Feedback / Suggestions

ರಾಘವೇಂದ್ರ ನಗರ  ಪೊಲೀಸ್ ಠಾಣೆ :- ದಿನಾಂಕಃ 29-03-2022 ರಂದು ೧೦.೩೦ ಎ.ಎಮ್ ಕ್ಕೆ  ಶ್ರೀ ಶಿವನಗೌಡ ಪಾಟೀಲ ತಂದೆ ಸಿದ್ದಣ್ಣಗೌಡ ಪಾಟೀಲ ವಯಃ ೫೭ ವರ್ಷ ಜಾಃ ಲಿಂಗಾಯತ ಉಃ ಸರಕಾರಿ ನೌಕರ ಸಾಃ ಜೇವರ್ಗಿ ಕಾಲೋನಿ ಕಲಬುರಗಿ. ರವರು ಠಾಣೆಗೆ ಹಾಜರಾಗಿ ಕನ್ನಡದಲ್ಲಿ ಗಣಕೀಕೃತ ಮಾಡಿಸಿದ ದೂರು ಹಾಜರಪಡಿಸಿದ್ದರ  ಸಾರಾಂಶವೆನೆಂದರೆ  ನಾನು ಶಿವನಗೌಡ ಪಾಟೀಲ ತಂದೆ ಸಿದ್ದಣ್ಣಗೌಡ ಪಾಟೀಲ ವಯಃ ೫೭ ವರ್ಷ ಜಾಃ ಲಿಂಗಾಯತ ಉಃ ಸರಕಾರಿ ನೌಕರ ಸಾಃ ಜೇವರ್ಗಿ ಕಾಲೋನಿ ಕಲಬುರಗಿ ನಿವಾಸಿತನಿದ್ದು ಮಾನ್ಯರವರಲ್ಲಿ ವಿನಂತಿಸಿಕೋಳ್ಳುವದೆನಂದರೆ ನಾನು ಕಲಬುರಗಿ ಮಹಾನಗರ ಪಾಲಿಕೆಯಲ್ಲಿ ಕಾರ್ಯಪಾಲಕ ಅಭಿಯಂತರರು ಅಂತ ಕೆಲಸ ಮಾಡಿಕೊಂಡು ಬಂದಿರುತ್ತೇನೆ. ಹೀಗೆ ಇರುವಾಗ ದಿನಾಂಕಃ ೨೨.೦೩.೨೦೨೨ ರಂದು ಸಾಯಾಂಕಾಲ ೬.೦೦ ಗಂಟೆಯ ಸುಮಾರಿಗೆ ಕಲಬುರಗಿ ನಗರದ ಶ್ರೀ ಶರಣಬಸವೇಶ್ವರ ದೇವಸ್ಥಾನದ ಆವರಣದಲ್ಲಿ ಜರಗಲ್ಲಿರುವ ರಥೋತ್ಸವಕ್ಕೆ  ಬಂದಿರುತ್ತೇನೆ ಆ  ಸಮಯದಲ್ಲಿ ಸುಮಾರು ಜನರು ಸೇರಿದ್ದು ಇರುತ್ತದೆ. ನಾನು ಸಹ ಆ ಸಮಯದಲ್ಲಿ ಆ ರಥೋತ್ಸವ ಕಾರ್ಯಕ್ರಮದಲ್ಲಿ ಬಾಗಿಯಾಗಿರುತ್ತೇನೆ. ನಾನು ಶರಣಬಸವೇಶ್ವರ ದೇವಸ್ಥಾನದ ತೇರು ಹತ್ತಿರ ನಾನು ನಮಸ್ಕಾರ ಮಾಡುವದಕ್ಕೆ ಹೋದ ಸಮಯದಲ್ಲಿ ನನ್ನ ಹಿಂದಿನಿಂದ ಯಾರೋ ಒಬ್ಬ ವ್ಯಕ್ತಿ ಬಂದು  ನನ್ನ ಕೊರಳ್ಳಲ್ಲಿನ ೩೫ ಗ್ರಾಂ ಬಂಗರಾದ ಚೈನ್ ಅಃಕಿಃ ೧,೫೦,೦೦೦ ರೂ ಕಿತ್ತಿಕೊಂಡು ಹೋಗಿದ್ದು ಇರುತ್ತದೆ. ಆತನಿಗೆ ಹಿಡಯುವಷ್ಟರಲ್ಲೆ ಆತನು ತಪ್ಪಿಸಿಕೊಂಡಿರುತ್ತಾನೆ. ತಕ್ಷಣ ನಾನು ಕೆಳಗಡೆ ಮತ್ತು ಆಜು ಬಾಜು ಹುಡಕಾಡಿದ್ದು ನನ್ನ ಬಂಗಾರದ ಚೈನ್ ಸಿಕ್ಕಿರುವದಿಲ್ಲ.  ನಂತರ ಅಲ್ಲೆ ಇರುವ ಪೊಲೀಸ್ ಸಿಬ್ಬಂದಿಯವರಿಗೆ ತಿಳಿಸಿದ್ದು ಇರುತ್ತದೆ. ನಂತರ ನಾನು ಗಾಭರಿಗೊಂಡು ನನ್ನ ಮನೆಗೆ ಹೋಗಿರುತ್ತೇನೆ. ನಮ್ಮ ಮನೆಯಲ್ಲಿ ನನ್ನ ಕುಟುಂಬದೊಂದಿಗೆ ವಿಚಾರಿಸಿಕೊಂಡು ಬಂದು ಇಂದು ತಡವಾಗಿ ದೂರು ನೀಡುತ್ತಿದೇನೆ . ಕಾರಣ ದಿನಾಂಕಃ ೨೨.೦೩.೨೦೨೨ ರಂದು ಸಾಯಾಂಕಾಲ ೬.೦೦ ಗಂಟೆಯ ಸುಮಾರಿಗೆ ಯಾರೋ ಅಪರಿಚೀತರು ವ್ಯಕ್ತಿ ನನ್ನ  ಕೊರಳ್ಳಲಿನ ಬಂಗಾರದ ಚೈನ್ ಕಿತ್ತಿಕೊಂಡು  ಹೋದ ವ್ಯಕ್ತಿ ವಿರುದ್ಧ ಕಾನೂನು ಕ್ರಮ ಜರಗಿಸಲು ವಿನಂತಿ. ಮತ್ತು ನನ್ನ ಬಂಗಾರದ ಚೈನ್ ನನಗೆ ಕೊಡಿಸಲು ವಿನಂತಿ. ಅಂತ ಇತ್ಯಾದಿಯಾಗಿ ಕೊಟ್ಟ ದೂರಿನ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

ರೋಜಾ ಪೊಲೀಸ್ ಠಾಣೆ:- ದಿನಾಂಕ ೨೯.೦೩.೨೦೨೨ ರಂದು ೧೬;೦೦ ಗಂಟೆಗೆ ಶ್ರೀಮತಿ ಗೌಸಿಯಾ ಬೇಗಂ ಗಂಡ ಮಹ್ಮದ ಅಲಿ ಪಟೇಲ  ವಯಾ; ೪೦ ವರ್ಷ ಉಃ ಖಾಸಗಿ ಶಾಲೆಯಲ್ಲಿ ಶಿಕ್ಷಕರು  ಸಾಃ ಮನೆ ನಂ 5-470/107/4/A. ೩ನೇ ಕ್ರಾಸ್ ಇಸ್ಲಾಮಾಬಾದ  ಕಾಲೋನಿ ರೋಜಾ ಕಲಬುರಗಿ. ಇವರು ಪೋಲಿಸ ಠಾಣೆಗೆ ಬಂದು ತಮ್ಮ ಮನೆ ಕಳ್ಳತನ ವಾದ ಬಗ್ಗೆ ದೂರನ್ನು ನೀಡಿದ್ದರ ಸಾರಾಂಶವೇನಂದರೆ   ನಿನ್ನೆ ದಿನಾಂಕ  ೨೮-೦೩-೨೦೨೨ ಮದ್ಯಾಹ್ನ ೩:೦೦ ಗಂಟೆ ಸುಮಾರಿಗೆ ನಮ್ಮ ಸಂಬಂಧಿಕರಲ್ಲಿ ಮನೆಯಲ್ಲಿ  ತೊಟ್ಟಿಲು ಕಾರ್ಯಕ್ರಮ ಇದ್ದ ಕಾರಣ ನಾನು ಮತ್ತು ಮಕ್ಕಳು ಕೂಡಿಕೊಂಡು ಮನೆ ಕೀಲಿ ಹಾಕಿಕೊಂಡು ಮಿಜ್ಬಾ ನಗರಕ್ಕೆ ಹೋಗಿರುತ್ತೇವೆ.  ನಂತರ ರಾತ್ರಿ ೧೦:೩೦ ಗಂಟೆ ಸುಮಾರಿಗೆ ಕಾರ್ಯಕ್ರಮ ಮುಗಿಸಿಕೊಂಡು ಮನೆಗೆ ಬಂದ ನಂತರ ರಾತ್ರಿ ೧೧:೩೦ ಗಂಟೆ ಸುಮಾರಿಗೆ ನಮ್ಮ ಮನೆಗೆ ಕೀಲಿ ಹಾಕಿ ನಮ್ಮ ಮನೆ ಮುಂದೆ ಸ್ಚಲ್ಪ ದೂರದಲ್ಲಿರುವ ನನ್ನ ತಾಯಿಯಾದ ಖುರ್ಷಿದ್ ಬೇಗಂ ಇವರ ಮನೆಗೆ ಹೋಗಿ ರಾತ್ರಿ ಎಲ್ಲರು ಅಲ್ಲೆ ಮಲಗಿಕೊಂಡಿರುತ್ತೇವೆ. ಇಂದು ದಿನಾಂಕ ೨೯/೦೩/೨೦೨೨ ರಂದು ಬೆಳಿಗ್ಗೆ ೭:೦೦ ಗಂಟೆಗೆ ನಮ್ಮ ತಾಯಿಯ ಮನೆಯಿಂದ ಮರಳಿ ಮನೆಗೆ ಬಂದು ನೋಡಲಾಗಿ ಮನೆಯ ಕಂಪೌಂಡ ಬೀಗ ಹಾಕಿದ್ದಿ ಇತ್ತು  ಮುಖ್ಯದ್ವಾರದ ಕೀಲಿ ಹಾಕುವ ಕೊಂಡಿ ಮುರಿದಿರುತ್ತದೆ. ನಂತರ ಮನೆಯ ಒಳಗೆ ಹೋಗಿ ನೋಡಲಾಗಿ ಮನೆಯ ಬೆಡ ರೂಮಿನಲ್ಲಿದ್ದ ೨ ಆಲಮಾರಿಗಳ ಕೀಲಿ ಮುರಿದಿದ್ದು ಆಲಮಾರಿಯಲ್ಲಿದ್ದ ಈ ಕೆಳಕಂಡ ಬಂಗಾರದ ಆಭರಣಗಳು ಕಳ್ಳತನವಾಗಿರುತ್ತವೆ.

೧)           ಒಂದು ಬಂಗಾರ ಮಂಗಳ ಸೂತ್ರ ೩ ತೊಲೆ ಅ.ಕಿ 90000-00ರೂ

೨)           ಎರಡು ಬಂಗಾರದ ಉಂಗುರುಗಳು ೨ ತೊಲೆ ಅ.ಕಿ 60000-00ರೂ

೩)           ೧೪ ಸಣ್ಣ  ಬಂಗಾರ ಉಂಗುರುಗಳು ೪ ತೊಲೆ ಅ.ಕಿ 120000-00ರೂ

೪)           ಒಂದು ಬಂಗಾರದ ನೆಕ್ಲೆಸ್ ೨.೫ ತೊಲೆ ಅ.ಕಿ 75000-00 ರೂ

೫)           ಒಂದು ಬಂಗಾರದ ಲಾಕೆಟ್ ಸಂಗಡ ಪೆಂಡೆಂಟ್ ೨ ತೊಲೆ ಅ.ಕಿ 60000-00ರೂ

೬)           ಎರಡು ಬಂಗಾರದ ಕಿವಿ ಓಲೆ ೫ ಗ್ರಾಂ ಅ.ಕಿ 15000-00ರೂ

೭)           ಎರಡು ಬಂಗಾರದ ಜುಮಕಿ ೮ ಗ್ರಾಂ ಅ.ಕಿ 24000-00ರೂ

೮)           ಇತರೆ ಸಣ್ಣಪುಟ್ಟ ಬಂಗಾರದ ಆಭರಣಗಳು ೪.೮ ತೊಲೆ ಅ.ಕಿ 144000-00 ರೂ

೯)           ೨೫ ತೊಲೆ ಬೆಳ್ಳಿ ಆಭರಣಗಳು ಅ.ಕಿ 7500-00 ರೂ

೧೦)        ನಗದು ಹಣ 60000-00 ರೂ

               ಈಗೆ ಒಟ್ಟು ೨೦ ತೊಲೆ ಅ.ಕಿ ಆರು ಲಕ್ಷ ರೂ ಬಂಗಾರ ಹಾಗೂ ೨೫ ತೊಲೆ ಬೆಳ್ಳಿ ಆಭರಣಗಳು ಅ.ಕಿ 7500-00 ಸಾ. ರೂ ಹಾಗೂ ನಗದು ಹಣ 60000-00 ರೂ ಈಗೆ ಒಟ್ಟು 655500-00  ರೂ  ಬೆಲೆ ಬಾಳುವಗಳನ್ನು ಯಾರೋ ಅಪರಿಚಿತ ಕಳ್ಳರು ಆಲಮಾರಿಯ ಕೀಲಿಗಳನ್ನು ಮುರಿದು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ.  ತಾವುಗಳು ನನ್ನ ಮನೆಯಲ್ಲಿನ ಕಳುವಾದ ಬಂಗಾರದ ಆಭರಣಗಳನ್ನು ಕಳ್ಳತನ ಮಾಡಿದ ಆರೋಪಿತರನ್ನು ಪತ್ತೆ ಹಚ್ಚಿ ಅವರ ಮೇಲೆ ಕಾನೂನಿನ ಕ್ರಮ ಜರುಗಿಸಬೇಕೆಂದು ದೂರಿನ ಸಾರಾಂಶದ ಮೇಲಿಂದಾ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

Last Updated: 08-04-2022 01:23 PM Updated By: ADMIN


Disclaimer :

Please note that this page also provides links to the websites / web pages of Govt. Ministries/Departments/Organisations.The content of these websites are owned by the respective organisations and they may be contacted for any further information or suggestion

Website Policies

  • Copyright Policy
  • Hyperlinking Policy
  • Security Policy
  • Terms & Conditions
  • Privacy Policy
  • Help
  • Screen Reader Access
  • Guidelines

Visitors

  • Last Updated​ :
  • Visitors Counter :
  • Version :
CONTENT OWNED AND MAINTAINED BY : Kalaburagi City Police
Designed, Developed and Hosted by: Center for e-Governance - Web Portal, Government of Karnataka © 2022, All Rights Reserved.

Best viewed in Chrome v-87.0.4280.141, Microsoft Edge v-87.0.664.75, Firefox -v-83.0 Browsers. Resolution : 1280x800 to 1920x1080