ಅಭಿಪ್ರಾಯ / ಸಲಹೆಗಳು

   ಚೌಕ ಪೊಲೀಸ್ ಠಾಣೆ:- ದಿನಾಂಕ: 30-04-2022 ರಂದು ಬೆಳಿಗ್ಗೆ ೧೧-೦೦ ಗಂಟೆಗೆ ಫರ್ಯಾದಿದಾರ  ಶ್ರೀ ರಾಮದಾಸ ತಂದೆ ವಿಠಲ ಜಾಧವ :೪೫ ವರ್ಷ :ಗೌಂಡಿ ಕೆಲಸ ಜಾತಿ ಲಂಬಾಣಿ ಸಾ: ಫೀಲ್ಟರಬೇಡ  ಶಹಾಬಜಾರ ತಾಂಡಾ ಕಲಬುರಗಿಇವರು ಠಾಣೆಗೆ ಹಾಜರಾಗಿ ಒಂದು ಕನ್ನಡದಲ್ಲಿ ಗಣಕೀಕೃತ ಮಾಡಿಸಿದ ಫರ್ಯಾದಿ   ಅರ್ಜಿಯನ್ನು ಹಾಜರ ಪಡಿಸಿದ್ದು ಸದರಿ ಫರ್ಯಾದಿ ಅರ್ಜಿಯ ಸಾರಾಂಶವೆನೆಂದರೆ, ನನಗೆ ಒಂದು  ಎರಡು ಹೆಣ್ಣು ಮಕ್ಕಳು  ಒಂದು ಗಂಡು ಮಗ ಹೀಗೆ ಒಟ್ಟು ಮೂರು ಜನ ಮಕ್ಕಳಿರುತ್ತಾರೆ. ಹೆಣ್ಣು ಮಗಳಾದ ಅಂಕಿತಾ :೧೬ ವರ್ಷದವಳಿದ್ದು, ಅವಳು ೯ನೇ ತರಗತಿಯಲ್ಲಿ ವಿದ್ಯಾಭ್ಯಾಸ ಮಾಡಿರುತ್ತಾಳೆ. ಮನೆಯಲ್ಲಿ ನಾನು ಮತ್ತು ನನ್ನ ಹೆಂಡತಿ ಉಷಾಬಾಯಿ, ಮಗ ರೀತಿಕ ಅಂಕಿತಾ ಎಲ್ಲರೂ ಒಂದೇ ಮನೆಯಲ್ಲಿ ವಾಸವಾಗಿರುತ್ತೇವೆಹೀಗಿದ್ದು ದಿನಾಂಕ ೨೬/೦೪/೨೦೨೨ ರಂದು ಬೆಳಿಗ್ಗೆ ೧೦-೦೦ ಗಂಟೆ ಸುಮಾರಿಗೆ ಮನೆಯಿಂದ ನಾನು ಮತ್ತು ನನ್ನ ಹೆಂಡತಿ ಉಷಾಬಾಯಿ ಇಬ್ಬರು ನಮ್ಮ ನಮ್ಮ ಕೆಲಸಕ್ಕೆ ಹೋದೇವು. ಮಗ ರೀತಿಕ ಇತನು ಬೆಳಿಗ್ಗೆ ೦೯-೦೦ ಗಂಟೆ ಸುಮಾರಿಗೆ ಕಾಲೇಜಕ್ಕೆ ಹೋದನು. ಮನೆಯಲ್ಲಿ ಅಂಕಿತಾ ಇವಳು ಒಬ್ಬಳೇ ಇದ್ದಳು. ಸಂಜೆ -೦೦ ಗಂಟೆ ಸುಮಾರಿಗೆ ನಾನು ಮತ್ತು ಹೆಂಡತಿ ಉಷಾಬಾಯಿ ಹಾಗೂ ಮಗ ರೀತಿಕ ಮೂವರು ಕೆಲಸದಿಂದ ಮನೆಗೆ ಬಂದಾಗ ಮನೆಯಲ್ಲಿ ಮಗಳು ಅಂಕಿತಾ ಇವಳು ಕಾಣಲಿಲ್ಲಾ. ಅಕ್ಕ ಪಕ್ಕ ಹುಡುಗರಿಗೆ  ವಿಚಾರಿಸಲಾಗಿ ನನ್ನ ಮಗಳು  ಮಧ್ಯಾಹ್ನ -೩೦ ಗಂಟೆ ಸುಮಾರಿಗೆ ಮನೆಯಿಂದ ಹೊರೆಗೆ ಹೋಗಿರುತ್ತಾಳೆ ಎಂದು ತಿಳಿಸಿದರು. ನಾನು ಮತ್ತು ನನ್ನ ಹೆಂಡತಿ ಉಷಾಬಾಯಿ, ಮಗ ರೀತಿಕ  ಮೂವರು ಸೇರಿಕೊಂಡು ಅಂದಿನಿಂದ ಇಂದಿನವರೆಗೆ ಎಲ್ಲಾ ಕಡೆ ಮತ್ತು ನಮ್ಮ ಸಂಬಂಧಿಕರುಗಳಲ್ಲಿ ಹುಡುಕಾಡಿದರೂ ಸಿಗದ ಕಾರಣ ಇಂದು ಠಾಣೆಗೆ ಬಂದು ದೂರು ಕೊಡುತ್ತಿದ್ದು, ಕಾರಣದಿಂದ ದೂರು ಕೊಡಲು ತಡವಾಗಿರುತ್ತದೆ. ಕಾಣೆಯಾದ (ಅಪಹರಣಕ್ಕೆ ಒಳಗಾದ) ನನ್ನ ಮಗಳ ಚಹರೆ ಪಟ್ಟಿ ವಿವರ ರೀತಿ ಇದೆ

)ಹೆಸರು : ಅಂಕಿತಾ

)ತಂದೆ       : ರಾಮದಾಸ್ ಜಾಧವ

)ವಯಸ್ಸು೧೬ ವರ್ಷ

)ಎತ್ತರ'''

)ಚಹರೆ ಪಟ್ಟಿ  :  ಉದ್ದ ಮುಖ, ಉದ್ದ ಮೂಗು

)ಮೈಬಣ್ಣಸಾದಾಕಪ್ಪು ಮೈಬಣ್ಣ

)ಮಾತನಾಡುವಭಾಷೆ   :  ಕನ್ನಡ, ಹಿಂದಿ, ಲಂಬಾಣಿ

)ಧರಿಸಿದ ಬಟ್ಟೆಗಳು  :)ಒಂದು ಕಪ್ಪುಮತ್ತು ಕ್ರೀಮ ಮಿಶ್ರಿತ ಚುಡಿದಾರ ಶರ್ಟು ಶೆಲ್ವಾರ್

 )ಒಂದು ಕಪ್ಪು ಬಣ್ಣದ ಚುಡಿದಾರ ಪೈಜಾಮ 

 ) ಒಂದು ಕಪ್ಪು ಮತ್ತು ಕ್ರೀಮ ಮಿಶ್ರಿತ ಓಡನಿ 

ಕಾರಣ ಮಾನ್ಯರವರು ಕಾಣೆಯಾದ ನನ್ನ ಮಗಳಾದ ಕು: ಅಂಕಿತಾ ತಂದೆ ರಾಮದಾಸ ಜಾಧವ :೧೬ ವರ್ಷ ಇವಳನ್ನು ಹುಡುಕಿ ನಮಗೆ ಒಪ್ಪಿಸಬೇಕಾಗಿ ವಿನಂತಿ ಅಂತಾ  ಕೊಟ್ಟ  ದೂರಿನ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ  ಬಗ್ಗೆ ವರದಿ.

 

ಇತ್ತೀಚಿನ ನವೀಕರಣ​ : 04-05-2022 01:59 PM ಅನುಮೋದಕರು: ADMIN


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕಲಬುರಗಿ ನಗರ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080