ಅಭಿಪ್ರಾಯ / ಸಲಹೆಗಳು

ಸಂಚಾರಿ ಪೊಲೀಸ ಠಾಣೆ -2 :-  ದಿನಾಂಕ 28/09/2022 ರಂದು 11:30 AM  ಕ್ಕೆ ಶ್ರೀಮತಿ. ಮಹಾದೇವಿ ಗಂಡ ಶರಣಪ್ಪಾ ಕುರಕೋಟಿ ವಯಃ 38 ವರ್ಷ ಜಾತಿಃ ಲಿಂಗಾಯತ ಉಃ ಅಡುಗೆ ಮಾಡುವ ಕೆಲಸ ಮುಕ್ಕಾಂ : ದುಬೈ ಕಾಲೋನಿ ಕಲಬುರಗಿ ಇವರು ಠಾಣೆಗೆ ಹಾಜರಾಗಿ ಒಂದು ಕನ್ನಡದಲ್ಲಿ ಟೈಪ ಮಾಡಿದ ಫಿರ್ಯಾಧಿ ಅರ್ಜಿ ನೀಡಿದ್ದು ಸಾರಂಶವೆನೆಂದರೆ,   ದಿನಾಂಕ 21/09/2022 ರಂದು ನನ್ನ ಗಂಡನವರು ಅಡುಗೆ ಕೆಲಸವಿರುತ್ತದೆಂದು ಬೆಳಗಿನ ಜಾವವೆ ಆಳಂದ ಚಕ್ ಪೋಸ್ಟ ಕಡೆಗೆ ಹೋಗಿದ್ದು, ರಾತ್ರಿಯಾದರು ಮನೆಗೆ ಬರಲಿಲ್ಲಾ. ಅವರಿಗೆ ಫೋನ್ ಮಾಡಲಾಗಿ ಫೋನ್ ಹತ್ತಲಿಲ್ಲಾ. ದಿನಾಂಕ 22/09/2022 ರಂದು ಬೆಳಿಗ್ಗೆ ನಮ್ಮ ಪರಿಚಯದ ಚಂದ್ರು ತಂದೆ ನಾಗಣ್ಣ ಸುಲ್ತಾನಪೂರ ಇವರು ಮನೆಯ ಹತ್ತಿರ ಬಂದು ನಿನ್ನೆ ದಿನಾಂಕ 21/09/2022 ರಂದು ರಾತ್ರಿ 10:20 ಗಂಟೆ ಸುಮಾರಿಗೆ ನಾನು ಮತ್ತು ಶರಣಬಸಪ್ಪಾ ಕಣ್ಣಿ ಇಬ್ಬರೂ ಅಲ್ಲಿಂದ ಬರುವಾಗ ನಿಮ್ಮ ಗಂಡ ಶರಣಪ್ಪಾ ಕುರಕೋಟಿ ಇವರು ಆಳಂದ ಚಕ್ ಪೋಸ್ಟ ಕಡೆಯಿಂದ ನಡೆದುಕೊಂಡು ವಿಜಯನಗರ ಕಾಲೋನಿಯ ಕ್ರಾಸಿನ ಹತ್ತೀರ ತಿರುವಿನಲ್ಲಿ ಬರುವಾಗ ಹಿಂದುಗಡೆಯಿಂದ ಒಂದು ಫಾರ್ಚುನರ ಕಾರ ನಂ. ಕೆಎ 70 ಎಮ್ 6999 ನೇದ್ದರ ಚಾಲಕನು ವೇಗವಾಗಿ ಮತ್ತು ಅಲಕ್ಷತನದಿಂದ ಒಮ್ಮೇಗೆ ಎಡಕ್ಕೆ ತಿರುಗಿಸಿಕೊಂಡಿದ್ದಕ್ಕೆ ನಿಮ್ಮ ಗಂಡ ಶರಣಪ್ಪಾ ಕುರಕೋಟಿ ಇವರಿಗೆ ಭಾರಿಗಾಯಗಳಾಗಿ ಅಲ್ಲಿಯೇ ಬಿದ್ದಿದ್ದು, ನಿಮ್ಮ ಮನೆ ಗೊತ್ತಾಗದಕ್ಕೆ ಈಗ ಬೆಳಿಗ್ಗೆ ಹುಡುಕಿಕೊಂಡು ಬಂದಿರುತ್ತೆನೆ. ಅವರಿಗೆ 108 ಅಂಬುಲೇನ್ಸದಲ್ಲಿ ಸರಕಾರಿ ಆಸ್ಪತ್ರೆ ಕಲಬುರಗಿ ಕಡೆಗೆ ರಾತ್ರಿಯೆ ತೆಗೆದುಕೊಂಡು ಹೋಗಿರುತ್ತಾರೆ ಅಂತಾ ತಿಳಿಸಿದಕ್ಕೆ, ಗಾಬರಿಗೊಂಡು ನಾನು ಮತ್ತು ನನ್ನ ಮಗ ಭಾಗೇಶ ಇಬ್ಬರೂ ಕೂಡಿ ಆಸ್ಪತ್ರೆಗೆ ಹೋಗಿ ಗಂಡನವರಿಗೆ ನೋಡಲಾಗಿ ತಲೆಯ ಭಾಗಕ್ಕೆ, ಹೆಡಕಿನ ಭಾಗಕ್ಕೆ ಭಾರಿಪ್ರಮಾಣದ ಗಾಯವಾಗಿ ಹೆಡಕಿನ ಎಲಬು ಮುರದಿದ್ದು & ಬೆನ್ನಿಗೆ ಕೂಡಾ ಭಾರಿಗಾಯ, ಬಲ ಎದೆಗೆ ಮತ್ತು ಬಲಕೈಗೆ ರಕ್ತಗಾಯಗಳಾಗಿದ್ದು ಹಾಗು ಎರಡು ಕಾಲುಗಳಿಗೆ ಅಲ್ಲಲ್ಲಿ ಗಾಯಗಳಾಗಿದ್ದು, ಮಾತನಾಡಿಸಿದರೆ ಮಾತನಾಡಲಿಲ್ಲಾ ಎರಡು ದಿನಗಳ ವರೆಗೆ ಅಲ್ಲಿಯೇ ಆಸ್ಪತ್ರೆಯಲ್ಲಿ ನೋಡಿದೆವು. ಅವರ ಪರಸ್ಧಿತಿಯು ಚಿಂತಾಜನಕವಾಗಿರುವುದರಿಂದ ಅವರಿಗೆ ಹೆಚ್ಚಿನ ಉಪಚಾರ ಕುರಿತು ದಿನಾಂಕ 24/09/2022 ರಂದು ಯುನೈಟೆಡ ಆಸ್ಪತ್ರೆಗೆ ಗಂಡನವರಿಗೆ ಸೇರಿಕೆ ಮಾಡಿರುತ್ತೆವೆ. ನನ್ನ ಗಂಡನವರು ಬಹಳಷ್ಟು ಸಿರಿಯಸ್ ಇರುವುದರಿಂದ & ಕೇಸು ಮಾಡುವ ಬಗ್ಗೆ ನಮಗೆ ಗೊತ್ತಾಗದಕ್ಕೆ ಈಗ ವಿಚಾರಣೆ ಮಾಡಿಕೊಂಡು ಎಲ್ಲಾ ವಿಷಯವನ್ನು ಸರಿಯಾಗಿ ತಿಳಿದುಕೊಂಡು ತಡಮಾಡಿ ಬಂದಿದ್ದು, ಅಪಘಾತ ಪಡಿಸಿದ ಫಾರ್ಚುನರ ಕಾರ ನಂ. ಕೆಎ 70 ಎಮ್ 6999 ಕಾರನ್ನು & ಚಾಲಕನನ್ನು  ಪತ್ತೆ ಮಾಡಿ ಆತನ ವಿರುದ್ಧ ಕಾನೂನು ಪ್ರಕಾರ ಕ್ರಮ ಕೈಗೊಳ್ಳಬೇಕು ಅಂತಾ ಕೊಟ್ಟ ಫಿರ್ಯಾಧಿ ಅರ್ಜಿ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

 

ಬ್ರಹ್ಮಪೂರ ಪೊಲೀಸ ಠಾಣೆ ;-  ದಿನಾಂಕ: 28-09-2022  ರಂದು ಮದ್ಯಾಹ್ನ ೦೧:೦೦ ಎ.ಎಮ್ ಕ್ಕೆ   ಫಿರ್ಯಾದಿದಾರರಾದ ಶ್ರೀ ಮಹಾದೇವಪ್ಪ ತಂದೆ ಶಿವಲಿಂಗಪ್ಪ ಹರನಾಕ ವಯ:೪೫ವರ್ಷ ಜಾ:ತಳವಾರ ಉ:ಖಾಸಗಿ ಕೆಲಸ ಸಾ//ಕಲ್ಲೂರ ಕೆ ಗ್ರಾಮ ತಾ:ಜೇವರಗಿ ಜಿ:ಕಲಬುರಗಿ. ನನ್ನದೊಂದು ಸ್ವಂತ ಹಿರೋ ಸ್ಪ್ಲೇಂಡರ್‌  ಪ್ಲಸ್ ಮೋಟಾರ್ ಸೈಕಲ್ ನಂ ಏಂ-೩೨-ಇಖಿ-೫೩೮೧ ನೇದ್ದು ಇದ್ದು ಸದರಿ ಮೋಟಾರ್ ಸೈಕಲ್‌ವು ನನ್ನ ಹೆಸರಿನಲ್ಲಿರುತ್ತದೆ. ಸದರಿ ಮೋಟಾರ್ ಸೈಕಲವು ದಿನಾಂಕ: ೨೭/೦೯/೨೦೨೨ ರಂದು ಸಾಯಂಕಾಲ ೦೫:೨೦ ಪಿ.ಎಮ್ ಗಂಟೆಗೆ ಕಲಬುರಗಿ ನಗರದ ಜಿಲ್ಲಾ ಸರ್ಕಾರಿ ಆಸ್ಪತ್ರೆಯ ಹತ್ತಿರ ಇರುವ ಎಸ್.ಬಿ.ಐ ಎಟಿಎಮ್ ಪಕ್ಕದಲ್ಲಿ ನಿಲ್ಲಿಸಿ ಆಸ್ಪತ್ರೆಯ ಒಳಗಡೆ ಹೋಗಿ ನಮ್ಮ ಸಂಬಂದಿಕರನ್ನು ಮಾತನಾಡಿಸಿಕೊಂಡು ಮರಳಿ ಅದೆ ದಿನ ಸಾಯಂಕಾಲ ೦೫:೪೫ ಪಿಎಮ್ ಗಂಟೆಗೆ ಬಂದು ನಾನು ನಿಲ್ಲಿಸಿದ ಸ್ಥಳದಲ್ಲಿ ಮೋಟಾರ್ ಸೈಕಲ್ ನೋಡಲಾಗಿ ನನ್ನ ಮೋಟಾರ್ ಸೈಕಲ್ ಇರಲಿಲ್ಲಾ, ಮೋಟಾರ್ ಸೈಕಲ್ ಪತ್ತೆ ಕುರಿತು ಎಲ್ಲಾ ಕಡೆ ಹುಡುಕಾಡಿದರೂ ಮೋಟಾರ್ ಸೈಕಲ್ ಸಿಕ್ಕಿರುವುದಿಲ್ಲಾ ಆದರಿಂದ ಠಾಣೆಗೆ ಬಂದು ಅರ್ಜಿ ಕೊಡಲು ತಡವಾಗಿರುತ್ತದೆ. ಕಾರಣ ಕಳುವಾದ ನನ್ನ ಮೋಟಾರ್ ಸೈಕಲನ್ನು ಪತ್ತೆ ಹಚ್ಚಿ ಸೂಕ್ತ ಕಾನೂನು ಕ್ರಮ ಕೈಕೊಳ್ಳಬೇಕು ಅಂತಾ ಕೊಟ್ಟ ದೂರು ಅರ್ಜಿಯ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

 

ಸಬ್‌ ಅರ್ಬನ್‌ ಪೊಲೀಸ್‌ ಠಾಣೆ :- ದಿನಾಂಕಃ-27-09-2022  ಫಿರ್ಯಾದಿ  ಠಾಣೆಗೆ ಹಾಜರಾಗಿ ನೀಡಿದ ಫಿರ್ಯಾದಿಯೇನೆಂದರೆ ಫಿರ್ಯಾದಿಯ ಮನೆಗೆ ಬಂದು ಸದರಿ ಆರೋಪಿತರು ದಿನಾಂಕಃ-೨೮/೦೯/೨೦೨೨ ರಂದು ೦೦:೩೦ ಗಂಟೆಗೆ ಸುಮಾರಿಗೆ ಫಿರ್ಯಾದಿಯ ಮನೆಯ ಕಿಟಕಿ ಬಾಗಿಲು ಮುರಿದು  ಜೀವ ಬೆದರಿಕೆ ಹಾಕಿ ಹೊಗಿದ್ದಾರೆ ಎಂದು ಫಿರ್ಯಾದಿ ಕೊಟ್ಟ ಹೇಳಿಕೆ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

ಇತ್ತೀಚಿನ ನವೀಕರಣ​ : 13-10-2022 01:57 PM ಅನುಮೋದಕರು: ADMIN


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕಲಬುರಗಿ ನಗರ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080