ಅಭಿಪ್ರಾಯ / ಸಲಹೆಗಳು

ಸಂಚಾರಿ ಪೊಲೀಸ್‌ ಠಾಣೆ-1 :- ದಿನಾಂಕ: 30/12/2022 ರಂದು ಸಾಯಂಕಾಲ 6:15 ಗಂಟೆಗೆ ಸರ್ಕಾರಿ ಆಸ್ಪತ್ರೆಯ ಸಿಬ್ಬಂದಿಯವರು ಠಾಣೆಗೆ ನಿಸ್ತಂತ್ತು ಮೂಲಕ ಸುಶೀಲಮ್ಮಾ ಇವರು ರಸ್ತೆ ಅಪಘಾತ ಹೊಂದಿ ಉಪಚಾರ ಕುರಿತು ಬಂದು ಸೇರಿಕೆಯಾಗಿರುತ್ತಾರೆ ಅಂತಾ ತಿಳಿಸಿದ್ದರಿಂದ ನಾನು ಆಸ್ಪತ್ರೆಗೆ ಬೇಟಿಕೊಟ್ಟು ಗಾಯಾಳು ಸುಶೀಲಮ್ಮಾ ಇವರನ್ನು ವಿಚಾರಿಸಲು ಅವರು ಕೊಟ್ಟ ಹೇಳಿಕೆ ಸಾರಂಶವೆನೆಂದರೆ ದಿನಾಂಕ: 29/12/2022 ರಂದು ಬೆಳಿಗ್ಗೆ ನಾನು ದಿನ ನಿತ್ಯದಂತೆ ರಾಮ ನಗರದಲ್ಲಿ ಬರುವ ಅಂಗನವಾಡಿ ಶಾಲೆ ಹೋಗುವ ಸಲುವಾಗಿ ನಮ್ಮ ಮನೆಯ ಹತ್ತೀರ ಇರುವಾಗ ನಮ್ಮ ಮನೆ ಹತ್ತೀರ ಆಟೋರಿಕ್ಷಾ ನಂಬರ ಕೆಎ-32/ಎಎ-2660 ನೇದ್ದರ ಚಾಲಕ ತನ್ನ ವಾಹನವನ್ನು ಚಲಾಯಿಸಿಕೊಂಡು ನಮ್ಮ ಮನೆಯ ಹತ್ತೀರ ಬಂದನು ನಾನು ರಾಮ ನಗರದಲ್ಲಿರುವ ಅಂಗನವಾಡಿ ಶಾಲೆಯವರೆಗೆ ಹೋಗುವ ಕುರಿತು ಸದರ ಆಟೋರಿಕ್ಷಾ ವಾಹನದಲ್ಲಿ ಕುಳಿತಾಗ ಸದರ ಆಟೋರಿಕ್ಷಾ ಚಾಲಕನು ಇಂದಿರಾ ನಗರದಿಂದ ಸೆಂಟ್ ಮೇರಿ ಶಾಲೆಯ ಎದುರಿನಿಂದ ಆಟೋರಿಕ್ಷಾ ಚಲಾಯಿಸಿಕೊಂಡು ಹೋಗಿ ರಾಮ ನಗರದಲ್ಲಿ ಬರುವ ನಮ್ಮ ಅಂಗನವಾಡಿ ಶಾಲೆಯ ಎದುರಿನ ರೋಡ ಮೇಲೆ  ಬೆಳಿಗ್ಗೆ ಅಂದಾಜು 11:30 ಗಂಟೆ ಸುಮಾರಿಗೆ ಆಟೋರಿಕ್ಷಾ ವಾಹನ ನಿಲ್ಲಿಸಿದಾಗ ನಾನು ಆಟೋರಿಕ್ಷಾ ವಾಹನದಿಂದ ಇಳಿಯುತ್ತೀರುವಾಗ ಸದರ ಆಟೋರಿಕ್ಷಾ ಚಾಲಕನು ನಾನು ಆಟೋರಿಕ್ಷಾ ವಾಹನದಿಂದ ಇಳಿಯುತ್ತೀರುವದನ್ನು ಗಮನಿಸದೆ ನಿಷ್ಕಾಳಿಜಿತನದಿಂದ ಆಟೋರಿಕ್ಷಾ ವಾಹನ ಅತಿವೇಗವಾಗಿ ಮತ್ತು ಅಲಕ್ಷತನದಿಂದ ಚಲಾಯಿಸಿ ನನಗೆ ಆಟೋರಿಕ್ಷಾ ವಾಹನದಿಂದ ಕೆಳಗಡೆ ಬಿಳಿಸಿ ಅಪಘಾತ ಮಾಡಿ ನನಗೆ ಭಾರಿಗಾಯಗೊಳಿಸಿ ತನ್ನ ವಾಹನ ಸಮೇತ ಓಡಿ ಹೋಗಿದ್ದು ಆತನ ಮೇಲೆ ಕಾನೂನು ಕ್ರಮ ಜರುಗಿಸಬೇಕು ಎಂದು ಫಿರ್ಯಾದಿ ಕೊಟ್ಟ ಅರ್ಜಿಯ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

 

ರಾಘವೇಂದ್ರ ನಗರ ಪೊಲೀಸ್‌ ಠಾಣೆ:-  ದಿನಾಂಕ: 30/12/2022 ರಂದು ಸಾಯಂಕಾಲ  7:15 ಗಂಟೆಗೆ ಶ್ರೀ ಮಲ್ಲಿಕಾರ್ಜುನ ಜಾನೆ ಎಎಸ್ಐ ರಾಘವೇಂದ್ರ ನಗರ ಪೊಲೀಸ ಠಾಣೆ ಕಲಬುರಗಿರವರು ಠಾಣೆಗೆ ಬಂದು ಒಬ್ಬ ಆರೋಫಿತ, ಜಪ್ತಿ ಪಂಚನಾಮೆ ಮುದ್ದೆಮಾಲಿನೊಂದಿಗೆ ಜ್ಞಾಪನ ಪತ್ರ ಕೊಟ್ಟ ಸಾರಾಂಶವೇನೆಂದರೆ, ಇಂದು ದಿನಾಂಕ:30/12/2022 ರಂದು ಸಾಯಂಕಾಲ 5-00 ಗಂಟೆಯ ಸುಮಾರಿಗೆ ನಾನು ಮತ್ತು ನಮ್ಮ ಠಾಣೆಯ ಸಿಬ್ಬಂದಿಯವರಾದ ಶ್ರೀ ಉಮೇಶ ಸಿಪಿಸಿ-111, ಶ್ರೀ ರಮೇಶ ಸಿಪಿಸಿ-445, ಹಾಗೂ ಶ್ರೀ ಶರಣಬಸವ ಸಿಪಿಸಿ-511 ರವರನ್ನು ಸಂಗಡ ಕರೆದುಕೊಂಡು ಠಾಣಾವ್ಯಾಪ್ತಿಯಲ್ಲಿ ಪೆಟ್ರೋಲಿಂಗ್ ಕರ್ತವ್ಯ ನಿರ್ವಹಿಸುತ್ತಿರುವಾಗ ಖಚಿತ ಮಾಹಿತಿ ಬಂದಿದ್ದೆನೆಂದರೆ, ಠಾಣಾ ವ್ಯಾಪ್ತಿಯ ಗಾಲಿಬ ಕಾಲೋನಿ ಹತ್ತಿರ ಸಾರ್ವಜನಿಕ ರಸ್ತೆಯ ಮೇಲೆ ಒಬ್ಬ ವ್ಯಕ್ತಿ ಕುಳಿತುಕೊಂಡು ರಸ್ತೆಯ ಮೇಲೆ ಹೋಗಿಬರುವ ಜನರಿಗೆ ಇದು ಬಾಂಬೆ ಮಟಕಾ ಇದೆ 1 ರೂಪಾಯಿಗೆ 80 ರೂಪಾಯಿ ಬರುತ್ತದೆ ಅಂತ ಹೇಳಿ ಸಾರ್ವಜನಿಕರಿಂದ ಹಣ ಪಡೆದುಕೊಂಡು ಮಟಕಾ ಚೀಟಿ ಬರೆದು ಕೊಡುತ್ತಿದ್ದಾನೆ ಅಂತ ಖಚಿತ ಮಾಹಿತಿ ಬಂದಿರುತ್ತದೆ ಅಂತಾ ತಿಳಿಸಿರುವದರಿಂದ ಸದರಿ ಮಾಹಿತಿಯನ್ನು ಮಾನ್ಯ ಮೇಲಾಧಿಕಾರಿಯವರಿಗೆ ತಿಳಿಸಿ ಮಾನ್ಯ ಮೇಲಾಧಿಕಾರಿಯವರ ಮಾರ್ಗದರ್ಶನದಂತೆ ಖಚಿತವಾದ ಮಾಹಿತಿಯಂತೆ ಸದರಿಯವನ ಮೇಲೆ ದಾಳಿ ಮಾಡಿ ಕ್ರಮ ಕೈಕೊಳ್ಳುವ ಕುರಿತು ಇಬ್ಬರು ಪಂಚರನ್ನು ಶ್ರೀ ರಮೇಶ ಸಿಪಿಸಿ-445 ರವರ ಮುಖಾಂತರ ಬರಮಾಡಿಕೊಂಡು ಅವರಿಗೆ ತಿಳಿಹೇಳಿ ನಂತರ ಪಂಚರು ಮತ್ತು ನಾವು ಸಿಬ್ಬಂದಿಯವರು ನಮ್ಮ ನಮ್ಮ ಮೋಟಾರ ಸೈಕಲ್ಮೇಲೆ ಸಾಯಂಕಾಲ 5:15 ಗಂಟೆಗೆ ಹೊರಟು 5:30 ಗಂಟೆಗೆ ಸ್ಥಳಕ್ಕೆ ತಲುಪಿ ಮರೆಯಾಗಿ ನಿಂತುಕೊಂಡು ನೋಡಲಾಗಿ ಒಬ್ಬ ವ್ಯಕ್ತಿ ಸಾರ್ವಜನಿಕ ರಸ್ತೆಯ ಪಕ್ಕದಲ್ಲಿ ಕುಳಿತುಕೊಂಡು ರಸ್ತೆಯ ಮೇಲೆ ಹೋಗಿ ಬರುವವರಿಗೆ ಇದು ಬಾಂಬೆ ಕಲ್ಯಾಣ ಮಟಕಾ ಇದೆ 1 ರೂಪಾಯಿಗೆ 80 ರೂಪಾಯಿ ಬರುತ್ತದೆ ಅಂತ ಅವರಿಂದ ಹಣ ಪಡೆದುಕೊಂಡು ಮಟಕಾ ಚೀಟಿ ಬರೆದು ಕೂಡುತ್ತಿರುವದನ್ನು ಖಚಿತಪಡಿಸಿಕೊಂಡು ನಾನು ಮತ್ತು ಸಿಬ್ಬಂದಿಯವರು ಕೂಡಿಕೊಂಡು ಪಂಚರ ಸಮಕ್ಷಮ ಸದರಿ ಮಟಕಾ ಚೀಟಿ ಬರೆದುಕೊಳ್ಳುತ್ತಿದ್ದ ವ್ಯಕ್ತಿ ಮೇಲೆ ದಾಳಿಮಾಡಲು, ಮಟಕಾ ಬರೆಯಿಸಲು ಬಂದವರು ಓಡಿಹೋಗಿದ್ದು, ಮಟಕಾ ಚೀಟಿಯನ್ನು ಬರೆದುಕೊಳ್ಳುತ್ತಿದ್ದವನಿಗೆ ಸಿಬ್ಬಂದಿಯವರ ಸಹಾಯದಿಂದ ವ್ಯಕ್ತಿಗೆ ಹಿಡಿದಿದ್ದು ಅವನ ಹೆಸರು ವಿಳಾಸ ವಿಚಾರಿಸಲು ತನ್ನ ಹೆಸರು ನಜಮೋದ್ದಿನ ತಂದೆ ಶರ್ಪೊದ್ದಿನ ಶೇಖ ವಯ-28 ವರ್ಷ ಜಾ||ಮುಸ್ಲಿಂ ಉ||ಕಾರಚಾಲಕ ಸಾ||ಗಾಲಿಬಕಾಲೋನಿ ಕಲಬುರಗಿ ಅಂತಾ ತಿಳಿಸಿದ್ದು ಸದರಿಯವನ ಅಂಗ ಶೋದನೆಮಾಡಲು ಅವನ ಹತ್ತಿರ ನಗದುಹಣ 1470 /-ರೂ ಸಿಕ್ಕಿದ್ದು ಮತ್ತು ಒಂದು ಬಾಲ ಪೆನ ಅಃಕಿಃ 00, ಒಂದು ಮಟಕಾ ಚೀಟಿ ಅಕಿ. 00/-ದೊರೆತಿದ್ದು, ಸದರಿ ಮಟಕಾ ಜೂಜಾಟಕ್ಕೆ ಸಂಬಂಧ ಪಟ್ಟ 1470/- ರೂಗಳು, ಬೆಲೆಬಾಳುವದನ್ನು ಸದರಿಯವನಿಂದ ಪಂಚರ ಸಮಕ್ಷಮ ಜಪ್ತಿಮಾಡಿಕೊಂಡು, ಪಂಚರು ಸಹಿಮಾಡಿದ ಚೀಟಿಯನ್ನು ಅಂಟಿಸಿಕೊಂಡು ಮುಂದಿನ ಪುರಾವೆಗಾಗಿ ಸದರಿ ವ್ಯಕ್ತಿಯನ್ನು ನನ್ನ ತಾಬಾಕ್ಕೆ ತೆಗೆದುಕೊಂಡು ಸಾಯಂಕಾಲ 6:00 ಗಂಟೆಯಿಂದ 7-00 ಗಂಟೆಯವರೆಗೆ ಸಾರ್ವಜಿನಕ ಲೈಟಿನ ಕಂಬದ ಬೆಳಕಿನಲ್ಲಿ ಜಪ್ತಿ ಪಂಚನಾಮೆಯನ್ನು ಕೈಕೊಂಡು ಜಪ್ತಿಮಾಡಿಕೊಂಡ ಮುದ್ದೆಮಾಲು ಮತ್ತು ಆರೋಪಿತನೊಂದಿಗೆ ಮರಳಿ 7-15 ಪಿ.ಎಂ ಗಂಟೆಗೆ ಠಾಣೆಗೆ ಬಂದು ಆರೋಪಿಯನ್ನು ವಶಕ್ಕೆ ಪಡೆದು ಸದರಿ ಆರೋಪಿತರ ವಿರುದ್ದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

 

ರಾಘವೇಂದ್ರ ನಗರ ಪೊಲೀಸ್‌ ಠಾಣೆ:- ದಿನಾಂಕ: 30/12/2022 ರಂದು ಸಾಯಂಕಾಲ 8:30 ಪಿ.ಎಮ್ ಕ್ಕೆ ಶ್ರೀ ಬಸವರಾಜ ಪಿ.ಎಸ್.ಐ., ಸಿ.ಸಿ.ಬಿ. ಘಟಕ, ಕಲಬುರಗಿ ನಗರರವರು ಮಾನ್ಯ ನ್ಯಾಯಾಲಯದಿಂದ ಪರವಾನಿಗೆ ಪಡೆದುಕೊಂಡು ಠಾಣೆಗೆ ಬಂದು ಇಬ್ಬರು ಆರೋಫಿತರು ಜಪ್ತಿ ಪಂಚನಾಮೆ ಮುದ್ದೆಮಾಲಿನೊಂದಿಗೆ ವರದಿ ಹಾಜರಪಡಿಸಿದ್ದರ ಸಾರಾಂಶವೇನೆಂದರೆ ನಾನು ಸರ್ಕಾರಿ ತರ್ಫೆ ದೂರು ಸಲ್ಲಿಸುವುದೇನೆಂದರೆ, ಇಂದು ದಿನಾಂಕ:30:12:2022 ರಂದು ಸಾಯಂಕಾಲ 5:00 ಗಂಟೆಗೆ ನಾನು ಸಿ.ಸಿ.ಬಿ. ಕಛೇರಿಯಲ್ಲಿದ್ದಾಗ ಕಲಬುರಗಿ ನಗರದ ಆಳಂದ ಚೆಕ್‌ ಪೊಸ್ಟಡೆಗೆ ಮುಖ್ಯ ರಸ್ತೆಯ ಖಾದ್ರಿ ಚೌಕ ಹತ್ತಿರ ಸೂಪರ ಬೇಕರಿ ಎದುರುಗಡೆ ಸಾರ್ವಜನಿಕ ರಸ್ತೆಯ ಮೇಲೆ ಇಬ್ಬರೂ ವ್ಯಕ್ತಿಗಳು ತಮ್ಮ ಲಾಭಗೋಸ್ಕರ ಸಾರ್ವಜನಿಕರಿಂದ ಹಣ ಪಡೆದು 01 ರೂಪಾಯಿಗೆ 80 ರೂಪಾಯಿ ಕೊಡುವುದಾಗಿ ಹೇಳಿ ಕಲ್ಯಾಣ ಮತ್ತು ಬಾಂಬೆ ಮಟಕಾ ಅಂಕಿ ಸಂಖ್ಯೆಗಳ ಚೀಟಿಯನ್ನು ಬರೆದು ಕೊಳ್ಳುತ್ತಿದ್ದಾರೆ ಅಂತಾ ಖಚಿತ ಮಾಹಿತಿ ಬಂದ ಮೇರೆಗೆ ಸದರಿ ವಿಷಯವನ್ನು ಮೇಲಾಧಿಕಾರಿಗಳಿಗೆ ತಿಳಿಸಿ ಅವರ ಮಾರ್ಗದರ್ಶನದಲ್ಲಿ ದಾಳಿಮಾಡುವ ಕುರಿತು ಇಬ್ಬರೂ ಪಂಚರಾದ 1) ಶ್ರೀ ನಾಗೇಶ ತಂದೆ ಮಹಾಂತೇಶ ಚಿಂಚೋಳಿ, ವ:20 ವರ್ಷ, ಜಾತಿ:ಲಿಂಗಾಯತ, ಉ:ಖಾಸಗಿ ಕೆಲಸ, ಸಾ:ಹೀರಾಪೂರ ಕಲಬುರಗಿ ಮೊ.ನಂ.8971023257, 2) ಶ್ರೀ ಶೇಖಕರೀಬ ತಂದೆ ಶೇಖಹಾಜಿಅರಬ ಶೇಖ, ವ:25 ವರ್ಷ, ಉ:ಹೊಟೇಲ ಕೆಲಸ, ಜಾತಿ:ಮುಸ್ಲಿಂ, ಸಾ:ಮಹ್ಮದಿಚೌಕ ಎಂ.ಎಸ್.ಕೆ.ಮಿಲ್ ಕಲಬುರಗಿ ಮೊ.ನಂ.7022641390 ಇವರನ್ನು ಸಿ.ಸಿ.ಬಿ. ಘಟಕಕ್ಕೆ ಸಾಯಂಕಾಲ 5:20 ಗಂಟೆಗೆ ಬರಮಾಡಿಕೊಂಡು ಸದರಿ ಪಂಚರಿಗೆ ವಿಷಯ ತಿಳಿಹೇಳಿ ಪಂಚನಾಮೆಗೆ ಸಹಕರಿಸುವಂತೆ ಕೇಳಿಕೊಂಡ ಮೇರೆಗೆ ಉಭಯ ಪಂಚರು ಒಪ್ಪಿ ಕೊಂಡಿರುತ್ತಾರೆ. ನಂತರ ನಾನು, ಪಂಚರು, ಮತ್ತು ಸಿ.ಸಿ.ಬಿ ಘಟಕ ಸಿಬ್ಬಂದಿಯವರಾದ 1) ರವೀಂದ್ರಕುಮಾರ ಹೆಚ್.ಸಿ-48, 2) ಸುನೀಲಕುಮಾರ ಹೆಚ್.ಸಿ-167, 3) ಯಲ್ಲಪ್ಪ ಸಿಪಿಸಿ-220, 4) ಶಿವಕುಮಾರ ಸಿಪಿಸಿ-16715, 5) ನಾಗರಾಜ ಸಿಪಿಸಿ-1257 ಎಲ್ಲರೂ ಕೂಡಿ ತಮ್ಮ ತಮ್ಮ ಮೋಟಾರ ಸೈಕಲಗಳ ಮೇಲೆ ಸಾಯಂಕಾಲ 5:30 ಗಂಟೆಗೆ ಸಿ.ಸಿ.ಬಿ. ಕಛೇರಿಯಿಂದ ಹೊರಟು ಮಾಹಿತಿ ಬಂದ ಸ್ಥಳವಾದ ಕಲಬುರಗಿ ನಗರದ ಆಳಂದ ಚೆಕ್‌ ಪೊಸ್ಟಕಡೆಗೆ ಮುಖ್ಯ ರಸ್ತೆಯ ಖಾದ್ರಿ ಚೌಕ ಹತ್ತಿರ ಸೂಪರ ಬೇಕರಿ ಹತ್ತಿರ ಸಾಯಂಕಾಲ 5:50 ಗಂಟೆಗೆ ತಲುಪಿ ಸ್ವಲ್ಪ ದೂರದಲ್ಲಿ ವಾಹನಗಳನ್ನು ನಿಲ್ಲಿಸಿ ಎಲ್ಲರೂ ವಾಹನದಿಂದ ಇಳಿದು ಅಲ್ಲಿಯೇ ಮರೆಯಲ್ಲಿ ನಿಂತು ನೋಡಲಾಗಿ ಅಲ್ಲಿ ಇಬ್ಬರೂ ವ್ಯಕ್ತಿಗಳು ಸಾರ್ವಜನಿಕ ರಸ್ತೆಯ ಮೇಲೆ ನಿಂತುಕೊಂಡು ಅಲ್ಲಿ ಹೋಗಿಬರುವ ಸಾರ್ವಜನಿಕರಿಂದ 1ರೂ. ಗೆ 80 ರೂ. ಕೊಡುವುದಾಗಿ ಕಲ್ಯಾಣ ಮತ್ತು ಬಾಂಬೆ ಮಟಕಾ ಅಂಕಿ ಸಂಖ್ಯೆಗಳ ಚೀಟಿ ಬರೆದು ಕೊಳ್ಳುವುದನ್ನು ನಾನು ಮತ್ತು ಪಂಚರು ನೋಡಿ ಖಚಿತ ಪಡಿಸಿಕೊಂಡು, ಪಂಚರ ಸಮಕ್ಷಮ ಸಾಯಂಕಾಲ 6:00 ಗಂಟೆಗೆ ಸಿಬ್ಬಂದಿಯವರ ಸಹಾಯದಿಂದ ಒಮ್ಮಲ್ಲೇ ಎಲ್ಲರೂ ಕೂಡಿ ಸದರಿ ವ್ಯಕ್ತಿಗಳಿಗೆ ಹಿಡಿದಿದ್ದು, ನಂತರ ಸದರಿಯವರ ಹೆಸರು ವಿಳಾಸ ವಿಚಾರಿಸಲು 1) ಗಂಗಾಧರ ತಂದೆ ನಾಗೇಂದ್ರಪ್ಪ ಪಾಟೀಲ, ವ:40 ವರ್ಷ, ಜಾತಿ:ಲಿಂಗಾಯತ, ಉ:ಬೇಕಾರ, ಸಾ:ಸ್ವಾರಗೇಟನಗರ, ವೈಷ್ಣವಿ ದೇವಸ್ಥಾನ ಹತ್ತಿರ, ಕಲಬುರಗಿ, 2) ರವಿಕುಮಾರ ತಂದೆ ಸೂರ್ಯಕಾಂತ ಹಾಗರಗಿ, ವ:36 ವರ್ಷ, ಜಾತಿ:ಲಿಂಗಾಯತ, ಉ:ಖಾಸಗಿ ಕೆಲಸ, ಸಾ:ಜೆ.ಆರ್.ನಗರ, ಹನುಮಾನ ದೇವರ ಗುಡಿಯ ಹಿಂದುಗಡೆ, ಕಲಬುರಗಿ ಅಂತಾ ತಿಳಿಸಿದರು.  ನಂತರ ಆರೋಪಿ ಗಂಗಾಧರ ತಂದೆ ನಾಗೇಂದ್ರಪ್ಪ ಪಾಟೀಲ ಈತನ ಅಂಗಶೋಧನೆ ಮಾಡಲಾಗಿ ಈತನ ಹತ್ತಿರ ಮಟಕಾ ಜೂಜಾಟಕ್ಕೆ ಸಂಬಂಧಿಸಿದರೂ.7,200/- ನಗದುಹಣ, ಮತ್ತು ಮಟಕಾ ಚೀಟಿಗಳು ಅ.ಕಿ.ರೂ.00/-, ಎರಡು ಕ್ಲಾಸಮೇಟ ಕಂಪನಿಯ ನೋಟಬುಕಗಳು ಅ.ಕಿ. ರೂ.00/- ಮತ್ತು ಒಂದು ಸೆಲ್ಲೋಕಂಪನಿಯ ನೋಟಬುಕ ಅ.ಕಿ. ರೂ.00/-, ಒಂದು ಬಾಲಪೆನ್ ಅ.ಕಿ.ರೂ.00/-, ಮತ್ತು 1) ಒಂದು ಸ್ಯಾಮಸಂಗ ಕಂಪನಿಯ ಮೊಬೈಲ್ ಅ.ಕಿ. ರೂ.3000/- ದೊರೆತಿದ್ದು, ಅದರ ನಂಬರ ವಿಚಾರಿಸಲು 7304048307 ಅಂತಾ ತಿಳಿಸಿದ್ದು, ಅದರ ಐ.ಎಂ.ಇ.ಐ ನಂಬರ ಪರಿಶೀಲಿಸಲು (355692114528677/01, 355693114528675/01) ಅಂತಾ ಇದ್ದು, 2) ಒಂದು ವಿವೋ ಕಂಪನಿಯ ಮೊಬೈಲ್ ಅ.ಕಿ. ರೂ.5000/- ದೊರೆತಿದ್ದು, ಅದರ ನಂಬರ ವಿಚಾರಿಸಲು 9535236945 ಅಂತಾ ತಿಳಿಸಿದ್ದು, ಅದರ ಐ.ಎಂ.ಇ.ಐ ನಂಬರ ಪರಿಶೀಲಿಸಲು (866115055533573, 866115055533565) ಅಂತಾ ಇದ್ದು, 3) ಒಂದು ಸ್ಯಾಮಸಂಗ ಕಂಪನಿಯ ಕೀಪ್ಯಾಡ ಮೊಬೈಲ ಅ.ಕಿ.ರೂ.1000/- ದೊರೆತಿದ್ದು, ಅದರ ನಂಬರ ವಿಚಾರಿಸಲು 9900699965 ಅಂತಾ ತಿಳಿಸಿದ್ದು, ಅದರ ಐ.ಎಂ.ಇ.ಐ ನಂಬರ ಪರಿಶೀಲಿಸಲು (354668156465284, 356719786465281) ಅಂತಾ ಇದ್ದು, 4) ಒಂದು ಸ್ಯಾಮಸಂಗ ಕಂಪನಿಯ ಕೀಪ್ಯಾಡ ಮೊಬೈಲ ಅ.ಕಿ.ರೂ.1000/- ದೊರೆತಿದ್ದು, ಅದರ ನಂಬರ ವಿಚಾರಿಸಲು 9886574676 ಅಂತಾ ತಿಳಿಸಿದ್ದು, ಅದರ ಐ.ಎಂ.ಇ.ಐ ನಂಬರ ಪರಿಶೀಲಿಸಲು (359111090050297, 359112090050295) ಅಂತಾ ಇರುತ್ತದೆ.  5) ಒಂದು ಸ್ಪೇಲೆಂಡರ್‌ ಪ್ಲಸ್ ಮೊಟಾರ ಸೈಕಲ ನಂ. ಕೆಎ-32-ಎಕ್ಸ್-6369 ಅ.ಕಿ. ರೂ.25,000/- ನೇದ್ದು ದೊರೆತಿದ್ದು ಇರುತ್ತದೆ.  ನಂತರ ರವಿಕುಮಾರ ತಂದೆ ಸೂರ್ಯಕಾಂತ ಹಾಗರಗಿ, ಈತನ ಅಂಗಶೋಧನೆ ಮಾಡಲಾಗಿ ಈತನ ಹತ್ತಿರ ಮಟಕಾ ಜೂಜಾಟಕ್ಕೆ ಸಂಬಂಧಿಸಿದ ರೂ.4,200/- ನಗದು ಹಣ, ಮತ್ತು ಮಟಕಾ ಚೀಟಿಗಳು ಅ.ಕಿ.ರೂ.00/-,  ಒಂದು ಬಾಲಪೆನ್ ಅ.ಕಿ.ರೂ.00/-, ಮತ್ತು ಒನಪ್ಲಸ್ ಕಂಪನಿಯ ಮೊಬೈಲ ಅ.ಕಿ. ರೂ.10,000/- ದೊರೆತಿದ್ದು, ಅದರ ನಂಬರ ವಿಚಾರಿಸಲು 8867727774 ಅಂತಾ ತಿಳಿಸಿದ್ದು, ಅದರ ಐ.ಎಂ.ಇ.ಐ ನಂಬರ ಪರಿಶೀಲಿಸಲು (863382069189494, 863382069189486) ಅಂತಾ ಇರುತ್ತದೆ. ಹೀಗೆ ಒಟ್ಟು ರೂ.11,400/- ನಗದು ಹಣ ದೊರೆತಿದ್ದು ಇರುತ್ತದೆ. ಸದರಿ ಜಪ್ತು ಪಡಿಸಿಕೊಂಡು ಸದರಿ ಆರೋಪಿತನ ವಿರುದ್ದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

 

ವಿಶ್ವವಿದ್ಯಾಲಯ ಪೊಲೀಸ್‌ ಠಾಣೆ :- ದಿನಾಂಕ: 25/12/2022 ರಂದು ರಾತ್ರಿ 10:30 ಪಿ.ಎಮ್ ದಿನಾಂಕ: 26/12/2022 ರಂದು ಬೆಳಿಗ್ಗೆ 9:30 ಗಂಟೆ ಮಧ್ಯದ ಅವಧಿಯಲ್ಲಿ ಫಿರ್ಯಾದಿಯು ತನ್ನ ಮೊ.ಸೈ ನಂ. ಕೆಎ-೫೬ ಕೆ-೪೫೩೪ ಅ.ಕಿ 70,000/- ನೆದ್ದು ನ್ಯೂ ಬಾಯ್ಸ್ ಹಾಸ್ಟೇಲ್ ಇ.ಎಸ್.ಐ.ಸಿ ಕ್ಯಾಂಪಸ್ ಕಲಬುರಗಿ ಎದುರುಗಡೆ ಹಚ್ಚಿದ ಯಾರೋ ಕಳ್ಳರು ಕಳ್ಳತನ ಮಾಡಿದವರ ವಿರುದ್ದ ಕಾನೂನು ರೀತಿ ಕ್ರಮ ಜರುಗಿಸಿ ನನ್ನ ವಾಹನ ನನಗೆ ದೊರಕಿಸಿ ಕೊಡಲು ವಿನಂತಿ ಎಂದು ಫಿರ್ಯಾದಿ ಕೊಟ್ಟ ಹೇಳಿಕೆ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

 

ವಿಶ್ವವಿದ್ಯಾಲಯ ಪೊಲೀಸ್‌ ಠಾಣೆ :- ದಿನಾಂಕ: 25:12/2022 ರಂದು ಬೇಳಿಗ್ಗೆ 4:00 ಎ.ಎಮ್ ದಿಂದ 5:00 ಎ.ಎಮ್ ಮಧ್ಯದ ಅವಧಿಯಲ್ಲಿ ಯಾರೋ ಕಳ್ಳರು ರಾಜಾಪೂರ ರಸ್ತೆಯ ಶಹಾಬಾದ ರಸ್ತೆಯ ಪೆಟ್ರೋಲ ಪಂಪ ಹಿಂದುಗಡೆ ಮನೆಯಲ್ಲಿಟ್ಟಿದ್ದ ಸೆಂಟ್ರಿಂಗ್ ಪ್ಲೇಟ್ ಗಳನ್ನು 33 ಛತ್ತಿನ ಪ್ಲೇಟಗಳು ಅ.ಕಿ 79,200/- ರೂ ನೇದ್ದವುಗಳನ್ನು ಯಾರೋ ಕಳ್ಳರು ಕಳ್ಳತನ ಮಾಡಿದವರ ವಿರುದ್ದ ಕಾನೂನು ರೀತಿ ಕ್ರಮ ಜರುಗಿಸಿ ನನ್ನ ಛತ್ತಿನ ಪ್ಲೇಟಗಳನ್ನು ನನಗೆ ದೊರಕಿಸಿ ಕೊಡಲು ವಿನಂತಿ ಎಂದು ಫಿರ್ಯಾದಿ ಕೊಟ್ಟ ಹೇಳಿಕೆ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

 

ಸಂಚಾರಿ ಪೊಲೀಸ್‌ ಠಾಣೆ-2 :- ದಿನಾಂಕ: 30/12/2022 ರಂದು ಮಧ್ಯಾಹ್ನ 1:00 ಗಂಟೆಗೆ ಶ್ರೀ. ಪ್ರವೀಣ ತಂದೆ ರಾಜಶೇಖರ ಸಹಾಯಕ  ಅಭೀಯಂತರರು ಕಾರ್ಯ ಮತ್ತು ಪಾಲನೆ ಘಟಕ ನಂ.7 ಉಪ ವಿಭಾಗ ಕಲಬುರಗಿ ರವರು ಪೊಲೀಸ ಠಾಣೆಗೆ ಹಾಜರಾಗಿ ಒಂದು ಕನ್ನಡದಲ್ಲಿ ಬರೆದ ಫಿರ್ಯಾದಿಯನ್ನು ಹಾಜರು ಪಡಿಸಿದ್ದು ಸಾರಂಶವೆನೆಂದರೆ, ದಿನಾಂಕ: 28/12/2022 ರಂದು ಸಾಯಂಕಾಲ 7:00 ಗಂಟೆ ಸುಮಾರಿಗೆ ರಿಂಗರೋಡ ಇಸ್ಲಾಮಾಬಾದ ಕ್ರಾಸಿನ ಹತ್ತೀರ ಹೈವೆ ಟಿಪ್ಪರ ಟ್ರಕ ವಾಹನ ನಂ. ಕೆಎ-32 ಡಿ-6551 ನೇದ್ದರ ಚಾಲಕನು ತಮ್ಮ ಇಲಾಖೆಯ ಡಬಲ ಫೂಲ ಕಂಬವು ಜಖಂಗೊಳಿಸಿ ತಮ್ಮ ಇಲಾಖೆಗೆ 89,848/-ರೂ ಹಾನಿಗೊಳಿಸಿದ್ದು, ಈ ಟಿಪ್ಪರ ಚಾಲಕನ ವಿರುದ್ಧ ಕಾನೂನು ಪ್ರಕಾರ ಕ್ರಮ ಕೈಗೊಳ್ಳಬೇಕು ಎಂದು ಕೊಟ್ಟ ಅರ್ಜಿಯ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

 

ಬ್ರಹ್ಮಪೂರ ಪೊಲೀಸ್‌ ಠಾಣೆ :- ದಿನಾಂಕ: 30/12/2022 ರಂದು ಸಾಯಂಕಾಲ 7:30 ಗಂಟೆಗೆ ಫಿರ್ಯಾದಿದಾರರಾದ ಶ್ರೀ ಅಭಿಷೇಕ ತಂದೆ ಶಿವಲಿಂಗಪ್ಪ ಪಟ್ಟಣ ವಯ:19 ವರ್ಷ ಜಾ:ಕುರುಬ ಉ:ವಿದ್ಯಾರ್ಥಿ ಸಾ|| ಮನೆ ನಂ. 3 ಮೀರಾ ಬ್ಲಾಕ್ ಪೊಲೀಸ್ ವಸತಿ ಗೃಹ ಸಿಎಅರ್ ಹೆಡ್ ಕ್ವಾಟ್ರಸ್ ರಸ್ತೆ ಕಲಬುರಗಿ ನಗರ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೆನೆಂದರೆ, ನನ್ನ ತಂದೆಯಾದ ಶಿವಲಿಂಗಪ್ಪ ಪಟ್ಟಣ ಇವರ ಹೆಸರಿನಲ್ಲಿ ರಾಯಲ್ ಎನ್ ಪೀಲ್ಡ್ ಕಂಪನಿಯ ಹಂಟರ್ 350 ಮೋಟಾರ್ ಸೈಕಲ್ ನಂ. KA-32-HC-8774 ಇಂಜೀನ ಸಂಖ್ಯೆ: J305FHN1007060ಚೆಸ್ಸಿ ಸಂಖ್ಯೆ: ME3J3D5FHN1011063 ನೇದ್ದು ಇದ್ದು ಅದನ್ನು ನಾನೇ ನೆಡೆಸುತ್ತೇನೆ. ಸದರಿ ಮೋಟಾರ್ ಸೈಕಲ್‌ವು ನಾವು ವಾಸಿಸುವ ಪೊಲೀಸ್ ವಸತಿ ಗೃಹದ ಮೀರಾ ಬ್ಲಾಕ್ ಎದುರುಗಡೆ ನಿಲ್ಲಿಸುತ್ತಿದ್ದೇವು. ನಿನ್ನೆ ದಿನಾಂಕ:29/12/2022 ರಂದು ರಾತ್ರಿ 9:00 ಗಂಟೆ ಸುಮಾರಿಗೆ ನಾನು ನನ್ನ ಮೋಟಾರ್ ಸೈಕಲನ್ನು ನಾವು ವಾಸಿಸುವ ಪೊಲೀಸ್ ವಸತಿ ಗೃಹದ ಮೀರಾ ಬ್ಲಾಕ್ ಎದುರುಗಡೆ ಹ್ಯಾಂಡ್ ಲಾಕ್ ಮಾಡಿ ನಿಲ್ಲಿಸಿ ಮನೆಯಲ್ಲಿ ಮಲಗಿಕೊಂಡಿದ್ದೇವು. ಇಂದು ದಿನಾಂಕ:30/12/2022 ರಂದು ಬೆಳಿಗ್ಗೆ ೧೧:೦೦ ಗಂಟೆ ಸುಮಾರಿಗೆ ನಾನು ಹೊರಗಡೆ ಹೋಗುವ ಸಲುವಾಗಿ ನಾನು ನಿಲ್ಲಿಸಿದ ಮೋಟಾರ್ ಸೈಕಲ ಹತ್ತಿರ ಬಂದು ನೋಡಲಾಗಿ ನಮ್ಮ ಮೋಟಾರ್ ಸೈಕಲ್ ಹ್ಯಾಂಡಲಾಕ್ ಮುರಿದಿದ್ದು ಮತ್ತು ಮೋಟಾರ್ ಸೈಕಲನ್ನು ಆ ಕಡೆ ಇ ಕಡೆ ಸರಸಾಡಿ ಕಳ್ಳತನ ಮಾಡಲು ಪ್ರಯತ್ನ ಮಾಡಿದ್ದು ಕಂಡು ಬಂದಿದ್ದು ಇರುತ್ತದೆ. ದಿನಾಂಕ:೨೯/೧೨/೨೦೨೨ ರಂದು ರಾತ್ರಿ ೯:೦೦ ಗಂಟೆಯಿಂದ ದಿನಾಂಕ:೩೦/೧೨/೨೦೨೨ ರಂದು ಬೆಳಿಗ್ಗೆ ೧೧:೦೦ ಗಂಟೆಯ ಮದ್ಯದ ಅವಧಿಯಲ್ಲಿ ನಮ್ಮ ಮೋಟಾರ್ ಸೈಕಲ್ ನಂ. KA-32-HC-8774 ಅಂದಾಜು ಕಿಮ್ಮತ್ತು ೨,೩೦,೦೦೦/-ರೂ ನೇದ್ದು ಯಾರೋ ಅಪರಿಚಿತ ಕಳ್ಳರು ನನ್ನ ಮೋಟಾರ್ ಸೈಕಲಿನ ಹ್ಯಾಂಡಲಾಕ್ ಮುರಿದು ಕಳ್ಳತನ ಮಾಡಿಕೊಂಡು ಹೋಗಲು ಪ್ರಯತ್ನ ಮಾಡಿರುತ್ತಾರೆ. ಕಾರಣ ನನ್ನ ಮೋಟಾರ್ ಸೈಕಲ್‌ನ್ನು ಕಳ್ಳತನ ಮಾಡಲು ಪತ್ರಯ್ನಸಿದ ಕಳ್ಳರನ್ನು ಪತ್ತೆ ಹಚ್ಚಿ ಅವರ ಮೇಲೆ ಸೂಕ್ತ ಕಾನೂನು ಕ್ರಮ ಕೈ ಕೊಳ್ಳಬೇಕು ಅಂತ ಮಾನ್ಯರವಲ್ಲಿ ವಿನಂತಿ ಎಂದು ಫಿರ್ಯಾದಿ ಕೊಟ್ಟ ಹೇಳಿಕೆ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

ಇತ್ತೀಚಿನ ನವೀಕರಣ​ : 06-01-2023 01:11 PM ಅನುಮೋದಕರು: ADMIN


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕಲಬುರಗಿ ನಗರ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080