ಅಭಿಪ್ರಾಯ / ಸಲಹೆಗಳು

ವಿಶ್ವವಿದ್ಯಾಲಯ ಪೊಲೀಸ್‌ ಠಾಣೆ :- ದಿನಾಂಕ. 25-07-2022 ರಂದು ೯-೦೦ ಪಿ.ಎಂ.ಕ್ಕೆ  ನಾನು ವಿನಾ ಕಾರಣ ಹೆಣ್ಣು ಮಕ್ಕಳೊಂದಿಗೆ ಏಕೆ ಮಾತಾಡುತ್ತಿ ಅಂತಾ ಕೇಳಿದಕ್ಕೆ ನಾನು ಮಾತಾಡಿಲ್ಲಾ ಅಂತಾ ನನ್ನೊಂದಿಗೆ ತಕರಾರು ಮಾಡಿ ಜಗಳ ಮಾಡಿದ್ದು ನಂತರ ರಾತ್ರಿ ೧೧-೩೦ ಪಿ.ಎಂ.ಕ್ಕೆ. ನಾನು ಮತ್ತು ನನ್ನ ಗೆಳೆಯರಾದ ಪ್ರವೀಣ ಜಾಧವ ,ಮಾಹಾದೇವ ಚವ್ಹಾಣ  ಎಲ್ಲರೂ ಕೂಡಿಕೊಂಡು ರೂಮನಂಬರ ೩ ನೆದ್ದರಲ್ಲಿ ಊಟ ಮಾಡುತ್ತಿರುವಾಗ  ಅದೇ ವೇಳೆಗೆ ಜಗನ್ನಾಥ ಚವ್ಹಾಣ ಇವರ ಅಣ್ಣನಾದ  ಶುಶಿಲ್ ಕುಮಾರ ಚವ್ಹಾಣ ಇತನು ರೂಮಿಗೆ ಬಂದವನೇ ಏನೋ ಸೂಳೆ ಮಗನೆ ನಮ್ಮ ತಮ್ಮನೊಂದಿಗೆ ಏಕೆ ಜಗಳ ಮಾಡಿದ್ದಿ ರಂಡಿ ಮಗನೆ ಅಂತಾ ಅವಾಚ್ಯ ಶಬ್ದಗಳಿಂದ ಬೈಯುತಿದ್ದಾಗ , ನನ್ನ ಮೊಬಾಯಿಲದಿಂದ ಬೇರೆಯವರಿಗೆ ಏಕೆ ಮಾತಾಡಿದ್ದಾನೆ ಅಂತಾ ಕೇಳಿದಕ್ಕೆ ಸದರಿ ಶುಶೀಲ್ ಕುಮಾರ ಇತನು ನನಗೆ ಮುಂದಕ್ಕೆ ಬಿಡದಂತೆ ಅತೀಕ್ರಮವಾಗಿ ಒತ್ತಿ ಹಿಡಿದು ಕೈಯಿಂದ ಹೊಡೆದಿದ್ದು ಮತ್ತು ಜಗನ್ನಾಥನು ಒಂದು ಬಡಿಗೆಯಿಂದ ನನ್ನ ತಲೆಯ ಹಿಂದುಗಡೆ ಹೊಡೆದಿದ್ದು ಆಗ ನನ್ನ ತಲೆಯ ಹಿಂದುಗಡೆ ರಕ್ತಸ್ರಾವವಾಗಿರುತ್ತದೆ. ನಾನು ಚೀರಾಡುವಾಗ ನಮ್ಮ ರೂಮಿನಲ್ಲಿದ್ದ ಪ್ರವಿಣ ಜಾಧವ, ಮಹಾದೇವ ಚವ್ಹಾಣ ಇವರು ಬಂದು ಜಗಳ ಬಿಡಿಸಿಕೊಂಡಿರುತ್ತಾರೆ. ಸೂಳೆ ಮಗನೆ ಈಗ ಬಿಟ್ಟಿದ್ದೇವೆ ಇನ್ನೊಂದು ಸಾರಿ ನಮ್ಮ ತಂಟೆಗೆ ಬಂದಲ್ಲಿ ನಿನಗೆ ಜೀವ ಸಹಿತ ಬಿಡುವದಿಲ್ಲಾ ಜೀವ ಬೆದರಿಕೆ ಹಾಕಿ ಹೋಗಿರುತ್ತಾರೆ ಎಂದು ಫಿರ್ಯಾದಿ ಕೊಟ್ಟ ದೂರು ಅರ್ಜಿ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

ವಿಶ್ವವಿದ್ಯಾಲಯ ಪೊಲೀಸ್‌ ಠಾಣೆ  :- ದಿನಾಂಕ: 27-07-2022  ರಂದು ೧.೩೦ ಪಿ.ಎಮ್  ಸಮಯದಲ್ಲಿ  ಅನೀಲ ಪವಾರ ತಂದೆ ಶಂಕರ ಪವಾರ, ವಿನೋದ ತಂದೆ ನೂರು ರಾಠೋಡ ಇವನು ನನಗೆ ಕೈಯಿಂದ ಹೊಡೆದು ಮುಳ್ಳು ಕಂಠಿಯಲ್ಲಿ ಒತ್ತಿರುತ್ತಾನೆ. ವಿನೋಧನು ರಂಡಿ ಮಕ್ಕಳೆ ನೀಮದು ಬಹಳ ನಡೆದಾದ ಇವತ್ ನಿಮಗೆ ಬಿಡುವದಿಲ್ಲಾ ಅಂತಾ ಜೀವ ಭಯ ಹಾಕಿದರು.  ನಮ್ಮ ಸಂಬಂಧಿಕರಾದ ಗೀತಾ ಗಂಡ ಅನೀಲ ಪವಾರ, ಕವೀತಾ ಗಂಡ ರವಿ ಪವಾರ ಇವರು ಬಂದು ಯಾಕೆ ಹೊಡೆಲಕತ್ತಿರಿ ಅಂತಾ ಕೇಳಿದಾಗ, ಆ ಮೂರು ಜನರು ಕೂಡಿ ಅವರಿಬ್ಬರಿಗೂ  ಕೂಡಾ ಅವಾಚ್ಯವಾಗಿ ಬೈದಿರುತ್ತಾರೆ. ಅಲ್ಲದೆ ನಂದು ತಂದೆ ಗೇಮು ಪವಾರ ಇವನು ಬಂದು ಜಗಳ ಬಿಡಿಸಿರುತ್ತಾರೆ. ನಮ್ಮ ಅಣ್ಣನು ಬೇಹುಷಾಗಿ ಬಿದಿದ್ದನು.  ಆಗ ಅವರು ಸತ್ತಿರಬಹದು ಅಂತಾ ತಿಳಿದು ಅಲ್ಲಿಂದ ಹೋಗಿರುತ್ತಾರೆ. ಇಲ್ಲವಾದರೆ ಇನ್ನು ಹೊಡೆಯುತ್ತಿದ್ದರು. ನಾನು ನಮ್ಮ ಅಣ್ಣನಿಗೆ ಉಪಚಾರ ಕುರಿತು ನಮ್ಮ ಕಾರದಲ್ಲಿ ಹಾಕಿಕೊಂಡು ಕಲಬುರಗಿ ಮಣ್ಣೂರ ಆಸ್ಪತ್ರೆಯಲ್ಲಿ ಒಯ್ದು ಸೇರಿಕೆ ಮಾಡಿರುತ್ತೇನೆ. ನನಗೆ ಅಷ್ಟೆನು ಗಾಯ ಆಗದಕ್ಕೆ ನಾನು ದವಾಖಾನಿಗೆ ತೋರಿಸಿಕೊಂಡಿರುವದಿಲ್ಲಾ. ಮನೆಯಲ್ಲಿ ವಿಚಾರ ಮಾಡಿ ತಡವಾಗಿ ಠಾಣೆಗೆ ಬಂದಿರುತ್ತೇನೆ ಎಂದು ಫಿರ್ಯಾದಿ ಕೊಟ್ಟ ದೂರು ಅರ್ಜಿ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

ಫರಹತಾಬಾದ ಪೊಲೀಸ್‌ ಠಾಣೆ :-  ದಿನಾಂಕ:29-07-2022 ರಂದು ೨:೩೦ ಪಿ.ಎಮ್‌ಕ್ಕೆ ಕೇಂದ್ರ ಕಾರಾಗೃಹ ಕಲಬುರಗಿಯಿಂದ ಶ್ರೀ ವಿಜಯಕುಮಾರ ಕುದರೆ, ವೀಕ್ಷಕ ಇವರ ಮುಖಾಂತರ ಶ್ರೀ ಬಿ.ಎಂ.ಕೊಟ್ರೇಶ, ಮುಖ್ಯ ಅಧೀಕ್ಷಕರು ಕಳುಹಿಸಿದ ದೂರನ್ನು ಪಡೆದು ದೂರಿನ ಸಾರಾಂಶವೇನೆಂದರೆ, ದಿನಾಂಕ: ೨೮-೦೭-೨೦೨೨ ರಂದು ರಾತ್ರಿ ಸಮಯ ೧೦.೩೫ ರಿಂದ ೦೧-೧೦ ರ ವರೆಗೆ ಕಾರಾಗೃಹದಲ್ಲಿ ಸಂಸ್ಥೆಯ ಪ್ರಭಾರಿ ಮುಖ್ಯ ಅಧೀಕ್ಷಕರು ಮತ್ತು ಸಹಾಯಕ ಅಧೀಕ್ಷಕರ ನೇತೃತ್ವದಲ್ಲಿ ಕಾರಾಗೃಹದ ಅಧಿಕಾರಿ ಮತ್ತು ೪೦ ಸಂಖ್ಯೆಯ ಸಿಬ್ಬಂದಿಗಳೊಂದಿಗೆ ಕಾರಾಗೃಹದ ಬ್ಯಾರಕ್ ಸಂಖ್ಯೆಗಳಾದ ೫,೬,೭,೮,೯,೧೫,೧೬,೧೭ ಹಾಗೂ ಆಸ್ಪತ್ರೆ ವಿಭಾಗವನ್ನು ಅನಿರೀಕ್ಷಿತವಾಗಿ ತಪಾಸಣೆಯನ್ನು ಕೈಗೊಳ್ಳಲಾಗಿರುತ್ತದೆ.         ಕಾರಾಗೃಹದ ಅಧಿಕಾರಿ ಮತ್ತು ಸಿಬ್ಬಂದಿಗಳು ಸಜಾ ಬಂದಿಗಳ ಬ್ಯಾರಕ್ ಸಂಖ್ಯೆ ೬ ರಲ್ಲಿ ಬಂದಿಸಿರುವ ಎಲ್ಲಾ ಬಂದಿಗಳ ದೈಹಿಕ ತಪಾಸಣೆ ಮತ್ತು ಬಂದಿಗಳು ಹೊಂದಿರುವ ಹಾಸಿಗೆ ಹೋದಿಗೆ, ತಟ್ಟೆ, ಚಂಜು, ಲೋಟ ಗ್ಲಾಸ್ ಮತ್ತು ಪ್ಲೇಟ್ ಮತ್ತು ಬ್ಯಾರಕಿನಲ್ಲಿ ಇಟ್ಟಿರುವ ಕಸದ ಡಬ್ಬಿಯನ್ನು ತಪಾಸಿಸುವ ವೇಳೆಯಲ್ಲಿ ಹಸಿ ಕಸದ ಡಬ್ಬಿಯಲ್ಲ್ಲಿ ಪ್ಲಾಸ್ಟಿಕ್ ಸುತ್ತಿರುವ ಕವರ್‌ನಲ್ಲಿ ಒಂದು ಸಂಖ್ಯೆಯ ಸ್ಯಾಮ್‌ಸಂಗ್ ಮೊಬೈಲ್ ಫೋನ್ ದೊರೆತ್ತಿರುತ್ತದೆ. ವಿಚಾರಣಾ ಬಂದಿಗಳ ಬ್ಯಾರಕ್ ಸಂಖ್ಯೆ ೧೬ ರಲ್ಲಿ ದಾಖಲಾಗಿರುವ ಎಲ್ಲಾ ಬಂದಿಗಳ ದೈಹಿಕ ತಪಾಸಣೆ ಮತ್ತು ಬಂದಿಗಳು ಹೊಂದಿರುವ ಹಾಸಿಗೆ-ಹೋದಿಗೆ ಮತ್ತು ಆಹಾರ ಪಡೆಯುವ ಪಾತ್ರೆಗಳನ್ನು ತಪಾಸಿಸುವ ವೇಳೆಯಲ್ಲಿ ವಿಚಾರಣಾ ಬಂದಿ ಸಂಖ್ಯೆ: ೧೬೪೧೧ ಸುನೀಲ್ ತಂದೆ ಹಣಮಂತ ಎಂಬಾತನ್ನು ದೇಹ ತಪಾಸಣೆಯನ್ನು ನಡೆಸಿದ್ದು, ಬಂದಿಯು ತನ್ನ ಒಳ ಉಡುಪಿನಲ್ಲಿ  ಒಂದು ಸಂಖ್ಯೆ ಸ್ಯಾಮ್‌ಸಂಗ್ ಮೊಬೈಲ್ ಫೋನ್ ಸಹಿತ ಏರ್‌ಟೇಲ್ ಸಿಮ್ ಕಾರ್ಡ್ ದೊರೆತ್ತಿರುತ್ತದೆ. 

೧.           ವಿಚಾರಣಾ ಬಂದಿ ಸಂಖ್ಯೆ: ೧೬೪೧೧ ಸುನೀಲ್ ತಂದೆ ಹಣಮಂತ ಎಂಬಾತನಿಂದ ನಿಷೇಧಿತ ವಸ್ತುಗಳು ದೊರೆತ್ತಿದ್ದು ವಿವರ ಈ ಕೆಳಗಿನಂತಿದೆ.

           ಸ್ಯಾಮ್‌ಸಂಗ್ ಮೊಬೈಲ್ ಫೋನ್  IMEI  No. 358222/08/697885/3 

With Airtel ಸಿಮ್ ಕಾರ್ಡ್ ನಂ. 89910 00903 4472336090

 ೨.           ಸಜಾ ಬಂದಿ ಬ್ಯಾರಕ್ ಸಂಖ್ಯೆ ೬ ರಲ್ಲಿ ದೊರೆತ ಮೊಬೈಲ್ ಫೋನ್ ವಿವರ ಈ ಕೆಳಗಿನಂತಿದೆ.

               ಸ್ಯಾಮ್‌ಸಂಗ್ ಮೊಬೈಲ್ ಫೋನ್ IMEI  No. 1. 353276/08/225934/1

                                  2. 353277/08/225934/9 

ಆದುದರಿಂದ ಕರ್ನಾಟಕ ಕಾರಾಗೃಹಗಳ ನಿಯಮಗಳು ೧೯೭೪ ರ ನಿಯಮ ೪೨ (೩) ರ ಪ್ರಕಾರ ಮೊಬೈಲ್ ಫೋನ್ ಮತ್ತು ಅದಕ್ಕೆ ಸಂಬಂಧಿಸಿದ ಉಪಕರಣಗಳು ನಿಷೇಧಿತ ವಸ್ತುಗಳು ಎಂಬುದಾಗಿ ಘೋಷಿಸಿರುವುದರಿಂದ ಸದರಿ ನಿಷೇಧಿತ ವಸ್ತುಗಳನ್ನು ತಮ್ಮ ವಶಕ್ಕೆ ಪಡೆದು ಕರ್ನಾಟಕ ಕಾರಾಗೃಹಗಳ (ತಿದ್ದುಪಡಿ) ಅಧಿನಿಯಮ ೨೦೨೨ ರ ಕಲಂ ೪೨ ಹಾಗೂ ಭಾ,ದ.ಸಂ. ಕಲಂ ಗಳಡಿಯಲ್ಲಿ ದೂರು ದಾಖಲಿಸಿಕೊಂಡು, ತನಿಖೆ ಮಾಡಿ, ಸೂಕ್ತ ಕಾನೂನು ಕ್ರಮ ಜರುಗಿಸಲು ಕೋರಿದೆ. ಇದರೊಂದಿಗೆ ತಪಾಸಣೆ ವೇಳೆಯಲ್ಲಿ ದೊರೆತ್ತಿರುವ ೦೨ ಸಂಖ್ಯೆ ಸ್ಯಾಮ್‌ಸಂಗ್ ಮೊಬೈಲ್ ಫೋನ್ ಮತ್ತು ೦೧ ಸಂಖ್ಯೆ ಸಿಮ್ ಕಾರ್ಡ್ ಅನ್ನು ಶ್ರೀ ವಿಜಯಕುಮಾರ ಕುದರೆ, ವೀಕ್ಷಕರು ರವರ ಹಸ್ತ ಈ ಪತ್ರದೊಂದಿಗೆ ಕಳಹಿಸಿಕೊಡಲಾಗಿದೆ ಅಂತ ಅಂತ ದೂರಿನ ಸಾರಾಂಶದ ಮೇಲೆ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

 

 

ಇತ್ತೀಚಿನ ನವೀಕರಣ​ : 02-08-2022 11:50 AM ಅನುಮೋದಕರು: ADMIN


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕಲಬುರಗಿ ನಗರ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080