ಅಭಿಪ್ರಾಯ / ಸಲಹೆಗಳು

ಸಂಚಾರಿ ಪೊಲೀಸ್‌ ಠಾಣೆ -1 :- ದಿನಾಂಕ 29-06-2022  ರಂದು ಸಾಯಂಕಾಲ ೭-೧೫ ಗಂಟೆಗೆ ಗಾಯಾಳು ಲಕ್ಷ್ಮಿ  ಇವರು ನಗರದ ಡಾ|| ವಿಶ್ವನಾಥ ಪಾಟೀಲ ಇವರ ಆಸ್ಪತ್ರೆಯಿಂದ ಪಾಣೆಗಾಂವ ಗ್ರಾಮಕ್ಕೆ ಹೋಗುವ ಕುರಿತು ಧರ್ಮಸಿಂಗ ಇತನು ಚಲಾಯಿಸುತ್ತೀರುವ ಟಾಟಾ ಎಸಿಇ ಗೂಡ್ಸ ನಂಬರ ಕೆಎ-೩೨/ಎಎ-೧೦೯೮ ನೇದ್ದರಲ್ಲಿ ಕುಳಿತು ಹೋಗುವಾಗ ಚಾಲಕ ಧರ್ಮಸಿಂಗ ಇತನು ತನ್ನ ವಾಹನವನ್ನು ಅತಿವೇಗವಾಗಿ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಹೋಗಿ ಹಳೆ ಜೇವರ್ಗಿ ರೋಡ ರೈಲ್ವೆ ಅಂಡರ ಬ್ರಿಡ್ಜ್ ಹತ್ತೀರ ಇರುವ ಕಬ್ಬಣದ ಬಾರ ಪೊಲಗೆ ಡಿಕ್ಕಿಪಡಿಸಿ ಅಪಘಾತ ಮಾಡಿ ವಾಹನದಲ್ಲಿ ಕುಳಿತ ಲಕ್ಷ್ಮಿ ಇವರಿಗೆ ಭಾರಿಗಾಯಗೊಳಿಸಿದ್ದರಿಂದ ಲಕ್ಷ್ಮಿ ಇವರಿಗೆ ಖಾಸಗಿ ಸನರೈಸ ಆಸ್ಪತ್ರೆಯಲ್ಲಿ ಉಪಚಾರ ಕುರಿತು ಸೇರಿಕೆ ಮಾಡಿ ದಿನಾಂಕ ೧೯-೦೭-೨೦೨೨ ರಂದು ಹೆಚ್ಚಿನ ಉಪಚಾರ ಕುರಿತು ಬೆಂಗಳೂರಿನ ವಿಕ್ಟೋರಿಯಾ ಆಸ್ಪತೆಯಲ್ಲಿ ಸೇರಿಕೆ ಮಾಡಿ ಉಪಚಾರ ಮಾಡಿಸುತ್ತೀರುವಾಗ ರಸ್ತೆ ಅಪಘಾತದಲ್ಲಿ ಆದ ಭಾರಿಗಾಯದ ಉಪಚಾರ ಪಡೆಯುತ್ತಾ ಭಾರಿಗಾಯದ ಉಪಚಾರ ಫಲಕಾರಿಯಾಗದೆ ಇಂದು ದಿನಾಂಕ 30-7-2022 ರಂದು ಮದ್ಯಾಹ್ನ ೧೨-೦೦ ಗಂಟೆಗೆ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದು ಇರುತ್ತದೆ. 

 

ವಿಶ್ವವಿದ್ಯಾಲಯ ಪೊಲೀಸ್‌ ಠಾಣೆ :- ದಿನಾಂಕ 27-07-2022  ರಂದು ಮಧ್ಯಹ್ನ ೧:೧೦ ಪಿ.ಎಮ್ ಸುಮಾರಿಗೆ ಸದರಿ ಆರೋಪಿತರು ತಮ್ಮ ಅಣ್ಣತಮ್ಮಕೀಯ ಪ್ಲಾಟದಲ್ಲಿ ಲೈಟಿನ ಕಂಬ ಹಾಕಿದ ವಿಷಯವಾಗಿ ಜಗಳವಾಡಿ ಫಿರ್ಯಾದಿದಾರರಿಗೆ ಕೈ ಹಿಡಿದು ಎಳೆದಾಡು ಮಾನಭಂಗ ಮಾಡಲು ಪ್ರಯತ್ನ ಮಾಡಿ ಹಾಗೂ ಹೊಡೆ ಬಡೆ ಮಾಡಿ ಗಾಯಪಡಿಸಿ ಜೀವದ ಭಯ ಹಾಕಿದ ಬಗ್ಗೆ ಅಪರಾಧ ಇರುತ್ತದೆ.

 

ಎಂ.ಬಿ.ನಗರ ಪೊಲೀಸ ಠಾಣೆ :- ದಿನಾಂಕ: 30-07-2022  ರಂದು ೧೧-೩೦ ಗಂಟೆ ಸುಮಾರಿಗೆ ಫಿರ್ಯಾದಿದಾರರಾದ ಶ್ರೀ ಗೋಪಾಲ ರವರು ಕೊಟ್ಟ ಫಿರ್ಯಾದಿ ಸಾರಾಂಶವೇನೆಂದರೆ, ತನ್ನ ತಮ್ಮ ರಾಜಕುಮಾರ ಈತನು ತನ್ನ ಮನಸ್ಸಿನ ಮೇಲೆ ಯಾವುದೋ ಪರಿಣಾಮ ಮಾಡಿಕೊಂಡು ಇಂದು ಬೆಳಿಗ್ಗೆ ಸುಮಾರು ೧೦-೦೦ ರಿಂದ ೧೦-೩೦ ರ ಅವದಿಯ ಮದ್ಯದಲ್ಲಿ ತಾನು ಕೆಲಸ ಮಡುವ ಹಾಗೂ ಅಲ್ಲೆ ವಾಸವಾಗಿರುವ ಆಪೀಸಿನಲ್ಲಿ ಕೊಣೆಯ ಚೆತ್ತಿನ ಪ್ಯಾನಿಗೆ ನೇಣು ಹಾಕಿಕೊಂಡು ಮೃತ ಪಟ್ಟ ಬಗ್ಗೆ ಇತ್ಯಾದಿ  ಫಿರ್ಯಾದಿ ಇರುತ್ತದೆ. 

ಇತ್ತೀಚಿನ ನವೀಕರಣ​ : 03-08-2022 12:18 PM ಅನುಮೋದಕರು: ADMIN


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕಲಬುರಗಿ ನಗರ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080