ಅಭಿಪ್ರಾಯ / ಸಲಹೆಗಳು

ರಾಘವೇಂದ್ರ ನಗರ  ಪೊಲೀಸ್ ಠಾಣೆ :- ದಿನಾಂಕಃ 29-03-2022 ರಂದು ೧೦.೩೦ ಎ.ಎಮ್ ಕ್ಕೆ  ಶ್ರೀ ಶಿವನಗೌಡ ಪಾಟೀಲ ತಂದೆ ಸಿದ್ದಣ್ಣಗೌಡ ಪಾಟೀಲ ವಯಃ ೫೭ ವರ್ಷ ಜಾಃ ಲಿಂಗಾಯತ ಉಃ ಸರಕಾರಿ ನೌಕರ ಸಾಃ ಜೇವರ್ಗಿ ಕಾಲೋನಿ ಕಲಬುರಗಿ. ರವರು ಠಾಣೆಗೆ ಹಾಜರಾಗಿ ಕನ್ನಡದಲ್ಲಿ ಗಣಕೀಕೃತ ಮಾಡಿಸಿದ ದೂರು ಹಾಜರಪಡಿಸಿದ್ದರ  ಸಾರಾಂಶವೆನೆಂದರೆ  ನಾನು ಶಿವನಗೌಡ ಪಾಟೀಲ ತಂದೆ ಸಿದ್ದಣ್ಣಗೌಡ ಪಾಟೀಲ ವಯಃ ೫೭ ವರ್ಷ ಜಾಃ ಲಿಂಗಾಯತ ಉಃ ಸರಕಾರಿ ನೌಕರ ಸಾಃ ಜೇವರ್ಗಿ ಕಾಲೋನಿ ಕಲಬುರಗಿ ನಿವಾಸಿತನಿದ್ದು ಮಾನ್ಯರವರಲ್ಲಿ ವಿನಂತಿಸಿಕೋಳ್ಳುವದೆನಂದರೆ ನಾನು ಕಲಬುರಗಿ ಮಹಾನಗರ ಪಾಲಿಕೆಯಲ್ಲಿ ಕಾರ್ಯಪಾಲಕ ಅಭಿಯಂತರರು ಅಂತ ಕೆಲಸ ಮಾಡಿಕೊಂಡು ಬಂದಿರುತ್ತೇನೆ. ಹೀಗೆ ಇರುವಾಗ ದಿನಾಂಕಃ ೨೨.೦೩.೨೦೨೨ ರಂದು ಸಾಯಾಂಕಾಲ ೬.೦೦ ಗಂಟೆಯ ಸುಮಾರಿಗೆ ಕಲಬುರಗಿ ನಗರದ ಶ್ರೀ ಶರಣಬಸವೇಶ್ವರ ದೇವಸ್ಥಾನದ ಆವರಣದಲ್ಲಿ ಜರಗಲ್ಲಿರುವ ರಥೋತ್ಸವಕ್ಕೆ  ಬಂದಿರುತ್ತೇನೆ ಆ  ಸಮಯದಲ್ಲಿ ಸುಮಾರು ಜನರು ಸೇರಿದ್ದು ಇರುತ್ತದೆ. ನಾನು ಸಹ ಆ ಸಮಯದಲ್ಲಿ ಆ ರಥೋತ್ಸವ ಕಾರ್ಯಕ್ರಮದಲ್ಲಿ ಬಾಗಿಯಾಗಿರುತ್ತೇನೆ. ನಾನು ಶರಣಬಸವೇಶ್ವರ ದೇವಸ್ಥಾನದ ತೇರು ಹತ್ತಿರ ನಾನು ನಮಸ್ಕಾರ ಮಾಡುವದಕ್ಕೆ ಹೋದ ಸಮಯದಲ್ಲಿ ನನ್ನ ಹಿಂದಿನಿಂದ ಯಾರೋ ಒಬ್ಬ ವ್ಯಕ್ತಿ ಬಂದು  ನನ್ನ ಕೊರಳ್ಳಲ್ಲಿನ ೩೫ ಗ್ರಾಂ ಬಂಗರಾದ ಚೈನ್ ಅಃಕಿಃ ೧,೫೦,೦೦೦ ರೂ ಕಿತ್ತಿಕೊಂಡು ಹೋಗಿದ್ದು ಇರುತ್ತದೆ. ಆತನಿಗೆ ಹಿಡಯುವಷ್ಟರಲ್ಲೆ ಆತನು ತಪ್ಪಿಸಿಕೊಂಡಿರುತ್ತಾನೆ. ತಕ್ಷಣ ನಾನು ಕೆಳಗಡೆ ಮತ್ತು ಆಜು ಬಾಜು ಹುಡಕಾಡಿದ್ದು ನನ್ನ ಬಂಗಾರದ ಚೈನ್ ಸಿಕ್ಕಿರುವದಿಲ್ಲ.  ನಂತರ ಅಲ್ಲೆ ಇರುವ ಪೊಲೀಸ್ ಸಿಬ್ಬಂದಿಯವರಿಗೆ ತಿಳಿಸಿದ್ದು ಇರುತ್ತದೆ. ನಂತರ ನಾನು ಗಾಭರಿಗೊಂಡು ನನ್ನ ಮನೆಗೆ ಹೋಗಿರುತ್ತೇನೆ. ನಮ್ಮ ಮನೆಯಲ್ಲಿ ನನ್ನ ಕುಟುಂಬದೊಂದಿಗೆ ವಿಚಾರಿಸಿಕೊಂಡು ಬಂದು ಇಂದು ತಡವಾಗಿ ದೂರು ನೀಡುತ್ತಿದೇನೆ . ಕಾರಣ ದಿನಾಂಕಃ ೨೨.೦೩.೨೦೨೨ ರಂದು ಸಾಯಾಂಕಾಲ ೬.೦೦ ಗಂಟೆಯ ಸುಮಾರಿಗೆ ಯಾರೋ ಅಪರಿಚೀತರು ವ್ಯಕ್ತಿ ನನ್ನ  ಕೊರಳ್ಳಲಿನ ಬಂಗಾರದ ಚೈನ್ ಕಿತ್ತಿಕೊಂಡು  ಹೋದ ವ್ಯಕ್ತಿ ವಿರುದ್ಧ ಕಾನೂನು ಕ್ರಮ ಜರಗಿಸಲು ವಿನಂತಿ. ಮತ್ತು ನನ್ನ ಬಂಗಾರದ ಚೈನ್ ನನಗೆ ಕೊಡಿಸಲು ವಿನಂತಿ. ಅಂತ ಇತ್ಯಾದಿಯಾಗಿ ಕೊಟ್ಟ ದೂರಿನ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.‌

ರೋಜಾ ಪೊಲೀಸ್ ಠಾಣೆ:- ದಿನಾಂಕ ೨೯.೦೩.೨೦೨೨ ರಂದು ೧೬;೦೦ ಗಂಟೆಗೆ ಶ್ರೀಮತಿ ಗೌಸಿಯಾ ಬೇಗಂ ಗಂಡ ಮಹ್ಮದ ಅಲಿ ಪಟೇಲ  ವಯಾ; ೪೦ ವರ್ಷ ಉಃ ಖಾಸಗಿ ಶಾಲೆಯಲ್ಲಿ ಶಿಕ್ಷಕರು  ಸಾಃ ಮನೆ ನಂ 5-470/107/4/A. ೩ನೇ ಕ್ರಾಸ್ ಇಸ್ಲಾಮಾಬಾದ  ಕಾಲೋನಿ ರೋಜಾ ಕಲಬುರಗಿ. ಇವರು ಪೋಲಿಸ ಠಾಣೆಗೆ ಬಂದು ತಮ್ಮ ಮನೆ ಕಳ್ಳತನ ವಾದ ಬಗ್ಗೆ ದೂರನ್ನು ನೀಡಿದ್ದರ ಸಾರಾಂಶವೇನಂದರೆ   ನಿನ್ನೆ ದಿನಾಂಕ  ೨೮-೦೩-೨೦೨೨ ಮದ್ಯಾಹ್ನ ೩:೦೦ ಗಂಟೆ ಸುಮಾರಿಗೆ ನಮ್ಮ ಸಂಬಂಧಿಕರಲ್ಲಿ ಮನೆಯಲ್ಲಿ  ತೊಟ್ಟಿಲು ಕಾರ್ಯಕ್ರಮ ಇದ್ದ ಕಾರಣ ನಾನು ಮತ್ತು ಮಕ್ಕಳು ಕೂಡಿಕೊಂಡು ಮನೆ ಕೀಲಿ ಹಾಕಿಕೊಂಡು ಮಿಜ್ಬಾ ನಗರಕ್ಕೆ ಹೋಗಿರುತ್ತೇವೆ.  ನಂತರ ರಾತ್ರಿ ೧೦:೩೦ ಗಂಟೆ ಸುಮಾರಿಗೆ ಕಾರ್ಯಕ್ರಮ ಮುಗಿಸಿಕೊಂಡು ಮನೆಗೆ ಬಂದ ನಂತರ ರಾತ್ರಿ ೧೧:೩೦ ಗಂಟೆ ಸುಮಾರಿಗೆ ನಮ್ಮ ಮನೆಗೆ ಕೀಲಿ ಹಾಕಿ ನಮ್ಮ ಮನೆ ಮುಂದೆ ಸ್ಚಲ್ಪ ದೂರದಲ್ಲಿರುವ ನನ್ನ ತಾಯಿಯಾದ ಖುರ್ಷಿದ್ ಬೇಗಂ ಇವರ ಮನೆಗೆ ಹೋಗಿ ರಾತ್ರಿ ಎಲ್ಲರು ಅಲ್ಲೆ ಮಲಗಿಕೊಂಡಿರುತ್ತೇವೆ. ಇಂದು ದಿನಾಂಕ ೨೯/೦೩/೨೦೨೨ ರಂದು ಬೆಳಿಗ್ಗೆ ೭:೦೦ ಗಂಟೆಗೆ ನಮ್ಮ ತಾಯಿಯ ಮನೆಯಿಂದ ಮರಳಿ ಮನೆಗೆ ಬಂದು ನೋಡಲಾಗಿ ಮನೆಯ ಕಂಪೌಂಡ ಬೀಗ ಹಾಕಿದ್ದಿ ಇತ್ತು  ಮುಖ್ಯದ್ವಾರದ ಕೀಲಿ ಹಾಕುವ ಕೊಂಡಿ ಮುರಿದಿರುತ್ತದೆ. ನಂತರ ಮನೆಯ ಒಳಗೆ ಹೋಗಿ ನೋಡಲಾಗಿ ಮನೆಯ ಬೆಡ ರೂಮಿನಲ್ಲಿದ್ದ ೨ ಆಲಮಾರಿಗಳ ಕೀಲಿ ಮುರಿದಿದ್ದು ಆಲಮಾರಿಯಲ್ಲಿದ್ದ ಈ ಕೆಳಕಂಡ ಬಂಗಾರದ ಆಭರಣಗಳು ಕಳ್ಳತನವಾಗಿರುತ್ತವೆ.

೧)           ಒಂದು ಬಂಗಾರ ಮಂಗಳ ಸೂತ್ರ ೩ ತೊಲೆ ಅ.ಕಿ 90000-00ರೂ

೨)           ಎರಡು ಬಂಗಾರದ ಉಂಗುರುಗಳು ೨ ತೊಲೆ ಅ.ಕಿ 60000-00ರೂ

೩)           ೧೪ ಸಣ್ಣ  ಬಂಗಾರ ಉಂಗುರುಗಳು ೪ ತೊಲೆ ಅ.ಕಿ 120000-00ರೂ

೪)           ಒಂದು ಬಂಗಾರದ ನೆಕ್ಲೆಸ್ ೨.೫ ತೊಲೆ ಅ.ಕಿ 75000-00 ರೂ

೫)           ಒಂದು ಬಂಗಾರದ ಲಾಕೆಟ್ ಸಂಗಡ ಪೆಂಡೆಂಟ್ ೨ ತೊಲೆ ಅ.ಕಿ 60000-00ರೂ

೬)           ಎರಡು ಬಂಗಾರದ ಕಿವಿ ಓಲೆ ೫ ಗ್ರಾಂ ಅ.ಕಿ 15000-00ರೂ

೭)           ಎರಡು ಬಂಗಾರದ ಜುಮಕಿ ೮ ಗ್ರಾಂ ಅ.ಕಿ 24000-00ರೂ

೮)           ಇತರೆ ಸಣ್ಣಪುಟ್ಟ ಬಂಗಾರದ ಆಭರಣಗಳು ೪.೮ ತೊಲೆ ಅ.ಕಿ 144000-00 ರೂ

೯)           ೨೫ ತೊಲೆ ಬೆಳ್ಳಿ ಆಭರಣಗಳು ಅ.ಕಿ 7500-00 ರೂ

೧೦)        ನಗದು ಹಣ 60000-00 ರೂ

               ಈಗೆ ಒಟ್ಟು ೨೦ ತೊಲೆ ಅ.ಕಿ ಆರು ಲಕ್ಷ ರೂ ಬಂಗಾರ ಹಾಗೂ ೨೫ ತೊಲೆ ಬೆಳ್ಳಿ ಆಭರಣಗಳು ಅ.ಕಿ 7500-00 ಸಾ. ರೂ ಹಾಗೂ ನಗದು ಹಣ 60000-00 ರೂ ಈಗೆ ಒಟ್ಟು 655500-00  ರೂ  ಬೆಲೆ ಬಾಳುವಗಳನ್ನು ಯಾರೋ ಅಪರಿಚಿತ ಕಳ್ಳರು ಆಲಮಾರಿಯ ಕೀಲಿಗಳನ್ನು ಮುರಿದು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ.  ತಾವುಗಳು ನನ್ನ ಮನೆಯಲ್ಲಿನ ಕಳುವಾದ ಬಂಗಾರದ ಆಭರಣಗಳನ್ನು ಕಳ್ಳತನ ಮಾಡಿದ ಆರೋಪಿತರನ್ನು ಪತ್ತೆ ಹಚ್ಚಿ ಅವರ ಮೇಲೆ ಕಾನೂನಿನ ಕ್ರಮ ಜರುಗಿಸಬೇಕೆಂದು ದೂರಿನ ಸಾರಾಂಶದ ಮೇಲಿಂದಾ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

ಇತ್ತೀಚಿನ ನವೀಕರಣ​ : 08-04-2022 01:23 PM ಅನುಮೋದಕರು: ADMIN


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕಲಬುರಗಿ ನಗರ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080