ಅಭಿಪ್ರಾಯ / ಸಲಹೆಗಳು

ವಿಶ್ವವಿದ್ಯಾಲಯ ಪೊಲೀಸ್‌ ಠಾಣೆ :- ದಿನಾಂಕ ೧೯.೦೯.೨೦೨೨ ರಂದು ೫:೦೦ ಪಿ.ಎಮ್ ಸುಮಾರಿಗೆ ಸದರಿ ಆರೋಪಿತರು ಫರ‍್ಯಾದಿಗೆ ಹೊಲದಲ್ಲಿ ಅತೀಕ್ರಮ ಪ್ರವೇಶ ಮಾಡಿ ಅವಾಚ್ಯವಾಗಿ ಬೈದು ಜೀವದ ಬೇದರಿಕೆ ಹಾಕಿದ್ದಾರೆ ಎಂದು ಫಿರ್ಯಾದಿ ಕೊಟ್ಟ ಹೇಳಿಕೆ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

ಅಶೋಕ ನಗರ ಪೊಲೀಸ್‌ ಠಾಣೆ:-  ದಿನಾಂಕ:30.09.2022 ರಂದು ಮಧ್ಯಾನ್ಹ 01:00 ಗಂಟೆಗೆ ಮಾನ್ಯ 5ನೇ ಅಪರ ಜೆ.ಎಂ.ಎಫ್.ಸಿ. ನ್ಯಾಯಾಲಯದ ಆದೇಶ ಪತ್ರದೊಂದಿಗೆ ಉಲ್ಲೇಖಿತ ಗುನ್ನೆ ನಂ.ಪಿ.ಸಿ.ಆರ್ ನಂ. 324/2022 ದಿನಾಂಕ:27.08.2022 ನೇದ್ದರ ಖಾಸಗಿ ದೂರನ್ನು ಸ್ವೀಕರಿಸಿಕೊಂಡಿದ್ದು, ಸದರಿ ದೂರಿನ ಫಿರ್ಯಾದಿದಾರರಾದ ಶ್ರೀ ಶಿವಶಂಕರ ತಂದೆ ರಾಚಯ್ಯ ಭುಜಂಗ ವಯ: 80 ಜಾ: ಜಂಗಮ ಉ: ನಿವೃತ್ತ ನೌಕರ ಸದ್ಯ ಕೂಡಲ ಸಂಗಮ ಶಿಕ್ಷಣ ಸಂಸ್ಥೆಯ ಸದಸ್ಯರು ಸಾ|| ಸಂಗಮೇಶ್ವರ ಕಾಲೋನಿ ಕಲಬುರಗಿ ಇವರು ಮಾನ್ಯ ನ್ಯಾಯಾಲಯಕ್ಕೆ ಹಾಜರಾಗಿ ಸಲ್ಲಿಸಿದ ಖಾಸಗಿ ದೂರು ಅರ್ಜಿಯ ಸಾರಾಂಶವೆನೆಂದರೆ, ನಾನು ಹಿರಾಪೂರ ಗ್ರಾಮದಲ್ಲಿ ಇರುವ ಕೂಡಲ ಸಂಗಮ ಶಿಕ್ಷಣ ಸಂಸ್ಥೆಯಲ್ಲಿ ಕಳೆದ 30 ವರ್ಷಗಳಿಂದ ಕರ್ತವ್ಯ ನಿರ್ವಹಿಸಿಕೊಂಡು ಬಂದಿರುತ್ತೇನೆ. ಸದರಿ ಸಂಸ್ಥೆಯು 1989ನೇ ಸಾಲಿನಲ್ಲಿ ಸ್ಥಾಪನೆಯಾಗಿದ್ದು ಒಟ್ಟು 41 ಜನ ಸದಸ್ಯರಿದ್ದು ಶ್ರೀ ಆರ್.ಜಿ.ಶೆಟಗಾರ ಇವರು ಸದರಿ ಸಂಸ್ಥೆಯ ಅಧ್ಯಕ್ಷರಾಗಿರುತ್ತಾರೆ. ನಾನು ಸಹ ಸದರಿ ಸಂಸ್ಥೆಯ ಸದಸ್ಯನಾಗಿರುತ್ತೇನೆ. ಸದರಿ ಸಂಸ್ಥೆಯ ಅಧೀನದಲ್ಲಿರುವ ಹೀರಾಪೂರ ಗ್ರಾಮದಲ್ಲಿಯ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಯರಾದ ಶ್ರೀ ರೇವಣಸಿದ್ದಪ್ಪ ಮೋದಿ ಮತ್ತು ಸದರಿ ಸಂಸ್ಥೆಯ ಸದಸ್ಯರಾದ ನಾಗೇಂದ್ರ ಚನ್ನಬಸಪ್ಪ ವಾರದ, ಶಿವಕುಮಾರ ತಂದೆ ಸಿದ್ದಪ್ಪ ತಡಪಳ್ಳಿ ಹಾಗೂ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕೆಲಸ ಮಾಡುವ ಸಾವಿತ್ರಿ ಗಂಡ ಶಾಂತಪ್ಪ ತಡಕಲ್ ಇವರುಗಳು ಎಲ್ಲರೂ ಸೇರಿ 2017ನೇ ಸಾಲಿನಿಂದ 2019ನೇ ಸಾಲಿನ ಅವಧಿಯಲ್ಲಿ ಶಾಲೆಯ ವಿದ್ಯಾರ್ಥಿಗಳಿಂದ ಫೀಸ್ ವಸೂಲು ಮಾಡಿದ, ಒಟ್ಟು ನಗದು ಹಣ 7,42,452/-ರೂಪಾಯಿಯನ್ನು ತಮ್ಮ ಸ್ವಂತಕ್ಕೆ ಉಪಯೋಗಿಸಿಕೊಂಡು ಸಂಸ್ಥೆಗೆ ವಂಚನೆ ಮಾಡಿರುತ್ತಾರೆ ಅಂತ ವಗೈರೆ ಫಿರ್ಯಾದಿ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

ಫರಹತಾಬಾದ ಪೊಲೀಸ್‌ ಠಾಣೆ :- ಇಂದು ದಿನಾಂಕ:30-09-2022 ರಂದು ಸಾಯಂಕಾಲ 5:30 ಪಿಎಮ್  ಕ್ಕೆ ಶ್ರೀಮತಿ ಪ್ರೇಮಾ ಎಸ್ ದೊಡ್ಡಮನಿ, ಪಿ.ಡಿ.ಓ ಫರಹತಾಬಾದ ಪೊಲೀಸ ಠಾಣೆ ರವರು ಠಾಣೆಗೆ ಹಾಜಾರಾಗಿ ನೀಡಿದ ಲಿಖಿತ ದೂರಿನ ಸಾರಾಂಶವೇನೆಂದರೆ ಇಂದು ದಿನಾಂಕ:30-09-2022 ರಂದು ಫರಹತಾಬಾದ ಗ್ರಾಮ ಪಂಚಾಯತ ಕಾರ್ಯಾಲಯದಲ್ಲಿ ಮುಂಜಾನೆ 11-00 ಗಂಟೆಗೆ ಸಾಮಾನ್ಯ ಸಭೆಯನ್ನು 13 ಜನ ಗ್ರಾಮ ಪಂಚಾಯತ ಸದಸ್ಯರ ಹಾಜರಾತಿಯೊಂದಿಗೆ ಸಾಮಾನ್ಯ ಸಭೆಯನ್ನು ಯಶಸ್ವಿಯಾಗಿ ಸಭೆ ನಡೆದು, ಸಭೆ ಮುಕ್ತಾಯವಾದ ನಂತರ ಮದ್ಯಾಹ್ನ ಸುಮಾರು 02-00 ಗಂಟೆಗೆ ಗ್ರಾಮ ಪಂಚಾಯತ ಕಾರ್ಯಾಲಯದಲ್ಲಿ ಗ್ರಾಮ ಪಂಚಾಯತ ಸದಸ್ಯರಾದ ಶ್ರೀಮತಿ:ವಿಜಯಲಕ್ಷ್ಮೀ ಗಂಡ ಹುಣಚೀರಾಯ ಮೋಟಗಿ ರವರು ಸಾಮಾನ್ಯ ಸಭೆಯಲ್ಲಿ ಗ್ರಾ.ಪಂ.ಸದಸ್ಯರು ಸಹಿ ಮಾಡಿದ ಹಾಜರಾತಿ ಪುಸ್ತಕ ನೋಡುವುದಾಗಿ ಪಂಚಾಯತ ಅಭಿವೃದ್ದಿ ಅಧಿಕಾರಿಯಾದ ನನಗೆ ಕೇಳಿದರು. ನಾನು ದ್ವಿತೀಯ ದರ್ಜೆ ಲೆಕ್ಕ ಸಹಾಯಕರಿಗೆ ಶ್ರೀಮತಿ:ವಿಜಯಲಕ್ಷ್ಮೀ ಗಂಡ ಹುಣಚೀರಾಯ ಮೋಟಗಿ ರವರು ಕೇಳಿದ ಸದಸ್ಯರ ಹಾಜರಾತಿ ಪುಸ್ತಕ ಕೊಡುವುದಾಗಿ ಹೇಳಿದೆ, ನಂತರ ಪಂಚಾಯತ ಅಭಿವೃದ್ದಿ ಅಧಿಕಾರಿ ಯಾದ ನಾನು ಕುಳಿತುಕೊಳ್ಳುವ ಕೋಣೆಯಲ್ಲಿ ದ್ವಿತೀಯ ದರ್ಜೆ ಲೆಕ್ಕ ಸಹಾಯಕರಿಂದ ಸದಸ್ಯರ ಹಾಜರಾತಿ ಪುಸ್ತಕ ಪಡೆದು ದ್ವಿತೀಯ ದರ್ಜೆ ಲೆಕ್ಕ ಸಹಾಯಕರಾದ ಶ್ರೀ ಶಿವಾನಂದ ಹಾಗರಗುಂಡಗಿ,ಸ್ವಚ್ಚತಾ ವಾಹನ ಚಾಲಕ ಶ್ರೀ ಜೆಟ್ಟೆಪ್ಪ ಕರಬಸಪ್ಪ ಮತ್ತು ಗ್ರಾ.ಪಂ.ಸದಸ್ಯರಾದ ಶ್ರೀ ಈಶ್ವರಾಜ ಹಿರೇಮಠ ರವರ ಸಮ್ಮುಖದಲ್ಲಿ ಇಂದಿನ ಸಭೆಯ ಹಾಜರಾತಿ ಪುಸ್ತಕದ ಪುಟವನ್ನು ಹರಿದು ಹಾಕಿದರು, ಹರಿದ  ಪುಟವನ್ನು ಶ್ರೀಮತಿ:ವಿಜಯಲಕ್ಷ್ಮೀ ಎಚ್ ಮೋಟಗಿ ರವರು ತೆಗೆದುಕೊಂಡು ಹೋಗುತ್ತಿರುವಾಗ ಹರಿದ ಪುಟವನ್ನು ವಾಪಸ್ ಕೊಡಿ ಎಂದು ಪಂಚಾಯತ ಅಭಿವೃದ್ದಿ ಅಧಿಕಾರಿಯಾದ ನಾನು ಮತ್ತು ಸದಸ್ಯರು ಕೇಳಿದರೂ ಕೂಡ ಹರಿದ ಪುಟವನ್ನು ವಾಪಸ್ಸು ಕೊಡದೇ ನೀವು ಏನು ಮಾಡಿಕೊಳ್ಳುತ್ತೀರಿ ಮಾಡಿಕೊಳ್ಳಿ ಎಂದು ಬೈಯುತ್ತಾ ಗ್ರಾ.ಪಂ. ಕಚೇರಿಯಿಂದ ಹೊರಗೆ ತೆಗೆದುಕೊಂಡು ಹೋಗಿರುತ್ತಾರೆ.ಸದರಿ ಗ್ರಾಮ ಪಂಚಾಯತ ಸದಸ್ಯರಾದ ಶ್ರೀಮತಿ:ವಿಜಯಲಕ್ಷ್ಮೀ ಹುಣಚೀರಾಯ ಮೋಟಗಿ ರವರು ಸರಕಾರಿ ಕಛೇರಿಯ ದಾಖಲೆಗಳು ನಾಶಪಡಿಸಿ ಸರಕಾರಿ ಕೆಲಸಕ್ಕೆ ಅಡ್ಡಿಪಡಿಸಿ,ಪಂಚಾಯತ ಅಭಿವೃದ್ದಿ ಅಧಿಕಾರಿಯಾದ ನನಗೆ ಅವಾಚ್ಯ ಶಬ್ದದಿಂದ ಎಲ್ಲಾ ಸದಸ್ಯರ ಎದುರು ನಿಂದಿಸಿ ನನಗೆ ಅವಮಾನ ಮಾಡಿರುತ್ತಾರೆ ಮತ್ತು ನೀನು ಅದು ಹೇಗೆ ಇಲ್ಲಿ ಕೆಲಸ ಮಾಡುತ್ತೀಯಾ ನಾನು ನೋಡಿಕೊಳ್ಳುತ್ತೇನೆ ಎಂದು ಬೆದರಿಕೆ ಹಾಕಿರುತ್ತಾರೆ. ಕಾರಣ ಸರಕಾರಿ ದಾಖಲೆ ಹರಿದುಹಾಕಿ,ಸರಕಾರಿ ಕೆಲಸಕ್ಕೆ ಅಡ್ಡಿಪಡಿಸಿ,ನನಗೆ ಅವಾಚ್ಯವಾಗಿ ನಿಂದಿಸಿ ಬೆದರಿಕೆ ಹಾಕಿರುವ ಗ್ರಾಮ ಪಂಚಾಯತ ಸದಸ್ಯರಾದ ಶ್ರೀಮತಿ:ವಿಜಯಲಕ್ಷ್ಮೀ ಗಂಡ ಹುಣಚೀರಾಯ ಮೋಟಗಿ ರವರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕೆಂದು ದೂರು ಸಲ್ಲಿಸುತ್ತಿದ್ದು. ದೂರು ನೀಡುವ ಬಗ್ಗೆ ಎಲ್ಲಾ ಸದಸ್ಯರೊಂದಿಗೆ ಹಾಗೂ ಮೇಲಾಧಿಕಾರಿಗಳೊಂದಿಗೆ ಚರ್ಚಿಸಿ ಠಾಣೆಗೆ ಬಂದು ದೂರು ನೀಡಲು ವಿಳಂಬವಾಗಿರುತ್ತದೆ ಅಂತಾ ಇತ್ಯಾದಿ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

 

 

 

ಇತ್ತೀಚಿನ ನವೀಕರಣ​ : 31-10-2022 06:27 PM ಅನುಮೋದಕರು: ADMIN


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕಲಬುರಗಿ ನಗರ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080