ಅಭಿಪ್ರಾಯ / ಸಲಹೆಗಳು

ಬ್ರಹ್ಮಪೂರ ಪೊಲೀಸ್‌ ಠಾಣೆ :- ದಿನಾಂಕ 30-11-2022 ರಂದು ೨-೩೦ ಪಿ.ಎಂಕ್ಕೆ ಸರಕಾರಿ ತರ್ಪೇ ಪಿರ್ಯಾದಿದಾರರಾಗಿ ಶ್ರೀ ಎ.ವಾಜೀದ್ ಪಟೇಲ ಪಿ.ಐ ಸಿ.ಸಿ.ಬಿ ಘಟಕ ಕಲಬುರಗಿ ಇವರು ರಾಜ್ಯ ಸರಕಾರಿ ತರ್ಪೇಪಿರ್ಯಾದಿದಾರರಾಗಿ ಪಿರ್ಯಾದಿ ಸಲ್ಲಿಸಿದ ಸಾರಾಂಶವೆನೆಂದರೆ ಇಂದು ದಿನಾಂಕ ೩೦/೧೧/೨೦೨೨ ರಂದು ಬೆಳಗ್ಗೆ ೧೦-೩೦ ಗಂಟೆ ಸುಮಾರಿಗೆ ನಾನು ಕಛೇರಿಯಲ್ಲಿದ್ದಾಗ ಕಲಬುರಗಿ ನಗರದ ಎಸ್.ಟಿ.ಬಿ.ಟಿ ಕ್ರಾಸ್ ಹತ್ತಿರ ಇರುವ ಪೆಟ್ರೋಲ್ ಪಂಪಿನ ಹಾಳು ಬಿದ್ದ ಖೂಲ್ಲಾ ಜಾಗೆಯಲ್ಲಿ ಕೆಲವು ಜನರು ಅಕ್ರಮವಾಗಿ ಗಾಂಜಾವನ್ನು ಮಾರಾಟ ಮಾಡುತ್ತಿದ್ದಾರೆ. ಅಂತಾ ಬಾತ್ಮೀ ಬಂದಿದ್ದು, ಸದರಿ ವಿಷಯವನ್ನು ಮೇಲಾದಿಕಾರಿಗಳಿಗೆ ಮಾಹಿತಿ ತಿಳಿಸಿ ಅವರ ಮಾರ್ಗದರ್ಶನದಲ್ಲಿ ಸದರಿ ಬಾತ್ಮೀಯನ್ನು ಖಚಿತ ಪಡಿಸಿಕೊಳ್ಳಲು ಇಬ್ಬರು ಸರಕಾರಿ ಪಂಚರನ್ನು ಮತ್ತು ಪತ್ರಾಂಕಿತ ಅಧಿಕಾರಿಯನ್ನು ಬರ ಮಾಡಿಕೊಳ್ಳಲು ಮಾನ್ಯ ಪೊಲೀಸ್ ಆಯುಕ್ತರು ಕಲಬುರಗಿ ನಗರ ರವರಿಗೆ ಪತ್ರದ ಮುಖಾಂತರ ಕೋರಿದ್ದು, ಅದರಂತೆಮಾನ್ಯ ಸಹಾಯಕ ನಿಯಂತ್ರಕರು ಕಾನೂನು ಮಾಪನ ಶಾಸ್ತç ಇಲಾಖೆ ಕಲಬುರಗಿ ರವರಿಗೆ ಜಪ್ತಿ ಪಡಿಸಿಕೊಂಡ ಗಾಂಜಾವನ್ನು ಅಳತೆ ಮತ್ತು ತೂಕ ಮಾಡಲು ಒಬ್ಬ ಸಿಬ್ಬಂದಿಯನ್ನು ನಿಯೋಜಿಸಿ ಅಳತೆ ಮತ್ತು ತೂಕ ಮಾಡುವ ಯಂತ್ರದೊಂದಿಗೆ ಕಳುಹಿಸಿಕೊಡಲು ಪತ್ರದ ಮುಖಾಂತರ ಕೋರಿದ್ದು, ಇರುತ್ತದೆ.  ಅದರಂತೆ ಬೆಳಗ್ಗೆ ೧೧-೩೦ ಗಂಟೆಗೆ ಪಂಚರಾದ ೧) ಶ್ರೀ ನಾರಾಯಣ ತಂದೆ ದಿಃ ಜಗದೀಶ ಸಿಂಧೇ ವಯಸ್ಸು ೩೪ ವರ್ಷ ಜಾತಿ; ಮರಾಠಾ ಉ; ಪ್ರಥಮ ದರ್ಜೇ ಸಹಾಯಕರು ಪೊಲೀಸ್ ಆಯುಕ್ತರ ಕಾರ್ಯಾಲಯ ಕಲಬುರಗಿ ಮೊ.ನಂ ೮೭೯೨೭೩೩೯೮೩ ಶ್ರೀ ಮಹ್ಮದ ಇಮ್ರಾನ್ ತಂದೆ ಶೇಖ ಮೈನೋದ್ದಿನ ಕಿರಮನಿ ವಯಸ್ಸು ೨೧ ವರ್ಷ ಜಾತಿ; ಮುಸ್ಲಿಂ ಉ; ದ್ವೀತಿಯ ದರ್ಜೇ ಸಹಾಯಕರು ಪೊಲೀಸ್ ಆಯುಕ್ತರ ಕಾರ್ಯಾಲಯ ಕಲಬುರಗಿ ಸಾ; ಹನುಮಾನ ನಗರ ಚಿದ್ರಿ ರಸ್ತೆ ಬೀದರ ಮೊ.ನಂ 8217611705  ರವರನ್ನು ನಿಯೋಜಿಸಿ ಕಳುಹಿಸಿಕೊಟ್ಟಿದ್ದು, ಅಲ್ಲದೇ ಪತ್ರಾಂಕಿತ ಅಧಿಕಾರಿಯಾಗಿ ಶ್ರೀಶರಣಬಸಪ್ಪ ರೆಡ್ಡಿ ಸಹಾಯಕ ಆಡಳಿತಾಧಿಕಾರಿಗಳು ಪೊಲೀಸ್ ಆಯುಕ್ತರ ಕಾರ್ಯಾಲಯ ಕಲಬುರಗಿ ರವರು ಕೂಡಾ ಹಾಜರಾಗಿದ್ದು ಇರುತ್ತದೆ. ಮತ್ತು ಶ್ರೀ ಶಶಿಧರ ತಂದೆ ಮನೋಹರ ದೇವದುರ್ಗ ಇವರು ಹಾಗೂ ಅಳತೆ ಮತ್ತು ತೂಕ ಮಾಡುವ ಕುರಿತು ತೂಕ ಮತ್ತು ಅಳತೆ ಯಂತ್ರದೊಂದಿಗೆ ಅವರು ಕೂಡಾ ಬೆಳಗ್ಗೆ ೧೧-೩೦ ಗಂಟೆಗೆ ಹಾಜರಾಗಿದ್ದು, ಇರುತ್ತದೆ. ನಂತರ ಸಿ.ಸಿ.ಬಿ ಘಟಕದ ಅಧಿಕಾರಿ ಮತ್ತು ಸಿಬ್ಬಂದಿಯವರಾದ ೧) ಶಿವಪ್ಪ ಪಿ.ಎಸ್.ಐ ೨) ರವೀಂದ್ರಕುಮಾರ ಸಿ.ಹೆಚ್.ಸಿ ೪೮ ೩) ಮಲ್ಲಿಕಾರ್ಜುನ ಸಿ.ಹೆಚ್.ಸಿ ೭೯ ೪) ಕೇಸುರಾಯ ಸಿ.ಹೆಚ್.ಸಿ ೨೨೩ ೫) ಸುನೀಲಕುಮಾರ ಸಿ.ಹೆಚ್.ಸಿ ೧೬೭ ೬) ವಿಶ್ವನಾಥ ಸಿ.ಪಿ.ಸಿ೬೮೬ ೭) ಅರವಿಂದ ಸಿ.ಪಿ.ಸಿ ೯೫೫ ೮) ಶ್ರೀಶೈಲ ಸಿ.ಪಿ.ಸಿ ೬೯೨ ೯)  ಅಶೋಕ ಸಿ.ಪಿ.ಸಿ ೬೪೭ ೧೦) ನಾಗರಾಜ ಸಿ.ಪಿ.ಸಿ ೧೨೫೭ ರವರು ಕಛೇರಿಯಲ್ಲಿ ಹಾಜರಿದ್ದು, ಅವರನ್ನು ಪಂಚರಿಗೆ ಮತ್ತು ಪತ್ರಾಂಕಿತ ಅಧಿಕಾರಿಗಳಿಗೆ ಪರಿಚಯಿಸಿ ಕಲಬುರಗಿ ನಗರದ ಎಸ್.ಟಿ.ಬಿ.ಟಿ ಕ್ರಾಸ್ ಹತ್ತಿರ ಇರುವ ಪೆಟ್ರೋಲ ಪಂಪಿನ ಹಾಳುಬಿದ್ದ ಖುಲ್ಲಾ ಜಾಗೆಯಲ್ಲಿ ಕೆಲವು ಜನರು ಅಕ್ರಮವಾಗಿ  ಗಾಂಜಾವನ್ನು ಮಾರಾಟ ಮಾಡುತ್ತಿದ್ದಾರೆ. ಅಂತಾ ಬಾತ್ಮೀ ಬಂದಿದ್ದು, ಸದರಿ ಬಾತ್ಮೀಯನ್ನು ಖಚಿತ ಪಡಿಸಿಕೊಳ್ಳಲು ಹೋಗುವ ಕುರಿತು ಮೇಲಾಧಿಕಾರಿಗಳಿಗೆ ಮಾಹಿತಿ ತಿಳಿಸಿ ಅವರ ಮಾರ್ಗದರ್ಶನದಲ್ಲಿ ದಾಳಿ ಮಾಡುವ ಕಾಲಕ್ಕೆ ನಮ್ಮೊಂದಿಗೆ ಹಾಜರಿದ್ದು ಪಂಚರಾಗಿ ಪಂಚನಾಮೆಗೆ ಸಹಕರಿಸುವಂತೆ ಕೇಳಿಕೊಂಡ ಮೇರೆಗೆ ಉಭಯ ಪಂಚರು ಒಪ್ಪಿಕೊಂಡಿರುತ್ತಾರೆ ಅಲ್ಲದೇ ಶ್ರೀ ಶಶಿಧರ ದೇವದುರ್ಗ ತೂಕ ಮತ್ತು ಅಳತೆ ಮಾಡುವವರಿಗೆ ದಾಳಿ ಕಾಲಕ್ಕೆ ದೊರೆತ ಗಾಂಜಾ ಅಳತೆ ಮಾಡಿಕೊಡುವಂತೆ ಕೇಳಿಕೊಂಡ ಮೇರೆಗೆ ಅವರು ಕೂಡಾ ಒಪ್ಪಿಕೊಂಡಿರುತ್ತಾರೆ. ನಂತರ ನಾನು ಮಫಚರು ಮತ್ತು ಪತ್ರಾಂಕಿತ ಅಧಿಕಾರಿಗಳು ತೂಕ ಮತ್ತು ಅಳತೆ ಮಾಡುವವರು ಹಾಗೂ ಸಿಬ್ಬಂದಿ ಜನರು ಎಲ್ಲರೂ ಕೂಡಿ ಬೆಳಗ್ಗೆ ೧೧-೪೦ ಗಂಟೆಗೆ ಸರಕಾರಿ ಜೀಪ್ ನಂ ಕೆಎ-೩೨-ಜಿ-೧೨೪೯ ನೇದ್ದರಲ್ಲಿ ಸಿ.ಸಿ.ಬಿ ಕಛೇರಿಯಿಖದ ಹೊರಟಿದ್ದು, ಉಳಿದ ಸಿಬ್ಬಂದಿಯವರು ತಮ್ಮ ತಮ್ಮ ಮೋಟಾರ ಸೈಕಲಗಳ ಮೇಲೆ ಹೊರಟು ಬಾತ್ಮೀ ಬಂದ ಸ್ಥಳವಾದ ಕಲಬುರಗಿ ನಗರದ ಎಸ್.ಟಿ.ಬಿ.ಟಿ ಕ್ರಾಸ್ ಹತ್ತಿರ ಇರುವ ಪೆಟ್ರೋಲ್ ಪಂಪಿನ ಹಾಳು ಬಿದ್ದ ಖುಲ್ಲಾ ಜಾಗೆಯ ಹತ್ತಿರ ೧೧-೫೦ ಗಂಟೆಗೆ ತಲುಪಿ ಎಲ್ಲರೂ ಜೀಪಿನಿಂದ ಕೆಳಗೆ ಇಳಿದು ಅಲ್ಲಿಯೇ ಮರೆಯಲಿ ನಿಂತುಕೊಂಡು ನೋಡಲಾಗಿ ಎಸ್.ಟಿ.ಬಿ.ಟಿ ಕ್ರಾಸ್ ಹತ್ತಿರ ಇರುವ ಪೆಟ್ರೋಳ್ ಪಂಪಿನ ಹಾಳುಬಿದ್ದ ಖುಲ್ಲಾ ಜಾಗೆಯಲ್ಲಿ ಒಬ್ಬ ವ್ಯಕ್ತಿ ಅಕ್ರಮವಾಗಿ ಗಾಂಜಾ ಮಾರಾಟ ಮಾಡುತ್ತಿರುವುದನ್ನು ನೋಡಿ ಖಚಿತಪಡಿಸಿಕೊಂಡು ಪಂಚರ ಸಮಕ್ಷಮ ಪಿ.ಐ ಸಾಹೇಬರು ಅವರು  ಸಿಬ್ಬಂದಿಯವರೊಂದಿಗೆ  ಕೂಡಿ ಒಮ್ಮಿಲೇ ಮದ್ಯಾಹ್ನ ೧೨-೦೦ ಗಂಟೆಗೆ ದಾಳಿ ಮಾಢಿ ಹಿಡಿದಿದ್ದು, ಅವನ ಹೆಸರು ವಿಳಾಸ ವಿಚಾರಿಸಲಾಗಿ ೧) ಸಾಯಿಕುಮಾರ @ ಹರೀಶ ತಂದೆ ರಂಗನಾಥ ಕಾಂಬಳೆ ವಯಸ್ಸು ೧೯ ವರ್ಷ ಜಾತಿ; ಎಸ್.ಸಿ ಉ;ವೇಟರ ಸರ್ವಿಸ್ ಕೆಲಸ ಸಾ; ಬಾಪು ನಗರ ಕಲಬುರಗಿ ಅಂತಾ ತಿಳಿಸಿದನು. ನಂತರ ಸದರಿ ಗಾಂಜಾ ಎಲ್ಲಿಂದ ತಂದಿರುವೆ ಅಂತಾ ವಿಚಾರಿಸಲು ಅಲ್ಲಿಯೇ ರೋಡಿನ ಆಚೆ ಸಾರ್ವಜನಿಕ ರಸ್ತೆಯಲ್ಲಿ ನಿಂತಿದ್ದ ರಮೇಶ ಕಾಳೆ, ಕರಣ ಕಾಳೆ ಮತ್ತು ರೋಃನ ಉಪಾದ್ಯ ಇವರು ಮಾರಾಟ ಮಾಡಲಿಕ್ಕೆ ಕೊಟ್ಟಿರುತ್ತಾರೆ ಅಂತಾ ತಿಳಿಸಿದಾಗ ಕೂಡಲೇ ಎಲ್ಲರೂ ಅಲ್ಲಿಯೇ ನಿಂತಿದ್ದ ರಮೇಶ ಕಾಳೆ  ಕರಣ ಕಾಳೆ ಮತ್ತು ರೋಹನ ಉಪಾದ್ಯ ಇವರಿಗೆ ಹಿಡಿಯಲು ಹೋದಾಗ ರಮೇಶ ಕಾಳೆ ಈತನು ಸಿಕ್ಕಿದ್ದು, ಕರಣ ಕಾಳೆ ಮತ್ತು ರೋಹನ ಉಪಾದ್ಯ ಇವರು ಓಡಿ ಹೋಗಿರುತ್ತಾರೆ. ನಂತರ ರಮೇಶ ಕಾಳೆ ಈತನ ಹೆಸರು ವಿವರವಾಗಿ ವಿಚಾರಿಸಲು ಆತನ ಹೆಸರು ೨) ರಮೇಶ ತಂದೆ ವಿಜಯಕುಮಾರ ಕಾಳೆ ವಯಸ್ಸು ೫೭ ವರ್ಷ ಜಾತಿ; ಎಸ್.ಸಿ ಉ; ಕಿರಾಣಿ ಅಂಗಡಿ ಸಾ; ಮಾಂಗರವಾಡಿ ಕಲಬುರಗಿ ಅಂತಾ ತಿಳಿಸಿದನು. ನಂತರ ಓಡಿ ಹೋದ ಆರೋಪಿತರ ಹೆಸರು ವಿವರವಾಗಿ ವಿಚಾರಿಸಲು ೩) ಕರಣ ತಂದೆ ರಮೇಶ ಕಾಳೆ ವಯಸ್ಸು ೩೦ ವರ್ಷ ಜಾತಿ; ಎಸ್.ಸಿ ಉ; ಕಿರಾಣಿ ಅಂಗಡಿ ಸಾ; ಬಾಪು ನಗರ ಕಲಬುರಗಿ ೪) ರೋಹನ ತಂದೆ ರಾಜೇಶ ಉಪಾದ್ಯ ವಯಸ್ಸು ೨೮ ವರ್ಷ ಜಾತಿ; ಎಸ್.ಸಿ ಉ; ಕಿರಾಣಿ ಅಂಗಡಿ ಸಾ; ಮಾಂಗರವಾಡಿ ಬಾಪು ನಗರ ಕಲಬುರಗಿ ಅಂತಾ ತಿಳಿಸಿದರು. ನಂತರ ಪಂಚರ ಸಮಕ್ಷಮ ಆರೋಪಿ ಸಾಯಿಕುಮಾರ @ ಹರೀಶ ಈತನ ಹತ್ತಿರ ಸ್ಥಳದಲ್ಲಿ ಒಂದು ಪ್ಲಾಸ್ಟಿಕ್ ಚೀಲ ದೊರೆತಿದ್ದು, ಅದರಲ್ಲಿ ಗಾಂಜಾ ಇದ್ದಿದ್ದನ್ನು ನೋಡಿ ಪರಿಶೀಲಿಸಿ ಅದನ್ನು ಶ್ರೀ ಶಶಿಧರ ದೇವದುರ್ಗ ಇವರಿಂದ ತೂಕ ಮಾಡಿಸಿ ನೋಡಲಾಗಿ ಒಟ್ಟು ೨೦೦ ಗ್ರಾಂ ಗಾಂಜಾ ಇದ್ದು ಪ್ರತಿ ಕೆ.ಜಿ.ಗೆ ೧೦.೦೦೦/- ರೈ ಅಂತೆ ಒಟ್ಟು ೨೦೦ ಗ್ರಾಂ ಗಾಂಜಾಕ್ಕೆ ಅ;ಕಿ; ೨.೦೦೦/- ರೂ ಇರುತ್ತದೆ. ಸದರಿ ಗಾಂಜಾದಿಂದ ರಾಸಾಯನಿಕ ಪರೀಕ್ಷೆಗೆ ಕಳುಹಿಸಿಕೊಡಲು ಮಾದರಿಗಾಗಿ ಸದರಿ ಪ್ಲಾಸ್ಟಿಕ್‌ದಿಂದ ಅಂದಾಜು ೫೦ ಗ್ರಾಂ ಗಾಂಜಾ ತೂಕದಷ್ಟು ಗಾಂಜಾವನ್ನು ಪ್ರತ್ಯೇಕವಾಗಿ ತೆಗೆದು ಒಂದು ಬಿಳಿಯ ಬಟ್ಟೆಯಲ್ಲಿ ಹಾಕಿ ಬಾಯಿ ಹೊಲೆದು ಅದರ ಮೇಲೆ   “ ಒ”ಎಂಬ  ಇಂಗ್ಲೀಷ್ ಅಕ್ಷರದ ಅರಗಿನಿಂದ ಸೀಲ್ ಮಾಡಿ ಪಂಚರು ಸಹಿ ಮಾಡಿದ ಚೀಟಿಯನ್ನು ಅಂಟಿಸಿ ಕೇಸಿನ ಮುಂದಿನ ಪುರಾವೆಗಾಗಿ ನನ್ನ ತಾಬಾಕ್ಕೆ ತೆಗೆದುಕೊಂಡೆನು. ನಂತರ ಪತ್ರಾಂಕಿತ ಅಧಿಕಾರಿಗಳಾದ ಶ್ರೀ ಶರಣಬಸಪ್ಪ ರೆಡ್ಡಿ ಸಹಾಯಕ ಆಡಳಿತಾಧಿಕಾರಿ ಪೊಲೀಸ್ ಆಯುಕ್ತರ ಕಾರ್ಯಾಲಯ ಕಲಬುರಗಿ ರವರು ಆರೋಪಿತರ ದೇಹವನ್ನು ಅಂಗಶೋಧನೆ ಮಾಡಲು ಕೇಳಿದಾಗ ಅವರು ಯಾವುದೇ ಅಭ್ಯಂತರ ಇರುವದಿಲ್ಲ. ಅಂತಾ ತಿಳಿಸಿದಾಗ ಆರೋಪಿ ೧) ಸಾಯಿಕುಮಾರ @ ಹರೀಶ ತಂದೆ ರಂಗನಾಥ ಕಾಂಬಳೆ ಈತನ ದೇಹ ಅಂಗಶೋಧನೆ ಮಾಡಿದಾಗ ಆತನ ಜೇಬಿನಲ್ಲಿ ರೂ ೫೨೦/- ದೊರೆತಿದ್ದು ಸದರಿ ಆರೋಪಿತನಿಗೆ ವಿಚಾರಿಸಿದಾಗ ಗಾಂಜಾ ಮಾರಾಟದಿಂದ ಬಂದ ಹಣ ಇರುತ್ತದೆ. ಅಂತಾ ತಿಳಿಸಿರುತ್ತಾನೆ. ನಂತರ ಆರೋಪಿ ೨) ರಮೇಶ ತಂದೆ ವಿಜಯಕುಮಾರ ಕಾಳೆ ಈತನ ದೇಹ ಅಂಗಶೋಧನೆ ಮಾಡಿದಾಗ ಯಾವುದೇ ಹಣ ವಸ್ತುಗಳು ವಗೈರೆ ದೊರೆತಿರುವುದಿಲ್ಲ. ನಂತರ ನಾನು ಅನಧೀಕೃತ ಮತ್ತು ಅಕ್ರಮವಾಗಿ ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪಿತರಿಗೆ ಮತ್ತು ಅವರ ಹತ್ತಿರ ಜಪ್ತು ಮಾಡಿದ ಮುದ್ದೇಮಾಲನ್ನು ನಮ್ಮ ವಶಕ್ಕೆ ತೆಗೆದುಕೊಂಡು ಆರೋಪಿತರಿಂದ ಜಪ್ತಾದ ಮುದ್ದೇಮಾಲಿನ ಬಗ್ಗೆ ಜಪ್ತಿ ಪಂಚನಾಮೆಯನ್ನು ಮದ್ಯಾಹ್ನ ೧೨-೦೦ ಗಂಟೆಯಿಂದ ೧-೩೦ ಗಂಟೆಯವರೆಗೆ ಸ್ಥಳದಲ್ಲಿ ಕುಳಿತು ಲ್ಯಾಪ್ ಟಾಪ್‌ನಲ್ಲಿ ಟೈಪ್ ಮಾಡಿ ಮುಗಿಸಿ ವಶಕ್ಕೆ ಪಡೆದ ೨ ಆರೋಪಿತರನ್ನು ಮತ್ತು ಜಪ್ತು ಮಾಢಿದ ಮುದ್ದೇಮಾಲುಗಳೊಂದಿಗೆ ಬ್ರಹ್ಮಪೂರ ಪೊಲೀಸ್ ಠಾಣೆಗೆ ಬಂದು ವರದಿಯನ್ನು ತಯಾರಿಸಿ ಜಪ್ತು ಮಾಢಿದ ಮುದ್ದೇಮಾಲುಗಳು ಮತ್ತು ಎರಡು ಜನ ಆರೋಪಿತರನ್ನು ಜಪ್ತಿ ಪಂಚನಾಮೆಯೊಂದಿಗೆ ನನ್ನ ವರದಿಯನ್ನು ಹಾಜರಪಡಿಸುತ್ತಿದ್ದು, ಸದರಿ ಆರೋಪಿತರ ಮೇಲೆ ಪ್ರಕರಣ ದಾಖಲು ಮಾಢಿಕೊಂಡು ಕಾನೂನು ಕ್ರಮ ಕೈಕೊಳ್ಳಬೇಕು ಅಂತಾ ಕೊಟ್ಟ ಜಪ್ತಿ ಪಂಚನಾಮೆ ಮತ್ತು ವರದಿ ಸಾರಾಂಶಧ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

 

ಚೌಕ ಪೊಲೀಸ್‌ ಠಾಣೆ :- ದಿನಾಂಕ: 30.11.2022 ರಂದು ಸಂಜೆ 06-00  ಗಂಟೆಗೆ ನಮ್ಮ ಠಾಣೆಯ ಶ್ರೀ ರಾಜಶೇಖರ ವಿ. ಹಳಗೋಧಿ ಪಿ.ಐ. ಚೌಕ ಪೊಲೀಸ ಠಾಣೆ ಕಲಬುರಗಿ ನಗರ ರವರು ಠಾಣೆಗೆ ಹಾಜರಾಗಿ  ಒಬ್ಬ ಆರೋಪಿ ಮತ್ತು ಮುದ್ದೇ ಮಾಲಿನೊಂದಿಗೆ ತಮ್ಮದೊಂದು ಕನ್ನಡದಲ್ಲಿ ಗಣಕೀಕೃತ ಮಾಡಿದ ಸರ್ಕಾರಿ ತರ್ಫೇ ದೂರು ಮತ್ತು ಮಟಕಾ ದಾಳಿ ಜಪ್ತಿಪಂಚನಾಮೆ ಕೊಟ್ಟಿದ್ದರ ಸಾರಾಂಶವೆನೆಂದೆರೆ, ನಾನು, ರಾಜಶೇಖರ ವಿ. ಹಳಗೋಧಿ ಪಿ.ಐ. ಚೌಕ ಪೊಲೀಸ ಠಾಣೆ ಕಲಬುರಗಿ  ಕನಾರ್ಟಕ  ರಾಜ್ಯ ಸರ್ಕಾರಿ ತರ್ಫೇ ದೂರು ಕೊಡುವುದೆನೆಂದೆರೆ, ಇಂದು ದಿನಾಂಕ 30/11/2022 ರಂದು ಮಧ್ಯಾಹ್ನ 04-00 ಗಂಟೆಗೆ ಚೌಕ ಪೊಲೀಸ ಠಾಣೆಯಲ್ಲಿ ಇದ್ದಾಗ ನನಗೆ ಖಚಿತವಾದ ಬಾತ್ಮಿ ಬಂದಿದ್ದೆನೆಂದೆರೆ, ನಮ್ಮ ಪೊಲೀಸ ಠಾಣೆ ವ್ಯಾಪ್ತಿಯಲ್ಲಿ ಬರುವ ಕಲಬುರಗಿ ನಗರದ ಆಳಂದ ರೋಡಿಗೆ ಇರುವ  ಆಶರ್ೀವಾದ ಕಲ್ಯಾಣ ಮಂಟಪ ಎದುರುಗಡೆ ಇರುವ ಸಾರ್ವಜನಿಕ ಸ್ಥಳದಲ್ಲಿ ಒಬ್ಬನು ನಿಂತುಕೊಂಡು ಹೋಗಿ-ಬರುವ ಸಾರ್ವಜನಿಕರಿಂದ ಹಣ ಪಡೆದುಕೊಂಡು ಮಟಕಾ ನಂಬರಿನ ಚೀಟಿ ಬರೆದುಕೊಡುತ್ತಿದ್ದಾರೆ ಎಂದು ಖಚಿತ ಬಾತ್ಮಿ ಬಂದ ಮೇರೆಗೆ ಇಬ್ಬರು ಪಂಚರಾದ 1)ಶ್ರೀ ಶರಣಪ್ಪ ತಂದೆ ಹಣಮಂತಪ್ಪ ಡೋರನಳ್ಳಿ ವ:53 ವರ್ಷ ಉ:ಗೌಂಡಿ ಕೆಲಸ ಜಾತಿ ಕಬ್ಬಲೀಗ ಸಾ: ಯಲ್ಲಮ್ಮಾ ಗುಡಿ ಹತ್ತಿರ ಗಂಗಾ ನಗರ ಕಲಬುರಗಿ 2)ಶ್ರೀ ಮಾಹಾದೇವ ತಂದೆ ಶ್ರೀಪತರಾವ ಮೇತ್ರೆ ವ:32 ವರ್ಷ ಉ:ಕುಂಬಾರ ಕೆಲಸ ಜಾತಿ ಗಿಸಾಡಿ ಸಾ: ಸಿಟಿ ಬಸಸ್ಟ್ಯಾಂಡ ಹತ್ತಿರ ಜೋಪಡಪಟ್ಟಿ ಸುಪರ ಮಾರ್ಕೇಟ್ ಕಲಬುರಗಿ ಇವರುಗಳನ್ನು ಮತ್ತು ನಮ್ಮ ಠಾಣೆಯ ಸಿಬ್ಬಂದಿಯವರಾದ ಸಿಪಿಸಿ 328 ಫಿರೋಜ, ಸಿಪಿಸಿ ಮೋಸಿನ 299, ಸಿಪಿಸಿ 08 ಅಶೋಕ ಇವರುಗಳನ್ನು ಬರಮಾಡಿಕೊಂಡು ಪಂಚರಿಗೆ ನಾವು ಮಾಡುವ ದಾಳಿ ಜಪ್ತಿ ಪಂಚನಾಮೆಯ ಪಂಚರಾಗಿ ಜಪ್ತಿ ಪಂಚನಾಮೆ ಬರೆಯಿಸಿಕೊಡಲು ಕೇಳಿಕೊಂಡ ಮೇರೆಗೆ ಪಂಚರು ಒಪ್ಪಿಕೊಂಡರು. ಮತ್ತು ನಮ್ಮ ಸಿಬ್ಬಂದಿಯವರಿಗೆ ನನ್ನ ಜೊತೆಯಲ್ಲಿ ದಾಳಿಗೆ ಬರಲು ಸೂಚಿಸಿದಾಗ ಅವರು ಕೂಡಾ ಒಪ್ಪಿಕೊಂಡರು. ಆಗ ನಾನು ಠಾಣೆಯ ಜೀಪು ಕೆಎ 32 ಜಿ 874 ರಲ್ಲಿ ನಾನು ಮತ್ತು ಪಂಚರು ಹಾಗೂ ಈ ಮೇಲಿನ ಸಿಬ್ಬಂದಿಯವರು ಕುಳಿತುಕೊಂಡೇವು. ಮಾನ್ಯ ಎಸಿಪಿ (ಎನ್) ಉಪವಿಭಾಗ ಕಲಬುರಗಿ ರವರ ಮಾರ್ಗದರ್ಶನದಲ್ಲಿ ದಾಳಿ ಕುರಿತು ಠಾಣೆಯಿಂದ ಮಧ್ಯಾಹ್ನ 4-15 ಗಂಟೆಗೆ ಹೊರಟಿದ್ದು, ಜೀಪು ಸಿಪಿಸಿ 328 ಫಿರೋಜ ಇವರು ಚಾಲನೆ ಮಾಡುತ್ತಿದ್ದರು. ಚೌಕ ಸರ್ಕಲ್, ಶಹಾಬಜಾರ ನಾಕಾ, ಖಾದ್ರಿ ಚೌಕ ಮುಖಾಂತರವಾಗಿ ಬಾತ್ಮಿ ಸ್ಥಳವಾದ ಕಲಬುರಗಿ ನಗರದ ಆಳಂದ ರೋಡಿಗೆ ಇರುವ ಆಶರ್ೀವಾದ ಕಲ್ಯಾಣ ಮಂಟಪ ಇನ್ನೂ ಸ್ವಲ್ಪ ಮುಂದೆ ಇರುವಂತೆ ಜೀಪು ನಿಲ್ಲಿಸಿದಾಗ ಎಲ್ಲರೂ ಜೀಪು ಇಳಿದು ನಾನು ಮತ್ತು ಪಂಚರು ಹಾಗೂ ಈ ಮೇಲಿನ ಸಿಬ್ಬಂದಿಯವರು ಮರೆಯಲ್ಲಿ ನಿಂತು ನೋಡಲಾಗಿ ಒಬ್ಬನು ಆಶರ್ೀವಾದ ಕಲ್ಯಾಣ ಮಂಟಪ ಎದುರುಗಡೆ ಇರುವ  ಸಾರ್ವಜನಿಕ ರಸ್ತೆ ಮೇಲೆ ನಿಂತುಕೊಂಡು ಹೋಗು-ಬರುವ ಸಾರ್ವಜನಿಕರಿಗೆ 1 ರೂ.ಗೆ 80 ರೂ. ಗೆಲ್ಲಿರಿ ಕಲ್ಯಾಣ ಮಟಕಾ ಇದೆ ಅಂತಾ ಕೂಗುತ್ತಾ ಸಾರ್ವಜನಿಕರಿಂದ ಹಣ ಪಡೆದುಕೊಂಡು ಮಟಕಾ ಅಂಕಿ ಸಂಖ್ಯೆ ಬರೆದ ಮಟಕಾ ಚೀಟಿ ಬರೆದುಕೊಡುತ್ತಿದ್ದನು. ನೋಡಿ  ನಮ್ಮ ಜೊತೆಯಲ್ಲಿ ಇದ್ದ ಪಂಚರಿಗೆ ಮತ್ತು ಈ ಮೇಲಿನ ಸಿಬ್ಬಂದಿಯವರಿಗೆ ತೋರಿಸಿ ಖಚಿತ ಪಡಿಸಿಕೊಂಡು, ಪಂಚರ ಸಮಕ್ಷಮದಲ್ಲಿ ನಾನು ಮತ್ತು ಈ ಮೇಲಿನ ಸಿಬ್ಬಂದಿಯವರು ಮಧ್ಯಾಹ್ನ 4-30  ಗಂಟೆಗೆ ದಾಳಿ ಮಾಡಿ ಮಟಕಾ ಬರೆದುಕೊಳ್ಳುತ್ತಿದ್ದ  ವ್ಯಕ್ತಿಗೆ ಹಿಡಿದು ಅವನ ಹೆಸರು ವಿಳಾಸ ವಿಚಾರಿಸಲೂ ಅವನು ತನ್ನ ಹೆಸರು ಮಾಹಾದೇವ ತಂದೆ ಯಶ್ವಂತರಾವ ಪಾಟೀಲ್ ವ:30 ವರ್ಷ ಉ: ಗ್ಯಾಸ ಸಪ್ಲಾಯ ಕೆಲಸ ಜಾತಿ ಲಿಂಗಾಯತ ಸಾ: ಅತನೂರ ಗ್ರಾಮ ತಾ:ಅಫಜಲಪೂರ ಹಾ:ವ: ಶರಣಪ್ಪ ಯಳಸಂಗಿ ಇವರ ಮನೆಯಲ್ಲಿ ಕಿರಾಯಿ ಸಿದ್ದರಾಮೇಶ್ವರ ಕಾಲನಿ ಆಳಂದ ಚೆಕ್ಕ ಪೋಸ್ಟ ಕಲಬುರಗಿ ಅಂತಾ ತಿಳಿಸಿದನು. ಆತನ ಅಂಗಶೋಧನೆ ಮಾಡಲಾಗಿ ಅವನ ಹತ್ತಿರ 1)ಒಂದು ಮಟಕಾ ಅಂಕಿ ಸಂಖ್ಯೆ ಬರೆದ ಮಟಕಾ ಚೀಟಿ ಅ:ಕಿ:00 ರೂ. 2)ಒಂದು ಬಾಲಪೆನ್ನು ಅ:ಕಿ:00 ರೂ. 3)ನಗದು ಹಣ 7670/- ರೂ. ದೊರೆತವು. ನಂತರ ನಾನು ಅವನಿಗೆ ಮಟಕಾ ಚೀಟಿ ಯಾರಿಗೆ ಒಯ್ದು ಕೊಡುತ್ತೀ ಅಂತಾ ವಿಚಾರಿಸಿದಾಗ ಅವನು ಶರಣು ಕಾಳೆ ಸಾ: ದುಬೈಕಾಲನಿ ಕಲಬುರಗಿ ಇತನಿಗೆ  ಕೊಡುವುದಾಗಿ ತಿಳಿಸಿದನು. ಆಗ ನಾನು ಕೇಸಿನ ಪುರಾವೆಗೋಸ್ಕರ ಒಂದು ದಸ್ತಿಯಲ್ಲಿ ನಗದು ಹಣ, ಮಟಕಾ ಚೀಟಿ, ಬಾಲಪೆನ್ನು ಹಾಕಿ ಗಂಟು ಕಟ್ಟಿ ಅದಕ್ಕೆ ಪಂಚರು ಸಹಿಸಿದ ಚೀಟಿ ಅಂಟಿಸಿ ನನ್ನ  ವಶಕ್ಕೆ ತೆಗೆದುಕೊಂಡು ಜಪ್ತ ಪಡಿಸಿಕೊಂಡೆನು.ಮತ್ತು ಮಾಹಾದೇವ ತಂದೆ ಯಶ್ವಂತರಾವ ಪಾಟೀಲ್ ವ:30 ವರ್ಷ ಉ: ಗ್ಯಾಸ ಸಪ್ಲಾಯ ಕೆಲಸ ಜಾತಿ ಲಿಂಗಾಯತ ಸಾ: ಅತನೂರ ಗ್ರಾಮ ತಾ:ಅಫಜಲಪೂರ ಹಾ:ವ: ಶರಣಪ್ಪ ಯಳಸಂಗಿ ಇವರ ಮನೆಯಲ್ಲಿ ಕಿರಾಯಿ ಸಿದ್ದರಾಮೇಶ್ವರ ಕಾಲನಿ ಆಳಂದ ಚೆಕ್ಕ ಪೋಸ್ಟ ಕಲಬುರಗಿ ಮತ್ತು ಶರಣು ಕಾಳೆ ಸಾ:ದುಬೈ ಕಾಲನಿ ಕಲಬುರಗಿ ಇವರುಗಳು ಮಟಕಾ ಜೂಜಾಟದಲ್ಲಿ ನಿರತರಾದ ಖಚಿತಪಟ್ಟಿದ್ದರಿಂದ ಸ್ಥಳದಲ್ಲಿ ಸಿಕ್ಕಿ ಬಿದ್ದ ಮಾಹಾದೇವ ಪಾಟೀಲ ಇತನಿಗೆ ನಾನು ಮತ್ತು ಈ ಮೇಲಿನ  ಸಿಬ್ಬಂದಿಯವರು ವಶಕ್ಕೆ ತೆಗೆದುಕೊಂಡೇವು. ಸದರ ಜಪ್ತಿ ಪಂಚನಾಮೆ ಇಂದು ದಿನಾಂಕ 30/11/2022 ರಂದು ಮಧ್ಯಾಹ್ನ 4-30 ಗಂಟೆಯಿಂದ ಸಂಜೆ 5-30  ಗಂಟೆಯವರೆಗೆ ಸದರ ಸ್ಥಳದಲ್ಲಿ ಕುಳಿತು ಪಂಚರ ಸಮಕ್ಷಮಲ್ಲಿ ಲ್ಯಾಪಟ್ಯಾಪನಲ್ಲಿ ಸಿಪಿಸಿ 08 ಅಶೋಕ ಇವರ ಕಡೆಯಿಂದ ಗಣಕೀಕೃತ ಮಾಡಿ ಮುಗಿಸಲಾಯಿತು. ಸದರ ಮಟಕಾ ಜೂಜಾಟದಲ್ಲಿ ನಿರತರಾದ ಮಾಹಾದೇವ ತಂದೆ ಯಶ್ವಂತರಾವ ಪಾಟೀಲ್ ವ:30 ವರ್ಷ ಉ: ಗ್ಯಾಸ ಸಪ್ಲಾಯ ಕೆಲಸ ಜಾತಿ ಲಿಂಗಾಯತ ಸಾ: ಅತನೂರ ಗ್ರಾಮ ತಾ:ಅಫಜಲಪೂರ ಹಾ:ವ: ಶರಣಪ್ಪ ಯಳಸಂಗಿ ಇವರ ಮನೆಯಲ್ಲಿ ಕಿರಾಯಿ ಸಿದ್ದರಾಮೇಶ್ವರ ಕಾಲನಿ ಆಳಂದ ಚೆಕ್ಕ ಪೋಸ್ಟ ಕಲಬುರಗಿ ಮತ್ತು ಶರಣು ಕಾಳೆ ಸಾ:ದುಬೈ ಕಾಲನಿ ಕಲಬುರಗಿ ಇವರುಗಳು ಮೇಲೆ ಕಾನೂನು ಕ್ರಮ ಜರೂಗಿಸಬೇಕೆಂದು ಸಿಕ್ಕಿ ಬಿದ್ದ ಆರೋಪಿ ಮಾಹಾದೇವ ತಂದೆ ಯಶ್ವಂತರಾವ ಪಾಟೀಲ್ ಮತ್ತು ಮುದ್ದೆಮಾಲು ಹಾಗೂ ಜಪ್ತಿ ಪಂಚನಾಮೆಯೊಂದಿಗೆ ಸರ್ಕಾರಿ ತರ್ಫೇ  ದೂರು ಕೊಟ್ಟಿರುತ್ತೇನೆ. ಎಂದು ಕೊಟ್ಟ ಸರ್ಕಾರಿ ತರ್ಫೇ ದೂರು ಮತ್ತು ಜಪ್ತಿ ಪಂಚನಾಮೆ ಆಧಾರದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.‌

 

 

ಸಬ್‌ ಅರ್ಬನ್‌ ಪೊಲೀಸ ಠಾಣೆ :- ದಿನಾಂಕಃ 30-11-2022  ರಂದು ಸರಕಾರಿ  ಫಿರ್ಯಾದಿಯು ಠಾಣೆಗೆ ಹಾಜರಾಗಿ ನೀಡಿದ ಫಿರ್ಯಾದಿಯೇನೆಂದರೆ ದಿನಾಂಕಃ-೩೦/೧೧/೨೦೨೨ ರಂದು ಸದರಿಯವರು ಸದರಿಯವರು ಏರಿಯಾದಲ್ಲಿ ಪೆಟ್ರೋಲಿಂಗ್ ಕರ್ತವ್ಯದಲ್ಲಿದ್ದಾಗ ಖಚಿತ ಬಾತ್ಮಿ ಬಂದಿದ್ದೆನೆಂದರೆ  ಸುಲ್ತಾನಪುರ ಕ್ರಾಸ್ ಹತ್ತಿರ ಒಬ್ಬ ವ್ಯಕ್ತಿ ಯಾವುದೇ ಪರವಾನಗಿ ಇಲ್ಲದೆ ಮಧ್ಯ ಮಾರಾಟ ಮಾಡುತ್ತಿದ್ದಾರೆಂದು ಬಾತ್ಮಿ ಬಂದಿದ್ದು ಹೋಗಿ ನೋಡಲು ಇಬ್ಬರು ಒಬ್ಬ ವ್ಯಕ್ತಿಯು  ಮಧ್ಯವನ್ನು ಅಕ್ರಮವಾಗಿ ಮಾರಾಟ ಮಾಡುತ್ತಿದ್ದನು ಖಚಿತ ಪಡಿಸಿಕೊಂಡು ಹೋಗಿ ದಾಳಿ ಮಾಡಲು ಆರೋಪಿತನನ್ನು ಹಿಡಿದು ವಿಚಾರಿಸಲು ಆತನ ಬಳಿಯಲ್ಲಿ ಯಾವುದೇ ಪರವಾನಗಿ ಇಲ್ಲದೆ ಅಕ್ರಮವಾಗಿ ಮಾರಾಟ ಮಾಡುತ್ತಿದ್ದನ್ನು ವಶಪಡಿಸಿಕೊಂಡು  ಪಡೆದು ಅವನ ವಿರುದ್ದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

ಇತ್ತೀಚಿನ ನವೀಕರಣ​ : 01-12-2022 02:04 PM ಅನುಮೋದಕರು: ADMIN


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕಲಬುರಗಿ ನಗರ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080