ಅಭಿಪ್ರಾಯ / ಸಲಹೆಗಳು

ಮಹಿಳಾ ಪೊಲೀಸ್ ಠಾಣೆ :-  ದಿನಾಂಕ ೧೧.೧೦.೨೦೨೧ ರಂದು ಬೆಳಿಗ್ಗೆ ೧೧ ಗಂಟೆಗೆ ಫರ‍್ಯಾದಿ ಶ್ರೀಮತಿ ಡಾ|| ಪ್ರಿಯಾ ಗಂಡ ಶಶಿಕಾಂತ ವಾಲಿ ವಯಾ|| ೩೩ ಜಾ|| ಲಿಂಗಾಯತ ಸಾ|| ಗುಬ್ಬಿ ಕಾಲೋನಿ ಕಲಬುರಗಿ ಇವರು ಠಾಣೆಗೆ ಹಾಜರಾಗಿ ದೂರು ಸಲ್ಲಿಸಿದ್ದು, ಸದರಿ ಅರ್ಜಿ ಅರ್ಜಿ ಸಾರಾಂಶ ಏನೆಂದರೆ, ದಿನಾಂಕ ೩೦.೦೫.೨೦೧೯ ರಂದು ಡಾ|| ಶಶಿಕಾಂತ ವಾಲಿ ಇವರೊಂದಿಗೆ ನನ್ನ ಮದುವೆಯನ್ನು ನನ್ನ ತಂದೆತಾಯಿಯವರು ೨೦ ತೊಲೆ ಬಂಗಾರ. ಬೆಳ್ಳಿ ಮತ್ತು ಇತರೆ ಸಾಮಾನುಗಳು ಅಂತಾ ಸುಮಾರು ೩೫ ಲಕ್ಷ ರೂಪಾಯಿ ಖರ್ಚು ಮಾಡಿ ಮದುವೆ ಮಾಡಿಕೊಟ್ಟಿರುತ್ತಾರೆ.  ಮದುವೆಯಾದ ನಂತರ ನಾನು ಮತ್ತು ನನ್ನ ಗಂಡ ಯಾದಗಿರಿಯಲ್ಲಿ ಮನೆ ಮಾಡಿಕೊಂಡು ಇದ್ದೆವು, ಅಲ್ಲಿ ೧೫ ದಿವಸಗಳ ಕಾಲ ನನ್ನ ಜೊತೆ ಸರಿಯಾಗಿ ಇದ್ದು, ನಂತರ ಕುಡಿದು ಮನೆಗೆ ಬರಲು ಪ್ರಾರಂಭಿಸಿದರು. ಈ ಬಗ್ಗೆ ನಾನು ಕೇಳಿದರೆ ಅವರು ನನಗೆ ಅವಾಚ್ಯ ಶಬ್ದಗಳಿಂದ ಬೈದು, ಹೊಡೆದರು. ಈ ವಿಷಯ ನನ್ನ ಅತ್ತೆ ಮಾವ ಇವರಿಗೆ ತಿಳಿಸಿದಾಗ ಅವರು ನೀನು ಅವನು ಹೇಳಿದಂತೆ ಕೇಳು ಇಲ್ಲವಾದರೆ ನಿನಗೆ ಮುಂದೆ ತೊಂದರೆ ಆಗುತ್ತದೆ ಅಂತಾ ಅಂದರು. ನನ್ನ ಅತ್ತೆ ಶಾಂತಾಬಾಯಿ, ಮಾವ ಹಾಗೂ ನನ್ನ ಅತ್ತೆಯ ತಮ್ಮ ಬಾಬುರಾವ್ ಇವರು ಯಾದಗಿರಿಗೆ ಬಂದಾಗ ನನ್ನ ಗಂಡನಿಗೆ ನಿನ್ನ ಹೆಂಡತಿಗೆ ತವರು ಮನೆಯಿಂದ ಹಣ ತರಲು ಹೇಳು, ಅವಳು ಹಣ ತರುವವರೆಗೆ ನೀನು ಅವಳ ಜೊತೆ ಮಾತಾಡಬೇಡ ಅಂತಾ ಹೇಳಿಕೊಟ್ಟಿದ್ದು ನಾನು ಕೇಳಿಸಿಕೊಂಡಿರುತ್ತೇನೆ. ಒಂದು ದಿವಸ ನನ್ನ ಗಂಡ ನನಗೆ ಆಸ್ಪತ್ರೆ ಕಟ್ಟಿಸಲು ಹಣ ತೆಗೆದುಕೊಂಡು ಬಾ ಅಂತ ಅವಾಚ್ಯ ಶಬ್ದಗಳಿಂದ ಬೈದು, ಹೊಡೆಬಡೆ ಮಾಡಿರುತ್ತಾರೆ.  ನನ್ನ ಗಂಡನ ಕಿರುಕುಳ ತಾಳಲಾರದೇ ನಾನು ಆಗಾಗ ಕಲಬುರಗಿಯಲ್ಲಿ ಇರುವ ನನ್ನ ತವರು ಮನೆಗೆ ಬರುತ್ತಿದ್ದೆ. ದಿನಾಂಕ ೦೯.೦೨.೨೦೨೦ ರಂದು ಸಾಯಂಕಾಲ ೭ ಗಂಟೆಗೆ ನನ್ನ ಗಂಡ ನನ್ನ ತವರು ಮನೆಗೆ ಕುಡಿದು ಬಂದು ನನ್ನ ತಾಯಿಗೆ ಹಾಗೂ ನನಗೆ ಬೈದು ಅಸಹ್ಯವಾಗಿ ವರ್ತನೆ ಮಾಡಿರುತ್ತಾರೆ. ಅಲ್ಲದೆ, ದಿನಾಂಕ ೧೧.೦೨.೨೦೨೦ ರಂದು ಬೆಳಿಗ್ಗೆ ೧೧.೨೦ ಗಂಟೆಗೆ ನಾನು ಕೆಲಸ ಮಾಡುವ ಆಸ್ಪತ್ರೆಗೆ ಬಂದು ನನಗೆ ಅವಾಚ್ಯವಾಗಿ ಬೈದು ನನ್ನ ಗಂಡ ನನಗೆ ಚಪ್ಪಲಿಯಿಂದ ಹೊಡೆದಿರುತ್ತಾರೆ. ಈಗ ನನ್ನ ಗಂಡ ಕುಡಿದು ಮಧ್ಯರಾತ್ರಿ ನನಗೆ ಫೋನ್ ಮಾಡಿ ಬೈಯ್ಯುತ್ತಾರೆ. ನಮ್ಮ ಆಸ್ಪತ್ರೆ ಸಿಬ್ಬಂದಿಗೆ ಕೂಡಾ ಅವರು ಪೋನ್ ಮಾಡಿ ಅವಾಚ್ಯ ಶಬ್ದಗಳಿಂದ ಬೈಯ್ಯುತ್ತಾರೆ. ನನ್ನ ಮಾವ ತೀರಿಕೊಂಡ ವಿಷಯ ನನಗೆ ಈಗ ತಿಳಿದುಬಂದಿರುತ್ತದೆ. ಕಾರಣ ನನಗೆ ಮಾನಸಿಕ ಮತ್ತು ದೈಹಿಕ ಕಿರುಕುಳ ನೀಡಿದ ನನ್ನ ಗಂಡ ಹಾಗೂ ಅತ್ತೆ ಹಾಗೂ ನನ್ನ ಗಂಡನ ಸೋದರ ಮಾವ ಬಾಬುರಾವ್ ಇವರಿಗೆ ತಕ್ಕ ಶಿಕ್ಷೆಯನ್ನು ಕೊಡಬೇಕು ಅಂತಾ ವಗೈರೆ ಅರ್ಜಿ ಸಾರಾಂಶ ಇದ್ದು, ಸದರಿ ಅರ್ಜಿ ಸ್ವೀಕರಿಸಿಕೊಂಡು ಎದುರುದಾರರಾದ ಅವರ ಗಂಡ ಡಾ|| ಶಶಿಕಾಂತ ವಾಲಿ, ಅತ್ತೆ ಶಾಂತಾಬಾಯಿ ವಾಲಿ ಮತ್ತು ಗಂಡನ ಸೋದರ ಮಾವ ಬಾಬುರಾವ ಶೇಡದಾಳ ಇವರಿಗೆ ಆಪ್ತಸಮಾಲೋಚನೆ ಕುರಿತು ಸಂರ್ಕಿಸಿದ್ದು, ಆದರೆ ಸದರಿಯವರು ಯಾವುದೇ ರೀತಿಯಲ್ಲಿ ಸ್ಪಂದಿಸಿರುವದಿಲ್ಲಾ. ಕಾರಣ ಫರ‍್ಯಾದಿ ಡಾ|| ಪ್ರಿಯಾ ಇವರು ಇಂದು ದಿನಾಂಕ ೨೭.೧೧.೨೦೨೧ ರಂದು ಮಧ್ಯಾಹ್ನ ೧೨ ಗಂಟೆಗೆ ಠಾಣೆಗೆ ಹಾಜರಾಗಿ ಸದರಿಯವರ ವಿರುದ್ಧ ಕಾನೂನು ಕ್ರಮ ಕೈಕೊಳ್ಳಬೇಕು ಅಂತಾ ಕೋರಿಕೊಂಡ ಮೇರೆಗೆ ಸದರಿ ಅರ್ಜಿ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

ಇತ್ತೀಚಿನ ನವೀಕರಣ​ : 14-12-2021 11:13 AM ಅನುಮೋದಕರು: ADMIN


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕಲಬುರಗಿ ನಗರ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080