Feedback / Suggestions

ಮಹಿಳಾ ಪೊಲೀಸ್ ಠಾಣೆ :-  ದಿನಾಂಕ ೧೧.೧೦.೨೦೨೧ ರಂದು ಬೆಳಿಗ್ಗೆ ೧೧ ಗಂಟೆಗೆ ಫರ‍್ಯಾದಿ ಶ್ರೀಮತಿ ಡಾ|| ಪ್ರಿಯಾ ಗಂಡ ಶಶಿಕಾಂತ ವಾಲಿ ವಯಾ|| ೩೩ ಜಾ|| ಲಿಂಗಾಯತ ಸಾ|| ಗುಬ್ಬಿ ಕಾಲೋನಿ ಕಲಬುರಗಿ ಇವರು ಠಾಣೆಗೆ ಹಾಜರಾಗಿ ದೂರು ಸಲ್ಲಿಸಿದ್ದು, ಸದರಿ ಅರ್ಜಿ ಅರ್ಜಿ ಸಾರಾಂಶ ಏನೆಂದರೆ, ದಿನಾಂಕ ೩೦.೦೫.೨೦೧೯ ರಂದು ಡಾ|| ಶಶಿಕಾಂತ ವಾಲಿ ಇವರೊಂದಿಗೆ ನನ್ನ ಮದುವೆಯನ್ನು ನನ್ನ ತಂದೆತಾಯಿಯವರು ೨೦ ತೊಲೆ ಬಂಗಾರ. ಬೆಳ್ಳಿ ಮತ್ತು ಇತರೆ ಸಾಮಾನುಗಳು ಅಂತಾ ಸುಮಾರು ೩೫ ಲಕ್ಷ ರೂಪಾಯಿ ಖರ್ಚು ಮಾಡಿ ಮದುವೆ ಮಾಡಿಕೊಟ್ಟಿರುತ್ತಾರೆ.  ಮದುವೆಯಾದ ನಂತರ ನಾನು ಮತ್ತು ನನ್ನ ಗಂಡ ಯಾದಗಿರಿಯಲ್ಲಿ ಮನೆ ಮಾಡಿಕೊಂಡು ಇದ್ದೆವು, ಅಲ್ಲಿ ೧೫ ದಿವಸಗಳ ಕಾಲ ನನ್ನ ಜೊತೆ ಸರಿಯಾಗಿ ಇದ್ದು, ನಂತರ ಕುಡಿದು ಮನೆಗೆ ಬರಲು ಪ್ರಾರಂಭಿಸಿದರು. ಈ ಬಗ್ಗೆ ನಾನು ಕೇಳಿದರೆ ಅವರು ನನಗೆ ಅವಾಚ್ಯ ಶಬ್ದಗಳಿಂದ ಬೈದು, ಹೊಡೆದರು. ಈ ವಿಷಯ ನನ್ನ ಅತ್ತೆ ಮಾವ ಇವರಿಗೆ ತಿಳಿಸಿದಾಗ ಅವರು ನೀನು ಅವನು ಹೇಳಿದಂತೆ ಕೇಳು ಇಲ್ಲವಾದರೆ ನಿನಗೆ ಮುಂದೆ ತೊಂದರೆ ಆಗುತ್ತದೆ ಅಂತಾ ಅಂದರು. ನನ್ನ ಅತ್ತೆ ಶಾಂತಾಬಾಯಿ, ಮಾವ ಹಾಗೂ ನನ್ನ ಅತ್ತೆಯ ತಮ್ಮ ಬಾಬುರಾವ್ ಇವರು ಯಾದಗಿರಿಗೆ ಬಂದಾಗ ನನ್ನ ಗಂಡನಿಗೆ ನಿನ್ನ ಹೆಂಡತಿಗೆ ತವರು ಮನೆಯಿಂದ ಹಣ ತರಲು ಹೇಳು, ಅವಳು ಹಣ ತರುವವರೆಗೆ ನೀನು ಅವಳ ಜೊತೆ ಮಾತಾಡಬೇಡ ಅಂತಾ ಹೇಳಿಕೊಟ್ಟಿದ್ದು ನಾನು ಕೇಳಿಸಿಕೊಂಡಿರುತ್ತೇನೆ. ಒಂದು ದಿವಸ ನನ್ನ ಗಂಡ ನನಗೆ ಆಸ್ಪತ್ರೆ ಕಟ್ಟಿಸಲು ಹಣ ತೆಗೆದುಕೊಂಡು ಬಾ ಅಂತ ಅವಾಚ್ಯ ಶಬ್ದಗಳಿಂದ ಬೈದು, ಹೊಡೆಬಡೆ ಮಾಡಿರುತ್ತಾರೆ.  ನನ್ನ ಗಂಡನ ಕಿರುಕುಳ ತಾಳಲಾರದೇ ನಾನು ಆಗಾಗ ಕಲಬುರಗಿಯಲ್ಲಿ ಇರುವ ನನ್ನ ತವರು ಮನೆಗೆ ಬರುತ್ತಿದ್ದೆ. ದಿನಾಂಕ ೦೯.೦೨.೨೦೨೦ ರಂದು ಸಾಯಂಕಾಲ ೭ ಗಂಟೆಗೆ ನನ್ನ ಗಂಡ ನನ್ನ ತವರು ಮನೆಗೆ ಕುಡಿದು ಬಂದು ನನ್ನ ತಾಯಿಗೆ ಹಾಗೂ ನನಗೆ ಬೈದು ಅಸಹ್ಯವಾಗಿ ವರ್ತನೆ ಮಾಡಿರುತ್ತಾರೆ. ಅಲ್ಲದೆ, ದಿನಾಂಕ ೧೧.೦೨.೨೦೨೦ ರಂದು ಬೆಳಿಗ್ಗೆ ೧೧.೨೦ ಗಂಟೆಗೆ ನಾನು ಕೆಲಸ ಮಾಡುವ ಆಸ್ಪತ್ರೆಗೆ ಬಂದು ನನಗೆ ಅವಾಚ್ಯವಾಗಿ ಬೈದು ನನ್ನ ಗಂಡ ನನಗೆ ಚಪ್ಪಲಿಯಿಂದ ಹೊಡೆದಿರುತ್ತಾರೆ. ಈಗ ನನ್ನ ಗಂಡ ಕುಡಿದು ಮಧ್ಯರಾತ್ರಿ ನನಗೆ ಫೋನ್ ಮಾಡಿ ಬೈಯ್ಯುತ್ತಾರೆ. ನಮ್ಮ ಆಸ್ಪತ್ರೆ ಸಿಬ್ಬಂದಿಗೆ ಕೂಡಾ ಅವರು ಪೋನ್ ಮಾಡಿ ಅವಾಚ್ಯ ಶಬ್ದಗಳಿಂದ ಬೈಯ್ಯುತ್ತಾರೆ. ನನ್ನ ಮಾವ ತೀರಿಕೊಂಡ ವಿಷಯ ನನಗೆ ಈಗ ತಿಳಿದುಬಂದಿರುತ್ತದೆ. ಕಾರಣ ನನಗೆ ಮಾನಸಿಕ ಮತ್ತು ದೈಹಿಕ ಕಿರುಕುಳ ನೀಡಿದ ನನ್ನ ಗಂಡ ಹಾಗೂ ಅತ್ತೆ ಹಾಗೂ ನನ್ನ ಗಂಡನ ಸೋದರ ಮಾವ ಬಾಬುರಾವ್ ಇವರಿಗೆ ತಕ್ಕ ಶಿಕ್ಷೆಯನ್ನು ಕೊಡಬೇಕು ಅಂತಾ ವಗೈರೆ ಅರ್ಜಿ ಸಾರಾಂಶ ಇದ್ದು, ಸದರಿ ಅರ್ಜಿ ಸ್ವೀಕರಿಸಿಕೊಂಡು ಎದುರುದಾರರಾದ ಅವರ ಗಂಡ ಡಾ|| ಶಶಿಕಾಂತ ವಾಲಿ, ಅತ್ತೆ ಶಾಂತಾಬಾಯಿ ವಾಲಿ ಮತ್ತು ಗಂಡನ ಸೋದರ ಮಾವ ಬಾಬುರಾವ ಶೇಡದಾಳ ಇವರಿಗೆ ಆಪ್ತಸಮಾಲೋಚನೆ ಕುರಿತು ಸಂರ್ಕಿಸಿದ್ದು, ಆದರೆ ಸದರಿಯವರು ಯಾವುದೇ ರೀತಿಯಲ್ಲಿ ಸ್ಪಂದಿಸಿರುವದಿಲ್ಲಾ. ಕಾರಣ ಫರ‍್ಯಾದಿ ಡಾ|| ಪ್ರಿಯಾ ಇವರು ಇಂದು ದಿನಾಂಕ ೨೭.೧೧.೨೦೨೧ ರಂದು ಮಧ್ಯಾಹ್ನ ೧೨ ಗಂಟೆಗೆ ಠಾಣೆಗೆ ಹಾಜರಾಗಿ ಸದರಿಯವರ ವಿರುದ್ಧ ಕಾನೂನು ಕ್ರಮ ಕೈಕೊಳ್ಳಬೇಕು ಅಂತಾ ಕೋರಿಕೊಂಡ ಮೇರೆಗೆ ಸದರಿ ಅರ್ಜಿ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

Last Updated: 14-12-2021 11:13 AM Updated By: ADMIN


Disclaimer :

Please note that this page also provides links to the websites / web pages of Govt. Ministries/Departments/Organisations.The content of these websites are owned by the respective organisations and they may be contacted for any further information or suggestion

Website Policies

  • Copyright Policy
  • Hyperlinking Policy
  • Security Policy
  • Terms & Conditions
  • Privacy Policy
  • Help
  • Screen Reader Access
  • Guidelines

Visitors

  • Last Updated​ :
  • Visitors Counter :
  • Version :
CONTENT OWNED AND MAINTAINED BY : Kalaburagi City Police
Designed, Developed and Hosted by: Center for e-Governance - Web Portal, Government of Karnataka © 2022, All Rights Reserved.

Best viewed in Chrome v-87.0.4280.141, Microsoft Edge v-87.0.664.75, Firefox -v-83.0 Browsers. Resolution : 1280x800 to 1920x1080