ಅಭಿಪ್ರಾಯ / ಸಲಹೆಗಳು

ಸ್ಟೇಷನ್‌ ಬಜಾರ ಪೊಲೀಸ್‌ ಠಾಣೆ :- ದಿನಾಂಕ:28-07-2022  ರಂದು ರಾತ್ರಿ ೮:೩೦ ಗಂಟೆಗೆ ಯುನೇಟೇಡ್ ಆಸ್ಪತ್ರೆಯಿಂದ ಅಸಾಲ್ಟ್ ಅಂತ ಎಮ್.ಎಲ್.ಸಿ ವಸೂಲಾಗಿದ್ದು, ಆಸ್ಪತ್ರೆಗೆ ಬೇಟಿ ನೀಡಿ ಗಾಯಾಳು ಫರ‍್ಯಾದಿ ಶ್ರೀ ಸಿದ್ದಾರೂಡ ತಂದೆ ಮಚೆಂದ್ರ ಕಾಂಬ್ಳೆ ವಯ:೪೩ ವರ್ಷ ಜಾ: ಪ.ಜಾತಿ ಉ:ಆರೋಗ್ಯ ಇಲಾಖೆ ನೌಕರ ಸಾ:ಖಜುರಿ ತಾ:ಆಳಂದ ಹಾ.ವ: ಹೀರಾಪುರ ಕಲಬುರಗಿ ಇವರಿಗೆ ವಿಚಾರಣೆ ಮಾಡಿ ಹೇಳಿಕೆ ಫರ‍್ಯಾಧಿಯನ್ನು ಪಡೆದುಕೊಂಡು ಮರಳಿ ಠಾಣೆಗೆ ರಾತ್ರಿ ೯:೩೦ ಗಂಟೆಗೆ ಬಂದಿದ್ದು, ಹೇಳಿಕೆ ಫರ‍್ಯಾದಿಯ ಸಾರಾಂಶವೇನಂದರೆ, ನಾನು ಆರೋಗ್ಯ ಇಲಾಖೆಯಲ್ಲಿ ಸರಕಾರಿ ನೌಕರಿ ಮಾಡಿಕೊಂಡಿರುತ್ತೇನೆ. ನನ್ನ ಹೆಂಡತಿ ಕರವಿತಾರವರು ಗ್ರಾಮ ಪಂಚಾಯತ ಅಬಿವೃದ್ದಿ ಅಧಿಕಾರಿ ಅಂತ ಸರಕಾರಿ ನೌಕರಿ ಮಾಡಿಕೊಂಡಿರುತ್ತಾರೆ. ಈ ಹಿಂದೆ ನನ್ನ ಹೆಂಡತಿ ಕವಿತಾ ಇವಳು ಶರಣಸಿರಸಗಿ ಗ್ರಾಮ ಪಂಚಾಯತನಲ್ಲಿ ಪಿ ಡಿ ಒ ಅಂತ ಕೆಲಸ ಮಾಡಿದ್ದು, ಅಲ್ಲಿ ಕೆಲಸ ಮಾಡುವಾಗ ಅರಣ ಭರಣಿ ಎನ್ನುವ ವ್ಯಕ್ತಿ ಭೋಗಸ್ ಬಿಲ್ ಮಾಡಲು ಒತ್ತಾಯಿಸಿದ್ದು, ಆದರೆ ನನ್ನ ಹೆಂಡತಿ ಮಾಡಿರುವದಿಲ್ಲ ಆದ್ದರಿಂದ ಅರುಣ ಭರಣಿ ಇತನು ನನಗೂ ಫೊನ್ ಮಾಡಿ ಹೇಳಿದರು ಬಿಲ್ ಮಾಡಿರುವದಿಲ್ಲ ನಂತರ ನನ್ನ ಹೆಂಡತಿ ಅಲ್ಲಿಂದ ರ‍್ಗಾಣೆಯಾಗಿ ಬಂದಿರುತ್ತಾಳೆ. ಹೀಗಿದ್ದು ನನ್ನ ಹೆಂಡತಿ  ಸಿ ಎಲ್ ಟಿ (ಕಂಪ್ಯೂಟರ್) ಪರೀಕ್ಷೆ ಕಟ್ಟಿದ್ದು, ಆದ್ದರಿಂದ ಶನಿವಾರ ದಿನ ಪರೀಕ್ಷೆ ಇರುವದರಿಂದ ನನ್ನ ಹೆಂಡತಿ ರಜೆ ಕೇಳಬೇಕಾಗಿದ್ದು ತಾಲ್ಲೂಕಾ ಪಂಚಾಯಿತಿಗೆ ಹೋಗಿ ಬರೋಣ ಅಂತ ಹೇಳಿದ್ದರಿಂದ ಅವಳನ್ನು ಕರೆದುಕೊಂಡು ಮೋಟಾರ್ ಸೈಕಲ್ ಮೇಲೆ ಇಂದು ೪:೦೦ ಪಿಎಮ್ ಕ್ಕೆ ತಾಲೂಕಾ ಪಂಚಾಯಿತಿಗೆ ಬಂದು ನನ್ನ ಹೆಂಡತಿಯನ್ನು ಬಿಟ್ಟು, ನನಗೆ  ಪರಿಚಯದವರಾದ ಸಂಜೀವಕುಮಾರ ಕುರುಮಲ್ ಮತ್ತು ಶಿವಪುತ್ರ ಭದ್ರೆ  ಸಿಕ್ಕಾಗ ಮಾತನಾಡುತ್ತಾ ಚಹಾ ಕುಡಿದಿದ್ದು  ಶಿವಪುತ್ರನು ಹೋಗಿರುತ್ತಾನೆ. ಆಗ ನಾನು ಸಂಜಿವಕುಮಾರ ಮಾತನಾಡುತ್ತಾ ಸಂಜಿವಕುಮಾರನು ನಿಲ್ಲಿಸಿದ ಕಾರ ಕಡೆಗೆ ಹೋಗಲು ರೋಡ ನೋಡುತ್ತಾ ದಾಟುತ್ತಿರುವಾಗ ರಸ್ತೆಯ ಪಕ್ಕದಲ್ಲಿನ ಬೊಲೇರೊ ವಾಹನದಲ್ಲಿ ಕುಳಿತಿದ್ದ ವ್ಯಕ್ತಿ ಬಂದು ಮಗನೆ ನನಗೇನು ದಿಟ್ಟಿಸಿ ನೊಡುತ್ತಿ ಅಂತ ಅಂದವನೆ ಆಗ ಇತರರು ಬಂದು ನನಗೆ ಹಿಡಿದಿದ್ದು, ನನಗೆ ತಕರಾರು ಮಾಡಿದ ವ್ಯಕ್ತಿ ತನ್ನ ಸೊಂಟದಲ್ಲಿರುವ ಪಿಸ್ತೂಲ ತೆಗೆದು ಅದರ ಹಿಡಿಕೆಯಿಂದ ಜೋರಾಗಿ ಎರಡು ಕಪಾಳ ಮೇಲೆ ಹೋಡೆದಿರುತ್ತಾನೆ ಇದರಿಂದ ನನ್ನ ಬಾಯಲ್ಲಿನ ಒಂದು ಹಲ್ಲು ಬಿದ್ದಿದ್ದು, ದವಡೆಗಳಿಗೆ ಭಾರಿ ರಕ್ತಗಾಯವಾಗಿರುತ್ತದೆ. ಆಗ ನನಗೆ ಎಳೆದಾಡಿ ಅದೇ ಪಿಸ್ತೂಲ್ ಹಿಡೆಕೆಯಿಂದ ಬೆನ್ನು ಬಗ್ಗಿಸಿ ಗುದ್ದಿರುತ್ತಾನೆ. ನಂತರ ನನ್ನ ಜೋತೆಯಲ್ಲಿದ್ದ ಸಂಜೀವಕುಮಾರನು ಹೊಡೆಯುವದನ್ನು ಬಿಡಿಸಿರುತ್ತಾನೆ. ನನಗೆ ಹೊಡೆದ ವ್ಯಕ್ತಿಯ ಹೆಸರು ಅರುಣ ಭರಣಿ ಅಂತ ಗೊತ್ತಾಗಿದ್ದು, ಇತರರನ್ನು ನೋಡಿದ್ದಲ್ಲಿ ಗುರುತಿಸುತ್ತೆನೆ. ನಂತರ ನನ್ನ ಹೆಂಡತಿಯಿಂದ ಗೊತ್ತಾಗಿದ್ದೆನಂದೆರೆ ನಾನು ಶರಣ ಸಿರಸಗಿ ಪಿ.ಡಿ.ಓ ಅಂತ ಕೆಲಸ ಮಾಡುವಾಗ ಬೊಗಸ್ ಬಿಲ್ ಮಾಡಲು ಒತ್ತಾಯಿಸಿದಾಗ ನಾನು ಮಾಡಿರುವದಿಲ್ಲ. ಆಗ ನಿನಗೆ ಫೊನ್ ಮಾಡಿ ಹೇಳಿದ ವ್ಯಕ್ತಿ ಇವನೆ ಅಂತ ತಿಳಿಸಿದ್ದು ಇರುತ್ತದೆ. ಅರುಣ ಭರಣಿ ಇತನು ಬೊಗಸ್ ಬಿಲ್ ಮಾಡಿರುವದಿಲ್ಲ ಅಂತ ಮತ್ತು ನನಗೆ ಹೇಳಿದರು ನನ್ನ ಹೆಂಡತಿಗೆ ಹೇಳಿ ಬೊಗಸ್ ಬಿಲ್ ಮಾಡಿಸಿರುವದಿಲ್ಲ ಅಂತ ವೈಮನಸ್ಸು ಇಟ್ಟುಕೊಂಡು ಇಂದು ಅರುಣ ಭರಣಿ ಇತನು ಇತರರನ್ನು ಕರೆದುಕೊಂಡು ಬಂದು ನನಗೆ ದಿಟ್ಟಿಸಿ ನೋಡತ್ತಿ ಮಗನೆ ಅಂತ ನೆಪ ಹೇಳಿ ಪಿಸ್ತೂಲಿನ ಹಿಡಿಕೆಯಿಂದ ಹೊಡೆದು ಕಪಾಳಕ್ಕೆ ಹೊಡೆದು ಬಾಯಿಯಲ್ಲಿ ಭಾರಿ ರಕ್ತಗಾಯ ಮಾಡಿ ಕೊಲೆಗೆ ಪ್ರಯತ್ನಿಸಿರುತ್ತಾನೆ. ಕಾರಣ ನನಗೆ ಹೊಡೆ ಮಾಡಿ ಕೊಲೆ ಮಾಡಲು ಪ್ರಯತ್ನಿಸಿದವರ ಮೇಲೆ ಕಾನೂನು ಕ್ರಮ ಜರುಗಿಸಬೇಕು ಅಂತ ಹೇಳಿ ಬರೆಯಿಸಿದ ಹೇಳಿಕೆ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

ಸಬ್‌ ಅರ್ಬನ್‌ ಪೊಲೀಸ್‌ ಠಾಣೆ :- ದಿನಾಂಕ 28-07-2022  ರಂದು ಫಿರ್ಯಾದಿದಾರರು ಬಂದು ಸಲ್ಲಿಸಿದ ಫಿರ್ಯಾದಿ ಏನೆಂದರೆ ದಿನಾಂಕ ೨೭.೦೭.೨೦೨೨ ಸಂಜೆಯಿಂದ ದಿನಂಕ ೨೮-೦೭-೨೦೨೨ ರ ಮಧ್ಯಾಹ್ನದ ಮಧ್ಯದ ಅವಧಿಯಲ್ಲಿ ಯಾರೊ ಆರೋಪಿತರು ಫಿರ್ಯಾದಿಯ ಮಗನಿಗೆ ಕೆರೆಭೋಸಗಾ ಗ್ರಾಮದ ಕ್ರಾಸ್ ಬಳಿಯಲ್ಲಿ ಯಾವುದೋ ದುರುದ್ದೇಶದಿಂದ ಬಿಯರ್ ಬಾಟಲ್ ನಿಂದ ಹೊಡೆದು ಚುಚ್ಚಿ ಕೊಲೆ ಮಾಡಿದ್ದು ಸದರಿ ಫಿರ್ಯಾದಿ ಹೇಳಿಕೆ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

ಫರಹತಾಬಾದ ಪೊಲೀಸ್ ಠಾಣೆ :- ದಿನಾಂಕ 28-07-2022 ರಂದು ೧೦:೩೦ ಎ.ಎಮ್‌ಕ್ಕೆ ಕೇಂದ್ರ ಕಾರಾಗೃಹ ಕಲಬುರಗಿಯಿಂದ ಶ್ರೀ ಸದಾಶಿವ, ವೀಕ್ಷಕ ಇವರ ಮುಖಾಂತರ ಶ್ರೀ ವ್ಹಿ. ಕೃಷ್ಣಮೂರ್ತಿ ಪ್ರಭಾರಿ ಮುಖ್ಯ ಅಧೀಕ್ಷಕರು ಕಳುಹಿಸಿದ ದೂರನ್ನು ಪಡೆದು ದೂರಿನ ಸಾರಾಂಶವೇನೆಂದರೆ, ದಿನಾಂಕ:೨೭-೦೭-೨೦೨೨ ರಂದು ರಾತ್ರಿ ಸಮಯ ೧೨.೩೦ ರಲ್ಲಿ ಕಲಬರುಗಿ ಕೇಂದ್ರ ಕಾರಾಗೃಹದ ಬ್ಯಾರಕ್ ಸಂಖ್ಯೆ ೫ ರಿಂದ ೭  ರವರೆಗಿನ ಬ್ಯಾರಕುಗಳ ಕರ್ತವ್ಯಕ್ಕೆ ನೇಮಿಸಿದ್ದ ಶ್ರೀ ಯಂಕಪ್ಪ ಕೊರ್ತಿ, ವೀಕ್ಷಕರು ಇವರು ಕರ್ತವ್ಯ ನಿರ್ವಹಿಸುತ್ತಿದ್ದ ಅವಧಿಯಲ್ಲಿ ಸಮಯ ಸುಮಾರು ೧೨.೩೦ ರ ರಾತ್ರಿಯ ವೇಳೆಯಲ್ಲಿ ಹೊರಗಡೆಯಿಂದ ಯಾವುದೋ ವಸ್ತು ಬಿದ್ದ ಶಬ್ದವು ಕೇಳಿದ್ದು, ವಿಷಯವನ್ನು ರಾತ್ರಿ ಪಹರೆ ಮೇಲುಸ್ತುವಾರಿ ಕರ್ತವ್ಯದಲ್ಲಿದ್ದ ಶ್ರೀ ಸಂಗಯ್ಯ, ಮುಖ್ಯ ವೀಕ್ಷಕರು ಇವರಿಗೆ ಮಾಹಿತಿ ನೀಡಿ ಈ ಇಬ್ಬರು ಸಿಬ್ಬಂದಿಗಳು ಸೇರಿ ಬ್ಯಾಟರಿ ಬೆಳಕಿನಲ್ಲಿ ೭ನೇ ಬ್ಯಾರಕಿನ ಹೊರಾಂಗಣದಲ್ಲಿ ಹುಡಕಾಟ ನಡೆಸಿದ್ದು, ಆ ಸಮಯದಲ್ಲಿ ೨ ಸಂಖ್ಯೆಯ ಪ್ಲಾಸ್ಟಿಕ್ ಸುತ್ತಿದ ಕವರ್‌ಗಳು ಬಿದ್ದಿದ್ದು, ಅವುಗಳನ್ನು ಗಮನಿಸಿ ಶ್ರೀ ಸಂಗಯ್ಯ, ಮುಖ್ಯ ವೀಕ್ಷಕರು ಇವರು ತಮ್ಮ ವಶಕ್ಕೆ ಪಡೆದಿದ್ದು, ದಿನಾಂಕ:೨೭-೦೭-೨೦೨೨ರAದು ಬೀಗ ಮುದ್ರೆ ತೆರೆಯುವ ವೇಳೆಯಲ್ಲಿ ಕಾರ್ಯನಿರ್ವಾಹಕ ಜೈಲರ್‌ರಾದ ಶ್ರೀಮತಿ ಶೈನಾಜ್ ಎಂ ನಿಗೇವಾನ್ ಇವರಿಗೆ ವರದಿ ನೀಡಿರುತ್ತಾರೆ. ಮುಂದುವರೆದು, ದೊರೆತಿರುವ ೨ ಸಂಖ್ಯೆಯ ಪ್ಲಾಸ್ಟಿಕ್ ಸುತ್ತಿದ ಕವರ್‌ನ್ನು ತೆರೆದು ಪರಿಶೀಲಿಸಿದ್ದು, ಅದರಲ್ಲಿ ೦೪ ಸಂಖ್ಯೆಯ ಮೊಬೈಲ್ ಫೋನ್‌ಗಳು ಮತ್ತು ೯ ಸಂಖ್ಯೆಯ ಸಿಮ್ ಕಾರ್ಡ್ಗಳು ದೊರೆತ್ತಿರುತ್ತವೆ. ಮೊಬೈಲ್  ಮತ್ತು ಸಿಮ್ ಕಾರ್ಡ್ಗಳು ಯಾರ ಹೆಸರಿನಲ್ಲಿದೆ? ಜೈಲಿನೊಳಗೆ ಯಾರಿಗೆ ಸರಬರಾಜು ಮಾಡಲು ಪ್ರಯತ್ನಿಸಲಾಗಿದೆಂಬುದರ ಬಗ್ಗೆ ಕರ್ನಾಟಕ ಕಾರಾಗೃಹಗಳ (ತಿದ್ದುಪಡಿ) ಅಧಿನಿಯಮ ೨೦೨೨ ರ ಕಲಂ ೪೨ ಹಾಗೂ ಭಾ.ದಂ.ಸಂ ಕಲಂಗಳ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು, ತನಿಖೆ ನಡೆಸಿ, ಸಂಬಂಧಿಸಿದವರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕಾಗಿ ಕೋರುತ್ತೇನೆ. ದಿನಾಂಕ: ೨೭-೦೭-೨೦೨೨ ರಂದು ಕಾರಾಗೃಹದ ಮುಖ್ಯ ಕಾಂಪೌಂಡ್ ಗೋಡೆಯ ಹೊರಗೆ ಕೆ.ಎಸ್.ಐ.ಎಸ್.ಎಫ್  ಸಿಬ್ಬಂದಿಗಳನ್ನು ರಾತ್ರಿಯ ಪಹರೆಯ ಕರ್ತವ್ಯಕ್ಕೆ ನೇಮಿಸಲಾಗಿತ್ತು. ದಿನಾಂಕ: ೨೭-೦೭-೨೦೨೨ರಂದು ರಾತ್ರಿ ಕರ್ತವ್ಯ ನಿರ್ವಹಿಸುತ್ತಿದ್ದ ಶ್ರೀ ಯಂಕಪ್ಪ ಕೊರ್ತಿ, ವೀಕ್ಷಕರು ಹಾಗೂ ರಾತ್ರಿ ಮೇಲುಸ್ತುವಾರಿ ಕರ್ತವ್ಯ ನಿರ್ವಹಿಸುತ್ತಿದ್ದ ಶ್ರೀ ಸಂಗಯ್ಯ, ಮುಖ್ಯ ವೀಕ್ಷಕರು ಇವರ ಲಿಖಿತ ಹೇಳಿಕೆಗಳ ನಕಲು ಪ್ರತಿಗಳನ್ನು ದೂರು ಪತ್ರದೊಂದಿಗೆ ಲಗತ್ತಿಸಿ ತಮ್ಮ ಮುಂದಿನ ಕ್ರಮಕ್ಕಾಗಿ ಕಳುಹಿಸಿದೆ. ವಿವಿಧ ಕಂಪನಿಗಳಿಗೆ ಸೇರಿದ ೦೪ ಸಂಖ್ಯೆಯ ಮೊಬೈಲ್ ಫೋನ್‌ಗಳು ಹಾಗೂ ೯ ಸಂಖ್ಯೆಯ ವಿವಿಧ ಕಂಪನಿಗಳಿಗೆ ಸೇರಿದ ಸಿಮ್ ಕಾರ್ಡ್ಗಳು ದೊರೆತ್ತಿದ್ದು, IಒಇI ನಂಬರ್ ಹಾಗೂ ಸಿಮ್ ಕಾರ್ಡ್ ನಂಬರ್ ಈ ಕೆಳಕಂಡಂತೆ ಇರುತ್ತದೆ. ಪತ್ತೆಯಾಗಿರುವ ೦೪ ಸಂಖ್ಯೆಯ ಮೊಬೈಲ್ ಫೋನ್‌ಗಳನ್ನು ಹಾಗೂ ೦೯ ಸಂಖ್ಯೆಯ ಸಿಮ್ ಕಾರ್ಡ್ಗಳನ್ನು ಈ ಸಂಸ್ಥೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಶ್ರೀ ಸದಾಶಿವ, ವೀಕ್ಷಕ ಇವರ ಮುಖಾಂತರ ಮುಂದಿನ ಕ್ರಮ ಕೈಗೊಳ್ಳಲು ಕಳುಹಿಸಿದೆ.

ವಿವಿಧ ಕಂಪನಿಯ ಮೊಬೈಲ್ ಫೋನ್‌ಗಳು ವಿವರ ಈ ಕೆಳಗಿನಂತಿದೆ.

 1. Jioಮೊಬೈಲ್ ಫೋನ್  IMEI 357925723273865

 2. Jio ಮೊಬೈಲ್ ಫೋನ್ IMEI 357925722954457

 3. Jio ಮೊಬೈಲ್ ಫೋನ್ IMEI No. 354316111877389

 4. ನೋಕೀಯಾ ಮೊಬೈಲ್  IMEI 359939434456550

 


ವಿವಿಧ ಕಂಪನಿಯ ಸಿಮ್ ಕಾರ್ಡ್ಗಳು ವಿವರ ಈ ಕೆಳಗಿನಂತಿದೆ.
ವಿವಿಧ ಕಂಪನಿಯ ಸಿಮ್ ಕಾರ್ಡ್ಗಳು ವಿವರ ಈ ಕೆಳಗಿನಂತಿದೆ.

 1. Jio ಸಿಮ್ ಕಾರ್ಡ್ ನಂ.89918610400058580474

 2. Jio ಸಿಮ್ ಕಾರ್ಡ್ ನಂ.89918540400466064561

 3. Jio ಸಿಮ್ ಕಾರ್ಡ್ ನಂ.89918560400324961318

 4. Airtel ಸಿಮ್ ಕಾರ್ಡ್ ನಂ.8991450900998169784

 5. 3H2

 6. Airtel ಸಿಮ್ ಕಾರ್ಡ್ ನಂ.8991000904356129515U

 7. Airtel ಸಿಮ್ ಕಾರ್ಡ್ ನಂ.1221 ID 8991000907145789812

 8. BSNL ಸಿಮ್ ಕಾರ್ಡ್ ನಂ.89917100104915238263PRE

 9. ವೋಡಾಪೋನ್ ಸಿಮ್ ಕಾರ್ಡ್ ನಂ..8991200050658445510 NTHLR6E

 10. VI ಸಿಮ್ ಕಾರ್ಡ್ ನಂ.89910273818010488285

                                ಮುಂದುವರೆದು ರಾತ್ರಿ ಪಹರೆ ಸಿಬ್ಬಂದಿಗಳಾದ ಶ್ರೀ ಯಂಕಪ್ಪ ಕೋರ್ತಿ, ವೀಕ್ಷಕ ಮತ್ತು ಶ್ರೀ ಸಂಗಯ್ಯ, ಮುಖ್ಯ ವೀಕ್ಷಕ ಇವರುಗಳು ರಾತ್ರಿ ಕರ್ತವ್ಯ ಮುಗಿಸಿಕೊಂಡು ಮನೆಗೆ ತೆರಳಿದ್ದು, ಇವರಿಂದ ಹೇಳಿಕೆಯನ್ನು ಪಡೆಯಲು ವಿಳಂಬವಾಗಿರುತ್ತದೆ. ಅಲ್ಲದೇ ದಿನಾಂಕ: ೨೬-೦೭-೨೦೨೨ ರಂದು ಮಾನ್ಯ ಜಿಲ್ಲಾಧಿಕಾರಿಗಳು, ಕಲಬುರಗಿ, ಗೌ|| ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರ ರವರ ಅಧ್ಯಕ್ಷತೆಯಲ್ಲಿ ಜೈಲು ಸಂದರ್ಶಕ ಮಂಡಳಿ ಸಭೆ ಮತ್ತು ಸ್ಥಾಯಿ ಸಲಹಾ ಮಂಡಳಿ ಸಭೆ ಜರುಗಿದ್ದು, ಸಭಾ ನಡವಳಿಗಳನ್ನು ತಯಾರಿಸಲಾಗಿರುತ್ತದೆ. ಸಂಸ್ಥೆಯಲ್ಲಿ ೦೪ ಸಂಖ್ಯೆ ಗೂಂಡಾ ಬಂದಿಗಳು ದಾಖಲಾಗಿದ್ದು, ಇವರುಗಳ ವಿರುದ್ಧ ಸರ್ಕಾರವು ಗೂಂಡಾ ಕಾಯ್ದೆಯನ್ನು ಅನುಮೋದಿಸಿದ್ದು, ಈ ಸಂಬಂಧ ಗೃಹ ಇಲಾಖೆಗೆ ಪತ್ರ ವ್ಯವಹಾರ ಮಾಡಲಾಗಿರುತ್ತದೆ ಅಲ್ಲದೇ ದೊರೆತ್ತಿರುವ ನಿಷೇಧಿತ ವಸ್ತುಗಳನ್ನು ಪರಿಶೀಲಿಸಿ ಸಿಮ್ ಕಾರ್ಡ್ ನಂ. ಹಾಗೂ IಒಇI ಸಂಖ್ಯೆಗಳನ್ನು ಪರಿಶೀಲಿಸಿ, ದೂರು ಪತ್ರದಲ್ಲಿ ನಮೂದಿಸಲಾಗಿರುತ್ತದೆ. ಕಾರಾಗೃಹದ ಮುಖ್ಯ ಅಧೀಕ್ಷಕ ರವರು ಗೌ|| ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಅಯೋಗ ಬೆಂಗಳೂರು ಇಲ್ಲಿ ಜರುಗುವ ವಿಚಾರಣೆಗೆ ಹಾಗೂ ಅಧೀಕ್ಷಕ ರವರು ಮಾನ್ಯ ಪೊಲೀಸ್ ಮಹಾನಿರ್ದೇಶಕರು, ಕಾರಾಗೃಹ ಮತ್ತು ಸುದಾರಣಾ ಸೇವೆ, ಬೆಂಗಳೂರು ಇವರ ಅಧ್ಯಕ್ಷತೆಯಲ್ಲಿ ಜರುಗುವ ಸಭೆಯಲ್ಲಿ ಹಾಜರಾಗಲು ತೆರಳಿರುತ್ತಾರೆ ಅಲ್ಲದೇ ಕಾರಾಗೃಹದ ಬಂದಿಗಳ ಪ್ರವೇಶ, ಬಿಡುಗಡೆ ದೈನಂದಿನ ಆಡಳಿತ, ಎ.ಜಿ ಅಡಿಟ್ ಹಾಗೂ ಗೌ|| ನ್ಯಾಯಾಲಯಗಳಿಗೆ ಸಂಬಂಂಧಿಸಿದ ಪತ್ರ ವ್ಯವಹಾರಗಳನ್ನು ನಾನ್ನೋಬ್ಬನೆ ನಿರ್ವಹಿಸಿರುತ್ತೇನೆ. ಜೊತೆಗೆ ದೂರು ದಾಖಲಿಸುವ ಮುನ್ನ ಮೇಲಾಧಿಕಾರಿಗಳೊಂದಿಗೆ ಚರ್ಚಿಸಿ ನಂತರ ದೂರು ದಾಖಲಿಸಬೇಕಾಗಿರುವ ಈ ಹಿನ್ನಲೆಯಲ್ಲಿ ದೂರನ್ನು ದಾಖಲಿಸಲು ವಿಳಂಬವಾಗಿರುತ್ತದೆ ಎಂದು ಅಂತ ದೂರಿನ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

ಇತ್ತೀಚಿನ ನವೀಕರಣ​ : 01-08-2022 06:28 PM ಅನುಮೋದಕರು: ADMIN


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

 • ಹಕ್ಕುಸ್ವಾಮ್ಯ ನೀತಿ
 • ಬಾಹ್ಯಜಾಲತಾಣ ಸಂಪರ್ಕ ನೀತಿ
 • ಭದ್ರತಾ ನೀತಿ
 • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

 • ಇತ್ತೀಚಿನ ನವೀಕರಣ​ :
 • ಸಂದರ್ಶಕರು :
 • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕಲಬುರಗಿ ನಗರ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080