ಅಭಿಪ್ರಾಯ / ಸಲಹೆಗಳು

ಬ್ರಹ್ಮಪೂರ ಪೊಲೀಸ್‌ ಠಾಣೆ :- ದಿನಾಂಕ: 29-06-2022  ರಂದು ೧೧:೦೦  ಎಎಮ್ ಕ್ಕೆ ಫಿರ್ಯಾದಿದಾರರಾದ ಸಂತೋಷ್ ತಂದೆ ಹರಿಚಂದ ಜಾಧಾವ ವಯ:೩೦ವರ್ಷ ಜಾ:ಲಂಬಾಣಿ ಉ:ಶಿಕ್ಷಕ ಸಾ//ಒಂಟಿಚಿತಾ ತಾಂಡಾ ಪೊಸ್ಟ ವೆಂಕಟಾಪುರ ತಾ:ಚಿಂಚೋಳ್ಳಿ ಜಿ:ಕಲಬುರಗಿ ಹಾಲಿವಾಸ: ಮನೆ ನಂ ೧೧೯ಡಿ ಪಿಡಬ್ಲೂ ಕ್ವಾಟರ್ಸ ಐವಾನಶಾಹಿ ಕಲಬುರಗಿ ನಗರ ಈ ಮೂಲಕ ವಿನಂತಿ ದೂರು ಅರ್ಜಿ ಸಲ್ಲಿಸುವುದೆನೆಂದರೆ, ನನ್ನದೊಂದು ಸ್ವಂತ ಸ್ಪ್ಲೆಂಡರ  ಸ್ಪ್ರೊ ಮೋಟಾರ ಸೈಕಲ್ ನಂ: ಏಂ-೩೨-ಇಎ-೦೭೭೫  ನೇದ್ದು ಇದ್ದು ಸದರಿ ಮೋಟಾರ್ ಸೈಕಲ್‌ವು ನನ್ನ ಹೆಸರಿನಲ್ಲಿರುತ್ತದೆ. ಸದರಿ ಮೋಟಾರ್ ಸೈಕಲವು ದಿನಾಂಕ:೨೦/೦೫/೨೦೨೨ ರಂದು ಸಾಯಂಕಾಲ ೦೬:೩೦ ಪಿಎಮ್ ಗಂಟೆಗೆ ಕಲಬುರಗಿ ನಗರದ ಸಪ್ತಗಿರಿ ಆರೇಂಜ್ ಹೋಟೆಲ ಎದುರುಗಡೆ ನಿಲ್ಲಿಸಿ ಶರಣಬಸವೇಶ್ವರ ದೇವಸ್ಥಾನಕ್ಕೆ ಹೋಗಿ ಮರಳಿ ಅದೆ ದಿನ ರಾತ್ರಿ ೦೮:೩೦ ಪಿಎಮ್ ಗಂಟೆಗೆ ಬಂದು ನಾನು ನಿಲ್ಲಿಸಿದ ಸ್ಥಳದಲ್ಲಿ ಮೋಟಾರ ಸೈಕಲ್ ನೋಡಲಾಗಿ ನನ್ನ ಮೋಟಾರ ಸೈಕಲ್ ಇರಲಿಲ್ಲಾ, ಮೋಟಾರ ಸೈಕಲ್ ಪತ್ತೆ ಕುರಿತು ಎಲ್ಲಾ ಕಡೆ ಹುಡುಕಾಡಿದರೂ ಮೋಟಾರ ಸೈಕಲ್ ಸಿಕ್ಕಿರುವುದಿಲ್ಲಾ ಆದರಿಂದ ಠಾಣೆಗೆ ಬಂದು ಅರ್ಜಿ ಕೊಡಲು ತಡವಾಗಿರುತ್ತದೆ. ಕಾರಣ ಕಳುವಾದ ನನ್ನ ಮೊಟಾರ ಸೈಕಲನ್ನು ಪತ್ತೆ ಹಚ್ಚಿ ಸೂಕ್ತ ಕಾನೂನು ಕ್ರಮ ಕೈಕೊಳ್ಳಬೇಕು ಅಂತಾ ಕೊಟ್ಟ ದೂರು ಅರ್ಜಿಯ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

 

ಎಂ.ಬಿ.ನಗರ ಪೊಲೀಸ್‌ ಠಾಣೆ :- ನಾನು, ಚಂದ್ರಕಲಾ @ ಚಂದಮ್ಮ ಗಂಡ ಅಂಬಾದಾಸ ಗಾಯಕವಾಡ ವ:50 ವರ್ಷ ಉ: ಕೂಲಿಕೆಲಸ ಜಾತಿ ಪ.ಜಾತಿ (ಹೊಲೆಯ) ಸಾ:ಮರಗಮ್ಮ ಗುಡಿ ಹಿಂದೆ ಬಂಬೂ ಬಜಾರ ಕಲಬುರಗಿ ಹೇಳಿ ಗಣಕೀಕೃತ ಮಾಡಿಸಿದ ಹೇಳಿಕೆ   ನಾನು, ಕೂಲಿ ಕೆಲಸ ಮಾಡಿಕೊಂಡು ಗಂಡ ಮತ್ತು ಮಕ್ಕಳೊಂದಿಗೆ ವಾಸವಾಗಿರುತ್ತೇನೆ. ನನಗೆ 01 ಹೆಣ್ಣು ಮಗಳು 03 ಜನ ಗಂಡು ಮಕ್ಕಳು ಹೀಗೆ ಒಟ್ಟು 4 ಜನ ಮಕ್ಕಳಿರುತ್ತಾರೆ. ಅವರಲ್ಲಿ ಅಂಜಲಿ ಹಿರಿಯ ಮಗಳಿರುತ್ತಾಳೆ. ನನ್ನ ಮಗಳು ಅಂಜಲಿ ಮತ್ತು ನಮ್ಮ ಓಣಿಯ ಹತ್ತಿರ ಇರುವ ಭೋವಿ ಗಲ್ಲಿಯಲ್ಲಿ  ವಾಸವಾಗಿರುವ ಲಕ್ಷ್ಮೀಕಾಂತ ತಂದೆ ಮಾರುತಿರಾವ ಮಾನೇಕರಿ ಇಬ್ಬರು ಪರಸ್ಪರ ಪ್ರೀತಿಸಿ ಮದುವೆಯಾಗಿರುತ್ತಾರೆ. ಮದುವೆಯಾಗಿ ಅಂದಾಜ 11 ವರ್ಷಗಳಾಗಿರುತ್ತದೆ ಅವರಿಬ್ಬರು ಅವರ  ತಂದೆ ತಾಯಿ ಬಿಟ್ಟು ಫೀಲ್ಟರ ಬೇಡ ರಾಜೀವಗಾಂಧಿ ನಗರ ಕಲಬುರಗಿಯಲ್ಲಿ ಒಂದು ಬಾಡಿಗೆ ಮನೆ ಹಿಡಿದು ಗಂಡ ಹೆಂಡತಿ ಮಕ್ಕಳೊಂದಿಗೆ ವಾಸವಾಗಿರುತ್ತಾರೆ. ಸಧ್ಯ ಅವರಿಬ್ಬರಿಗೆ 1)ಸೋನಾಲಿ ವ:10 ವರ್ಷ 2)ಮಯೂರಿ ವ:8 ವರ್ಷ 3) ಮೋಹಿತ ವ:5 ವರ್ಷ 4) ಶ್ರೇಯಾ ವ:3 ವರ್ಷ ಮಕ್ಕಳಿರುತ್ತಾರೆ. ನನ್ನ ಮಗಳು ಅಂಜಲಿ ಇವಳು ಈಗ 3 ತಿಂಗಳ ಹಿಂದೆ ನನ್ನ ಆಳಿಯ ಲಕ್ಷ್ಮೀಕಾಂತ ಇತನಿಂದ ಹೆಸರು ಕೇಳಿ ಗೊತ್ತಾದ ಶಿವು @ ಸೂರಜ ಸಾ: ಬಸವ ನಗರ ಕಲಬುರಗಿ ಇತನೊಂದಿಗೆ ನಾಲ್ಕು ಜನ ಮಕ್ಕಳಿಗೆ ಗಂಡನ ಹತ್ತಿರ ಬಿಟ್ಟು ಅವನೊಂದಿಗೆ ಹೋಗಿರುತ್ತಾಳೆ.  ದಿನಾಂಕ 29/06/2022 ರಂದು ಅಂದಾಜ ಬೆಳಿಗ್ಗೆ 8-20 ಗಂಟೆ ಸುಮಾರಿಗೆ ಚೌಕ ಪೊಲೀಸ ಠಾಣೆ  ಶ್ರೀ ಉಮೇಶ ಪಿ.ಸಿ.  ಇವರು ನಮ್ಮ ಮನೆಗೆ ಬಂದು ಮನೆಯಲ್ಲಿದ್ದ ನನಗೆ ಮತ್ತು ನನ್ನ ಗಂಡ ಅಂಬಾದಾಸ ಇಬ್ಬರಿಗೂ ಪಿ.ಎಸ್.ಐ. ಸಾಹೇಬರು ಚೌಕ ಪೊಲೀಸ ಠಾಣೆಗೆ ಬರುವಂತೆ ಹೇಳಿದ್ದಾರೆ ಅಂತಾ ತಿಳಿಸಿದ ಮೇರೆಗೆ ಬೆಳಿಗ್ಗೆ 8-45 ಗಂಟೆ ಸುಮಾರಿಗೆ ನಾನು ಮತ್ತು ನನ್ನ ಗಂಡ ಅಂಬಾದಾಸ ಇಬ್ಬರು ಕೂಡಿಕೊಂಡು ಚೌಕ ಪೊಲೀಸ ಠಾಣೆಗೆ ಬಂದೇವು. ಪೊಲೀಸ ಠಾಣೆಯಲ್ಲಿ ನನ್ನ ಅಳಿಯ ಲಕ್ಷ್ಮೀಕಾಂತ ಇತನು ತನ್ನ ಮಕ್ಕಳಾದ ಮೋಹಿತ, ಶ್ರೇಯಾ ಇವರೊಂದಿಗೆ ಇದಿದ್ದನ್ನು ನೋಡಿ ಅವನಿಗೆ ಸೋನಿ ಮತ್ತು ಮಯೂರಿ ಎಲ್ಲಿ ಇದ್ದಾರೆ ಅಂತಾ ಕೇಳಿದಾಗ ನನ್ನ ಅಳಿಯ ಲಕ್ಷ್ಮೀಕಾಂತ ಇತನು ತಿಳಿಸಿದ್ದೆನೆಂದೆರೆ, ತನ್ನ ಹೆಂಡತಿ ಅಂಜಲಿ ಇವಳು ಮನೆಯಲ್ಲಿ ಸೋನಿ ಮತ್ತು ಮಯೂರಿ ಬಿಟ್ಟು ಹೋದಾಗ ಅವರಿಬ್ಬರಿಗೆ ಕರೆದುಕೊಂಡು ಹೋಗುವುದಾಗಿ ಹೇಳಿದ್ದರಿಂದ, ಅವಳು ಮಕ್ಕಳಿಗೆ ಕರೆದುಕೊಂಡು ಹೋಗಿ ಅವರ ಭವಿಷ್ಯ ಹಾಳು ಮಾಡುತ್ತಾಳೆ ಎಂಬ ಸಿಟ್ಟಿನಿಂದ ನನ್ನ ಆಟೋ ಸಂಖ್ಯೆ ಕೆಎ 32 ಎ 3125 ರಲ್ಲಿ ಒಂದು ವಾರದಿಂದ ಮನೆಗೆ ಹೋಗದೇ ಆಟೋದಲ್ಲಿ ಅವರಿಗೆ ಕೂಡಿಸಿಕೊಂಡು ಕಿರಾಯಿ ಹೊಡೆಯುತ್ತಿದ್ದು, ಬಂದ ಹಣದಿಂದ ಅವರಿಗೆ ಊಟ ಮಾಡಿಸಿ ಕಲಬುರಗಿ ನಗರದಲ್ಲಿ ತಿರುಗಾಡುತ್ತಿದ್ದು ರಾತ್ರಿ ಸಮಯದಲ್ಲಿ ಕುಂಜ ಮಾಸಪ್ತಿ ದಗರ್ಾ ಮತ್ತು ರಾಣೇಶಪೀರ ದಗರ್ಾದಲ್ಲಿ ಮಲಗುತ್ತಿದ್ದು, ನನ್ನ ಹೆಂಡತಿ ಅಂಜಲಿ ಮಕ್ಕಳಿಗೆ ಕರೆದುಕೊಂಡು ಹೋಗಿ ಅವರ ಭವಿಷ್ಯ ಹಾಳು ಮಾಡುತ್ತಾಳೆ. ಅವಳು ನನ್ನ ಮಕ್ಕಳ ಭವಿಷ್ಯ ಹಾಳು ಮಾಡುವಕ್ಕಿಂತ ಮೊದಲೇ ನನ್ನ ಮಕ್ಕಳಿಗೆ ಕೊಲೆ ಮಾಡಬೇಕೆಂದು ನಿನ್ನೆ ದಿನಾಂಕ 28/04/2022 ರಂದು ನಿರ್ಧರಿಸಿಕೊಂಡು ಮಧ್ಯಾಹ್ನ 04-00 ಗಂಟೆ ಸುಮಾರಿಗೆ ವಿರೇಂದ್ರ ಪಾಟೀಲ ಬಡಾವಣೆಯಲ್ಲಿ ಇರುವ ವೀರಾಂಜನೇಯ ಗುಡಿಯ ಹಿಂಭಾಗದಲ್ಲಿ ಇರುವ ಗೇಟ ಹತ್ತಿರ ಆಟೋ ಹಚ್ಚಿ  ಗುಡಿಯ  ಆವರಣದಲ್ಲಿ ಇರುವ ಗಾರ್ಡನಕ್ಕೆ ಕರೆದುಕೊಂಡು ಹೋಗಿ 04 ಜನ ಮಕ್ಕಳಿಗೆ ಆಟ ಆಡಲು ಬಿಟ್ಟೆನು. ಸ್ವಲ್ಪ ಸಮಯದಲ್ಲಿ  ಹಿರಿಯ ಮಗಳು ಸೋನಾಲಿ ಇವಳಿಗೆ ತಿನ್ನಲಿಕೆ ಕೇಕ ಕೊಡಿಸುತ್ತೇನೆ ಎಂದು ಹೇಳಿ ಅವಳಿಗೆ ಕರೆದು ಅಟೋದ ಕಡೆಗೆ ಹೋಗುತ್ತಿರುವಾಗ ಉಳಿದ 03 ಜನ ಮಕ್ಕಳು ನಮ್ಮ ಹಿಂದೆ ಬರುತ್ತಿದ್ದಾಗ ಅವರಿಗೆ ಕೇಕ ತರುತ್ತೇನೆ ಅಲ್ಲೇ ಆಡಿರಿ ಎಂದು ಹೇಳಿ ಅವರಿಗೆ ಆಡಲಿಕ್ಕೆ ಕಳುಹಿಸಿ ಸೋನಾಲಿ ಇವಳಿಗೆ ಆಟೋ ನಿಲ್ಲಿಸಿದ ಕಡೆಗೆ ಕರೆದುಕೊಂಡು ಹೋಗಿ ಅವಳಿಗೆ ಆಟೋದ ಹಿಂದುಗಡೆ  ಕೂಡಿಸಿಕೊಂಡು ಗೇಟನಿಂದ ಸ್ವಲ್ಪ ದೂರದಲ್ಲಿ  ರೋಡ ಬದಿಯಲ್ಲಿ ಆಟೋ ಹಚ್ಚಿ, ಆಟೋದ ಹಿಂದೆ ಕುಳಿತ ಸೋನಾಲಿ ಹತ್ತಿರ ಹೋಗಿ ಅವಳಿಗೆ ಮೊದಲು  ಎಡಗೈಯಿಂದ ಬಾಯಿ ಮತ್ತು ಮೂಗು ಒತ್ತಿ ಹಿಡಿದು ಬಲಗೈಯಿಂದ ಕುತ್ತಿಗೆ ಒತ್ತಿ ಊರಿ ಸುಗಟ್ಟಿಸಿ ಕೊಲೆ ಮಾಡಿ ಮಲಗಿಸಿದೆನು. ನಂತರ ಆಟೋ ಚಾಲು ಮಾಡಿಕೊಂಡು ಎಂ.ಬಿ. ನಗರ ಪೊಲೀಸ ಸ್ಟೇಷನ ರೋಡ ಮುಖಾಂತರವಾಗಿ ಮತ್ತೆ ವೀರೆಂದ್ರ ಪಾಟೀಲ ಬಡಾವಣೆಯ ಮುಖಾಂತರವಾಗಿ ಮೊದಲು ನಿಲ್ಲಿಸಿದ ಸ್ಥಳಕ್ಕೆ ಬಂದು ಆಟೋ ನಿಲ್ಲಿಸಿ ಸೋನಾಲಿ ಇವಳಿಗೆ ಆಟೋದ ಸೀಟಿಗೆ ಆಸರೆಯಾಗಿ ಕೂಡಿಸಿದೆನು. ನಂತರ   ಗಾರ್ಡನದಲ್ಲಿ ಆಡುತ್ತಿರುವ ಮಕ್ಕಳ ಹತ್ತಿರ ಹೋಗಿ ಮಯೂರಿ ಇವಳಿಗೆ ತಿನ್ನಲಿಕ್ಕೆ  ಕೊಡಿಸುತ್ತೇನೆ ಎಂದು ಹೇಳಿ ಅವಳಿಗೂ ಕರೆದುಕೊಂಡು ಆಟೋ ಹತ್ತಿರ ಬಂದಾಗ ಮಯೂರಿ ಇವಳಿಗೆ ಅಕ್ಕ ಸೋನಾಲಿ ಮಲಗಿಕೊಂಡಿದ್ದಾಳೆ ಅವಳಿಗೆ ಎಬ್ಬಿಸಬೇಡಾ ಎಂದು ಹೇಳಿ ಮಯೂರಿಗೆ ಆಟೋದ ಹಿಂಭಾಗದಲ್ಲಿ ಕೂಡಿಕೊಂಡು  ಸೋನಾಲಿ ಇವಳಿಗೆ ಕರೆದುಕೊಂಡು ಹೋದ ರೋಡನಿಂದ ಎಂ.ಬಿ. ನಗರ ಪೊಲೀಸ ಸ್ಟೇಷನ ರೋಡ ಮುಖಾಂತರವಾಗಿ ಭಾಗ್ಯ ನಗರ ಕ್ರಾಸ ಹತ್ತಿರ ಕಚ್ಚಾ ರೋಡಿಗೆ ಕರೆದುಕೊಂಡು,  ರೋಡ ಬದಿಯಲ್ಲಿ ಆಟೋ ಹಚ್ಚಿ, ಸೋನಾಲಿ ಇವಳಿಗೆ ಕೊಲೆ ಮಾಡಿದಂತೆ ಆಟೋದ ಹಿಂದೆ ಕುಳಿತ ಮಯೂರಿ  ಹತ್ತಿರ ಹೋಗಿ ಅವಳಿಗೆ ಮೊದಲು ಎಡಗೈಯಿಂದ ಬಾಯಿ ಮತ್ತು ಮೂಗು ಒತ್ತಿ ಹಿಡಿದು ಬಲಗೈಯಿಂದ ಕುತ್ತಿಗೆ ಒತ್ತಿ ಊರಿ ಸುಗಟ್ಟಿಸಿ ಕೊಲೆ ಮಾಡಿದೆನು. ನಂತರ ಅವರಿಬ್ಬರು ಆಟೋದ ಹಿಂಭಾಗದಲ್ಲಿ ಇರುವ ಖುಲ್ಲಾ ಜಾಗೆಯಲ್ಲಿ ಇಬ್ಬರು ಮಕ್ಕಳಿಗೂ ಮಲಗಿಸಿ ಅಟೋದಲ್ಲಿ ಇರುವ ಬೆಡಶೀಟನಿಂದ ಮುಚ್ಚಿದೆನು. ಆಗ ಸಮಯ ಅಂದಾಜ 4-20 ಗಂಟೆ ಸಮಯ ಆಗಿರಬಹುದು.  ನಂತರ ಗಾರ್ಡನದಲ್ಲಿ ಆಟವಾಡುತ್ತಿದ್ದ ಮಕ್ಕಳಾದ ಮೋಹಿತ ಮತ್ತು ಶ್ರೇಯಾ ಇವರ ಹತ್ತಿರ ಹೋಗಿ ಅವರಿಗೆ ಕರೆದಾಗ ಅವರಿಬ್ಬರು ಅಕ್ಕ ಎಲ್ಲಿ ಅಂತಾ ಕೇಳಿದಾಗ ಅವರಿಗೆ ಅತ್ತೆ ಮನೆಗೆ ಕಳುಹಿಸಿ ಬಂದಿರುತ್ತೇನೆ ಎಂದು ಹೇಳಿದನು. ನಂತರ ಮಕ್ಕಳಿಗೆ ಆಟೋದಲ್ಲಿ ಕೂಡಿಸಿಕೊಂಡು ಖಾಜಾ ಬಂದೇ ನವಾಜ ದಗರ್ಾ ಕಡೆಗೆ ಹೋಗಿ ಅಲ್ಲಿಲ್ಲಿ ನಿಂತು ಕಾಲ ಕಳೆದೆನು. ಇಂದು ದಿನಾಂಕ 29/06/2022 ರಂದು ಬೆಳಿಗ್ಗೆ 8-00 ಗಂಟೆ ಸುಮಾರಿಗೆ ನನ್ನ ಅಟೋದೊಂದಿಗೆ ನಮ್ಮ ಮನೆ ಚೌಕ ಪೊಲೀಸ ಠಾಣೆ ವ್ಯಾಪ್ತಿಯಲ್ಲಿ  ಬರುತ್ತಿದ್ದರಿಂದ, ಚೌಕ ಪೊಲೀಸ ಠಾಣೆ ಹತ್ತಿರ ಆಟೋ ನಿಲ್ಲಿಸಿ, ಚೌಕ ಪೊಲೀಸ ಠಾಣೆಗೆ ಬಂದಿರುತ್ತೇನೆ ಎಂದು ತಿಳಿಸಿರುತ್ತಾನೆ. ನಂತರ ಲಕ್ಷ್ಮೀಕಾಂತ ಇತನಿಗೆ ಸೋನಿ ಮತ್ತು ಮಯೂರಿ ಎಲ್ಲಿದ್ದಾರೆ ಅಂತಾ ಕೇಳಿದಾಗ ಚೌಕ ಪೊಲೀಸ ಠಾಣೆ ಹತ್ತಿರ ನಿಲ್ಲಿಸಿದ ನನ್ನ ಆಟೋ ಸಂಖ್ಯೆ ಕೆಎ 32 ಎ 3125 ರ ಹಿಂಬದಿಯಲ್ಲಿ ಇರುತ್ತಾರೆ ಎಂದು ತಿಳಿಸಿದಾಗ ಆಟೋ ಹತ್ತಿರ ಹೋಗಿ ಮೊಮ್ಮಕ್ಕಳಾದ ಸೋನಾಲಿ ಮತ್ತು ಮಯೂರಿ ಇವರ ಮೃತ ದೇಹ ನೋಡಿ ಗುರುತಿಸಿದೆನು.     ನನ್ನ ಅಳಿಯ ಲಕ್ಷ್ಮೀಕಾಂತ ಇತನು ತನ್ನ ಹೆಂಡತಿ ಅಂಜಲಿ ಇವಳು ತನ್ನ ಮಕ್ಕಳಾದ ಸೋನಾಲಿ ಮತ್ತು ಮಯೂರಿ ಇವರಿಗೆ ತನ್ನ ಜೊತೆಯಲ್ಲಿ ಕರೆದುಕೊಂಡು ಹೋಗಿ ಅವರ ಭವಿಷ್ಯ ಹಾಳು ಮಾಡುತ್ತಾಳೆ. ಎಂಬ ದುರುದ್ದೇಶದಿಂದ  ನನ್ನ ಮೊಮ್ಮಕ್ಕಳಾದ ಸೋನಾಲಿ ಮತ್ತು ಮಯೂರಿ ಇವರಿಗೆ ಕುತ್ತಿಗೆ ಒತ್ತಿ ಊಸಿರುಗಟ್ಟಿಸಿ ಕೊಲೆ ಮಾಡಿದ ನನ್ನ ಅಳಿಯ ಲಕ್ಷ್ಮೀಕಾಂತ ತಂದೆ ಮಾರುತಿರಾವ ಮಾನೇಕರಿ ಸಾ: ಭೋವಿ ಗಲ್ಲಿ ಕಲಬುರಗಿ ಹಾ:ವ: ಫೀಲ್ಟರ ಬೇಡ ರಾಜೀವಗಾಂಧಿ ನಗರ ಕಲಬುರಗಿ ಇತನ ಮೇಲೆ ಕಾನೂನು ಕ್ರಮ ಜರುಗಿಸಿ, ಅಂತ್ಯಕ್ರಿಯೆ ಕುರಿತು ನನ್ನ ಮೊಮ್ಮಕ್ಕಳ ಮೃತದೇಹ ನನಗೆ ಒಪ್ಪಿಸಬೇಕೆಂದು ಹೇಳಿ ಗಣಕೀಕೃತ ಮಾಡಿಸಿ ಎಡಗೈ ಹೆಬ್ಬಟ್ಟಿನ ಸಹಿ ಮಾಡಿದ್ದು ನಿಜವಿರುತ್ತದೆ. ಸದರ ಹೇಳಿಕೆ ಫಿರ್ಯಾದಿಯು ಇಂದು ದಿನಾಂಕ ೨೯/೦೬/೨೦೨೨ ರಂದು ಬೆಳಿಗ್ಗೆ ೦೯-೦೦ ಎಎಂದಿಂದ ೧೦-೦೦ ಎಎಂ ವರೆಗೆ ಚೌಕ ಪೊಲೀಸ ಠಾಣೆಯಲ್ಲಿ ಕಂಪ್ಯೂಟರನಲ್ಲಿ ಗಣಕೀಕೃತ ಮಾಡಿಸಿ ಹೇಳಿಕೆ ಫಿರ್ಯಾದಿ ಪಡೆದುಕೊಂಡು ಸದರ ಹೇಳಿಕೆ ಫಿರ್ಯಾದಿಯೊಂದಿಗೆ ಬೆಳಿಗ್ಗೆ ೧೦-೧೫ ಎಎಂ ಗಂಟೆಗೆ ಎಂ.ಬಿ.ನಗರ ಠಾಣೆಗೆ ಬಂದು ಸದರ ಹೇಳಿಕೆ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

 

ಬ್ರಹ್ಮಪೂರ ಪೊಲೀಸ್ ಠಾಣೆ  :-  ದಿನಾಂಕ: 29-06-2022  ರಂದು ೧೨:೩೦  ಪಿಎಮ್ ಕ್ಕೆ ಫಿರ್ಯಾದಿದಾರರಾದ ನಾಗನಾಥ ತಂದೆ ರೇವಪ್ಪ ಮಡಿವಾಳ ವಯ:೫೬ವರ್ಷ ಜಾ:ಅಗಸರ ಉ:ಖಾಸಗಿ ಕೆಲಸ ಸಾ//ಮನೆ ನಂ ೩-೧೦೨೦/೨ ಬಜಾಜ್ ಶೋರೂಮ್ ಎದುರುಗಡೆ ಅತ್ತರ ಕಾಂಪೌಂಡ ಕಲಬುರಗಿ ನಗರ ಈ ಮೂಲಕ ವಿನಂತಿ ದೂರು ಅರ್ಜಿ ಸಲ್ಲಿಸುವುದೆನೆಂದರೆ, ನನ್ನದೊಂದು ಸ್ವಂತ ಸ್ಪ್ಲೆಂಡರ ಪ್ಲಸ್ ಮೋಟಾರ ಸೈಕಲ್ ನಂ: ಏಂ-೩೨-ಇಈ-೧೫೬೮ ನೇದ್ದು ಇದ್ದು ಸದರಿ ಮೋಟಾರ್ ಸೈಕಲ್‌ವು ನನ್ನ ಹೆಸರಿನಲ್ಲಿರುತ್ತದೆ. ಸದರಿ ಮೋಟಾರ್ ಸೈಕಲವು ದಿನಾಂಕ:೧೯/೦೬/೨೦೨೨ ರಂದು ಬೆಳಿಗ್ಗೆ ೦೭:೦೦ ಎಎಮ್ ಗಂಟೆಗೆ ಕಲಬುರಗಿ ನಗರದ ಎನ್ ವಿ ಗ್ರೌಂಡ ಹತ್ತಿರ ಇರುವ ಧರ್ಮಸಿಂಗ್ ರವರ ಮನೆಯ ಕಾಂಪೌAಡ ಪಕ್ಕದಲ್ಲ್ಲಿ ನಿಲ್ಲಿಸಿ ಎನ್ ವಿ ಗ್ರೌಂಡ್ ಒಳಗಡೆ ವಾಕಿಂಗ್ ಹೋಗಿ ವಾಕಿಂಗ್ ಮುಗಿಸಿಕೊಂಡು ಮರಳಿ ಅದೆ ದಿನ ಬೆಳಿಗ್ಗೆ ೦೮:೦೦ ಎಎಮ್ ಗಂಟೆಗೆ ಬಂದು ನಾನು ನಿಲ್ಲಿಸಿದ ಸ್ಥಳದಲ್ಲಿ ಮೋಟಾರ್ ಸೈಕಲ್ ನೋಡಲಾಗಿ ನನ್ನ ಮೋಟಾರ್ ಸೈಕಲ್ ಇರಲಿಲ್ಲಾ, ಮೋಟಾರ ಸೈಕಲ್ ಪತ್ತೆ ಕುರಿತು ಎಲ್ಲಾ ಕಡೆ ಹುಡುಕಾಡಿದರೂ ಮೋಟಾರ ಸೈಕಲ್ ಸಿಕ್ಕಿರುವುದಿಲ್ಲಾ ಆದರಿಂದ ಠಾಣೆಗೆ ಬಂದು ಅರ್ಜಿ ಕೊಡಲು ತಡವಾಗಿರುತ್ತದೆ. ಕಾರಣ ಕಳುವಾದ ನನ್ನ ಮೊಟಾರ ಸೈಕಲನ್ನು ಪತ್ತೆ ಹಚ್ಚಿ ಸೂಕ್ತ ಕಾನೂನು ಕ್ರಮ ಕೈಕೊಳ್ಳಬೇಕು ಅಂತಾ ಕೊಟ್ಟ ದೂರು ಅರ್ಜಿಯ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

ಇತ್ತೀಚಿನ ನವೀಕರಣ​ : 16-07-2022 05:32 PM ಅನುಮೋದಕರು: ADMIN


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕಲಬುರಗಿ ನಗರ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080