Feedback / Suggestions

ಮಹಿಳಾ ಪೊಲೀಸ ಠಾಣೆ  :- ಇಂದು ದಿನಾಂಕ ೩೦.೧೦.೨೦೨೧ ರಂದು ಸಾಯಂಕಾಲ ೬ ಗಂಟೆಗೆ ಫರ‍್ಯಾದಿ ಶ್ರೀಮತಿ ಶಶಿಕಲಾ ಗಂಡ ಮಹೇಶ ವಯಾ|| ೩೨ ವರ್ಷ ಜಾ|| ಅಕ್ಕಸಾಲಿಗ ಉ|| ಗೃಹಿಣಿ ಸಾ|| ಕರುಣೇಶ್ವರ ನಗರ ಕಲಬುರಗಿ ಇವರು ಠಾಣೆಗೆ ಹಾಜರಾಗಿ ದೂರು ಸಲ್ಲಿಸಿದ್ದು, ಸದರಿ ದೂರಿನ ಸಾರಾಂಶ ಏನೆಂದರೆ, ದಿನಾಂಕ ೨೫.೦೪.೨೦೨೧ ರಂದು ಮಹೇಶ ತಂದೆ ಮುರಗೆಪ್ಪಾ ರಟಗಲಕರ್ ಇವರೊಂದಿಗೆ ನನ್ನ ತಂದೆತಾಯಿ ನನ್ನ ಮದುವೆ ಮಾಡಿಕೊಟ್ಟಿದ್ದು, ಮದುವೆಯಾದ ನಂತರ ೨ ತಿಂಗಳಲ್ಲಿ ನನ್ನ ಗಂಡನ ತಂಗಿಯಾದ ಶ್ರೀದೇವಿ ಇವಳು ನನಗೆ ಎಲೆ ಸೂಳೆ, ನೀನು ಮದುವೆಯಲ್ಲಿ ಬಹಳಷ್ಟು ವರದಕ್ಷಿಣೆ ತಂದಿರುವದಿಲ್ಲಾ ಎಂಉ ಕಿರಿಕಿರಿ ಮಾಡುತ್ತಿದ್ದಳು. ಈ ವಿಷಯ ನನ್ನ ತಂದೆಗೆ ತಿಳಿಸಿದಾಗ ನನ್ನ ತಂದೆ ೫೦,೦೦೦/- ಹಣ ಮತ್ತು ೩ ತೊಲೆ ಬಂಗಾರ ಕೊಟ್ಟು ಹೋದರು. ಆದರೂ ನನ್ನ ಅತ್ತೆಯಾದ ಈರಮ್ಮಾ ಗಂಡ ಮುರಿಗೆಪ್ಪಾ ಇವರು ನಿನ್ನ ತಂದೆ ಕಡಿಮೆ ವರದಕ್ಷಿಣೆ ಕೊಟ್ಟಿದ್ದಾರೆ. ನಿನಗೆ ಊಟ ಹಾಕುವದಿಲ್ಲಾ ಅಂತಾ ಹೇಳಿ ದಿನಾಂಕ ೨೩.೦೬.೨೦೨೧ ರಂದು ಮಧ್ಯಾಹ್ನ ೩-೩೦ ಗಂಟೆಗೆ ನನಗೆ ಹೊರಗೆ ಹಾಕಿದರು. ಆಗ ನಾನು ನನ್ನ ತವರು ಮನೆಗೆ ಹೋಗಿರುತ್ತೇನೆ. ಆದರೆ ಇಲ್ಲಿಯವರೆಗೆ ನನ್ನ ಗಂಡ ನನಗೆ ಕರೆಯಲು ಬಂದಿರುವದಿಲ್ಲಾ. ಇದರಿಂದ ದಿನಾಂಕ ೨೯.೧೦.೨೦೨೧ ರಂದು ಸಾಯಂಕಾಲ ೪ ಗಂಟೆಗೆ ನಾನು ಮತ್ತು ನನ್ನ ತಾಯಿ ಗಂಡನ ಮನೆಗೆ ಬಂದಿರುತ್ತೇವೆ. ಮನೆಯಲ್ಲಿ ಇದ್ದ ನನ್ನ ಗಂಡ, ಅತ್ತೆ, ನಾದಿನಿ ಇವರು ಇದ್ದು, ಅವರು ಯಾರು ನನ್ನ ಜೊತೆ ಮಾತಾಡಿಸಿರುವದಿಲ್ಲಾ.  ಸಾಯಂಕಾಲ ೪ ಗಂಟೆ ಸುಮಾರಿಗೆ ನನ್ನ ನಾದಿನಿ ಮತ್ತು ಅತ್ತೆ ಇವರು ಇಬ್ಬರು ಸೇರಿ ನನ್ನ ಕಪಾಳಕ್ಕೆ ಹೊಡೆದು, ಕೂದಲು ಹಿಡಿದು ನೀನು ವರದಕ್ಷಿಣೆ ಹಣ ಏಕೆ ತಂದಿರುವದಿಲ್ಲಾ ಅಂತಾ ಹೇಳಿ ಮತ್ತು ನನ್ನ ತಾಯಿ ಈರಮ್ಮ ಇವರಿಗೆ ಹೊಡೆಬಡೆ ಮಾಡಿ ನಿಮ್ಮನ್ನು ಜೀವ ಸಹಿತ ಬಿಡುವದಿಲ್ಲಾ ಅಂತಾ ಹೇಳಿ ಜೀವದ ಬೆದರಿಕೆ ಹಾಕಿ ಕೂಡಿ ಹಾಕಿದರು. ಆಗ ನಾನು ನನ್ನ ಸಂಬAಧಿಕರಾದ ಸಿದ್ದಲಿಂಗ ಕಲಬುರಗಿ ಇವರಿಗೆ ಫೋನ್ ಮಾಡಿದಾಗ ಅವರು ಬಂದು ಬಾಗಿಲನ್ನು ತೆಗೆದು ನನ್ನ ಮತ್ತು ನನ್ನ ತಾಯಿಯನ್ನು ರೂಮಿನಿಂದ ಕರೆದುಕೊಂಡು ಬಂದಿರುತ್ತಾರೆ. ನನಗೆ ಮತ್ತು ನನ್ನ ತಾಯಿಗೆ ದೈಹಿಕ ಮತ್ತು ಮಾನಸಿಕ ಕಿರುಕುಳ ನೀಡಿದ ನನ್ನ ನಾದಿನಿ, ಅತ್ತೆ, ಮತ್ತು ಗಂಡನ ಮೇಲೆ ಸೂಕ್ತ ಕಾನೂನು ಕ್ರಮ ಕೈಕೊಳ್ಳಬೇಕು ಅಂತಾ ಸಲ್ಲಿಸಿದ ದೂರಿನ ಸಾರಾಂಶದ ಮೇಲಿಂದ ಗುನ್ನೆ  ದಾಖಲಿಸಿಕೊಂಡ ಬಗ್ಗೆ ವರದಿ. 

ಮಹಿಳಾ ಪೊಲೀಸ ಠಾಣೆ:-  ಇಂದು ದಿನಾಂಕ ೩೦-೧೦-೨೦೨೧ ರಂದು ರಾತ್ರಿ ೯-೩೦ ರಂದು ಗಂಟೆಗೆ ಶ್ರೀಮತಿ ವಿಯಜಶ್ರೀ ಗಂಡ  ಸುನೀಲಕುಮಾರ ಡೊಳ್ಳೆ ಜಾತಿ: ಹಿಂದು ಹೊಲೆಯ (ಪರಿಶಿಷ್ಟ ಜಾತಿ) ವಯಸ್ಸು: ೩೬ ವರ್ಷ ಉದ್ಯೋಗ: ಸರಕಾರಿ ನೌಕರ (ಅಸಿಸ್ಟಂಟ್ ಇಂಜಿನೀಯರ್ ಜೇಸ್ಕಾಂ ನಗರ ವಿಭಾಗ ಕಲಬುರಗಿ) ವಿಳಾಸ: ಪ್ಲಾಟ್ ನಂ..ಎರ್ಫ-೪, ಎಸ್.ಆರ್. ಅಪಾರ್ಟಮೆಂಟ್, (ಶಹಾಬಾಜ ಕಾಲೋನಿ), ರಹೇಮತ್ ನಗರ, ಕಲಬುರಗಿ ಇವರು ಠಾಣೆಗೆ ಹಾಜರಾಗಿ ದೂರು ಸಲ್ಲಿಸಿದ್ದು ಸಾರಾಂಶವೆನೇAದರೆ. ಈ ಸುಮಾರು ದಿನಗಳಿಂದ ನಮ್ಮ ಇಲಾಖೆ ವ್ಯಾಪ್ತಿಯ ಕೆಲಸವನ್ನು ಟೆಂಡರ್ ಮೂಲಕ  ಪಡೆದು ಹರೀಶ ರೆಡ್ಡಿ ತಂದೆ ರಂಗಪ್ಪಾ ರೆಡ್ಡಿ ವಯಾ: ೪೯ ವರ್ಷ ಜಾ: ರೆಡ್ಡಿ ಉ: ಎಲೆಕ್ಟಿçಕಲ್ ಗುತ್ತಿಗೆದಾರರು ಸಾ: ರಾಮಜೋಗಿ ಹಳ್ಳಿ. ತಾ: ಚಳ್ಳಕೇರೆ ಜಿ: ಚಿತ್ರದುರ್ಗ ಹಾ:ವ: ಅಮೃತಹಳ್ಳಿ. ಕಾಶಿನಗರ ಬೆಂಗಳೂರು ರವರು ನಮ್ಮ ಇಲಾಖೆಯಲ್ಲಿ ನಾನು ಕೆಲಸ ನಿರ್ವಹಿಸುತ್ತಿರುವಾಗ ಪರಿಚಯವಾಗಿದ್ದು ಇರುತ್ತದೆ. ಪರಿಚಯ ಸ್ನೇಹ ಸಲಿಗೆಯಿಂದ ಹಲವಾರು ಬಾರಿ ಫೋನಲ್ಲಿ ಮಾಡಿದ್ದು   ಪರಸ್ಪರ ಮೇಸ್ಸೆಜ್ ಮಾಡಿದ್ದು ಇರುತ್ತದೆ. ಅಲ್ಲದೇ ಇವರ ಹೆಂಡತಿ ಅವರ ಮಕ್ಕಳ ಜೊತೆಗೆ ಸ್ನೇಹ ವಿಶ್ವಾಸದಿಂದ ಮಾತನಾಡಿದ್ದು ಇರುತ್ತದೆ. ಅಲ್ಲದೆ ಅವರಿಗೆ ಹಣ ಸಹಾಯ ಮಾಡಿದಲ್ಲದೆ ಮತ್ತು ಅವರ   ಹಿರಿಯ ಮಗಳು ಕುಮಾರಿ ರಕ್ಷಿತಾಳು ಕೆಲಸ ಮಾಡುವ ಕಾರ್ಯಾಲಯದ ಅವಳ ಸಹಪಾಟಿ ತುಂಬಾ ಬೇಕಾಗಿರುವ ವ್ಯಕ್ತಿಗೆ ಆರೋಗ್ಯ ಸರಿವಿಲ್ಲವೆಂದು ಆಪರೇಷನ್ ಇದೆ ಎಂದು ನನ್ನಿಂದ ಫೋನ್ ಪೇ ಮೂಲಕ ಹಣ ಪಡೆದಿರುವುದು ಇರುತ್ತದೆ.ಈ ಎಲ್ಲವೂ ಸ್ನೇಹ ವಿಶ್ವಾಸದಿಂದ ಮಾಡಿರುವುದು ಇರುತ್ತದೆ. ಹರೀಶ ರೆಡ್ಡಿ ಮತ್ತು ನಾನು ಅತೀ ಸಲುಗೆಯಿಂದ ಮಾತನಾಡುತ್ತಿರುವುದರಿಂದ ಈ ಹಿಂದೆ ಏಕಾಏಕಿ ಶಾರದಾ ಗಂಡ ಹರೀಶ ರೆಡ್ಡಿ ವಯಾ: ೪೪ ವರ್ಷ ಜಾ: ರೆಡ್ಡಿ ಉ: ಗೃಹಿಣಿ ರವರು ನನ್ನ ಮೇಲೆ  ಇಲ್ಲಸಲ್ಲದ ಆರೋಪ ಮಾಡಿ, ಜಗಳ ತೆಗೆದು ದಿನಾಂಕ ೨೬-೮-೨೦೨೦ ರಂದು ಮಹಿಳಾ ಪೊಲೀಸ್ ಠಾಣೆ ಕಲಬುರಗಿಗೆ ಹೋಗಿದ್ದು ಇರುತ್ತದೆ. ಆಗ ಠಾಣೆಯ ಅಧಿಕಾರಿಗಳ ಸಮ್ಮುಖದಲ್ಲಿ ಇನ್ನೂ ಮುಂದೆ ನಾನು ಮತ್ತು ಹರೀಶ ರೆಡ್ಡಿಗೆ ಹಾಗೂ ಆತನ ಹೆಂಡತಿ ಶಾರದಾ ಮೂರು ಜನ ಪರಸ್ಪರ ಒಪ್ಪಿಗೆ ಪತ್ರವನ್ನು ಬರೆದುಕೊಟ್ಟಂತೆ ಒಬ್ಬರಿಗೊಬ್ಬರು ಫೋನ್ ಆಗಲೀ ಮೆಸ್ಸೆಜ್ ಆಗಲಿ ಮತ್ತು ಸಂಪರ್ಕಕ್ಕೆ ಬರುವುದಿಲ್ಲವೆಂದು ಬರೆದುಕೊಟ್ಟಿದ್ದು ಇರುತ್ತದೆ. ಮಹಿಳಾ ಪೊಲೀಸ್ ಠಾಣೆಯಿಂದ ಹೊಗುವಾಗ ಸದರಿ ಶಾರದಾ ರೆಡ್ಡಿಯವರು ನನ್ನ ಹಿಂದೆ ಬಂದು ಸಿದ್ದಿಬಾಷಾ ದರ್ಗಾ ಹತ್ತಿರ ಇರುವ ಸರಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜ ಮುಂದುಗಡೆ ರಸ್ತೆಯ ಮೇಲೆ ರಾತ್ರಿ ೮ ಗಂಟೆಯ ಸುಮಾರಿಗೆ ನನಗೆ ತಡೆದು ಇನ್ನೊಮ್ಮೆ ನನ್ನ ಗಂಡನ ಸಹವಾಸಕ್ಕೆ ಬಂದರೆ ನಿನಗೆ ಜೀವ ಬಿಡುವದಿಲ್ಲಾ ಹೊಲೆಯ ಸೂಳೆ  ಅಂತ ಬೈದಿರುತ್ತಾಳೆ. ನಂತರ ಶಾರದಾ ರೆಡ್ಡ ಮತ್ತು ಅವರ ಮಗಳಾದ ರಕ್ಷಿತಾ ರೆಡ್ಡಿ ನನಗೆ ನನ್ನ ಮೊಬೈಲ್ ನಂ.೯೪೮೦೮೪೪೫೩೪ ಗೆ ಕರೆ ಮಾಡಿ ಸೂಳೆ, ಬಸವೆ, ರಂಡೆ, ಮುಂಡೆ, ತಲೆಹಿಡುಕಿ, ಕೀಳಾಗಿ ಇನ್ನೂ ಕೀಳಾದ ಪದಗಳಿಂದ ಅವಾಚ್ಯವಾಗಿ ಬೈದು, ಕೆಲವು ದಿನಗಳ ಹಿಂದ ಹೊಲೆಯ ಜಾತಿಗೆ ಸೇರಿದವಳು ನೀನು, ನೀಚ ಕುಲದವಳು ನಿನ್ನನ್ನು ಮುಟ್ಟಿಸಿಕೊಂಡರೆ ನಮಗೆ ಮತ್ತು ನಮ್ಮ ಜಾತಿಗೆ ಅವಮಾನವಾಗುತ್ತದೆಂದು ನನಗೆ ಮಾನಸಿಕ ಚಿತ್ರಹಿಂಸೆಯನ್ನು ನೀಡಿರುತ್ತಾರೆ. ಮತ್ತು ನಾನು ಕೆಲಸ ನಿರ್ವಹಿಸುತ್ತಿರುರವ ಕಾರ್ಯಾಲಯಕ್ಕೆ ಬಂದು ನಮ್ಮ ಮೇಲಾಧಿಕಾರಿಗಳಿಗೆ ಮತ್ತು ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿಗಳಿಗೆ ನನ್ನ ಬಗ್ಗೆ ಸುಳ್ಳು ಕೆಟ್ಟದಾದ ಶಬ್ದಗಳಿಂದ ಮಾತನಾಡುತ್ತಿರುವುದಲ್ಲದೆ ಇಲಾಖೆಯ ಅಧಿಕಾರಿಗಳಿಗೆ ದೂರು ನೀಡಿ ಪ್ರತಿಭಟನೆ ಮಾಡುವುದಾಗಿ ಬೆದರಿಕೆ ಹಾಕುತ್ತಿದ್ದಾಳೆ. ಇಷ್ಟಲ್ಲದೆ ಮತ್ತು ನನ್ನ ಮಗನಾದ ಕುಮಾರ ಶಿರೀಷ (ಅಪ್ರಾಪ್ತ) ರವರ ಮೋಬೈಲ್ ನಂ.೮೧೯೭೫೮೧೭೦೧ ಗೆ ಕರೆ ಮಾಡಿ ಮತ್ತು ವಾಟ್ಸಆಪ್ ಮೆಸ್ಸೆಜ್ ಮೂಲಕ ನಿಮ್ಮ ತಾತ ಒಬ್ಬ ಸೂಳೆ ನನ್ಮಗ, ನಿಮ್ಮ ತಾತ ಒಬ್ಬ ಶಂಡ ನನ್ಮಗ, ನಿಮ್ಮ ತಾಯಿ ಸೂಳೆ ನನ್ಮಗಳು, ನಿಮ್ಮಜ್ಜಿನೂ ಸೂಳೆ ನನ್ಮಗಳು, ನಿಮ್ಮದೂ ತಲೆಹಿಡುಕರ ಫ್ಯಾಮಲಿ ಎಂದು ಅವಾಚ್ಯ ಶಬ್ದಗಳ ಮೇಸ್ಸೆಜ್ ಮಾಡಿ ಬೈದಿದ್ದು ಇರುತ್ತದೆ.  ಅಲ್ಲದೆ ಈ ಕೆಲವು ದಿನದ ಹಿಂದೆ ನನ್ನ ತಂದೆಯವರಾದ ಲಕ್ಷö್ಮಣರಾವ ಕಡಬೂರ ರವರ ಮೊಬೈಲ್ ನಂ೯೪೪೯೦೧೨೧೮೨ಗೆ ಕರೆ ಮಾಡಿ ನಿನ್ನ ಮಗಳು ಸೂಳೆ ಇದ್ದಾಳೆ ಅವಳಿಗೆ ನೀನು ತಲೆಹಿಡಿಯುತ್ತಿರುವೇ, ಮತ್ತೊಬ್ಬರ ಜೊತೆ ಮಲಗಿಸುತ್ತಿರುವೆ, ಆ ಸೂಳೆ ರಂಡೆಗೆ ಬುದ್ಧಿ ಹೇಳು ಇಲ್ಲಾ ನೀನು ತಲೆಹಿಡುಕನಾಗಿ ನಿನ್ನ ಮಗಳ ಸಹಾಯಕ್ಕೆ ನಿಂತಿರುವೆ ಎಂದು ಎನ್ನೂ ಅನೇಕ ಅವಾಚ್ಯ ಶಬ್ದಗಳಿಂದ ನಿಂದಿಸಿರುತ್ತಾರೆ.ನನ್ನ ತಾಯಿಯವರಾದ ಸುನಂದಾ ಗಂಡ ಲಕ್ಷö್ಮಣ ಕಡಬೂರ ರವರಿಗೂ ಕೂಡಾ ಅವಾಚ್ಯ ಶಬ್ದಗಳಿಂದ ನಿಂದಿಸಿ ಮಾನಸಿಕ ಕಿರುಕುಳ ನೀಡಿ, ನಿಮಗೂ ಮತ್ತು ನಿಮ್ಮ ಮಗಳಿಗೂ ಜೀವ ಸಹಿತ ಬಿಡುವುದಿಲ್ಲವೆಂದು ಪ್ರಾಣ ಬೆದರಿಕೆಯನ್ನು ಹಾಕುತಿರುವ ಶ್ರೀಮತಿ ಶಾರದಾ ಗಂಡ ಹರೀಶ ರೆಡ್ಡಿ ಇವರ ಮಕ್ಕಳಾದ ಕುಮಾರಿ ರಕ್ಷಿತಾ ತಂದೆ ಹರೀಶರೆಡ್ಡಿ ವಯಾ:೨೩ ವರ್ಷ ಜಾ: ರೆಡ್ಡಿ ಉ: ವಿದ್ಯಾರ್ಥಿ ಸಾ: ಬೆಂಗಳೂರು ನಗರದ ನಿವಾಸಿಯಾಗಿದ್ದು, ದೂರವಾಣಿ ಸಂಖ್ಯೆಗಳಾದ ೧) ೭೪೧೧೮೨೧೦೮೫, ೨)೮೧೨೩೩೩೩೩೭೨೫ ಮತ್ತು ೩) ೯೬೦೬೮೨೩೬೨೬ ರ ಮುಖಾಂತರ ಕರೆ ಮಾಡಿ, ವಾಟ್ಸ್ ಆಪ್ ಮೆಸ್ಸೆಜ್ ಮತ್ತು ಟೆಕ್ಸ್÷್ಟ ಮೆಸ್ಸೆಜ್ ಮೂಲಕ ಅಶ್ಲೀಲ, ಅವಾಚ್ಯ ಶಬ್ದಗಳಾದ ರಂಡೆ, ಸೂಳೆ, ತಲೆಹಿಡುಕಿ ಇನ್ನೂ ಮುಂತಾದ ಮಾನಸಿಕ ಖಿನ್ನತೆಗೆ ಒಳಗಾಗುವ ಶಬ್ದಗಳಿಂದ ಬೈಯ್ದಿದಲ್ಲದೆ ನನ್ನ ಸರಕಾರಿ ಸೇವೆಗೆ ಅಡೆತಡೆಯುಂಟು ಮಾಡುತ್ತ ಜೀವ ಬೆದರಿಕೆ ಭಯ ಹಾಕಿರುವ (ಮೇಲೆ ತೋರಿಸಿದ ದೂರವಾಣಿಯಿಂದ ಕರೆ ಮಾಡಿ, ಆಡಿಯೋ ರಿಕಾರ್ಡಿಂಗ್, ವಾಟ್ಸ್ ಆಪ್ ಮೆಸ್ಸೆಜ್ ಮತ್ತು ಟೆಕ್ಸ್÷್ಟ ಮೆಸ್ಸೆಜ್ ಮೂಲಕ ಅಶ್ಲೀಲ, ಅವಾಚ್ಯ ಶಬ್ದಗಳಿಂದ ಬೈದಿರುವ ಎಲ್ಲಾ ಆದಾರಗಳು ಇರುತ್ತವೆ. ದಿನಾಂಕ ೮-೯-೨೦೨೧ ರಂದು ಮದ್ಯಾಹ್ನ  ೧೨ ಗಂಟೆಗೆಯ ಸುಮಾರಿಗೆ  ಮತ್ತೆ ಶಾರದಾ ಮತ್ತು ರಕ್ಷಿತಾ ಇವರು ನನ್ನ ಮೊಬಾಯಿಲಗೆ ಕರೆಮಾಡಿ ಅವಾಚ್ಯವಗಿ ಬೈದಿರುತ್ತಾರೆ. ಈ ಬಗ್ಗೆ ನಾನು ವಿಚಾರ ಮಾಡಿ ಠಾಣೆಗೆ ಬಂದು ದೂರು ಸಲ್ಲಿಸಿದ್ದು   ಸದರಿ ಶಾರದಾ ಮತ್ತು ರಕ್ಷಿತಾ ಇವರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಂಡು ನಮಗೆ ರಕ್ಷಣೆ ಕೊಡಬೇಕಾಗಿ ವಿನಂತಿ ಅಂತ ದೂರಿನ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆವರದಿ. 

Last Updated: 02-11-2021 12:40 PM Updated By: ADMIN


Disclaimer :

Please note that this page also provides links to the websites / web pages of Govt. Ministries/Departments/Organisations.The content of these websites are owned by the respective organisations and they may be contacted for any further information or suggestion

Website Policies

 • Copyright Policy
 • Hyperlinking Policy
 • Security Policy
 • Terms & Conditions
 • Privacy Policy
 • Help
 • Screen Reader Access
 • Guidelines

Visitors

 • Last Updated​ :
 • Visitors Counter :
 • Version :
CONTENT OWNED AND MAINTAINED BY : Kalaburagi City Police
Designed, Developed and Hosted by: Center for e-Governance - Web Portal, Government of Karnataka © 2024, All Rights Reserved.

Best viewed in Chrome v-87.0.4280.141, Microsoft Edge v-87.0.664.75, Firefox -v-83.0 Browsers. Resolution : 1280x800 to 1920x1080