ಅಭಿಪ್ರಾಯ / ಸಲಹೆಗಳು

ರೋಜಾ ಪೊಲೀಸ್‌ ಠಾಣೆ :- ದಿನಾಂಕ: 29/10/2022 ರಂದು ರಾತ್ರಿ 02-00 ಗಂಟೆ ಸುಮಾರಿಗೆ ಲಾರಿ ನಂ ಕೆಎ-32 ಎಎ-3212 ನೇದ್ದರಲ್ಲಿ ಆರೋಪಿತರು ಪಡಿತರ ಚೀಟಿಯ 154.65 ಕ್ವಿಂಟಲ ಅಕ್ಕಿಯನ್ನು ಕಾಳ ಸಂತೆಯಲ್ಲಿ ಮಾರಾಟ ಮಾಡಲು ಹೋಗುತ್ತಿದ್ದ ಬಗ್ಗೆ ಬಾತ್ಮಿ ಮೇರೆಗೆ 154.65 ಕ್ವಿಂಟಲ ಅಕ್ಕಿ ಅಃಕಿ 3,85,000/- ರೂ ಹಾಗೂ ವಾಹನ ಸಂಖ್ಯೆ ಕೆಎ-32 ಎಎ-3212 ಅಃಕಿಃ 4,00,000/- ರೂ ಹೀಗೆ ಒಟ್ಟು 7,85,000/- ಅಕ್ಕಿ ವಶಪಡಿಸಿಕೊಂಡು ಆಹಾರ ಇಲಾಖೆಗೆ ವರ್ಗಾಯಿಸಲಾಗಿದೆ ಅಂತಾ ದೂರು ಇದೆ.

 

ಅಶೋಕ ನಗರ ಪೊಲೀಸ್‌ ಠಾಣೆ :-  ದಿನಾಂಕ:29.10.2022 ರಂದು 07:00 ಪಿ.ಎಂ.ಕ್ಕೆ ಶ್ರೀ ಶಿವಶರಣಪ್ಪ ಪಾಣೆಗಾಂವ ಎ.ಎಸ್.ಐ. ಅಶೋಕ ನಗರ ಠಾಣೆ ಇವರು ಠಾಣೆಗೆ ಹಾಜರಾಗಿ 04 ಜನ ಆರೋಪಿ ಮತ್ತು ಜಪ್ತಿ ಪಂಚನಾಮೆಯೊಂದಿಗೆ ಮುದ್ದೆಮಾಲನ್ನು ಹಾಜರ ಪಡಿಸಿ ಒಂದು ಜ್ಞಾಪನ ಪತ್ರ ನೀಡಿದ್ದರ ಸಾರಾಂಶವೆನೆಂದರೆ, ಇಂದು ದಿನಾಂಕ:29.10.2022  ರಂದು 04:00 ಪಿ.ಎಂ.ಕ್ಕೆ ನಾನು ಅಶೋಕ ನಗರ ಪೊಲೀಸ್ ಠಾಣೆಯಲ್ಲಿ ಇದ್ದಾಗ ಖಚಿತವಾದ ಬಾತ್ಮಿ ಬಂದಿದ್ದೆನೆಂದರೆ, ಅಶೋಕ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಕಣ್ಣಿ ಮಾರ್ಕೆಟ್ ಹತ್ತಿರ ಖುಲ್ಲಾ ಸ್ಥಳದಲ್ಲಿ ಕೆಲವು ಜನರು ಹಣವನ್ನು ಪಣಕ್ಕೆ ಹಚ್ಚಿ ಇಸ್ಪಿಟ ಜೂಜಾಟವನ್ನು ಆಡುತ್ತಿದ್ದಾರೆ ಅಂತ ಖಚಿತ ಬಾತ್ಮಿ ಬಂದ ಮೇರೆಗೆ  ಇಬ್ಬರು ಪಂಚರಾದ ಶ್ರೀ ಸಂದೀಪ ತಂದೆ ರವಿರಾಜ ಶೆಟ್ಟಿ ವಯ: 36 ವರ್ಷ ಜಾ: ಶೆಟ್ಟಿ ಉ: ಹೊಟೆಲ್ ವ್ಯಾಪಾರ ಸಾ|| ಸುಬೇದಾರ ಕಾಂಪ್ಲೆಕ್ಸ್, ಕೋರ್ಟ್ ಹತ್ತಿರ,ಕಲಬುರಗಿ ಮೊ.ನಂ.9731656031 ಮತ್ತು ಶ್ರೀ ಅಭಿಲಾಷ್ ತಂದೆ ವೈಜನಾಥ ದುಮ್ಮಣಸೂರ ವಯ:’24 ವರ್ಷ ಜಾ: ಎಸ್.ಸಿ.(ಮಾದಿಗ) ಉ: ಆಟೋ ಚಾಲಕ ಸಾ|| ವಿಜಯ ನಗರ, ಬ್ರಹ್ಮಪೂರ, ಕಲಬುರಗಿ ಮೊ.ನಂ.9916867111 ಪಂಚರನ್ನು ಪೊಲೀಸ್ ಠಾಣೆಗೆ ಬರಮಾಡಿಕೊಂಡು ವಿಷಯವನ್ನು ತಿಳಿಸಿ ದಾಳಿ ಮಾಡುವ ಕಾಲಕ್ಕೆ ನಮ್ಮೊಂದಿಗೆ ಹಾಜರಿದ್ದು, ಇಸ್ಪಿಟ್ ಜೂಜಾಟದ ಜಪ್ತಿ ಪಂಚನಾಮೆ ಬರೆಯಿಸಿಕೊಡಲು ತಿಳಿಸಿದ ಮೇರೆಗೆ ಉಭಯ ಪಂಚರು ಅದಕ್ಕೆ ಒಪ್ಪಿಕೊಂಡಿದ್ದು ಇರುತ್ತದೆ. ನಂತರ ನಾನು, ಸಿಬ್ಬಂದಿ ಜನರಾದ 1) ಶಿವಲಿಂಗ್ ಸಿ.ಪಿ.ಸಿ.-447 ಮತ್ತು  2) ನೀಲಕಂಠರಾಯ ಪಾಟೀಲ್ ಸಿ.ಪಿ.ಸಿ.-534 ಮತ್ತು  ನಾವು ಪಂಚರು ಎಲ್ಲರೂ ಕೂಡಿಕೊಂಡು 05:00 ಪಿ.ಎಂ.ಕ್ಕೆ ಪೊಲೀಸ್ ಠಾಣೆಯಿಂದ ಹೊರಟು ಬಾತ್ಮಿ ಸ್ಥಳವಾದ ಕಣ್ಣಿ ಮಾರ್ಕೆಟ್ ಹತ್ತಿರ ಹೋಗಿ ಸ್ವಲ್ಪ ದೂರದಲ್ಲಿ ನಿಂತು  ಮರೆಯಾಗಿ ನಿಂತು ನೋಡಲು ಖುಲ್ಲಾ ಸ್ಥಳದಲ್ಲಿ 04 ಜನರು ಹಣವನ್ನು ಪಣಕ್ಕೆ ಹಚ್ಚಿ ಅಂದರ ಬಾಹರ ಎಂಬ ಇಸ್ಪಿಟ ಜೂಜಾಟ ಆಡುತ್ತಿದ್ದಾಗ ಅವರ ಮೇಲೆ ದಾಳಿ ಮಾಡಿದ್ದು ಆಗ ಸಮಯ 05:15 ಪಿ.ಎಂ. ಆಗಿತ್ತು.  ಇಸ್ಟೇಟ್ ಜೂಜಾಟ ಆಡುತ್ತಿದ್ದ 04 ಜನ ಜೂಜುಕೊರರನ್ನು ಸಿಬ್ಬಂದಿಗಳ ಸಹಾಯದಿಂದ ಹಿಡಿದಿದ್ದು ನಂತರ ಒಬ್ಬೊಬ್ಬರಿಗೆ ವಿಚಾರಣೆ ಮಾಡಿ ಅಂಗ ಜಪ್ತಿ ಮಾಡಿ  ಹೆಸರು ವಿಳಾಸ ವಿಚಾರಿಸಲು 1.ವಿಶ್ವಾರಾಧ್ಯ ತಂದೆ ಫಕಿರಯ್ಯಾ ಹಿರೇಮಠ ವಯ: 43 ವರ್ಷ ಜಾ: ಜಂಗಮ ಉ: ಒಕ್ಕಲುತನ ಸಾ|| ಆಂದೋಲಾ ತಾ|| ಜೇವರ್ಗಿ ಹಾ|| ವ|| ಕರುಣೇಶ್ವರ ನಗರ, ಕಲಬುರಗಿ ಅಂತ ಹೇಳಿದ್ದು ಇತನಿಗೆ ಚೆಕ್‌ ಮಾಡಿದಾಗ ಇಸ್ಪೇಟ ಜುಜಾಟಕ್ಕೆ ಬಳಸಿದ ನಗದು ಹಣ 1,350/- ರೂಪಾಯಿ ಸಿಕ್ಕಿರುತ್ತದೆ. 2. ಶಿವಶರಣಪ್ಪ ತಂದೆ ಶ್ರೀಮಂತವಾಡಿ ವಯ: 44 ವರ್ಷ ಜಾ: ಲಿಂಗಾಯತ ಉ: ಹೊಟೆಲ್ ಕೆಲಸ ಸಾ|| ರೇವಣಸಿದ್ದೆಶ್ವರ ಕಾಲೋನಿ, ಕಲಬುರಗಿ ಅಂತ ಹೇಳಿದ್ದು, ಇತನಿಗೆ ಚೆಕ್‌ ಮಾಡಿದಾಗ ಅವನ ಹತ್ತಿರ ನಗದು ಹಣ 800/- ರೂಪಾಯಿ ಸಿಕ್ಕಿರುತ್ತವೆ 3. ಹಣಮಂತ ತಂದೆ ತಿಪ್ಪಣ್ಣಾ ಬಂಕೂರಕರ್ ವಯ: 45 ವರ್ಷ ಉ: ಹೊಟೆಲ್ ವ್ಯಾಪಾರ ಜಾ: ಎಸ್.ಸಿ.(ಮಾದಿಗ) ಸಾ|| ಹಳೇ ಆರ್.ಟಿ.ಓ. ಆಫೀಸ್ ಹತ್ತಿರ, ಗುಬ್ಬಿ ಕಾಲೋನಿ, ಕಲಬುರಗಿ  ಅಂತ ಹೇಳಿದ್ದು, ಇತನಿಗೆ ಚೆಕ್‌ ಮಾಡಿದಾಗ ಅವನ ಹತ್ತಿರ ನಗದು ಹಣ 900/- ರೂಪಾಯಿ ಸಿಕ್ಕಿರುತ್ತವೆ 4. ಭೀಮರಾಯ ತಂದೆ ಶಿವಣ್ಣಾ ಕೇಶಪಳ್ಳಿ ವಯ: 25 ವರ್ಷ ಜಾ: ಲಿಂಗಾಯತ ಉ: ಕಾರ ಚಾಲಕ ಸಾ|| ಗುಬ್ಬಿ ಕಾಲೋನಿ, ಕಲಬುರಗಿ ಅಂತ ಹೇಳಿದ್ದು, ಇತನಿಗೆ ಚೆಕ್‌ ಮಾಡಿದಾಗ ಅವನ ಹತ್ತಿರ ನಗದು ಹಣ 400/- ರೂಪಾಯಿ ಮತ್ತು 25  ಇಸ್ಪೀಟ ಎಲೆಗಳು ಸಿಕ್ಕಿರುತ್ತವೆ. ನಂತರ ಜೂಜಾಟ ಕಣದಲ್ಲಿ ಚೆಲ್ಲಪಿಲ್ಲಿಯಾಗಿ ಬಿದ್ದಿದ್ದ ಹಣ ಮತ್ತು ಇಸ್ಪಿಟ ಎಲೆಗಳನ್ನು ಎಣಿಸಲು 27 ಇಸ್ಪಿಟ ಎಲೆಗಳು  ಮತ್ತು ನಗದು ಹಣ 600/-  ರೂಪಾಯಿಗಳು ಸಿಕ್ಕಿರುತ್ತವೆ.  ಹೀಗೆ  ಒಟ್ಟು 04 ಜನ ಜೂಜುಕೊರರಿಂದ  ಮತ್ತು ಜೂಜಾಟದ ಕಣದಲ್ಲಿ ಒಟ್ಟು ನಗದು ಹಣ 4,050/- ಮತ್ತು 52 ಇಸ್ಪಿಟ ಎಲೆಗಳನ್ನು ನಮ್ಮ ಸಮಕ್ಷಮದಲ್ಲಿ ಜಪ್ತಿ ಮಾಡಿಕೊಂಡು 04 ಜನ ಜೂಜುಕೊರರನ್ನು ವಶಕ್ಕೆ ತೆಗೆದುಕೊಂಡಿದ್ದು ಇರುತ್ತದೆ. ಸದರಿಯವರ ವಿರುದ್ದ ಕಲಂ 87  ಕೆಪಿ ಎಕ್ಟ ಅಡಿಯಲ್ಲಿ ಕ್ರಮ ಕೈಕೊಳ್ಳುವಂತೆ ಸೂಚಿಸಿದ್ದರ ಸಾರಾಂಶದ ಮೇರೆಗೆ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

 

ಸಂಚಾರಿ ಪೊಲೀಸ್‌ ಠಾಣೆ -2 :-  ದಿನಾಂಕ 29/10/2022 ರಂದು ರಾತ್ರಿ 8:30 ಗಂಟೆಗೆ ಶ್ರೀ. ಮಲ್ಕಣ್ಣ ತಂದೆ ಯಶ್ವಂತರಾಯ ಬಿರಾದಾರ ವಯಃ 25 ವರ್ಷ ಜಾತಿಃ ಗಾಣಿಗೇರ ಉಃ ಒಕ್ಕಲುತನ ಮುಕ್ಕಾಃ ಕಲ್ಲೂರ(ಬಿ) ತಾಃ ಜೇವರ್ಗಿ ಜಿಲ್ಲಾಃ ಕಲಬುರಗಿ ಇವರು ಠಾಣೆಗೆ ಹಾಜರಾಗಿ  ಫಿರ್ಯಾದಿ ಅರ್ಜಿ ಸಲ್ಲಿಸಿದ್ದು ಸಾರಂಶವೆನೆಂದರೆ, ನಮ್ಮ ತಂದೆತಾಯಿಯವರಿಗೆ ನಾವು ನಾಲ್ಕು ಜನ ಹೆಣ್ಣು ಮಕ್ಕಳು ಮತ್ತು ಒಬ್ಬಳು ಹೆಣ್ಣುಮಗಳಿದ್ದು, ಇವರಲ್ಲಿ ಹಿರಿಯ ಅಣ್ಣನಾದ ಧರ್ಮರಾಜ ತಂದೆ ಯಶ್ವಂತರಾಯ ಬಿರಾದಾರ ವಯಃ 31 ವರ್ಷದವನಿದ್ದು, ಖಾಸಗಿ ಶೀಕ್ಷಕನಾಗಿದ್ದು ಮತ್ತು ಜೊತೆಯಲ್ಲಿ ಎಮ್.ಎಡ್ ಓದಿಕೊಂಡಿರುತ್ತಾನೆ. ದಿನಾಂಕ 27/10/2022 ರಂದು ರಾತ್ರಿ 8:15 ಗಂಟೆ ಸುಮಾರಿಗೆ ನಮ್ಮ ಪರಿಚಯದ ಬಸವರಾಜ ಪೊಲೀಸ್ ಪಾಟೀಲ ಮತ್ತು ಚಂದ್ರಶೇಖರ ನಾಗಾ ಇವರು ಫೋನ್ ಮಾಡಿ ತಿಳಿಸಿದ್ದೆನೆಂದರೆ, ನಿಮ್ಮ ಅಣ್ಣ ಧರ್ಮರಾಜ ಬಿರಾದಾರ ಈತನು ಈಗ ರಾತ್ರಿ 8:00 ಗಂಟೆ ಕಾಲಕ್ಕೆ ತಾನು ಬರುವ ಮೋಟರ ಸೈಕಲ ನಂ. ಕೆಎ 32 ವಿ 3822 ಇದರ ಮೇಲೆ ನಾಗನಹಳ್ಳಿ ರಿಂಗರೋಡ ಕಡೆಯಿಂದ ಸೇಡಂ ರಿಂಗರೋಡ ಕಡೆಗೆ ಬರುವಾಗ ಶಹಾಬಾದ ರಿಂಗರೋಡ ಸರ್ಕಲದ ಸಮೀಪದಲ್ಲಿ ಆತನ ಮುಂದುಗಡೆ ಕಾರ ನಂ. ಕೆಎ 33 ಎಮ್ 7825 ಇದರ ಚಾಲಕನು ವೇಗವಾಗಿ ಮುಂದೆ ನಡೆಸುತ್ತಾ, ಒಮ್ಮೇಲೆ ರೋಡಿನ ಬಲಕ್ಕೆ ತೆಗೆದುಕೊಂಡು ನಿಧಾನವಾಗಿ ನಿಲ್ಲಿಸಿದಂತೆ ಮಾಡಿ ಒಮ್ಮೇಲೆ ಜೋರಿನಿಂದ ಕಾರಿನ ಬಲಭಾಗದ ಹಿಂದಿನ ಡೋರ ತೆಗೆದಿರುವುದರಿಂದ ನಿಧಾನವಾಗಿ ಬರುತ್ತಿರುವ ಧರ್ಮರಾಜ ಬಿರಾದಾರ ಈತನಿಗೆ ಡಿಕ್ಕಿಯಾಗಿದ್ದರಿಂದ ಆತನು ಮೋಟರ ಸೈಕಲ ಸಮೇತ ಬಿದ್ದು, ತಲೆಯ ಮತ್ತು ಮುಖದ ಭಾಗಕ್ಕೆ ಭಾರಿ ಪ್ರಮಾಣದ ಗಾಯವಾಗಿ, ಎರಡು ಕೈಗಳು ಮುರದಿದ್ದು, ಬೆಹೋಶ ಸ್ಧಿತಿಯಲ್ಲಿರುತ್ತಾನೆ. ಕಾರ ಚಾಲಕನು ಅಲ್ಲಿಯೇ ಇಳಿದು ನೋಡಿ ಜನರು ಜಮಾ ಆಗುವುದನ್ನು ಕಂಡು ಅಲ್ಲಿಂದ ಕಾರನೊಂದಿಗೆ ಓಡಿಹೋಗಿರುತ್ತಾನೆ. ಆತನಿಗೆ ನೋಡಿರುತ್ತೆವೆ. ಧರ್ಮರಾಜನಿಗೆ ಎಕ್ಸಾನ್ ಆಸ್ಪತ್ರೆಗೆ ತೆಗೆದುಕೊಂಡು ಹೋಗುತ್ತಿರುತ್ತೇವೆ ಅಂತಾ ತಿಳಿಸಿದಕ್ಕೆ ನಾನು ಗಾಬರಿಗೊಂಡು ನನ್ನ ತಾಯಿ ಲಕ್ಷ್ಮಿಬಾಯಿ ಇವಳೊಂದಿಗೆ ಕಲಬುರಗಿಯ ಈ ಆಸ್ಪತ್ರೆಗೆ ಬಂದು ನೋಡಲಾಗಿ ನಮ್ಮ ಅಣ್ಣ ಧರ್ಮರಾಯನ ಮುಖಕ್ಕೆ ಮತ್ತು ತಲೆಯ ಭಾಗಕ್ಕೆ ಭಾರಿಗಾಯವಾಗಿ ಮಾತನಾಡುವ ಸ್ಧಿತಿಯಲ್ಲಿ ಇರಲಿಲ್ಲಾ ಮತ್ತು ಈತನ ಸ್ಧಿತಿಯು ಚಿಂತಾಜನಕವಾಗಿದ್ದು, ಅಲ್ಲಿಯೇ ಆಸ್ಪತ್ರೆಯಲ್ಲಿ ಈತನ ಉಪಚಾರಕ್ಕಾಗಿ ಉಳಿದುಕೊಂಡು ಹಣವನ್ನು ಸಂಗ್ರಹಿಸಿ ಆಸ್ಪತ್ರೆಗೆ ತೊರಿಸಿದ್ದು, ಕೇಸು ಮಾಡುವ ಬಗ್ಗೆ ಇಂದು ತಾಯಿಯೊಂದಿಗೆ ವಿಚಾರಿಸಿ ತಡಮಾಡಿ ಪೊಲೀಸ್ ಠಾಣೆಗೆ ಬಂದಿರುತ್ತೆನೆ. ಅಪಘಾತ ಪಡಿಸಿದ ಕಾರ ನಂ. ಕೆಎ 33 ಎಮ್ 7825 ಈ ಕಾರ ಮತ್ತು ಚಾಲಕನನ್ನು ಪತ್ತೆ ಮಾಡಿ ಕಾನೂನು ಪ್ರಕಾರ ಕ್ರಮ ಕೈಗೊಳ್ಳಬೇಕು ಅಂತಾ ಫಿರ್ಯಾದಿ ಅರ್ಜಿಯ ಸಾರಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

ಇತ್ತೀಚಿನ ನವೀಕರಣ​ : 14-11-2022 03:53 PM ಅನುಮೋದಕರು: ADMIN


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕಲಬುರಗಿ ನಗರ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080