ಅಭಿಪ್ರಾಯ / ಸಲಹೆಗಳು

ಅಶೋಕ ನಗರ ಪೊಲೀಸ್‌ ಠಾಣೆ :- ದಿನಾಂಕ: 28/12/2022 ರಂದು 07:30 ಪಿ.ಎಂ.ಕ್ಕೆ ಫಿರ್ಯಾದಿ ಶ್ರೀ ರಾಜಕುಮಾರ ತಂದೆ ಮಲ್ಲಕ್ಕಣ್ಣ ಶೃಂಗೇರಿ ವಯ: 48 ವರ್ಷ ಜಾ: ಎಸ್.ಸಿ.(ಹೊಲೆಯ) ಉ: ವಕೀಲರು ಸಾ|| ಪ್ಲಾಟ ನಂ. 74, ಮನೆ ನಂ.6-676, ರೆಡ್ಡಿ ಲೇಔಟ್, ಶರಣ ಸಿರಸಗಿ ಮಡ್ಡಿ, ಅಂಬೇಡ್ಕರ ನಗರ, ಕಲಬುರಗಿ ಇವರು ಠಾಣೆಗೆ ಹಾಜರಾಗಿ ಲಿಖಿತ ಫಿರ್ಯಾದಿ ಅರ್ಜಿ ಸಲ್ಲಿಸಿದ್ದರ ಸಾರಾಂಶವೆನೆಂದರೆ, ನಾನು ಜಿಲ್ಲಾ ನ್ಯಾಯಾಲಯದಲ್ಲಿ ನ್ಯಾಯವಾದಿ ವೃತ್ತಿ ಮಾಡಿಕೊಂಡು ಕುಟುಂಬದೊಂದಿಗೆ ವಾಸವಾಗಿರುತ್ತೇನೆ. ನನ್ನ ಹೆಂಡತಿ ಮಮತಾ ಇವಳು ಹೊನ್ನಕಿರಣಗಿ ಪ್ರೌಢ ಶಾಲೆಯಲ್ಲಿ ಸಹ-ಶಿಕ್ಷಕಿ ಅಂತ ಕೆಲಸ ಮಾಡಿಕೊಂಡು ಇರುತ್ತಾಳೆ. ನಮಗೆ ವಿನಯ್ ಅಂತ ಮಗನಿದ್ದು ಎಸ್.ಬಿ.ಆರ್. ಶಾಲೆಯಲ್ಲಿ 6ನೇ ತರಗತಿ ವಿದ್ಯಾಭ್ಯಾಸ ಮಾಡಿಕೊಂಡು ಇರುತ್ತಾನೆ. ಹೀಗಿದ್ದು ಇಂದು ದಿನಾಂಕ: 28/12/2022 ರಂದು ಎಂದಿನಂತೆ ನನ್ನ ಹೆಂಡತಿ ಬೆಳಿಗ್ಗೆ 08:00 ಗಂಟೆಗೆ ಶಾಲೆಗೆ ಹೋಗಿದ್ದು ನಾನು ನನ್ನ ಮಗನಿಗೆ ಶಾಲೆಗೆ ಬಿಟ್ಟು ಬೆಳಿಗ್ಗೆ 10:00 ಗಂಟೆಗೆ ನ್ಯಾಯಾಲಯಕ್ಕೆ ಹೋಗಿರುತ್ತೇನೆ. ನಂತರ ನಮ್ಮ ಮನೆಯ ಕೆಲಸ ಮಾಡುವ ಶೃತಿ ಇವಳು ಮದ್ಯಾನ್ಹ 12:30 ಗಂಟೆ ಸುಮಾರಿಗೆ ನಮ್ಮ ಮನೆ ಕೆಲಸಕ್ಕೆ ಬಂದಾಗ ಮನೆಯ ಬೀಗ ಮುರಿದಿದ್ದನ್ನು ಕಂಡು ಅವಳು ನನ್ನ ಹೆಂಡತಿಗೆ ಕರೆಮಾಡಿ ವಿಷಯ ತಿಳಿಸಿದಾಗ, ನನ್ನ ಹೆಂಡತಿ ಗಾಬರಿಯಾಗಿ ನನಗೆ ವಿಷಯ ತಿಳಿಸಿದಾಗ ನಾನು ನ್ಯಾಯಾಲಯದಿಂದ ಮನೆಗೆ ಬಂದು ನೋಡಲು ಮನೆಯ ಬೀಗ ಮುರಿದಿದ್ದು, ಮೇನ್ ಡೋರ ಒಳಗಡೆಯಿಂದ ಕೊಂಡಿ ಹಾಕಿದ್ದು, ಹಿತ್ತಲು ಬಾಗಿಲು ತೆರೆದಿದ್ದು ಇರುತ್ತದೆ. ಅಷ್ಟರಲ್ಲಿ ನನ್ನ ಹೆಂಡತಿ ಸಹ ಮನೆಗೆ ಬಂದಿದ್ದು ಇಬ್ಬರು ಗಾಬರಿಯಾಗಿ ಒಳಗೆ ಹೋಗಿ ನೋಡಲಾಗಿ ಬೆಡರೂಮನಲ್ಲಿದ್ದ ಅಲಾಮಾರಿಯಲ್ಲಿ ಇಟ್ಟಿದ್ದ ಬಟ್ಟೆಗಳೆಲ್ಲಾ ಚೆಲ್ಲಾಪಿಲ್ಲಿಯಾಗಿ ಬಿದಿದ್ದು ಪರಿಶೀಲಿಸಿ ನೋಡಲು ಅಲ್ಮಾರಾದಲ್ಲಿ ಇಟ್ಟಿದ್ದ ಸುಮಾರು ವರ್ಷಗಳ ಹಿಂದೆ ಖರೀದಿ ಮಾಡಿದ ಬಂಗಾರದ ಆಭರಣಗಳಾದ 1) 20 ಗ್ರಾಂನ ಎರಡೇಳೆ ಸರ ಅ.ಕಿ. 40,000 /- 2) 10 ಗ್ರಾಂನ ಎರಡು ಉಂಗುರಗಳು ಅ.ಕಿ. 45,0000/-  3) 5 ಗ್ರಾಂನ ಎರಡು ಉಂಗುರಗಳು ಅ.ಕಿ.  25,000/- 4) 5 ಗ್ರಾಂನ ಒಂದು ಹರಳಿನ ಉಂಗುರು ಅ.ಕಿ. 10,000/-  5) 5 ಗ್ರಾಂನ ಒಂದು ಲಾಕೇಟ್ ಅ.ಕಿ. 10,000/-  6)  4 ಗ್ರಾಂನ ಕಿವಿ ಓಲೆ  ಅ.ಕಿ. 10,000/- 7) 3 ಗ್ರಾಂನ ಚಿಕ್ಕ ಮಕ್ಕಳ ಉಂಗುರು ಅ.ಕಿ  5,000/-   ಹೀಗೆ ಎಲ್ಲಾ ಸೇರಿ ಒಟ್ಟು ಆಗಿನ ಅಂದಾಜು ಕಿಮ್ಮತ್ತಿನ ಪ್ರಕಾರ ರೂ. 1,45,000/- ಗಳ ಬಂಗಾರದ ಆಭರಣಗಳನ್ನು  ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿದ್ದು ಸದರಿಯವರ ವಿರುದ್ದ ಕಾನೂನು ರೀತಿ ಕ್ರಮ ಜರುಗಿಸಿ ನಮ್ಮ ಆಭರಣ ನಮಗೆ ದೊರಕಿಸಿ ಕೊಡಲು ವಿನಂತಿ ಅಂತ ವಗೈರೆಯಾಗಿ ಇದ್ದ ಫಿರ್ಯಾದಿ ಅರ್ಜಿಯ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

 

 

ಅಶೋಕ ನಗರ ಪೊಲೀಸ್‌ ಠಾಣೆ :- ದಿನಾಂಕ: 28/12/2022 ರಂದು 01:45 ಎ.ಎಂ.ಕ್ಕೆ ಶ್ರೀ ಬಸವರಾಜ ಪಿ.ಎಸ್.ಐ., ಸಿ.ಸಿ.ಬಿ. ಘಟಕ ಕಲಬುರಗಿ ಇವರು ಠಾಣೆಗೆ ಹಾಜರಾಗಿ ಒಂದು ವರದಿ, ಜಪ್ತಿ ಪಂಚನಾಮೆ ಹಾಗೂ  ಆರೋಪಿತರೊಂದಿಗೆ ಮುದ್ದೆಮಾಲನ್ನು ಹಾಜರ ಪಡಿಸಿ ಆರೋಪಿತನ ವಿರುದ್ಧ ಕ್ರಮ ಕೈಕೊಳ್ಳುವಂತೆ ಸಲ್ಲಿಸಿರುವ ವರದಿಯನ್ನು ಸ್ವೀಕರಿಸಿಕೊಂಡಿದ್ದು, ಸದರಿ ವರದಿಯ ಸಾರಾಂಶವೆನೆಂದರೆ, ನಾನು ಬಸವರಾಜ ಪಿ.ಎಸ್,ಐ., ಸಿ.ಸಿ.ಬಿ. ಘಟಕ, ಕಲಬುರಗಿ ಈ ಮೂಲಕ ಸರ್ಕಾರಿ ತರ್ಪೆ ಫಿರ್ಯಾದಿ ಸಲ್ಲಿಸುವುದೇನೆಂದರೆ, ಇಂದು ದಿನಾಂಕ: 27/12/2022 ರಂದು ರಾತ್ರಿ 9:00 ನನಗೆ ಮಾಹಿತಿ ಬಂದಿದ್ದೇನೆಂದರೆ, ಕಲಬುರಗಿ ನಗರದ ಅಕ್ಕಮಹಾದೇವಿ ಕಾಲೋನಿ ಹೈಕೋರ್ಟ  ಮುಂಭಾಗ ಶಿವಶರಣಪ್ಪ ರಾಂಪೂರೆ ರವರ ಮನೆಯ ಗ್ರೌಂಢ ಫ್ಲೋರ ಹಾಲನಲ್ಲಿ ಕೆಲವು ಜನರು ಕಾನೂನು ಬಾಹಿರ ಅಂದರ ಬಾಹರ ಎಂಬ ದೈವಲೀಲೆಯ ಇಸ್ಪೇಟ ಜೂಜಾಟ ಆಡುತ್ತಿದ್ದಾರೆ ಅಂತಾ ಖಚಿತ ಮಾಹಿತಿ ಬಂದಿದ್ದು, ಸದರಿ ವಿಷಯವನ್ನು ಮೇಲಾಧಿಕಾರಿಗಳಿಗೆ ತಿಳಿಸಿ, ಮಾನ್ಯ ಉಪ ಪೊಲೀಸ್ ಆಯುಕ್ತರು, (ಕಾ&ಸು) ಕಲಬುರಗಿ ನಗರ ರವರಿಗೆ ದಾಳಿ ಮಾಡಲು, (ಸರ್ಚ ವಾರೆಂಟ್) ನೀಡುವಂತೆ ಅನುಮತಿ ಕೋರಿ ಪತ್ರ ಮೂಲಕ ನಿವೇದಿಸಿಕೊಂಡಿದ್ದು, ಅದರಂತೆ ಮಾನ್ಯ  ಉಪ ಪೊಲೀಸ್ ಆಯುಕ್ತರು, (ಕಾ&ಸು) ಕಲಬುರಗಿ ನಗರ ರವರು ಅನುಮತಿ (ಸರ್ಚ ವಾರೆಂಟ್) ನೀಡಿದ್ದು ಇರುತ್ತದೆ. ನಂತರ ಅವರ ಮಾರ್ಗದರ್ಶನದಲ್ಲಿ ದಾಳಿ ಮಾಡುವ ಕುರಿತು ಇಬ್ಬರೂ ಪಂಚರಾದ 1) ಶ್ರೀ ಮಹ್ಮದ ಮದರಸಾಬ ತಂದೆ ಖಾಜಾಹುಸೇನಸಾಬ, ವ:44 ವರ್ಷ, ಜಾತಿ:ಮುಸ್ಲಿಂ, ಉ:ಕಾರ ಚಾಲಕ, ಸಾ:ಆಜಾದಪೂರ ರೋಡ, ನಿಯರಅಕ್ಬರಿ ಮಸೀದ ಹತ್ತಿರ ಕಲಬುರಗಿ ಮೊ. ನಂ. 9945821736, 2) ಶ್ರೀ ಅಮನ ತಂದೆ ರೆಹಮಾನ ಶೇಖ, ವ:24 ವರ್ಷ, ಜಾತಿ:ಮುಸ್ಲಿಂ, ಉ:ಅಟೋಚಾಲಕ, ಸಾ:ಯದುಲ್ಲಾ ಕಾಲೋನಿ, ನಿಯರ ಟಿಪ್ಪು ಚೌಕ, ಕಲಬುರಗಿ ಮೊ.ನಂ. 90362222067 ಇವರನ್ನು ಸಿ.ಸಿ.ಬಿ. ಘಟಕ ಕಛೇರಿಗೆ ರಾತ್ರಿ 9:30 ಗಂಟೆಗೆ ಬರಮಾಡಿಕೊಂಡು ಸಿಬ್ಬಂದಿ ಜನರಾದ 1) ಮಲ್ಲಿಕಾರ್ಜುನ ಹೆಚ್.ಸಿ-79, 2) ಕೇಸುರಾಯ ಹೆಚ್.ಸಿ-223, 3) ಸುನೀಲಕುಮಾರ ಹೆಚ್.ಸಿ-167, 4) ಅಂಬಾಜಿ ಸಿಪಿಸಿ-131, 5) ವಿಶ್ವನಾಥ ಸಿಪಿಸಿ-686, 6) ಅಶೋಕ ಸಿಪಿಸಿ-647, ರವರಿಗೆ ಪಂಚರಿಗೆ ಪರಿಚಯಿಸಿ ದಾಳಿ ಮಾಡಿ ಪಂಚನಾಮೆಗೆ ಸಹಕರಿಸಬೇಕೆಂದು ತಿಳಿಹೇಳಿದ ಮೇರೆಗೆ ಉಭಯ ಪಂಚರು ಒಪ್ಪಿಕೊಂಡಿರುತ್ತಾರೆ. ನಾನು, ಪಂಚರು ಮತ್ತು ಸಿಬ್ಬಂದಿಯವರು ಕೂಡಿಕೊಂಡು ತಮ್ಮ ತಮ್ಮ ಖಾಸಗಿ ವಾಹನಗಳ ಮೇಲೆ ರಾತ್ರಿ 9:45 ಗಂಟೆಗೆ ಹೊರಟು ಕಲಬುರಗಿ ನಗರದ ಅಕ್ಕಮಹಾದೇವಿ ಕಾಲೋನಿ ಹೈಕೋರ್ಟ  ಮುಂಭಾಗ ಶಿವಶರಣಪ್ಪ ರಾಂಪೂರೆ ರವರ ಮನೆಯ ಹತ್ತಿರ ರಾತ್ರಿ 10:15 ಗಂಟೆಗೆ ತಲುಪಿ ಸ್ವಲ್ಪ ದೂರದಲ್ಲಿ ವಾಹನಗಳನ್ನು ನಿಲ್ಲಿಸಿ ಅಲ್ಲಿಯೇ ಮನೆಯಲ್ಲಿ ಹೋಗಿ ಚೆಕ್ ಮಾಡಲಾಗಿ ಹಾಲನಲ್ಲಿ ಕೆಲವು ಜನರು ದುಂಡಾಗಿ ಕುಳಿತು ಇಸ್ಪೇಟ ಎಲೆಗಳ ಸಹಾಯದಿಂದ ಹಣವನ್ನು ಪಣಕ್ಕೆ ಹಚ್ಚಿ ಅಂದರ ಬಾಹರ ಎಂಬ ದೈವಲೀಲೆಯ ಇಸ್ಪೇಟ ಜೂಜಾಟ ಆಡುತ್ತಿದ್ದು, ಅವರಲ್ಲಿ ಒಬ್ಬನು ಎಲೆಗಳು ಪೀಸ್ ಮಾಡಲು ಮತ್ತೋಬ್ಬನು ಅರ್ಧ ಕಟ್ ಮಾಡಿ ಒಂದು ಎಲೆ ಅಂಗಾತವಾಗಿಡಲು ಎಲೆ ಪೀಸ್ ಮಾಡಿದವನು ಎಲೆಗಳನ್ನು ಅಂದರ್-ಬಾಹರ್ ಅನ್ನುತ್ತಾ ಅಂಗಾತವಾಗಿ ಒಗೆಯುತ್ತಿದ್ದನು. ಉಳಿದವರೆಲ್ಲರೂ ಅಂದರಕ್ಕೆ-ಬಾಹರಕ್ಕೆ ಅಂತಾ ಹಣವನ್ನು ಪಣಕ್ಕೆ ಹಚ್ಚುತ್ತಿದ್ದರು & ಆಡುತ್ತಿರುವದನ್ನು ನೋಡಿ ಖಾತ್ರಿ ಪಡಿಸಿಕೊಂಡು ಪಂಚರ ಸಮಕ್ಷಮದಲ್ಲಿ ನಾನು ಮತ್ತು ಸಿಬ್ಬಂದಿಯವರ ಸಹಾಯದಿಂದ ಸುತ್ತುವರೆದು ರಾತ್ರಿ 10:30 ಗಂಟೆಗೆ ಒಮ್ಮಲ್ಲೇ ದಾಳಿ ಮಾಡಿ ಜೂಜಾಟ ಆಡುತ್ತಿರುವ ಒಟ್ಟು 8 ಜನ ಸಿಕ್ಕಿದ್ದು ಇವರನ್ನು  ಹಿಡಿದು  ವಿಚಾರಿಸಲು ಅವರು ಹಣ ಪಣಕ್ಕೆ ಹಚ್ಚಿ ಇಸ್ಪೇಟ ಎಲೆಗಳ ಸಹಾಯದಿಂದ ಅಂದರಬಾಹರ ಎಂಬ ಜೂಜಾಟ ಆಡುವ ಬಗ್ಗೆ ತಪ್ಪೊಪ್ಪಿಕೊಂಡ ಬಳಿಕೆ ಸ್ವಾದೀನಕ್ಕೆ ಪಡೆದುಕೊಂಡು ಅವರ ಹೆಸರು ವಿಳಾಸ ವಿಚಾರಿಸಲಾಗಿ

1) ಕೆ. ಜರ್ನಾಧನ ತಂದೆ ಸಚ್ಚಮ ರೆಡ್ಡಿ, ವ:48 ವರ್ಷ, ಉ:ಖಾಸಗಿ ಕೆಲಸ, ಜಾತಿ:ರೆಡ್ಡಿ, ಸಾ:ಧಾರಾಮಾರಂ, ತಾ:ಚಾಲಗ ವಂಡಲ, ಜಿ:ವೇಸ್ಟ ಗೋದಾವರಿ, ರಾಜ್ಯ ಆಂದ್ರಪ್ರದೇಶ, ಈತನ ಅಂಗ ಶೋಧನೆ  ಮಾಡಲಾಗಿ ನಗದು ಹಣ 3,750/- ರೂ  ದೊರೆತವು, ಮತ್ತು  ವಿಮೋ ಕಂಪನಿಯ ಮೊಬೈಲ್ ದೊರೆತಿದ್ದು, ವಿಚಾರಿಸಲು ಅದರ ನಂಬರ 9849236164 ಅಂತಾ ತಿಳಿಸಿದ್ದು, ಅದರ ಐ.ಎಂ.ಇ.ಐ. ನಂಬರ ಪರಿಶೀಸಲು (ಇ.ಎಂ.ಐ.ಇ. ನಂ. 866741056915079/20) ಅಂತಾ ದೊರೆತಿದ್ದು, ಅದರ ಅ.ಕಿ. ರೂ.10,000/- ಇರುತ್ತದೆ.

2) ಪಿ.ವೆಂಕಟೇಶ ತಂದೆ ರಾಘುವಾಲಾ ಶೆಟ್ಟಬಾಜಿ, ವ:49 ವರ್ಷ, ಉ:ಖಾಸಗಿ ಕೆಲಸ, ಜಾತಿ:ಶೆಟ್ಟಬಾಜಿ, ಸಾ:ವೆಸ್ಟ ಗೋಡಾವರ ಜಿಲ್ಲಾ, ರಾಜ್ಯ ಆಂದ್ರಪ್ರದೇಶ, ಈತನ ಅಂಗ ಶೋಧನೆ  ಮಾಡಲಾಗಿ ನಗದು ಹಣ 4,680/- ರೂ  ದೊರೆತವು, ಮತ್ತು  ವಿಮೋ ಕಂಪನಿಯ ಮೊಬೈಲ್ ದೊರೆತಿದ್ದು, ವಿಚಾರಿಸಲು ಅದರ ನಂಬರ 9849712778 ಅಂತಾ ತಿಳಿಸಿದ್ದು, ಅದರ ಐ.ಎಂ.ಇ.ಐ. ನಂಬರ ಪರಿಶೀಸಲು (ಇ.ಎಂ.ಐ.ಇ. ನಂ;860367049574694) ಅಂತಾ ದೊರೆತಿದ್ದು, ಅದರ ಅ.ಕಿ. ರೂ.10,000/- ಇರುತ್ತದೆ.

3) ಕೇಂಪೆಗೌಡ ತಂದೆ ದಿ||ಕೆಂಚ್ಚಪ್ಪಗೌಡ, ವ:45 ವರ್ಷ, ಉ:ಗೌಡ್ಸ್ ಹೊಟೇಲ ಮಾಲೀಕ, ಬೆಂಗಳೂರು, ಸಾ:2ನೇ ಮೇನ ರೋಡ, ಶಿವನಗರ, ಮನೆ ನಂ.31, ಬೆಂಗಳೂರು. ಈತನ ಅಂಗ ಶೋಧನೆ  ಮಾಡಲಾಗಿ ನಗದು ಹಣ 3,900/- ರೂ  ದೊರೆತವು, ಮತ್ತು  ಒಪ್ಪೋ ಕಂಪನಿಯ ಮೊಬೈಲ್ ದೊರೆತಿದ್ದು, ವಿಚಾರಿಸಲು ಅದರ ನಂಬರ 7022270883 ಅಂತಾ ತಿಳಿಸಿದ್ದು, ಅದರ ಐ.ಎಂ.ಇ.ಐ. ನಂಬರ ಪರಿಶೀಸಲು (ಇ.ಎಂ.ಐ.ಇ. ನಂ.864235044842430) ಅಂತಾ ದೊರೆತಿದ್ದು, ಅದರ ಅ.ಕಿ. ರೂ.10,000/- ಇರುತ್ತದೆ.

4) ಲಿಂಗರಾಜ ತಂದೆ ಹರೀಶ ಸಾತನೂರಕರ, ವ:30 ವರ್ಷ, ಉ:ಖಾಸಗಿ ಕೆಲಸ, ಜಾತಿ:ಲಿಂಗಾಯತ, ಸಾ:ನಿಯರ ಸೆಂಟ್ರಲ್ ಬಸ್ ಸ್ಟ್ಯಾಂಡ ಸಿ.ಐ.ಬಿ. ಕಾಲೋನಿ, ಇ.ಎಸ್.ಐ. ಆಸ್ಪತ್ರೆ ಕಲಬುರಗಿ, ಈತನ ಅಂಗ ಶೋಧನೆ  ಮಾಡಲಾಗಿ ನಗದು ಹಣ 3,250/- ರೂ  ದೊರೆತವು, ಮತ್ತು ಐಫೋನ್ ಮೊಬೈಲ್ ದೊರೆತಿದ್ದು, ವಿಚಾರಿಸಲು ಅದರ ನಂಬರ 9740478007 ಅಂತಾ ತಿಳಿಸಿದ್ದು, ಅದರ ಐ.ಎಂ.ಇ.ಐ. ನಂಬರ ಪರಿಶೀಸಲು ಐ-ಫೋನ್ 13-ಪ್ರೋ ಮ್ಯಾಕ್ಸ್ (ಇ.ಎಂ.ಐ.ಇ. ನಂ.352114957047742) ಅಂತಾ ದೊರೆತಿದ್ದು, ಅದರ ಅ.ಕಿ. ರೂ.25,000/- ಇರುತ್ತದೆ.

5) ಪ್ರದೀಪ ತಂದೆ ಚನ್ನಪ್ಪಾ ಪಾಟೀಲ, ವ:32 ವರ್ಷ, ಉ:ಖಾಸಗಿ ಕೆಲಸ, ಜಾತಿ:ಲಿಂಗಾಯತ, ಸಾ:ವೆಂಕಟೇಶ ನಗರ, ನೊಬೇಲ ಸ್ಕೂಲ್ ಹತ್ತಿರ ಕಲಬುರಗಿ, ಈತನ ಅಂಗ ಶೋಧನೆ  ಮಾಡಲಾಗಿ ನಗದು ಹಣ 3,750/- ರೂ  ದೊರೆತವು, ಮತ್ತು ಎಂ.ಐ. ಮೊಬೈಲ್ ದೊರೆತಿದ್ದು, ಅದರ ನಂಬರ ವಿಚಾರಿಸಲು ನಂಬರ 9964054444 ಅಂತಾ ತಿಳಿಸಿದ್ದು, ಅದರ ಐ.ಎಂ.ಇ.ಐ. ನಂಬರ ಪರಿಶೀಸಲು (ಇ.ಎಂ.ಐ.ಇ. ನಂ;861762043785214) ಅಂತಾ ದೊರೆತಿದ್ದು, ಅದರ ಅ.ಕಿ. ರೂ.10,000/- ಇರುತ್ತದೆ.

6)  ವೀರಾರೆಡ್ಡಿ ತಂದೆ ಸಿದ್ರಾಮ ರೆಡ್ಡಿ, ವ:29 ವರ್ಷ, ಉ:ಖಾಸಗಿ ಕೆಲಸ, ಜಾತಿ:ಲಿಂಗಾಯತ, ಸಾ:ಪಿ&ಟಿ ಕಾಲೋನಿ, ನಿಯರ ನಿಲಾಂಬಿಕಾ ಕಲ್ಯಾಣ ಮಂಟಪ ಹತ್ತಿರ ಗಣೇಶ ನಗರ ಕಲಬುರಗಿ ಈತನ ಅಂಗ ಶೋಧನೆ  ಮಾಡಲಾಗಿ ನಗದು ಹಣ 2,900/- ರೂ  ದೊರೆತವು, ಮತ್ತು ಐಫೋನ್ ಮೊಬೈಲ್ ದೊರೆತಿದ್ದು, ವಿಚಾರಿಸಲು ಅದರ ನಂಬರ 9060303333 ಅಂತಾ ತಿಳಿಸಿದ್ದು, ಅದರ ಐ.ಎಂ.ಇ.ಐ. ನಂಬರ ಪರಿಶೀಸಲು ಐ-ಫೋನ್ 14-ಪ್ರೋ ಮ್ಯಾಕ್ಸ್ (ಇ.ಎಂ.ಐ.ಇ. ನಂ.355597826133650) ಅಂತಾ ದೊರೆತಿದ್ದು, ಅದರ ಅ.ಕಿ. ರೂ.25,000/- ಇರುತ್ತದೆ.

7) ಅಂತರಿಕ್ಷ ತಂದೆ ರಮೇಶ ವ:35 ವರ್ಷ, ಉ:ಖಾಸಗಿ ಕೆಲಸ, ಜಾತಿ:ಜೈನ, ಸಾ:ಹುಮನಾಬಾದ ಬೇಸ್, ಐಯರವಾಡಿ ಅಂಭಾ ಭವಾನಿ ಹತ್ತಿರ ನಗದು ಹಣ 6,700/- ರೂ  ದೊರೆತವು, ಈತನ ಅಂಗ ಶೋಧನೆ  ಮಾಡಲಾಗಿ ನಗದು ಹಣ 3,870/- ರೂ  ದೊರೆತವು, ಮತ್ತು  ಒನ್ ಪ್ಲಸ್ ಮೊಬೈಲ್ ದೊರೆತಿದ್ದು, ವಿಚಾರಿಸಲು ಅದರ ನಂಬರ 8970906666 ಅಂತಾ ತಿಳಿಸಿದ್ದು, ಅದರ ಐ.ಎಂ.ಇ.ಐ. ನಂಬರ ಪರಿಶೀಸಲು (ಇ.ಎಂ.ಐ.ಇ. ನಂ.860859061801013) ಅಂತಾ ದೊರೆತಿದ್ದು, ಅದರ ಅ.ಕಿ. ರೂ.12,000/- ಇರುತ್ತದೆ.

8)  ಸಂತೋಷ ತಂದೆ ಶ್ರೀಹರೀ ಕುಲಕರ್ಣಿ, ವ:33 ವರ್ಷ, ಉ:ಕಾಂಟ್ರೆಕ್ಟರ್ ಕೆಲಸ, ಜಾತಿ:ಬ್ರಾಹ್ಮಣ, ಸಾ:ಮಹಾವೀರ ನಗರ, ನಿಯರ ಕೋಠಾರಿ ಭವನ ಹತ್ತಿರ ಕಲಬುರಗಿ,  ಈತನ ಅಂಗ ಶೋಧನೆ  ಮಾಡಲಾಗಿ ನಗದು ಹಣ 3,900/- ರೂ  ದೊರೆತವು, ಮತ್ತು ಸ್ಯಾಮಸಂಗ ಮೊಬೈಲ್ ದೊರೆತಿದ್ದು, ವಿಚಾರಿಸಲು ಅದರ ನಂಬರ 9035565666 ಅಂತಾ ತಿಳಿಸಿದ್ದು, ಅದರ ಐ.ಎಂ.ಇ.ಐ. ನಂಬರ ಪರಿಶೀಸಲು (ಇ.ಎಂ.ಐ.ಇ. ನಂ;356278745199069) ಅಂತಾ ದೊರೆತಿದ್ದು, ಅದರ ಅ.ಕಿ. ರೂ.10,000/- ಇರುತ್ತದೆ.

ನಂತರ ಸ್ಥಳದಲ್ಲಿ ಪರಿಶೀಲಿಸಲಾಗಿ  ಈ ಕೆಳಗಿನಂತೆ ಮೋಟಾರಸೈಕಲಗಳು ದೊರೆತಿದ್ದು ಇರುತ್ತದೆ.

1) ಹೊಂಡಾ ಆಕ್ಟೀವ್ ಮೋಟಾರಸೈಕಲ್ ನಂ.ಕೆಎ-32-ಇಡಿ-8106 ನೇದ್ದು ದೊರೆತಿದ್ದು, ಅ.ಕಿ. ರೂ.25,000/- ದೊರೆತಿದ್ದು, ವಿಚಾರಿಸಲು ಆಂತರಿಕ್ಷ ತಂದೆ ರಮೇಶ ಈತನ ಇರುತ್ತದೆ ಅಂತಾ ತಿಳಿಸಿರುತ್ತಾನೆ.

2) ಹೊಂಡಾ ಆಕ್ಟೀವ್ ಮೋಟಾರಸೈಕಲ್ ನಂ.ಕೆಎ-32-ಇಎನ್-0700 ನೇದ್ದು ದೊರೆತಿದ್ದು, ಅ.ಕಿ. ರೂ.26,000/- ದೊರೆತಿದ್ದು, ವಿಚಾರಿಸಲು ಲಿಂಗರಾಜ ತಂದೆ ಹರೀಶ ಸಾತನೂರಕರ, ಈತನ ಇರುತ್ತದೆ ಅಂತಾ ತಿಳಿಸಿರುತ್ತಾನೆ.

3) ವೆಸ್ಪಾ (ಪಿ.ಐ.ಜಿ.ಓ ಕಂಪನಿಯ) ಮೋಟಾರಸೈಕಲ್ ನಂ.ಕೆಎ-33-ಇಎ-3330 ನೇದ್ದು ದೊರೆತಿದ್ದು, ಅ.ಕಿ. ರೂ.22,000/- ದೊರೆತಿದ್ದು, ವಿಚಾರಿಸಲು ವೀರಾರೆಡ್ಡಿ ತಂದೆ ಸಿದ್ರಾಮ ರೆಡ್ಡಿ, ಈತನ ಇರುತ್ತದೆ ಅಂತಾ ತಿಳಿಸಿರುತ್ತಾನೆ.

ಹಾಗೂ ಜೂಜಾಟದಲ್ಲಿ ತೊಡಗಿಸಿದ ಕೆಳಗಡೆ ಇದ್ದ ಹಣ 21,600/- ರೂ ದೊರೆತಿದ್ದು, ಹೀಗೆ ಒಟ್ಟು ನಗದ ಹಣ 51,600/-ರೂ ಮತ್ತು 52 ಇಸ್ಪೇಟ ಎಲೆಗಳು ಪಂಚರ ಸಮಕ್ಷಮದಲ್ಲಿ ಜಪ್ತಿ ಪಂಚನಾಮೆಯ ಮೂಲಕ ಜಪ್ತ ಪಡಿಸಿಕೊಳ್ಳಲಾಯಿತು. ಸದರಿ ಜಪ್ತಿಪಂಚನಾಮೆಯನ್ನು ದಿನಾಂಕ.27/12/2022 ರಂದು ರಾತ್ರಿ 10-30 ಗಂಟೆಯಿಂದ 11-30 ಗಂಟೆಯವರೆಗೆ ಸ್ಥಳದಲ್ಲಿ ಕುಳಿತು ಪಂಚರ ಸಮಕ್ಷಮದಲ್ಲಿ ಲ್ಯಾಪಟ್ಯಾಪನಲ್ಲಿ ಲೈಟಿನ ಬೆಳಕಿನಲ್ಲಿ ಟೈಪ ಮಾಡಿ ಪೋರ್ಟಬಲ ಪ್ರಿಂಟರ್ ಮುಖಾಂತರ ಪ್ರಿಂಟ್ ತೆಗೆಯಲಾಯಿತು. ನಂತರ ಅಶೋಕನಗರ ಪೊಲೀಸ್ ಠಾಣೆಗೆ ಬಂದು ನನ್ನ ವರದಿಯನ್ನು ತಯಾರಿಸಿ ಜಪ್ತಿ ಪಂಚನಾಮೆ, ಮತ್ತು ಮುದ್ದೇಮಾಲು ಹಾಗೂ 8 ಜನ ಆರೋಪಿತರನ್ನು ಹಾಜರಪಡಿಸಿದ್ದು, ಸದರಿಯವರ ವಿರುದ್ದ ಕಾನೂನು ಕ್ರಮ ಜರುಗಿಸಲು ಸಲ್ಲಿಸಿದ ವರದಿ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

 

 

ಸಬ್-ಅರ್ಬನ್‌ ಪೊಲೀಸ್‌ ಠಾಣೆ :- ದಿನಾಂಕ: 28/12/2022 ಸರಕಾರಿ  ಫಿರ್ಯಾದಿಯು ಠಾಣೆಗೆ ಹಾಜರಾಗಿ ನೀಡಿದ ಫಿರ್ಯಾದಿಯೇನೆಂದರೆ ಸದರಿಯವರು ಏರಿಯಾದಲ್ಲಿ ಪೆಟ್ರೋಲಿಂಗ್ ಕರ್ತವ್ಯದಲ್ಲಿದ್ದಾಗ ಖಚಿತ ಮಾಹಿತಿ ಬಂದಿದ್ದೆನೆಂದರೆ  ಕೆರಿಭೋಸಗಾ ಕ್ರಾಸ್ ಹತ್ತಿರ ಸದರಿ ಆರೋಪಿತನು 1 ರೂ 80 ರೂ ಗೆಲ್ಲಿರಿ ಎಂದು ಸಾರ್ವಜನಿಕ ಸ್ಥಳದಲ್ಲಿ ಮಟಕಾ ಬರೆದುಕೊಳ್ಳುತ್ತಿದ್ದಾನೆಂದು ಮಾಹಿತಿ ಬಂದ ಮೇರೆಗೆ ದಾಳಿ ಮಾಡಲಾಗಿ ಸದರಿ ಆರೋಪಿತನು ಮತ್ತು ಮುದ್ದೆ ಮಾಲನ್ನು ವಶಕ್ಕೆ ಪಡೆದು ಸದರಿ ಆರೋಪಿತನ ವಿರುದ್ದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

 

 

ಫರಹತಾಬಾದ ಪೊಲೀಸ್‌ ಠಾಣೆ :- ದಿನಾಂಕ: 28/12/2022 ರಂದು 2:30 ಪಿಎಎಮ್ಕ್ಕೆ ಡಾ|| ಪಿ.ರಂಗನಾಥ, ಮುಖ್ಯ ಅಧೀಕ್ಷಕರು ಕೇಂದ್ರ ಕಾರಾಗೃಹ ಕಲಬುರಗಿ ರವರು ಒಂದು ಕನ್ನಡದಲ್ಲಿ ಟೈಪ ಮಾಡಿದ ಲಿಖಿತ ದೂರನ್ನು ಕಾರಾಗೃಹದ ಸಿಬ್ಬಂದಿಯಾದ ಶ್ರೀ ವಿಜಯಕುಮಾರ ಕುದುರೆ, ವಾರ್ಡರವರ ಮೂಲಕ ಕಳುಹಿಸಿದರ ಸಾರಾಂಶವೇನೆಂದರೆ, ದಿನಾಂಕ 28/12/2022 ರಂದು ಬೆಳಗಿನ ಸಮಯ 05:40 ಗಂಟೆಯಿಂದ ಬೆಳಿಗ್ಗೆ 10:30 ಗಂಟೆಯವರೆಗೆ ಉಪ ಪೊಲೀಸ್ ಆಯುಕ್ತರು (ಕಾನೂನು ಸುವ್ಯವಸ್ಥೆ), ಕಲಬುರಗಿ ನಗರ, ಕಲಬುರಗಿ ಹಾಗೂ ಕಲಬುರಗಿ ನಗರದ ಸ್ಥಳೀಯ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಹಾಗೂ ಕೇಂದ್ರ ಕಾರಾಗೃಹದ ಅಧಿಕಾರಿ ಸಿಬ್ಬಂದಿಗಳೊಂದಿಗೆ ಜಂಟಿಯಾಗಿ ಕಾರಾಗೃಹವನ್ನು ಅನಿರೀಕ್ಷಿತವಾಗಿ ತಪಾಸಣೆ ನಡೆಸಲಾಗಿರುತ್ತದೆ. ಮುಂದುವರೆದು, ತಪಾಸಣೆ ವೇಳೆಯಲ್ಲಿ ಈ ಕೆಳಕಂಡ ಬಂದಿಗಳಿಂದ ಅವರ ಹೆಸರುಗಳ ಮುಂದೆ ಸೂಚಿಸಿರುವ ನಿಷೇಧಿತ ವಸ್ತುಗಳು ದೊರೆತಿದ್ದು, ವಿವರ ಈ ಕೆಳಕಂಡಂತಿದೆ.

 1. ಕಾರಂಜಾ ಬ್ಲಾಕ್ ಕಾಂಪೌಂಡ್ ಹತ್ತಿರ ಶಿಕ್ಷಾ ಬಂದಿ ಸಂಖ್ಯೆ: 19268, ಶಿವರಾಜ @ ಶಿವಪ್ಪ ಈತನಿಂದ,

 2. a) ರೂ. 13,300/- ಗಳು

 3. b) ಎಮ್.ಐ ಮೊಬೈಲ್

 4. c) 01 ಏರ್ಟೆಲ್ ಸಿಮ್ ಕಾರ್ಡ ನಂ. 0922 ID 899100090785 1257640 U

 5. ಶಿಕ್ಷಾ ಬಂದಿ ಸಂಖ್ಯೆ: 18716 ಸಂಗಪ್ಪ ತಂದೆ ಶಿವಶರಣಪ್ಪ ಈತನಿಂದ ಅಡುಗೆ ಮನೆಯ

             ಹಿಂಭಾಗದಲ್ಲಿ

 1. a) ರೂ. 1,35,000/- ನಗದು.

 2. ಅಡುಗೆ ಕೋಣೆಯ ಹೊರಾಂಗಣದಲ್ಲಿ ಬೇವಿನ ಮರದ ಬುಡದಲ್ಲಿ 01 ಪ್ಲಾಸ್ಟಿಕ್ ಕವರ್ನಲ್ಲಿ

 3. a) 13,780/- ರೂ. ನಗದು

 4. b) 06 ವಿವಿಧ ಕಂಪನಿಯ ಮೊಬೈಲ್ ಫೋನ್ಗಳು. ವಿವರ ಈ ಕೆಳಕಂಡಂತಿದೆ.

1)        ಒಂದು ಬೂದು ಬಣ್ಣದ Realme ಮೊಬೈಲ್ ಅದರಲ್ಲಿ ಜಿಯೋ ಸಿಮ್ ಕಾರ್ಡ ನಂ.  

            89918610400482739449 ಇರುತ್ತದೆ.

2)        ಒಂದು ತಿಳಿ ನೀಲಿ ಬಣ್ಣದ VIVO ಮೊಬೈಲ್ ಅದರಲ್ಲಿ ಏರಟೆಲ್ ಸಿಮ್ ಕಾಡರ್್ ನಂ.

           1021 ID 8991000905876285240U

3)        ಒಂದು ನೊಕಿಯಾ ಕಂಪನಿಯ ಕೀ-ಪ್ಯಾಡ್ ಸೆಟ್ IMEI ನಂ. 357163834212644, ಸಿಮ್

           ಕಾರ್ಡ ಇರುವುದಿಲ್ಲ.

4)        ಒಂದು ನೋಕಿಯ ಕಂಪನಿಯ ಕೀ-ಪ್ಯಾಡ್ ಹ್ಯಾಂಡ್ ಸೆಟ್ IMEI ನಂ  

            359939439361029 ಅದರಲ್ಲಿ ಏರಟೆಲ್ ಸಿಮ್ ಕಾರ್ಡ ನಂ 0922 G+D  

            8991000908009435150U

5)        ಒಂದು ಕೆಚಡಾ ಕಂಪನಿಯ ಕೀ-ಪ್ಯಾಡ್ ಮೊಬೈಲ್ ಫೋನ್ IMEI ನಂ.  

           863790049305057/ 863790049305065 ಹಾಗೂ ಅದರಲ್ಲಿ ಏರಟೆಲ್ ಸಿಮ್ ಕಾರ್ಡ

           ನಂ. 1021 ID 8991000905788657668U  

6)        ಒಂದು ಹಾಟ್ಲೈನ್ ಕಂಪನಿಯ ಕೀ-ಪ್ಯಾಡ್ ಸೆಟ್ IMEI ನಂ. 355768553115174 ಸಿಮ್

           ಕಾರ್ಡ ಇರುವುದಿಲ್ಲ.

ಒಟ್ಟಾರೆ ದಿನಾಂಕ 28/12/2022 ರಂದು ಪೊಲೀಸ್ ಮತ್ತು ಕಾರಾಗೃಹ ಸಿಬ್ಬಂದಿಗಳ ಜಂಟಿ ತಪಾಸಣೆ ವೇಳೆಯಲ್ಲಿ ಒಟ್ಟು 07 ಸಂಖ್ಯೆ ಮೊಬೈಲ್ ಫೋನ್ಗಳು ಹಾಗೂ ನಗದು ಮೊತ್ತ ರೂ. 1,62,080/- ಗಳು ದೊರೆತಿದ್ದು, ಕರ್ನಾಟಕ ಕಾರಾಗೃಹಗಳ (ತಿದ್ದುಪಡಿ) ಅಧಿನಿಯಮ-2022 ರ ಕಲಂ 42 ರ ಪ್ರಕಾರ ಇವುಗಳು ನಿಷೇಧಿತ ವಸ್ತುಗಳಾಗಿದ್ದು, ಕರ್ನಾಟಕ ಕಾರಾಗೃಹಗಳ (ತಿದ್ದುಪಡಿ) ಅಧಿನಿಯಮ-2022 ರ ಕಲಂ 42 ಹಾಗೂ ಭಾ.ದ.ಸಂ. ಕಲಂ ಗಳಡಿಯಲ್ಲಿ ತಪ್ಪಿತಸ್ಥ ಬಂದಿಗಳ ವಿರುದ್ಧ ಹಾಗೂ ಈ ನಿಷೇಧಿತ ವಸ್ತುಗಳು ಕಾರಾಗೃಹದ ಒಳಗಡೆ ಬರುವಲ್ಲಿ ಯಾವುದಾದರೂ ಸಿಬ್ಬಂದಿಗಳ ಪಾತ್ರವಿದ್ದಲ್ಲಿ ಸೂಕ್ತವಾಗಿ ಪರಿಶೀಲಿಸಿ ತಪ್ಪಿತಸ್ಥ ಬಂದಿಗಳ ಮತ್ತು ಸಿಬ್ಬಂದಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಸೂಕ್ತ ಕಾನೂನು ಕ್ರಮ ಜರುಗಿಸಲು ವಿನಂತಿಸಿದೆ. ತಪಾಸಣೆಯ ವೇಳೆಯಲ್ಲಿ ದೊರೆತ ನಿಷೇಧಿತ ವಸ್ತುಗಳನ್ನು ಈ ಸಂಸ್ಥೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಶ್ರೀ ವಿಜಯಕುಮಾರ ಕುದುರೆ, ವಾರ್ಡರ್ ಇವರ ಹಸ್ತ ಮುಂದಿನ ಕ್ರಮಕ್ಕಾಗಿ ಕಳುಹಿಸಿದೆ ಎಂದು ಅರ್ಜಿಯ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

 

ಸಿ.ಇ.ಎನ್. ಪೊಲೀಸ್‌ ಠಾಣೆ :- ಈ ಮೂಲಕ ಮಾನ್ಯರವರಲ್ಲಿ ವರದಿ ಸಲ್ಲಿಸುವುದೆನೆಂದರೆ, ನಾನು ಶಿವರಾಜ ಸಿಪಿಸಿ-೨೮೨   ಮತ್ತು ಶ್ರೀ ಹೊನ್ನೂರ ಸಾಬ್ ಸಿಪಿಸಿ-279 ಮತ್ತು ರವರು ಕೂಡಿಕೊಂಡು ಮಾನ್ಯರವರ ಆದೇಶದಂತೆ ಕಲಬುರಗಿ ನಗರದಲ್ಲಿ ಕಾನೂನು ಬಾಹಿರ ಚಟುವಟಿಕೆಗಳ ಮತ್ತು ಅಕ್ರಮ ಮಾದಕ ವಸ್ತುಗಳ ಮಾರಾಟ ಮಾಡುವವರ ಮತ್ತು ಗಾಂಜಾ  ಸೇವನೆ ಮಾಡುವವರ ಮಾಹಿತಿ ಸಂಗ್ರಹ ಮತ್ತು ಬೀಟ್ ಕರ್ತವ್ಯ ಕುರಿತು ಠಾಣೆಯಿಂದ ದಿನಾಂಕ: ೨೮/೧೨/೨೦೨೨ ರಂದು ೧೫-೦೦ ಗಂಟೆಗೆ ಹೊರಟು ಕಲಬುರಗಿ ನಗರದ ವಿವಿಧ ನಗರದ ಹಾಗೂ ಗಲ್ಲಿಗಳಲ್ಲಿ ಪೆಟ್ರೋಲಿಂಗ್ ಕರ್ತವ್ಯ ಮಾಡಿಕೊಂಡು ನಂತರ ಸಮಯ ಸಾಯಂಕಾಲ           ೧೫-೩೦ ಗಂಟೆಗೆ ಕಲಬುರಗಿ ನಗರ ಮುಸ್ತಾಫಾ ಮಸೀದ್ ಖಬರಸ್ತಾನ್ ಹತ್ತಿರ ಹೋಗಿ ಪೆಟ್ರೋಲಿಂಗ್ ಕರ್ತವ್ಯದಲ್ಲಿ ಇದ್ದಾಗ ಒಬ್ಬ ವ್ಯಕ್ತಿ ಅನುಮಾನಸ್ಪದವಾಗಿ ಯಾವುದೋ ಮಾದಕ ವಸ್ತು ಸೇವನೆ ಮಾಡಿ ನಶೆಯಲ್ಲಿ ಇರುವುದನ್ನು ಕಂಡು ನಾವು ಹತ್ತಿರ ಹೋಗಿ ವಿಚಾರಿಸಲಾಗಿ ಆತನು ತನ್ನ ಹೆಸರು ಮಹಮ್ಮದ್ ಜಹೀರ್ ತಂದೆ ಇನಾಯತ್ ಅಲಿ ವಯ|| ೨೨ ವರ್ಷ ಸಾ|| ಮಿಜುಗುರಿ ತರಕಾರಿ ಮಾರ್ಕೆಟ್ ಹತ್ತಿರ ಕಲಬುರಗಿ ಅಂತಾ ತೊದಲುತ್ತಾ ತಿಳಿಸಿದು ಆತನ ಬಾಯಿಂದ ಯಾವುದೋ ಮಾದಕ ವಸ್ತು ಸೇವನೆ ಮಾಡಿರುವ ಬಗ್ಗೆ ಕೆಟ್ಟ ವಾಸನೆ ಬರುತ್ತಿದ್ದರಿಂದ ಖಚಿತ ಪಡಿಸಿಕೊಂಡು ಸದರಿಯವನಿಗೆ ಸಿ,ಇ,ಎನ್ ಪೊಲೀಸ್ ಠಾಣೆಗೆ ಕರೆದುಕೊಂಡು ಬಂದು ಮಾನ್ಯ ಪಿ.ಐ ಸಾಹೇಬರ ಮುಂದೆ ಹಾಜರುಪಡಿಸಿದ್ದು ಅವರು ಆದೇಶಿಸಿದಂತೆ ವ್ಯೆಧ್ಯಕೀಯ ಪರೀಕ್ಷೆ ಕುರಿತು ನಾನು ಮತ್ತು ಹೊನ್ನುರಸಾಬ ಸಿಪಿಸಿ-೨೭೯ ಬೆಂಗಾವಲಿನಲ್ಲಿ ಸದರಿಯವನಿಗೆ ಜಿಲ್ಲಾ ವೈಧ್ಯಾಧಿಕಾರಿಗಳು ಸರಕಾರಿ ಆಸ್ಪತ್ರೆ  ಕಲಬುರಗಿ ರವರಲ್ಲಿ ಮಾದಕ ವಸ್ತು ಸೇವನೆ  ಮಾಡಿರುವ ಬಗ್ಗೆ ವ್ಯಧ್ಯಕೀಯ ಪರೀಕ್ಷೆ ಮಾಡಿಸಿದ ನಂತರ ವೈಧ್ಯರು ದಿನಾಂಕ: ೨೮-೧೨-೨೦೨೨ ರಂದು ೧೮:೦೦ ಗಂಟೆಗೆ Positive for 1) thc: marijuana (ganja)- positive 2) MOP: Morphini-Positive, 3) Bzo: Benzodianejine-Positive ಅಂತಾ ವರದಿ ನೀಡಿರುತ್ತಾರೆ. ಕಾರಣ ಸದರಿ ಆರೋಪಿತನ ವಿರುದ್ದ ಕಾನೂನು ಕ್ರಮ ಕೈಗೊಳ್ಳಲು ವಿನಂತಿ ಎಂದು ಕೊಟ್ಟ ಹೇಳಿಕೆ  ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

 

 

ಸಿ.ಇ.ಎನ್. ಪೊಲೀಸ್‌ ಠಾಣೆ :- ದಿನಾಂಕ: 28/12/2022 ರಂದು 19:45 ಗಂಟೆಗೆ ಶ್ರೀ ಈರಣ್ಣಾ ಸಿಪಿಸಿ: ೧೮೧ ಹಾಗೂ ಶ್ರೀ ಪ್ರಶಾಂತ ಸಿಪಿಸಿ: ೨೯೦ ಸಿ,ಇ,ಎನ್ ಪೊಲೀಸ ಠಾಣೆ ಇವರು ಒಂದು ವರದಿ ಹಾಗೂ ವೈಧ್ಯಕೀಯ ಪ್ರಮಾಣ ಪತ್ರದೊಂದಿಗೆ ಹಾಜರಾಗಿ  ನೀಡಿದ ದೂರಿನ ಸಾರಾಂಶವೆನೆAದರೆ, ಈ ಮೂಲಕ ಮಾನ್ಯರವರಲ್ಲಿ ವರದಿ ಸಲ್ಲಿಸುವುದೆನೆಂದರೆ, ನಾನು ಈರಣ್ಣಾ ಸಿಪಿಸಿ: ೧೮೧ ಮತ್ತು ಪ್ರಶಾಂತ ಸಿಪಿಸಿ: ೨೯೦ ರವರು ಕೂಡಿಕೊಂಡು ಮಾನ್ಯರವರ ಆದೇಶದಂತೆ ಕಲಬುರಗಿ ನಗರದಲ್ಲಿ ಕಾನೂನು ಬಾಹಿರ ಚಟುವಟಿಕೆಗಳ ಮತ್ತು ಅಕ್ರಮ ಮಾದಕ ವಸ್ತುಗಳ ಮಾರಾಟ ಮಾಡುವವರ ಮತ್ತು ಗಾಂಜಾ  ಸೇವನೆ ಮಾಡುವವರ ಮಾಹಿತಿ ಸಂಗ್ರಹ ಮತ್ತು ಬೀಟ್ ಕರ್ತವ್ಯ ಕುರಿತು ಠಾಣೆಯಿಂದ ದಿನಾಂಕ: ೨೮/೧೨/೨೦೨೨ ರಂದು ೧೫-೦೦ ಗಂಟೆಗೆ ಹೊರಟು ಕಲಬುರಗಿ ನಗರದ ವಿವಿಧ ನಗರದ ಹಾಗೂ ಗಲ್ಲಿಗಳಲ್ಲಿ ಪೆಟ್ರೋಲಿಂಗ್ ಕರ್ತವ್ಯ ಮಾಡಿಕೊಂಡು ನಂತರ ಸಮಯ ರಾತ್ರಿ ೧೫-೪೫ ಗಂಟೆಗೆ ಕಲಬುರಗಿ ನಗರ ಮಿಜಗುರಿ ಮಾರ್ಕೆಟ್ ಹತ್ತಿರ ಹೋಗಿ ಪೆಟ್ರೋಲಿಂಗ್ ಕರ್ತವ್ಯದಲ್ಲಿ ಇದ್ದಾಗ ಒಬ್ಬ ವ್ಯಕ್ತಿ ಅನುಮಾನಸ್ಪದವಾಗಿ ಯಾವುದೋ ಮಾದಕ ವಸ್ತು ಸೇವನೆ ಮಾಡಿ ನಶೆಯಲ್ಲಿ ಇರುವುದನ್ನು ಕಂಡು ನಾವು ಹತ್ತಿರ ಹೋಗಿ ವಿಚಾರಿಸಲಾಗಿ ಆತನು ತನ್ನ ಹೆಸರು ಅಬ್ದುಲ್ ರಹೀಮ್ ತಂದೆ ಅಬ್ದುಲ್ ಅಬ್ಬಾಸ್ ವಯ|| ೨೬ ವರ್ಷ ಸಾ|| ಮೆಹಬೂಬ್ ನಗರ ಹಾಜೀ ಹೋಟೆಲ್ ಹತ್ತಿರ ಕಲಬುರಗಿ ಅಂತಾ ತೊದಲುತ್ತಾ ತಿಳಿಸಿದು ಆತನ ಬಾಯಿಂದ ಯಾವುದೋ ಮಾದಕ ವಸ್ತು ಸೇವನೆ ಮಾಡಿರುವ ಬಗ್ಗೆ ಕೆಟ್ಟ ವಾಸನೆ ಬರುತ್ತಿದ್ದರಿಂದ ಖಚಿತ ಪಡಿಸಿಕೊಂಡು ಸದರಿಯವನಿಗೆ ಸಿ,ಇ,ಎನ್ ಪೊಲೀಸ್ ಠಾಣೆಗೆ ಕರೆದುಕೊಂಡು ಬಂದು ಮಾನ್ಯ ಪಿ.ಐ ಸಾಹೇಬರ ಮುಂದೆ ಹಾಜರುಪಡಿಸಿದ್ದು ಅವರು ಆದೇಶಿಸಿದಂತೆ ವ್ಯೆಧ್ಯಕೀಯ ಪರೀಕ್ಷೆ ಕುರಿತು ನಾನು ಈರಣ್ಣಾ ಸಿಪಿಸಿ: ೧೮೧ ಮತ್ತು ಪ್ರಶಾಂತ ಸಿಪಿಸಿ: ೨೯೦ ಬೆಂಗಾವಲಿನಲ್ಲಿ ಸದರಿಯವನಿಗೆ ಜಿಲ್ಲಾ ವೈಧ್ಯಾಧಿಕಾರಿಗಳು ಸರಕಾರಿ ಆಸ್ಪತ್ರೆ  ಕಲಬುರಗಿ ರವರಲ್ಲಿ ಮಾದಕ ವಸ್ತು ಸೇವನೆ  ಮಾಡಿರುವ ಬಗ್ಗೆ ವ್ಯಧ್ಯಕೀಯ ಪರೀಕ್ಷೆ ಮಾಡಿಸಿದ ನಂತರ ವೈಧ್ಯರು ದಿನಾಂಕ: ೨೮-೧೨-೨೦೨೨ ರಂದು ೧೮:೩೦ ಗಂಟೆಗೆ Positive for 1) thc: marijuana (ganja)- positive 2) MOP: Morphini-Positive, 3) Bzo: Benzodianejine-Positive ಅಂತಾ ವರದಿ ನೀಡಿರುತ್ತಾರೆ. ಕಾರಣ ಸದರಿ ಆರೋಪಿತನ ವಿರುದ್ದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

 

ಸಿ.ಇ.ಎನ್. ಪೊಲೀಸ್‌ ಠಾಣೆ :- ದಿನಾಂಕ: 28/12/2022 ರಂದು ೨೧:೦೦ ಗಂಟೆಗೆ ಶ್ರೀ ಸುನೀಲ್ ಕುಮಾರ ಸಿಪಿಸಿ: ೫೭೦ ಹಾಗೂ ಶ್ರೀ ಗುರುನಾಥ ಸಿಪಿಸಿ: ೮೪೩ ಸಿ,ಇ,ಎನ್ ಪೊಲೀಸ ಠಾಣೆ ಇವರು ಒಂದು ವರದಿ ಹಾಗೂ ವೈಧ್ಯಕೀಯ ಪ್ರಮಾಣ ಪತ್ರದೊಂದಿಗೆ ಹಾಜರಾಗಿ  ನೀಡಿದ ದೂರಿನ ಸಾರಾಂಶವೆನೆಂದರೆ, ನಾನು ಸುನೀಲ್ ಕುಮಾರ ಸಿಪಿಸಿ: ೫೭೦ ಮತ್ತು ಗುರುನಾಥ ಸಿಪಿಸಿ: ೮೪೩  ಕೂಡಿಕೊಂಡು ಮಾನ್ಯರವರ ಆದೇಶದಂತೆ ಕಲಬುರಗಿ ನಗರದಲ್ಲಿ ಕಾನೂನು ಬಾಹಿರ ಚಟುವಟಿಕೆಗಳ ಮತ್ತು ಅಕ್ರಮ ಮಾದಕ ವಸ್ತುಗಳ ಮಾರಾಟ ಮಾಡುವವರ ಮತ್ತು ಗಾಂಜಾ  ಸೇವನೆ ಮಾಡುವವರ ಮಾಹಿತಿ ಸಂಗ್ರಹ ಮತ್ತು ಬೀಟ್ ಕರ್ತವ್ಯ ಕುರಿತು ಠಾಣೆಯಿಂದ ದಿನಾಂಕ: ೨೮/೧೨/೨೦೨೨ ರಂದು ೧೫-೦೦ ಗಂಟೆಗೆ ಹೊರಟು ಕಲಬುರಗಿ ನಗರದ ವಿವಿಧ ನಗರದ ಹಾಗೂ ಗಲ್ಲಿಗಳಲ್ಲಿ ಪೆಟ್ರೋಲಿಂಗ್ ಕರ್ತವ್ಯ ಮಾಡಿಕೊಂಡು ನಂತರ ಸಮಯ ೧೬-೦೦ ಗಂಟೆಗೆ ಕಲಬುರಗಿ ನಗರ ಖುರೇ಼ಷಿ ಫಂಕ್ಷನ್ ಹಾಲ್ ಹತ್ತಿರ ಹೋಗಿ ಪೆಟ್ರೋಲಿಂಗ್ ಕರ್ತವ್ಯದಲ್ಲಿ ಇದ್ದಾಗ ಒಬ್ಬ ವ್ಯಕ್ತಿ ಅನುಮಾನಸ್ಪದವಾಗಿ ಯಾವುದೋ ಮಾದಕ ವಸ್ತು ಸೇವನೆ ಮಾಡಿ ನಶೆಯಲ್ಲಿ ಇರುವುದನ್ನು ಕಂಡು ನಾವು ಹತ್ತಿರ ಹೋಗಿ ವಿಚಾರಿಸಲಾಗಿ ಆತನು ತನ್ನ ಹೆಸರು ಮೊಹಮ್ಮದ್ ಖಾಜಾ ತಂದೆ ಶೂಖೂರ್ ಮಿಯಾ || ೧೯ ವರ್ಷ ಸಾ|| ಕಾಮಾನೆ ನುಜ್ರಾತ್ ಟಿಪ್ಪು ಚೌಕ್ ಹತ್ತಿರ ಕಲಬುರಗಿ ಅಂತಾ ತೊದಲುತ್ತಾ ತಿಳಿಸಿದ್ದು ಆತನ ಬಾಯಿಂದ ಯಾವುದೋ ಮಾದಕ ವಸ್ತು ಸೇವನೆ ಮಾಡಿರುವ ಬಗ್ಗೆ ಕೆಟ್ಟ ವಾಸನೆ ಬರುತ್ತಿದ್ದರಿಂದ ಖಚಿತ ಪಡಿಸಿಕೊಂಡು ಸದರಿಯವನಿಗೆ ಸಿ,ಇ,ಎನ್ ಪೊಲೀಸ್ ಠಾಣೆಗೆ ಕರೆದುಕೊಂಡು ಬಂದು ಮಾನ್ಯ ದೇವಿಂದ್ರ ಸಿಹೆಚ,ಸಿ:೨೧ ಸಾಹೇಬರ ಮುಂದೆ ಹಾಜರುಪಡಿಸಿದ್ದು ಅವರು ಆದೇಶಿಸಿದಂತೆ ವ್ಯೆಧ್ಯಕೀಯ ಪರೀಕ್ಷೆ ಕುರಿತು ಜಿಲ್ಲಾ ವೈಧ್ಯಾಧಿಕಾರಿಗಳು ಸರಕಾರಿ ಆಸ್ಪತ್ರೆ  ಕಲಬುರಗಿ ರವರಲ್ಲಿ ಕರೆದುಕೊಂಡು ಹೋಗಿ ಸದರಿ ವ್ಯಕ್ತಿಯು ಮಾದಕ ವಸ್ತು ಸೇವನೆ  ಮಾಡಿರುವ ಬಗ್ಗೆ ವೈಧ್ಯಕೀಯ ಪರೀಕ್ಷೆ ಮಾಡಿಸಿದ ನಂತರ ದಿನಾಂಕ: ೨೮-೧೨-೨೦೨೨ ರಂದು ೨೦:೩೦ ಗಂಟೆಗೆ Positive for 1) THC: marijuana (ganja)- positive 2) BZO: Benzodianejine-Positive ಅಂತಾ ವೈಧ್ಯರು ವರದಿ ನೀಡಿರುತ್ತಾರೆ. ಕಾರಣ ಸದರಿ ಆರೋಪಿತನ ವಿರುದ್ದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

ಇತ್ತೀಚಿನ ನವೀಕರಣ​ : 30-12-2022 03:15 PM ಅನುಮೋದಕರು: ADMIN


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

 • ಹಕ್ಕುಸ್ವಾಮ್ಯ ನೀತಿ
 • ಬಾಹ್ಯಜಾಲತಾಣ ಸಂಪರ್ಕ ನೀತಿ
 • ಭದ್ರತಾ ನೀತಿ
 • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

 • ಇತ್ತೀಚಿನ ನವೀಕರಣ​ :
 • ಸಂದರ್ಶಕರು :
 • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕಲಬುರಗಿ ನಗರ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080