ಅಭಿಪ್ರಾಯ / ಸಲಹೆಗಳು

ಸಂಚಾರಿ ಪೊಲೀಸ್‌ ಠಾಣೆ -2 :- ದಿನಾಂಕ 30/06/2022 ರಂದು  ಬೆಳಿಗ್ಗೆ 5:30 ಗಂಟೆಗೆ ಮಣ್ಣೂರ ಆಸ್ಪತ್ರೆಯಿಂದ  ಅಶ್ವಥ ತಂದೆ ಮಲ್ಲಿಕಾರ್ಜುನ ನರಸಗೊಂಡ ಈತನ ಆರ್.ಟಿ.ಎ ಎಮ್.ಎಲ್.ಸಿ ವಸೂಲಾಗಿದ್ದಕ್ಕೆ ಮಣ್ಣೂರ ಆಸ್ಪತ್ರೆಗೆ ಹೋಗಿ ಎಮ್.ಎಲ್.ಸಿ ಪಡೆದುಕೊಂಡು ಗಾಯಾಳು ಶ್ರೀ. ಅಶ್ವಥ ತಂದೆ ಮಲ್ಲಿಕಾರ್ಜುನ ನರಸಗೊಂಡ ವಯಃ 25 ವರ್ಷ ಜಾತಿಃ ಲಿಂಗಾಯತ ಉಃ ವಿಧ್ಯಾರ್ಥಿ ಮುಕ್ಕಾಃ ಗುಂಡಗುರ್ತಿ ತಾಃ ಚಿತ್ತಾಪೂರ ಜಿಲ್ಲಾಃ ಕಲಬುರಗಿ ಈತನಿಗೆ ವಿಚಾರಿಸಲಾಗಿ ಒಂದು ಕನ್ನಡದಲ್ಲಿ ಬರೆದ ಲಿಖಿತ ಫಿರ್ಯಾದಿಯನ್ನು ಹಾಜರು ಪಡಿಸಿದ್ದು ಅದನ್ನು ಪಡೆದುಕೊಂಡು ಮರಳಿ ಠಾಣೆಗೆ 7:00 ಗಂಟೆಗೆ ಬಂದಿದ್ದು, ಫಿರ್ಯಾದಿ ಅರ್ಜಿ ಸಾರಂಶವೆನೆಂದರೆ ನಿನ್ನೆ ದಿನಾಂಕ 29/06/2022 ರಂದು ನಾನು ಮತ್ತು ನನ್ನ ಗೆಳೆಯ ರಾಕೇಶ ತಂದೆ ಶಾಮರಾವ ಗ್ವಾಡಿ ಇಬ್ಬರೂ ಕೂಡಿಕೊಂಡು ನನಗೆ ಮುಖಕ್ಕೆ ತದ್ದುಗಳು ಆಗಿದ್ದರಿಂದ ಚರ್ಮ ರೋಗದ ವೈದ್ಯರ ಹತ್ತೀರ ತೊರಿಸಿಕೊಳ್ಳಬೇಕೆಂದು ನನ್ನ ಮೋಟರ ಸೈಕಲ ನಂ. ಕೆಎ 32 ಇ.ಎಸ್ 7181 ಇದರ ಮೇಲೆ ನಾವಿಬ್ಬರು ನಮ್ಮೂರಿನಿಂದ ಸಾಯಂಕಾಲ ಕಲಬುರಗಿಗೆ ಬಂದು ದವಾಖಾನೆಗೆ ತೊರಿಸಿಕೊಂಡು ಮರಳಿ ಊರಿಗೆ ಹೋಗುವಾಗ ಈ ಮೋಟರ ಸೈಕಲನ್ನು ಗೆಳೆಯ ರಾಕೇಶನು ನಡೆಸುತ್ತಿದ್ದನು. ರಾತ್ರಿ 9:45 ಗಂಟೆ ಆಗಿರಬಹುದು ಸೇಡಂ ರೋಡಿನ ಕಾಳನೂರದ ಸಣ್ಣ ಬ್ರಿಡ್ಜದ ಹತ್ತೀರ ಹೋಗುತ್ತಿದ್ದಾಗ ಅದೆ ವೇಳೆಗೆ ಎದುರುಗಡೆ ರೋಡಿನಿಂದ ಒಂದು ಕೆ.ಎಸ್.ಆರ್.ಟಿ.ಸಿ ಬಸ್ ನಂ. ಕೆಎ 32 ಎಫ್ 1922 ಇದರ ಚಾಲಕನು ಭಾರಿ ಅತಿವೇಗದಿಂದ ಮತ್ತು ಅಲಕ್ಷತನದಿಂದ ನಡೆಯಿಸಿಕೊಂಡು ಬಂದವನೆ ತನ್ನ ಮುಂದಿನ ಯಾವುದೋ ವಾಹನಕ್ಕೆ ಓವರ ಟೇಕ ಮಾಡಲು ಹೋಗಿ ರೋಡಿಗೆ ಬಂದಾಗ ನಮ್ಮ ಮೋಟರ ಸೈಕಲ ಕೆ.ಎಸ್.ಆರ್.ಟಿ.ಸಿ ಬಸ್ಸಿಗೆ ತಾಗಿದ್ದರಿಂದ ನಾವಿಬ್ಬರು ಭಾರಿಗಾಯಗೊಂಡು ಸ್ಧಳದಲ್ಲಿ ಬಿದ್ದಿದ್ದು, ಇದರಿಂದ ನನ್ನ ತಲೆಯ ಹಿಂದುಗಡೆ ಭಾರಿ ರಕ್ತಗಾಯ, ಎಡಗಾಲಿನ ಕಾಲಿಗೆ ರಕ್ತಗಾಯ ಮತ್ತು ಅಲ್ಲಲ್ಲಿ ತರಚಿದಗಾಯವಾಗಿದ್ದು, ಗೆಳೆಯ ರಾಕೇಶನಿಗೆ ನೋಡಲಾಗಿ ಆತನ ಹಣೆಯ ಭಾಗದಿಂದ ತಲೆಯ ಭಾಗದವರೆಗೆ ಭಾರಿ ಪ್ರಮಾಣದ ಗಾಯವಾಗಿ ಮೌಂಸಖಂಡ ಹೊರಬಂದು ಸ್ಧಳದಲ್ಲಿ ಮೃತ ಪಟ್ಟಿದ್ದು ಕೆ.ಎಸ್.ಆರ್.ಟಿ.ಸಿ ಬಸ್ಸಿನ ಚಾಲಕ ಮತ್ತು ಕಂಡಕ್ಟರ ಅಲ್ಲಿಯೇ ನಿಂತಿದ್ದು, ಹೆಸರು ವಿಚಾರಿಸಲು ಡ್ರೈವರ ನಾಗೆಂದ್ರ ತಂದೆ ದೊಂಡಪ್ಪಾ ನಡಗೇರಿ, ಕಂಡಕ್ಟರ ಅಶೋಕ ರಾಠೋಡ ಅಂತಾ ತಿಳಿಸಿದರು. ಮುಂದೆ ಯಾವುದೊ ಖಾಸಗಿ ಅಂಬುಲೇನ್ಸದಲ್ಲಿ ಮಣ್ಣೂರ ಆಸ್ಪತ್ರೆಗೆ ಬಂದು ಸೇರಿಕೆಯಾಗಿರುತ್ತೆನೆ. ಕಾರಣ ಈ ಘಟನೆ ಬಗ್ಗೆ ತನಿಖೆ ಕೈಗೊಂಡು ಕೆ.ಎಸ್.ಆರ್.ಟಿ.ಸಿ ಬಸ್ ಚಾಲಕನ ಮೇಲೆ ಕಾನೂನು ಪ್ರಕಾರ ಕ್ರಮ ಕೈಗೊಳ್ಳಬೇಕೆಂದು ಕೊಟ್ಟ ಫಿರ್ಯಾದಿ ಅರ್ಜಿಯ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

ಸ್ಟೇಷನ್‌ ಬಜಾರ ಪೊಲೀಸ್‌ ಠಾಣೆ ;-   ದಿನಾಂಕ 30.06.2022 ರಂದು ಸಾಯಂಕಾಲ 5.45 ಗಂಟೆಗೆ ಫಿರ್ಯಾದಿ ಶ್ರೀ ಮೆಹೆಬೂಬ ಖಾದ್ರಿ ತಂದೆ ಸಿರಾಜ ಪಾಶ ಜುನೈದಿ ವಯ:34 ವರ್ಷ ಉ:ಕಾರ್ ಚಾಲಕ ಸಾ:ತೆನಹಳ್ಳಿ ತಾ:ಇಂಡಿ ಜಿ:ವಿಜಯಪುರ ರವರು ಠಾಣೆಗೆ ಬಂದು ನೀಡಿದ ಫಿರ್ಯಾದಿಯ ಸಾರಾಂಶವೆನೆಂದರೆ, ನಾನು ಖಾಸಗಿಯಾಗಿ ಕಾರ್ ಚಾಲಕ ಕೆಲಸ ಮಾಡಿಕೊಂಡು ತೆನಹಳ್ಳಿ ಗ್ರಾಮದಲ್ಲಿ ತಂದೆಯೊಂದಿಗೆ ವಾಸವಾಗಿರುತ್ತೇನೆ. ಹಿಗಿದ್ದು ನನ್ನ ಅಣ್ಣನಾದ ಮುರ್ತುಜ್ ಖಾದ್ರಿ ಈತನಿಗೆ ಈಗ ಸುಮಾರು 05 ವರ್ಷಗಳ ಹಿಂದೆ ಕಲಬುರಗಿ ನಗರದ ಹೂಮಾ ತಬಸುಮ ಎಂಬುವವಳೊಂದಿಗೆ ಮದುವೆಯಾಗಿದ್ದು ನನ್ನ ಅಣ್ಣನು ಮದುವೆಗಿಂತಲೂ ಮುಂಚೆ ಸೌದಿಯಲ್ಲಿ ಕೆಲಸ ಮಾಡುತ್ತಾ ಮದುವೆ ನಂತರವು ಆಗಾಗ ವರ್ಷ 2 ವರ್ಷಕ್ಕೊಮ್ಮೆ ಇಲ್ಲಿಗೆ ಪತ್ನಿ ಹತ್ತಿರ ಬಂದು ಹೋಗುತ್ತಿದ್ದು ನನ್ನ ಅಣ್ಣನ ಹೆಂಡತಿ ಮತ್ತು ನನ್ನ ಅಣ್ಣನ ನಡುವೆ ಯಾವುದೋ ಕಾರಣಕ್ಕೆ ಜಗಳವಾಗಿದ್ದು ಈ ಕುರಿತ್ತು ನನ್ನ ಅತ್ತಿಗೆ (ಮುರ್ತುಜ್ ಖಾದ್ರಿ ಪತ್ನಿ) ಹೂಮಾ ತಬಸುಮ ಇವಳು ಕಲಬುರಗಿ ನಗರದ ಮಹಿಳಾ ಠಾಣೆಯಲ್ಲಿ ದೂರು ಸಲ್ಲಿಸಿದ್ದು ಈ ವಿಚಾರವಾಗಿ ಮಹಿಳಾ ಠಾಣೆರವರು ನಮಗೂ ಮತ್ತು ಹೂಮಾ ತಬಸುಮ ರವರ ಕುಟುಂಬದವರಿಗೂ ಕರೆಯಿಸಿದ ಮೇರೆಗೆ ನಾನು ಮತ್ತು ನನ್ನ ಅಣ್ಣನಾದ ಚಾಂದಸಾಹೇಬ, ಚಿಕ್ಕಮ್ಮನ ಮಗನಾದ ಫರಿದೋದ್ದಿನ ಜುನೇದಿ ಮತ್ತು ಜಬಿಯೋದ್ದಿನ್ ಜುನೇದಿ ಮತ್ತು ನನ್ನ ಅಕ್ಕನ ಮಗನಾದ ಇಫ್ತಿಕಾರ್ ಜುನೇದಿ ಎಲ್ಲರು ಕೂಡಿ ಠಾಣೆಗೆ ಹೋದಾಗ ಠಾಣೆಯಲ್ಲಿ ನನ್ನ ಅಣ್ಣನಾದ ಮುರ್ತುಜ್ ಖಾದ್ರಿ ಈಗ ಸೌದಿಯಲ್ಲಿದ್ದಾನೆ 15 ದಿನಗಳ ನಂತರ ಬರುತ್ತಾನೆ ಅವನು ಬಂದ ನಂತರ ಈ ಬಗ್ಗೆ ಮಾತನಾಡೋಣ ಅಂತಾ ಹೊರಗಡೆ ಬಂದಾಗ ನನ್ನ ಅತ್ತಿಗೆಯ ಅಣ್ಣ-ತಮ್ಮಂದಿರಾದ 1)ಮೋಶಿನ ತಂದೆ ವಲಿ ಹುಸೇನಿ 2) ಮುಬೀನ್ ತಂದೆ ವಲಿ ಹುಸೇನಿ 3) ಫಿರೋಜ್ ಜಂಜಾನಿ 4)ಗೌಸ್ ಪಾಶಾ(ADVOCATE) ಎಂಬುವವರು ಮತ್ತು ಇನ್ನಿತರರು ಕೂಡಿ ನನಗೆ ಮತ್ತು ನನ್ನ  ಅಕ್ಕನ ಮಗ ಇಫ್ತಿಕಾರ ಜುನೈದಿ ಹಾಗು ಜಬೀಯೊದ್ದಿನ್ ಜುನೈದಿರವರಿಗೆ ಮೇಲ್ಕಂಡ 4 ಜನರು ಕೂಡಿಕೊಂಡು ನಮಗೆ ಮುಂದೆ ಹೋಗದಂತೆ ತಡೆದು ಅವಾಚ್ಯವಾಗಿ ಬೈದು ಅಭಿ 15 ದಿನ್ ಟೈಮ್ ಲೇತೆ ಆಪ್  ಅಂತ ಹಿಂದಿಯಲ್ಲಿ ಬೈದು ನನಗೆ ಬಲಗೈ ಮೇಲೆ ಜೋರಾಗಿ ಹೊಡೆದು ಹೊಟ್ಟೆಯ ಮೇಲೆ ಹೋಡೆದಾಗ ನಾನು ಕೆಳಗೆ ಬೀಳಲು ಬಿಡಿಸಲು ಬಂದ ನನ್ನ ಅಕ್ಕನ ಮಗ ಇಫ್ತಿಕಾರ ಜುನೈದಿಗೆ  ಹೊಟ್ಟೆಯ ಮೇಲೆ ಹೊಡೆಯುತ್ತಿದ್ದಾಗ ಬಿಡಿಸಲು ಬಂದ ಜೊತೆಯಲ್ಲಿದ್ದ ನನ್ನ ಚಿಕ್ಕಮ್ಮನ ಮಗನಾದ ಜಬೀಯುದ್ದೀನ್ ಜುನೈದಿ ಇತನಿಗೂ ಕುಡಾ ಕೈಯಿಂದ ಎದೆಯ ಮೇಲೆ ಹೊಡೆದು ಎಲ್ಲರಿಗೂ ಗುಪ್ತಗಾಯ ಮಾಡಿ ಜೀವ ಬೇದರಿಕೆ ಹಾಕಿರುತ್ತಾರೆ. ಈ ಘಟನೆಯು ದಿನಾಂಕ:28/06/2022 ರಂದು ಮದ್ಯಾಹ್ನ 02:30 ಗಂಟೆಗೆ ಆಗಿರುತ್ತದೆ ಕಾರಣ ಮಾನ್ಯರು ನಮಗೆ ಹೊಡೆ ಬಡೆ ಮಾಡಿದ ಮೇಲ್ಕಂಡ 4 ಜನರು ಮತ್ತು ಇತರರ ವಿರುದ್ದ ಕಾನೂನು ಪ್ರಕಾರ ಕ್ರಮ ಕೈಗೊಳ್ಳಬೇಕು ಅಂತ ಹಿಂದಿಯಲ್ಲಿ ಹೇಳಿದನ್ನು ಕನ್ನಡದಲ್ಲಿ ಅನುವಾದಿಸಿ ಬರೆಯಿಸಿದ ಹೇಳಿಕೆ ನಿಜವಿರುತ್ತದೆ ಘಟನೆಯ ಬಗ್ಗೆ ಮನೆಯಲ್ಲಿ ಚರ್ಚಿಸಿ ತಡವಾಗಿ ಬಂದು ದೂರು ನೀಡಿದ್ದು ಇರುತ್ತದೆ ಅಂತಾ ಇತ್ಯಾದಿಯಾಗಿ ಹೇಳಿಕೆಯ ಆಧಾರದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

ರಾಘವೇಂದ್ರ ನಗರ ಪೊಲೀಸ ಠಾಣೆ :- ದಿನಾಂಕಃ 30-06-2022  ರಂದು ೧.೪೫ ಪಿ.ಎಮ್ ಕ್ಕೆ ಶ್ರೀ ಶಿವಾನಂದ ಘಾಣಗೇರ ಪಿಐ ರಾಘವೇಂದ್ರ ನಗರ ಪೊಲೀಸ್ ಠಾಣೆ ಕಲಬುರಗಿ ರವರು ಎರಡು ಜಾನವಾರುಗಳೊಂದಿಗೆ ಸರಕಾರ ರ‍್ಪೆಯಾಗಿ ದೂರು ನೀಡಿದ್ದರ ಸಾರಾಂಶವೆನೆಂದರೆ ಇಂದು ದಿನಾಂಕ; ೩೦.೦೬.೨೦೨೨ ರಂದು ಮದ್ಯಾಹ್ನ ೧೨.೦೦ ಗಂಟೆಯ ಸುಮಾರಿಗೆ ಮೇಲಾಧಿಕಾರಿಗಳ ಆದೇಶದಂತೆ ನನ್ನ ಸಂಗಡ ರಮೇಶ ಪಿಸಿ ೪೪೭, ಶ್ರೀ ಕಿಶೋರ ಪಿಸಿ , ಮುಜಾಹೀದ ಕೊತ್ವಾಲ ಪಿಸಿ ,  ಶರಣಬಸವ  ಪಿಸಿ ೫೧೪, ಸಂಗಡ ಕರೆದುಕೊಮಡು ಠಾಣಾ ವ್ಯಾಪ್ತಿಯಲ್ಲಿ ಬಕರೀದ ಹಬ್ಬದ ಪ್ರಯುಕ್ತ  ವಿಶೇಷ ಪೇಟ್ರೋಲಿಂಗ ರ‍್ತವ್ಯ ಮಾಡುತ್ತಾ ಖದೀರ ಚೌಕ ಹತ್ತಿರ ಇದ್ದಾಗ ನಮಗೆ  ಖಚಿತ ಬಾತ್ಮಿ ಬಂದಿದ್ದೆನೆಂದರೆ ಮದಿನಾ ಕಾಲೋನಿಯ ಹತ್ತಿರ ಇರುವ ಹಣ್ಣಿನ ಅಂಗಡಿಯೋಳಗೆ ಒಬ್ಬ ವ್ಯಕ್ತಿ ಮುಂಬರುವ ಬಕರೀದ ಹಬ್ಬದ  ಪ್ರಯುಕ್ತ ಎರಡು ದನಗಳು ಖಸಾಯಿ ಖಾನೆಗೆ ಹಾಕುವ  ಸಂಬಂದ ಅಕ್ರಮವಾಗಿ ಕಟ್ಟಿರುತ್ತಾರೆ ಅಂತ ಖಚಿತವಾದ ಮಾಹಿತಿ ಬಂದ ಮೇರೆಗೆ ನಾನು ಇಬ್ಬರು ಪಂಚರನ್ನು ಬರಮಾಡಿಕೊಂಡು  ಖಚೀತವದ ಬಾತ್ಮೀ  ಬಂದಿರುವ ಜಾಗೆಗೆ ಮದ್ಯಾಹ್ನ ೧೨.೩೦ ಗಂಟೆಯ ಸುಮಾರಿಗೆ ಹೋಗಿ ದಾಳಿ ಮಾಡಿದ್ದಾಗ ಸ್ಥಳದಲ್ಲಿ  ಎರಡು ಕೆಂಪು ಬಣ್ಣದ ಹೋರಿಗಳು ಇದ್ದು ಆ ದನಗಳ ಹತ್ತಿರ ಒಬ್ಬ ವ್ಯಕ್ತಿ ನಿಂತಿದ್ದು ಆ ವ್ಯಕ್ತಿಗೆ ಹೆಸರು ವಿಳಾಸ ವಿಚಾರಿಸಲು ತನ್ನ ಹೆಸರು ಝಾಕೀರ ಅಲಿ ತಂದೆ ಬಾಬುಮಿಯಾ ಅತ್ತಾರ ವಯಃ ೩೭ ವರ್ಷ ಜಾಃ ಮುಸ್ಲಿಂ ಉಃ ವ್ಯಾಪಾರ ಸಾಃ ಮದಿನಾ ಕಾಲೋನಿ ಕಲಬುರಗಿ ಅಂತ ಹೇಳಿದ್ದು ಆತನಿಗೆ  ಈ ದನಗಳ ಬಗ್ಗೆ ವಿಚಾರಿಸಿದ್ದಾಗ ಅವನು ಹೇಳಿದೆನೆಂದರೆ ನನ್ನ ಹತ್ತಿರ ಯಾವುದೇ ದಾಖಲಾತಿಗಳು ಇರುವದಿಲ್ಲ ಈ ದನಗಳು ನಾನು ಮುಂಬ ಬರುವ ಬಕೀರದ ಹಬ್ಬಕ್ಕೆ ಕಡಿಯುವ ಪ್ರಯುಕ್ತ ತೆಗೆದುಕೊಂಡು ಬಂದಿರುತ್ತೇನೆ ಅಂತ ಹೇಳಿದ್ದರಿಂದ ಸದರಿ ೦೨ ಜಾನುವಾರುಗಳು ಅಃಕಿಃ ೪೦,೦೦೦/- ರೂ ಬೆಲೆ ಬಾಳುವದನ್ನು ಪಂಚರ ಸಮಕ್ಷಮ ಜಪ್ತಿಪಡಿಸಿಕೋಳ್ಳುತ್ತಿರುವಾಗ  ಸದರಿ ಜಾನವಾರುಗಳ ಮಾಲೀಕ ಓಡಿ ಹೋಗಿದ್ದು ಇರುತ್ತದೆ. ಕಾರಣ ಸದರಿ ಜಾನವಾರಗಳನ್ನು ಅಕ್ರಮವಾಗಿ ಕಟ್ಟಿರುವ ಆರೋಪಿತನ ವಿರುದ್ದ ಕಾನೂನು ಕ್ರಮ ಜರೂಗಿಸಲು ಸೂಚಿಸಲಾಗಿದೆ. ಅಂತ ಇತ್ಯಾದಿಯಾಗಿ ದೂರು ನೀಡಿದರ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

 

ರಾಘವೇಂದ್ರ ನಗರ ಪೊಲೀಸ ಠಾಣೆ :-  ದಿನಾಂಕಃ 30.06.2022 ರಂದು 4.30 ಪಿ.ಎಮ್ ಕ್ಕೆ ಶ್ರೀ ಶಿವಾನಂದ ಘಾಣಗೇರ ಪಿಐ ರಾಘವೇಂದ್ರ ನಗರ ಪೊಲೀಸ್ ಠಾಣೆ ಕಲಬುರಗಿ ರವರು ಒಬ್ಬ ಆರೋಪಿತ ಮತ್ತು 10 ಜಾನವಾರುಗಳೊಂದಿಗೆ ಸರಕಾರ ತರ್ಪೆಯಾಗಿ ದೂರು ನೀಡಿದ್ದರ ಸಾರಾಂಶವೆನೆಂದರೆ ನಾನು ಶಿವಾನಂದ ಘಾಣಗೇರ ಪಿಐ ರಾಘವೇಂದ್ರ ನಗರ ಪೊಲೀಸ್ ಠಾಣೆ ಕಲಬುರಗಿ ಸರ್ಕಾರದ ಪರವಾಗಿ ಫೀರ್ಯಾಧಿ ಸಲ್ಲಿಸುವುದೆನೆಂದರೆ,ಇಂದು 30.06.2022 ರಂದು ಮದ್ಯಾಹ್ನ 2.00  ಗಂಟೆಯ ಸುಮಾರಿಗೆ ನಾನು ಠಾಣೆಯಲ್ಲಿರುವಾಗ ಖಚಿತವಾದ ಮಾಹಿತಿ ಬಂದಿದೆನೆಂದರೆ ಎಮ್.ಎಸ್.ಕೆ. ಮಿಲ್ ಹುಸೇನ ಗಾರ್ಡನ ಹತ್ತಿರ ಒಬ್ಬ ವ್ಯಕ್ತಿ ಸುಮಾರು 8-10  ಜಾನವಾರಗಳು ಮುಂಬ ಬರುವ ಬಕರೀದ ಹಬ್ಬದ  ಪ್ರಯುಕ್ತ ದನಗಳು ಖಸಾಯಿ ಖಾನೆಗೆ ಸಾಗಿಸುವ  ಸಂಬಂದ ಅಕ್ರಮವಾಗಿ ಕಟ್ಟಿರುತ್ತಾರೆ ಅಂತ ಖಚಿತವಾದ ಮಾಹಿತಿ ಬಂದ ಮೇರೆಗೆ  ಇಬ್ಬರು ಪಂಚರನ್ನು ಠಾಣೆಗೆ ಬರಮಾಡಿಕೊಂಡು ಇಬ್ಬರು ಪಂಚರು ಹಾಗೂ ಸಿಬ್ಬಂದಿಯವರಾದ  ರಮೇಶ ಪಿಸಿ 447, ಶ್ರೀ ಕಿಶೋರ ಪಿಸಿ , ಮುಜಾಹೀದ ಕೊತ್ವಾಲ ಪಿಸಿ ,  ಶರಣಬಸವ  ಪಿಸಿ 514,  ರವರನ್ನು ಸರಕಾರಿ ಜೀಪೀನಲ್ಲಿ ಕರೆದುಕೊಂಡು  ಖಚೀತವದ ಬಾತ್ಮೀ  ಬಂದಿರುವ ಜಾಗಕ್ಕೆ  ಹೋದಾಗ  ಮದ್ಯಾಹ್ನ 3.00 ಗಂಟೆ ಆಗಿದ್ದು ದನಗಳ ಕಟ್ಟಿರುವ ಬಗ್ಗೆ ಖಚಿತಪಡಿಸಿಕೊಂಡು ಪಂಚರ ಸಮಕ್ಷಮ ದಾಳಿ ಮಾಡಿದ್ದಾಹ ಸ್ಥಳದಲ್ಲಿ  ಒಬ್ಬ ವ್ಯಕ್ತಿ ನಿಂತಿದ್ದು ಆ ವ್ಯಕ್ತಿಗೆ ಹೆಸರು ವಿಳಾಸ ವಿಚಾರಿಸಲು ತನ್ನ ಹೆಸರು ಸಾಜೀದ  ತಂದೆ ರಸೂಲ್ ಪಟೇಲ ವಯಃ 36 ವರ್ಷ ಜಾಃ ಮುಸ್ಲಿಂ ಉಃ ಖಾಸಗಿ ಕೆಲಸ ಸಾಃ ಇಕ್ಬಾಲ್ ಕಾಲೋನಿ ಕಲಬುರಗಿ  ಅಂತ ಹೇಳಿದ್ದು ಆತನಿಗೆ  ಈ ದನಗಳ ಬಗ್ಗೆ ವಿಚಾರಿಸಿದ್ದಾಗ ಅವನು ಹೇಳಿದೆನೆಂದರೆ ನನ್ನ ಹತ್ತಿರ ಯಾವುದೇ ದಾಖಲಾತಿಗಳು ಇರುವದಿಲ್ಲ ಈ ದನಗಳು ನಾನು ಮುಂಬ ಬರುವ ಬಕೀರದ ಹಬ್ಬಕ್ಕೆ ಕಡಿಯುವ ಪ್ರಯುಕ್ತ ತೆಗೆದುಕೊಂಡು ಬಂದಿರುತ್ತೇನೆ ಅಂತ ಹೇಳಿದ್ದರಿಂದ ಸದರಿ 10 ಜಾನುವಾರುಗಳು  ಅಃಕಿಃ 2,00,000/- ರೂ ಬೆಲೆ ಬಾಳುವದನ್ನು ಪಂಚರ ಸಮಕ್ಷಮ ಜಪ್ತಿಪಡಿಸಿಕೊಂಡಿದ್ದು ಇರುತ್ತದೆ.   ಕಾರಣ ಸದರಿ ಜಾನವಾರಗಳನ್ನು ಅಕ್ರಮವಾಗಿ ಕಟ್ಟಿರುವ ಆರೋಪಿತನ ವಿರುದ್ದ ಕಾನೂನು ಕ್ರಮ ಜರೂಗಿಸಲು ಸೂಚಿಸಲಾಗಿದೆ. ಅಂತ ಇತ್ಯಾದಿಯಾಗಿ ದೂರು ನೀಡಿದರ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ. 77/2022 ಕಲಂ. 5, 12 THE KARNATAKA PREVENTION OF SLAUGHTER AND PREVENTION OF CATTLE ACT 2020 ನೇದ್ದರ ಪ್ರಕಾರ ಗುನ್ನೆ ದಾಖಲಿಸಿಕೊಂಡ ಬಗ್ಗೆ ವರದಿ.

 

ಎಂ.ಬಿ.ನಗರ ಪೊಲೀಸ್‌ ಠಾಣೆ :- ಪರ‍್ಯಾದಿದಾರನು ದಿನಾಂಕ: ೦೮/೦೪/೨೦೨೨ ರಂದು ಮದ್ಯಾಹ್ನ ೨-೦೦ ಗಂಟೆಗೆ ತನ್ನ ಮೊಟರ್ ಸೈಕಲ್ ನಂ ಕೆಎ ೩೨ ಇಎಕ್ಸ ೨೨೮೯ ಅ.ಕಿ ೩೦೦೦೦/- ನೇದ್ದನ್ನು ನಿಲ್ಲಿಸಿ ಹೋಗಿದ್ದು ನಂತರ ಸಾಯಂಕಾಲ ೫-೦೦ ಗಂಟೆಗೆ ಮರಳಿ ಬಂದೊ ನೋಡಲಾಗಿ ಸದರಿ ವಾಹನವನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋದ ಬಗ್ಗೆ ದೂರು.

ಇತ್ತೀಚಿನ ನವೀಕರಣ​ : 16-07-2022 05:43 PM ಅನುಮೋದಕರು: ADMIN


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕಲಬುರಗಿ ನಗರ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080