಖಡೆ ಅ.ಕಿ- 58,000/-ರೂ,

೨) 6 ಗ್ರಾಂ ಬಂಗಾರದ ಖಡೆ ಅ.ಕಿ- 25,000/-ರೂ, ಬೆಳ್ಳಿ ಸಾಮಾನುಗಳಾದ

೩) 50 ಗ್ರಾಂ ಬೆಳ್ಳಿ ಗ್ಲಾಸ್ ಅ.ಕಿ-2500/-ರೂ,

೪) 200 ಗ್ರಾಂ ಬೆಳ್ಳಿ ಕಾಲ್ ಚೈನ್ ಅ.ಕಿ- 10,000/-ರೂ,

೫) 50 ಗ್ರಾಂ ಬೆಳ್ಳಿಯ ಪ್ಲೇಟ್ ಅ.ಕಿ- 2500/-ರೂ,

೬) 30 ಗ್ರಾಂ ನ ಮೂರು ಬೆಳ್ಳಿಯ ಉಡದಾರ ಅ.ಕಿ- 1500/-ರೂ,

೭) 150 ಗ್ರಾಂ ಬೆಳ್ಳಿಯ ಮೂರು ಚೈನಗಳು ಅ.ಕಿ- 7,500/-ರೂ,

೮) 150 ಗ್ರಾಂ ಬೆಳ್ಳಿಯ ಪೂಜಾ ಸೆಟ್ ಅ.ಕಿ- 7,500/-ರೂ ಹಾಗೂ ನಗದು ಹಣ 2,00,000/-ರೂ ಗಳನ್ನು ಹೀಗೆ ಒಟ್ಟು 18 ಗ್ರಾಂ ಬಂಗಾರದ ಸಾಮಾನುಗಳು ಮತ್ತು 630 ಗ್ರಾಂ ಬೆಳ್ಳಿಯ ಸಾಮಾನುಗಳು ಎಲ್ಲಾ ಸೇರಿ ಅಂದಾಜು ಕಿಮ್ಮತ್ತು 3,14,500/-ರೂ ಹೀಗೆ ಬಂಗಾರ ಬೆಳ್ಳಿ ಹಾಗೂ ನಗದು ಹಣ ಹೀಗೆ ಒಟ್ಟು ಅಂದಾಜು ಕಿಮ್ಮತ್ತು 3,14,500/-ರೂ ಕಿಮ್ಮತ್ತಿನೇದ್ದವುಗಳನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿದ್ದಾರೆ ಎಂದು ಫಿರ್ಯಾದಿ ಕೊಟ್ಟ ಹೇಳಿಕೆ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

Last Updated: 01-02-2023 02:09 PM Updated By: ADMIN


Disclaimer :

Please note that this page also provides links to the websites / web pages of Govt. Ministries/Departments/Organisations.The content of these websites are owned by the respective organisations and they may be contacted for any further information or suggestion

Website Policies

 • Copyright Policy
 • Hyperlinking Policy
 • Security Policy
 • Terms & Conditions
 • Privacy Policy
 • Help
 • Screen Reader Access
 • Guidelines

Visitors

 • Last Updated​ :
 • Visitors Counter :
 • Version :
CONTENT OWNED AND MAINTAINED BY : Kalaburagi City Police
Designed, Developed and Hosted by: Center for e-Governance - Web Portal, Government of Karnataka © 2024, All Rights Reserved.

Best viewed in Chrome v-87.0.4280.141, Microsoft Edge v-87.0.664.75, Firefox -v-83.0 Browsers. Resolution : 1280x800 to 1920x1080