ಅಭಿಪ್ರಾಯ / ಸಲಹೆಗಳು

ಫರಹತಾಬಾದ ಪೊಲೀಸ ಠಾಣೆ:-  ದಿನಾಂಕ:29.08.2022 ರಂದು ರಾತ್ರಿ 8.30 ಗಂಟೆಗೆ ಪ್ರವೀಣಕುಮಾರ ತಂದೆ ಬಸವರಾಜ ಬಮ್ಮಣ್ಣಿ, ವ:35 ವರ್ಷ, ಜಾತಿ:ಲಿಂಗಾಯತ, ಉ:ಆಹಾರ ನಿರೀಕ್ಷಕರು, ತಹಸೀಲ ಕಾರ್ಯಾಲಯ, ಕಲಬುರಗಿ ಸರ್ಕಾರಿ ತರ್ಫೆ ಇವರು ಠಾಣೆಗೆ ಹಾಜರಾಗಿ ಮುದ್ದೇಮಾಲು, ಜಪ್ತಿಪಂಚನಾಮೆ ಹಾಗೂ ಮುಂದಿನ ಕ್ರಮಕ್ಕಾಗಿ ವರದಿ ಸಲ್ಲಿಸಿದ್ದರ ಸಾರಾಂಶವೇನೆಂದರೆ, ಇಂದು ದಿನಾಂಕ:29-08-2022 ರಂದು ಸಾಯಂಕಾಲ 5-30 ಗಂಟೆ ಸುಮಾರಿಗೆ ಕಲಬುರಗಿ-ಜೇವರ್ಗಿ ಮುಖ್ಯ ರಸ್ತೆಯ ನಂದಿಕೂರ ತಾಂಡಾದ ಹತ್ತಿರದಲ್ಲಿರುವ ಜೀ-ಧಾಬಾದ ಹತ್ತಿರ ಒಂದು ಟಿನ್ ಶೆಡನಲ್ಲಿ ಅಕ್ರಮವಾಗಿ ಗ್ಯಾಸ ಸಿಲೆಂಡರಗಳನ್ನು ಸಂಗ್ರಹಿಸಿಕೊಂಡು ಯಾವುದೇ ಲೈಸೆನ್ಸ್ ಪರವಾನಿಗೆ ಇಲ್ಲದೇ ಅಡುಗೆಗೆ ಉಪಯೋಗಿಸುವ ಸಿಲೆಂಡರಗಳನ್ನು ಅಟೋರಿಕ್ಷಾಗಳಿಗೆ ತುಂಬುತ್ತಿದ್ದಾರೆ ಅಂತಾ ಬಂದ ಬಾತ್ಮಿ ಮೇರೆಗೆ ಸದರಿ ವಿಷಯವನ್ನು ಮೇಲಾಧಿಕಾರಿಗಳಿಗೆ ತಿಳಿಸಿ ದಾಳಿ ಮಾಡುವ ಕುರಿತು ನಾನು ಶ್ರೀ ಎ.ವಾಜೀದ ಪಟೇಲ ಪಿ.ಐ., ಸಿ.ಸಿ.ಬಿ. ಘಟಕ ಕಲಬುರಗಿ ರವರಿಗೆ ಮಾಹಿತಿ ತಿಳಿಸಿ ದಾಳಿ ಕಾಲಕ್ಕೆ ಹಾಜರಿದ್ದು ಸಹಕರಿಸುವಂತೆ ಕೋರಿಕೊಂಡು ಕಲಬುರಗಿ ನಗರದ ರಾಮಮಂದಿರ ಸರ್ಕಲ ಹತ್ತಿರ ಬರುವಂತೆ ಕೋರಿಕೊಂಡಿದ್ದು, ಅದರಂತೆ ಶ್ರೀ ಎ.ವಾಜೀದ ಪಟೇಲ ಪಿ.ಐ., ಸಿ.ಸಿ.ಬಿ. ಘಟಕ ಕಲಬುರಗಿ ರವರು ತಮ್ಮ ಸಿಬ್ಬಂದಿಯವರಾದ 1) ಶ್ರೀ ಶಿವಪ್ಪ ಪಿ.ಎಸ್.ಐ., 2) ಕೇಶುರಾಯ ಹೆಚ್.ಸಿ-223, 3) ಸುನೀಲಕುಮಾರ ಹೆಚ್.ಸಿ-167, 4) ವಿಶ್ವನಾಥ ಸಿಪಿಸಿ-686, 5) ಅಶೋಕ ಸಿಪಿಸಿ-647, 6) ನಾಗರಾಜ ಸಿಪಿಸಿ-1257, ರವರು ರಾಮಮಂದಿರ ಸರ್ಕಲ ಹತ್ತಿರ ಸಾಯಂಕಾಲ 6-00 ಗಂಟೆಗೆ ಬಂದಿದ್ದು, ನಂತರ ಇಬ್ಬರೂ ಪಂಚರಾದ 1) ಶ್ರೀ ಅಮರೇಶ ತಂದೆ ಮಲ್ಲಿಕಾರ್ಜುನ ಹಾಗರಗಿ, ವ:29 ವರ್ಷ, ಜಾತಿ:ಜಮಾದಾರ, ಉ:ಖಾಸಗಿ ಕೆಲಸ, ಸಾ:ಫರತಾಬಾದ, ತಾ:ಜಿ:ಕಲಬುರಗಿ ಮೊ.ನಂ.9916830818.  2) ಶ್ರೀ ಪೀರಪ್ಪ ತಂದೆ ಅಣ್ಣಾರಾವ ಡೆಂಗಿ, ವ:44 ವರ್ಷ, ಜಾತಿ:ಎಸ್.ಸಿ., ಉ:ಖಾಸಗಿ ಕೆಲಸ, ಸಾ:ಫರತಾಬಾದ, ತಾ:ಜಿ:ಕಲಬುರಗಿ ಮೊ.ನಂ.9591454546 ಇವರನ್ನು ಕೂಡಾ ರಾಮಮಂದಿರ ಸರ್ಕಲ ಹತ್ತಿರ ಸಾಯಂಕಾಲ 6-00 ಗಂಟೆಗೆ ಬರಮಾಡಿಕೊಂಡು ದಾಳಿ ಕಾಲಕ್ಕೆ ಹಾಜರಿದ್ದು ಪಂಚರಾಗುವಂತೆ ಕೇಳಿಕೊಂಡ ಮೇರೆಗೆ ಉಭಯ ಪಂಚರು ಒಪ್ಪಿಕೊಂಡಿರುತ್ತಾರೆ. ನಂತರ ನಾನು, ಪಂಚರು ಮತ್ತು ಶ್ರೀ ಎ.ವಾಜೀದ ಪಟೇಲ ಪಿ.ಐ., ಸಿ.ಸಿ.ಬಿ. ಘಟಕ ಕಲಬುರಗಿ ಹಾಗೂ ಅವರ ಸಿಬ್ಬಂದಿಯವರಾದ 1) ಶ್ರೀ ಶಿವಪ್ಪ ಪಿ.ಎಸ್.ಐ., 2) ಕೇಶುರಾಯ ಹೆಚ್.ಸಿ-223, 3) ಸುನೀಲಕುಮಾರ ಹೆಚ್.ಸಿ-167, 4) ವಿಶ್ವನಾಥ ಸಿಪಿಸಿ-686, 5) ಅಶೋಕ ಸಿಪಿಸಿ-647, 6) ನಾಗರಾಜ ಸಿಪಿಸಿ-1257 ರವರೊಂದಿಗೆ ಸರ್ಕಾರಿ ಜೀಪ ನಂ.ಕೆಎ-32-ಜಿ-1249 ನೇದ್ದರಲ್ಲಿ ಹಾಗೂ ಕೆಲವು ಸಿಬ್ಬಂದಿಯವರು ತಮ್ಮ ತಮ್ಮ ಮೋಟಾರಸೈಕಲಗಳ ಮೇಲೆ ಸಾಯಂಕಾಲ 6-15 ಗಂಟೆಗೆ ರಾಮಮಂದಿರ ಸರ್ಕಲದಿಂದ  ಹೊರಟಿದ್ದು, ಬಾತ್ಮಿ ಬಂದ ಸ್ಥಳವಾದ ಕಲಬುರಗಿ-ಜೇವರ್ಗಿ ಮುಖ್ಯ ರಸ್ತೆಯ ನಂದಿಕೂರ ತಾಂಡಾದ ಹತ್ತಿರದಲ್ಲಿರುವ ಜೀ-ಧಾಬಾದ ಹತ್ತಿರ ಸಾಯಂಕಾಲ 6-25 ಗಂಟೆಗೆ ತಲುಪಿ ಅಲ್ಲಿಯೇ ಮರೆಯಲ್ಲಿ ನಿಂತುಕೊಂಡು ನೋಡಲಾಗಿ ಅಲ್ಲಿ ಒಂದು ಟಿನ್ ಶೆಡನಲ್ಲಿ ಒಬ್ಬ ವ್ಯಕ್ತಿ ಗ್ಯಾಸ ಸಿಲೆಂಡರಗಳಿಂದ ಅಟೋರೀಕ್ಷಾಗಳಿಗೆ ತುಂಬುತ್ತಿದ್ದು ನೋಡಿ ಖಚಿತಪಡಿಸಿಕೊಂಡು ಸಾಯಂಕಾಲ 6-30 ಗಂಟೆಗೆ ಪಂಚರ ಸಮಕ್ಷಮ ನಾನು ಮತ್ತು ಸಿ.ಸಿ.ಬಿ. ಘಟಕದ ಪಿ.ಐ. ಸಾಹೇಬರು ಹಾಗೂ ಸಿಬ್ಬಂದಿಯವರ ಸಹಾಯದಿಂದ ಎಲ್ಲರೂ ಕೂಡಿ ಒಮ್ಮಲ್ಲೇ ದಾಳಿ ಮಾಡಿ ಸದರಿ ವ್ಯಕ್ತಿಗೆ ಹಿಡಿದು ಆತನ ಹೆಸರು ವಿಳಾಸ ವಿಚಾರಿಸಲಾಗಿ ರೇವಣಸಿದ್ದಪ್ಪ ತಂದೆ ಜಗನ್ನಾಥ ಕಾಮಶೆಟ್ಟಿ, ವ:26 ವರ್ಷ, ಜಾತಿ:ಲಿಂಗಾಯತ, ಉ:ಖಾಸಗಿ ಕೆಲಸ, ಸಾ:ಗೊಬ್ಬುರವಾಡಿ, ತಾ:ಜಿ:ಕಲಬುರಗಿ, ಹಾವ:ನಂದಿಕೂರ ತಾಂಡಾ, ತಾ:ಜಿ:ಕಲಬುರಗಿ ಅಂತಾ ತಿಳಿಸಿದನು.   ಸದರಿಯವನ ಹತ್ತಿರ ಯಾವುದಾದರೂ ಲೈಸೆನ್ಸ್ ಪರವಾನಿಗೆ ವಗೈರೆ ತೋರಿಸುವಂತೆ ಕೇಳಿದಾಗ ತಮ್ಮ ಹತ್ತಿರ ಯಾವುದೇ ಲೈಸೆನ್ಸ್ ಪರವಾನಿಗೆ ಇರುವುದಿಲ್ಲ ಅಂತಾ ತಿಳಿಸಿದರು.  ಅವನ ಹತ್ತಿರ ಇದ್ದ ಗ್ಯಾಸ ಸಿಲೆಂಡರಗಳನ್ನು ಪರಿಶೀಲಿಸಲಾಗಿ 1) ಒಟ್ಟು 10 ಹೆಚ್.ಪಿ. ಕಂಪನಿಯ ಗ್ಯಾಸ ಸಿಲೆಂಡರ್ ಗಳು  ದೊರೆತಿದ್ದು,  ಅದರಲ್ಲಿ 07 ತುಂಬಿದ ಸಿಲೆಂಡರಗಳಿದ್ದು, 03 ಖಾಲಿ ಸಿಲೆಂಡರಗಳು ಇರುತ್ತವೆ. ಸದರಿ ತುಂಬಿದ ಸಿಲೆಂಡರಗಳಿಗೆ ಅದರ ಅ.ಕಿ. ಒಂದಕ್ಕೆ ರೂ.2000/- ರಂತೆ ಒಟ್ಟು 07 ಸಿಲೆಂಡರಗಳಿಗೆ ರೂ.14,000/- ಇದ್ದು, 03 ಖಾಲಿ ಸಿಲೆಂಡರಗಳಿಗೆ ಅ.ಕಿ. ಒಂದಕ್ಕೆ 1000/- ರಂತೆ ಒಟ್ಟು ರೂ.3000/- ಇದ್ದು,  2) 03 ಇಂಡೆನ್ ಕಂಪನಿಯ ಗ್ಯಾಸ ಸಿಲೆಂಡರ್ ಗಳು ದೊರೆತಿದ್ದು,  ಅದರಲ್ಲಿ 02 ತುಂಬಿದ ಸಿಲೆಂಡರಗಳಿದ್ದು, 01 ಖಾಲಿ ಸಿಲೆಂಡರ ಇರುತ್ತವೆ. ಸದರಿ ತುಂಬಿದ ಸಿಲೆಂಡರಗಳಿಗೆ ಅದರ ಅ.ಕಿ. ಒಂದಕ್ಕೆ ರೂ.2000/- ರಂತೆ ಒಟ್ಟು 02 ಸಿಲೆಂಡರಗಳಿಗೆ ರೂ.4,000/- ಇದ್ದು, ಮತ್ತು 01 ಖಾಲಿ ಸಿಲೆಂಡರ ಅ.ಕಿ. ರೂ.1000/- ಇರುತ್ತದೆ.  3) 01 ಭಾರತ ಗ್ಯಾಸ ಕಂಪನಿಯ ಸಿಲೆಂಡರ ದೊರೆತಿದ್ದು, ಅದು ಖಾಲಿ ಇದ್ದು, ಅದರ ಅ.ಕಿ. ರೂ.1000/- ಇರುತ್ತದೆ.  ಹೀಗೆ ಒಟ್ಟು 14 ಗ್ಯಾಸ ಸಿಲೆಂಡಗಳು ದೊರೆತಿದ್ದು, ಅವುಗಳಲ್ಲಿ 09 ತುಂಬಿದ ಸಿಲೆಂಡರಗಳು ಮತ್ತು 05 ಖಾಲಿ ಸಿಲೆಂಡರಗಳು ದೊರೆತಿರುತ್ತವೆ. 4) 1 ವಿಡಿಯೋಕಾನ ಕಂಪನಿಯ ತೂಕದ ಯಂತ್ರದ ಮಷೀನ ದೊರೆತಿದ್ದು, ಅದರ ಅ.ಕಿ. ರೂ.3,000/-, 5) ಒಂದು ½ ಹೆಚ್.ಪಿ. ಮೋಟಾರ ದೊರೆತಿದ್ದು, ಅದರ ಅ.ಕಿ. ರೂ.2000/- ಹೀಗೆ ಒಟ್ಟು ಅ.ಕಿ.ರೂ.28,000/- ಕಿಮ್ಮತ್ತಿನ ಮುದ್ದೇಮಾಲುಗಳನ್ನು ದೊರೆತಿದ್ದು ಪಂಚರ ಸಮಕ್ಷಮ ಜಪ್ತು ಮಾಡಿಕೊಂಡಿದ್ದು ಇರುತ್ತದೆ. ಸ್ಥಳದಲ್ಲಿಯೇ ಕುಳಿತು ಜಪ್ತಿ ಪಂಚನಾಮೆಯನ್ನು ಸಾಯಂಕಾಲ 6-30 ಗಂಟೆಯಿಂದ 7-30 ಗಂಟೆಯವರೆಗೆ  ಲ್ಯಾಪಟಾಪದಲ್ಲಿ ಲೈಟಿನ ಬೆಳಕಿನಲ್ಲಿ ಟೈಪ ಮಾಡಿದ್ದು ಇರತ್ತದೆ. ನಂತರ ಆರೋಪಿತನು ಮತ್ತು ಜಪ್ತಿ ಮಾಡಿದ ಮುದ್ದೇಮಾಲಿನೊಂದಿಗೆ ಫರತಾಬಾದ ಪೊಲೀಸ್ ಠಾಣೆಗೆ ಬಂದು ಜಪ್ತಿ ಮುದ್ದೇಮಾಲುಗಳನ್ನು ಮತ್ತು ಆರೋಪಿತನನ್ನು ತಮ್ಮ ತಾಬೆಗೆ ಒಪ್ಪಿಸಿದ್ದು ಇರುತ್ತದೆ.  ನಂತರ ನನ್ನ ವರದಿಯನ್ನು ತಯಾರಿಸಿ ಸದರಿ ಆರೋಪಿತರ ವಿರುದ್ದ ಅಗತ್ಯ ವಸ್ತುಗಳ ಕಾಯ್ದೆ 1955, 3&7 ಆಕ್ಟ್ ಮತ್ತು ಲಿಕ್ವಿಫೈಡ್ ಪೆಟ್ರೋಲಿಯಂ ಗ್ಯಾಸ ಆರ್ಡರ 2000, 6 & 7 ಆಕ್ಟ್ ಅಡಿಯಲ್ಲಿ ಕಾನೂನು ಕ್ರಮ ಜರುಗಿಸುವಂತೆ ಕೋರಲಾಗಿದೆ ಅಂತಾ ಇತ್ಯಾದಿ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

 

ಎಂ.ಬಿ.ನಗರ ಪೊಲೀಸ ಠಾಣೆ :- ದಿನಾಂಕ: ೧೯/೦೮/೨೦೨೨ ರಂದು ಫಿರ್ಯಾದಿ ತನ್ನ ಮನೆ ಮುಂದೆ ರಾತ್ರಿ ಸಮಯದಲ್ಲಿ ತನ್ನ ಮೊಟರ್ ಸೈಕಲ್ ನಂ ಕೆಎ ೩೨ ಇಜೆ ೩೧೮೮ ಅ.ಕಿ ೧೦೦೦೦ ನೇದ್ದು ಯಾರೋ ಕಳ್ಳರು ಕಳ್ಳತನ ಮಾಢಿಕೊಂಡು ಹೋಗಿರುತ್ತಾರೆ ಅಂತಾ ಇತ್ಯಾದಿ ಫಿರ್ಯಾದಿ ಕೊಟ್ಟ ಹೇಳಿಕೆ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

 

ಎಂ.ಬಿ.ನಗರ ಪೊಲೀಸ ಠಾಣೆ :- ಫಿರ್ಯಾದಿ ಬುದ್ದ ಮಂದಿರದ ಹತ್ತಿರ ಹೋಗುತ್ತಿರುವಾಗ ಆರೋಪಿತರು ತಡೆದು ನಿಲ್ಲಿಸಿ ನಮ್ಮ ಜೊತೆ ತಿರುಗಾಡುವುದು ಬಿಟ್ಟು ಯಾಕಾಪೂರದವರ ಜೊತೆ ತಿರುಗಾಡುತ್ತಿ ಜಗಳ ತೆಗೆದು ಅವಾಚ್ಯವಾಗಿ ಬೈದು ಹೊಡೆ ಬಡೆ ಮಾಡಿ ಜೀವ ಭಯ ಹಾಕಿರುತ್ತಾರೆ ಎಂದು ಫಿರ್ಯಾದಿ ಹೇಳಿಕೆ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

 

ಚೌಕ ಪೊಲೀಸ ಠಾಣೆ :-  ದಿನಾಂಕ 29/08/2022 ರಂದು ಮಧ್ಯಾಹ್ನ 3-00 ಗಂಟೆಗೆ ಗಾಯಾಳು ಸುಭಾಷ ತಂದೆ  ಬಾಬು ರಾಠೋಡ ಇವರ ಅಕ್ಕಳಾದ ಶ್ರೀಮತಿ ವಿಜಯಲಕ್ಷ್ಮೀ ಗಂಡ ಸಂಜು ಚವ್ಹಾಣ  ಸಾ:ಫೀಲ್ಟರ ಬೇಡ ಆಶ್ರಯ ಕಾಲನಿ ಕಲಬುರಗಿ ಇವರು ಠಾಣೆಗೆ ಹಾಜರಾಗಿ ತನ್ನ ತಮ್ಮ ಸುಭಾಷ ತಂದೆ ಬಾಬು ರಾಠೋಡ ಇವರಿಗೆ ಹಲ್ಲೆಯಾದ ವಿಷಯದಲ್ಲಿ ಕನ್ನಡದಲ್ಲಿ ಗಣಕೀಕೃತ ಮಾಡಿದ ದೂರು ಕೊಟ್ಟಿದ್ದರ ಸಾರಾಂಶವೆನೆಂದೆರೆ, ಈ ಮೂಲಕ ತಮಗೆ ದೂರು ಕೊಡುವದೆನೆಂದೆರೆ, ದಿನಾಂಕ 23/08/2022 ರಂದು ಬೆಳಿಗ್ಗೆ 06-30 ಗಂಟೆ ಸುಮಾರಿಗೆ ಫೀಲ್ಟರಬೇಡ ಗೇಟ ಹತ್ತಿರ ಇರುವ ಹೋಟಲದಲ್ಲಿ ವ್ಯಾಪರ ಮಾಡುತ್ತಿದ್ದಾಗ ಸುಶೀಲಾ ಮಾಡುವ ಅಳ್ಳು ಮುಗಿದಿದ್ದರಿಂದೆ ಅಲ್ಲೇ ಇರುವ ಒಬ್ಬ ಗಿರಾಕಿ ಅವನ ಹೆಸರು ಗೊತ್ತಿಲ್ಲಾ ಅವನ ಮೋಟಾರ ಸೈಕಲ ತೆಗೆದುಕೊಂಡು ಅಯ್ಯರವಾಡಿ ಹತ್ತಿರ ಕಿರಾಣಿ ಅಂಗಡಿಯಿಂದ 03 ಕೆ.ಜಿ. ಅಳ್ಳು ತೆಗೆದುಕೊಂಡು ಪ್ರಕಾಶ ಮಾಲ ಮುಖಾಂತರವಾಗಿ ಹೋಟಲದ ಕಡೆಗೆ ಹೋಗುತ್ತಿರುವಾಗ ಪ್ರಕಾಶ ಮಾಲ ಹತ್ತಿರ ನನಗೆ ಪರಿಚಯದ ನಮ್ಮ ಓಣಿಯ ಪಿಂಟು ತಂದೆ ವಿದ್ಯಾಸಾಗರ ಮತ್ತು ಕಿರಣ ತಂದೆ ಶಾಂತಪ್ಪ ಇವರು ಸಿಗಲು ನನಗೆ ತಮ್ಮ ಹೋಟಲ ತನಕ ಬಿಡು ಅಂತಾ ಹೇಳಲು ಅವರಿಗೆ ಮೋಟಾರ ಸೈಕಲ ಹಿಂದೆ ಕೂಡಿಸಿಕೊಂಡು ಹೊರಟಾಗ ಅವರು ಹೋಟಲ ಕಡೆ ಬೇಡ  ಕಾಟನ ಮಾರ್ಕೇಟ ಕುರಿ ದವಾಖಾನೆ ಕಡೆ ನಡಿ ಅಂತಾ ಹೇಳಲು ಬೆಳಗಿನ 7-30 ಗಂಟೆ ಸುಮಾರಿಗೆ ಕಾಟನ ಮಾರ್ಕೇಟ ದಲ್ಲಿ ಕುರಿ ದವಾಖಾನೆ ಎದುರುಗಡೆ ಬಂದಾಗ ಅವರಿಗೆ ಮೋಟಾರ ಸೈಕಲದಿಂದ ಇಳಿಸಿದೆನು. ಅವರಿಬ್ಬರು ನನಗೆ ಸ್ವಲ್ಪ ನಿಂದರೋ ಅಂತಾ ಹೇಳಿದಾಗ ಅವರಿಗೆ ನ್ಯಾಸ್ಟ ಮಾಡುವದಿದೆ ಹೋಗುತ್ತೇನೆ ಎಂದು ಹೇಳಿದಾಗ ಪಿಂಟು ಇತನು ನನಗೆ ನಿನ್ನ ಅಕ್ಕನ ತುಲ್ಲ್ ನಿಂದರ ಅಂದರ ನಿಂದರಲ್ಲಾ ಭೋಸಡಿ ಮಗನೇ ಅಂತಾ ಬೈಯ್ಯುತ್ತಾ ಅಲ್ಲೇ ಬಿದ್ದ ಒಂದು ದೊಡ್ಡ ಕಲ್ಲು ಬಲ ಟೊಂಕದ ಮೇಲೆ ಮತ್ತು ಮತ್ತೊಂದು ಏಟು ಬಲಟೊಂಕದ ಕೆಳೆಗೆ ಹೊಡೆದು ಭಾರಿ ಗುಪ್ತಗಾಯ ಗೊಳಿಸಿದನು. ಕಿರಣ ಇತನು ಕೂಡಾ ಅಲ್ಲೇ ಬಿದ್ದ ಮತ್ತೊಂದು ಕಲ್ಲು ತೆಗೆದುಕೊಂಡು ನನ್ನ  ಎಡ ಎದೆ ಮೇಲೆ ಹೊಡೆದು ಗುಪ್ತಗಾಯಗೊಳಿಸಿದನು. ಈ ಘಟನೆ ಅದೇ ದಾರಿಯಿಂದ ಬರುತ್ತಿದ್ದ ನಮ್ಮ ಓಣಿ ನಾಗಮ್ಮಾ ಗಂಡ ಹಣಮಂತ ಮತ್ತು ನಮ್ಮ ತಮ್ಮ ಅಶೋಕ ಇವರುಗಳು ನೋಡಿ ಜಗಳಾ ಬಿಡಿಸಿಕೊಂಡರು. ನಂತರ ಪಿಂಟು ಇತನು ನನಗೆ ಇನ್ನೊಮ್ಮೆ ನಮ್ಮ ಮಾತು ಕೇಳದೇ ಹೋದರೆ ಜೀವ ಸಹಿತ ಬಿಡುವುದಿಲ್ಲಾ ಎಂದು ಜೀವ ಭಯ ಹಾಕಿದನು. ನನ್ನ ತಮ್ಮ ಅಶೋಕ ಇತನು 108 ಅಂಬುಲೈನ್ಸ ಗಾಡಿಗೆ ಪೋನ ಮಾಡಿದಾಗ ಸ್ವಲ್ಪ ಸಮುಯದಲ್ಲಿ 108 ಅಂಬುಲೈನ್ಸ ಗಾಡಿ ಬರಲು ಅದರಲ್ಲಿ ನನಗೆ ನಾಗಮ್ಮಾ ಮತ್ತು ನನ್ನ ತಮ್ಮ ಅಶೋಕ ಇಬ್ಬರು ಕೂಡಿಸಿಕೊಂಡು ಉಪಚಾರ ಕುರಿತು ಜಿಲ್ಲಾ ಸರಕಾರಿ ಆಸ್ಪತ್ರೆ ಕಲಬುರಗಿಗೆ ತಂದು ಸೇರಿಕೆ ಮಾಡಿದರು. ಆ ದಿನ ಚೌಕ ಪೊಲೀಸ ಠಾಣೆಯ ಪೊಲೀಸರು ಎಂ.ಎಲ್.ಸಿ. ವಿಚಾರಣೆಗಾಗಿ ಬಂದಾಗ ಪೊಲೀಸರಿಗೆ ನಂತರ ದೂರು ಕೊಡುವುದಾಗಿ ತಿಳಿಸಿರುತ್ತೇನೆ. ವೈದ್ಯರು ಮರುದಿನ ನನಗೆ ಉಪಚಾರ ಮಾಡುವ ಕಾಲಕ್ಕೆ ಸೊಂಟದ ಮೂಳೆ ಮುರಿದಿರುತ್ತದೆ ಎಂದು ತಿಳಿಸಿರುತ್ತಾರೆ.  ಈ ಕಾರಣದಿಂದ ದೂರು ಕೊಡಲು ತಡವಾಗಿರುತ್ತದೆ. ಈ ದೂರುನ್ನು ಇಂದು ದಿನಾಂಕ 29/08/2022 ರಂದು ನಮ್ಮ ಅಕ್ಕ  ವಿಜಯಲಕ್ಷ್ಮೀ ಗಂಡ ಸಂಜು ಚವ್ಹಾಣ ಇವರ ಕೈಯಲ್ಲಿ ಕೊಟ್ಟು ಕಳುಹಿಸಿಕೊಡುತ್ತಿದ್ದು, ನನಗೆ ಅವಾಚ್ಯ ಬೈದು ಕಲ್ಲಿನಿಂದ ಹೊಡೆದು ಭಾರಿ ಗುಪ್ತಗಾಯಗೊಳಿಸಿ ಜೀವ ಭಯ ಹಾಕಿದ ಪಿಂಟು ತಂದೆ ವಿದ್ಯಾಸಾಗರ ಮತ್ತು ಕಿರಣ ತಂದೆ ಶಾಂತಪ್ಪ ಸಾ: ಇಬ್ಬರು ಫೀಲ್ಟರ ಬೇಡ ಆಶ್ರಯ ಕಾಲನಿ ಕಲಬುರಗಿ ಇವರುಗಳ ವಿರುದ್ಧ ಕಾನೂನು ಕ್ರಮ ಜರುಗಿಸಬೇಕೆಂದು ಕೋರುತ್ತೇನೆ. ಎಂದು ಕೊಟ್ಟ ದೂರಿನ ಆಧಾರದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

 

ಅಶೋಕ ನಗರ ಪೊಲೀಸ ಠಾಣೆ :-  ದಿನಾಂಕ:29.08.2022 ರಂದು  06:00 ಪಿ.ಎಂ.ಕ್ಕೆ ಫಿರ್ಯಾದಿ ಶ್ರೀ ಶ್ರೀಕಾಂತ ತಂದೆ ಕಾಶಿನಾಥ ಮೊತಕಪಲ್ಲಿ ವಯ: 32 ವರ್ಷ ಜಾ: ಲಿಂಗಾಯತ  ಉ: ವ್ಯಾಪಾರ ಸಾ|| ಗೋದುತಾಯಿ ಕಾಲೋನಿ ಕಲಬುರಗಿ ಇವರು ಠಾಣೆಗೆ ಹಾಜರಾಗಿ ಲಿಖಿತ ಫಿರ್ಯಾದಿ ಅರ್ಜಿ ಸಲ್ಲಿಸಿದ್ದರ ಸಾರಾಂಶವೆನೆಂದರೆ, ನಮ್ಮ ತಂದೆ ತಾಯಿಗೆ ನಾವು ಒಟ್ಟು 2 ಜನ ಗಂಡು ಮಕ್ಕಳು ಮತ್ತು 1 ಹೆಣ್ಣು ಮಗಳು ಇರುತ್ತಾಳೆ ನಮ್ಮ ಅಕ್ಕ ಮತ್ತು ತಮ್ಮ ಇಬ್ಬರು ಬೆಂಗಳೂರಿನಲ್ಲಿ ಇರುತ್ತಾರೆ. ನಮ್ಮ ತಂದೆ ಕಾಶಿನಾಥ ಇವರು ವಕೀಲ ವೃತ್ತಿ ಮಾಡುತ್ತಾರೆ. ನಮ್ಮ ತಾಯಿ ಪುಷ್ಪಾವತಿ ಇವರು ಮನೆ ಕೆಲಸ ಮಾಡಿಕೊಂಡು ಇರುತ್ತಾರೆ. ನನ್ನ ಹೆಂಡತಿ ಶುಷ್ಮಾ ಇವಳು ಮನೆ ಕೆಲಸ ಮಾಡಿಕೊಂಡು ಇರುತ್ತಾಳೆ. ನಾನು ಕಲಬುರಗಿ ನಗರದ ಫೀಲ್ಟರಬೆಡ್ ಏರಿಯಾದಲ್ಲಿ ಹೆಚ್.ಪಿ. ಗ್ಯಾಸ್ ಏಜೇನ್ಸಿ ಇಟ್ಟುಕೊಂಡು ಇರುತ್ತೇನೆ. ನಾವು ನಮ್ಮ ಮನೆಗೆ ಸಿ.ಸಿ.ಟಿ.ವಿ ಅಳವಡಿಸಿರುತ್ತೇವೆ.ಹೀಗಿದ್ದು ದಿನಾಂಕ:27.08.2022 ರಂದು ನಾನು ನನ್ನ ಸ್ನೇಹಿತರ ಸಂಗಡ ಶ್ರೀಶೈಲಕ್ಕೆ ಹೋಗಿದ್ದು ಮತ್ತು ನನ್ನ ಹೆಂಡತಿ ತನ್ನ ತವರು ಮನೆಗೆ ಹೋಗಿರುತ್ತಾಳೆ. ಅಂದು ರಾತ್ರಿ 10:00 ಗಂಟೆಗೆ ಊಟಮಾಡಿ ನಮ್ಮ ತಂದೆ ತಾಯಿ ಮನೆಯಲ್ಲಿ ಮಲಗಿಕೊಂಡಿರುತ್ತಾರೆ. ನಂತರ ದಿನಾಂಕ:28.08.2022 ರಂದು ಬೆಳಿಗ್ಗೆ 06:30 ಗಂಟೆಗೆ ನಮ್ಮ ತಂದೆ ಎದ್ದು ನೋಡಲಾಗಿ ಮನೆಯ ಅಡುಗೆ ಮನೆಯ ಕಿಟ್ಟಿಯ ಗ್ರೀಲ್ ತೆಗೆದಿದ್ದು ಇರುತ್ತದೆ. ನಂತರ ನಮ್ಮ ತಂದೆ ಗಾಬರಿಯಾಗಿ ನಮ್ಮ ತಾಯಿಗೆ ಎಬ್ಬಿಸಿದ್ದು ಇಬ್ಬರು ಕೂಡಿ ನನ್ನ ಬೆಡರೂಮಗೆ ಹೋಗಿ ನೋಡಲು ಅಲ್ಮಾರಾದಲ್ಲಿದ್ದ ಬಟ್ಟೆಗಳೆಲ್ಲಾ ಚೆಲ್ಲಾಪಿಲ್ಲಿಯಾಗಿ ಬಿದಿದ್ದು ನೋಡಿ ನನಗೆ ಕರೆಮಾಡಿ ತಿಳಿಸಿದ್ದೆನೆಂದರೆ, ನಮ್ಮ ಮನೆಯು ಕಳ್ಳತನವಾಗಿದ್ದು ನಿನ್ನ ಬೆಡರೂಮನಲ್ಲಿ ಅಲ್ಮಾರಿ ತೆಗೆದಿದ್ದು ಬೆಟ್ಟೆಗಳೆಲ್ಲಾ ಚೆಲ್ಲಾಪಿಲ್ಲಿಯಾಗಿ ಬಿದ್ದಿರುತ್ತವೆ ನೀನು ಅಲ್ಮಾರಾದಲ್ಲಿ ಏನೇನು ಇಟ್ಟಿರುತ್ತಿ ಅಂತ ಕೇಳಿದಾಗ ನಾನು ಕಳೆದ 2 ದಿನಗಳಿಂದ ಕಲೇಕ್ಷನ್ ಆದ ನಗದು ಹಣ ರೂ, 5, 25,000/- ಗಳನ್ನು ಇಟ್ಟಿರುತ್ತೇನೆ ಮತ್ತು ಬೆಳ್ಳಿಯ ಆರತಿ ತಟ್ಟಿ, ದೇವರ ಮೂರ್ತಿಗಳು, ಗ್ಲಾಸು ಹೀಗೆ ಒಟ್ಟು ಅ.ಕಿ. 25,000/- ಗಳ ಕಿಮ್ಮತ್ತಿನ ವಸ್ತುಗಳು ಇರುತ್ತವೆ ಅಂತ ತಿಳಿಸಿದಾಗ ನಮ್ಮ ತಂದೆ ಅಲ್ಮಾರಾ ಪೂರ್ತಿಯಾಗಿ ಪರಿಶೀಲಿಸಿ ನೋಡಲು ನಗದು ಹಣ ಮತ್ತು ಬೆಳ್ಳಿಯ ಆಭರಣಗಳು ಹೀಗೆ ಒಟ್ಟು ಎಲ್ಲಾ ಸೇರಿ ಒಟ್ಟು ಅ.ಕಿ. 5,50,000/- ನೇದ್ದವುಗಳು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ನಂತರ ನಿನ್ನೆ ದಿನಾಂಕ:28.08.2022 ರಂದು ಮದ್ಯಾನ್ಹದ ವೇಳೆಗೆ ಮನೆಗೆ ಬಂದು ಮನೆಯಲ್ಲಿ ಅಳವಡಿಸಿದ್ದ ಸಿ.ಸಿ. ಟಿ.ವಿ. ಚೆಕ್ ಮಾಡಿ ನೋಡಲಾಗಿ ಯಾರೋ ಇಬ್ಬರು ಕಳ್ಳರು ದಿನಾಂಕ:28.08.2022 ರ 02:20 ಎ,ಎಂ. ದಿಂದ 03:35 ಎ.ಎಂ. ಅವಧಿಯಲ್ಲಿ ಕಳ್ಳತನ ಮಾಡಿಕೊಂಡು ಹೋದ ಬಗ್ಗೆ ಕಂಡು ಬಂದಿರುತ್ತದೆ. ಕಾರಣ ನಮ್ಮ ಮನೆಯಲ್ಲಿ ನಗದು ಹಣ ಮತ್ತು ಬೆಳ್ಳಿಯ ಆಭರಣಗಳನ್ನು ಕಳ್ಳತನ ಮಾಡಿಕೊಂಡು ಹೋದ ಕಳ್ಳರನ್ನು ಪತ್ತೆಮಾಡಿ ಅವರ ವಿರುದ್ಧ ಕ್ರಮ ಜರುಗಿಸಿ ನಮ್ಮ ವಸ್ತುಗಳನ್ನು ನಮಗೆ ದೊರಕಿಸಿಕೊಡಲು ವಿನಂತಿ ಅಂತ ವಗೈರೆಯಾಗಿದ್ದ ಅರ್ಜಿ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

 

ಅಶೋಕ ನಗರ ಪೊಲೀಸ ಠಾಣೆ :-  ದಿನಾಂಕ:29.08.2022 ರಂದು 10.00 ಎ.ಎಂ.ಕ್ಕೆ ಫಿರ್ಯಾದಿದಾರರಾದ ಶ್ರೀ ಬಸವರಾಜ ತಂದೆ ರಾಚಪ್ಪ ಮಾಯಾಣಿ ವಯ: 66 ವರ್ಷ ಜಾ: ಲಿಂಗಾಯತ  ಉ: ನಿವೃತ ಬ್ಯಾಂಕ ನೌಕರ ಸಾ:  ಗೋದುತಾಯಿ ಕಾಲನಿ ಕಲಬುರಗಿ. ಇವರು ಠಾಣೆಗೆ ಹಾಜರಾಗಿ ಲಿಖಿತ ಫಿರ್ಯಾದಿ ಅರ್ಜಿ ಸಲ್ಲಿಸಿದ್ದರ ಸಾರಾಂಶವೆನೆಂದರೆ, ನಾನು ನಿವೃತ ಬ್ಯಾಂಕ ನೌಕರನಿರುತ್ತೇನೆ. ನಮಗೆ ಎರಡು ಜನ ಹೆಣ್ಣು ಮಕ್ಕಳು ಹಾಗು ಒಬ್ಬನು ಗಂಡು ಮಗನಿರುತ್ತಾನೆ. ನನ್ನ ಹೆಂಡತಿಯಾದ ಅಕ್ಕಮಹಾದೇವಿ ಇವಳು ಕಳೆದ ಮೂರು ವರ್ಷಗಳ ಹಿಂದೆ ಮೃತ ಪಟ್ಟಿದ್ದು ಇರುತ್ತದೆ. ನಮ್ಮ ಎರಡು ಜನ ಹೆಣ್ಣು ಮಕ್ಕಳ ಮದುವೆ ಮಾಡಿದ್ದು ಅವರು ತಮ್ಮ-ತಮ್ಮ ಗಂಡನ ಮನೆಯಲ್ಲಿ ಇರುತ್ತಾರೆ.ನಮ್ಮ ಮಗ ರಾಜಶೇಖರ ಈತನಿಗೂ ಮದುವೆಮಾಡಿದ್ದು ನಮ್ಮೊಂದಿಗೆ ಇರುತ್ತಾನೆ. ಹೀಗಿದ್ದು ದಿನಾಂಕ:15.08.2022 ರಂದು ಬೆಳಿಗ್ಗೆ 05:00 ಗಂಟೆಗೆ ನಾನು ಮತ್ತು ನನ್ನ ಮಗ ರಾಜಶೇಖರ ಇಬ್ಬರೂ ಕೂಡಿ ಖಾಸಗಿ ಕೆಲಸ ನಿಮಿತ್ಯ ಬೆಂಗಳೂರಿಗೆ ಹೋಗಿದ್ದು ಇರುತ್ತದೆ. ದಿನಾಂಕ:27.08.2022 ರಂದು ಬೆಳಿಗ್ಗೆ 08:00 ನಾನು ಮತ್ತು ನಮ್ಮ ಮಗ ಇಬ್ಬರೂ ಬೆಂಗಳೂರಿನಲ್ಲಿರುವಾಗ ಕಲಬುರಗಿ ನಗರದಿಂದ ನಮ್ಮ ಮನೆಯಲ್ಲಿ ಕೆಲಸ ಮಾಡುವ ನೀಲಮ್ಮ ಬಿರಾದಾರ ವಳು ನಮಗೆ ಫೋನ್ ಮಾಡಿ ತಿಳಿಸಿದ್ದೆನೆಂದರೆ, ನಿನ್ನೆ ದಿನಾಂಕ:26.08.2022 ರಂದು ರಾತ್ರಿ ವೇಳೆಯಲ್ಲಿ ಯಾರೋ ಕಳ್ಳರು ನಿಮ್ಮ ಮನೆಯ ಬಾಗಿಲು ಕೊಂಡಿ ಮುರಿದಿದ್ದು ಬಹುಷ ಮನೆಯಲ್ಲಿದ್ದ ಸಾಮಾನುಗಳು ಕಳುವು ಆಗಿರಬಹುದು ನೀವು ತಕ್ಷಣ ಬರಬೇಕು ಅಂತ ತಿಳಿಸಿದ ಮೇರೆಗೆ ನಾನು ಗಾಬರಿಯಾಗಿ ಇಂದು ದಿನಾಂಕ:29.08.2022 ರಂದು ಬೆಳಿಗ್ಗೆ 06:00 ಗಂಟೆಗೆ ಕಲಬುರಗಿ ನಗರದಲ್ಲಿರುವ ನಮ್ಮ ಮನೆಗೆ ಬಂದು ನೋಡಲು ಮನೆಯ ಬಾಗಿಲು ಕೊಂಡಿ ಮುರಿದಿದ್ದು ಬೆಡ್ ರೂಮಿನ ಅಲಮಾರಿಯಲ್ಲಿ ಇಟ್ಟಿದ್ದ ಸಾಮಾನುಗಳು ಚೆಲ್ಲಾ ಪಿಲ್ಲಿಯಾಗಿ ಬಿದ್ದಿದ್ದು ಅಲಮಾರಿಯ ಲಾಕರಿನಲ್ಲಿ ಇಟ್ಟಿದ್ದ 5 ಗ್ರಾಮಿನ 5 ಬಂಗಾರದ ಉಂಗುರುಗಳು ಒಟ್ಟು 25 ಗ್ರಾಂ ಅ|| ಕಿ|| 1,25,000/-ರೂ ಮತ್ತು ಬೆಳ್ಳಿಯ ಸಾಮಾನುಗಳಾದ ಪ್ಲೆಟ್ 3, ಗ್ಲಾಸ್ 4, ಒಂದು ಲಕ್ಷ್ಮಿ ದೇವರ ಮುರ್ತಿ, ಆರತಿ ಸೆಟ್ 2, ಸಮಯ್ 4, ತಂಬಿಗೆ 2, ಬೆಳ್ಳಿಯ ನಾಣ್ಯಗಳು 5, ಬಟ್ಟಲುಗಳು 4, ಎರಡು ಉಡದಾರಗಳು ಹೀಗೆ ಒಟ್ಟು5 ಕೆ.ಜಿ ಯ ಬೆಳ್ಳಿಯ ಆಭರಣಗಳು ಹೀಗೆ ಒಟ್ಟು 2,00,000/-ರೂ ಕಿಮ್ಮತಿನ ಸಾಮಾನುಗಳು ಮತ್ತು ನಗದು ಹಣ 5,000/-ರೂಪಾಯಿ ಹೀಗೆ ಒಟ್ಟು 3,30,000/-ರೂಪಾಯಿ ಕಿಮ್ಮತಿನ ಸಾಮಾನುಗಳನ್ನು ಯಾರೋ ಕಳ್ಳರೂ ದಿನಾಂಕ:26.08.2022 ರಂದು ರಾತ್ರಿ 10:00 ಗಂಟೆಯಿಂದ ದಿನಾಂಕ:27.08.2022 ರಂದು ಬೆಳಗ್ಗೆ 06:00 ಗಂಟೆಯ ಅವಧಿಯಲ್ಲಿ ನಮ್ಮ ಮನೆಯ ಬೀಗ ಮುರಿದು ಒಳಗೆ ಪ್ರವೇಶ ಮಾಡಿ ಮೇಲೆ ನಮೂದಿಸಿದ ಸಾಮಾನುಗಳು ಕಳ್ಳತನ ಮಾಡಿಕೊಂಡು ಹೋಗಿದ್ದು ಕಳ್ಳರನ್ನು ಪತ್ತೆ ಮಾಡಿ ಅವರ ವಿರುದ್ದ ಕಾನೂನು ರೀತಿ ಕ್ರಮ ಜರುಗಿಸಿ ನಮ್ಮ ಸಾಮಾನುಗಳು ನಮಗೆ ದೊರಕಿಸಿ ಕೊಡಲು ವಿನಂತಿ. ಅಂತ ವಗೈರೆಯಾಗಿ ಇದ್ದ ಅರ್ಜಿ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

 

ಸಂಚಾರಿ ಪೊಲೀಸ ಠಾಣೆ -2 :-  ದಿನಾಂಕ 29/08/2022 ರಂದು ಮದ್ಯಾಹ್ನ 02:30 ಪಿ.ಎಮ್ ಕ್ಕೆ ಶ್ರೀ ನಾಗೇಂದ್ರಪ್ಪಾ ತಂದೆ ಲಕ್ಕಪ್ಪಾ ಮದನಕರ್ ಜಾ; ಪ.ಜಾತಿ ಸಾ; ತಾಜ ಸುಲ್ತಾನಪುರ ಕಲಬುರಗಿ ಇವರು ಠಾಣೆಗೆ ಹಾಜರಾಗಿ ಒಂದು ಹೇಳಿಕೆ ಫಿರ್ಯಾಧಿ ನೀಡಿದ್ದು ಸಾರಂಶವೆನೆಂದರೆ,  ದಿನಾಂಕ 12/08/2022  ರಂದು ನನ್ನ ಮಗ ಶಿವಕುಮಾರ ಈತನು ಕೊನೆಯ ಮಗನಾದ ಅಭಿಷೇಕ್ ಈತನಿಗೆ ಏನಾದರೂ ತಿನ್ನಲು ತರವ ಕುರಿತು ನಮ್ಮ ಆಟೋರಿಕ್ಷಾ ನಂ ಕೆಎ-32 ಡಿ-9656 ನೇದ್ದರಲ್ಲಿ ಹೋಗುವಾಗ ಊರಿನಿಂದ ಬಂಬು ಬಜಾರ ಕಡೆಗೆ ಹೋಗುವಾಗ ಸಾಯಂಕಾಲ 06-00 ಗಂಟೆ ಸುಮಾರಿಗೆ ದಾವುಲ ಮಲಿಕ್ ದಗರ್ಾದ ಹತ್ತಿರ ಹೋಗುತ್ತಿದ್ದಾಗ ಅದೆ ವೇಳೆಗೆ ಕಲಬುರಗಿ ರೋಡಿನ ಕಡೆಯಿಂದ ಯಾವುದೋ ಒಂದು ಟಂ ಟಂ ಆಟೋ ಚಾಲಕನು ಅದರಲ್ಲಿ ಕಬ್ಬಿಣದ ಸಾಮಾನುಗಳನ್ನು ಹಾಕಿಕೊಂಡು  ಅತಿವೇಗದಿಂದ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಹೋಗುವಾಗ ನನ್ನ ಮಗ ಶಿವುಕುಮಾರ ಆಟೋವನ್ನು ವೇಗವಾಗಿ  ನಡೆಸುವಾಗ ಹಿಂದೆ ಕುಳಿತ ಮಗ ಅಭಿಷೇಕನು ಹೊರ ನೋಡಲು ಹೋಗಿ ಹೊರಗೆ ಮುಖ ಹಾಕಿದಕ್ಕೆ ಮಗನು ಅಭಿಷೇಕನಿಗೆ ತಿಳಿಹೇಳದೆ ಇದದ್ದರಿಂದ ಎದುರಿನಿಂದ ಬಂದಿರುವಂತಹ ಟಂ ಟಂ ಆಟೋದ ಭಾಗ ಮತ್ತು ಕಬ್ಬಿಣದ ಭಾಗ ಮಗನ ಎಡಭಾಗದ ತೆಲೆಯ ಭಾಗಕ್ಕೆ ಬಡೆದು ಭಾರಿ ಪ್ರಮಾಣದ ಗಾಯವಾಗಿದ್ದು ಘಟನಡಯನ್ನು ಅಜರ್ುನ್ ಗೊಬ್ಬರಕರ್ ಈತನು ನೋಡಿ ಹಾಗೆ ಮಗನಿಗೆ ಯುನೈಟೇಡ್ ಆಸ್ಪತ್ರೆಗೆ ತಂದೆ ಸೇರಿಕೆ ಮಾಡಿರುತ್ತಾರೆ, ಟಂ ಟಂ ಆಟೋದ ನಂಬರ ನೋಡಿರುವುದಿಲ್ಲಾ. ಮುಂದೆ ಯುನೈಟೇಡ್ ಆಸ್ಪತ್ರೆಯಲ್ಲಿ ಉಪಚಾರ ಪಡೆಯುತ್ತಿರುವಾಗ ಮಗನ ಪರಸ್ಥಿತಿಯು ಚಿಂತಾಜನಕ ವಾಗಿರುವುದರಿಂದ ಈಗ 3-4 ದಿವಸಗಳ ಹಿಂದೆ ಹೆಚ್ಚಿನ ಉಪಚಾರಕ್ಕಾಗಿ ಕಲಬುರಗಿ ಸರಕಾರಿ ಆಸ್ಪತ್ರೆಯಲ್ಲಿ ಸೇರಿಕೆ ಮಾಡಿದ್ದು ಇಂದು ದಿನಾಂಕ-29/08/2022 ರಂದು ಬೆಳಿಗ್ಗೆ 10-00 ಗಂಟೆ ಸುಮಾರಿಗೆ ಮಗ ಅಭಿಷೇಕನಿಗೆ ಗುಣಮುಖವಾಗದೆ ಮೃತ ಪಟ್ಟಿರುತ್ತಾನೆ, ಯುನೈಟೇಡ್ ಉಪಚಾರ ಪಡೆಯುವಾಗ ಪೊಲೀಸರು ವಿಚಾರಣೆಗೆ ಬಂದಾಗ ನಂತರ ತಿಳಿದುಕಂಡು ಕೇಸು ಕೊಡುವುದಾಗಿ ತಿಳಿಸಿದೇವು, ಕಾರಣ ಈ ವಿಷಯದಲ್ಲಿ ಟಂ ಟಂ ಆಟೋ ಚಾಲಕನನ್ನು ಪತ್ತೆ ಮಾಡಿ ಮತ್ತು ನಮ್ಮ ಮಗ ಶಿವುಕುಮಾರ ಈತನ ಮೇಲೆ ಈ ಎರಡು ವಾಹನ ಚಾಲಕರ ಮೇಲೆ ಕಾನೂನು ಪ್ರಕಾರ ಕ್ರಮ ಕೈಕೊಳ್ಳಬೇಕು ಅಂತಾ ಕೊಟ್ಟ ಹೇಳಿಕೆ ಫಿರ್ಯಾಧಿ ಸಾರಾಂಶದ  ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ

ಇತ್ತೀಚಿನ ನವೀಕರಣ​ : 03-09-2022 01:08 PM ಅನುಮೋದಕರು: ADMIN


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕಲಬುರಗಿ ನಗರ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080