ಅಭಿಪ್ರಾಯ / ಸಲಹೆಗಳು

ಸಂಚಾರಿ  ಪೊಲಿಸ್‌  ಠಾಣೆ -1 :- ದಿನಾಂಕ 27-10-2022 ರಂದು ಬೆಳಿಗ್ಗೆ ಕೂಲಿ ಕೆಲಸಕ್ಕೆ ಹೋಗಿ ಕೆಲಸ ಮುಗಿಸಿಕೊಂಡು ಸೇಡಂ ರಿಂಗ ರೋಡ ಹತ್ತೀರ ನನ್ನ ಕೆಲಸ ಇದ್ದ ಕಾರಣ ನಾನು ನನ್ನ ಮೋಟಾರ ಸೈಕಲ ನಂಬರ ಕೆಎ-32/ಎಕ್ಸ-9878 ನೇದ್ದರ ಮೇಲೆ ಹೋಗಿ ಕೆಲಸ ಮಗಿಸಿಕೊಂಡು ವಾಪಸ್ಸ ಮನೆಗೆ ಹೋಗುವ ಸಲುವಾಗಿ ನಾನು ಸೇಡಂ ರಿಂಗ ರೋಡದಿಂದ ಬುಲಂದ ಪರ್ವೆಜ ಕಾಲೋನಿ ಕಡೆಗೆ ಹೋಗುತ್ತೀರುವಾಗ ರಫೀಕ ಚೌಕ ಹತ್ತೀರ ರೋಡ ಮೇಲೆ ಸಾಯಂಕಾಲ ಅಂದಾಜು 6-20 ಗಂಟೆ ಸುಮಾರಿಗೆ ಟಾಟಾ ಎಲ್.ಪಿ.ಟಿ ಗೂಡ್ಸ ಟ್ರಕ ವಾಹನದ ಚಾಲಕ ಮಂಥರಾಜ ಇತನು ಮದ್ಯ ಸೇವನೆ ಮಾಡಿದ ಅಮಲಿನಲ್ಲಿ ಹಿಂದಿನಿಂದ ತನ್ನ ವಾಹನವನ್ನು ಅತಿವೇಗವಾಗಿ ಮತ್ತು ಅಕ್ಷತನದಿಂದ ಚಲಾಯಿಸಿಕೊಂಡು ಬಂದು ನನ್ನ ಮೋಟಾರ ಸೈಕಲಕ್ಕೆ ಡಿಕ್ಕಿಪಡಿಸಿ ಅಪಘಾತ ಮಾಡಿ ಹಾಗೆ ನನ್ನ ಪಕ್ಕದಲ್ಲಿ ಹೋಗುತ್ತಿದ್ದ ಮೋಟಾರ ಸೈಕಲ ನಂಬರ ಕೆಎ-32/ಇಎಮ್-3699 ನೇದ್ದರ ಸವಾರನಿಗೆ ಡಿಕ್ಕಿಪಡಿಸಿ ಅಪಘಾತ ಮಾಡಿ ನನಗೆ ಸದರ ಮೋಟಾರ ಸೈಕಲ ಸವಾರನಿಗೆ ಗಾಯಗೊಳಿಸಿದ್ದು ಆತನ ಮೇಲೆ ಕಾನೂನು ಕ್ರಮ ಜರುಗಿಸಬೇಕು ಅಂತಾ ಫಿರ್ಯಾದಿ ದೂರು ಹೇಳಿಕೆ ಸಾರಂಶ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

 

ಸಂಚಾರಿ  ಪೊಲಿಸ್‌  ಠಾಣೆ -2 :- ಫಿರ್ಯಾದಿ ಗಿರಿಶ ಇವರು ದಿನಾಂಕ 02/10/2022 ರಂದು ರಾತ್ರಿ 9:30 ಗಂಟೆ ಸುಮಾರಿಗೆ ಕಲಬುರಗಿ ನಗರದ ಆಳಂಚ ಚಕ ಪೋಸ್ಟದ ಉಡುಪಿ ಹೊಟೇಲದ ಹತ್ತೀರ ನಾಗನಹಳ್ಳಿ ಬೆಕರಿ ಎದುರುಗಡೆ ಹೋಗುವಾಗ ಒಂದುಯಾವುದೊ ಕಾರಿನ ಚಾಲಕನು ಭಾರಿ ಅತಿವೇಗದಿಂದ ಮತ್ತು ನಿಷ್ಕಾಳಜಿತನದಿಂದ ನಡೆಯಿಸಿಕೊಂಡು ಬಂದುಫಿರ್ಯಾದಿಯ ಬಲಗಾಲಿನ ಮೇಲೆ ಕಾರಿನ ಹಿಂದಿನ ಟೈರ ಹಾಯಿಸಿಕೊಂಡು ಹೋಗಿದ್ದರಿಂದ ಭಾರಿ ಪ್ರಮಾಣದ ಗಾಯವಾಗಿದ್ದು, ಈ ವಿಷಯದಲ್ಲಿ ಸರಕಾರಿ ಆಸ್ಪತ್ರೆ ಕಲಬುರಗಿಗೆ ಹೋಗಿ ಉಪಚಾರ ಪಡೆದುಕೊಂಡಿದ್ದು, ಕಾರ ಚಾಲಕನ ಮೇಲೆ ಕಾನೂನು ಪ್ರಕಾರ ಕ್ರಮ ಕೈಗೊಳ್ಳಬೇಕು ಅಂತಾ ಇತ್ಯಾದಿ ಕೊಟ್ಟ ಫಿರ್ಯಾದಿ ಸಾರಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

 

ಬ್ರಹ್ಮಪೂರ ಪೊಲೀಸ್‌ ಠಾಣೆ :- ನಾನು ಟೆಂಟ ಹೌಸ್ ಇಟ್ಟುಕೊಂಡು ತಂದೆಯವರೊಂದಿಗೆ ವಾಸವಾಗಿರುತ್ತೆನೆ. ಬ್ರಹ್ಮಪೂರ ಏರಿಯಾದ ನಿವಾಸಿಯಾಗಿರುವ ವಿರೇಶ ಸ್ವಾಮಿ ಎಂಬುವವನು ಸುಮಾರು ೧೦ ವರ್ಷಗಳಿಂದ ನನಗೆ ಪರಿಚಯದವನಾಗಿರುತ್ತಾನೆ. ನಾವಿಬ್ಬರೂ ಸ್ನೇಹಿತರಿರುತ್ತೇವೆ. ರಾಹುಲ ರೆಡ್ಡಿ ಎಂಬುವವನು ನನಗೂ ಮತ್ತು ವಿರೇಶನಿಗೆ ಪರಿಚಯದವನಿರುತ್ತಾನೆ. ವಿರೇಶ ಸ್ವಾಮಿ ಇತನು ಈಗ ಸುಮಾರು ಒಂದು ತಿಂಗಳ ಹಿಂದೆ ಶಾಂತಿನಗರ ಹುಡುಗರ ಜೊತೆ ಜಗಳ ಮಾಡಿಕೊಂಡಿದ್ದನು. ಈ ವಿಷಯವನ್ನು ನಾನು ನನ್ನ ಪರಿಚಯದವನಾದ ರಾಹುಲ ಇತನಿಗೆ ಪೋನ ಮಾಡಿ ಹೇಳಿದ್ದೆ. ನಿನ್ನೆ ದಿನಾಂಕ: ೨೭/೧೦/೨೦೨೨ ರಂದು ೧೧:೩೦ ಎಎಮ ಸುಮಾರಿಗೆ ವಿರೇಶ ಇತನು ನನಗೆ ಪೋನ ಮಾಡಿ ನಾನು ಶಾಂತಿನಗರ ಹುಡುಗರೊಂದಿಗೆ ಜಗಳ ಮಾಡಿರುವ ವಿಷಯ ನೀನು ರಾಹುಲ ರೆಡ್ಡಿ ಇತನಿಗೆ ಏಕೆ ಹೇಳಿರುವಿ ಮಗನೇ ನಿನಗೆ ನೋಡಿಕೊಳ್ಳುತ್ತೇನೆ. ಅಂತಾ ಹೆದರಿಸಿದ್ದನು.  ಹೀಗಿದ್ದೂ ಇಂದು ದಿನಾಂಕ: ೨೮/೧೦/೨೦೨೨ ರಂದು ಬೆಳಿಗ್ಗೆ ೧೦:೦೦ ಗಂಟೆಯ ಸುಮಾರಿಗೆ ನಾನು ಮತ್ತು ನನ್ನ ಸ್ನೇಹಿತರಾದ ಗಣೇಶ, ಶಂಕರ, ಕಿಶೋರ ಎಲ್ಲರೂ ಕೂಡಿಕೊಂಡು ಎನ್.ವಿ. ಕಾಲೇಜ ರೋಡಿಗೆ ಇರುವ ಸಿಮ್ಲಾ ಜ್ಯೂಸ್ ಸೆಂಟರ್‌ದಲ್ಲಿ ಜ್ಯೂಸ್ ಕುಡಿಯುತ್ತಾ ಕುಳಿತುಕೊಂಡಿದ್ದೆವು. ಅಂದಾಜು ೧೧:೦೦ ಗಂಟೆಯ ಸುಮಾರಿಗೆ ವಿರೇಶ ಸ್ವಾಮಿ ಮತ್ತು ಆತನ ಸಂಗಡಿಗರಾದ ಅಜಯ, ದಿನೇಶ ಇವರು ಸಿಮ್ಲಾ ಜ್ಯೂಸ್ ಅಂಗಡಿ ಹತ್ತಿರ ಬಂದು ನನಗೆ ಹೊರಗೆ ಕರೆದು ರಂಡಿ ಮಗನೇ ಸಚಿನಾ ನೀನು ನನ್ನ ವಿಷಯ ಎಲ್ಲರಿಗೆ ಏಕೆ ಹೇಳುತ್ತಿದ್ದೀಯಾ ಬೋಸುಡಿ ಮಗನೇ ಇವತ್ತು ನಿನಗೆ ಬಿಡುವದಿಲ್ಲಾ ಖಲಾಸ್ ಮಾಡಿಯೇ ಬಿಡುತ್ತೇನೆ. ಅಂತಾ ತನ್ನ ಹತ್ತಿರವಿದ್ದ ಚಾಕುವಿನಿಂದ ನನಗೆ ಹೊಡೆಯಲು ಪ್ರಯತ್ನಿಸಿದಾಗ ಅದರಿಂದ ನಾನು ತಪ್ಪಿಸಿಕೊಂಡಾಗ ಅವನ ಹತ್ತಿರವಿದ್ದ ಚಾಕು ಕೆಳಗೆ ಬಿದ್ದಿದ್ದು ಆಗ ಅವನು ಅಲ್ಲೇ ಇದ್ದ ಕಲ್ಲು ತೆಗೆದುಕೊಂಡು ನನ್ನ ತಲೆಯ ನಡು ಭಾಗದಲ್ಲಿ ಹೊಡೆದು ಬಾರಿ ರಕ್ತಗಾಯ ಪಡಿಸಿದನು. ಆಗ ನನ್ನ ಜೊತೆ ಇದ್ದ ಶಂಕರ, ಗಣೇಶ, ಕಿಶೋರ ಇವರು ಅವನಿಂದ ನನಗೆ ಬಿಡಿಸಿಕೊಂಡರು. ಆಗವನ ಜೊತೆಯಿದ್ದ ಅಜಯ ಮತ್ತು ದಿನೇಶ ಇವರು ಕೂಡ ನನಗೆ ರಂಡಿ ಮಗನೆ ಇವತ್ತು ಉಳಿದುಕೊಂಡಿದ್ದೀಯ ನಿನಗೆ ಒಂದಿಲ್ಲಾ ಒಂದು ದಿವಸ ಖಲಾಸ್ ಮಾಡಿಯೇ ಬಿಡುತ್ತೇವೆ ಅಂತಾ ಜೀವದ ಬೆದರಿಕೆ ಹಾಕಿರುತ್ತಾರೆ. ಆಗ ನನ್ನ ಸ್ನೇಹಿತರಾದ ಕಿಶೋರ, ಗಣೇಶ, ಶಂಕರ ಇವರು ನನಗೆ ಉಪಚಾರ ಕುರಿತು ದರ್ಶ ಆಸ್ಪತ್ರೆಗೆ ತಂದು ಸೇರಿಕೆ ಮಾಡಿರುತ್ತಾರೆ. ಕಾರಣ ವಿನಾ ಕಾರಣ  ನನ್ನೊಂದಿಗೆ ಜಗಳ ತೆಗೆದು ಅವಾಚ್ಯ ಶಬ್ದಗಳಿಂದ ಬೈಯ್ದು ಕಲ್ಲಿನಿಂದ ತಲೆಗೆ ಹೊಡೆದು ಭಾರಿ ರಕ್ತಗಾಯಪಡಿಸಿದ ವಿರೇಶ ಸ್ವಾಮಿ ಮತ್ತು ಆತನ ಸಂಗಡಿಗರಾದ ಅಜಯ ಮತ್ತು ದಿನೇಶ ಇವರ ಮೇಲೆ ಕಾನೂನು ಕ್ರಮ ಜರುಗಿಸಬೇಕು ಅಂತಾ ಕೊಟ್ಟ ಹೇಳಿಕೆ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

 

ಸಬ್‌ ಅರ್ಬನ್‌ ಪೊಲೀಸ್‌ ಠಾಣೆ :- ಫಿರ್ಯಾದಿಗೆ ದಿನಾಂಕ ೨೮/೧೦/೨೦೨೨ ರಂದು ೦೩:೩೦ ಸುಮಾರಿಗೆ ಮನೆಯಲ್ಲಿದ್ದಾಗ ಸದರಿ ಆರೋಪಿತನು ಫಿರ್ಯಾದಿಗೆ ಹಣದ ವಿಚಾರದಲ್ಲಿ ತಡೆದು ನಿಲ್ಲಿಸಿ ಅವಾಚ್ಯವಾಗಿ ಬ್ಶೆದು ಜೀವ ಭಯ ಹಾಕಿದ್ದಾರೆ ಎಂದು ಫಿರ್ಯಾದಿ ಕೊಟ್ಟ ಹೇಳಿಕೆ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

ಇತ್ತೀಚಿನ ನವೀಕರಣ​ : 14-11-2022 03:43 PM ಅನುಮೋದಕರು: ADMIN


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕಲಬುರಗಿ ನಗರ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080