ಅಭಿಪ್ರಾಯ / ಸಲಹೆಗಳು

ಫರಹತಾಬಾದ ಪೊಲೀಸ್‌ ಠಾಣೆ :-  ದಿನಾಂಕ: 30-01-2023 ರಂದು ಮದ್ಯಾಹ್ನ 3 ಗಂಟೆಗೆ ಮುಖ್ಯ ಅಧೀಕ್ಷಕರು ಕೇಂದ್ರ ಕಾರಾಗೃಹ ಕಲಬುರಗಿರವರು ತಮ್ಮ ಸಿಬ್ಬಂದಿಯಾದ ಮಲ್ಲಿಕಾರ್ಜುನ ಸಜ್ಜನ ವಾರ್ಡರ ರವರ ಮೂಖಾಂತರ ಫಿರ್ಯಾದು ದೂರು ಠಾಣೆಗೆ ಕಳುಹಿಸಿದ್ದು ಸದರಿ ಸಿಬ್ಬಂದಿಯವರು ಹಾಜರಪಡಿಸಿದ ದೂರಿನ ಸಾರಾಂಶವೇನೆಂದರೆ, ಕಲಬುರಗಿ ಕೇಂದ್ರ ಕಾರಾಗೃಹದ ವಿಚಾರಣಾ ಬಂದಿ ಸಂಖ್ಯೆ: 16229 ಕಾಣಿಕರಾಜ @ ಕಾಣಿ ತಂದೆ ಆಂಟೋನಿ ಎಂಬಾತನು ಗೌ|| 29 ನೇ ಹೆಚ್ಚುವರಿ ಸಿ.ಎಂ.ಎಂ. ಬೆಂಗಳೂರು ರವರ ಎಸ್.ಸಿ. ನಂ. 1113/ 2021 (ಸಿ.ಆರ್. ನಂ. 09/2021 ಅಶೋಕ ನಗರ ಪಿ.ಎಸ್.) ರ ಪ್ರಕರಣದಲ್ಲಿ ಭಾ.ದಂ.ಸಂ. 143, 142142, 145, 146, 147, 148, 302 ಡಿ/ತಿ 149 ಕಲಂ ಗಳಡಿಯಲ್ಲಿ ಕೇಂದ್ರ ಕಾರಾಗೃಹ ಬೆಂಗಳೂರು ಇಲ್ಲಿಗೆ ದಾಖಲಾಗಿದ್ದು, ಬಂದಿಯು ಶಿಸ್ತು ಕ್ರಮದ ಮೇರೆಗೆ ಕೇಂದ್ರ ಕಾರಾಗೃಹ ಬೆಂಗಳೂರು ಇಲ್ಲಿಂದ ಈ ಸಂಸ್ಥೆಗೆ ದಾಖಲಾಗಿದ್ದು, ವಿಚಾರಣೆಯನ್ನು ಎದುರಿಸುತ್ತಿದ್ದಾನೆ. ಬಂದಿಗೆ ಗೌ|| 29 ನೇ ಹೆಚ್ಚುವರಿ ಸಿ.ಎಂ.ಎಂ. ಬೆಂಗಳೂರು ಇಲ್ಲಿ ಸಿ.ಆರ್ ನಂ. 183/2020 & ಸಿಸಿ ನಂ. 55083/2016 ರಲ್ಲಿ 2 ಪ್ರಕರಣಗಳು ಬಂದಿಯ ವಿರುದ್ಧ ಬಾಕಿ ಇರುತ್ತವೆ. ಮುಂದುವರೆದು ವಿಚಾರಣಾ ಬಂದಿ ಸಂಖ್ಯೆ: 16229 ಕಾಣಿಕರಾಜ @ ಕಾಣಿ ತಂದೆ ಆಂಟೋನಿ ಎಂಬಾತನು ದಿನಾಂಕ 30-01-2023 ರಂದು ಸಮಯ 11:45 ಗಂಟೆಯಲ್ಲಿ ವಿಚಾರಣಾ ವಿಭಾಗದ ಕಛೇರಿಗೆ ತನ್ನ ಪ್ರಕರಣದ ವಿಚಾರಣಾ ದಿನಾಂಕ ತಿಳಿಯಲು ಬಂದಿದ್ದು, ಸಿಬ್ಬಂದಿಗಳು ಮಾಹಿತಿ ನೀಡಿ ಕಾರಾಗೃಹದ ಒಳಗೆ ಹೋಗುವಂತೆ ತಿಳಿಸಿರುತ್ತಾರೆ. ಬಂದಿಯು ಬಿ-ಗೇಟ್‌ನ ಒಳಗಡೆ ತೆರಳಿ ಅಲ್ಲಿ ಆಸ್ಪತ್ರೆಯ ಕರ್ತವ್ಯಕ್ಕೆ ತಯಾರಿದ್ದ ಸಿಬ್ಬಂದಿಗಳಾದ ರಮೇಶ ವಾಲಿ ಮತ್ತು ರಾಕೇಶ ರೋಬಿಕರ್ ವಾರ್ಡರ್ ರವರುಗಳು ಇಲ್ಲಿಗೆ ಏಕೆ ಬಂದಿದ್ದಿಯಾ ಎಂಬುದಾಗಿ ಪ್ರಶ್ನಿಸಿದ್ದು, ಬಂದಿಯು ದಿನಾಂಕ 30-01-2023 ರಂದು ಸಮಯ 11:50 ಗಂಟೆಗೆ ಕರ್ತವ್ಯ ನಿರತ ಸಿಬ್ಬಂದಿಗಳ ಲಾಠಿಯನ್ನು ಕಿತ್ತುಕೊಂಡು ಸಿಬ್ಬಂದಿಗಳಾದ ರಮೇಶ ವಾಲಿ ಮತ್ತು ರಾಕೇಶ ರೋಬಿಕರ್ ವಾರ್ಡರ್ ಇವರುಗಳ ಮೇಲೆ ಲಾಠಿಯಿಂದ ಮೂಗು, ಕಣ್ಣು, ಮೈಗೆ, ತಲೆಗೆ ಹೊಡೆದು ರಕ್ತ ಗಾಯಗೊಳಿಸಿರುತ್ತಾನೆ. ರಮೇಶ ವಾಲಿ, ವಾರ್ಡರ್ ಇವರ ಮೂಗಿನಿಂದ ರಕ್ತ ಬಂದಿದ್ದು, ಸಿಬ್ಬಂದಿಯ ಸಮವಸ್ತ್ರದ ಮೇಲೆ ರಕ್ತದ ಕಲೆಗಳು ಬಿದ್ದಿರುತ್ತವೆ. ಸಿಬ್ಬಂದಿಗಳಿಗೆ ಜಿಲ್ಲಾ ಸರ್ಕಾರಿ ಆಸ್ಪತ್ರೆ, ಜಿಮ್ಸ್, ಕಲಬುರಗಿ ಇಲ್ಲಿಗೆ ವೈದ್ಯಕೀಯ ಚಿಕಿತ್ಸೆಗಾಗಿ ಕಳುಹಿಸಲಾಗಿರುತ್ತದೆ. ಕಾರಾಗೃಹದ ಸಿಬ್ಬಂದಿಗಳಾದ ರಮೇಶ ವಾಲಿ (ಮೆಟಲ್ ನಂ. 577) ಮತ್ತು ರಾಕೇಶ ರೋಬಿಕರ್ (ಮೆಟಲ್ ನಂ. 866) ವೀಕ್ಷಕರುಗಳ ಮೇಲೆ ಹಲ್ಲೆ ಮಾಡಿರುವ ಕಾರಾಗೃಹದ ವಿಚಾರಣಾ ಬಂದಿ ಸಂಖ್ಯೆ: 16229 ಕಾಣಿಕರಾಜ @ ಕಾಣಿ ತಂದೆ ಆಂಟೋನಿ, ಡೋರ್ ನಂ. 165(ಎ), ‘ಎ’ ಸ್ಟ್ರೀಟ್, ಜಯನಗರ, ವಿವೇಕ ನಗರ ಪೋಸ್ಟ್, ಬೆಂಗಳೂರು ಸಿಟಿ, ಈತನ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಸೂಕ್ತ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ಇತ್ಯಾದಿ ದೂರು ಅರ್ಜಿಯ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

 

 

ರಾಘವೇಂದ್ರ ನಗರ ಪೊಲೀಸ್ ಠಾಣೆ :- ದಿನಾಂಕ: 30-01-2023 ರಂದು ಮದ್ಯಾಹ್ನ 2:00 ಗಂಟೆ ಸುಮಾರಿಗೆ ನಾನು ನನ್ನ ಗೆಳೆಯನಾದ ಶಾರುಖ ಕೂಡಿಕೊಂಡು ಸಾಧಿಕ ಹೊಟೇಲ ಶಹಾಜಿಲಾನಿ ದರ್ಗಾ ಹತ್ತಿರ ಚಹಾ ಕುಡಿಯುತ್ತಿರುವ ಸಮಯದಲ್ಲಿ ಇರ್ಫಾನ . ಜಿಲಾನ , ಜಗ್ಗುದಾದಾ, ಬಾಬಾ. ರಿಜ್ವಾನ ,ಮಹಿಬೂಬ , ಸದ್ದಾಂ ಇವರೆಲ್ಲರೂ ಕೂಡಿಕೊಂಡು ಕಾರು ಮತ್ತು ಬೈಕನಲ್ಲಿ ಬಂದವರೆ ನಮ್ಮ ಮೇಲೆ ಕೇಸ್ ಮಾಡುತ್ತಿಯಾ ಎಂದು ಕೊಲೆ ಮಾಡುವ ಉದ್ದೇಶದಿಂದ ತಲವಾರು, ಕಬ್ಬಿಣದ ಪೈಪ್, ಮತ್ತು ಬಡಿಗೆಯನ್ನು ಹಿಡಿದುಕೊಂಡು ಬಂದವರು ಜಿಲಾನ ಎಂಬುವವನು ತನ್ನ ಕೈಯಲ್ಲಿರುವ ತಲವಾರದಿಂದ ನನ್ನ ಕುತ್ತಿಗೆಗೆ ಹೊಡೆಯಲು ಬಂದಾಗ ನಾನು ನನ್ನ ಬಲಗೈ ಅಡ್ಡ ತಂದಿದ್ದು  ಏಟು ನನ್ನ ಬಲಗೈಗೆ ಬಿದ್ದು ಭಾರಿ ರಕ್ತಸ್ರಾವ ಆಗಿರುತ್ತದೆ.  ಜಗ್ಗುದಾದಾ ಈತನು ಬಡಿಗೆಯಿಂದ ನನ್ನ ಬಲಮೊಳಕಾಲಿನ ಹತ್ತಿರ ಹೊಡೆದು ರಕ್ತಗಾಯ ಮಾಡಿರುತ್ತಾನೆ. ಇರ್ಫಾನ  ಎಂಬುವವನು ಫೈಪನಿಂದ ಕುತ್ತಿಗೆ ಮೇಲೆ ಹೊಡೆದು ಭಾರಿ ಗುಪ್ತಗಾಯ ಪಡಿಸಿರುತ್ತಾನೆ. ಮಹಿಬೂಬ , ರಿಜ್ವಾನ, ಸದ್ದಾಂ ಇವರು ನನ್ನನ್ನು ಕೆಳಗಡೆ ಕೆಡವಿ ಕಾಲಿನಿಂದ ಒದ್ದು ಮೋಬೈಲ್ ಹಾಗೂ 42000/-ರೂ ಗಳನ್ನು ಕಿತ್ತುಕೊಂಡು ಹೋಗಿರುತ್ತಾರೆ. ಅಬೇ ಭೋಸಡಿಕೆ ಈಗ ಮತ್ತೊಮ್ಮೆ ಕೇಸ್ ಮಾಡಿದರೆ ನಿನಗೆ ಕೊಂದು ಬಿಡುತ್ತೇವೆ ಅಂತಾ ಹೇಳಿದ್ದಾರೆ. ಮೊದಲಿನ ಕೇಸ್ ತೆಗೆದುಕೊಳ್ಳಬೇಕು ಮತ್ತು ಕೇಸ್ ಮಾಡಿದರೆ ನಿನ್ನ ಮನೆಯವರನ್ನು ಸಾಯಿಸುತ್ತೇನೆ ಎಂದು ಧಮ್ಕಿ ಹಾಕಿದ್ದಾರೆ ಎಂದು ಫಿರ್ಯಾದಿ ಕೊಟ್ಟ ಹೇಳಿಕೆ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

 

 

ಸಬ್-ಅರ್ಬನ್‌ ಪೊಲೀಸ್‌ ಠಾಣೆ :- ದಿನಾಂಕ 30-01-2023 ರಂದು 10:00 ಪಿಎಮ್ ಸುಮಾರಿಗೆ ತನ್ನ ಊರಾದ ಅವರಳ್ಳಿ ಗ್ರಾಮದಿಂದ ಕಲಬುರಗಿಗೆ ಹೋರಿದ್ದು 02:30 ಪಿ.ಎಮ್ ಸುಮಾರಿಗೆ ನಾಗಲಿಂಗೇಶ್ವರ ದೇವಾಸ್ಥಾನ ಶರಣಸಿರಸಗಿ ಹತ್ತಿರ ಆಪಘಾತ ಆಗಿದ್ದು ಫಿರ್ಯಾದಿಯು ರಸ್ತೆಯ ಮೇಲೆ ಬಿದ್ದಿದಾಗ ಅವನ ಪ್ಯಾಂಟಿನ ಜೇಬಿನಲ್ಲಿದ್ದ 45,000/- ನಗದು ಹಣ ಕೇಳಗೆ ಬಿದ್ದಿದ್ದು ಹಾಗೂ ಅತನ ಮೋಬೈಲನ್ನು ಮೋಟಾರ್ ಸೈಕಲ್ ನಂ KA 32 S 9550  ಬೈಕ ಸವಾರ ತೆಗೆದು ಕೊಂಡು ಹೋದ ಬಗ್ಗೆ ಸಂಶಯವಿದೆ ಎಂದು ಪಿರ್ಯಾದಿ ಕೊಟ್ಟ ಹೇಳಿಕೆ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

ಇತ್ತೀಚಿನ ನವೀಕರಣ​ : 01-02-2023 01:57 PM ಅನುಮೋದಕರು: ADMIN


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕಲಬುರಗಿ ನಗರ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080