Feedback / Suggestions

ಸಂಚಾರಿ ಪೊಲೀಸ್‌ ಠಾಣೆ-2 :- ದಿನಾಂಕ 29/12/2022 ರಂದು ಬೆಳಿಗ್ಗೆ 08:15 ಗಂಟೆಗೆ ಶ್ರವಣಕುಮಾರ ತಂದೆ ಯೋಗಪ್ಪಾ ಅರ್ಜುಣಗಿ ವಯ:38 ವರ್ಷ ಜಾತಿ: ಲಿಂಗಾಯತ ಉ: ಉಪನ್ಯಾಸಕರು ಮುಕ್ಕಾ: ಶಹಾಬಜಾರ ಆರಾಧನಾ ಸ್ಕೂಲ ಹತ್ತೀರ ಕಲಬುರಗಿ, ಇವರು ಠಾಣೆಗೆ ಹಾಜರಾಗಿ ಒಂದು ಹೇಳಿಕೆ ಕೊಟ್ಟಿದ್ದು ಸಾರಂಶವೆನೆಂದರೆ, ದಿನಾಂಕ-18/12/2022 ರಂದು ರಾತ್ರಿ 11:00 ಗಂಟೆ ಸುಮಾರಿಗೆ ನಮ್ಮ ತಂದೆ ಯೋಗಪ್ಪಾ ಹಾಗೂ ಅವರ ಪರಿಚಯದವರಾದ ರಾಜಕುಮಾರ ತಂದೆ ಶಾಮರಾವ್ ಪಾಟೀಲ ಇಬ್ಬರೂ ಕಾರ ನಂ ಕೆಎ-01 ಎ.ಜಿ-1858 ನೇದ್ದರ ಮೇಲೆ ಬೀದರ ಮತ್ತು ಹೈದ್ರಾಬಾದಿಗೆ ಹೋಗಿ ಮರಳಿ ಕಲಬುರಗಿಗೆ ಬರುವಾಗ ಹುಮನಾಬಾದ ರಿಂಗ್ ರೋಡ ಮೇಲೆ ಲಾರಿ ನಂ ಎಮ್.ಹೆಚ್-25 ಎ.ಜೆ-0141 ನೇದ್ದರ ಚಾಲಕನು ಕಾರಿಗೆ ಅಪಘಾತ ಪಡಿಸಿದರಿಂದ ನಮ್ಮ ತಂದೆಯವರಿಗೆ ಹಾಗೂ ರಾಜಕುಮಾರ ಪಾಟೀಲ ಇವರಿಗೆ ಭಾರಿಗಾಯವಾಗಿದ್ದು ಈ ವಿಷಯದಲ್ಲಿ ಗುನ್ನೆ ನಂ 273/2022 ಕಲಂ 279.337.338. ಐ.ಪಿ.ಸಿ ಸಂ 187 ಐ.ಎಮ್.ವ್ಹಿ ಆಕ್ಟ್ ನೇದ್ದು ದಾಖಲಾಗಿದ್ದು ಇರುತ್ತದೆ, ತಂದೆಯವರು ಮಣ್ಣೂರ ಆಸ್ಪತ್ರೆಯಲ್ಲಿ ಉಪಚಾರ ಪಡೆಯುತ್ತಿದ್ದು ಮುಂದೆ ತಂದೆಯವರ ಪರಸ್ಥಿತಿಯು ಚಿಂತಾಜನಕವಾಗಿ ಉಪಚಾರ ಪಡೆಯುತ್ತಿರುವ ಕಾಲಕ್ಕೆ ಇಂದು ದಿನಾಂಕ-29/12/2022 ರಂದು ಮದ್ಯ ರಾತ್ರಿ 00:30 ಗಂಟೆ ಸುಮಾರಿಗೆ ಗುಣಮುಖವಾಗದೆ ಮಣ್ಣೂರ ಆಸ್ಪತ್ರೆಯಲ್ಲಿ ಮೃತ ಪಟ್ಟಿರುತ್ತಾರೆ. ಈ ಘಟನೆಗೆ ಅಪಘಾತ ಪಡಿಸಿದ ಲಾರಿ ನಂ ಎಮ್.ಹೆಚ್.-25 ಎ.ಜೆ-0141 ನೇದ್ದರ ಚಾಲಕನಾದ ಮಹೆಬೂಬ ಶೇಖ ತಂದೆ ಮುಕ್ತಾರ ಶೇಖ ವ: 27 ವರ್ಷ ಸಾ: ತೋರಂಬಾ ಈತನೆ ಕಾರಣಿ ಬೂತನಾಗಿದ್ದು ಈ ವಿಷಯದಲ್ಲಿ ಮುಂದಿನ ಕ್ರಮ ಕೈಕೊಳ್ಳಬೇಕು ಎಂದು ಫಿರ್ಯಾದಿ ಕೊಟ್ಟ ಹೇಳಿಕೆ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

 

ವಿಶ್ವವಿದ್ಯಾಲಯ ಪೊಲೀಸ್‌ ಠಾಣೆ :- ದಿನಾಂಕ: 22/11/2022 ರಂದು ಮಧ್ಯಾಹ್ನ 12:00 ರಿಂದ 1:00 ಗಂಟೆಯ ಸುಮಾರಿಗೆ  ಸದರಿ ಆರೋಪಿತರು ಫಿರ್ಯಾದಿಯ ಮನೆಯ ಹತ್ತಿರ ಬಂದು ನಿನ್ನ ಮಗ ಎಲ್ಲಿದ್ದಾನೆ ನಿನ್ನ ಮಗ ಟಿವಿಎಸ್ ಕ್ರೆಡಿಟ್ ಕಂಪನಿಯಲ್ಲಿ ಸಾಲ ತೆಗೆದುಕೊಂಡಿದ್ದಾನೆ ಕಂತಿನ ಹಣ ಕಟ್ಟಿರುವುದಿಲ್ಲಾ ಅಂತಾ ಅಂದಾಗ ಸದರಿ ಆಪಾದಿತರು ಫಿರ್ಯಾದಿಗೆ ಜಾತಿ ಎತ್ತಿ ಬೈದು ಅವಹೇಳನ ಮಾಡಿ ಜೀದ ಬೇದರಿಕೆ ಹಾಕಿದ್ದಾನೆ ಎಂದು ಫಿರ್ಯಾದಿ ಕೊಟ್ಟ ಹೇಳಿಕೆ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

 

ಸ್ಟೇಷನ್‌ ಬಜಾರ ಪೊಲೀಸ್‌ ಠಾಣೆ :- ದಿನಾಂಕ: 15/12/2022 ರಂದು ಸಂಜೆ 05-30 ಗಂಟೆಯಲ್ಲಿ ನಮ್ಮ ಕಾಲೇಜ್‌ನಲ್ಲಿ ಕಿರಯ ತರಬೇತಿ ಅಧಿಕಾರಿಯಾಗಿ ಕೆಲಸ ಮಾಡುವ ಶ್ರೀ.ಇಸ್ಲಾಯಿಲ್ ಅವಟಿ ಹಾಗೂ ಶ್ರೀನಿವಾಸ ಗ್ರೂಪ ಡಿ ರವರು ಪುರುಷ ಐಟಿಐ ಕಾಲೇಜ್ ಕ್ಯಾಂಪಸ್‌ನಲ್ಲಿರುವ ಐಸಿಟಿಎಸ್ ಎಂ ವಿಭಾಗದ ಲ್ಯಾಬ್ ಮತ್ತು ಮುಖ್ಯ ದ್ವಾರದ ಬೀಗವನ್ನು ಹಾಕಿಕೊಂಡು ಹೋಗಿರುತ್ತಾರೆ. ನಂತರ ದಿನಾಂಕ: 16/12/2022 ರಂದು ಬೆಳಿಗ್ಗೆ 08:00 ಗಂಟೆಯಲ್ಲಿ ಖಾಜೀಮೀಯಾ ಕಿರಿಯ ತರಬೇತಿ ಅಧಿಕಾರಿ ಮತ್ತು ಶ್ರೀನಿವಾಸ ಗ್ರೂಪ ಡಿ ರವರು ಬಂದು ನೋಡಿದ ಸದರಿ ಬಾಗಿಲ ಬೀಗವನ್ನು ಮುರುದಿದ್ದು. ನಂತರ ಒಳಗಡೆ ಹೋಗಿ ನೋಡಿದಾಗ ಪುರುಷ ಐಟಿಐ ಕಾಲೇಜ್ ಕ್ಯಾಂಪಸ್ ಐಸಿಟಿಎಸ್‌ಎಂ ವಿಭಾಗದ ಲ್ಯಾಬ್‌ನಲ್ಲಿರುವ 1) 8 ಹೈ ಪವರ್ 65 ಎಹೆಚ್. ಮೆಂಟ್‌ನೆನ್ಸ್ ಪ್ರೀ ಬ್ಯಾಟರಿಗಳು ಅ.ಕಿ 12,000/-ರೂ 2) 2 ಗೋದ್ರೆಜ್ 7 ಲೀವರ್ ಲಾಕ್ ನಂ. 2 ಕಪ್ಪಿಗಳು ಅ.ಕಿ 2000/-ರೂ ಹೀಗೆ ಒಟ್ಟು 14,000/- ರೂ ಬೆಲೆ ಬಾಳೂವುದನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿದ್ದು ಸದರಿಯವರ ವಿರುದ್ದ ಕಾನೂನು ರೀತಿ ಕ್ರಮ ಜರುಗಿಸಿ ನಮ್ಮ ವಸ್ತುಗಳು ನಮಗೆ ದೊರಕಿಸಿ ಕೊಡಲು ವಿನಂತಿ ಅಂತ ವಗೈರೆಯಾಗಿ ಇದ್ದ ಫಿರ್ಯಾದಿ ಅರ್ಜಿಯ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

 

 

ಸ್ಟೇಷನ್‌ ಬಜಾರ ಪೊಲೀಸ್‌ ಠಾಣೆ :- ಮಾನ್ಯ ಪ್ರೀನ್ಸಿಪಲ್ ಜೆ.ಎಮ್.ಎಫ್.ಸಿ ನ್ಯಾಯಾಲಯದಲ್ಲಿ ಫಿರ್ಯಾದಿ ಮಾಹಾದೇವಪ್ಪ ತಂದೆ ಅಮೃತಪ್ಪ ಮೂಲಗೆ, ವಯ:49 ವರ್ಷ ಉ:ಕೂಲಿಕೆಲಸ ಸಾ:ಹುಣಸಿಹಡಗಿಲ್ ತಾ:ಜಿ:ಕಲಬುರಗಿ ಇದ್ದು ನಾನು ನನ್ನ ಹೆಂಡತಿ ಹಾಗೂ ಮಕ್ಕಳೊಂದಿಗೆ ಕಲಬರಗಿ ಜಿಲ್ಲೆಯ ಹುಣಸಿಹಡಗಿಲ್ ಇವರು ಸಲ್ಲಿಸಿದ ಖಾಸಗಿ ದೂರು ಅರ್ಜಿ ಸಂಖ್ಯೆ:529/2022 ನೇದ್ದರ ಸಾರಾಂಶವೇನೆಂದರೆ ಮಾಹಾರಾಷ್ಟ್ರದಲ್ಲಿ ನೊಂದಣಿಯಾದ ಬಿವಿಜಿ ಕಂಪನಿಯಲ್ಲಿ ನಾನು ಹಾಗೂ ನನ್ನ ಇತರ ಸ್ನೇಹಿತರು ಹಣ ಹೂಡಿಕೆ ಆಮಿಷಕ್ಕೆ ಬಿದ್ದು ನಾನು ಹಾಗೂ ನನ್ನ ಹಾಗೂ ಸ್ನೇಹಿತರು ಬಿ.ವಿ.ಜಿ ಕಂಪನಿಯಲ್ಲಿ ಹಣ ಹೂಡಿಕೆ ಮಾಡಿದ್ದು ಇರುತ್ತದೆ. ಬಿವಿಜಿ ಕಂಪನಿಯವರು ಹಣ ಹೂಡಿಕೆ ಮಾಡಿದ 3 ವರ್ಷದಲ್ಲಿ ಹೂಡಿದ ಹಣಕ್ಕೆ  ದ್ವಿಗುಣ ಮಾಡಿಕೊಡುವುದಾಗಿ ಎಫ್ ಡಿ ಹಣ ಹಾಗೂ ಆರ್. ಡಿ ಹಣ ಹಾಗೂ ಖುಲ್ಲಾ ನಿವೇಷನಗಳು ಕೊಡುವುದಾಗಿ ನನ್ನ ಮತ್ತು ನಮ್ಮ 142 ಸದಸ್ಯರಿಂದ ಆರೋಪಿತರು 2011 ರಿಂದ 2015 ರವರೆಗೆ ಆರ್ ಡಿ ಮತ್ತು ಎಫ್ ಡಿ ಹಾಗೂ ಖುಲ್ಲಾ ನಿವೇಷನಗಳಿಗಾಗಿ  ಹಣವನ್ನು ಠೇವಣಿ ಮಾಡಿರುತ್ತೇವೆ. 2014 ನೇ ಸಾಲಿನಲ್ಲಿ ಕೆಲವಿ ಆರ್ ಡಿ ಮೆಚುರಿಟಿ ಅವದಿ ಮುಗಿದಾಗ ಆರೋಪಿತರು ಕೆಲವು  ಆರ್ ಡಿ ತುಂಬಿದವರ ಹಣ ಕೊಟ್ಟಿದ್ದು ಇನ್ನು ಕೆಲವು ಆರ್ ಡಿ ತುಂಬಿದವರ ಹಣ ಕೊಡದೆ ಬಾಕಿ ಉಳಿಸಿಕೊಂಡು ಒಂದಲ್ಲ ಒಂದು ಕಾರಣ ಹೇಳುತ್ತಾ ಸರಿಯಾದ ಸಮಯಕ್ಕೆ ಕೊಡದೇ ಮುಂದೂಡುತ್ತಾ ಬಂದಿರುತ್ತಾರೆ. ಬಿವಿಜಿ ಕಂಪನಿಯವರು ಒಂದಲ್ಲ ಒಂದು ದಿನ ಆರ್ ಡಿ ಹಣವನ್ನು ಕೊಟ್ಟು ವ್ಯವಹಾರವನ್ನು ಬಗೆಹರಿಸಬಹುದು ಅಂತ ಭರವಸೆಯಿಂದ ಇದ್ದರು 2041 ರಿಂದ 2016 ರ ವರೆಗಿನ ತುಂಬಿದ ಆರ್ ಡಿ ಹಣವನ್ನು ಕೊಡಬಹುದು ಸುಮ್ಮನಿದ್ದೆವು. 2016 ರಲ್ಲಿ ಬಿವಿಜಿ ಕಂಪನಿ ಆರ್ ಡಿ ಗ್ರಾಹಕರಿಗೆ ಯಾವುದೇ ಮಾಹಿತಿ ಕೊಡದೆ ಕಲಬುರಗಿಯಿಂದ ಓಡಿ ಹೋಗಿರುತ್ತಾರೆ. ಮೇಲ್ಕಂದಡ ವಿಚಯಕ್ಕೆ ಸಂಬಂದಿಸಿದಂತೆ ಸಂದರ್ಭಕ್ಕಾನುಸಾರವಾಗಿ ನಾನು ಮತ್ತು ಇತರ ಸದಸ್ಯರು ಆರೋಪಿತರಾದ ಗುಂಡಪ್ಪ ಕುಂಬಾರ, ಸಾಯಿಬಣ್ಣ ಕುಂಬಾರ, ಅನ್ವರ್ ಎಮ್.ನದಾಫ್ ಸಂಜು ಕುಮಾರ ಭಜಾರಮಟ್, ಮಲ್ಲಯ್ಯ ಮಠಪತಿ, ಮಂಜುನಾಥ ಕಂಬಳಿ ಇವರನ್ನು ಭೇಟಿಯಾದಾಗ ಸ್ವಲ್ಪ ದಿನಗಳು ಕಾಯಿರಿ ನಾವು ಬಿವಿಜಿ ಕಂಪನಿಯ ಮ್ಯಾನೇಜಿಂಗ್ ಡೈರೆಕ್ಟರ್ ರವರೊಂದಿಗೆ ಚರ್ಚಿಸಿ ಬಗೆಹರಿಸುತ್ತೇವೆ ಅಂತ ಭರವಸೆ ನೀಡಿದ್ದರಿಂದ 2 ವರ್ಷಗಳ ಕಾದಿರುತ್ತೇವೆ ಆದರೆ ಬಗೆಹರಿಸಿರುವುದ್ದಿಲ್ಲ.2018 ರಲ್ಲಿ ನಾವು ಎಲ್ಲಾ ಸದಸ್ಯರು ಪುಣೆಯಲ್ಲಿರುವ ಬಿವಿಜಿ ಕಂಪನಿಯ ಮುಖ್ಯ ಕಛೇರಿಗೆ ಭೇಟಿ ನೀಡಲು  ಮುಖ್ಯ ಕಛೇರಿ ಮುಚ್ಚಿರುವು ತಿಳಿದು ಬಂದಿರುತ್ತದೆ. ನಂತರ ಅಲ್ಲಿಂದ ಮರಳಿ ಕಲಬುರಗಿಗೆ ಬಂದು ಆರೋಪಿತರನ್ನು ಭೇಟಿಯಾಗಿ ನೀವು ನಾವು ಹೂಡಿಕೆ ಮಾಡಿರುವ ಹಣವನ್ನು ಕೊಡಿಸುತ್ತೇವೆ ಅಂತ ಭರವಸೆ ನೀಡಿದ್ದೀರಿ ಆರ್ ಡಿ ಹಣ ಕೊಡಿಸಿ ಅಂತ ಕೇಳಲು ಬಿವಿಜಿ ಕಂಪನಿ ಬಂದ್ ಆಗಿರುತ್ತದೆ ಆರ್ ಡಿ ಮತ್ತು ಎಫ್ ಡಿ ಹಾಗೂ ಖುಲ್ಲಾ ನಿವೇಷನಗಳ ಖರೀದಿಗಾಗಿ  ಸಂದಾಯ ಮಾಡಿದ ಹಣವನ್ನು ತಪ್ಪದೇ 3 ವರ್ಷಗಳಲ್ಲಿ ಕೊಡಿಸುತ್ತೇವೆ ಅಂತ ಹೇಳಿದ್ದಕ್ಕೆ 2018 ರಿಂದ ಜೂನ್ 2021 ರ ವರೆಗೆ ಕಾದಿರುತ್ತೇವೆ. 2021 ರ ಜೂನ್ ತಿಂಗಳ ಮೊದಲ ವಾರದಲ್ಲಿ ಆರೋಪಿತರನ್ನು ಭೇಟಿಯಾಗಲು ಬಿವಿಜಿ ಕಂಪನಿ ನಷ್ಟದಿಂದ ಬಂದ್ ಆಗಿರುತ್ತದೆ. ಹಣ ಕೊಡಲು ಆಗುವುದಿಲ್ಲ ಅಂತ ತಿಳಿಸಿದ್ದು ನಂತರ ಫಿರ್ಯಾದಿ ಮತ್ತು ಇತರೆ ಸದಸ್ಯರು ಆರೋಪಿತರ ಮನೆಗೆ ಹೋಗಿ ನೋಡಿದ ದಿನ ಮನೆಯಲ್ಲಿ ಆರೋಪಿತರು ಇದ್ದಿರುವುದಿಲ್ಲ ನಂತರ ಫಿರ್ಯಾದಿ ಮತ್ತು ಇತರೆ ಸದಸ್ಯ ಆರೋಪಿತರ ಮೊಬೈಲ್ ನಂಬರಗಳನ್ನು ಸಂಗ್ರಹಿಸಿ ಕರೆ ಮಾಡಿ ಮಾತನಾಡಲು ನಾವು ನಿಮ್ಮ ಆರ್ ಡಿ ಎಫ್ ಡಿ ಹಾಗು ಖುಲ್ಲಾ ನಿವೇಷನದ ಹಣ ಕೊಡಲು ಆಗುವುದಿಲ್ಲ ಅಂತ ಉದಾಸೀನವಾಗಿ ಉತ್ತರ ನೀಡಿರುತ್ತಾರೆ. ಸಂದಾಯದ ಅವದಿ ಮುಗಿದ 65 ಲಕ್ಷಕ್ಕಿಂತ ಅಧಿಕ ಮೊತ್ತದ ಹಣವನ್ನು ಮೇಲ್ಕಂಡ ಆರೋಪಿತರು 500 ಸದಸ್ಯರಿಂದ ಸಂಗ್ರಹಿಸಿ ಮೋಸ ಮಾಡಿ, ಕೇಳಲು ಹೋದರೆ ನೀವು ಏನು ಮಾಡಿಕೊಳ್ಳುತ್ತಿರೋ ಮಾಡಿಕೊಳ್ಳಿ ನಾವು ಅದನ್ನು ಎದರಿಸಲು ತಯಾರು ಇದ್ದೇವೆ ಅಂತ ಅವಾಚ್ಯವಾಗಿ ಬೈದು ಜೀವ ಬೆದರಿಕೆ ಹಾಕಿದ್ದಾರೆ ಎಂದು ಫಿರ್ಯಾದಿ ಕೊಟ್ಟ ಅರ್ಜಿಯ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

 

 

ಸಬ್-ಅರ್ಬನ್‌ ಪೊಲೀಸ್‌ ಠಾಣೆ :- ದಿನಾಂಕ: 29/12/2022 ಸರಕಾರಿ ಫಿರ್ಯಾದಿಯು ಠಾಣೆಗೆ ಹಾಜರಾಗಿ ನೀಡಿದ ಫಿರ್ಯಾದಯೇನೆಂದರೆ ಸದರಿಯವರು ಸದರಿಯವರು ದಿನಾಂಕ:28/12/2022 ರಂದು ರಾತ್ರಿ ವೇಳೆಯಲ್ಲಿ ಎನ್ ಆರ್‌ಸಿ ಕರ್ತವ್ಯದಲ್ಲಿದ್ದಾಗ ಖಚಿತ ಮಾಹಿತಿ ಬಂದಿದ್ದೇನೆಂದರೆ ವಿಂಟೇಜ್ ಫಂಕ್ಷನ್ ಹಾಲ ಹತ್ತಿರ ಯಾವುದೇ ಪರವಾನಗಿ ಇಲ್ಲದೇ ಧ್ವನಿವರ್ಧಕವನ್ನು ಬಳುಸುತ್ತಿದ್ದಾರೆಂದು ಮಾಹಿತಿ ಬಂದಿದ್ದರ ಮೇರೆಗೆ ಹೋಗಿ ನೋಡಲಾಗಿ ಹೆಚ್ಚಿನ ಶಬ್ದವನ್ನಿಟ್ಟು ಧ್ವನಿ ವರ್ಧಕವನ್ನು ಹಚ್ಚಿದ್ದರಿಂದ ದಾಳಿ ಮಾಡಲಾಗಿ ಅಲ್ಲಿನ ಎಲ್ಲರೂ ಓಡಿ ಹೋಗಿದ್ದು ಸದರಿ ಮುದ್ದೆ ಮಾಲು ಮತ್ತು ಆರೋಪಿತರನ್ನು ವಶಕ್ಕೆ ಪಡೆದು ಸದರಿ ಆರೋಪಿತರ ವಿರುದ್ದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

 

ಅಶೋಕ ನಗರ ಪೊಲೀಸ್‌ ಠಾಣೆ :- ದಿನಾಂಕ: 29/12/2022 ರಂದು 10:00 ಎ.ಎಂಕ್ಕೆ ಫಿರ್ಯಾದಿ ಶ್ರೀ ಕೃಷ್ಣ ತಂದೆ ಮಹಾದೇವಪ್ಪ ಗುಂಡುಗುರ್ತಿ ವಯ: 32 ವರ್ಷ ಜಾ: ಎಸ್.ಸಿ.(ಮಾದಿಗ) ಉ: ಖಾಸಗಿ ಕೆಲಸ ಸಾ|| ಸಂಜೀವ್ ನಗರ, ಮೇಲಿನಕೆರಿ,ನೆಹರೂ ಗಂಜ್ ರೋಡ್, ಕಲಬುರಗಿ ಇವರು ಠಾಣೆಗೆ ಹಾಜರಾಗಿ ಕೊಟ್ಟ ಫಿರ್ಯಾದಿ ಅರ್ಜಿಯ ಸಾರಾಂಶವೆನೆಂದರೆ. ನಾನು ನನ್ನ ದಿನ ನಿತ್ಯದ ಕೆಲಸಕ್ಕೆ ಓಡಾಡುವ ಸಲುವಾಗಿ 2017 ನೇ ಸಾಲಿನಲ್ಲಿ ಒಂದು ಹಿರೊ ಸ್ಪ್ಲೇಂಡರ್ ಪ್ಲಸ್  ಮೋಟಾರ ಸೈಕಲ್ ನಂ ಕೆ.ಎ-32 ಇ.ಎನ್-6463 ಗ್ರೇ ಬ್ಲ್ಯಾಕ್  ಬಣ್ಣದ್ದು ಚೆಸ್ಸಿ ನಂ MBLHA10CGGHL53066 ಇಂಜಿನ್ ನಂ HA10ERGHL53912 ಅ. ಕಿ.20,544/-  ರೂಪಾಯಿ ನೇದ್ದು ಖರೀದಿಸಿದ್ದು ಇರುತ್ತದೆ. ಹೀಗಿದ್ದು ದಿನಾಂಕ: 12/11/2022 ರಂದು ಬೆಳ್ಳಿಗೆ 10:00 ಗಂಟೆಗೆ ನಾನು ನನ್ನ ಮೋಟರ್ ಸೈಕಲನ್ನು ಕೇಂದ್ರ ಬಸ್ ನಿಲ್ದಾಣದಲ್ಲಿ ನಿಲ್ಲಿಸಿ ನಮ್ಮ ಅಕ್ಕಳಾದ ಶ್ರೀಮತಿ ಕಾಶಿಬಾಯಿ ಇವರನ್ನು ಬಸ್ ಹತ್ತಿಸಿ ಬಂದು 11:00 ಗಂಟೆಗೆ ಬಂದು ನೋಡಲಾಗಿ ನನ್ನ ವಾಹನ ಇದ್ದಿರುವುದಿಲ್ಲ. ನಾನು ಇಲ್ಲಿಯ ವರೆಗೆ ಕಲಬುರಗಿ ನಗರದಲ್ಲಿ ಮತ್ತು ಹೊರ ವಲಯಗಳಲ್ಲಿ ಎಲ್ಲಾ ಕಡೆಗಳಲ್ಲಿ ಹುಡುಕಾಡಿದರು ನನ್ನ ವಾಹನ ನನಗೆ ಸಿಕ್ಕಿರುವುದಿಲ್ಲ. ಈ ಬಗ್ಗೆ ಮನೆಯಲ್ಲಿ ವಿಚಾರಿಸಿ ಇಂದು ತಡವಾಗಿ ಠಾಣೆಗೆ ಬಂದು ದೂರು ಸಲ್ಲಿಸುತ್ತಿದ್ದು, ಕಳವುವಾದ ನನ್ನ ಮೋಟಾರ ಸೈಕಲನ್ನು ಪತ್ತೆ ಮಾಡಿ ಕಳ್ಳತನ ಮಾಡಿದವರ ವಿರುದ್ದ ಕಾನೂನು ರೀತಿ ಕ್ರಮ ಜರುಗಿಸಿ ನನ್ನ ವಾಹನ ನನಗೆ ದೊರಕಿಸಿ ಕೊಡಲು ವಿನಂತಿ ಎಂದು ಫಿರ್ಯಾದಿ ಕೊಟ್ಟ ಹೇಳಿಕೆ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

 

 

ಸಿ.ಇ.ಎನ್‌ ಪೊಲೀಸ್‌ ಠಾಣೆ :- ದಿನಾಂಕ: 29/12/2022 ರಂದು 20:00 ಗಂಟೆಗೆ ಫಿರ್ಯಾದಿ ಶ್ರೀ ನಿಜಾಮೋಧ್ದಿನ್ ತಂದೆ ಬಾಬ ಪಟೇಲ್ ವಯ|| 35 ವರ್ಷ ಜಾತಿ|| ಮುಸ್ಲಿಂ ಉ|| ಅನ್ಸಾರಿ ಮೇಡಿಕಲ್ ಶಾಪ್ ಮ್ಯಾನೇಜರ್ ಕೆಲಸ ಸಾ|| ಮನೆ ನಂ: 5-992/48 ನೀರಿನ ಟಾಕೀಯ ಹತ್ತಿರ ಯಾದುಲ್ಲಾ ಕಾಲೋನಿ, ಕಲಬುರಗಿ ಪೋನ ನಂ: 8553559455 ಇದ್ದು. ಇವರು ಪೊಲೀಸ್ ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೆನೆಂದರೆ, ದಿನಾಂಕ: 28/12/2022 ರಂದು ಮಧ್ಯಾಹ್ನ 3:00 ಗಂಟೆಗೆ ನಮ್ಮ ಅನ್ಸಾರಿ ಮೇಡಿಕಲ್ ಶಾಪ್‌ನಲ್ಲಿ ಕುಳಿತುಕೊಂಡು ನನ್ನ ಮೋಬೈಲ್‌ನಲ್ಲಿ ನನ್ನ ಪೇಸ್‌ಬುಕ್ “ನಿಜಾಮ್ ಸರಕಾರ ಜಿ,ಎಲ್,ಬಿ” ನೇದ್ದನ್ನು ನೋಡುತ್ತಾ ಇದ್ದಾಗ “Shazia Khan (Cute Shazia) ನೇದ್ದರ ಪೇಸಬುಕ್ ಖಾತೆಯಲ್ಲಿ ನೋಡಲಾಗಿ “ Prophet Muhammad ek Nitthalla Kaamchor Admi the Usko Birn Mehnat ka Sabkuch Mil Gaya Kyaunki Wo ek Achcha Neta the jisne Apne Ummat logon Ko Vote se Pahle (Marne se Pahle ) Har wo Sapana Dikhaya jo Aaj ke Neta Vote se Pahle Public Ko Dikhaate hain Lekin Sachchai se Koi Wasta nahi hota in jumlo ka. ಅಂತಾ ನೇದ್ದರ ಪೇಸ್‌ಬುಕ್ https://m.facebook.com/story.php?story_fbid=pfbid02hKhUJM2m5xfJxaCrNcMNPGM6ofzfnavanwv3RKoaTmL7yXuZSb46HVag8s11x3YKl&id=100072327037725&mibextid=Nif5oz  ಯು,ಆರ್,ಎಲ್ ಐ,ಡಿ ಮೂಲಕ ದಿನಾಂಕ: ೨೮/೧೨/೨೦೨೨ ರಂದು ಮಧ್ಯಾಹ್ನ ೧:೪೩ ಪಿ,ಎಮ್ ಗಂಟೆಗೆ ಅವಹೇಳನಕಾರಿಯಾಗಿ ತಂತ್ರಜ್ಞಾನದ ಮಾಧ್ಯಮ ಬಳಿಸಿಕೊಂಡು ಪೊಸ್ಟ್ ಮಾಡಿರುತ್ತಾರೆ. ಹಾಗೂ ಸದರಿ ಪೇಸ್‌ಬುಕ್ ಐಡಿಯಲ್ಲಿ ಮತ್ತೆ ನೋಡಲಾಗಿ “ಪೈಗಂಬರ್ ಮೊಹ್ಮದ ಔರ್, ಉನ್ನಕೇ ಸಬೀ, ಖಲೀಫಾ ಸಹಾಬಾ ಔರ್, ಸಬೀ ಇಮಾಮೋ ಸೇ, ಜಾದಾ ರುತಬಾ ಸಲ್ಮಾನ್ ರಶ್ದಿಖಾ ಹೈ, ಇಮಾಮ್ ಮಲೀಕ್, ಇಮಾಮ್ ಅಬು ಹನೀಫಾ, ಇಮಾಮ್ ಹಂಬಲ್, ಇಮಾಮ್ ಶಾಫಿ, ಇಸ್ಲಾಂ ಕೇ, ಇನ್ ಬಡೆ ಇಮಾಮೋಸೇ, ಬೀ ಜಾದ ಬುಲಂಧ ಸಲ್ಮಾನ್ ರಶ್ದಿಕಾ ರುತಬಾ ಹೈ ಅಂತಾ

https://m.facebook.com/story.php?story_fbid=pfbid026g88kHnwzuCzM3BFtv3Pf2UCdBMCy1pg1njvpWhrzA4JtuSrkgZdVEoFNqoaHSXTl&id=100072327037725&mibextid=Nif5oz ಯು,ಆರ್,ಎಲ್ ಐ,ಡಿ ಮೂಲಕ ದಿನಾಂಕ: ೧೬/೧೦/೨೦೨೨ ರಂದು ೧:೨೬ ಪಿ,ಎಮ್ ಅವಹೇಳನಕಾರಿಯಾಗಿ ತಂತ್ರಜ್ಞಾನದ ಮಾಧ್ಯಮ ಬಳಿಸಿಕೊಂಡು ಪೊಸ್ಟ್ ಮಾಡಿರುತ್ತಾರೆ. ಇದರ ಬಗ್ಗೆ ನನಗೆ ಗೊತ್ತಿರುವರಾದ        ೧) ಮೋಹ್ಮದ ಮೀನಾಜೋದ್ದಿನ್ ಶೇಕ್, ೨) ಸೈಯದ್ ಅಲಿ ೩) ಇಸ್ಮಾಯಿಲ್ ಬಾಬಾ ೪) ಸೈಯಧ್ ಅಸ್ಪಾಕ್ ೫) ತೈಯಬ್ ಅಲಿ. ೬) ಶಾಹೀದ್ ಬಾಗವಾನ್ ೭) ಕಲೀಮ್ ಅನೂರಿ ೮) ಸಾಹೀಲೋದ್ದಿನ್ ೯) ಮೋಯಿನ್ ಜಮಾದಾರ ೧೦) ಹಕೀಮ್ ಪಾಶಾ    ೧೧) ಶಫೀಯೋದ್ದಿನ್ ಇವರೊಂದಿಗೆ ಸಮಾಲೋಚನೆ ಮಾಡಿ ಇಂದು ದಿನಾಂಕ: ೨೯/೧೨/೨೦೨೨ ರಂದು ಠಾಣೆಗೆ ಬಂದು ದೂರು ನೀಡಲು ತಡವಾಗಿರುತ್ತದೆ. ಕಾರಣ ಇದೆ ರೀತಿಯಾಗಿ ಅನೇಕ ಪೋಸ್ಟ್ಗಳನ್ನು ಮಾಡಿ ನಮ್ಮ ಇಸ್ಲಾಂ ಜನಾಂಗಗಕ್ಕೆ ಮನಸ್ಸಿಗೆ ನೋವು ಹಾಗೂ ದುಃಖ ಬರುವ ರೀತಿಯಲ್ಲಿ ಅವಹೇಳನಕಾರಿಯಾಗಿ ತಂತ್ರಜ್ಞಾನದ ಮಾಧ್ಯಮ ಬಳಿಸಿಕೊಂಡು ಪೊಸ್ಟ್ ಮಾಡಿದವರ ವಿರುದ್ದ ಸೂಕ್ತ ಕಾನೂನು ಕ್ರಮ ಕೈಗೊಳ್ಳಲು ವಿನಂತಿ ಎಂದು ಫಿರ್ಯಾದಿ ಕೊಟ್ಟ ಹೇಳಿಕೆ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

Last Updated: 30-12-2022 03:20 PM Updated By: ADMIN


Disclaimer :

Please note that this page also provides links to the websites / web pages of Govt. Ministries/Departments/Organisations.The content of these websites are owned by the respective organisations and they may be contacted for any further information or suggestion

Website Policies

 • Copyright Policy
 • Hyperlinking Policy
 • Security Policy
 • Terms & Conditions
 • Privacy Policy
 • Help
 • Screen Reader Access
 • Guidelines

Visitors

 • Last Updated​ :
 • Visitors Counter :
 • Version :
CONTENT OWNED AND MAINTAINED BY : Kalaburagi City Police
Designed, Developed and Hosted by: Center for e-Governance - Web Portal, Government of Karnataka © 2024, All Rights Reserved.

Best viewed in Chrome v-87.0.4280.141, Microsoft Edge v-87.0.664.75, Firefox -v-83.0 Browsers. Resolution : 1280x800 to 1920x1080