ಅಭಿಪ್ರಾಯ / ಸಲಹೆಗಳು

ವಿಶ್ವವಿದ್ಯಾಲಯ ಪೊಲೀಸ್‌ ಠಾಣೆ :- ದಿನಾಂಕ : ೦೫-೦೯-೨೦೨೨ ರಂದು ೨.೩೦ ಪಿ.ಎಮ್ ದಿಂದ ೩.೩೦ ಪಿ.ಎಮ್ ಅವಧಿಯಲ್ಲಿ ಫಿರ್ಯಾದಿಯು ಮನೆಯ ಮುಂದೆ ಹಚ್ಚಿದ ಮೊ.ಸೈ ನಂ. ಕೆಎ೩೨ ಎಕ್ಸ ೩೭೭೪ ಅ.ಕಿ ೪೫೦೦೦/- ರೂ. ನೇದ್ದನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಎಂದು ಫಿರ್ಯಾದಿ ಕೊಟ್ಟ ಹೇಳಿಕೆ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

 

ಸಂಚಾರಿ ಪೊಲೀಸ ಠಾಣೆ -1 :- ದಿನಾಂಕ 29.09.2022 ರಂದು ಸಾಯಂಕಾಲ 5-30 ಗಂಟೆಗೆ ಸರ್ಕಾರಿ ಆಸ್ಪತ್ರೆಯ ಸಿಬ್ಬಂದಿಯವರು ಠಾಣೆಗೆ ಪೋನ ಮಾಡಿ ಜಗನ್ನಾಥ ಮತ್ತು ವಾಣಿ ಇಬ್ಬರೂ ರಸ್ತೆ ಅಪಘಾತ ಹೊಂದಿ ಉಪಚಾರ ಕುರಿತು ಬಂದು ಸೇರಿಕೆಯಾಗಿರುತ್ತಾರೆ ಅಂತಾ ತಿಳಿಸಿದ್ದರಿಂದ ನಾನು ಸರ್ಕಾರಿ ಆಸ್ಪತ್ರೆಗೆ ಭೆಟಿಕೊಟ್ಟು ಗಾಯಾಳು ಶ್ರೀಮತಿ ವಾಣಿ ಇವರನ್ನು ವಿಚಾರಿಸಲು ಅವರು ಕೊಟ್ಟ ಹೇಳಿಕೆ ಸಾರಂಶವೆನೆಂದರೆ ದಿನಾಂಕ 29-09-2022 ರಂದು ಮದ್ಯಾಹ್ನ 2-30 ಗಂಟೆ ಸುಮಾರಿಗೆ ನನ್ನ ಮಗನಾದ ಸ್ವರೂಪ ಇತನು ಅಬ್ಯಾಸ ಮಾಡುವ ರಾಷ್ಟ್ರೀಯ ಹೆದ್ದಾರಿ-50 ಸಿರನೂರ ಸಿಮಾಂತರದಲ್ಲಿ ಬರುವ ಸೆಂಟ ಜೈವೀರ ಕಾಲೇಜಕ್ಕೆ ಹೋಗುವ ಕುರಿತು ಹೀರಾಪೂರ ರಿಂಗ ರೋಡದಿಂದ ಜಗನ್ನಾಥ ಇವರು ಚಲಾಯಿಸುತ್ತೀರುವ ಆಟೋರಿಕ್ಷಾ ನಂಬರ ಕೆಎ-32/ಬಿ-2241 ನೇದ್ದರಲ್ಲಿ ಕುಳಿತು ಸೆಂಟ ಜೈವೀರ ಕಾಲೇಜಕ್ಕೆ ಹೋಗಿ ನನ್ನ ಮಗನ ಪ್ರಾಂಶುಪಾಲರನ್ನು ಬೇಟಿ ಮಾಡಿ ವಾಪಸ್ಸ ಜಗನ್ನಾಥ ಇವರ ಆಟೋರಿಕ್ಷಾ ವಾಹನದಲ್ಲಿ ಕುಳಿತು ಕಲಬುರಗಿ ಕಡೆಗೆ ಬರುವಾಗ ಜಗನ್ನಾಥ ಇತನು ರೋಡ ಎಡಗಡೆಯಿಂದ ರಾಮ ಮಂದಿರ ಸರ್ಕಲದಿಂದ ಆರ.ಪಿ ಸರ್ಕಲ ಕಡೆಗೆ ಆಟೋರಿಕ್ಷಾ ವಾಹನ ಚಲಾಯಿಸಿಕೊಂಡು ಹೋಗುತ್ತೀರುವಾಗ ರಾಮ ಮಂದಿರ ಹತ್ತೀರ ರೋಡ ಮೇಲೆ ಹಿಂದಿನಿಂದ ಸದಾನಂದ ಇತನು ತನ್ನ ಇನ್ನೊವಾ ಕೃಷ್ಟಾ ಕಾರನ್ನು ಅತಿವೇಗವಾಗಿ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ನಮ್ಮ ಆಟೋರಿಕ್ಷಾ ವಾಹನಕ್ಕೆ ಡಿಕ್ಕಿಪಡಿಸಿ ಅಪಘಾತ ಮಾಡಿ ನನಗೆ ಮತ್ತು ಜಗನ್ನಾಥ ಇವರಿಗೆ ಭಾರಿಗಾಯಗೊಳಿಸಿ ತನ್ನ ಕಾರ ಸಮೇತ ಓಡಿ ಹೋಗಿದ್ದು ಆತನ ಕಾರ ನಂಬರ ನಾವು ನೋಡಿರುವದಿಲ್ಲ ಆತನು ಮೊಬೈಲ ನಂಬರ 9686427555 ಇರುವದಾಗಿ ಬರೆದುಕೊಟ್ಟು ಹೋಗಿದ್ದು ಆತನ ಮೇಲೆ ಕಾನೂನು ಕ್ರಮ ಜರುಗಿಸಬೇಕು ಅಂತಾ ಫಿರ್ಯಾದಿ ದೂರು ಹೇಳಿಕೆ ಸಾರಂಶ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

ಇತ್ತೀಚಿನ ನವೀಕರಣ​ : 31-10-2022 06:20 PM ಅನುಮೋದಕರು: ADMIN


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕಲಬುರಗಿ ನಗರ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080