Feedback / Suggestions

ವಿಶ್ವವಿದ್ಯಾಲಯ ಪೊಲೀಸ್‌ ಠಾಣೆ :- ದಿನಾಂಕ 26-11-2022 ರಂದು ೭:೩೦ ಪಿ.ಎಮ್ ದಿಂದ ದಿನಾಂಕ ೨೭.೧೧.೨೦೨೨ ರಂದು ೯:೦೦ ಪಿ.ಎಮ್ ದ ಮದ್ಯದ ಅವಧಿಯಲ್ಲಿ ಫಿರ್ಯಾದಿಯ ಮನೆಯ ಬಾಗಿಲ ಕೀಲಿ ಮುರಿದು ಬೆಡ್ ರೂನಮಿನಲ್ಲಿರುವ ಅಲಮಾರಿ ಕೀಲಿ ಮುರಿದು ಒಳಗಡೆ ಇದ್ದ ೧) ೨೦ ಗ್ರಾಂ ನ ಎರಡು ಬಂಗಾರದ ಬಳೆಗಳು ಒಟ್ಟು ೪೦ ಗ್ರಾಂ ಬಂಗಾರ ಅ.ಕಿ-೧,೦೦,೦೦೦/-ರೂ, ೨) ೫ ಗ್ರಾಂ ನ ಎರಡು ಬಂಗಾರದ ಉಂಗುರಗಳು ಒಟ್ಟು ೧೦ ಗ್ರಾಂ ಬಂಗಾರ ಅ.ಕಿ-೫೦,೦೦೦/-ರೂ, ಹಿಗೇ ಒಟ್ಟು ೫೦ ಗ್ರಾಂ ಬಂಗಾರ ಅ.ಕಿ ೧,೫೦,೦೦೦/- ೩) ನಗದು ಹಣ ೧೮೫,೦೦೦/-ರೂ ಹೀಗೇ ಒಟ್ಟುಅಂದಾಜು೩,೩೫,೦೦೦/-ರೂ ಕಿಮ್ಮತ್ತಿನಗಳನ್ನುಯಾರೋಕಳ್ಳರು ಕಳ್ಳತನ ಮಾಢಿಕೊಂಡು ಹೋಗಿರುತ್ತಾರೆ ಎಂದು ಫಿರ್ಯಾದಿ ಕೊಟ್ಟ ಹೇಳಿಕೆ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

ಎಂ.ಬಿ.ನಗರ ಪೊಲೀಸ ಠಾಣೆ :- ದಿನಾಂಕ 24-11-2022 ರಂದು ಬೆಳೆಗ್ಗೆ ೯.೦೦ ಗಂಟೆಗೆ ದೇವರ ಪೂಜಾ ಕಾರ್ಯಕ್ರಮಕ್ಕಾಗಿ ನಾನು,ನನ್ನ ತಾಯಿಯಾದ ಶ್ರೀಮತಿ ಸುಧಾ ಗಂಡ ಕೃಷ್ಣಾ ಅಷ್ಠಗಿ ವ|| ೫೯ ಮತ್ತು ನನ್ನ ತಮ್ಮನಾದ ಡಾ|| ಸುನೀಲ ಕೃಷ್ಣಾ ಅಷ್ಠಗಿ ಮೂವರೂ ಕೂಡಿ ಮನೆಯ ಮೇನ್ ಬಾಗಿಲಿಗೆ ಸೆಂಟರ ಲಾಕ ಮತ್ತು ಕೊಂಡಿ ಲಾಕ ಹಾಕಿಕೊಂಡು ಹೈದರಾಬಾದಗೆ ಹೋಗಿ ಪೂಜಾ ಕಾರ್ಯಕ್ರಮ ಮುಗಿಸಿಕೊಂಡು ಇಂದು ದಿನಾಂಕ ೨೮/೧೧/೨೦೨೨ ರಂದು ಮಧ್ಯಾಹ್ನ ೦೩.೩೦ ಗಂಟೆಗೆ ಬಂದು ಬಾಗಿಲು ತೆರೆಯಲು ಹೋದಾಗ ನಮ್ಮ ಮನೆಯ ಮುಖ್ಯ ದ್ವಾರದ ಕಿಲಿ ಕೊಂಡಿ ಮುರಿದ್ದು ಮತ್ತು ಸೆಂಟರ ಲಾಕ ತೆರದಿದ್ದು ಕಂಡು ನಂತರ ಹೊಲಗಡೆ ಗಾಭರಿಯಾಗಿ ಮನೆಯಲ್ಲಿರುವ ಬೆಡರೂಮಿಗೆ ಹೋಗಿ ನೋಡಿದರೆ  ಬೆಡರೂಮಿನಲ್ಲಿರುವ ಅಲಮಾರಿ ಡ್ರಾಗಳ ಕಿಲಿಯು ಬೆಡನ ಹಿಂದುಗಡೆ ಇರುವ ಮಾಡದಲ್ಲಿ ಇಟ್ಟಿದ್ದನ್ನು ಮಂಚದ ಬೆಡ್‌ನ ಮೇಲೆ ಇತ್ತು ಅದನ್ನು ತೆಗೆದುಕೊಂಡು ಅಲಮಾರಿ ಡ್ರಾಗಳು ತೆರೆದು ನೋಡಿದರೆ ಒಂದರಲ್ಲಿದ್ದ ನನ್ನ ತಾಯಿಗೆ ಸಂಬಂಧಿಸಿದ ೧] ೫೫ ಗ್ರಾಮ ಬಂಗಾರದ ಕಂಟಿಸರ ಅಂ.ಕಿ.೨,೨೦,೦೦೦/- ರೂ ೨] ೨೫ ಗ್ರಾಮದ ಮಂಗಳಸೂತ್ರ ಅಂ.ಕಿ. ೧,೦೦,೦೦೦/- ರೂ ಒಟ್ಟು ೩,೨೦,೦೦೦/- ರೂ ಕಿಮ್ಮತ್ತನ ಆಭರಣಗಳು ಕಾಣಲಿಲ್ಲ ಮತ್ತೆ ಮತ್ತೊಂದು ಡ್ರಾದಲ್ಲಿದ್ದ ಬಂಗಾರದ ಆಭರಣಗಳು ಮತ್ತು ಬೇಳ್ಳಿಯ ಸಾಮಾನುಗಳು, ಹಾಗೂ ಟೆಬಲ ಮೇಲೆ ಒಂದು ಲ್ಯಾಪ ಟ್ಯಾಪ ಮತ್ತು ಹಾಲಿನಲ್ಲಿ ಒಂದು ಲ್ಯಾಪ ಟ್ಯಾಪ ಹಾಗೂ ಮತ್ತೊಂದು ಬೆಡರೂಮಿನಲ್ಲಿ ಒಂದು ಟ್ಯಾಬಲೈಟ ಗಳು ಕಳ್ಳತನ ವಾಗದೆ ಹಾಗೇಯೇ ಇದ್ದವು. ಇದನೇಲ್ಲಾ ನೋಡಿದರೆ ಇದೆಲ್ಲಾ ನಮ್ಮ ಕುಟುಂಬದವರೆ ಆದ ನನ್ನ ಹೆಂಡತಿಯಾದ ಶ್ರೀಮತಿ ರಷ್ಮಿ ಗಂಡ ಸಂಜೀವ ಅಷ್ಠಗಿ (ಗೊವಿಂದರಾವ ಕಕ್ಕೇರಿ) ಸಾ|| ಮಹರ್ಷಿ ಸ್ಕೂಲ ಹತ್ತೀರ ಕುಸುನೂರು ರೋಡ ಕಲಬುರಗಿ ಇವರನ್ನು ದಿನಾಂಕ ೦೯/೦೬/೨೦೧೯ ರಂದು ಮದುವೆ ಮಾಡಿಕೊಂಡಾದಗಿನಿಂದ ನಮ್ಮ ಸಂಸಾರದಲ್ಲಿ ಯಾವುದೇ ಸಾಮರಸ್ಯ ಇರದೆ ಇದ್ದು ನಂತರ ದಿನಾಂಕ ೨೨/೧೨/೨೦೨೦ ರಂದು ನಮ್ಮ ಮನೆ ಬಿಟ್ಟು ಅವರ ತಂದೆ-ತಾಯಿಯ ಮನೆಗೆ ಹೋಗಿ ನಂತರ ಮರುದಿವಸ ಮತ್ತೆ ನಮ್ಮ ಮನೆಗೆ ಬಂದು  ಅವರಿಗೆ ಸಂಬಂಧಿಸಿದ ಎಲ್ಲಾ ಬಂಗಾರದ ಆಭರಣಗಳು ಮತ್ತು ಬಟ್ಟೆಗಳನ್ನು ಪ್ಯಾಕ ಮಾಡಿ ತೆಗೆದುಕೊಂಡು ಹೋಗಿರುತ್ತಾರೆ. ನಂತರ ನಾನು ಮಾನ್ಯ ನ್ಯಾಯಾಲಯದಲ್ಲಿ ಡೈವರ್ಸ ಪ್ರಕರಣ ದಾಖಲಿಸಿದ್ದು ಇನ್ನೂ ನ್ಯಾಯಾಲಯದಲ್ಲಿ ಪ್ರಕರಣ ಚಾಲ್ತಿಯಲ್ಲಿರುತ್ತದೆ. ದಿನಾಂಕ ೨೧/೧೧/೨೦೨೨ ರಂದು ಮೊದಲನೇಯ ಹಂತದ ಕೌನ್ಸಿಲಿಂಗ ನಮ್ಮಬ್ಬಿರಿಗೆ ಆಗಿದ್ದು ಇರುತ್ತದೆ. ದಿನಾಂಕ.೨೩/೧೧/೨೦೨೨ ರಂದು ಎರಡನೇಯ ಹಂತದ ಕೌನ್ಸಿಲಿಂಗ ನಮ್ಮಬ್ಬಿರಿಗೆ ಆಗಿದ್ದು ಇರುತ್ತದೆ. ಮತ್ತು ದಿನಾಂಕ.೩೦/೧೧/೨೦೨೨ ರಂದು ಮೂರನೇಯ ಹಂತದ ಕೌನ್ಸಿಲಿಂಗ ಇರುತ್ತದೆ.  ಕಾರಣ ದಿನಾಂಕ ೨೪/೧೧/೨೦೨೨ ರಂದು ಬೆಳೇಗ್ಗೆ ೦೯.೦೦ ಗಂಟೆಯಿಂದ ದಿನಾಂಕ ೨೮/೧೧/೨೦೨೨ ರಂದು ಮಧ್ಯಾಹ್ನ ೦೩.೩೦ ಗಂಟೆಯ ಮಧ್ಯದಲ್ಲಿ ನಾನು, ನನ್ನ ತಾಯಿಯಾದ ಶ್ರೀಮತಿ ಸುದಾ ಮತ್ತು ನನ್ನ ತಮ್ಮನಾದ ಡಾ|| ಸುನೀಲ ಕೃಷ್ಣಾ ಅಷ್ಠಗಿ ಮೂವರೂ ಕೂಡಿ ಹೈದರಾಬಾದಿಗೆ ಹೋಗಿ ಪೂಜಾ ಕಾರ್ಯಾ ಕ್ರಮಗಳು ಮುಗಿಸಿಕೊಂಡು ಬರುವಷ್ಠರಲ್ಲಿ ನಮ್ಮ ಮನೆಯ ಮುಖ್ಯಧ್ವಾರದ ಬಾಗಿಲಿಗೆ ಹಾಕಿದ ಕಿಲಿ ಕೊಂಡಿ ಮುರಿದು, ಸೆಂಟರ ಲಾಕ ತೆರೆದು ಮನೆಯ ಬೆಡರೂಮಿನಲ್ಲಿರುವ ಬೆಡನ ಹಿಂದುಗಡೆಯ ಮಾಡದಲ್ಲಿದ್ದ ಡ್ರಾಗಳ ಕಿಲಿ ತೆಗೆದುಕೊಂಡು ಅದರಿಂದ ಡ್ರಾಗಳು ತೆಗೆದು ಅಲಮಾರಿಯ ಡ್ರಾದಲ್ಲಿದ್ದ ೧] ೫೫ ಗ್ರಾಮ ಬಂಗಾರದ ಕಂಟಿಸರ ಅಂ.ಕಿ.೨,೨೦,೦೦೦/- ರೂ ೨] ೨೫ ಗ್ರಾಮದ ಮಂಗಳಸೂತ್ರ ಅಂ.ಕಿ. ೧,೦೦,೦೦೦/- ರೂ ಒಟ್ಟು ೩,೨೦,೦೦೦/- ರೂ ಕಿಮ್ಮತ್ತನ ಆಭರಣಗಳು ಕಳ್ಳತನ ಮಾಡಿಕೊಂಡು ಹೋಗಿದ್ದು ನನ್ನ ಹೆಂಡತಿಯಾದ ಶ್ರೀಮತಿ ರಷ್ಮಿ ಗಂಡ ಸಂಜೀವ ಅಷ್ಠಗಿ ( ಗೊವಿಂದರಾವ ಕಕ್ಕೇರಿ ) ಸಾ|| ಮಹರ್ಷಿ ಸ್ಕೂಲ ಹತ್ತೀರ ಕುಸುನೂರು ರೋಡ ಕಲಬುರಗಿ ಇವರ ಹಾಗೂ ನನ್ನ ಹೆಂಡತಿಯ ಅಣ್ಣನಾದ ರಾಹುಲ ಕಕ್ಕೇರಿ, ನನ್ನ ಹೆಂಡತಿಯ ತಂದೆಯಾದ ಗೊವಿಂದರಾವ ಕಕ್ಕೇರಿ ಮತ್ತು ನನ್ನ ತಾಯಿಯಾದ ರಾಧಿಕಾ @ ಭಾರತಿ ಕಕ್ಕೇರಿ ಇವರಗಳ ಮೇಲೆ ನನ್ನ ಸಂಶಯವಿದ್ದು ಇವರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಂಡು ನನ್ನ ಮನೆಯಲ್ಲಿ ಕಳ್ಳತನವಾಗಿರುವ ಬಂಗಾರದ ಆಭರಣಗಳು ಪತ್ತೆ ಮಾಡಿ ಕೊಡಭೇಕೆಂದು ತಮ್ಮಲ್ಲಿ ವಿನಂತಿ ಅರ್ಜಿ ಇರುತ್ತದೆ.  ಅಂತಾ ನೀಡಿದ ದೂರು ಅರ್ಜಿಯ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

ಎಂ.ಬಿ.ನಗರ ಪೊಲೀಸ ಠಾಣೆ :- ಫಿರ್ಯಾದಿದಾರರ ಬಸವೇಶ್ವರ ಕಾಲೋನಿಯಲ್ಲಿರುವ ಬಸವ ಹಿಟ್ಟಿನ ಗಿರಿಣಿ ಹತ್ತೀರ ಬಲಗೈಯಲ್ಲಿ ಮೋಬೈಲ ಹಿಡಿದುಕೊಂಡು ಮಾತಾಡನಾಡುತ್ತಾ ಹೋಗುತ್ತಿದ್ದಾಗ ಯಾರೋ ಇಬ್ಬರೂ ಅಪರಿಚಿತ ವ್ಯಕ್ತಿಗಳು ಕಪ್ಪು ಕೆಂಪು ಬಣ್ಣದ ಪಲ್ಸರ-೨೨೦ ಮೋಟಾರ ಸೈಕಲ ಮೇಲೆ  ಹಿಂದಿನಿಂದ ಬಂದು ನನ್ನ ಕೈಯಲ್ಲಿದ್ದ ನಿಲಿ ಬಣ್ಣದ ONE-PLUS NORD CE-2 LITE 5G  ಮೋಬೈಲ ಅ.ಕಿ. ೧೨೦೦೦/- ರೂಪಾಯಿ. ನೆದ್ದು ಜಬರದಸ್ತಿಯಿಂದ ಕಸಿದುಕೊಂಡು ಹೋಗಿರುತ್ತಾರೆ ಅವರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೆಕೆಂದು ಫಿರ್ಯಾದಿ ಕೊಟ್ಟ ಹೇಳಿಕೆ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

 

ಸಬ್‌ ಅರ್ಬನ್‌ ಪೊಲೀಸ ಠಾಣೆ :- ಸದರಿಯವರು ಏರಿಯಾದಲ್ಲಿ ಪೆಟ್ರೋಲಿಂಗ್ ಕರ್ತವ್ಯದಲ್ಲಿದ್ದಾಗ ಖಚಿತ ಬಾತ್ಮಿ ಬಂದಿದ್ದೆನೆಂದರೆ  ಎಪಿಎಮ್‌ಸಿ ಯಾರ್ಡ ಸುಲ್ತಾನಪುರದಲ್ಲಿ ಇಬ್ಬರು ವ್ಯಕ್ತಿಗಳು ಯಾವುದೇ ಪರವಾನಗಿ ಇಲ್ಲದೆ ಮಧ್ಯ ಮಾರಾಟ ಮಾಡುತ್ತಿದ್ದಾರೆಂದು ಬಾತ್ಮಿ ಬಂದಿದ್ದು ಹೋಗಿ ನೋಡಲು ಇಬ್ಬರು ವ್ಯಕ್ತಿಗಳು  ಮಧ್ಯವನ್ನು ಅಕ್ರಮವಾಗಿ ಮಾರಾಟ ಮಾಡುತ್ತಿದ್ದನು ಖಚಿತ ಪಡಿಸಿಕೊಂಡು ಹೋಗಿ ದಾಳಿ ಮಾಡಲು ಒಬ್ಬ ಆರೋಪಿತನು ಓಡಿ ಹೊಗಿದ್ದು ಒಬ್ಬ ಎ೧ ಆರೋಪಿತನನ್ನು ವಶಕ್ಕೆ ಪಡೆದು ಅವನ ವಿರುದ್ದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

 

ಸಂಚಾರಿ ಪೊಲೀಸ್‌ ಠಾಣೆ -1 :- ನನ್ನ ತಂದೆ ವೆಂಕಟ ವ: 48 ವರ್ಷ ಇವರು ಪಿಡಬ್ಲೂಡಿ ಇಲಾಖೆಯಲ್ಲಿ ಇಂಜನಿಯರ್ ಕೆಲಸ ಮಾಡಿಕೊಂಡು ಇರುತ್ತಾರೆ.    ದಿನಾಂಕ 27-11-2022 ರಂದು ಸಾಯಂಕಾಲದ ಸಮಯದಲ್ಲಿ ನಾನು ಮನೆಯಲ್ಲಿರುವಾಗ ನನ್ನ ತಂದೆ ವೆಂಕಟ ಇವರು ಹೈಕೊರ್ಟ ಹತ್ತೀರ ಬರುವ ನಮ್ಮ ದೊಡ್ಡಪ್ಪನ ಮಗ ರಮೇಶ ಇವರ ಮನೆಗೆ ಹೋಗಿವ ಬರುತ್ತೇನೆ ಅಂತಾ ಮನೆಯ ಮೋಟಾರ ಸೈಕಲ ನಂಬರ ಕೆಎ-32/ಇಹೆಚ್-0458 ನೇದ್ದನ್ನು ಚಲಾಯಿಸಿಕೊಂಡು ಹೋದರು. ರಾತ್ರಿ ನಾವು ನಮ್ಮ ತಂದೆ ದಾರಿ ಕಾಯುತ್ತಾ ಮನೆಯಲ್ಲಿರುವಾಗ ನಮ್ಮ ತಂದೆಯ ಜೊತೆಗೆ ಕೆಲಸ ಮಾಡುವ ನಾಗರಾಜ ತಂದೆ ಅಮೃತ ಇವರು ನಮ್ಮ ಮನೆಗೆ ಪೋನ ಮಾಡಿ ನಾನು ಮತ್ತು ಬವಸರಾಜ ತಂದೆ ನಾಗಶೆಟ್ಟಿ ಇಬ್ಬರೂ ಜೇವರ್ಗಿ ರೋಡಿಗೆ ಬರುವ ಮಾನಕರ್ ಪೆಟ್ರೊಲ ಪಂಪ ಹತ್ತೀರ ಇರುವಾಗ ನಿಮ್ಮ ತಂದೆ ವೆಂಕಟ ಇವರು ರಾಮ ಮಂದಿರ ಕಡೆಯಿಂದ ಆರ.ಪಿ ಸರ್ಕಲ ಕಡೆಗೆ ಹೋಗುವ ಕುರತು ತಮ್ಮ ಮೋಟಾರ ಸೈಕಲನ್ನು ಅತಿವೇಗವಾಗಿ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬರುವಾಗ ಮಾನಕರ ಪೆಟ್ರೊಲ ಪಂಪ ಎದುರು ರೋಡ ಮೇಲೆ ಅದೇ ರೀತಿ ಒಬ್ಬ ಕಾರ ಚಾಲಕನು ರಾಮ ಮಂದಿರ ಕಡೆಯಿಂದ ತನ್ನ ಕಾರನ್ನು ಅತಿವೇಗವಾಗಿ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಕರುಣೇಶ್ವರ ನಗರದೊಳಗಡೆ ಹೋಗುವ ಕುರಿತು ಒಮ್ಮಲೇ ಅತಿವೇಗವಾಗಿ ಮತ್ತು ಅಲಕ್ಷತನದಿಂದ ಕಾರನ್ನು ಎಡಕ್ಕೆ ತಿರುಗಿಸಿದಾಗ ಇಬ್ಬರೂ ಒಂದಕ್ಕೊಂದು ವಾಹನಗಳನ್ನು ಡಿಕ್ಕಿಪಡಿಸಿ ಅಪಘಾತ ಮಾಡಿಕೊಂಡರು. ನಿಮ್ಮ ತಂದೆ ಮೋಟಾರ ಸೈಕಲ ಸಮೇತ ಕೆಳಗಡೆ ಬಿದ್ದರು. ನಾವು ಅವರ ಹತ್ತೀರ ಹೋಗಿ ಅವರನ್ನು ಎಬ್ಬಿಸಿ ರೋಡ ಪಕ್ಕದಲ್ಲಿ ಮಲಗಿಸಿ ಕಾರ ನಂಬರ ನೋಡಲು ಕೆಎ-32/ಪಿ-8612 ಇದ್ದಿತ್ತು.  ನಿಮ್ಮ ತಂದೆ ವೆಂಕಟ ಇವರಿಗೆ ನೋಡಲು ಅವರ ತೆಲೆಯ ಬಲಬಾಗದ ಮೇಲೆ ಗುಪ್ತಗಾಯ ಮತ್ತು ಭಾರರಿಗಾಯ, ಬಲ ಕೆನ್ನೆಯ ಮೇಲೆ ರಕ್ತಗಾಯವಾಗಿ ಅವರು ಬೇಹೂಸ ಇದ್ದರು. ಅವರು ಚಲಾಯಿಸಿಕೊಂಡು ಬಂದಿರುವ ಮೋಟಾರ ಸೈಕಲ ನಂಬರ ನೋಡಲು ಕೆಎ-32/ಇಹೆಚ್-0458 ಇದ್ದಿತ್ತು. ವೆಂಕಟ ಅವರ ಬಾಯಿಯಿಂದ ಸರಾಯಿ ಕುಡಿದ ವಾಸನೆ ಬರುತ್ತಿತ್ತು. ಸದರ ಘಟನೆ ಜರುಗಿದಾಗ ರಾತ್ರಿ ಅಂದಾಜು 8-30 ಗಂಟೆ ಸಮಯವಾಗಿರುತ್ತದೆ. ಕಾರ ಚಾಲಕ ತನ್ನ ಕಾರ ಸಮೇತ ಹೋಗಿರುತ್ತಾನೆ ನಿಮ್ಮ ತಂದೆಯ ಉಪಚಾರ ಕುರಿತು ಒಂದು ಆಟೋರಿಕ್ಷಾ ವಾಹನದಲ್ಲಿ ಕೂಡಿಸಿಕೊಂಡು ಖಾಸಗಿ ಧನ್ವಂತರಿ ಆಸ್ಪತ್ರೆಗೆ ಕರೆದುಕೊಂಡು ಬಂದು ಸೇರಿಕೆ ಮಾಡಿರುತ್ತೇವೆ. ಅಂತಾ ತಿಳಿಸಿದ್ದರಿಂದ ನಾನು ಮತ್ತು ನನ್ನ ತಾಯಿ ಅನೀತಾ ಇಬ್ಬರೂ ಧನ್ವಂತರಿ ಆಸ್ಪತ್ರೆಗೆ ಬಂದು ನನ್ನ ತಂದೆ ವೆಂಕಟ ಇವರಿಗೆ ನೋಡಲು ಅವರು ಬೇಹೂಸ ಇದ್ದರು. ನಾಗರಾಜ ಇವರಿಗೆ ವಿಚಾರಿಸಲು ಕಾರ ಚಾಲಕ ಮತ್ತು ನಿಮ್ಮ ತಂದೆ ವೆಂಕಟ ಇಬ್ಬರೂ ತಮ್ಮ ವಾಹನಗಳನ್ನು ಅತಿವೇಗವಾಗಿ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಒಂದಕ್ಕೊಂದು ವಾಹಗಳನ್ನು ಡಿಕ್ಕಿಪಡಿಸಿಕೊಂಡು ಅಪಘಾತ ಮಾಡಿ ನನ್ನ ತಂದೆ ವೆಂಕಟ ಇವರು ಭಾರಿಗಾಯ ಹೊಂದಿದ್ದು ಇಬ್ಬರ ತಪ್ಪಿನಿಂದ ಅಪಘಾತ ಸಂಬಂವಿಸಿದ್ದು ಕಾರಣ ಕಾರ ನಂಬರ ಕೆಎ-32/ಪಿ-8612 ನೇದ್ದರ ಚಾಲಕ ಮತ್ತು ನನ್ನ ತಂದೆ ವೆಂಕಟ ಇಬ್ಬರ ತಪ್ಪಿನಿಂದ ಅಪಘಾತ ಸಂಬವಿಸಿದ್ದು ಇಬ್ಬರ ಮೇಲೆ ಕಾನೂನು ಕ್ರಮ ಜರುಗಿಸಬೇಕು ಅಂತಾ ಫಿರ್ಯಾದಿ ಕೊಟ್ಟ ಹೇಳಿಕೆ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

Last Updated: 01-12-2022 01:01 PM Updated By: ADMIN


Disclaimer :

Please note that this page also provides links to the websites / web pages of Govt. Ministries/Departments/Organisations.The content of these websites are owned by the respective organisations and they may be contacted for any further information or suggestion

Website Policies

 • Copyright Policy
 • Hyperlinking Policy
 • Security Policy
 • Terms & Conditions
 • Privacy Policy
 • Help
 • Screen Reader Access
 • Guidelines

Visitors

 • Last Updated​ :
 • Visitors Counter :
 • Version :
CONTENT OWNED AND MAINTAINED BY : Kalaburagi City Police
Designed, Developed and Hosted by: Center for e-Governance - Web Portal, Government of Karnataka © 2024, All Rights Reserved.

Best viewed in Chrome v-87.0.4280.141, Microsoft Edge v-87.0.664.75, Firefox -v-83.0 Browsers. Resolution : 1280x800 to 1920x1080