ಅಭಿಪ್ರಾಯ / ಸಲಹೆಗಳು

ಸಂಚಾರಿ ಪೊಲೀಸ್ ಠಾಣೆ-೨  :- ಇಂದು ಮಾನ್ಯರವರಲ್ಲಿ ಅರಿಕೆ ಮಾಡಿಕೊಳ್ಳುವುದೆನೆಂದರೆ, ಇಂದು ದಿನಾಂಕ ೨೮/೦೯/೨೦೨೧ ರಂದು ಮದ್ಯಾಹ್ನ ೨-೧೫ ಪಿ.ಎಮ್ ಕ್ಕೆ ಶ್ರೀ ಬಾಬು ತಂದೆ ಸಿಂಗು ಪವಾರ ವ; ೫೦ ವರ್ಷ ಜಾ; ಲಂಬಾಣಿ ಉ; ಒಕ್ಕಲತನ ಸಾ; ಬೆಣ್ಣೂರ ತಾಂಡಾ ತಾ; ಕಾಳಗಿ ಜಿಲ್ಲಾಃ ಕಲಬುರಗಿ ಇವರು ಠಾಣೆಗೆ ಹಾಜರಾಗಿ ಹೇಳಿಕೆ ಫರ‍್ಯಾಧಿ ನೀಡಿದ್ದು ಸಾರಂಶವೆನೆಂದರೆದಿನಾಂಕ ೨೪/೦೯/೨೦೨೧ ರಂದು ನನ್ನ ಹೆಂಡತ್ತಿ ಅನಿತಾ @ ಅನುಸೂಯಾ ಹಾಗೂ ನಮ್ಮ ಅಣ್ಣತಮ್ಮಕಿಯ ಚಾಂದಿಬಾಯಿ ಗಂಡ ರತ್ನು ಚವ್ಹಾಣ ಇಬ್ಬರೂ ಕೂಡಿಕೊಂಡು ಆಧಾರ ಕರ‍್ಡದಲ್ಲಿ ಮೋಬೈಲ ನಂಬರ ಹಾಕಿಸಿಕೊಳ್ಳುವ ಕುರಿತು ಗುಂಡಗರ‍್ತಿ ಗ್ರಾಮಕ್ಕೆ ಹೋಗುವುದಾಗಿ ಅಂದು ಬೆಳಿಗ್ಗೆ ೮-೦೦ ಗಂಟೆ ಸುಮಾರಿಗೆ ಮನೆಯಿಂದ ಹೋದರು. ಮುಂದೆ ೯-೦೦ ಗಂಟೆ ಸುಮಾರಿಗೆ ಚಾಂದಿಬಾಯಿ ಇವರ ಮಗನಾದ ಅನೀಲ ಈತನು ನನಗೆ ಪೋನ್ ಮಾಡಿ ತಿಳಿಸಿದೆನೆಂದರೆ, ಈಗ ೮-೪೦ ಗಂಟೆ ಸುಮಾರಿಗೆ ಸಣ್ಣೂರ ಕಡೆಯಿಂದ ಟೂಲನಾಕಾ ಕಡೆಗೆ ಒಂದು ಮೋಟಾರ ಸೈಕಲ ನಂ ಕೆಎ-೩೨ ಇ.ಝಡ್-೬೦೦೩ ಇದರ ಮೇಲೆ ಅವ್ವ ಚಾಂದಿಬಾಯಿ ಹಾಗೂ ಸಣ್ಣಮ್ಮ ಅನೀತಾ @ ಅನುಸೂಯಾ ಇವರು ಮೋಟಾರ ಸೈಕಲ ಹಿಂದುಗಡೆ ಕೂಡಿಸಿಕೊಂಡು ಬರುವಾಗ ಮೋಟಾರ ಸೈಕಲ ಸವಾರ ಅತೀವೇಗ ಮತ್ತು ಅಲಕ್ಷತನದಿಂದ ನಡೆಸಿ ಟೂಲನಾಕಾದ ಹತ್ತಿರ ಇರುವ ರೋಡ ಹಬ್ಬಿಸಿಗೆ ಮೋಟಾರ ಸೈಕಲ ಸವಾರನು ಒಮ್ಮೆಲೆ ಬ್ರೇಕ್ ಹಾಕಿದಕ್ಕೆ ಹಿಂದೆ ಕುಳಿತು ಕೊಂಡಿರುವ ಅನಿತಾ @ ಅನುಸೂಯಾ ಇವಳು ಮೋಟಾರ ಸೈಕಲ ಮೇಲಿಂದ ಬಿದಿದ್ದರಿಂದ ಅವಳ ತೆಲೆಯ ಹಿಂಭಾಗದಲ್ಲಿ ಭಾರಿ ಗುಪ್ತಗಾಯವಾಗಿದ್ದು ಮತ್ತು ಕಿವಿಯಿಂದ, ಮೂಗಿನಿಂದ ರಕ್ತ ಬರುತ್ತಿದ್ದು ಘಟನೆ ಕಂಡಿರುವ ನಾನು ರಾಜು ಮಾಡಬೂಳ ತಾಂಡಾ ಹಾಗೂ ನಮ್ಮವ್ವ ಚಾಂದಿಬಾಯಿ ಮತ್ತು ಮೋಟಾರ ಸೈಕಲ ಸವಾರ ಎಬ್ಬಿಸಿದ್ದು ಅವಳು ಸರಿಯಾಗಿ ಮಾತನಾಡುತ್ತಿಲ್ಲಾ ಅವಳಿಗೆ ಕಲಬುರಗಿ ಸರಕಾರಿ ಆಸ್ಪತ್ರೆ ನಾವು ಯಾವುದೋ ಅಂಬುಲೈನ್ಸ ನಲ್ಲಿ ಹಾಕಿಕೊಂಡು ಉಪಚಾರ ಕುರಿತು ತೆಗೆದುಕೊಂಡು ಹೋಗುತ್ತಿರುತ್ತೇವೆ ಅಂತಾ ತಿಳಿಸಿದಕ್ಕೆ ನಾನು ಗಾಬರಿಗೊಂಡು ಸರಕಾರಿ ಆಸ್ಪತ್ರೆಗೆ ಬಂದು ಹೆಂಡತ್ತಿಗೆ ನೋಡಲಾಗಿ ಅವಳಿಗೆ ಮೇಲಿನಂತೆ ಗಾಯವಾಗಿದ್ದು ಮಾತನಾಡುವ ಪರಸ್ಥಿತಿಯಲ್ಲಿ ಇರಲಿಲ್ಲಾ ಅಲ್ಲಿಯೇ ಹಾಜರಿದ್ದ ಅನೀಲ, ರಾಜು ಮಾಡಬೂಳ ತಾಂಡಾ ಮತ್ತು ಚಾಂದಿಬಾಯಿ ಇವರೆಲ್ಲರಿಗೂ ವಿಚಾರಿಸಲು ಈ ವಿಷಯವನ್ನು ತಿಳಿಸಿದ್ದು ಅಲ್ಲದೆ ಮೋಟಾರ ಸೈಕಲ ಸವಾರನ ಹೆಸರು ಗೋತ್ತಾಗಲಿಲ್ಲಾ ಅಂತಾ ಹೇಳಿದರು. ಮುಂದೆ ಪೊಲೀಸರು ಆಸ್ಪತ್ರೆಗೆ ವಿಚಾರಣೆಗೆ ಬಂದಾಗ ನನ್ನ ಹೆಂಡತ್ತಿಗೆ ಸಣ್ಣಪುಟ್ಟಗಾಯವಾಗಿರುತ್ತದೆ ಅಂತಾ ತಿಳಿದು ನಂತರ ಕೇಸು ಮಾಡುವ ಬಗ್ಗೆ ತಿಳಿಸಿರುತ್ತೇವೆ, ನನ್ನ ಹೆಂಡತ್ತಿ ಅನಿತಾ @ ಅನುಸೂಯಾ ಇವಳು ಸರಕಾರಿ ಆಸ್ಪತ್ರೆಯಲ್ಲಿ ಉಪಚಾರ ಪಡೆಯುತ್ತಿದ್ದು ಇಂದು ದಿನಾಂಕ ೨೮/೦೯/೨೦೨೧ ರಂದು ಮದ್ಯಾಹ್ನ ೧೨-೦೦ ಗಂಟೆ ಸುಮಾರಿಗೆ ಗುಣಮುಖವಾಗದೆ ಅಂದು ಮೋಟಾರ ಸೈಕಲ ಮೇಲಿಂದ ಬಿದ್ದಗಾಯದ ಬಾದೆಯಿಂದ ಮೃತಪಟ್ಟಿರುತ್ತಾಳೆ, ಈ ವಿಷಯದಲ್ಲಿ ಈಗ ನಾನು ನನ್ನ ಹೆಂಡತ್ತಿ ಸತ್ತ ನಂತರ ವಿಚಾರಣೆ ಮಾಡಿಕೊಂಡು ಬಂದಿದ್ದು ಈ ವಿಷಯದಲ್ಲಿ ಮೋಟಾರ ಸೈಕಲ ಸವಾರನ ಮೇಲೆ ಕಾನುನು ಕ್ರಮ ಕೈಗೊಳ್ಳಬೇಕೆಂದು ಕೊಟ್ಟ ಫರ‍್ಯಾಧಿ  ಹೇಳಿಕೆ ಸಾರಾಂಶದ ಮೇಲಿಂದ     ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

ಇತ್ತೀಚಿನ ನವೀಕರಣ​ : 29-09-2021 12:02 PM ಅನುಮೋದಕರು: ADMIN


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕಲಬುರಗಿ ನಗರ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2021, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080