ಅಭಿಪ್ರಾಯ / ಸಲಹೆಗಳು

ಬ್ರಹ್ಮಪೂರ ಪೊಲೀಸ್ ಠಾಣೆ :-  ದಿನಾಂಕ 28-06-2022    ರಂದು ೧-೦೦  ಪಿ.ಎಂಕ್ಕೆ ಸರಕಾರಿ ತರ್ಪೇ ಪಿರ್ಯಾದಿಯಾಗಿ ಶ್ರೀ ರಾಘವೇಂದ್ರ ಹೆಚ್.ಎಸ್. ಪಿ.ಐ ರವರು ರಾಜ್ಯ ಸರಕಾರದ ಪರ ಪಿರ್ಯಾದಿ ಸಲ್ಲಿಸಿದ ಸಾರಾಂಶವೆನೆಂದರೆ, ಇಂದು ದಿನಾಂಕ ೨೮/೦೬/೨೦೨೨  ರಂದು ಠಾಣೆಯಲ್ಲಿದ್ದಾಗ ಮಾಹಿತಿ ತಿಳಿದು ಬಂದಿದ್ದೇನೆಂದರೆ, ಬ್ರಹ್ಮಪೂರ ಪೊಲೀಸ್ ಠಾಣೆಯ ವ್ಯಾಪ್ತಿಯ ಬಾಪು ನಗರದ ರಮೇಶ ಕಾಳೆ ಇತನ ಮನೆಯ  ಹತ್ತಿರ ಸಾರ್ವಜನಿಕ ರಸ್ತೆಯ ಮೇಲೆ ಮೂರು ಜನರು  ಗಾಂಜಾವನ್ನು ಮಾರಾಟ ಮಾಡುತ್ತಿದ್ದಾರೆ ಅಂತಾ ಖಚಿತವಾದ ಬಾತ್ಮೀ ಬಂದ ಮೇರೆಗೆ ಮಾನ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಜಿಲ್ಲಾ ಪಂಚಾಯತ  ಕಲಬುರಗಿರವರಲ್ಲಿ ಇಬ್ಬರೂ ಪಂಚರನ್ನು ಕೊಡುವಂತೆ ಪತ್ರದ ಮುಖಾಂತರ ವಿನಂತಿಸಿಕೊಳ್ಳಲು ಇಬ್ಬರು ಪಂಚರಾದ ೧) ಶ್ರೀ ಶಿವರಾಜ ತಂದೆ ಗುರುಪಾದಪ್ಪ ಹವಳಕರ್ ವಯಸ್ಸು ೪೪ ವರ್ಷ ಉ;ಎಸ್.ಡಿ.ಎ ಸಾ; ಯೋಜನಾ ಶಾಖೆ  ಜಿಲ್ಲಾ ಪಂಚಾಯತ ಕಾರ್ಯಾಲಯ ಕಲಬುರಗಿ ಮೊಬೈಲ ನಂ ೯೯೮೦೪೯೯೩೪೮ ೨) ಶ್ರೀ ಅರವಿಂದ ತಂದೆ ಗಡ್ಡೆಪ್ಪ ಶಿರವಾಳ ವಯಸ್ಸು ೨೮ ವರ್ಷ ಜಾತಿ; ಕುರುಬ ಉ;  ಎಫ್.ಡಿ.ಎ ಸಾ; ಮಣ್ಣೂರ  ಎ ಸಾ; ಯೋಜನಾ ಶಾಖೆ  ಜಿಲ್ಲಾ ಪಂಚಾಯತ ಕಾರ್ಯಾಲಯ ಕಲಬುರಗಿ ಮೊ.ನಂ ೯೭೩೧೩೭೧೩೩೦  ಇವರನ್ನು ಒದಗಿಸಿದ್ದು, ಅವರನ್ನು  ಬರಮಾಡಿಕೊಂಡು ಮಾನ್ಯ ಉಪ ಪೊಲೀಸ್ ಆಯುಕ್ತರು (ಕಾ&ಸೂ) ಕಲಬುರಗಿ ನಗರ ಹಾಗೂ ಮಾನ್ಯ ಸಹಾಯಕ ಪೊಲೀಸ್ ಆಯುಕ್ತರು (ದಕ್ಷಿಣ) ಉಪವಿಭಾಗ ಕಲಬುರಗಿರವರ ಮಾರ್ಗದರ್ಶನದಲ್ಲಿ ಪತ್ರಾಂಕಿತ ಅದಿಕಾರಿಗಳಾದ ಶ್ರೀ ಪೀರಪ್ಪ ಪೂಜಾರಿ ಕಂದಾಯ ನಿರೀಕ್ಷಕರು ಮಹಾನಗರ ಪಾಲಿಕೆ ಕಲಬುರಗಿ  ಇವರ ಸಮಕ್ಷಮದಲ್ಲಿ ದಾಳಿ ಮಾಡುವ ಕುರಿತು ಸಿಬ್ಬಂದಿಯವರಾದ ಶ್ರೀ ಶಿವಪ್ರಕಾಶ  ಹೆಚ್.ಸಿ ೧೫೬, ಶ್ರೀ ರಾಮು ಪವಾರ ಪಿ.ಸಿ. ೭೩, ಶ್ರೀ ಸಂತೋಷ ಪಿಸಿ-೧೧೮ ಹಾಗೂ ಶ್ರೀಶಿವಶರಣಪ್ಪ ಪಿ.ಸಿ ೪೬೩  ಹಾಗೂ  ತೂಕ ಮಾಡುವ ರಾಹುಲ ತಂದೆ ರಾಜು ಟಾಕ್ ಸಾ; ಮೇತಾರಗಲ್ಲಿ ಕಲಬುರಗಿ ಇವರನ್ನು ಕರೆದುಕೊಂಡು ಠಾಣೆಯಿಂದ ೧೧:೦೦ ಎ.ಎಂ.ಕ್ಕೆ ಠಾಣೆಯ ಜೀಪ ನಂ ಕೆಎ ೩೨ ಜಿ-೧೧೪೯ ನೇದ್ದರಲ್ಲಿ ಕುಳಿತುಕೊಂಡು ಹೊರಟು ಬ್ರಹ್ಮಪೂರ ಪೊಲೀಸ್ ಠಾಣೆಯ ವ್ಯಾಪ್ತಿಯ ಬಾಪು ನಗರದ ರಮೇಶ ಕಾಳೆ ಇತನ ಮನೆಯ  ಹತ್ತಿರ  ೧೧:೧೦ ಎ.ಎಂಕ್ಕೆ ಹೋಗಿ ದೂರದಲ್ಲಿ ಜೀಪನ್ನು ನಿಲ್ಲಿಸಿ ನಡೆದುಕೊಂಡು ಮನೆಯ ಗೋಡೆಯ ಪಕ್ಕದಲ್ಲಿ ಮರೆಯಾಗಿ ನಿಂತು ನೋಡಲಾಗಿ  ಮೂರು ಜನ  ವ್ಯಕ್ತಿಗಳು ಒಂದು ಪ್ಲಾಸ್ಟಿಕ್ ಚೀಲದಲ್ಲಿ ಗಾಂಜಾ ಇಟ್ಟುಕೊಂಡು ರಮೇಶ ಕಾಳೆ ಇತನ ಮನೆಯ ಮುಂದೆ ರಸ್ತೆಯ ಮೇಲೆ ನಿಂತು ಸಾರ್ವಜನಿಕರಿಗೆ ಗಾಂಜಾ ಮಾರಾಟ ಮಾಡುತ್ತಿದ್ದದನ್ನು ಖಚಿತ ಪಡಿಸಿಕೊಂಡು, ನಂತರ ರಾಘವೇಂದ್ರ ಹೆಚ್.ಎಸ್. ಪಿ.ಐ ರವರು ಹಾಗೂ ಅವರ ಸಿಬ್ಬಂದಿಯವರು ಪತ್ರಾಂಕಿತ ಅಧಿಕಾರಿ ಶ್ರೀ ಪೀರಪ್ಪ ಪೂಜಾರಿ ಕಂದಾಯ ಅಧಿಕಾರಿ ಮಹಾನಗರ ಪಾಲಿಕೆ ಕಲಬುರಗಿ  ರವರ ಸಮಕ್ಷಮದಲ್ಲಿ ಒಮ್ಮೇಲೆ ೧೧:೨೦ ಎ.ಎಂಕ್ಕೆ ದಾಳಿ ಮಾಡಿ ಹಿಡಿಯಲು ಗಾಂಜಾ ಮಾರಾಟ ಮಾಡುವ ಮೂರು ಜನರು  ಸಿಕ್ಕಿದ್ದು ಹಾಗೂ ಗಾಂಜಾ ಖರೀದಿಸುವವರು ಓಡಿ ಹೋದರು. ಪಿ.ಐ ರವರು ಹಿಡಿದ ವ್ಯಕ್ತಿಗಳ   ಹೆಸರು ಮತ್ತು ವಿಳಾಸ ವಿಚಾರಿಸಿ ಅವರ  ಅಂಗ ಶೋದನೆ ಮಾಡಲಾಗಿ ಅವರು ತಮ್ಮ  ಹೆಸರು ೧) ರಮೇಶ ತಂದೆ ವಿಜಯಕುಮಾರ ಕಾಳೆ ವಯಸ್ಸು ೫೫ ವರ್ಷ ಜಾತಿ; ಮಾಂಗರವಾಡಿ ಸಾ; ಬಾಪು ನಗರ ಕಲಬುರಗಿ ಅಂತಾ ತಿಳಿಸಿದನು. ಅವನ ಹತ್ತಿರ ನಗದು ಹಣ ೪೦೦/- ರೂಪಾಯಿ ದೊರೆತಿದ್ದು, ಇನ್ನೋಬ್ಬ ವ್ಯಕ್ತಿಯ ಹೆಸರು ೨) ಬಚ್ಚನ್ ತಂದೆ ದಿನಕರ್ ಉಪಾದ್ಯ ವಯಸ್ಸು ೨೪ ವರ್ಷ ಜಾತಿ; ಮಾಂಗರವಾಡಿ ಸಾ; ಬಾಪು ನಗರ ಕಲಬುರಗಿ ಅಂತಾ ತಿಳಿಸಿದ್ದು, ಅವನ ಹತ್ತಿರ ನಗದು ಹಣ ೩೫೦/- ರೂಪಾಯಿ ದೊರೆತಿದ್ದು ಇರುತ್ತದೆ. ೩) ಕರಣ ತಂದೆ ಬಾಶು ಶೇಖ ವಯಸ್ಸು ೨೨ ವರ್ಷ ಜಾತಿ; ಮುಸ್ಲಿಂ ಉ; ವೇಟರ ಕೆಲಸ ಸಾ; ಹನುಮಾನ ಗುಡಿ ಹತ್ತಿರ ಬಾಪು ನಗರ ಕಲಬುರಗಿ ಅಂತಾ ತಿಳಿಸಿದ್ದು, ಅವನ ಹತ್ತಿರ ನಗದು ಹಣ ೧೫೦ ರೂಪಾಯಿ ದೊರೆತಿದ್ದು ಇರುತ್ತದೆ. ಅವರ  ಹತ್ತಿರ ಒಂದು ಪ್ಲಾಸ್ಟಿಕ ಚೀಲದಲ್ಲಿ ಖುಲ್ಲಾ ಗಾಂಜಾ ಮತ್ತು ಚಿಕ್ಕ ಚಿಕ್ಕ ಪಾಕೇಟಗಳಲ್ಲಿ ಗಾಂಜಾ ಇದ್ದು ಅದನ್ನು ಪರಿಶೀಲಿಸಿ ತೂಕ ಮಾಡುವ ರಾಹುಲ ತಂದೆ ರಾಜು ಟಾಕ್ ಸಾ; ಮೇತಾರಗಲ್ಲಿ ಕಲಬುರಗಿ ಇವರಿಂದ ತೂಕ ಮಾಡಿಸಲಾಗಿ ಅಂದಾಜು ೪೫೦ ಗ್ರಾಂ ಗಾಂಜಾ ಪ್ಲಾಸ್ಟಿಕ್ ಚೀಲ ಸಮೇತ  ಇದ್ದು ಅದರ ಒಟ್ಟು ಅಃಕಿB ೩೦೦೦/- ರೂ ಮತ್ತು ನಗದು ಹಣ ೯೦೦/- ರೂ ದೊರೆತಿದ್ದು ಇರುತ್ತದೆ. ನಂತರ ಪಿ.ಐ ಸಾಹೇಬರು ಸದರಿ ಗಾಂಜಾದಿಂದ ಅಂದಾಜು ೨೫ ಗ್ರಾಂ ನಷ್ಟು ಗಾಂಜಾವನ್ನು ತಮ್ಮ ಮುಂದಿನ ಕೇಸಿನ ಪುರಾವೆ ಮತ್ತು ರಾಸಾಯನಿಕ ಪರೀಕ್ಷೆ ಕಳುಹಿಸುವ ಕುರಿತು ಶಾಂಪಲ್  ೨೫ ಗ್ರಾಂ ನಷ್ಟು ಗಾಂಜಾವನ್ನು ಕೇಸಿನ ಪುರಾವೆ ಮತ್ತು ರಾಸಾಯನಿಕ ಪರೀಕ್ಷೆ ಕಳುಹಿಸುವ ಕುರಿತು ಶಾಂಪಲ್ ತೆಗೆದು ೧ ಬಿಳಿಯ ಬಟ್ಟೆಯ ಚೀಲದಲ್ಲಿ ಹಾಕಿ ಹೊಲೆದು ಅರಗಿನಿಂದ ಶೀಲ ಮಾಡಿ ಅದರ ಮೇಲೆ “ಎಂ” ಎಂಬ ಇಂಗ್ಲೀಷ ಅಕ್ಷರದ ಮುದ್ರೆ ಒತ್ತಿ ಪಂಚರು ಸಹಿ ಮಾಡಿದ ಚೀಟಿಯನ್ನು ಅಂಟಿಸಿ ಕೇಸಿನ ಪುರಾವೆಗಾಗಿ ತಾಬಾಕ್ಕೆ ತೆಗೆದುಕೊಂಡೆನು. ಸದರಿ ಜಪ್ತಿ ಪಂಚನಾಮೆಯನ್ನು ೧೧-೩೦ ಎ.ಎಂ ದಿಂದ ೧೨-೩೦ ಪಿ.ಎಂ ದವರೆಗೆ ಸ್ಥಳದಲ್ಲಿ ಕೈಕೊಂಡಿದ್ದು ಇರುತ್ತದೆ. ಜಪ್ತಿ ಪಂಚನಾಮೆ, ಮೂರು ಜನರೊಂದಿಗೆ  ಹಾಗೂ ವರದಿಯೊಂದಿಗೆ ಮುದ್ದೇಮಾಲಿನೊಂದಿಗೆ ಹಾಜರಪಡಿಸುತ್ತಿದ್ದು, ಸದರಿ ೧) ರಮೇಶ ತಂದೆ ವಿಜಯಕುಮಾರ ಕಾಳೆ ೨) ಬಚ್ಚನ್ ತಂದೆ ದಿನಕರ್ ಉಪಾದ್ಯ. ೩) ಕರಣ ತಂದೆ ಬಾಶು ಶೇಖ  ಇವರ  ವಿರುದ್ದ ಸೂಕ್ತ ಕಾನೂನು ಕ್ರಮ  ಕೈಕೊಳ್ಳಬೇಕು ಅಂತಾ ಕೊಟ್ಟ ಜಪ್ತಿ ಪಂಚನಾಮೆ ಮತ್ತು ವರದಿ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

ಬ್ರಹ್ಮಪೂರ ಪೊಲೀಸ್ ಠಾಣೆ  :-  ದಿನಾಂಕ 28-06-2022   ರಂದು ೬-೦೦  ಪಿ.ಎಂಕ್ಕೆ ಸರಕಾರಿ ತರ್ಪೇ ಪಿರ್ಯಾದಿಯಾಗಿ ಶ್ರೀ ಎ.ವಾಜೀದ್ ಪಟೇಲ ಪಿ.ಐ ಸಿ.ಸಿ.ಬಿ ಘಟಕ ಕಲಬುರಗಿ  ರವರು ರಾಜ್ಯ ಸರಕಾರದ ಪರ ಪಿರ್ಯಾದಿ ಸಲ್ಲಿಸಿದ ಸಾರಾಂಶವೆನೆAದರೆ, ಇಂದು ದಿನಾಂಕ:೨೮-೦೬-೨೦೨೨ ರಂದು ಮಧ್ಯಾಹ್ನ ೧-೩೦ ಗಂಟೆಗೆ ನಾನು ಕಛೇರಿಯಲ್ಲಿದ್ದಾಗ ಕಲಬುರಗಿ ನಗರದ ಡಾ||ಬಿ.ಆರ್. ಅಂಬೇಡ್ಕರ ಡಿಗ್ರಿ ಕಾಲೇಜ ಕಂಪೌಂಡ ಎದುರುಗಡೆ ಕೆ.ಇ.ಬಿ. ಟಿ.ಸಿ. ಹತ್ತಿರ ಸಾರ್ವಜನಿಕ ರಸ್ತೆಯ ಪಕ್ಕದಲ್ಲಿ ಇಬ್ಬರೂ ವ್ಯಕ್ತಿಗಳು ಅಕ್ರಮವಾಗಿ ಗಾಂಜಾವನ್ನು ಮಾರಾಟ ಮಾಡುತ್ತಿದ್ದಾರೆ ಅಂತಾ ಬಾತ್ಮಿ ಬಂದಿದ್ದು, ಸದರಿ ವಿಷಯವನ್ನು ಮೇಲಾಧಿಕಾರಿಗಳಿಗೆ ಫೋನ್ ಮೂಲಕ ಮಾಹಿತಿ ನೀಡಿ ಅವರ ಮಾರ್ಗದರ್ಶನದಲ್ಲಿ ಸದರಿ ಬಾತ್ಮಿಯನ್ನು ಖಚಿತಪಡಿಸಿಕೊಳ್ಳಲು ಇಬ್ಬರೂ ಸರ್ಕಾರಿ ಪಂಚರನ್ನು ಮತ್ತು ಪತ್ರಾಂಕಿತ ಅಧಿಕಾರಿಯವರನ್ನು ಬರ ಮಾಡಿಕೊಳ್ಳಲು ಮಾನ್ಯ ಉಪ ಪೊಲೀಸ್ ಆಯುಕ್ತರು, ಕಾನೂನು ಮತ್ತು ಸುವ್ಯವಸ್ಥೆ, ಕಲಬುರಗಿ ರವರಿಗೆ ಪತ್ರದ ಮುಖಾಂತರ ಕೋರಿದ್ದು, ಅದರಂತೆ ಮಾನ್ಯ ಸಹಾಯಕ ನಿಯಂತ್ರಕರು, ಕಾನೂನು ಮಾಪನ ಶಾಸ್ತ್ರ ಇಲಾಖೆ ಕಲಬುರಗಿ ರವರಿಗೆ ಜಪ್ತಿಪಡಿಸಿಕೊಂಡ ಗಾಂಜಾವನ್ನು ಅಳತೆ ಮತ್ತು ತೂಕ ಮಾಡಲು ಒಬ್ಬ ಸಿಬ್ಬಂದಿಯನ್ನು ನಿಯೋಜಿಸಿ ಅಳತೆ ಮತ್ತು ತೂಕ ಮಾಡುವ ಯಂತ್ರದೊಂದಿಗೆ ಕಳುಹಿಸಿಕೊಡಲು ಪತ್ರದ ಮುಖಾಂತರ ಕೋರಿದ್ದು ಇರುತ್ತದೆ.  ಅದರಂತೆ ಮಧ್ಯಾಹ್ನ ೨-೧೫ ಗಂಟೆ ಸುಮಾರಿಗೆ ಪಂಚರಾದ ೧) ಶ್ರೀ ನಾರಾಯಣ ತಂದೆ ದಿ||ಜಗದೀಶ ಸಿಂಧೆ, ವ:೩೪ ವರ್ಷ, ಜಾತಿ:ಮರಾಠಾ, ಉ:ಪ್ರಥಮ ದರ್ಜೆ  ಸಹಾಯಕರು,  ಪೊಲೀಸ್ ಆಯುಕ್ತರ ಕಾರ್ಯಾಲಯ, ಕಲಬುರಗಿ, ಮೊ.ನಂ.೮೭೯೨೭೩೩೯೮೩, ೨) ಶ್ರೀ ಸಂತೋಷ ತಂದೆ ಕುಬೇರ ಮಾಳಗೆ, ವ:೩೫ ವರ್ಷ, ಜಾತಿ:    ಉ:ದ್ವೀತಿಯ ದರ್ಜೆ ಸಹಾಯಕರು, ಪೊಲೀಸ್ ಆಯುಕ್ತರ ಕಾರ್ಯಾಲಯ ಕಲಬುರಗಿ, ಮೊ.ನಂ.೯೫೩೫೭೬೬೮೦೦ ರವರನ್ನು ನಿಯೋಜಿಸಿ ಕಳುಹಿಸಿಕೊಟ್ಟಿದ್ದು, ಅಲ್ಲದೇ ಪತ್ರಾಂಕಿತ ಅಧಿಕಾರಿಯಾಗಿ ಶ್ರೀ ಶರಣಬಸಪ್ಪ ರೆಡ್ಡಿ, ಸಹಾಯಕ ಆಡಳಿತಾಧಿಕಾರಿಗಳು, ಪೊಲೀಸ್ ಆಯುಕ್ತರ ಕಾರ್ಯಾಲಯ,  ಕಲಬುರಗಿ ರವರು ಕೂಡಾ ಹಾಜರಾಗಿದ್ದು ಇರುತ್ತದೆ. ಮತ್ತು ಶ್ರೀ ಶಶಿಧರ ತಂದೆ ಮನೋಹರ ದೇವದುರ್ಗ ಇವರು ಹಾಗೂ ಅಳತೆ ಮತ್ತು ತೂಕ ಮಾಡುವ ಕುರಿತು ತೂಕ ಮತ್ತು ಅಳತೆ ಯಂತ್ರದೊಂದಿಗೆ ಅವರು ಕೂಡಾ ಮಧ್ಯಾಹ್ನ ೨-೧೫ ಗಂಟೆಗೆ ಹಾಜರಾಗಿದ್ದು ಇರುತ್ತದೆ.  ನಂತರ ಪಂಚರು, ಪತ್ರಾಂಕಿತ ಅಧಿಕಾರಿಗಳು, ತೂಕ ಮತ್ತು ಅಳತೆ ಮಾಡುವವರು ಮತ್ತು ಸಿಬ್ಬಂದಿಯವರಾದ ೧) ರವೀಂದ್ರಕುಮಾರ ಸಿ.ಹೆಚ್.ಸಿ-೪೮, ೨) ವೇದರತ್ನಂ ಸಿ.ಹೆಚ್.ಸಿ-೫೧, ೩) ಮಲ್ಲಿಕಾರ್ಜುನ ಸಿ.ಹೆಚ್.ಸಿ-೭೯, ೪) ಶರಣಬಸಪ್ಪ ಸಿ.ಹೆಚ್.ಸಿ-೯೪, ೫) ಕೇಸುರಾಯ ಸಿ.ಹೆಚ್.ಸಿ-೨೨೩, ೬) ಸುನೀಲಕುಮಾರ ಸಿ.ಹೆಚ್.ಸಿ-೧೬೭, ೭) ಯಲ್ಲಪ್ಪ ಸಿಪಿಸಿ-೨೨೦, ೮) ಶಿವಕುಮಾರ ಸಿಪಿಸಿ-೧೬೭೧೫, ೯) ಅಶೋಕ ಕಟಕೆ ಸಿಪಿಸಿ-೯೬೬,  ೧೦) ಅಶೋಕ ಸಿಪಿಸಿ-೬೪೭, ೧೧) ರಾಜಕುಮಾರ ಸಿಪಿಸಿ-೧೧೦೦ ರವರುಗಳು ಹಾಜರಿದ್ದು, ಅವರನ್ನು ಪಂಚರಿಗೆ, ಪತ್ರಾಂಕಿತ ಅಧಿಕಾರಿಗಳಿಗೆ ಹಾಗೂ ತೂಕ ಅಳತೆ ಮಾಡುವ ಸಿಬ್ಬಂದಿಗೆ ಪರಿಚಯಿಸಿ, ಕಲಬುರಗಿ ನಗರದ ಡಾ||ಬಿ.ಆರ್. ಅಂಬೇಡ್ಕರ ಡಿಗ್ರಿ ಕಾಲೇಜ ಕಂಪೌಂಡ ಎದುರುಗಡೆ ಕೆ.ಇ.ಬಿ. ಟಿ.ಸಿ. ಹತ್ತಿರ ಸಾರ್ವಜನಿಕ ರಸ್ತೆಯ ಪಕ್ಕದಲ್ಲಿ ಇಬ್ಬರೂ ವ್ಯಕ್ತಿಗಳು ಅಕ್ರಮವಾಗಿ ಗಾಂಜಾವನ್ನು ಮಾರಾಟ ಮಾಡುತ್ತಿದ್ದಾರೆ ಅಂತಾ ಬಾತ್ಮಿ ಬಂದಿದ್ದು, ಸದರಿ ಬಾತ್ಮಿಯನ್ನು ಖಚಿತಪಡಿಸಿಕೊಳ್ಳಲು ಹೋಗುವ ಕುರಿತು ಮೇಲಾಧಿಕಾರಿಗಳಿಗೆ ಮಾಹಿತಿ ನೀಡಿದ್ದು, ಅವರ ಮಾರ್ಗದರ್ಶನದಲ್ಲಿ ದಾಳಿ ಮಾಡುವ ಕಾಲಕ್ಕೆ ನಮ್ಮೊಂದಿಗೆ ಹಾಜರಿದ್ದು ಪಂಚರಾಗಿ ಪಂಚನಾಮೆಗೆ ಸಹಕರಿಸುವಂತೆ ಕೇಳಿಕೊಂಡ ಮೇರೆಗೆ ಉಭಯ ಪಂಚರು ಒಪ್ಪಿಕೊಂಡಿರುತ್ತಾರೆ.  ಅಲ್ಲದೇ ಶ್ರೀ ಶಶಿಧರ ದೇವದೂರ್ಗ  ತೂಕ ಮತ್ತು ಅಳತೆ ಮಾಡುವವರಿಗೆ ದಾಳಿ ಕಾಲಕ್ಕೆ ದೊರೆತ ಗಾಂಜಾ ಅಳತೆ ಮಾಡಿಕೊಡುವಂತೆ ಕೇಳಿಕೊಂಡ ಮೇರೆಗೆ ಅವರು ಕೂಡಾ ಒಪ್ಪಿಕೊಂಡಿರುತ್ತಾರೆ. ನಂತರ ನಾನು, ಪಂಚರು, ಪತ್ರಾಂಕಿತ ಅಧಿಕಾರಿಗಳು ಮತ್ತು ತೂಕ ಮತ್ತು ಅಳತೆ ಮಾಡುವವರು ಹಾಗೂ ಸಿಬ್ಬಂದಿ ಜನರು ಎಲ್ಲರೂ ಕೂಡಿ ಮಧ್ಯಾಹ್ನ ೨-೩೦ ಗಂಟೆಗೆ ಸರ್ಕಾರಿ ಜೀಪ ನಂ.ಕೆಎ-೩೨-ಜಿ-೧೨೪೯ ನೇದ್ದರಲ್ಲಿ ಹೊರಟಿದ್ದು, ಉಳಿದ ಸಿಬ್ಬಂದಿಯವರು ತಮ್ಮ ತಮ್ಮ ಮೋಟಾರಸೈಕಲಗಳ ಮೇಲೆ ಹೊರಟು ಬಾತ್ಮಿ ಬಂದ ಸ್ಥಳದಂತೆ ನಾವು ಡಾ||ಬಿ.ಆರ್. ಅಂಬೇಡ್ಕರ ಡಿಗ್ರಿ ಕಾಲೇಜ ಕಂಪೌಂಡ ಎದುರುಗಡೆ ಕೆ.ಇ.ಬಿ. ಟಿ.ಸಿ. ಹತ್ತಿರ ಮಧ್ಯಾಹ್ನ ೨-೪೫ ಗಂಟೆ ಸುಮಾರಿಗೆ ತಲುಪಿ ಎಲ್ಲರೂ ಜೀಪಿನಿಂದ ಇಳಿದು ಅಲ್ಲಿಯೇ ಮರೆಯಲ್ಲಿ ನಿಂತುಕೊಂಡು ನೋಡಲಾಗಿ ಕೆ.ಇ.ಬಿ. ಟಿ.ಸಿ. ಹತ್ತಿರ ಸರ‍್ವಜನಿಕ ರಸ್ತೆಯ ಪಕ್ಕದಲ್ಲಿ ಇಬ್ಬರೂ ವ್ಯಕ್ತಿಗಳು ಅಕ್ರಮವಾಗಿ ಗಾಂಜಾ ಮಾಡುತ್ತಿರುವುದನ್ನು ನೋಡಿ ಖಚಿತಪಡಿಸಿಕೊಂಡು ಪಂಚರ ಸಮಕ್ಷಮ ಮಧ್ಯಾಹ್ನ ೩-೦೦ ಗಂಟೆಗೆ ನಾನು ಮತ್ತು ಸಿಬ್ಬಂದಿಯವರು ಒಮ್ಮೇಲೇ ದಾಳಿ ಮಾಡಿ ಸದರಿ ಇಬ್ಬರೂ ವ್ಯಕ್ತಿಗಳನ್ನು ಹಿಡಿದು ಅವರ ಹೆಸರು ವಿಳಾಸ ವಿಚಾರಿಸಲು ೧) ಪವನ ತಂದೆ ಬಾಬುರಾವ ಉಪಾಧ್ಯೆ, ವ:೧೯ ವರ್ಷ, ಜಾತಿ:ಎಸ್.ಸಿ., ಉ:ವೇಟರ ಕೆಲಸ, ಸಾ:ಬಾಪುನಗರ ಕಲಬುರಗಿ, ೨) ಸೈಯದ ಮಸ್ತಾನ ತಂದೆ ಅಬ್ದುಲ ಮಂಡಾನ, ವ:೨೧ ವರ್ಷ, ಜಾತಿ:ಮುಸ್ಲಿಂ, ಉ:ಗೌಂಡಿಕೆಲಸ, ಸಾ:ಬಾಪುನಗರ ಕಲಬುರಗಿ ಅಂತಾ ತಿಳಿಸಿದರು.  ನಂತರ ಪಂಚರ ಸಮಕ್ಷಮ ಆರೋಪಿತರ ಹತ್ತಿರ ಸ್ಥಳದಲ್ಲಿ ಒಂದು ಪ್ಲಾಸ್ಟಿಕ ಚೀಲ ದೊರತಿದ್ದು ಅದರಲ್ಲಿ ಗಾಂಜಾ ಇದ್ದಿದ್ದನ್ನು ನೋಡಿ ಪರಿಶೀಲಿಸಿ ಅದನ್ನು ಶ್ರೀ ಶಶಿಧರ ದೇವದರ‍್ಗ ಇವರಿಂದ ತೂಕ ಮಾಡಿಸಿ ನೋಡಲಾಗಿ ಒಟ್ಟು ೧ ಕೆ.ಜಿ. ೩೦೦ ಗ್ರಾಂ ಇದ್ದು, ಪ್ರತಿ ಕೆ.ಜಿ.ಗೆ ರೂ.೧೦,೦೦೦/- ಅಂತೆ ಒಟ್ಟು ೧.ಕೆ.ಜಿ. ೩೦೦ ಗ್ರಾಂ ಗಾಂಜಾಕ್ಕೆ ಅ.ಕಿ. ರೂ.೧೦,೩೦೦/- ಇರುತ್ತದೆ.  ಸದರಿ ಗಾಂಜಾದಿಂದ ರಾಸಾಯನಿಕ ಪರೀಕ್ಷೆಗೆ ಕಳುಹಿಸಿಕೊಡಲು ಮಾದರಿಗಾಗಿ ಸದರಿ ಪ್ಲಾಸ್ಟಿಕದಿಂದ ಅಂದಾಜು ೫೦ ಗ್ರಾಂ ತೂಕದಷ್ಟು ಗಾಂಜಾವನ್ನು ಪ್ರತ್ಯೇಕವಾಗಿ ತೆಗೆದು ಒಂದು ಬಿಳಿಯ ಬಟ್ಟೆಯಲ್ಲಿ ಹಾಕಿ ಬಾಯಿ ಹೊಲೆದು ಅದರ ಮೇಲೆ “ಒ” ಎಂಬ ಇಂಗ್ಲೀಷ ಅಕ್ಷರದ ಅರಗಿನಿಂದ ಸೀಲ್ ಮಾಡಿ ಪಂಚರು ಸಹಿ ಮಾಡಿದ ಚೀಟಿಯನ್ನು ಅಂಟಿಸಿ ಕೇಸಿನ ಮುಂದಿನ ಪುರಾವೆಗಾಗಿ ತೆಗೆದುಕೊಂಡೆನು. ನಂತರ ಆರೋಪಿತರ ದೇಹವನ್ನು ಅಂಗಶೋಧನೆ ಮಾಡಲು ಕೇಳಿದಾಗ ಅವರು ಯಾವುದೇ ಅಭ್ಯಂತರ ಇರುವುದಿಲ್ಲ ಅಂತಾ ತಿಳಿಸಿದಾಗ ಪತ್ರಾಂಕಿತ ಅಧಿಕಾರಿಗಳಾದ ಶ್ರೀ ಶರಣಬಸಪ್ಪ ರೆಡ್ಡಿ ಸಹಾಯಕ ಆಡಳಿತಾಧಿಕಾರಿ, ಪೊಲೀಸ್ ಆಯುಕ್ತರ, ಕಾರ್ಯಾಲಯ, ಕಲಬುರಗಿ ರವರು ಆರೋಪಿ ೧) ಪವನ ತಂದೆ ಬಾಬುರಾವ ಉಪಾಧ್ಯೆ ಈತನ ದೇಹ ಅಂಗ ಶೋಧನೆ ಮಾಡಲು ಆತನ ಜೇಬಿನಲ್ಲಿ ರೂ.೪೦೦/- ದೊರೆತಿದ್ದು, ನಂತರ ಆರೋಪಿ ೨) ಸೈಯದ ಮಸ್ತಾನ ತಂದೆ ಅಬ್ದುಲ ಮಂಡಾನ ಈತನ ಈತನ ದೇಹ ಅಂಗ ಶೋಧನೆ ಮಾಡಲು ಆತನ ಜೇಬಿನಲ್ಲಿ ರೂ.೪೦೦/- ದೊರೆತಿದ್ದು, ಹೀಗೆ ಒಟ್ಟು ರೂ.೮೦೦/- ದೊರೆತಿದ್ದು ಇರುತ್ತದೆ.  ಸದರಿ ಆರೋಪಿತರಿಗೆ ವಿಚಾರಿಸಿದಾಗ ಗಾಂಜಾ ಮಾರಾಟದಿಂದ ಬಂದ ಹಣ ಇರುತ್ತದೆ ಅಂತಾ ತಿಳಿಸಿರುತ್ತಾರೆ. ನಂತರ ನಾನು ಅನಧೀಕೃತ ಮತ್ತು ಅಕ್ರಮವಾಗಿ ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪಿತರಿಗೆ ಮತ್ತು ಅವರ ಹತ್ತಿರ ಜಪ್ತು ಮಾಡಿದ ಮುದ್ದೇಮಾಲು ನಮ್ಮ ವಶಕ್ಕೆ ತೆಗೆದುಕೊಂಡು ಆರೋಪಿತರಿಂದ ಜಪ್ತಾದ ಮುದ್ದೇಮಾಲಿನ ಬಗ್ಗೆ ಜಪ್ತಿ ಪಂಚನಾಮೆಯನ್ನು ಮಧ್ಯಾಹ್ನ ೩-೦೦ ಗಂಟೆಯಿಂದ ೪-೩೦ ಗಂಟೆಯವರೆಗೆ ಸ್ಥಳದಲ್ಲಿ ಕುಳಿತು ಲ್ಯಾಪಟ್ಯಾಪನಲ್ಲಿ ಟೈಪ ಮಾಡಿ ಮುಗಿಸಿ ವಶಕ್ಕೆ ಪಡೆದ ಆರೋಪಿತರನ್ನು ಮತ್ತು ಜಪ್ತು ಮಾಡಿದ ಮುದ್ದೇಮಾಲಿನೊಂದಿಗೆ ಬ್ರಹ್ಮಪೂರ ಪೊಲೀಸ್ ಠಾಣೆಗೆ ಬಂದು ವರದಿಯನ್ನು ತಯಾರಿಸಿ ಜಪ್ತು ಮಾಡಿದ ಮುದ್ದೇಮಾಲು ಮತ್ತು ಇಬ್ಬರೂ ಆರೋಪಿತರು, ಜಪ್ತಿ ಪಂಚನಾಮೆಯೊಂದಿಗೆ ನನ್ನ ವರದಿಯನ್ನು ಹಾಜರಪಡಿಸುತ್ತಿದ್ದು, ಸದರಿ ಆರೋಪಿತರ ಮೇಲೆ ಪ್ರಕರಣ ದಾಖಲು ಮಾಡಿಕೊಂಡು ಕಾನೂನು ಕ್ರಮ  ಕೈಕೊಳ್ಳಬೇಕು ಅಂತಾ ಕೊಟ್ಟ ಜಪ್ತಿ ಪಂಚನಾಮೆ ಮತ್ತು ವರದಿ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡ ಬಗ್ಗೆ ವರದಿ.

 

 ವಿಶ್ವವಿದ್ಯಾಲಯ ಪೊಲೀಸ್‌ ಠಾಣೆ :- ದಿ: ೨೫.೦೬.೨೦೨೨ ೧೨೩೦ ಪಿ.ಎಮ ಕ್ಕೆ ಪ್ಲಾಟ ನಂ: ೩೮೦ ಎನ.ಜಿ.ಓ ಸೋಸಾಯಿಟಿ ಕುಸನೂರದಲ್ಲಿ ಫಿರ್ಯಾದಿ ತನ್ನ ಮನೆ ಮುಂದೆ ಸಿ.ಸಿ ಕ್ಯಾಮರಾ ಕುಡಿಸಿದ್ದು ಈ ವಿಷಯದಲ್ಲಿ ಆರೋಪಿತರಿಗೂ ಹಾಗೂ ಫಿರ್ಯಾದಿಗೂ ತಕರಾರು ಆಗಿ ಜಗಳವಾಗಿದ್ದು ಆರೋಪಿತರು ಫೀರ್ಯಾದಿ ಹಾಗೂ ಬಿಡಿಸಲು ಬಂದ ಮಹಾನಂದ ಇವರಿಗೆ ಹೊಡಬಡೆ ಮಾಡಿ ಚಪ್ಪಲಿಯಿಂದ ಹೊಡೆದು ತಲೆ ಕೂದಲು ಹಿಡಿದು ಜಗ್ಗಾಡಿ ಜೀವದ ಭಯ ಹಾಕಿದ ಬಗ್ಗೆ.

ಇತ್ತೀಚಿನ ನವೀಕರಣ​ : 16-07-2022 04:52 PM ಅನುಮೋದಕರು: ADMIN


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕಲಬುರಗಿ ನಗರ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080