ಅಭಿಪ್ರಾಯ / ಸಲಹೆಗಳು

ಸ್ಟೇಷನ್‌ ಬಜಾರ ಪೊಲೀಸ ಠಾಣೆ :-  ದಿನಾಂಕ:30/08/2022 ರಂದು 09:15 ಗಂಟೆಗೆ ಫಿರ್ಯಾದಿ ಶ್ರೀಮತಿ  ವಿಠಾಬಾಯಿ ಗಂಡ ರಾಘವೇಂದ್ರ ಕುಲಕರ್ಣಿ ವಯ:32 ವರ್ಷ ಉ: ಮನೆಗೆಲಸ ಜಾ: ಎಸ್ ಸಿ ಸಾ:ಸರಕಾರ ಮಹಿಳಾ ಪದವಿ ಕಾಲೇಜು ಹಿಂದುಗಡೆ ಪಿಎನ್ ಟಿ ಕಾಲೋನಿ ಎದುರುಗಡೆ ಕಲಬುರಗಿ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ ನನಗೆ ನಮ್ಮ ಸಂಬಂದಿಕರಾದ ಮಹಾದೇವಿ ಗಂಡ ದಿ. ಲಕ್ಷ್ಮಣ ನಾಟೇಕಾರ್, ಮಾಲಾಶ್ರೀ@ಮಲ್ಲಮ್ಮ ತಂದೆ ದಿ. ಲಕ್ಷ್ಮಣ ನಾಟೇಕಾರ್ರವರು ಸಂಬಂದಿಯಾದ ಶಿವಪುತ್ರ ಎಮ್ ಕೋಬಾಳ್ಕರ್ ಮತ್ತಿತ್ತರ 7-8 ಜನರೊಂದಿಗೆ ದಿನಾಂಕ:18/02/2022 ರಂದು ಬಂದು ಮಾರಣಾಂತಿಕ ಹಲ್ಲೆ ಮಾಡಿ ಓಡಿಹೋಗಿದ್ದರು, ಸರಕಾರಿ ಆಸ್ಪತ್ರೆಯಲ್ಲಿ ದಾಖಲಾಗಿದ್ದಾಗ ದೂರು ದಾಖಲಿಸಿದಂತೆ ಈ ಮೇಲಿನವರು ಬೇಡಿಕೊಂಡಿದ್ದಾಗ ದೂರು ಕೊಟ್ಟಿರುವುದಿಲ್ಲ. ದಿನಾಂಕ:27/08/2022 ರಂದು ಅದೇ ಜನರು ಮದ್ಯಾಹ್ನ 02:30 ಗಂಟೆ ಸುಮಾರಿಗೆ ಮತ್ತೆ ನಮ್ಮ ಮನೆಗೆ ಬಂದು ನಾವು ಬಾಡಿಗೆಯಿಂದ ಇರುವ ಜಾಗ ಖಾಲಿಮಾಡ ಬೇಕು ಎಂದು ಮನೆ ಹೊಕ್ಕಿ ಎಳೆದಾಡಿ ಕೈಯಿಂದ, ಕಾಲಿನಿಂದ ಹೊಟ್ಟೆಗೆ, ಗುಪ್ತಾಂಗಕ್ಕೆ ಕೈ ಮುಷ್ಠಿಮಾಡಿ ಬಟ್ಟೆ ಎಳೆದಾಡಿ ಕೂದಲು ಹಿಡಿದು ಬೆನ್ನಿನ ಮೇಲೆ ಹಾಗೂ ಹೆಡಕಿನ ಮೇಲೆ ಮಾಲಾಶ್ರೀ @ ಮಲ್ಲಮ್ಮ ಹಾಗೂ ಅವರ ತಾಯಿಯಾದ ಮಹಾದೇವಿ ಗಂಡ ದಿ. ಲಕ್ಷ್ಮಣ ನಾಟೇಕಾರರವರು ಹೊಡೆದಿದ್ದಾರೆ . ಆದರೆ ಅವರಕ್ಕಿಂತ ಹೆಷಕಷಿನ ಒದೆಗಳು ಶಿವಪುತ್ರ ಎಂ.  ಕೋಬಾಳಕರ ಈತನು ಹೆಣ್ಣು ಮಕ್ಕಳು ಅನ್ನದೆ ಒದ್ದಿರುತ್ತಾನೆ ನೋವಿನಿಂದ ನಾನು ಚಿರಾಡಿತ್ತಿದ್ದಾಗ ನಮ್ಮ ಸೊದರತ್ತೆ ಸೀತಾಬಾಯಿ ಗಂಡ ದಿ. ಹಣಮಂತ ಮುಗಳಿ, ದಾನಯ್ಯ ತಂದೆ ಶರಣಯ್ಯ ಸ್ವಾಮಿ, ಸಾ: ಭೀಮರಾಯನ ಜಗುಡಿ ಎದುರುಗಡೆ,ಶಹಾಪೂರ ಹಾಗೂ ನಮ್ಮ ಅಕ್ಕನ ಮಕ್ಕಾದ ಸಾಕ್ಷಿ ಮತ್ತು ಕಾವೇರಿಯವರು ಚಿರಾಡುವದು, ಅಳುವದನ್ನು  ನೋಡಿ ಓಡಿ ಬಂದ ದಾನಯ್ಯ ಸ್ವಾವಿರವರ ಸಮಕ್ಷಮದಲ್ಲಿ ನೀವು ಜಾಗ ಖಾಲಿ ಮಾಡದೇ ಇದ್ದಲ್ಲಿ ದಿನಾಲು ಹೋಡೆ ಬಡೆ ಮಾಡುತ್ತೇವೆ ಯಾರಿಗೆ ಹೇಳುತ್ತಿ ಹೇಳು ಎಂದಾಗ ದಾನಯ್ಯ  ಸ್ವಾಮಿರವು ಪೊಲೀಸರಿಗೆ ದೂರವಾಣಿ ಮಾಡಿ ಎಂದಾಗ ಸದರಿಯವರು ಪೊಲೀಸು ಕೇಸು ಕಛೇರಿ ಎಂದರೆ ನಿನ್ನ ಈಡಿ ಖಾನದಾನ ಖತಂ ಮಾಡುತ್ತೇವೆ ಎಂದು ದಮಕಾಯಿಸಿ ಆರೋಪಿತರು ಹಾಗು ಇನ್ನಿತರರು ಹೋಗಿರುತ್ತಾರೆ, ದೇಹದ ಮೇಲೆ ಗಾಯಗಳಾಗದೆ ಒಳಪೆಟ್ಟು ಆಗಿದ್ದರಿಂದ ಆಸ್ಪತ್ರೆಗೆ ಹೋಗಿರುವುದಿಲ್ಲ  ಕಂಪ್ಲೇಂಟ ಮಾಡಿದರೆ ಮತ್ತೆ ಹೊಡೆಯುತ್ತಾರೆ ಎಂಬ ಭಯದಿಂದ ತಡಮಾಡಿ ಈ ದೂರು ಸಲ್ಲಿಸುತ್ತಿದ್ದೇನೆ. ಕಾರಣ ಶಿವಪುತ್ರ ಎಮ್ ಕೋಬಾಳಕರ್, ಮಹಾದೇವಿ ಗಂಡ ದಿ. ಲಕ್ಷ್ಮಣ ನಾಟೇಕಾರ , ಮಾಲಾಶ್ರೀ@ ಮಲ್ಲಮ್ಮ ನಾಟೇಕಾರ್ ಹಾಗೂ ಸಂಗಡಿಗರು 7-8 ಜನರ ವಿರುದ್ದ ಕಾನೂನು ಕ್ರಮ ಜರುಗಿಸಲು ದೂರು ಅಂತ ನೀಡಿದ ದೂರು ಅರ್ಜಿಯ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

 

ಸ್ಟೇಷನ್‌ ಬಜಾರ ಪೊಲೀಸ ಠಾಣೆ :-  ಫಿರ್ಯಾದಿ ಶ್ರೀ ಸಿದ್ದು @ ಸಿದ್ದಪ್ಪಾ ತಂದೆ ಶರಣಪ್ಪ ಸುಬೇದಾರ ವಯ|| 57 ವರ್ಷ ಉ|| ಜರ್ನಲಿಸ್ಟ್ ಸಾ|| ಖುಬಾ ಪ್ಲಾಟ ಕಲಬುರಗಿ ಇವರು ಸಲ್ಲಿಸಿದ ಖಾಸಗಿ ದೂರು ಅರ್ಜಿ ಸಂ. 238/22 ನೇದ್ದರ ಸಾರಾಂಶವೆನಂದರೆ, ಫಿರ್ಯಾದಿ 2010 ನೇ ಸಾಲಿನಿಂದ ವಿಕಾಸವಾಣಿ ದಿನಪತ್ರಿಕೆಯನ್ನು ಪ್ರಕಟಣೆ ಮಾಡುತ್ತಿದ್ದು ಅಲ್ಲದೇ ಕಲಬುರಗಿ ವಾಣಿ ದಿನಪತ್ರಿಕೆಯಲ್ಲಿ ಕಳೆದ 15 ವರ್ಷಗಳಿಂದ ಕೆಲಸ ಮಾಡುತ್ತಿದ್ದು ಆಪಾದಿತರಾದ ಸಿದ್ದೇಶ್ವರಪ್ಪಾ ಜಿಬಿ ರವರು ಪ್ರಭಾರಿ ಮಾಹಿತಿ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಉಪ ನಿರ್ದೇಶಕರು ಅಂತಾ ಕೆಲಸ ಮಾಡುತ್ತಿದ್ದಾರೆ. ಆಪಾದಿತರು ಇಲಾಖೆಯ ಪ್ರಭಾರಿ ಅಧಿಕಾರಿಯಾಗಿ ಕೆಲಸ ಮಾಡುವ 2017 ನೇ ಸಾಲಿನಿಂದ ಹಿಡಿದು ತಮ್ಮ ಮದ್ಯಸ್ಥಿಕೆಯಿಂದ ಇಲಾಖೆಯ ಜಾಹಿರಾತು ಪ್ರಕಟಣೆಗಳ ಗುತ್ತಿಗೆಯನ್ನು ಕೆಲವು ಜನರಿಗೆ ಮಾತ್ರ ಕೊಡುತ್ತಾ ಬಂದಿದ್ದರಿಂದ ಫಿರ್ಯಾದಿ ಈ ವಿಷಯವನ್ನು ಇಲಾಖೆಯ ಗಮನಕ್ಕೆ ತಂದಿರುತ್ತಾರೆ. ಈ ವಿಷಯದಲ್ಲಿ ಫಿರ್ಯಾದಿ ಮತ್ತು ಇತರೆ ಇಬ್ಬರು ವ್ಯಕ್ತಿಗಳು ಕೂಡಿ ಹೈಕೊರ್ಟ ಆಫ್ ಕರ್ನಾಟಕ ಕಲಬುರಗಿ ಶಾಖೆಯಲ್ಲಿ ರೀಟ್ ಪೇಟಿಷನ್ ನಂ.203261/2019 ಪ್ರಕಾರ ಇಲಾಖೆಯ ಮೇಲೆ ಅರ್ಜಿ ಸಲ್ಲಿಸಿರುತ್ತಾರೆ. ಆದ್ದರಿಂದ ಆಪಾದಿತನು ಫಿರ್ಯಾದಿಗೆ ನೋಟಿಸ್ ಗಳನ್ನು ಕೊಟ್ಟು ತೊಂದರೆ ಕೊಟ್ಟಿರುತ್ತಾರೆ. ಟೇಂಡರ್ ವಿಷಯಕ್ಕೆ ಸಂಬಂಧಿಸಿದಂತೆ ಫಿರ್ಯಾದಿಯು ಕೆಲವೊಂದು ನಿಯಮಗಳನ್ನು ನೋಡಿ ಆಪಾದಿತನು ಸರ್ಕಾರದ ನೀತಿನಿಯಮ ಮತ್ತು ಜಾಹೀರಾತು ನಿಯಮಗಳನ್ನು ಉಲ್ಲಂಘನೆ ಮಾಡಿರುವುದು ಕಂಡುಬಂದಿದ್ದರಿಂದ ಲೋಕಾಯುಕ್ತ ಬೆಂಗಳೂರಿನಲ್ಲಿ ಉಲ್ಲಂಘನೆ  ಆದ ಬಗ್ಗೆ ದೂರು ಸಲ್ಲಿಸಿ ಕ್ರಮಕೈಕೊಳ್ಳಲು ಕೋರಿಕೊಂಡಿರುತ್ತಾರೆ. ಆದ್ದರಿಂದ ಲೋಕಾಯುಕ್ತ ಬೆಂಗಳೂರಿನವರು ಆಪಾದಿತನಿಗೆ ನೋಟಿಸ್ ಜಾರಿ ಮಾಡಿ ವಿಚಾರಣೆಗೆ ಕರೆದಿರುತ್ತಾರೆ ಆದ್ದರಿಂದ ಆಪಾದಿತನು ಫಿರ್ಯಾದಿಗೆ ಅಪರಾಧಿಕ ಹಿನ್ನೆಲೆವುಳ್ಳ ಪತ್ರಕರ್ತ ಇದ್ದಾನೆ, ಗುತ್ತಿಗೆದಾರರಿಗೆ ತೊಂದರೆ ಕೊಡುತ್ತಾನೆ, ಸರ್ಕಾರಿ ಅಧಿಕಾರಿಗಳಿಗೆ ಹಣದ ಬೇಡಿಕೆ ಇಟ್ಟು ಬ್ಲ್ಯಾಕ್ ಮೇಲ್ ಮಾಡುತ್ತಾನೆ ಆರ್,ಟಿ,ಐ ಅಡಿಯಲ್ಲಿ ಮಾಹಿತಿ ಕೇಳಿ ಹೆದರಿಸುತ್ತಾನೆ ಅಂತಾ ಇಲ್ಲಸಲ್ಲದ ಅಪಾದನೆ ಮಾಡಿ ಫಿರ್ಯಾದಿಯ ಮಾನಹಾನಿ ಮಾಡಿರುತ್ತಾನೆ ಕಾರಣ ಆಪಾದಿತನ ಮೇಲೆ ಕಾನೂನು ಕ್ರಮ ಕೈಕೊಳ್ಳಬೇಕು ಅಂತಾ ಇತ್ಯಾದಿಯಾಗಿ ಸಲ್ಲಿಸಬೇಕು ಅಂತಾ ಖಾಸಗಿ ದೂರಿನ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

 

ಫರತಾಬಾದ ಪೊಲೀಸ್‌ ಠಾಣೆ :- ದಿನಾಂಕ:೩೦.೦೮.೨೦೨೨ ರಂದು ೭.೩೦ ಪಿಎಮ್ ಗಂಟೆಗೆ ನಮ್ಮ ಠಾಣೆಯ ಗಡ್ಡೇಪ್ಪಾ ಸಿಹೆಚ್ ಸಿ ೧೬೫ ರವರು ಠಾಣೆಗೆ ಹಾಜರಾಗಿ ಮುದ್ದೆಮಾಲು, ಜಪ್ತಿ ಪಂಚನಾಮೆ, ೪ ಜನ ಆರೋಪಿತರೊಂದಿಗೆ ಮುಂದಿನ ಕ್ರಮಕ್ಕಾಗಿ ವರದಿ ಹಾಜರಪಡಿಸಿದರ ಸಾರಾಂಶವೇನೆಂದರೆ, ಇಂದು ದಿನಾಂಕ:೩೦.೦೮.೨೦೨೨ ರಂದು ಸಾಯಂಕಾಲ ೪ ಗಂಟೆಯ ಸುಮಾರಿಗೆ ನಾನು ಪೊಲೀಸ್ ಠಾಣೆಯಲ್ಲಿದ್ದಾಗ ಭಾತ್ಮಿ ಬಂದಿದ್ದೇನೆಂದರೆ, ನಮ್ಮ ಠಾಣೆಯ ವ್ಯಾಪ್ತಿಯ ಕೊಳ್ಳೂರ ಸೀಮಾಂತರದ ಹೊಲಗಳಿಗೆ ಹೋಗುವ ರಸ್ತೆಯ ಪಕ್ಕಕ್ಕೆ ಸಾರ್ವಜನಿಕ ಸ್ಥಳದ ಖುಲ್ಲಾ ಜಾಗೆಯಲ್ಲಿ ಕೆಲವು ಜನರು ಇಸ್ಪೀಟ ಜೂಜಾಟ ಆಡುತ್ತಿದ್ದಾರೆ ಅಂತಾ ಖಚಿತ ಬಾತ್ಮಿ ಬಂದ ಮೇರೆಗೆ ನಮ್ಮ ಠಾಣಾ ಸಿಬ್ಬಂದಿ ಜನರಾದ ಧರ್ಮಣ್ಣಾ ಸಿಹೆಚ್‌ಸಿ ೨೧೯, ಸಗರಪ್ಪಾ ಸಿಪಿಸಿ ೩೨೬, ತಿರುಪತಿ ಸಿಪಿಸಿ ೨೯೧ ರವರಿಗೆ ಜೂಜಾಟದ ಬಗ್ಗೆ ಮಾಹಿತಿ ತಿಳಿಸಿ ನಂತರ ನಮ್ಮ ಪಿಐ ಸಾಹೇಬರಿಗೆ ಹಾಗೂ ಮಾನ್ಯ ಎಸಿಪಿ ಸಾಹೇಬರು ಸಬ್ ಅರ್ಬನ್ ಉಪವಿಭಾಗ ಕಲಬುರಗಿ ರವರಿಗೆ ಮಾಹಿತಿ ತಿಳಿಸಿ ಅವರ ಮಾರ್ಗದರ್ಶನದಲ್ಲಿ ಸಿಬ್ಬಂದಿ ಜನರಿಗೆ ಖಾಸಗಿ ವಾಹನದಲ್ಲಿ ಕರೆದುಕೊಂಡು ಠಾಣೆಯಿಂದ ಸಾಯಂಕಾಲ ೪.೧೫ ಗಂಟೆಗೆ ಹೊರಟ್ಟು, ಭಾತ್ಮಿ ಸ್ಥಳಕ್ಕೆ ಹೊರಡುವಾಗ ಮಾರ್ಗಮಧ್ಯೆ ದಾರಿ ಹೊಕ್ಕ ಇಬ್ಬರೂ ಪಂಚರನ್ನು ಬರಮಾಡಿಕೊಂಡು ಅವರಿಗೂ ಭಾತ್ಮಿ ಬಂದ ವಿಷಯ ತಿಳಿಸಿ ಅವರು ನಮ್ಮೊಂದಿಗೆ ದಾಳಿ ಕಾಲಕ್ಕೆ ಹಾಜರಿರಲು ಒಪ್ಪಿದ ಮೇರೆಗೆ ಅವರನ್ನು ನಮ್ಮೊಂದಿಗೆ ಖಾಸಗಿ ವಾಹನದಲ್ಲಿ ಕರೆದುಕೊಂಡು ಹೊರಟು ಭಾತ್ಮೀ ಸ್ಥಳದ ಹತ್ತಿರ ಸಾಯಂಕಾಲ ೫ ಗಂಟೆಗೆ ಗಿಡಗಳ ಮರೆಯಲ್ಲಿ ನಿಂತು ನೋಡಲು ಸಾರ್ವಜನಿಕ ಸ್ಥಳದಲ್ಲಿ ಕುಳಿತು ಕೆಲವು ಜನರು ದುಂಡಾಗಿ ಇಸ್ಪೇಟ ಎಲೆಗಳ ಸಹಾಯದಿಂದ ಅಂದರ ಬಾಹರ ಜೂಜಾಟ ಆಡುತ್ತಿರುವದನ್ನು ನೋಡಿ ಖಚಿತ ಪಡಿಸಿಕೊಂಡು ಸಾಯಂಕಾಲ ೫.೦೫ ಗಂಟೆಗೆ ಏಕಕಾಲಕ್ಕೆ ಪಂಚರ ಸಮಕ್ಷಮದಲ್ಲಿ ದಾಳಿ ಮಾಡಲಾಗಿ ಜೂಜಾಟದಲ್ಲಿ ತೊಡಗಿದ ಕೆಲವು ಜನರು ಓಡಿ ಹೋಗಿದ್ದು ಇನ್ನು ಕೆಲವು ಜನರಿಗೆ ಸಿಕ್ಕಿದ್ದು ಸಿಕ್ಕಿದ ಜನರಿಗೆ ಹಿಡಿದು ಅವರಿಗೆ ಅಂಗಶೋಧ ಮಾಡಿ ಹೆಸರು ವಿಳಾಸ ಕೇಳಲು ೧) ಅಶೋಕಕುಮಾರ ತಂದೆ ಬಸಣ್ಣಾ ಪದ್ಮಾಜಿ ವಯ: ೩೬ ವರ್ಷ ಉ: ಕೂಲಿಕೆಲಸ ಜಾತಿ: ಲಿಂಗಾಯಿತ ಸಾ: ಹೀರಾಪೂರ ೨) ಮಂಜುನಾಥ ತಂದೆ ಮಲ್ಕಾಜಪ್ಪಾ ಸುಂಟನೂರ ವಯ:೩೬ ವರ್ಷ ಉ:ಖಾಸಗಿ ಕೆಲಸ ಜಾತಿ:ಲಿಂಗಾಯಿತ ಸಾ: ಹೀರಾಪೂರ ಕಲಬುರಗಿ ೩) ಹೊನ್ನಪ್ಪಾ ತಂದೆ ವಿಠ್ಠಲ ಮೇತ್ರೇ ವಯ:೩೭ ವರ್ಷ ಉ:ಚಾಲಕ ಜಾತಿ: ಕುರುಬ ಸಾ: ಕೋಗನೂರ ತಾ:ಅಫಜಲಪೂರ ೪) ಮಂಜುನಾಥ ತಂದೆ ಶಿವಶರಣಪ್ಪಾ ನಡಗಟ್ಟಿ ವಯ:೨೬ ವರ್ಷ ಉ: ಖಾಸಗಿ ಕೆಲಸ ಜಾತಿ: ಕಬ್ಬಲಿಗಾ ಸಾ ತಾಡತೆಗನೂರ ಅಂತಾ ತಿಳಿಸಿದ್ದು, ಓಡಿ ಹೋದವರ ಹೆಸರು ವಿಚಾರಿಸಲಾಗಿ ನಾಗು @ ನಾಗರಾಜ ಕಲ್ಲಶೆಟ್ಟಿ ಬ್ರಹ್ಮಪೂರ ಕಲಬುರಗಿ ಹಾಗೂ ಮುಜ್ಜು @ ಮುಜೀಬ್ ಕಲಬುರಗಿ ಅಂತಾ ಗೊತ್ತಾಗಿದ್ದು, ಸದರಿ ಸ್ಥಳದಲ್ಲಿ ೫೨ ಇಸ್ಪೇಟ ಎಲೆಗಳು ಹಾಗೂ ನಗದು ಹಣ ೧೮೧೫೦/- ರೂ. ಹಾಗೂ ೧) ಮೋಟಾರ ಸೈಕಲ ನಂ ಕೆಎ-೩೨/ಇವಿ-೯೬೧೯ ಅ:ಕಿ:೧೦,೦೦೦/- ೨) ಮೋ.ಸೈ. ನಂ: ಕೆಎ-೩೨/ಇಎಕ್ಷ್-೫೬೪೩ ಅ.ಕಿ:೧೫೦೦೦/-, ೩) ಮೋ.ಸೈ. ನಂ: ಕೆಎ-೩೨/ಆರ್-೪೪೬೬ ಅ:ಕಿ:೧೫೦೦೦/-, ೪) ಮೋ.ಸೈ. ನಂ: ಕೆಎ-೩೨/ಇಕೆ-೭೯೯೯ ಅ.ಕಿ:೧೦೦೦೦/-, ೫) ಮೋ.ಸೈ. ನಂ: ಕೆಎ-೩೨/ಹೆಚ್‌ಎ-೦೨೮೬ ಅ.ಕಿ:೧೨೦೦೦/-, ೬) ಮೋ.ಸೈ. ನಂ: ಕೆಎ-೩೨/ಇಪಿ-೨೮೦೭ ಅ.ಕಿ:೧೨೦೦೦/-, ೭) ಮೋ.ಸೈ. ನಂ: ಕೆಎ-೩೨/ಇವಾಯ್-೭೯೬೦ ಅ.ಕಿ:೧೫೦೦೦/- ಸಿಕ್ಕಿದ್ದು, ಇವುಗಳನ್ನು ಪಂಚರ ಸಮಕ್ಷಮದಲ್ಲಿ ೫.೦೫ ಪಿಎಮ್ ಗಂಟೆಯಿAದ ೬.೦೫ ಪಿಎಮ್ ಗಂಟೆಯವರೆಗೆ ಗುನ್ನೆ ಸ್ಥಳದಲ್ಲಿ ಕುಳಿತು ಜಪ್ತಿ ಪಂಚನಾಮೆಯನ್ನು ಬರೆದು ಮುಗಿಸಲಾಯಿತು. ನಂತರ ಮುದ್ದೇಮಾಲು ಮತ್ತು ಆರೋಪಿತರೊಂದಿಗೆ ೭.೩೦ ಪಿಎಮ್ ಗಂಟೆಗೆ ಠಾಣೆಗೆ ಬಂದಿದ್ದು, ಸದರಿ ಆರೋಪಿತರ ವಿರುದ್ದ ಕಾನೂನು ಕ್ರಮ ಜರುಗಿಸಲು ಕೊರಲಾಗಿದೆ ಅಂತಾ ಇತ್ಯಾದಿ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

 

 

ಅಶೋಕ ನಗರ ಪೊಲೀಸ್‌ ಠಾಣೆ :-  ದಿನಾಂಕ:30.08.2022 ರಂದು 01:00 ಪಿ.ಎಂ.ಕ್ಕೆ ಫಿರ್ಯಾದಿ ಶ್ರೀ ಭಾರತಿ ಗಂಡ ಸೂರ್ಯಾಕಾಂತ ಪಾಟೀಲ, ವ:48 ವರ್ಷ, ಜಾತಿ:ಲಿಂಗಾಯತ, ಉ:ಆಹಾರ ನಿರೀಕ್ಷಕರು, ಸಹಾಯಕ ನಿರ್ದೇಶಕರ ರವರ ಕಛೇರಿ, ಅನೌಪಚಾರಿಕ ಪಡಿತರ ಪ್ರದೇಶ, ಕಲಬುರಗಿ ಇವರು ಪೊಲೀಸ್ ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನಂದರೆ, ಇಂದು ದಿನಾಂಕ:30.08.2022 ರಂದು ಭಾರತಿ ಗಂಡ ಸೂರ್ಯಾಕಾಂತ ಪಾಟೀಲ, ವ:48 ವರ್ಷ, ಜಾತಿ:ಲಿಂಗಾಯತ, ಉ:ಆಹಾರ ನಿರೀಕ್ಷಕರು, ಸಹಾಯಕ ನಿರ್ದೇಶಕರ ರವರ ಕಛೇರಿ, ಅನೌಪಚಾರಿಕ ಪಡಿತರ ಪ್ರದೇಶ, ಕಲಬುರಗಿ ರವರು ಕರೆಯಿಸಿದ ಮೇರೆಗೆ ನಾವು ಬೆಳಿಗ್ಗೆ 10:30 ಗಂಟೆಗೆ ಎಸ್.ಬಿ. ಕಾಲೇಜ ಹತ್ತರಿ ಬಂದು ಹಾಜರಾದೆವು. ಅಲ್ಲಿ ಅಶೋಕ ನಗರ ಪೊಲೀಸ್ ಠಾಣೆಯ ಅಧಿಕಾರಿ ಮತ್ತು ಸಿಬ್ಬಂದಿಯವರಾದ 1) ಶ್ರೀ ಅಬ್ದುಲ್ ಜಬ್ಬಾರ ಪಿ.ಎಸ್.ಐ. 2) ಶ್ರೀ ಸಾಯಿಬಣ್ಣಾ ಹೆಚ್.ಸಿ-03 ಮತ್ತು 112 ಪೊಲೀಸ್ ಸಿಬ್ಬಂದಿ 3) ಶ್ರೀ ನಿಂಗಪ್ಪಾ ಪಿ.ಸಿ.-237 ಹಾಜರಿದ್ದು ಅವರಿಗೆ ಪರಿಚಯಿಸಿ ನಮಗೆ ಶ್ರೀಮತಿ ಭಾರತಿ ಪಾಟೀಲ, ಆಹಾರ ನಿರೀಕ್ಷಕರು ರವರು ತಿಳಿಸಿದ್ದೇನೆಂದರೆ,  ಕಲಬುರಗಿ ನಗರದ ಎಸ್.ಬಿ. ಕಾಲೇಜ ಹಿಂದುಗಡೆ ಕಂಪೌಂಡ ಹತ್ತಿರ ಒಂದು ಶೇಟರ ಅಂಗಡಿಯಲ್ಲಿ ಅಕ್ರಮವಾಗಿ ಗ್ಯಾಸ ಸಿಲೆಂಡರಗಳನ್ನು ಸಂಗ್ರಹಿಸಿಕೊಂಡು ಯಾವುದೇ ಲೈಸೆನ್ಸ್ ಪರವಾನಿಗೆ ಇಲ್ಲದೇ ಅಡುಗೆಗೆ ಉಪಯೋಗಿಸುವ ಸಿಲೆಂಡರಗಳನ್ನು ಅಟೋರಿಕ್ಷಾಗಳಿಗೆ ತುಂಬುತ್ತಿದ್ದಾರೆ ಅಂತಾ ಬಂದ ಬಾತ್ಮಿ ಬಂದಿದ್ದು, ಸದರಿ ವಿಷಯವನ್ನು ಮೇಲಾಧಿಕಾರಿಗಳಿಗೆ ತಿಳಿಸಿದ್ದು, ಅವರ ಮಾರ್ಗದರ್ಶನದಲ್ಲಿ ದಾಳಿ ಮಾಡಿ ಕ್ರಮ ಕೈಕೊಳ್ಳಬೇಕಾಗಿದ್ದು ದಾಳಿ ಕಾಲಕ್ಕೆ ಹಾಜರಿದ್ದು ಜಪ್ತಿ ಪಂಚನಾಮೆಯನ್ನು ಬರೆಯಿಸಿಕೊಡಲು ಕೇಳಿಕೊಂಡ ಮೇರೆಗೆ ನಾವು ಉಭಯ ಪಂಚರು ಒಪ್ಪಿಕೊಂಡೆವು. ನಂತರ ನಾವು, ಶ್ರೀಮತಿ ಭಾರತಿ ಪಾಟೀಲ, ಆಹಾರ ನಿರೀಕ್ಷಕರು ಮತ್ತು ಸಿ.ಸಿ.ಬಿ. ಘಟಕ ಅಧಿಕಾರಿ ಮತ್ತು ಅಶೋಕ ನಗರ ಪೊಲೀಸ್ ಠಾಣೆಯ ಅಧಿಕಾರಿ ಮತ್ತು ಸಿಬ್ಬಂದಿಯವರಾದ 1) ಶ್ರೀ ಅಬ್ದುಲ್ ಜಬ್ಬಾರ ಪಿ.ಎಸ್.ಐ. 2) ಶ್ರೀ ಸಾಯಿಬಣ್ಣಾ ಹೆಚ್.ಸಿ-03 ಮತ್ತು 112 ಪೊಲೀಸ್ ಸಿಬ್ಬಂದಿ 3) ಶ್ರೀ ನಿಂಗಪ್ಪಾ ಪಿ.ಸಿ.-237  ಬಾತ್ಮಿ ಬಂದ ಸ್ಥಳವಾದ ಎಸ್.ಬಿ. ಕಾಲೇಜ ಹಿಂದುಗಡೆ ಕಂಪೌಂಡ ಹತ್ತಿರ ಇರುವ ಒಂದು ಶೆಟರ ಅಂಗಡಿ ಹತ್ತಿರ ತಲುಪಿ ಅಲ್ಲಿಯೇ ಮರೆಯಲ್ಲಿ ನಿಂತುಕೊಂಡು ನೋಡಲಾಗಿ ಒಬ್ಬ ವ್ಯಕ್ತಿ ಗ್ಯಾಸ ಸಿಲೆಂಡರಗಳಿಂದ ಅಟೋರೀಕ್ಷಾಗಳಿಗೆ ತುಂಬುತ್ತಿದ್ದು, ನಾವುಗಳು ನೋಡಿ ಖಚಿತಪಡಿಸಿಕೊಂಡು ದಾಳಿ ಮಾಡಲು ಹೋಗುತ್ತಿದ್ದಂತೆ ನಮ್ಮನ್ನು ನೋಡಿ ಓಡಿ ಹೋಗಿದ್ದು ಆಗ ಸಮಯ ಬೆಳಿಗ್ಗೆ 11:00 ಗಂಟೆ ಆಗಿತ್ತು. ನಂತರ ಓಡಿ ಹೋದ ವ್ಯಕ್ತಿಯ ಬಗ್ಗೆ ಪಕ್ಕದಲ್ಲಿರುವ ಕಟಿಂಗ್ ಶಾಪ ಅಂಗಡಿಯವನಿಗೆ ವಿಚಾರಿಸಲಾಗಿ ಅವನ ಹೆಸರು   ಬಸವರಾಜ ತಂದೆ ಚನ್ನವೀರಪ್ಪಾ ಪಾಟೀಲ್ ವಯ: 34 ವರ್ಷ ಉ: ಖಾಸಗಿ ಕೆಲಸ ಸಾ|| ಅಕ್ಕ ಮಹಾದೇವಿ ಕಾಲೋನಿ ಕಲಬುರಗಿ ಅಂತ ತಿಳಿದು ಬಂದಿರುತ್ತದೆ. ಸದರಿಯವನ ಹತ್ತಿರ ಯಾವುದೇ ರೀತಿಯ ಲೈಸೆನ್ಸ್ ಪರವಾನಿಗೆ ವಗೈರೆ ಇದ್ದಿರುವುದಿಲ್ಲ ಅಂತ ತಿಳಿದು ಬಂದಿರುತ್ತದೆ. ನಂತರ ಸದರಿ ಸ್ಥಳದಲ್ಲಿ ಪರಿಸೀಲಿಸಿ ನೋಡಲಾಗಿ ಸ್ಥಳದಲ್ಲಿ 1) 03 ಹೆಚ್.ಪಿ. ಕಂಪನಿಯ ತುಂಬಿದ ಗ್ಯಾಸ ಸಿಲೆಂಡರ್ ಗಳು ದೊರೆತಿದ್ದು, ಅದರ ಅ.ಕಿ. ಒಂದಕ್ಕೆ ರೂ.2000/- ರಂತೆ ಒಟ್ಟು 03 ಸಿಲೆಂಡರಗಳಿಗೆ ರೂ.6000/- ಇದ್ದು, 2) 01 ಹೆಚ್.ಪಿ. ಕಂಪನಿಯ ಅರ್ಧ ಗ್ಯಾಸ ತುಂಬಿದ ಸಿಲೆಂಡರ ಅ.ಕಿ. ರೂ.1,500/- 3) ಒಂದು ಹೆಚ್.ಪಿ. ಕಂಪನಿಯ ಖಾಲಿ ಗ್ಯಾಸ ಸಿಲೆಂಡರ ಅ.ಕಿ 1,000/-  ಇದ್ದು, 4) 1 ತೂಕದ ಯಂತ್ರದ ಮಷೀನ ದೊರೆತಿದಿದ್ದು, ಅದರ ಅ.ಕಿ. ರೂ.3,000/-, 5) 1 ಹೆಚ್.ಪಿ. ಮೋಟಾರ ಅದರ ಅ.ಕಿ. ರೂ.3,000/- ಹೀಗೆ ಒಟ್ಟು ಅ.ಕಿ. ರೂ 14,500/- ಕಿಮ್ಮತ್ತಿನ ಮುದ್ದೇಮಾಲುಗಳು ದೊರೆತಿದ್ದು, ಪಂಚರ ಸಮಕ್ಷಮ ಜಪ್ತು ಮಾಡಿಕೊಂಡಿದ್ದು ಇರುತ್ತದೆ. ನಂತರ ಸ್ಥಳದಲ್ಲಿಯೇ ಕುಳಿತು ಜಪ್ತಿ ಪಂಚನಾಮೆಯನ್ನು ಬೆಳಿಗ್ಗೆ 11:00 ಗಂಟೆಯಿಂದ ಮಧ್ಯಾಹ್ನ 12:00 ಗಂಟೆಯವರೆಗೆ ಲ್ಯಾಪಟಾಪದಲ್ಲಿ ಟೈಪ ಮಾಡಿದ್ದು ಇರತ್ತದೆ. ನಂತರ ಜಪ್ತಿ ಮಾಡಿದ ಮುದ್ದೇಮಾಲಿನೊಂದಿಗೆ ಅಶೋಕ ನಗರ ಪೊಲೀಸ್ ಠಾಣೆಗೆ ಬಂದು ಜಪ್ತಿ ಮುದ್ದೇಮಾಲುಗಳನ್ನು ಒಪ್ಪಿಸಿದ್ದು ಇರುತ್ತದೆ. ನಂತರ ನನ್ನ ವರದಿಯನ್ನು ತಯಾರಿಸಿ ಓಡಿ ಹೋದ ಆರೋಪಿತನ ವಿರುದ್ದ ಅಗತ್ಯ ವಸ್ತುಗಳ ಕಾಯ್ದೆ 1955, 3&7 ಆಕ್ಟ್ ಮತ್ತು ಲಿಕ್ವಿಫೈಡ್ ಪೆಟ್ರೋಲಿಯಂ ಗ್ಯಾಸ ಆರ್ಡರ 2000, 6 & 7 ಆಕ್ಟ್ ಅಡಿಯಲ್ಲಿ ಕಾನೂನು ಕ್ರಮ ಜರುಗಿಸುವಂತೆ ಕೋರಲಾಗಿದೆ ಅಂತ ಇತ್ಯಾದಿಯಾಗಿದ್ದ ವರದಿ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

ಇತ್ತೀಚಿನ ನವೀಕರಣ​ : 03-09-2022 03:23 PM ಅನುಮೋದಕರು: ADMIN


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕಲಬುರಗಿ ನಗರ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080