Feedback / Suggestions

ಸಂಚಾರಿ ಪೊಲೀಸ ಠಾಣೆ -2 :-  ದಿನಾಂಕ 29/01/2023 ರಂದು ಮಧ್ಯಾಹ್ನ 2:30 ಗಂಟೆಗೆ ಶ್ರೀ. ತುಲಚಸಿಂಗ ತಂದೆ ದೀಪಸಿಂಗ ರಜಪೂತ ವಯಃ 57 ವರ್ಷ ಜಾತಿಃ ರಜಪೂತ ಉಃ ಒಕ್ಕಲುತನ ಸಾಃ ಡೆರಿಯಾ ಕರ್ಗಾಕಿ ಢಾಣಿ ತಾಃ ಶೇರಗಡ ಜಿಲ್ಲಾಃ ಜೋಧಪೂರ ರಾಜಸ್ಧಾನ ಹಾ.ವಃ ಲೊಯಾ ಬಿಲ್ಡಿಂಗ ಬಂಬು ಬಜಾರ ಜಿ.ಡಿ.ಎ ಕಾಲೋನಿ ಕಲಬುರಗಿ ಇವರು ಠಾಣೆಗೆ ಹಾಜರಾಗಿ ಫಿರ್ಯಾದಿ ಹೇಳಿಕೆ ನೀಡಿದ್ದು ಸಾರಂಶವೆನೆಂದರೆ, ನಾನು ಮೇಲಿನ ವಿಳಾಸದವನಿದ್ದು, ನಮ್ಮೂರಲ್ಲಿ ಒಕ್ಕಲುತನ ಕೆಲಸ ಮಾಡಿಕೊಂಡಿರುತ್ತೆನೆ. ನನ್ನ ಮಗಳಾದ ಮೂಲಿಕವರ ಇವಳು ತನ್ನ ಕುಟುಂಬದೊಂದಿಗೆ ಕಲಬುರಗಿ ನಗರದ ಬಂಬು ಬಜಾರ ಏರಿಯಾದ ಲೊಯಾ ಬಿಲ್ಡಿಂಗದಲ್ಲಿ ವಾಸವಾಗಿದ್ದು, ಇಲ್ಲಿಯೇ ಕೆಲಸ ಮಾಡಿಕೊಂಡಿರುವುದರಿಂದ ಅವರಿಗೆ ಭೇಟಿಯಾಗುವ ಕುರಿತು ರಾಜಸ್ಧಾನದಿಂದ ನಾನು ಮತ್ತು ನನ್ನ ಅಣ್ಣನ ಮಗ ನಕತಸಿಂಗ, ಇವರ ಮಗನಾದ ಸ್ವರುಪಸಿಂಗ ವಯಃ 18 ವರ್ಷ ಈತನೊಂದಿಗೆ ಈಗ 8-10 ದಿವಸಗಳ ಹಿಂದೆ ಬಂದಿರುತ್ತೆವೆ. ಹೀಗಿದ್ದು, ಇಂದು ದಿನಾಂಕ 29/01/2023 ರಂದು ನನ್ನ ಮಗಳ ಮನೆಯಲ್ಲಿ ನಾನು, ನಮ್ಮ ಅಳಿಯ ದಿಲೀಪಸಿಂಗ ಮಾತನಾಡುತ್ತಾ ಮಧ್ಯಾಹ್ನ 12:00 ಗಂಟೆ ನಂತರ ಕುಳಿತುಕೊಂಡಾಗ ನಕತಸಿಂಗ ಈತನ ಮಗನಾದ ಸ್ವರೂಪಸಿಂಗ ವಯಃ 18 ವರ್ಷ ಈತನು ನಮಗೆ ಗೊತ್ತಿಲ್ಲದಂತೆ ಅಳಿಯ ದಿಲೀಪಸಿಂಗ ಇವರು ತಂದಿರುವ ಎಕ್ಟಿವಾ ಮೋಟರ ಸೈಕಲ ನಂ. ಕೆಎ 32 ಇ.ಎಮ್ 8536 ನೇದ್ದನ್ನು ನಮಗೆ ಹೇಳದೆ, ಕೇಳದೆ ಸುಮ್ಮನೆ ತಿರುಗಾಡುವ ಕುರಿತು ತೆಗೆದುಕೊಂಡು ಹೋಗಿದ್ದು, ಮುಂದೆ 12:40 ಗಂಟೆ ಸುಮಾರಿಗೆ ನಮ್ಮ ಜನಾಂಗದ ಬಾಬುಸಿಂಗ ತಂದೆ ಅಮೇರಸಿಂಗ ಈತನು ನಮ್ಮ ಅಳಿಯ ದಿಲೀಪಸಿಂಗನಿಗೆ ಫೋನ್ ಮಾಡಿ ನಿಮ್ಮ ಎಕ್ಟಿವಾ ಮೋಟರ ಸೈಕಲ ನಂ. ಕೆಎ 32 ಇ.ಎಮ್ 8536 ನೇದ್ದನ್ನು ನಿನ್ನ ಕಡೆಯ ಹುಡುಗನಾದ ಸ್ವರೂಪಸಿಂಗ ಈತನು ಈ ಮೋಟರ ಸೈಕಲನ್ನು ಜಿ.ಡಿ.ಎ ಕಾಲೋನಿ ಟವರ ಕಡೆಯಿಂದ ಬಂಬು ಬಜಾರದ ಬಸ್ ಸ್ಟ್ಯಾಂಡ ಕಡೆಗೆ ಒಳರೋಡಿಗೆ ಟವರದ ಸ್ವಲ್ಪ ಮುಂದೆ ವೇಗವಾಗಿ ಮತ್ತು ಅಲಕ್ಷತನದಿಂದ ಬರುವಾಗ ಈಗ ಮಧ್ಯಾಹ್ನ 12:30 ಗಂಟೆ ಸುಮಾರಿಗೆ ವೇಗದಲ್ಲಿರುವ ಮೋಟರ ಸೈಕಲಗೆ ಒಮ್ಮೇಲೆ ಬ್ರೇಕ ಹಾಕಿದಕ್ಕೆ ರೋಡಿಗೆ ಮೋಟರ ಸೈಕಲದೊಂದಿಗೆ ಬಿದ್ದಿದ್ದರಿಂದ ಬಲಭಾಗದ ಮೆಲಕಿಗೆ, ಕಣ್ಣಿಗೆ ಮತ್ತು ಹುಬ್ಬಿನ ಹತ್ತೀರ ಹಾತು ತಲೆಯ ಭಾಗಕ್ಕೆ ಭಾರಿ ರಕ್ತಗಾಯವಾಗಿ ಸ್ಧಳದಲ್ಲಿ ಮೃತ ಪಟ್ಟಿರುತ್ತಾನೆ ಅಂತಾ ತಿಳಿಸಿದಕ್ಕೆ, ನಾನು ಗಾಬರಿಗೊಂಡು ನನ್ನ ಅಳಿಯ ದಿಲೀಪಸಿಂಗ ತಂದೆ ಡೊಂಗರಸಿಂಗ ರವರೊಂದಿಗೆ ಹೋಗಿ ನೋಡಲಾಗಿ ಮೇಲಿನಂತೆ ಗಾಯಗಳಾಗಿ ಸ್ಧಳದಲಿಯೇ ಮೃತ ಪಟ್ಟಿದ್ದು, ರೋಡಿನ ಭಾಗ ಇತನ ತಲೆಗೆ ಮತ್ತು ಕಪಾಳಿಗೆ ಬಡದಿದ್ದು, ಮೋಟರ ಸೈಕಲದ ಮುಂದಿನ ಭಾಗ ಜಖಂಗೊಂಡಿದ್ದು, ಆತನು ಮೃತ ಪಟ್ಟಿದನು. ಕಾರಣ ಸ್ವರೂಪಸಿಂಗ ತಂದೆ ನಕತಸಿಂಗ ರಜಪೂತ ವಯಃ 18 ವರ್ಷ ಈತನು ಎಕ್ಟಿವಾ ಮೋಟರ ಸೈಕಲ ನಂ. ಕೆಎ 32 ಇ.ಎಮ್ 8536 ನೇದ್ದನ್ನು ಸುಮ್ಮನೆ ತಿರುಗಾಡುವ ಕುರಿತು ಈ ಮೋಟರ ಸೈಕಲನ್ನು ಅತಿವೇಗದಿಂದ ಮತ್ತು ಅಲಕ್ಷತನದಿಂದ ನಡೆಯಿಸಿಕೊಂಡು ಬಂದು ವೇಗದಲ್ಲಿರುವ ಮೋಟರ ಸೈಕಲಗೆ ಒಮ್ಮೇಲೆ ಬ್ರೇಕ ಹಾಕಿದಕ್ಕೆ ತನ್ನಿಂದ ತಾನೆ ಮೋಟರ ಸೈಕಲದೊಂದಿಗೆ ರೋಡಿಗೆ ಬಿದ್ದಾಗ ಭಾರಿಗಾಯವಾಗಿ ಸ್ಧಳದಲ್ಲಿಯೇ ಮೃತ ಪಟ್ಟಿರುತ್ತಾನೆ. ನಾನು ಹಿಂದಿ ಭಾಷೆಯಲ್ಲಿ ಹೇಳಿದನ್ನು ಕನ್ನಡಕ್ಕೆ ಅನುವಾದಿಸಿ ಹೇಳಿಕೆಯನ್ನು ಬರೆದುಕೊಂಡಿದ್ದು ನಿಜವಿದ್ದು, ಈ ವಿಷಯದಲ್ಲಿ ಮುಂದಿನ ಕ್ರಮ ಕೈಗೊಳ್ಳಬೇಕೆಂದು ಅಂತಾ ಕೊಟ್ಟು ಫಿರ್ಯಾದಿ ಸಾರಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

 

 

ರಾಘವೇಂದ್ರ ನಗರ ಪೊಲೀಸ ಠಾಣೆ :-  ದಿನಾಂಕ: 29.01.2023 ರಂದು 7:00 ಪಿ.ಎಮ್ ಕ್ಕೆ ಫೀಯರ್ಾದಿ ಸುಧಾಮಣಿ ತಂದೆ ದೇವೀಂದ್ರಪ್ಪ ಕೊಡದೂರ, ವಯ: 50, ಉ: ಡ್ರೈವ್ಹರ, ಜಾತಿ; ಪ.ಜಾತಿ, ಸಾ: ಮನೆ ನಂ: ಬಿ ಶ್ಯಾಮಸುಂದರ ನಗರ ಕಲಬುರಗಿ ಇವರು ಠಾಣೆಗೆ ಹಾಜರಾಗಿ ದೂರ ಹಾಜರ ಪಡಿಸಿದ್ದು ಸಾರಾಂಶವೆನೆಂದರೆ ನನ್ನ ಅಳಿಯ ಗೌತಮ ತಂದೆ ಶಿವಮೂತರ್ಿ ಹೊಸಮನಿ ಇವರ ಹೆಸರಿನಿಂದ ಒಂದು ಹೀರೊ ಸ್ಪೆಂಡರ್ ಪ್ಲಸ್ ಮೋಟರ ಸೈಕಲ ನಂ: ಕೆಎ 32 ಇಸ್ 4031 ಇದ್ದು ಅದನ್ನು ನನ್ನ ಕೆಲಸದ ಸಲುವಾಗಿ ನನ್ನ ಹತ್ತಿರ ಇಟ್ಟುಕೊಂಡಿದ್ದು ಇರುತ್ತದೆ. ಹೀಗೆ ಇರುವಾಗ ದಿನಾಂಕಃ 13.01.2023 ರಂದು ರಾತ್ರಿ 10:00 ಗಂಟೆಗೆ ನಮ್ಮ ಮನೆಯ ಮುಂದೆ ನಿಲ್ಲಿಸಿ ಮಲಗಿಕೊಂಡಿದ್ದು ನಂತರ ದಿನಾಂಕಃ 14.01.2023 ರಂದು ಬೆಳಿಗ್ಗೆ 7.00 ಗಂಟೆ ಸುಮಾರಿಗೆ ಎದ್ದು ನೋಡಿದ್ದಾಗ ನಮ್ಮ ಮನೆಯ ಮುಂದೆ ನಿಲ್ಲಿಸಿರುವ ನನ್ನ ಹೀರೊ ಸ್ಪೆಂಡರ್ ಪ್ಲಸ್ ಮೋಟಾರ ಸೈಕಲ್ ಇರಲ್ಲಿಲ್ಲ. ನಂತರ ಗಾಬರಿಗೊಂಡು ಎಲ್ಲಾ ಕಡೆಗಳಲ್ಲಿ ಹುಡುಕಾಡಲಾಗಿ ಎಲ್ಲಿಯೂ ನನ್ನ ಮೋಟಾರ ಸೈಕಲ್ ಸಿಕ್ಕಿರುವದಿಲ್ಲ ಯಾರೋ ಕಳ್ಳರು ನನ್ನ ಮೊಟಾರ ಸೈಕಲ್ ಕಳ್ಳತನ ಮಾಡಿಕೊಂಡು ಹೊಗಿರುತ್ತಾರೆ. ನಮ್ಮ ಮನೆಯಲ್ಲಿ ಮತ್ತು ಗೆಳೆಯರಲ್ಲಿ ವಿಚಾರಿಸಿಕೊಂಡು ಬಂದು ತಡವಾಗಿ ಇಂದು ದೂರುಕೊಡುತ್ತಿದೇನೆ.

ಸದರಿ ಮೋಟಾರ ಸೈಕಲ್ ವಿವರ ಈ ಕೆಳಗಿನಂತೆ ಇರುತ್ತದೆ.

1)            ಮೋಟಾರ ಸೈಕಲ್ ವಿಧಃ- ಹೀರೊ ಸ್ಪೆಂಡರ್ ಪ್ಲಸ್ 

2)            ಮೋಟಾರ ಸೈಕಲ್ ನಂ; ಕೆಎ-32 ಇಎಸ್ 4031

3)            ಚಸ್ಸಿ ನಂ ;    MBLHARO86JHD78131

4)            ಇಂಜಿನ ನಂ; HA10AGJHD42313

5)            ಮಾಡಲ ನಂ: 2018

6)            ಬಣ್ಣ       : ಸಿಲ್ವರ್ ಬಣ್ಣ

7)            ಅ.ಕಿ.       : 25000/-ರೂ

ಈ ಮೇಲ್ಕಾಣಿಸಿದ ಮೋಟಾರ ಸೈಕಲ್ ಕಳ್ಳತನವಾಗಿದ್ದು ಮಾನ್ಯರವರು ನನ್ನ ಮೋಟಾರ ಸೈಕಲನ್ನು ಪತ್ತೆಮಾಡಿಕೊಡಬೇಕೆಂದು ವಿನಂತಿ ಅಂತಾ ಇತ್ಯಾದಿ ಕೊಟ್ಟ ದೂರಿನ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

 

 

ವಿಶ್ವವಿದ್ಯಾಲಯ ಪೊಲೀಸ್‌ ಠಾಣೆ :- ದಿನಾಂಕ: 07-01-2023  ರಂದು ರಾತ್ರಿ ೧೦:೦೦ ಗಂಟೆಗೆ ನನ್ನ  ಬಜಾಜ ಪ್ಲಸರ್ ೨೨೦ ಮೊಟಾರ ಸೈಕಲ ನಂ, ಕೆಎ೩೨/ಇಪಿ೭೦೭೦ ನೇದ್ದು, ನಮ್ಮ ಮನೆಯ ಮುಂದೆ ನಿಲ್ಲಿಸಿರುತ್ತೇನೆ. ಮರು ದಿವಸ ದಿನಾಂಕ: ೦೮-೦೧-೨೦೨೩ ರಂದು ಮುಂಜಾನೆ ೦೬:೦೦ ಗಂಟೆಗೆ ಎದ್ದು ನೋಡಲು ನಮ್ಮ ಮನೆಯ ಮುಂದೆ ನಿಲ್ಲಿಸಿದ ಮೊಟಾರ ಸೈಕಲ ನಂ.  ಕೆಎ೩೨/ಇಪಿ೭೦೭೦ , ಅ.ಕಿ ೫೦,೦೦೦/-ರೂ. ನೇದ್ದನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಎಂದು ಫಿರ್ಯಾದಿ ಕೊಟ್ಟ ಹೇಳಿಕೆ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

 

 

ವಿಶ್ವವಿದ್ಯಾಲಯ ಪೊಲೀಸ್‌ ಠಾಣೆ :- ದಿನಾಂಕ 08-01-2023  ರಂದು ಬೇಳಿಗ್ಗೆ ೬:೦೦ ಗಂಟೆ ಸುಮಾರಿಗೆ ಫಿರ್ಯಾದಿಯ ಬಜಾಜ ಪಲ್ಸರ್ ೧೫೫ ಮೊಟಾರ ಸೈಕಲ ನಂ, ಕೆಎ ೩೨ ಇಟಿ ೧೯೫೮ ನೇದ್ದು, ನಮ್ಮ ಮನೆಯ ಮುಂದೆ ನಿಲ್ಲಿಸಿರುತ್ತೇನೆ. ಮರು ದಿವಸ ದಿನಾಂಕ: ೦೮-೦೧-೨೦೨೩ ರಂದು ಮುಂಜಾನೆ ೦೬:೦೦ ಗಂಟೆಗೆ ಎದ್ದು ನೋಡಲು ನಮ್ಮ ಮನೆಯ ಮುಂದೆ ನಿಲ್ಲಿಸಿದ ಮೊಟಾರ ಸೈಕಲ ನಂ.  ಕೆಎ ೩೨ ಇಟಿ ೧೯೫೮  ಅ.ಕಿ ೪೦,೦೦೦/-ರೂ. ನೇದ್ದನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಎಂದು ಫಿರ್ಯಾದಿ ಕೊಟ್ಟ ಹೇಳಿಕೆ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

 

 

ಸಬ್‌ ಅರ್ಬನ್‌ ಪೊಲೀಸ ಠಾಣೆ :-  ದಿನಾಂಕಃ-29-01-2023  ರಂದು ಸರಕಾತಿ ತರ್ಫೆ ಫಿರ್ಯಾದಿಯು ದೂರು ಸಲ್ಲಿಸಿದರ ಸಾರಾಂಶವೇನೆಂದರೆ ಸದರಿ ಫಿರ್ಯಾದಿಯು ಏರಿಯಾದಲ್ಲಿ ಪೆಟ್ರೋಲಿಂಗ್ ಕರ್ತವ್ಯದಲ್ಲಿದ್ದಾಗ ಖಚಿತ ಬಾತ್ಮಿ ಬಂದಿದ್ದೇನೆಂದರೆ ಸದರಿ ಆರೋಪಿತರು ಖುಲ್ಲಾ ಜಾಗೆಯಲ್ಲಿ ಕುಳಿತು ಕೊಂಡು ಅಂದರ್ ಬಾಹರ್ ಎಂಬ ದೈವಾಲೀಲೆಯ ಆಟವನ್ನು ಆಡುತ್ತಾ ಕುಳಿತಿದ್ದಾರೆಂದು ಮಾಹಿತಿ ಬಂದ ಮೇರೆಗೆ ಖಚಿತ ಪಡಿಸಿಕೊಂಡು ದಾಳಿ ಮಾಡಲಾಗಿ ಸದರಿ ಆರೋಪಿತರು ಮತ್ತು ಮುದ್ದೆ ಮಾಲನ್ನು ವಶಕ್ಕೆ ಪಡೆದುಕೊಂಡು ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

 

 

ಚೌಕ ಪೊಲೀಸ್‌ ಠಾಣೆ :- ದಿನಾಂಕ:29.01.2023 ರಂದು ರಾತ್ರಿ 8.30 ಗಂಟೆಗೆ ಫಿರ್ಯಾದಿದಾರಳಾದ  ಶ್ರೀಮತಿ  ಬೀಬಿ ಆಯಶಾ ಗಂಡ ಮಹಿಬೂಬಶಹಾ ಸೈಯ್ಯದಅಲಿ ಖಾದ್ರಿಯಾ ದರ್ಮೇಶ ವ:50 ವರ್ಷ ಉ:ಮನೆಕೆಲಸ ಜಾ:ಮುಸ್ಲಿಂ ಸಾ:ಪ್ಲಾಟ.ನಂ.249 ಸಿಐಬಿ ಕಾಲೋನಿ  ಕಲಬುರಗಿ ಹಾ:ವಾ:ಮಿಸಾಕ ಇವರ ಮನೆಯಲ್ಲಿ ಬಾಡಿಗೆ ಮಿಜ್ಬಾ ನಗರ ರಿಂಗರೋಡ ಕಲಬುರಗಿ ಇವರು ಠಾಣೆಗೆ ಹಾಜರಾಗಿ ತಮ್ಮದೊಂದು ಕನ್ನಡದಲ್ಲಿ ಗಣಕೀಕೃತ ಮಾಡಿದ ದೂರು ಅರ್ಜಿ ಕೊಟ್ಟಿದ್ದನ್ನು ಸ್ವೀಕರಿಸಿಕೊಂಡೆನು. ಸದರಿ ಫಿರ್ಯಾದಿದಾರರ ದೂರಿನ ಸಾರಾಂಶದ ಮೇಲಿಂದ ಅಪರಾಧ ಕಲಂ 504, 506 ಐಪಿಸಿ ಅಸಂಜ್ಞೇಯ ಅಪರಾಧವಾಗುತ್ತಿದ್ದರಿಂದ, ಅಸಂಜ್ಞೇಯ ಕಲಂ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಕೊಳ್ಳಲು ಪರವಾನಿಗೆ ಮಂಜೂರು ಮಾಡಬೇಕೆಂದು ಠಾಣೆ ಪತ್ರ ನಂ/ /ಅಪರಾಧ/ಚೌ/ಕನ/2023  ದಿನಾಂಕ:29.01.2023 ನೇದ್ದರ ಮುಖಾಂತರ ಕೋರಿಕೊಂಡು, ಸದರಿ ಪತ್ರವನ್ನು ನಮ್ಮ ಠಾಣೆಯ ಕೋರ್ಟ ಕರ್ತವ್ಯ ನಿರ್ವಹಿಸುತ್ತಿದ್ದ ಸಿಹೆಚಸಿ 54 ಶ್ರೀ ಯಲ್ಲಾಲಿಂಗಪ್ರಭು ಇವರ ಕೈಯಲ್ಲಿ ಕೊಟ್ಟು ಕಳುಹಿಸಿಕೊಟ್ಟಿದ್ದು,  ಮಾನ್ಯ ನ್ಯಾಯಾಧೀಶರು ಈ ಮೇಲಿನ ಕಲಂ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈ ಕೊಳ್ಳಲು ಪರವಾನಿಗೆ ಪತ್ರವನ್ನು ನಮ್ಮ ಠಾಣೆ ಸಿಹೆಚಸಿ 54 ಶ್ರೀ ಯಲ್ಲಾಲಿಂಗಪ್ರಭು ಇವರು ರಾತ್ರಿ 9.45 ಗಂಟೆಗೆ ಠಾಣೆಗೆ ತಂದು ಹಾಜರಪಡಿಸಿದ್ದು ಸದರಿ ಫಿರ್ಯಾದಿದಾರಳ ದೂರಿನ ಸಾರಾಂಶವೆನೆಂದರೆ, ನಾನು ಮನೆಕೆಲಸ ಮಾಡಿಕೊಂಡು 04 ಜನ ಮಕ್ಕಳು ಮತ್ತು ಗಂಡನೊಂದಿಗೆ ಕಳೆದ 18 ವರ್ಷಗಳಿಂದ ಸಿಐಬಿ ಕಾಲೋನಿಯ ಮನೆಯಲ್ಲಿ ವಾಸವಾಗಿದ್ದು, ಸದ್ಯ ಸದರಿ ಮನೆಯು ಹಳೆಯದಾಗಿರುವುದರಿಂದ ಅದನ್ನು ಬಿಳಿಸಿ ಹೊಸದಾಗಿ ಮನೆ ಕಟ್ಟುವ ಸಲುವಾಗಿ ಕಳೆದ 2019ನೇ ಸಾಲಿನಲ್ಲಿ ನಾನು, ನನ್ನ ಗಂಡ ಮತ್ತು ನಮ್ಮ ಪರಿಚಯದ ಲಕ್ಷ್ಮಣ ಚವ್ಹಾಣ ಇವರೆಲ್ಲರೂ ಕೂಡಿಕೊಂಡು ಸದರಿ ಮನೆಯನ್ನು ಕಟ್ಟಿಕೊಡಲು ನನ್ನ ಗಂಡ ಮತ್ತು ನನಗೆ ಪರಿಚಯ ಇರುವ ಶಹಾಬಜಾರ ತಾಂಡಾದ ಕೀಶನ ಪವಾರ ತಂದೆ ಬಿಕ್ಕು ಪವಾರ ಬಿಲ್ಡಿಂಗ ಕಟ್ಟುವ ಗುತ್ತೆದಾರ ಸಾ:ಶಹಾಬಜಾರ ತಾಂಡಾ ಕಲಬುರಗಿ ಇತನಿಗೆ ಕರೆಯಿಸಿ ನಾವು ಬಾಡಿಗೆಯಿಂದ ವಾಸವಿದ್ದ ರಾಘವೇಂದ್ರ ನಗರ ಬಡಾವಣೆಯ ಇದ್ಗಾದ ಹತ್ತಿರ ಕರೆಯಿಸಿ ಮನೆಯನ್ನು ಒಳ್ಳೆಯ ರೀತಿಯ ನಾವು ಹೇಳಿದಂತಹ ಕ್ವಾಲಿಟಿಯ ಮಟಿರಿಯಲಗಳನ್ನು ಕಟ್ಟಡದಲ್ಲಿ ಹಾಕಿ ಒಳ್ಳೆಯ ರೀತಿಯಿಂದ ಮನೆ ಕಟ್ಟಿಕೊಡಲು 30X40 ಸುತ್ತಳತೆಯ ಪ್ಲಾಟ ನಂ.249 ನೇದ್ದನ್ನು ಕಟ್ಟಿಕೊಡಲು ಒಟ್ಟು 16,00,000/-ರೂಗಳಿಗೆ ಮಾತುಕತೆಯಾಡಿ ಕಟ್ಟಡವನ್ನು ಕಟ್ಟಿಕೊಡಲು ಮಾತುಕತೆಯಾಡಿದ್ದು ಮಾತಿನಂತೆ ಸದರಿ ಕೀಶನ ಪವಾರ ತಂದೆ ಬಿಕ್ಕು ಪವಾರ ಬಿಲ್ಡಿಂಗ ಕಟ್ಟುವ ಗುತ್ತೆದಾರ ಸಾ:ಶಹಾಬಜಾರ ತಾಂಡಾ ಕಲಬುರಗಿ ಇತನು ಮನೆ ಕಟ್ಟಿಕೊಡಲು ಒಪ್ಪಿಕೊಂಡಿದ್ದು ಇರುತ್ತದೆ. ಅದರಂತೆ ಅವನು ಸದರಿ ನನ್ನ ಪ್ಲಾಟನು ದಿನಾಂಕ:25.09.2019 ರಂದು ಮನೆ ಕಟ್ಟಲು ಪ್ರಾರಂಭ ಮಾಡಿರುತ್ತಾನೆ. ನಂತರ ಬಿಕ್ಕು ಪವಾರ ಇತನು ನನ್ನ ಮನೆಯನ್ನು ಕಟ್ಟುವಾಗ ನಾವು ಹೇಳಿದಂತೆ ಯಾವುದೇ ರೀತಿಯ ಗುಣಮಟ್ಟದ ಇಲ್ಲದ ಸ್ಟೀಲ್, ರಾಡ್, ಸಿಮೆಂಟ, ಉಸುಕು ಇವುಗಳನು ಯಾವ ಪ್ರಮಾಣದಲ್ಲಿ ಹಾಕಿ ಕಟ್ಟಬೇಕು ಅದನ್ನು ಸರಿಯಾಗಿ ಹಾಕದೇ ಹಾಗೇ ಮನೆ ಕಟ್ಟಿದ್ದು ಸದರಿ ಮನೆ ಕಟ್ಟುವ ಕಾಲಕ್ಕೆ ಲಾಕಡೌನ ಸಹ ಆಗಿದ್ದು ಆ ವೇಳೆಯಲ್ಲಿ ಇನ್ನುಳಿದ ಸಣ್ಣ ಪುಟ್ಟ ಕೆಲಸಗಳು ಮಾಡದೇ ಹಾಗೇ ಬಿಟ್ಟಿದ್ದು ನಂತರ ನಾವು ಅವನಿಗೆ ಸುಮಾರು ದಿನಗಳಿಂದ ನಮ್ಮ ಮನೆ ನೀನು ಸರಿಯಾಗಿ ಕಟ್ಟಿರುವುದಿಲ್ಲಾ. ನೀನು ಒಳ್ಳೆಯ ಮಟಿರಿಯಲ್ ಸಹ ಹಾಕಿರುವುದಿಲ್ಲಾ ಅಂತಾ ಅವನೊಂದಿಗೆ ತಕರಾರು ಮಾಡಿದ್ದರಿಂದ ಅವನು ಹಾಗೇ ಹೀಗೆ ಅಲ್ಪ ಸ್ವಲ್ಪ ಪ್ರಮಾಣದಲ್ಲಿ ಮನೆಯ ಕಿಟಕಿ ಮತ್ತು ಬಾಗಿಲುಗಳನು ಇತ್ತಿಚೇಗೆ ಹಾಕಿ ಇನ್ನುಳಿದ ಕೆಲಸಗಳನು ಮಾಡದೇ ಬಿಟ್ಟಿದ್ದು ನಾನು ಈ ಮನೆಯನ್ನು ಸಂಪೂರ್ಣವಾಗಿ ವಾಯಿದೆ ಪ್ರಕಾರ ನೀನು ಮನೆ ಕಟ್ಟಿಕೊಡಬೇಕಾಗಿದ್ದು ಪೂರ್ತಿ ಮನೆ ಮುಗಿಸಿಕೊಟ್ಟಿರುವುದಿಲ್ಲಾ ಅಂತಾ ಅವನಿಗೆ ಪದೇ ಪದೇಯಾಗಿ ಹೇಳಿದಾಗ ಇಂದು ಮಾಡುತ್ತೇನೆ, ನಾಳೆ ಮಾಡುತ್ತೇನೆ ಅಂತಾ ಇಲ್ಲಿಯವರೆಗೆ ನನ್ನ ಮನೆಯನ್ನು ಕಟ್ಟಿಕೊಟ್ಟಿರುವುದಿಲ್ಲಾ. ಮತ್ತು ಯಾವುದೇ ರೀತಿಯ ಮನೆಗೆ ಯಾವುದೇ ರೀತಿಯ ಗುಣಮಟ್ಟದ ಇಲ್ಲದ ಸ್ಟೀಲ್, ರಾಡ್, ಸಿಮೆಂಟ, ಉಸುಕು ಇವುಗಳನು ಯಾವ ಪ್ರಮಾಣದಲ್ಲಿ ಹಾಕದೇಇರುವುದರಿಂದ ನಾನು ಅವನಿಗೆ ತಕರಾರು ಮಾಡಿದ್ದರಿಂದ ಅವನು ಬಾಕಿ ಉಳಿದ ಕೆಲಸ ಮಾಡಲು ಬಂದಿರುವುದಿಲ್ಲಾ.  ಹೀಗಿದ್ದು ಇಂದು ದಿನಾಂಕ:29.01.2023 ರಂದು ಬೆಳೀಗ್ಗೆ 11.00 ಗಂಟೆಗೆ ನನಗೆ ಮಾಹಿತಿ ಗೊತ್ತಾಗಿದೇನೆಂದರೆ ಕೀಶನ ಪವಾರ ಇತನು ತನ್ನ ಮನೆಯಲ್ಲಿ ಇರುವ ಬಗ್ಗೆ ಮಾಹಿತಿ ಗೊತ್ತಾಗಿ ನಾನು ಅವನ ಮನೆಗೆ ಹೋಗಿ ನಮ್ಮ ಮನೆ ಕಟ್ಟುವ ವಿಷಯದಲ್ಲಿ ಮಾತಾಡುವ ಕುರಿತು ಮತ್ತು ಬಾಕಿ ಉಳಿದಿರುವ ಕೆಲಸ ಮಾಡಿಸುವ ಕುರಿತು ಅವನಿಗೆ ಕರೆದುಕೊಂಡು ಬರಲು ನನ್ನ ಮನೆಯಿಂದ ಬೆಳಿಗ್ಗೆ 11.15 ಗಂಟೆಗೆ ನಾನು ಆಟೋದಲ್ಲಿ ಕುಳಿತುಕೊಂಡು ಶಹಾಬಜಾರ ಲಾಲಹನುಮಾನ ಗುಡಿಯ ಹತ್ತಿರ ರೋಡಿನ ಮೇಲೆ ಬೆಳೀಗ್ಗೆ 11.30 ಗಂಟೆಗೆ ಬಂದಾಗ ಶಹಾಬಜಾರ ಲಾಲಹನುಮಾನ  ಗುಡಿಯ ಹತ್ತಿರವೇ ನನ್ನ ಮನೆಯ ಕಟ್ಟಡ ಕಟ್ಟಿದ ಗುತ್ತೆದಾರನಾದ ಕೀಶನ ಪವಾರ ತಂದೆ ಬಿಕ್ಕು ಪವಾರ ಬಿಲ್ಡಿಂಗ ಕಟ್ಟುವ ಗುತ್ತೆದಾರ ಸಾ:ಶಹಾಬಜಾರ ತಾಂಡಾ ಕಲಬುರಗಿ ಇತನು ರೋಡಿನ ಬದಿಯಲ್ಲಿ ನಿಂತಿದ್ದನು ನೋಡಿ ನಾನು ಆಟೋದಿಂದ ಕೆಳಗೆ ಇಳಿದು ಸದರಿ ಕೀಶನ ಪವಾರ ಗುತ್ತೆದಾರನ ಹತ್ತಿರ ಹೋಗಿ ಕೀಶನ ಅವರೇ ನೀವು ಮಾತಿನಂತೆ ನನ್ನ ಮನೆಯನ್ನು ಸಮಯಕ್ಕೆ ಸರಿಯಾಗಿ ಕಟ್ಟಿಕೊಟ್ಟಿಲ್ಲಾ. ಮತ್ತು ಎಲ್ಲಾ ಕೆಲಸಗಳು ಅರ್ಧಕ್ಕೆ ನಿಲ್ಲಿಸಿ ಬಂದಿದ್ದೀರಿ. ಅಲ್ಲದೇ ಯಾವುದೇ ರೀತಿಯ ಗುಣಮಟ್ಟದ ಇಲ್ಲದ ಸ್ಟೀಲ್, ರಾಡ್, ಸಿಮೆಂಟ, ಉಸುಕು ಹಾಕಿರುವುದಿಲ್ಲಾ. ನನ್ನ ಮನೆ ಸರಿಯಾಗಿ ಕಟ್ಟಿಕೊಟ್ಟಿರುವುದಿಲ್ಲಾ. ಉಳಿದ ಕೆಲಸ ಮಾಡಿಕೊಡಲು ಬನ್ನೀರಿ ಅಂತಾ ಕೇಳಿದಾಗ ಕೀಶನ ಪವಾರ ಇತನು ನನಗೆ ಹೊಲಸು ಹೊಲಸು ಶಬ್ದಗಳಿಂದ ಅವಾಚ್ಯವಾಗಿ ಬೈದು ಜೀವ ಬೇದರಿಕೆ ಹಾಕಿ, ನಾನು ನಿನ್ನ ಕೆಲಸ ಮಾಡಿಕೊಡುವುದಿಲ್ಲಾ. ನೀ ಏನು ಮಾಡಕೋತಿ ಮಾಡಿಕೋ ಅಂತಾ ನನಗೆ ಹೇದರಿಸುತ್ತಾ ನೀನು ಒಂದು ವೇಳೆ ನನಗೆ ಪದೇ ಪದೇಯಾಗಿ ಕೇಳಲು ಬಂದರೇ ನಿನಗೆ ಜೀವ ಸಹಿತ ಬಿಡುವುದಿಲ್ಲಾ. ರಂಡಿ ಬೋಸಡಿ ಅಂತಾ ಅವಾಚ್ಯವಾಗಿ ಬೈದು ಕೈಯಿಂದ ಹೊಡೆಯಲು ಬಂದಾಗ ನಾನು ಅವನ ಎಟ್ಟಿನಿಂದ ತಪ್ಪಿಸಿಕೊಂಡು ಅಲ್ಲಿಂದ ಓಡಿ ಹೋಗಿರುತ್ತೇನೆ. ಸದರಿ ಘಟನೆಯು ಶಹಾಬಜಾರ ಲಾಲ ಹನುಮಾನ ಗುಡಿಯ ಹತ್ತಿರ ರೋಡಿನ ಬದಿಯಲ್ಲಿ ಇಂದು ದಿನಾಂಕ:29.01.2023 ರಂದು ಬೆಳೀಗ್ಗೆ 11.30 ಗಂಟೆಯಿಂದ 11.45 ಗಂಟೆ ಅವಧಿಯಲ್ಲಿ  ಜರೂಗಿರುತ್ತದೆ.    ಕಾರಣ ಮನೆಕಟ್ಟಿಕೊಡುವ ವಿಷಯದಲ್ಲಿ ಕೇಳಲು ಹೋದ ನನಗೆ ಗುತ್ತೆದಾರ ಕೀಶನ ತಂದೆ ಬಿಕ್ಕು ಪವಾರ ಸಾ:ಶಹಾಬಜಾರ ತಾಂಡಾ ಇತನು ನನಗೆ ಅವಾಚ್ಯವಾಗಿ ಬೈದು, ಜೀವ ಬೇದರಿಕೆ ಹಾಕಿದವನ ಮೇಲೆ ಕಾನೂನು ಕ್ರಮ ಜರೂಗಿಸಲು ವಿನಂತಿ ಅಂತಾ ಕೊಟ್ಟ ದೂರಿನ ಸಾರಾಂಶದ  ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

Last Updated: 30-01-2023 12:46 PM Updated By: ADMIN


Disclaimer :

Please note that this page also provides links to the websites / web pages of Govt. Ministries/Departments/Organisations.The content of these websites are owned by the respective organisations and they may be contacted for any further information or suggestion

Website Policies

 • Copyright Policy
 • Hyperlinking Policy
 • Security Policy
 • Terms & Conditions
 • Privacy Policy
 • Help
 • Screen Reader Access
 • Guidelines

Visitors

 • Last Updated​ :
 • Visitors Counter :
 • Version :
CONTENT OWNED AND MAINTAINED BY : Kalaburagi City Police
Designed, Developed and Hosted by: Center for e-Governance - Web Portal, Government of Karnataka © 2024, All Rights Reserved.

Best viewed in Chrome v-87.0.4280.141, Microsoft Edge v-87.0.664.75, Firefox -v-83.0 Browsers. Resolution : 1280x800 to 1920x1080