ಅಭಿಪ್ರಾಯ / ಸಲಹೆಗಳು

ವಿಶ್ವವಿದ್ಯಾಲಯ ಪೊಲೀಸ ಠಾಣೆ  :- ಇಂದು ದಿನಾಂಕ: ೨೮-೧೦-೨೦೨೧ ರಂದು ಮುಂಜಾನೆ ೯:೦೦ ಗಂಟೆಗೆ ಫರ‍್ಯಾದಿ ಶ್ರೀ ಕೃಷ್ಣಾ ತಂದೆ ವಿಶ್ವನಾಥ ಪೂಜಾರಿ ಸಾ: ಫೀಲ್ಟರ ಬೇಡ್ ಶಾಹಬಜಾರ ಕಲಬುರಗಿ ಇವರು ಠಾಣೆಗೆ ಬಂದು ಕಂಪ್ಯೂಟರದಲ್ಲಿ ಟೈಪ್ ಮಾಡಿಸಿದ ದೂರು ಅರ್ಜಿ  ಹಾಜರ ಪಡಿಸಿದ್ದು, ಸದರಿ ದೂರಿನ ಸಾರಾಂಶ ಏನಂದರೆ, ನಾನು ಕೂಲಿ ಕೆಲಸ ಮಾಡಿಕೊಂಡು ತಾಯಿಯೊಂದಿಗೆ ವಾಸವಾಗಿರುತ್ತೇನೆ. ನಮ್ಮ ತಂದೆಯವರು ನಾವು ಸಣ್ಣವರಿರುವಾಗಲೆ ಮನೆ ಬಿಟ್ಟು ಹೋಗಿರುತ್ತಾರೆ. ನನ್ನ ತಮ್ಮ ಆಕಾಶನು ಓಂ ನಗರ ಹತ್ತಿರ ಇರುವ ಗ್ಯಾರೇಜದಲ್ಲಿ ಮೇಕ್ಯಾನಿಕ ಕೆಲಸ ಮಾಡಿಕೊಂಡಿರುತ್ತಾನೆ. ತಮ್ಮ ಆಕಾಶನಿಗೆ ಶ್ರೀನಿಧಿ ಶೇರಿಕಾರ ಸಾ: ಜಾಗೃತಿ ಕಾಲೋನಿ ಕಲಬುರಗಿ ಇವನು ಗೇಳೆಯನಿರುತ್ತಾನೆ. ನನ್ನ ತಮ್ಮನು ಆಗಾಗ ಅವನ ಮನೆಗೆ ಹೋಗಿ ಬರುವದು ಮಾಡುವದರಿಂದ ಶ್ರೀನಿಧಿ ತಂಗಿ ನಿಖೀತಾ ಶೇರಿಕಾರ ಇವಳು ನನ್ನ ತಮ್ಮನಿಗೆ ಪರಿಚಯವಾಗಿದ್ದರಿಂದ ಅವರಿಬ್ಬರು ಪ್ರೀತಿಸುತ್ತಿರುವ ವಿಷಯ ನಮಗೆ ಗೊತ್ತಿರುತ್ತದೆ. ಕಳೆದ ೧೦-೧೨ ದಿವಸಗಳ ಹಿಂದೆ ನಿಖೀತಾ ಶೇರಿಕಾರ ಇವಳು ಕಾಣೆಯಾಗಿರುತ್ತಾಳೆ ಅಂತಾ ನೀಖಿತ ಇವಳ ಮನೆಯವರು ಎಂ.ಬಿ ನಗರ ಪೊಲೀಸ್ ಠಾಣೆಯಲ್ಲಿ ಅರ್ಜಿ ನೀಡಿದ ವಿಷಯ ನಮಗೆ ಗೊತ್ತಾಗಿ  ನಾವು ನಮ್ಮ ತಮ್ಮನಿಗೆ ಬುದ್ದಿವಾದ ಹೇಳಿ ನಿಖೀತಾ ಇವಳಿಗೆ ಕರೆಯಿಸಿದ್ದೇವು ನಂತರ ನಾನು ಮತ್ತು ನನ್ನ ತಾಯಿ ಇಬ್ಬರು ಕೂಡಿ ಎಂ.ಬಿ ನಗರ ಪೊಲೀಸ್ ಠಾಣೆಗೆ ಒಪ್ಪಿಸಿರುತ್ತೇವೆ. ಅಂದಿನಿAದ ನೀಖಿತಾಳ ಅಣ್ಣ ಶ್ರೀನಿಧಿ ಶೇರಿಕಾರ ಇವನು ನಿಮ್ಮ ಅಣ್ಣ ಆಕಾಶನು ತಂಗಿಗೆ ಕರೆದುಕೊಂಡು ಹೋಗಿರುತ್ತಾನೆ ನಮ್ಮ ಮನೆಯ ಮರ್ಯಾದಿ ಹೋಗಿರುತ್ತದೆ ಅದಕ್ಕೆ ಅವನಿಗೆ ಮುಂದೆ ನಿನಗೆ ಒಂದು ಕೈ ನೋಡಿಕೊಳ್ಳುತ್ತೇನೆ ಅಂತಾ ನಮ್ಮ ಮುಂದೆ ಹೇಳಿ, ಅವನ ವಿರುದ್ದ ದ್ವೇಷ ಸಾದಿಸಿಕೊಂಡಿರುತ್ತಾನೆ. ನಿನ್ನೆ ದಿನಾಂಕ: ೨೭-೧೦-೨೦೨೧ ರಂದು ರಾತ್ರಿ ೧೦:೩೦ ಗಂಟೆ ಸುಮಾರಿಗೆ ನಮ್ಮ ಸಂಬAಧಿಕರಾದ ವಿಜಯಕುಮಾರ ತಂದೆ ಮಲ್ಲೇಶಿ ಪೂಜಾರಿ ಇವನು ಬಂದು ತಿಳಿಸಿದೆನಂದರೆ, ಸ್ವಾಮಿನಾರಾಯಣ ಶಾಲೆ ಕಡೆಗೆ ಹೋಗುವ ದಾರಿಯಲ್ಲಿ ನಿಮ್ಮ ತಮ್ಮ ಆಕಾಶ ಪೂಜಾರಿ ಇವನ ಕೊಲೆಯಾಗಿ ಬಿದ್ದಿರುತ್ತಾನೆ. ಅಂತಾ ಹೇಳಿದ ಕೂಡಲೇ ನಾನು ಮತ್ತು ನಮ್ಮ ತಾಯಿ ಶ್ರೀದೇವಿ ಪೂಜಾರಿ, ನಮ್ಮ ಮಾವ ಬಸವರಾಜ ತಂದೆ ಖಂಡಪ್ಪ ಪೂಜಾರಿ ಎಲ್ಲರೂ ನಮ್ಮ ತಮ್ಮ  ಕೊಲೆಯಾದ ಬಿದ್ದ ಸ್ಥಳಕ್ಕೆ ಬಂದು ಬ್ಯಾಟರಿ ಬೆಳಕಿನಲ್ಲಿ ನೋಡಲು ನಮ್ಮ ತಮ್ಮನು ಕೊಲೆಯಾಗಿ ಬಿದ್ದಿದ್ದನು. ಅವನ ಕುತ್ತಿಗೆ ಹತ್ತಿರ, ಎದೆಯ ಹತ್ತಿರ, ಬೆನ್ನ ಮೇಲೆ, ತೊಡೆಯ ಹತ್ತಿರ ಹರಿತವಾದ  ಚಾಕುವಿನಿಂದ ಚುಚ್ಚಿದ ಗಾಯಾಗಳಾಗಿದ್ದವು. ರಾತ್ರಿಯೆ ನಮ್ಮ ತಮ್ಮನ ಶವವು ಜಿಲ್ಲಾ ಸರಕಾರಿ ಆಸ್ಪತ್ರೆ ಶವಗಾರ ಕೋಣೆಯಲ್ಲಿ ಹಾಕಿರುತ್ತೇವೆ.  ನನ್ನ ತಮ್ಮ ಆಕಾಶನು ನೀಖಿತಾ ಶೇರಿಕಾರ ಸಾ: ಜಾಗೃತಿ ಕಾಲೋನಿ ಕಲಬುರಗಿ ಇವಳ ಸಂಗಡ ಪ್ರೀತಿ ಮಾಡಿ ಅವಳಿಗೆ ಅವರ ಮನೆಯಿಂದ ಕರೆದುಕೊಂಡು ಹೋಗಿದ್ದು, ನಂತರ ನಾವು ಅವರಿಗೆ ಕರೆಯಿಸಿ ಅವರಿಗೆ ಒಪ್ಪಿಸಿದ ವಿಷಯದಲ್ಲಿ ಶ್ರೀನಿಧಿ ತಂದೆ ಚಂದ್ರಕಾAತ ಶೇರಿಕಾರ, ನೀಖಿಲ ತಂದೆ ಚಂದ್ರಕಾAತ ಶೇರಿಕಾರ ಸಾ: ಜಾಗೃತಿ ಕಾಲೋನಿ ಕಲಬುರಗಿ ಇವರು ನಮ್ಮ ತಮ್ಮನ ಮೇಲೆ ದ್ವೇಷ ಸಾದಿಸಿಕೊಂಡು ಬಂದಿದ್ದು, ನಮ್ಮ ತಮ್ಮನಿಗೆ ಕೊಲೆ ಮಾಡುವ  ಉದ್ದೇಶದಿಂದ ಶ್ರೀನಿಧಿ ಶೇರಿಕಾರ, ನಿಖೀಲ ಶೇರಿಕಾರ ಹಾಗು ಇತರರು ಕೂಡಿಕೊಂಡು ಸೇಡಂ ರೋಡಿಗೆ ಇರುವ ಸ್ವಾಮಿನಾರಾಯಣ ಶಾಲೆ ಕಡೆಗೆ ಹೋಗುವ ರಸ್ತೆಯಲ್ಲಿ ಕರೆದುಕೊಂಡು ಹೋಗಿ, ಹರಿತವಾದ ಚಾಕುವಿನಿಂದ ತಮ್ಮನಿಗೆ ಚುಚ್ಚಿ ಕೊಲೆ ಮಾಡಿದ್ದು ಇರುತ್ತದೆ. ಸದರಿ ಘಟನೆಯು ನಿನ್ನೆ ದಿನಾಂಕ: ೨೭-೧೦-೨೦೨೧ ರಂದು ರಾತ್ರಿ ೭:೩೦ ಗಂಟೆಯಿAದ ೮:೩೦ ಗಂಟೆಯ ಅವದಿಯಲ್ಲಿ ಜರುಗಿರಬಹುದು. ನಮ್ಮ ತಾಯಿಯು ಹುಷಾರ ಇಲ್ಲದ ಕಾರಣ ಇಂದು ದಿನಾಂಕ: ೨೮-೧೦-೨೦೨೧ ರಂದು ಮುಂಜಾನೆ ನಾನೇ ಠಾಣೆಗೆ ಬಂದು ದೂರು ಅರ್ಜಿ ನೀಡಿರುತ್ತೇನೆ. ಕಾರಣ ಮೇಲೆ ನಮೂದಿಸಿದ ಶ್ರೀನಿಧಿ ತಂದೆ ಚಂದ್ರಕಾAತ ಶೇರಿಕಾರ, ನಿಖೀಲ ತಂದೆ ಚಂದ್ರಕಾAತ ಶೇರಿಕಾರ ಸಾ: ಜಾಗೃತಿ ಕಾಲೋನಿ ಕಲಬುರಗಿ ಹಾಗು ಇತರರು ಕೂಡಿ ನಮ್ಮ ತಮ್ಮ ಆಕಾಶನಿಗೆ ಕೊಲೆ ಮಾಡಿರುತ್ತಾರೆ. ಅವರ ಮೇಲೆ ಕಾನೂನು ಕ್ರಮ ಕೈಗೊಳ್ಳಲು ವಿನಂತಿ. ಅಂತಾ ಇತ್ಯಾದಿ ದೂರಿನ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.  

ಇತ್ತೀಚಿನ ನವೀಕರಣ​ : 02-11-2021 12:31 PM ಅನುಮೋದಕರು: ADMIN


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕಲಬುರಗಿ ನಗರ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080